ರಾಜಕೀಯ ಅಂದ್ರೇನೆ ಹಾಗೆ. ಅಲ್ಲಿ ಯಾರೂ ಮಿತ್ರರಲ್ಲ, ಯಾರೂನೂ ಶತ್ರುಗಳಲ್ಲ. ತನ್ನ ತಾಳಕ್ಕೆ ಕುಣಿಯುತ್ತಾನೆ ಅಂತಾದರೆ ಅವನು ಮಿತ್ರ. ಈತ ಬಡಿಯುವ
ತಾಳಕ್ಕೆ ತಕ್ಕ ಹೆಜ್ಜೆ ಬಾರದೆ ಇದ್ದರೆ ಆತನ ಮೇಲೊಂದು ದೃಷ್ಟಿ ಇಟ್ಟು ಬಿಡುತ್ತಾನೆ. ಆತನ ತಾಳಕ್ಕೆ ಹೆಜ್ಜೆನೇ ಹಾಕಿಲ್ಲವೆಂದರೆ ಬಿಡಿ, ಆತ ಶತ್ರೂನೆ. ಅಂದಹಾಗೆ ಇದು ವಿವಿಧ ರಾಜಕೀಯ ಪಕ್ಷಗಳ ಮಾತಲ್ಲ. ಬದಲಾಗಿ ಒಂದು ಪಕ್ಷದ ಒಳಗಿನ ಮಾತು. ಇದು ಕೇವಲ ಒಂದು ಪಕ್ಷದ ಕಥೆಯಲ್ಲ. ಎಲ್ಲಾ ರಾಜಕೀಯ ಪಕ್ಷಗಳ ವಿಷಯ.
ಆದರೆ ಈಗ ಒಂದು ರೋಚಕ ಸ್ಟೋರಿಯೊಂದು ಎಲ್ಲರನ್ನು ಹುಬ್ಬೇರಿಸುವುದಂತು ಸತ್ಯ. ಅದು ಆಡಳಿತರೂಡ ಕರ್ನಾಟಕ ಕಾಂಗ್ರೆಸ್‍ನ ಕಥೆ. ಅದೂ ನಮ್ಮ
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‍ರವರದ್ದು. ಅದೇನು ಹೊಸತಲ್ಲ ಬಿಡಿ, ಅವರದ್ದು ಒಳಜಗಳ ಇದ್ದದ್ದೇ ಎಂದು ಎನಿಸಬಹುದು. ಆದರೆ ಈಗ ಹೇಳುತ್ತಿರುವ ವಿಷಯ ಕೇಳಿದರೆ ರಾಜಕೀಯದಲ್ಲಿ ಹೀಗೂ ಇರುತ್ತಾ ಎಂದು ಮೂಗಿನ ಮೇಲೆ ಬೆರಳಿಡುವುದು ಖಂಡಿತ.
ಹೌದು. ರಾಜ್ಯದ ಮುಖ್ಯಮಂತ್ರಿಗಳು ಮತ್ತು ಕೆಪಿಸಿಸಿ ಅಧ್ಯಕ್ಷರು ಯಾಕೋ ವಿರುದ್ಧ ಧಿಕ್ಕಿನಲ್ಲೇ ಹೋಗುತ್ತಿರುತ್ತಾರೆ. ಈಗಲಂತೂ ಪರಸ್ಪರ ಹಾವು ಮುಂಗುಸಿಯಂತೆ ವರ್ತಿಸುತ್ತಿದ್ದಾರೆ. ಮುಖ್ಯಮಂತ್ರಿಗಳನ್ನು ಕಂಡರೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಿಗೆ, ಅಧ್ಯಕ್ಷರನ್ನು ಕಂಡರೆ ಮುಖ್ಯಮಂತ್ರಿಗಳಿಗೆ ಅದೇನೋ ಭಿನ್ನಾಭಿಪ್ರಾಯಗಳು ತಾಂಡವವಾಡುತ್ತಲೇ ಇರುತ್ತೆ. ಎಂದಿನ ಮಾತುಗಳು ಬೇಡ. ಸದ್ಯ ನೋಡುತ್ತಿರುವ ಸಾಕ್ಷಿಯೇ ಸಾಕು. ಆರಂಭದಲ್ಲಿ ಕಾಂಗ್ರೆಸ್ಸಿಗರು “ಮನೆ ಮನೆಗೆ ಕಾಂಗ್ರೆಸ್” ಎಂದು ಮನೆ ಮನೆಗೆ ಹೊರಟರು. ಇತ್ತ ಬಿಜೆಪಿಗರು ಪರಿವರ್ತನಾ ಯಾತ್ರೆ ಹಮ್ಮಿಕೊಂಡು ರಾಜ್ಯಾದ್ಯಂತ ಪ್ರಚಾರ ಶುರುವಿಟ್ಟುಕೊಂಡರು. ಯಾವಾಗ ಬಿಜೆಪಿಯವರ ಯಾತ್ರೆ ಭರ್ಜರಿ ಯಶಸ್ವಿಯಾಯಿತೋ ಕಾಂಗ್ರೆಸ್‍ನ ಮನೆ ಮನೆಗೆ ಕಾಂಗ್ರೆಸ್ ಯೋಜನೆ ಠುಸ್ ಪಟಾಕಿಯಾಯ್ತು. ಇದನ್ನು ಕಂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರು “ಜನಾಶಿರ್ವಾದ ಯಾತ್ರೆ” ಎಂಬ ಪ್ರಚಾರಕ್ಕೆ ಚಾಲನೆ ನೀಡಲು ಚಿಂತಿಸುತ್ತಾರೆ. ಆದರೆ ಇದ್ಯಾಕೋ ಕೆಪಿಸಿಸಿ ಅಧ್ಯಕ್ಷರಿಗೆ ಹಿಡಿಸೋಲ್ಲ. ಬಿಜೆಪಿಯವರದ್ದು ನಕಲಿ ಮಾಡಿದ ಹಾಗಿರುತ್ತೆ ಎಂದು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಾರೆ. “ಮುಖ್ಯಮಂತ್ರಿಗಳು ಈ ಯಾತ್ರೆ ಕೈಗೊಂಡರೆ, ಕೆಪಿಸಿಸಿ ಅಧ್ಯಕ್ಷನಾಗಿ ನಾನು ಈ ಯಾತ್ರೆಗೆ ಹೋಗೋದಿಲ್ಲ” ಎಂದು ಬಹಿರಂಗವಾಗಿಯೇ ಹೇಳುತ್ತಾರೆ. ಅಲ್ಲಿಗೆ ಒಳಗೊಳಗೇ ಇದ್ದ ವೈಮನಸ್ಸು ಸ್ಪೋಟಗೊಳ್ಳುತ್ತೆ.
ಪರಮೇಶ್ವರ್ ವಿರುದ್ಧ ನಡೆದಿದೆ ಶತ್ರು ಸಂಹಾರ ಪೂಜೆ..!!!
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ವಿರುದ್ಧ ಮುಖ್ಯಮಂತ್ರಿಗಳು ಒಳಗಿಂದೊಳಗೆ ಹೋರಾಟ ನಡೆಸುವುದು ಹೊಸದೇನಲ್ಲ. 2013ರ ರಾಜ್ಯ ವಿಧಾನ ಸಭಾ
ಚುನಾವಣೆಯಲ್ಲಿ ಪರಮೇಶ್ವರ್ ವಿರುದ್ಧ ನಿಂತು ಅವರ ಸೋಲಿಗೆ ಕಾರಣವಾಗಿದ್ದು ರಾಜ್ಯದ ಜನತೆಗೆ ಗೊತ್ತಿರುವ ಸಂಗತಿಯೆ. ತಮ್ಮ ಬಣಗಳನ್ನು ಬಿಟ್ಟು
ಪರಮೇಶ್ವರ್‍ರವರನ್ನು ಮುಖ್ಯಮಮತ್ರಿಗಳು ಸೋಲಿಸಿದ್ದಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ವಿಷಯ ಬೇರೆನೇ ಇದೆ. ಪರಮೇಶ್ವರ್ ಸೋಲಿಗೆ ಪ್ರಮುಖ ಕಾರಣ ಸಿದ್ದರಾಮಯ್ಯ ಮಾಡುತ್ತಿರುವ ಒಂದು ಪೂಜೆ ಎಂದರೆ ನಂಬಲೇಬೇಕು.
