ಪ್ರಚಲಿತ

ಕಳೆದ ಒಂದು ವಾರದಿಂದ ರಮ್ಯಾ ಸಾಮಾಜಿಕ ಜಾಲತಾಣದಿಂದ ನಾಪತ್ತೆಯಾಗಿದ್ದು ಯಾಕೆ?

ಅದೇನೇ ಮಾಡಿದರೂ  ಟ್ವಿಟರ್‍ನಲ್ಲಿ ಭಾರೀ ಮುಂದೆ ಇದ್ದ ಪ್ರಧಾನಿ ನರೇಂದ್ರ ಮೋದಿಯವರನ್ನು ಹಿಂದಿಕ್ಕಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ಆದರೆ ಮುಂದಿನ ಪ್ರಧಾನಿ ಅಂತ ಕರೆಸಿಕೊಳ್ಳುವ ಪಪ್ಪು ಅಲಿಯಾಸ್ ರಾಹುಲ್‍ಗಾಂಧೀ ಪ್ರಧಾನಿ ಮೋದಿಯನ್ನು ಮೀರಿಸುವ ಶತಾಯಗತಾಯ ಪ್ರಯತ್ನದೊಂದಿಗೆ ಕರ್ನಾಟಕದ ಮಾಜಿ ಸಂಸದೆ ತನ್ನ ಮೈಮಾಟದ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಮೋಹಕ ತಾರೆ ರಮ್ಯಾಳನ್ನು ಸಾಮಾಜಿಕ ಜಾಲತಾಣ ರಾಷ್ಟ್ರೀಯ ಅಧ್ಯಕ್ಷೆಯನ್ನಾಗಿ ಮಾಡಿದರು. ಜಗತ್ತಿನ್ನೆಲೆಡೆ ಕಾಮಿಡಿ ಪೀಸ್ ಎಂದು ಕರೆಸಿಕೊಳ್ಳುವ ರಾಹುಲ್‍ಗಾಂಧಿಯನ್ನು ಗಬ್ಬರ್ ಸಿಂಗ್ ತರಹ ಬಿಂಬಿಸಲು ಶತಾಯಗತಾಯ ಪ್ರಯತ್ನಪಟ್ಟರು ರಮ್ಯಾ…

ಅದರಲ್ಲಿ ಅಲ್ಪಮಟ್ಟಿಗೆ ಯಶಸ್ಸನ್ನು ಕಂಡರು. ಟ್ವಿಟರ್‍ನಲ್ಲಿ ಪ್ರಧಾನಿ ಮೋದಿಗಿಂತ ರಾಹುಲ್ ಗಾಂಧಿಯೇ ಹೆಚ್ಚು ಎನ್ನುವ ವಿಷಯ ಕಾಡ್ಗಿಚ್ಚಿನಂತೆ ಹರಡಿತ್ತು. ಕಾಮಿಡಿಕಿಂಗ್‍ಗೆ ಇಷ್ಟೊಂದು ಹಿಂಬಾಲಕರೇ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ ಪ್ರಸಂಗ ದೇಶದಲ್ಲಿ ನಿರ್ಮಾಣವಾಯಿತು.!! ಇದರ ಸಂಪೂರ್ಣ ಕ್ರೆಡಿಟ್ ರಮ್ಯಾ ಪಾಲಾಯಿತು.!! ಆದರೆ ರಾಹುಲ್ ಗಾಂಧಿಯನ್ನು ಫಾೀಲೋ ಮಾಡುತ್ತಿದ್ದ ಟ್ವಿಟಾಪತಿಗಳು ನಕಲಿಗರು ಎಂದು ಯಾವಾಗ ಬಯಲಿಗೆ ಬಂತೋ ಅಂದು ರಾಹುಲ್ ಗಾಂಧಿ ತಬ್ಬಿಬ್ಬಾಗಿ ಹೋದರು.!! ಈ ವಿಷಯ ಜಗದ್ಜಾಹೀರು ಆಗುತ್ತಿದ್ದಂತೆ ಸ್ವತಃ ರಮ್ಯಾನೇ ನಾಲ್ಕು ಗೋಡೆಯ ಮಧ್ಯೆ ಬಿಕ್ಕಿ ಬಿಕ್ಕಿ ಅಳುತ್ತಿದ್ದರಂತೆ.!!! ತನ್ನ ನಕಲೀ ರೂಪವನ್ನು ಕಂಡ ದೇಶದ ಜನತೆಯಿಂದ ಛೀ ಥೂ ಎಂದು ಉಗಿಸುವ ಮುನ್ನ ಮತ್ತೊಮ್ಮೆ ಲಂಡನ್ ಪ್ರವಾಸ ಕೈಗೊಂಡರೆ ಹೆಂಗೆ ಎಂಬ ಚಿಂತನೆಯಲ್ಲಿದ್ದಾರಂತೆ!!!

ತನ್ನ ನಿಜರೂಪ ಕಂಡ ದೇಶದ ಜನತೆಯ ಎದುರು ಹೋಗಲಾರದೆ ರಾಜ್ಯ ರಾಜಕಾರಣಕ್ಕೆ ಎಂಟ್ರಿಯಾಗಿದ್ದಾರಂತೆ. ರಾಹುಲ್ ಗಾಂಧಿ ಕೂಡಾ “ಡೋಂಟ್ ವರಿ ರಮ್ಯಾ ಐ ಆಮ್ ವಿತ್ ಯೂ” ಎಂದಿದ್ದಾರಂತೆ. ಈ ಕಾರಣಕ್ಕಾಗಿಯೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಮ್ಯಾ ಮಂಡ್ಯದ ಮೇಲೆ ಕಣ್ಣಿಟ್ಟಿದ್ದಾರಂತೆ. ಆದರೆ ಈ ಸುದ್ದಿ ಕೇಳಿದ ಅಂಬರೀಶ್ ತುಂಬಾನೇ ಗರಂ ಆಗಿದ್ದಾರೆ. ರಮ್ಯಾ ರಾಜ್ಯ ರಾಜಕಾರಣಕ್ಕೆ ಆಗಮಿಸಿ ಮುಂಬರುವ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಚರ್ಚೆ ಜಿಲ್ಲೆಯಲ್ಲಿ ಶುರುವಾಗಿದೆ. ರಮ್ಯಾ ಮತ್ತು ಅಂಬರೀಷ್ ಇಬ್ಬರೂ ಮಂಡ್ಯ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇದರಿಂದ ಅಂಬರೀಷ್ ಮತ್ತು ರಮ್ಯಾ ಇಬ್ಬರೂ ಮಂಡ್ಯ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇದರಿಂದ ಅಂಬರೀಷ್ ಮತ್ತು ರಮ್ಯಾ ಮಧ್ಯೆ ಶೀತಲ ಸಮರ ಶುರುವಾಗಿದೆ.!!!

ಒಂದು ಕಡೆಯಲ್ಲಿ ಅಂಬರೀಶ್ ಅವರನ್ನು ಆರಿಸಿ ಕಳುಹಿಸಿ ಸಚಿವರಾದರೂ ಜಿಲ್ಲೆಗೆ ಯಾವುದೇ ಪ್ರಯೋಜನವಾಗಿಲ್ಲ. ಯಾವುದೇ ಹೋರಾಟ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ವಸತಿ ಖಾತೆ ನೀಡಿದರೂ ಅದರಲ್ಲಿ ನಿರೀಕ್ಷಿತ ಸಾಧನೆ ಮಾಡಿಲ್ಲ ಎಂಬ ಮಾತು ಕೂಡಾ ಅಲ್ಲಲ್ಲಿ ಕೇಳಿ ಬರುತ್ತಿದೆ. ಹೀಗಿರುವಾಗ ಹೈಕಮಾಂಡ್‍ಗೆ ಹತ್ತಿರವಾದ ಮಾಜಿ ಸಂಸದೆ ರಮ್ಯಾ ಮಂಡ್ಯದಲ್ಲಿ ತನ್ನ ಛಾಪು ಮೂಡಿಸಲು ಮುಂದಾಗಿದ್ದು, ಇದೀಗ ಅವರೇ ಮುಂದಿನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಎನ್ನಲಾಗುತ್ತಿದ್ದು, ಇದು ಅಂಬರೀಶ್ ಅವರ ನಿದ್ದೆಗೆಡಿಸಿದೆ ಎಂದರೆ ತಪ್ಪಾಗಲಾರದು. ಇವರ ಬಗ್ಗೆ ಇನ್ನೂ ಹೇಳುವುದಾದರೆ ಮಂಡ್ಯದ ಜನ ಒಂದಲ್ಲ ಒಂದು ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದಾಗಲೂ ಅವರು ಸದನಕ್ಕೆ ಹೋಗಿ ಸಮಸ್ಯೆ ಬಗ್ಗೆ ಗಮನಹರಿಸಿಲ್ವಂತೆ . ಇದುವರೆಗೆ ಅವರು ಕೇವಲ ನಾಲ್ಕು ದಿನ ಮಾತ್ರವಂತೆ ಹಾಜರಾಗಿರುವುದು. ಇದೆಲ್ಲವನ್ನು ಗಮನಿಸಿದಾಗ ಕಾಂಗ್ರೆಸ್ ನಾಯಕರು ಮುಂದಿನ ಚುನಾವಣೆಯಲ್ಲಿ ಮತ್ತೆ ಅವರಿಗೆ ಟಿಕೆಟ್ ನೀಡಿದರೆ ಗೆಲುವು ಕಷ್ಟ ಎನ್ನುವ ಮಾತುಗಳು ಕೂಡಾ ಅಲ್ಲಿ ಇಲ್ಲಿ ಹರಿದಾಡುತ್ತಿದೆ.

ಅದಲ್ಲದೆ ಇತ್ತೀಚೆಗೆ ಕಲಾಪಕ್ಕೆ ಅಂಬರೀಶ್ ಚಕ್ಕರ್ ಹಾಕಿ ಅದ್ಯಾವುದೋ ಉಪ್ಪು ಹುಳಿ ಖಾರ ಚಿತ್ರದ ಹಳೇ ಡೌವ್ ಮಾಲಾಶ್ರಿಯೊಂದಿಗೆ ಡಾನ್ಸ್ ಮಾಡುತ್ತಾ ಕಾಲ ಕಳೆಯುತ್ತಿದ್ದನ್ನು ಎಲ್ಲರೂ ಗಮನಿಸಿರಬಹುದು. ಇಂತಹವರಿಗೆ ಜನರ ಸಮಸ್ಯೆ ಎಲ್ಲಿ ಅರ್ಥವಾಗುತ್ತೋ ಗೊತ್ತಿಲ್ಲ. ಬೆಳಗಾವಿಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಹಲವಾರು ವಿಷಯಗಳ ಕುರಿತಂತೆ ಕಾವೇರಿ ಚರ್ಚೆ ನಡೆಯುತ್ತಿತ್ತು. ರೆಬಲ್ ಸ್ಟಾರ್ ಅಂಬರೀಶ್ ಅವರು ತಣ್ಣಗೆ ಮಾಲಾಶ್ರೀ ಅವರ ಸೊಂಟ ಬಳಸಿ ನರ್ತಿಸಿವ ರೀತಿ ಗಮನಿಸಿದಾಗ ಇವರು ಯಾವ ರೀತಿ ದೇಶವನ್ನು ಉದ್ಧಾರ ಮಾಡುತ್ತಾರೆ ಎಂದು ನಮಗೆ ಅರ್ಥವಾಗುತ್ತಲ್ಲವೇ? ನಿಮಗೆ ಹುಡಿಗಿಯರ ಜೊತೆ ಡಾನ್ಸ್ ಮಾಡುವುದು ಮುಖ್ಯವೋ ಅಥವಾ ಕಲಾಪ ಮುಖ್ಯವೋ?

ಆದರೆ ಯಾವಾಗ ರಮ್ಯಾ ಮಂಡ್ಯ ಟಿಕೆಟ್ ಆಕಾಂಕ್ಷಿ ಎಂದು ತಿಳಿಯಿತೋ ಅಂಬರೀಷ್ ರೆಬಲ್ ಆಗಿ ಹೋಗುತ್ತಾರೆ. ಇಲ್ಲಿಯವರೆಗೆ ಮೌನವಾಗಿದ್ದ ಅಂಬರೀಶ್ ಅವರಿಗೆ ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಭಯ ಆರಂಭವಾಗಿದೆಯಾ? ಈ ಬಾರಿ ಕಾಂಗ್ರೆಸ್‍ನಿಂದ ನನಗೆ ಟಿಕೆಟ್ ಸಿಗಲಿದೆಯಾ ಎಂಬ ಭಯ ಶುರುವಾಗುತ್ತದೆ. ತಮ್ಮನ್ನು ಬಿಟ್ಟರೆ ಕಾಂಗ್ರೆಸ್‍ನಲ್ಲಿ ಗೆಲ್ಲೋರು ಯಾರೂ ಇಲ್ಲ ಎಂಬ ಆತ್ಮ ವಿಶ್ವಾಸ ಅವರದ್ದಾಗಿತ್ತು. ಆದರೆ ಯಾವಾಗ ರಮ್ಯಾ ಮಂಡ್ಯಕ್ಕೆ ಬರುತ್ತಿದ್ದಾರೆ ಇಲ್ಲಿ ಮನೆಯನ್ನೂ ಖರೀದಿಸಿದ್ದಾರೆ ಎಂಬಿತ್ಯಾದಿ ಮಾತುಗಳಿಂದ ಅಂಬರೀಶ್‍ಗೂ ಆತಂಕ ಶುರುವಾಗಿದೆ. ಇದೆಲ್ಲಾ ವಿಷಯ ತಿಳಿದ ಅಂಬರೀಶ್ ಪಕ್ಷ ಬಿಟ್ಟು ತೊರೆಯುತ್ತೇನೆ ಎಂದಾಗ ಹೈ ಕಮಾಂಡರ್ ಕರೆ ಮಾಡಿ ನೀವು ಯಾವ ಪಕ್ಷಕ್ಕೂ ತೆರಳ ಬೇಡಿ ಮಂಡ್ಯದ ಸೀಟ್ ನಿಮಗೇ ಮೀಸಲಿರಿಸಿದ್ದೇವೆ ಎಂದು ಹೇಳಿದ್ದಾರೆ…ಅಲ್ಲಿಂದ ಸ್ವಲ್ಪ ಅಂಬರೀಶ್ ಕೂಲ್ ಆಗಿದ್ದಾರೆ ಎಂಬ ಸುದ್ಧಿ ಈಗ ಹಲವೆಡೆ ಕೇಳಿಬರುತ್ತಿದೆ.

ಹೀಗೆ ಸಿಎಂ ಸಿದ್ದು ಜೊತೆ ಮುನಿಸಿಕೊಂಡಿದ್ದ ರೆಬಲ್ ಸ್ಟಾರ್ ಕಾಂಗ್ರೆಸ್‍ನಿಂದ ಬಹುದೂರ ಉಳಿದಿದ್ದರು. ಕೊನೆಗೆ ಹೇಗೋ ಅವರನ್ನು ಸಮಾಧಾನಪಡಿಸಿದ್ದರು. ಮೊನ್ನೆ ಮೊನ್ನೇ ಅಂಕಲ್ ಅಂಕಲ್ ಎಂದು ತಿರುಗಾಡುತ್ತಿದ್ದ ರಮ್ಯಾನೇ ಅಂಬಿ ಅಂಕಲ್ ಜೀವನಕ್ಕೆ ಬೆಂಕಿ ಇಡಲು ತಯಾರಾಗುತ್ತಿದ್ದಾಳೆ ಎಂದು ಅನಿಸುತ್ತಿದೆ. ಈ ಚುನಾನಣೆಯಲ್ಲಿ ಸ್ಪರ್ಧಿಸುವ ಭರದಲ್ಲಿ ಸಾಮಾಜಿಕ ಜಾಲತಾಣ ರಾಷ್ಟ್ರೀಯ ಅಧ್ಯಕ್ಷೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನಾರವರು ಟ್ವಿಟರ್‍ನಲ್ಲಿ ಮೌನಮುರಿದಿರಬೇಕು.!! ಎಲ್ಲಾ ಪವರ್ ವೀಕ್ ಆಗಿರಬೇಕು ರಮ್ಯಾ ಮೇಡಂದ್ದು…

-ಪವಿತ್ರ

Tags

Related Articles

Close