ಪ್ರಚಲಿತ

ಕಲ್ಲಿದ್ದಲು ಹಗರಣದಲ್ಲಿ ಸಿದ್ಧರಾಮಯ್ಯ ಕೊಳ್ಳೆ ಹೊಡೆದಿದ್ದು ಬರೀ 418 ಕೋಟಿ ರೂ!!

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಬಿಜೆಪಿ ಮತ್ತೊಂದು ಭ್ರಷ್ಟಾಚಾರದ ಬ್ರಹ್ಮಾಸ್ತ್ರವನ್ನು ಬಿಟ್ಟಿದೆ!!. ಕಲ್ಲಿದ್ದಲು ಹಗರಣದಲ್ಲಿ 418 ಕೋಟಿ ರೂಪಾಯಿ ಕೊಳ್ಳೆ
ಹೊಡೆದಿರುವ ಮಾಹಿತಿಯನ್ನು ಈಗ ಬಿ.ಎಸ್.ಯಡಿಯೂರಪ್ಪ ಬಿಡುಗಡೆ ಮಾಡಿದ್ದಾರೆ.!!

ಬಿಜೆಪಿ ರಾಜ್ಯಾಧಕ್ಷ ಬಿ.ಎಸ್ ಯಡಿಯೂರಪ್ಪ ಅವರು ಕೆಪಿಸಿಎಲ್ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ನಡದ ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮೂಲಕ ಸಿದ್ದರಾಮಯ್ಯನವರ ಬೆವರಿಳಿಸಿದ್ದಾರೆ!!. ಕೇಂದ್ರ ಸರಕಾರ, ಸುಪ್ರಿಂ ಕೋರ್ಟ್, ಹೈಕೋರ್ಟ್ ಆದೇಶಗಳಿಗೆ ವಿರುದ್ಧವಾಗಿ 418 ಕೋಟಿ ರೂ ಅಕ್ರಮ ನಡೆದಿದೆ. ಕೆಪಿಸಿಎಲ್ ಅಧ್ಯಕ್ಷರಾಗಿ ಸಿಎಂ ಸಿದ್ಧರಾಮಯ್ಯ ಇದರಲ್ಲಿ ನೇರ ಭಾಗಿಯಾಗಿದ್ದಾರೆ ಎಂದು ಬಿಎಸ್ ವೈ ಹೇಳಿಕೆ ನೀಡಿದ್ದು ದಾಖಲೆಗಳ ಸಮೇತ ಮಾಹಿತಿ ಬಿಡುಗಡೆ ಮಾಡಿದ್ದಾರೆ!!. ಹನ್ನೊಂದು ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರು ಹೈಕೋರ್ಟ್ ಆದೇಶದ ವಿರುದ್ಧ ನಡೆದುಕೊಂಡು ಸುಮಾರು 418 ಕೋಟಿ ಹಗಲು ದರೋಡೆ ಮಾಡಿದ್ದಾರೆ ಎಂದು ಬಿಎಸ್‍ವೈ ಹೇಳಿದ್ದಾರೆ.

ನನ್ನ ರಾಜಕೀಯ ಜೀವನದಲ್ಲಿ ಇಂತಹ ಹಗಲು ದರೋಡೆ ನಡೆದಿರುವುದು ನೋಡಿಲ್ಲ ಎಂದು ಬಿಎಸ್‍ವೈ ಹೇಳಿಕೆ ನೀಡಿದ್ದಾರೆ!!. ಕೆಪಿಸಿಸಿಎಲ್ ಮತ್ತು ಕೆಎಂಸಿಎಲ್ ನಡುವೆ ಒಪ್ಪಂದ ಹಲವು ಅನುಮಾನಗಳು ಬರುವಂತೆ ಮಾಡಿದೆ. ಇದೊಂದು ಸದುದ್ದೇಶದ ಒಪ್ಪಂದ ಆಗಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ಹೇಳಿದ್ದಾರೆ. ರಾಜ್ಯ ಸರಕಾರದ ವಿರುದ್ಧ ಕಲ್ಲಿದ್ದಲು ಹಗರಣದ ಆರೋಪ ಮಾಡಿದ್ದು ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ನೇರವಾಗಿ ಭಾಗಿಯಾಗಿರುವುದು ದಾಖಲೆಗಳ ಮೂಲಕ ಸ್ಪಷ್ಟೀಕರಣವಾಗುತ್ತದೆ.!!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷರಾಗಿರುವ ಕೆಪಿಸಿಎಲ್ (ಕರ್ನಾಟಕ ಪವರ್ ಕಾರ್ಪೋರೇಷನ್ ಲಿಮಿಟೆಡ್)ನ ಬೃಹತ್ ಕಲ್ಲಿದ್ದಲು ಹಗರಣದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಶನಿವಾರ ದಾಖಲೆಗಳನ್ನು ಬಿಡುಗಡೆ ಮಾಡಿದ್ದು, ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ 418 ಕೋಟಿ ರೂಪಾಯಿ ಲೂಟಿ ಮಾಡಿರುವುದಾಗಿ ಗಂಭೀರವಾಗಿ ಆರೋಪ ಮಾಡಿದ್ದಾರೆ.!! ಮಲ್ಲೇಶ್ವರಂನಲ್ಲಿ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಎಸ್‍ವೈ
ಕೇಂದ್ರ ಮತ್ತು ಸುಪ್ರಿಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ರಾಜ್ಯ ಸರಕಾರದ ಹಣವನ್ನು ಸಿಎಂ ಲೂಟಿ ಮಾಡಿರುವುದಾಗಿ ಹೇಳಿದ್ದಾರೆ.!! ಕಲ್ಲಿದ್ದಲು ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಬಿಎಸ್ ಯಡಿಯೂರಪ್ಪ ಆಗ್ರಹಿಸಿದ್ದಾರೆ.

ಕಳೆದ 30 ವರ್ಷಗಳಲ್ಲಿ ಕಂಡು ಕೇಳರಿಯದ ಹಗರಣ ಇದಾಗಿದೆ!!. ಕೋರ್ಟ್ ಆದೇಶ ಉಲ್ಲಂಘಿಸಿ 24 ಘಂಟೆಯೊಳಗೆ ಶೇಕಡಾ 26ರಷ್ಟು ದಂಡವನ್ನು ಕೆಪಿಸಿಎಲ್ ಬದಲು ರಾಜ್ಯ ಸರಕಾರವೇ ಭರಿಸಿದೆ.!! ಕೆಪಿಸಿಎಲ್ ಜವಾಬ್ದಾರಿ ಶೇಕಡಾ 24ರಷ್ಟು ಮಾತ್ರ ಇದೆ. ಕೋರ್ಟ್ ಆದೇಶ ಉಲ್ಲಂಘಿಸಿ ದಂಡ ಕಟ್ಟಿದ್ದೇಕೆ? ಹಾಗಾದರೆ 24 ಗಂಟೆಯೊಳಗೆ ನಡೆದ ಒಳ ಒಪ್ಪಂದ ಏನು? ಸಿಎಂ ಇದರಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂಬುವುದು ಸತ್ಯ.!! ಸಿಎಂನ ಹಗಲು ದರೋಡೆಯನ್ನು ಎಲ್ಲರ ಗಮನಕ್ಕೆ ತಂದಿರುವುದು ಬಿಎಸ್ ಯಡಿಯೂರಪ್ಪನವರ ಉತ್ತಮ ಕೆಲಸವಾಗಿದೆ.

ಸುಪ್ರಿಂ ಕೋರ್ಟ್ ಕಲ್ಲಿದ್ದಲು ಗಣಿ ಹಂಚಿಕೆ ಹಗರಣ ಆರೋಪದ ಮೇಲೆ ಗಣಿ ನಿಕ್ಷೇಪಗಳನ್ನು ರದ್ದುಪಡಿಸಿದ್ದು, ಅದರಲ್ಲಿ ಕೆಪಿಸಿಎಲ್‍ಗೆ ನೀಡಿದ್ದ ನಿಕ್ಷೇಪವೂ ಸೇರಿದ್ದು
417 ಕೋಟಿ ರೂ ದಂಡ ಪಾವತಿಗೆ ಸೂಚನೆ ನೀಡಿತ್ತು.!! ಆದರೆ ಕೇವಲ ಶೇಕಡ 24ರಷ್ಟು ಪಾಲುದಾರಿಕೆ ಹೊಂದಿದ್ದ ಕೆಪಿಸಿಎಲ್ ಪೂರ್ಣ ಪ್ರಮಾಣದ ದಂಡದ
ಹಣವನ್ನು ಪಾವತಿ ಮಾಡಿದೆ… ದೇಶವನ್ನು ಉದ್ಧಾರ ಮಾಡುತ್ತಾರೆ ಎಂದು ನಂಬಿ ಓಟ್ ಹಾಕಿದರೆ ಇದರ ಬದಲಾಗಿ ಜನರಿಗೆ ಮೋಸ ಮಾಡುತ್ತಲೇ ಬರುತ್ತಿದ್ದಾರೆ ಈ ಕಾಂಗ್ರೆಸ್ ಸರಕಾಋ. ಒಂದಲ್ಲ ಅದೆಷ್ಟೋ ಹಗರಣಗಳನ್ನು ಪದೇ ಪದೇ ಮಾಡುತ್ತಾ ಬರುತ್ತಿದ್ದಾರೆ!!.

2014 ಡಿಸೆಂಬರ್ 30 ರಂದು ಕೆಇಸಿಎಂಎಲ್‍ಗೆ ಪತ್ರ ಬರೆದು ನೀವೇ ಭರಿಸಿ ಎಂದು ಕೆಪಿಸಿಎಲ್‍ಗೆ ಪತ್ರ ಬರೆದಿತ್ತು. ಅದಾದ ಒಂದು ದಿನದಲ್ಲೇ ತಾನೂ ಕೂಡ ಪಾಲುದಾರಿಕೆ ಹೊಂದಿದ ಕಾರಣ 110 ಕೋಟಿ ರೂಪಾಯಿ ಹಣ ನೀಡುವ ನಿರ್ಧಾರ ಪ್ರಕಟಿಸಿತ್ತು. ನಂತರ ಸುಪ್ರಿಂ ಕೋರ್ಟ್‍ನಲ್ಲಿ ಪ್ರಕರಣ ಇದ್ದರೂ ಕೂಡ ದಂಡದ ಬಾಕಿ 337 ಕೋಟಿ ರೂಗಳನ್ನು ಕೆಪಿಸಿಎಲ್ ಪಾವತಿ ಮಾಡಿದೆ ಇದರಲ್ಲಿ ದೊಡ್ಡ ಹಗರಣವೇ ನಡೆದಿದೆ!!. ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಪಿಸಿಎಲ್ ಅಧ್ಯಕ್ಷರಾಗಿದ್ದು, ಇಂಧನ ಸಚಿವ ಡಿ.ಕೆ ಶಿವ ಕುಮಾರ್ ನಿರ್ದೇಶಕರಾಗಿದ್ದಾರೆ.!! ಖಾಸಗಿ ಕಂಪನಿ ಕಟ್ಟಬೇಕಿದ್ದ ದಂಡವನ್ನು ಸರಕಾರದಿಂದ ಕಟ್ಟಲಾಗಿದೆ.. ಇದರಿಂದ ನಮಗೆ ಸಿದ್ದರಾಮಯ್ಯ ಹಗರಣದ ಸ್ಪಷ್ಟ ಚಿತ್ರಣವನ್ನು ತೋರಿಸುತ್ತದೆ. ಖಾಸಗಿ ಕಂಪನಿ ಕಟ್ಟಬೇಕಿದ್ದ ದಂಡವನ್ನು ಸರಕಾರದಿಂದ ಕಟ್ಟಲಾಗಿದೆ…ಕಿಕ್‍ಬ್ಯಾಕ್ ಪಡೆದು ಕಾಸಗಿ ಕಂಪನಿ ಭರಿಸಬೇಕಿದ್ದ ಹಣವನ್ನು ಕೆಪಿಸಿಎಲ್ ಭರಿಸಿದೆ.!!