2013ರ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಪರಮೇಶ್ವರ್ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶತ್ರು ಸಂಹಾರ ಪೂಜೆ ಮಾಡಿಸಿ ಸೈ
ಅನ್ನಿಸಿಕೊಂಡಿದ್ದರು. ರಾಜ್ಯದ ಜನತೆಗೆ ತಾನೊಬ್ಬ ಮಹಾ ನಾಸ್ತಿಕ ಎಂದು ಬಿಂಬಿಸಿಕೊಳ್ಳುವ ಸಿದ್ದರಾಮಯ್ಯ ತನ್ನ ಶತ್ರುಗಳನ್ನು ಮಟ್ಟಹಾಕಲು ಈ ಒಂದು ಅಸ್ತ್ರವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ, ಮತ್ತು ಯಶಸ್ವಿಯೂ ಆಗಿದ್ದಾರೆ.
ಓಟಿಗಾಗಿ ಸದಾ ದಲಿತರ ಜಪ ಮಾಡುತ್ತಿರುವ ಕಾಂಗ್ರೆಸ್‍ನಲ್ಲಿ ಕಳೆದ ಬಾರಿ ದಲಿತ ಅಭ್ಯರ್ಥಿ ಮುಖ್ಯಮಂತ್ರಿಯಾಗುವ ಸಂಭವ ಹೆಚ್ಚಾಗಿತ್ತು. ಆ ಸಮಯದಲ್ಲಿ
ರಾಜ್ಯದ ಪ್ರಭಾವಿ ನಾಯಕರಾದ ಡಾ.ಜಿ.ಪರಮೇಶ್ವರ್ ಮುಂಚಿನ ಸಾಲಿನಲ್ಲಿದ್ದರು. ಆದರೆ ಸಿಎಂ ಪಟ್ಟದ ಮೇಲೆ ಸಿದ್ದರಾಮಯ್ಯ ಕಣ್ಣು ಬಿದ್ದಾಗಿತ್ತು.
ಶತಾಯಗತಾಯವಾಗಿ ಮುಖ್ಯಮಂತ್ರಿಯಾಗಲೇ ಬೇಕೆನ್ನುವ ಜಿದ್ದಿಗೆ ಬಿದ್ದಿದ್ದ ಸಿದ್ದರಾಮಯ್ಯ, ಪರಮೇಶ್ವರ್‍ರನ್ನು ಸೋಲಿಸಲು ಅಸ್ತ್ರವಾಗಿರಿಸಿಕೊಂಡಿದ್ದು “ಶತ್ರುಸಂಹಾರ ಪೂಜೆ”.
ಹೌದು. ಮೈಸೂರಿನ ಹಳ್ಳಿವೊಂದರಲ್ಲಿ ರಾಜ್ಯದ ಪ್ರಸಿದ್ಧ ಜ್ಯೋತಿಷಿಯರ ಮಾರ್ಗದರ್ಶನದಲ್ಲಿ ಈ ಪೂಜೆ ನಡೆದಿತ್ತು. ಕಾಂಗ್ರೆಸ್ ಪಕ್ಷದ ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕರಿಗೂ ಈ ಜ್ಯೋತಿಷಿಗಳು ತುಂಬಾನೇ ಪರಿಣಾಮಕಾರಿಯಾಗಿದ್ದಾರೆ. ಹೀಗಾಗಿ ಆ ಜ್ಯೋತಿಷಿಗಳ ಸಹಕಾರದಿಂದ ಕಳೆದ ವಿಧಾನ ಸಭಾ ಚುನಾವಣೆಯ ವೇಳೆಯಲ್ಲಿ ಡಾ.ಜಿ.ಪರಮೇಶ್ವರ್ ವಿರುದ್ಧ ಶತ್ರು ಸಂಹಾರ ಪೂಜೆ ಮಾಡಿ ಅವರನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಕರ್ನಾಟಕದಲ್ಲಿ ದಲಿತ ಸಿಎಂ ಆಗುತ್ತಿದ್ದ ಅವಕಾಶವನ್ನು ನಿರಾಯಾಸವಾಗಿ ತಪ್ಪಿಸಿದ್ದರು ಸಿದ್ದರಾಮಯ್ಯ.
ಈ ಬಾರಿ ನಡೆಯುತ್ತಂತೆ ಇಬ್ಬರ ವಿರುದ್ಧ ಶತ್ರು ಸಂಹಾರ ಯಾಗ..!!!
ಹೌದು. ಮೂಲಗಳ ಪ್ರಕಾರ ಈ ಬಾರಿ ಇಬ್ಬರು ರಾಜ್ಯದ ಪ್ರಭಾವಿ ಕಾಂಗ್ರೆಸ್ಸಿಗರ ವಿರುದ್ಧ ಮುಖ್ಯಮಂತ್ರಿಗಳು ಶತ್ರು ಸಂಹಾರ ಯಾಗವನ್ನು ನಡೆಸುತ್ತಿದ್ದಾರೆ. ಅದರಲ್ಲಿ ಒಬ್ಬರು ಡಾ.ಜಿ.ಪರಮೇಶ್ವರ್ ಆದರೆ ಮತ್ತೊಬ್ಬ ಪ್ರಭಾವಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್. ಈ ಇಬ್ಬರ ವಿರುದ್ಧ ಈಗಾಗಲೇ ಒಂದು ಸುತ್ತಿನ ಬಾಣಗಳನ್ನು ಹೂಡಿದ್ದು ಇಬ್ಬರೂ ರಾಜಕೀಯ ರಂಗದಲ್ಲಿ ಬಳಲುತ್ತಿರುವುದನ್ನು ನಾವು ಸ್ಪಷ್ಟವಾಗಿ ಕಾಣಬಹುದು. ಡಿ.ಕೆ.ಶಿವಕುಮಾರ್‍ಗೆ ಐಟಿ ದಾಳಿ ಬಿಸಿ ಮುಟ್ಟಿಸಿದೆ. ರಾಜಕೀಯ ಚದುರಂಗದಾಟದಲ್ಲಿ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಬಹುದಾದ ಎಲ್ಲಾ ಲಕ್ಷಣಗಳನ್ನು ಹೊಂದಿದ್ದ ಡಿ.ಕೆ.ಶಿವಕುಮಾರ್ ಐಟಿ ದಾಳಿಯ ಬಿಸಿಯಿಂದ ತತ್ತರಿಸಿ ಹೋಗಿದ್ದಾರೆ. ತನ್ನ ಆಸ್ತಿಯನ್ನೆಲ್ಲಾ ಕಳೆದುಕೊಳ್ಳುವ ಭೀತಿಗಿಂತಲೂ ಹೆಚ್ಚಾಗಿ ರಾಜಕೀಯದಲ್ಲಿ ತೀವ್ರ ಹಿನ್ನೆಡೆಯಾಗುವ ಭೀತಿ ಎದುರಾಗಿದೆ. ಸರಿ ಸುಮಾರು ಹಾಗೆನೇ ಆಗುತ್ತೆ. ಐಟಿ ದಾಳಿಗೆ ಒಳಪಟ್ಟ ನಂತರ ಬಹಿರಂಗವಾಗಿ ಸಿದ್ದರಾಮಯ್ಯನವರು ಡಿಕೆಶಿ ಪರವಾಗಿ ಬ್ಯಾಟಿಂಗ್ ಮಾಡಿದ್ದರೂ ಒಳಗೊಳಗೇ ಖುಷಿ ಪಟ್ಟದ್ದೇ ಹೆಚ್ಚು. ಕೆಲವರಂತೂ ಈ ಐಟಿ ದಾಳಿಯನ್ನು ಸಿದ್ದರಾಮಯ್ಯನವರೇ ಮಾಡಿಸಿದ್ದು ಎಂದು ಬಹಿರಂಗ ಹೇಳಿಕೆಯನ್ನೇ ನೀಡಿದ್ದಾರೆ.
ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೋ ಇಲ್ವೋ ಗೊತ್ತಿಲ್ಲ. ಆದರೆ ಕನಿಷ್ಠ ವಿಧಾನಸಭಾ ಪ್ರತಿಪಕ್ಷ ಸ್ಥಾನವೂ ಡಾ.ಜಿ.ಪರಮೇಶ್ವರ್‍ಗೆ ಸಿಗಬಾರದೆನ್ನುವ ಹಠಕ್ಕೆ ಬಿದ್ದಿದ್ದಾರೆ ಮುಖ್ಯಮಂತ್ರಿಗಳು. ಹೀಗಾಗಿಯೇ ಇವರ ವಿರುದ್ಧ ಈ ಬಾರಿಯೂ ಶತ್ರು ಸಂಹಾರ ಪೂಜೆ ಮಾಡಿ ಸೋಲಿಸುವ ಪಣ ತೊಟ್ಟಿದ್ದಾರೆ. ಈ ಪೂಜೆ ಕೇವಲ ