ಅಂಕಣ

ಕಳೆದೆರಡು ತಿಂಗಳಿಂದ ಜಮ್ಮು ಕಾಶ್ಮೀರದಲ್ಲಿ ಕಲ್ಲು ಎಸೆತ ಮತ್ತು ಭಯೋತ್ಪಾದಕರ ಹಾವಳಿ ಕಡಿಮೆಯಾಗಿರುವುದು ಯಾಕೆ?!!

ಭಾರತದ ನಕಾಶೆಯನ್ನು ನೋಡಿದಾಗ ಜಮ್ಮು ಮತ್ತು ಕಾಶ್ಮೀರವು ಭಾರತದ ಶಿರದಂತೆ ಎದ್ದು ಕಾಣುತ್ತದೆ ಅಲ್ವೇ? ಆದರೆ ಬಹು ವರ್ಷಗಳಿಂದಲೇ ಭಾರತದ
ಮುಕುಟವನ್ನು ಕಬಳಿಸುವ ಪ್ರಯತ್ನ ನಡೆಯುತ್ತಿದ್ದು, ಇದು ಇಂದಿಗೂ ಬಗೆಹರಿಯದ ಸಮಸ್ಯೆಯಂತಾಗಿದೆ!!! ಭದ್ರತಾ ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟದ ಮೂಲಕ ದಾಳಿ ಮಾಡಿ ಹಿಂಸಿಸಿದ ಭಯೋತ್ಪಾದಕನ್ನು ಹಾಗೂ ಈ ದೇಶ ವಿರೋಧಿಗಳನ್ನು ಶಿಕ್ಷಿಸದೇ ಹೋಯಿತು ಎನ್ನುವ ತಳಮಳಕ್ಕೆ ಬ್ರೇಕ್ ಬಿದ್ದಂತಾಗಿದೆ!!! ಯಾಕೆಂದರೆ ಇದೀಗ ಇಲ್ಲಿನ ಈಡೀ ಸನ್ನಿವೇಶವೇ ಬದಲಾಗಿದ್ದು, ಭಯವೇ ಹೆಚ್ಚು ಸೃಷ್ಟಿಯಾಗುತ್ತಿದೆ!! ಯಾರಿಗೆ ಭಯ ಅಂತೀರಾ?? ನಮ್ಮ ಭದ್ರತಾ ಸಿಬ್ಬಂದಿಗಳಿಗಲ್ಲ!! ಭಯ ಹುಟ್ಟಿದ್ದು, ಭಯೋತ್ಪಾದಕರಿಗೆ ಹಾಗೂ ಇವರ ಮೇಲೆ ಸಹಾನುಭೂತಿ ಹೊಂದಿರುವವರಿಗೆ!!!

ಇದೀಗ ಕಲ್ಲು ತೂರಾಟ ನಡೆಸುವವರಿಗೆ ಕಲ್ಲನ್ನು ಹಿಡಿಯಲು ಭಯವೇಕೆ? ಯುವಕರು ಬಂದೂಕನ್ನು ಹಿಡಿಯಲು ಯಾಕೆ ಭಯಪಡುತ್ತಾರೆ??