ಶೇಕಡಾ 24 ರಷ್ಟು ಪಾಲುದಾರಿಕೆ ಹೊಂದಿ ಶೇಕಡಾ 100ರಷ್ಟು ದಂಡದ ಹಣವನ್ನು ಇವರೇ ಕಟ್ಟಿದ್ದಾರೆ!! ಇದು ಹಗಲು ದರೋಡೆ.!! ಹಿಂದೆ ಯಾವಾಗಲೂ ಈ ರೀತಿ ಹಗಲು ದರೋಡೆ ನಡೆದಿಲ್ಲ. ದಂಡ ಯಾರು ಪಾವತಿ ಮಾಡಬೇಕು ಎನ್ನುವ ವಿವಾದ ಹೈಕೋರ್ಟ್ ಅಂಗಳದಲ್ಲಿದೆ. !!2017 ಅಕ್ಟೋಬರ್ 4 ರಂದು ಕೆಪಿಸಿಎಲ್, ಕೆಇಸಿಎಲ್ ಪರಸ್ಪರ ವರ್ತನೆ ನೋಡಿದರೆ ಈ ಒಪ್ಪಂದದ ನಡುವಿನ ಅಪವಿತ್ರತೆ ತಿಳಿದು ಬರಲಿದೆ. ಮೇಲ್ನೋಟಕ್ಕೆ ಹಗರಣ ನಡೆದಿರುವುದು ಕಂಡುಬರುತ್ತಿದೆ. ದಂಡ ಪಾವತಿ ವಿಚಾರದಲ್ಲಿ ಕೋಟ್ಯಾಂತರ ರೂ.ಗಳ ಹಗರಣ ನಡೆದಿದೆ.

ಸರಕಾರದ ಖಜಾನೆಯನ್ನು ಲೂಟಿ ಮಾಡುವಲ್ಲಿ ಈ ಕಾಂಗ್ರೆಸ್ ಸರಕಾರದ್ದು ಎತ್ತಿದ ಕೈ!! ಸಿದ್ದರಾಮಯ್ಯ ಸರಕಾರವನ್ನು ಹಗರಣಗಳ ಸರದಾರರು ಎಂದೇ ಕರೆಯಬಹುದು… ಯಾಕೆಂದರೇ ಒಂದಾದ ಮೇಲೆ ಮತ್ತೊಂದು ಎನ್ನುವಂತೆ ಹಗರಣಗಳ ಸರಮಾಲೆಯೇ ಈ ಕಾಂಗ್ರೆಸ್ ಸರಕಾರದ್ದು!!…ಕಾಂಗ್ರೆಸ್ ಸರಕಾರಕ್ಕೆ ನೂರಾರು ವರ್ಷಗಳ ಇತಿಹಾಸವಿದೆ.. 60ಕ್ಕೂ ಹೆಚ್ಚು ವರ್ಷಗಳ ಕಾಲ ದೇಶವನ್ನಾಳಿದ ಇತಿಹಾಸವಿದ್ದು ಈ ರೀತಿ ಪದೇ ಪದೇ ಹಗರಣದಲ್ಲಿ ಸಿಲುಕುತ್ತಿದ್ದೀರಲ್ಲವೇ ನಿಮಗೆ ನಾಚಿಕೆಯಾಗಿತ್ತಿಲ್ಲವೇ? ಜನ ಸಾಮಾನ್ಯರು ನಿಮ್ಮನ್ನು ದೇಶವನ್ನು ಆಳಿ ಉದ್ಧಾರ ಮಾಡಿ ಎಂದು ನಿಮ್ಮನ್ನು ಆಯ್ಕೆ ಮಾಡಿದರೆ ನೀವು ಇದೇ ರೀತಿ ಸರಕಾರದ ಖಜಾನೆಯಿಂದ ಲೂಟಿ ಮಾಡಲುವಲ್ಲಿ ತೊಡಗಿದ್ದೀರಲ್ಲವೇ ನಿಮ್ಮದೂ ಒಂದು ಜನ್ಮವೇ? ಅದಲ್ಲದೆ ನೀವು ಮಾಡುವ
ಕೆಟ್ಟ ಕೆಲಸಕ್ಕೆ ಬೇರೆಯನ್ನು ಟೀಕಿಸುವುದೇ ನಿಮ್ಮ ಛಾಳಿಯಾಗಿದೆ…ನಿಮ್ಮನ್ನು ನೀವು ತಿದ್ದುಕೊಳ್ಳಿ ಮೊದಲು ಸಿದ್ದರಾಮಯ್ಯನವರೇ…

Dighvijay News

تم النشر بواسطة ‏‎Dighvijay News – ದಿಗ್ವಿಜಯ ನ್ಯೂಸ್‎‏ في 21 أكتوبر، 2017

-ಶೃಜನ್ಯಾ

Tags

Related Articles

Close