ಒಬ್ಬ ವ್ಯಕ್ತಿಯ ಹವ್ಯಾಸವನ್ನು ನಿಲ್ಲಿಸುವುದು ಬಹಳ ಕಷ್ಟದ ಕೆಲಸವಾಗಿದೆ. ಹೌದು.. ಜಮ್ಮುವಿನ ಕೆಲ ಯುವಕರಿಗೆ ಕಲ್ಲು ತೂರಾಟ ನಡೆಸುವ ಕೆಲಸ ಅವರಲ್ಲಿ
ಉತ್ಸಾಹವನ್ನು ಮೂಡಿಸುವ ಕೆಲಸವಾಗಿದೆ. ಆದರೆ ಭದ್ರತಾ ಸಿಬ್ಬಂದಿಗಳಲ್ಲಿ ಕಲ್ಲು ಎಸೆದ ಈ ಯುವಕರು ಇದೀಗ ಕಲ್ಲು ಅಂದರೆ ಭಯಪಡುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಕಲ್ಲಿನ ಸಹವಾಸವೇ ಸಾಕು ಎಂದು ಭಾವಿಸುತ್ತಿದ್ದಾರೆ!!! ಇದನ್ನು ಕೇವಲ ಯುವಕರು ಮಾತ್ರವಲ್ಲದೇ ಬುರ್ಹಾನ್‍ ವಾನಿಗೆ ಪ್ರೋತ್ಸಾಹ ನೀಡಿದವರೂ ಕೂಡ ಇದನ್ನು ಅನುಸರಿಸಲು ಹೆದರುತ್ತಿದ್ದಾರೆ!!!

ಪ್ರಧಾನಿ ಮೋದಿಯವರ ಯೋಜನೆಯನ್ನು ಕಾರ್ಯಗತಗೊಳಿಸಲು ಭಾರತೀಯ ಜೇಮ್ಸ್ ಬಾಂಡ್ ನೀಡಿದ ಹೇಳಿಕೆ ಏನು ಗೊತ್ತೇ!!!

ಅಮರನಾಥ್ ಯಾತ್ರೆಯಲ್ಲಿ ನಡೆಸಿದ ಭಯೋತ್ಪಾದಕರ ದಾಳಿಯ ನಂತರ ಭಾರತೀಯ ಜೇಮ್ಸ್ ಬಾಂಡ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಒಂದು ವಿಶೇಷವಾದ ಹೇಳಿಕೆಯನ್ನು ನೀಡಿದ್ದಾರೆ. ಹೌದು… ಭಯೋತ್ಪಾದಕರ ದಾಳಿಯನ್ನು ಉದ್ದೇಶಿಸಿದ ಆ ಹೇಳಿಕೆಯಾದರು ಏನು ಗೊತ್ತೇ?? ಅವರು ಹೇಳಿದ ಹೇಳಿಕೆ “ಕಲ್ಲು ತೂರಾಟ ನಡೆಸುವವರು ಓಡಬಹುದು ಆದರೆ ಅಡಗಿಕೊಳ್ಳಲು ಸಾಧ್ಯವಿಲ್ಲ” ಎಂದು!!! ಅಜಿತ್ ದೋವಲ್ ಅವರ ಮಾರ್ಗದರ್ಶನದ ಮೆರೆಗೆ ಭಾರತೀಯ ಸೈನ್ಯವು ಎರಡು ಸರ್ಜಿಕಲ್ ಸ್ಟ್ರೇಕ್‍ ಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿತು!!! ಅಷ್ಟೇ ಅಲ್ಲದೇ ಅನೇಕ ಭಯೋತ್ಪಾದಕ ಚಟುವಟಿಕೆಗಳನ್ನು ನಿಗ್ರಹಿಸುವ ಎಲ್ಲಾ ತಂತ್ರಗಳು, ಇವರ ಮಾರ್ಗದರ್ಶನದ ಮೂಲಕ ಯಶಸ್ವಿಯನ್ನು ಪಡೆದಿದೆ. ಈ ಬಗ್ಗೆ ಪಾಕಿಸ್ತಾನದವರಿಗೂ ಗೊತ್ತಿದ್ದು, ಇದೀಗ ಭಾರತೀಯರಿಗಿಂತ ಪಾಕಿಸ್ತಾನಿಗಳಿಗೆ ಅಜಿತ್ ದೋವಲ್ ಬಗ್ಗೆ ಹೆಚ್ಚಾಗಿ ತಿಳಿದಿರುವುದಂತೂ ಖಂಡಿತ!!!

ಪ್ರಮುಖ ಭಯೋತ್ಪಾದಕರ ನಿರ್ಮೂಲನೆ!!!

ಕೆಲವು ತಿಂಗಳಿನಿಂದ ಭಾರತೀಯ ಸೇನೆಯು ಜನರಲ್ ಬಿಪಿನ್ ರಾವತ್ ನೇತೃತ್ವದಲ್ಲಿ ಅಕ್ರಮಣಕಾರಿಯಾದಂತಹ ಬದಲಾವಣೆಯನ್ನು ಮಾಡಲಾಗಿದೆ.
ಪ್ರವಾಸೋದ್ಯಮ ಸ್ಥಳವಾಗಿರುವ ಕಣಿವೆಗಳಲ್ಲಿ ಭಯೋತ್ಪಾದನಾ ಮುಕ್ತ ಪ್ರವಾಸೋದ್ಯಮ ಸ್ಥಳವಾಗಿ ಮಾರ್ಪಡಿಸುವ ಕನಸು ಡಿಸೆಂಬರ್‍ನಿಂದ ಖಂಡಿತವಾಗಿಯೂ ನಡೆಯಲಿದೆ!!! ಅಷ್ಟೇ ಅಲ್ಲದೇ, ಭಯೋತ್ಪಾದಕ ಬರ್ಹನ್‍ವಾನಿಯನ್ನು ಯಶಸ್ವಿಯಾಗಿ ನಿವಾರಣೆ ಮಾಡಿದ ನಂತರ ಭಾರತೀಯ ಸೈನ್ಯದಲ್ಲಿ ಆದಷ್ಟು ಬೇಗ ಉತ್ತಮ ಸಮಯ ಆರಂಭವಾಗುವ ಎಲ್ಲಾ ಲಕ್ಷಣಗಳು ಬರಲಿವೆ!!

ಜೂನ್ ತಿಂಗಳಿನಲ್ಲಿ ಭಾರತೀಯ ಸಿಬ್ಬಂದಿಗಳು 30 ಭಯೋತ್ಪಾದಕರನ್ನು ಯಶಸ್ವಿಯಾಗಿ ನಿರ್ಮೂಲನೆ ಮಾಡಿರುವ ವಿಚಾರ ಎಲ್ಲರಿಗೂ ತಿಳಿದಿದೆಯೇ? ಹೌದು.. ಅಬು ದುಜಾನಾ, ಅಬು ಇಸ್ಮಾಯಿಲ್, ಬಶೀರ್ ಲಷ್ಕರಿ, ಸಬ್ಸರ್ ಅಹ್ಮದ್ ಭಟ್, ಸಜದ್ ಅಹ್ಮದ್ ಗಿಲ್ಕರ್, ಜುನೈದ್ ಮಾಟೂ ಮತ್ತು ಹಲವು ಉನ್ನತ ಭಯೋತ್ಪಾದಕ ಕಮಾಂಡರ್‍ಗಳನ್ನು ಭಾರತೀಯ ರಕ್ಷಣಾ ಪಡೆಗಳಿಂದ ನಿರ್ಮೂಲನೆ ಮಾಡಲಾಗಿದೆ. 2017ರಲ್ಲಿ ಭದ್ರತಾ ಪಡೆಗಳು ಸುಮಾರು 150 ಭಯೋತ್ಪಾದಕರನ್ನು ಕೊಲ್ಲುವಲ್ಲಿ ಯಶಸ್ವಿಯಾದರು. ಇದು ಭಯೋತ್ಪಾದಕರ ಮೂಲಾಧಾರವನ್ನೇ ಮುರಿಯುವಲ್ಲಿ ಯಶಸ್ವಿಯನ್ನು ಪಡೆದಿದ್ದಂತೂ ನಿಜ!!!

ಅರೆ ಬೆಂದ ರಕ್ಷಣಾ ವಿಶ್ಲೇಷಕರ ಪ್ರಕಾರ ಭಾರತ ಯುದ್ದವನ್ನು ಮಾಡಲು ಸಿದ್ದರಾಗಿರಲಿಲ್ಲ ಅಷ್ಟೇ ಅಲ್ಲದೇ, ಭಾರತ ಯಾಜಮಾನನಂತೆ ತಮ್ಮ ಬಾಯಿಯನ್ನು ಮುಚ್ಚಿ ಸುಮ್ಮನೆ ಕುಳಿತಿತ್ತು. ಹೀಗಾಗಿ ಕೆಲವು ವಾರಗಳ ಹಿಂದೆ ಚೀನಾ ಆಕ್ರಮಣವನ್ನು ಆರಂಭಿಸುವ ಅಂಚಿನಲ್ಲಿತ್ತು. ಇದಕ್ಕೆ ಪಾಕಿಸ್ತಾನವು ಗಡಿ ದಾಟಲು ಭಯೋತ್ಪಾದಕರಿಗೆ ಸಹಾಯ ಮಾಡಿತ್ತಲ್ಲದೇ ನಂತರ ಕದನ ವಿರಾಮವನ್ನು ಉಲ್ಲಂಘಿಸಿತ್ತು!! ಭಾರತೀಯ ಸೇನೆಯು ಭಯೋತ್ಪಾದಕರ ಸಹೋದ್ಯೋಗಿಗಳನ್ನು ಸದೆ ಬಡೆಯುವಲ್ಲಿ
ಯಶಸ್ಸಿಯಾಗಿತ್ತು, ಹಾಗಾಗಿ ಇದರ ಸೇಡು ತೀರಿಸಲು ಮುಂದಾಗಿದ್ದರು ಈ ಪಾಪಿಗಳು.. ಯಾವಗ 56 ಇಂಚಿನ ಎದೆ ಇದೆಲ್ಲದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲವೋ ಆಗ ಚೀನಾ,ಪಾಕಿಸ್ತಾನ ಇಂಗು ತಿಂದ ಮಂಗನ ಹಾಗೇ ಸುಮ್ಮನಾಯಿತು. ಇದನ್ನು ನೋಡಿದ ಮೇಲೆ ಕಲ್ಲು ಎಸೆಯುವದನ್ನು ಪ್ರಾಯೋಜಿಸುವವರು ಸುಮ್ಮನಾಗಿದ್ದಾರೆ

 

ಚೀನಾ ಮತ್ತು ಪಾಕಿಸ್ತಾನವನ್ನು ಎದುರಿಸಲು ಭಾರತೀಯ ಸೇನೆಯನ್ನು ಮುಂಚಿತವಾಗಿಯೇ ಸಿದ್ದಪಡಿಸುವಲ್ಲಿ ರಕ್ಷಣಾ ಇಲಾಖೆ ಯಶಸ್ಸಿಯಾಗಿದೆ. ಅಲ್ಲದೆ ಯಾವತ್ತು ಭಾರತೀಯ ಸೇನೆ ಈ ರೀತಿಯಾಗಿ ಯುದ್ದಕ್ಕೆ  ಪೂರ್ವತಯಾರಿಯನ್ನು ಮಾಡುತ್ತಿರಲಿಲ್ಲ. ಆದರೆ ಇದೀಗ ಭಾರತೀಯ ರಕ್ಷಣಾ ತಂಡ ತನ್ನ ಸ್ಪಷ್ಟ ನಿಲುವಿನ ಮೇಲೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿದು ಬರುತ್ತೆ. ಅಷ್ಟೇ ಅಲ್ಲದೇ ಎಲ್ಲಾ ಶತ್ರುಗಳನ್ನು ಸಮರ್ಥವಾಗಿ ನಿಭಾಯಿಸಲು ಸಮರ್ಥರಾಗಿದ್ದಾರೆ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ!!!

– ಅಲೋಖಾ

Tags

Related Articles

Close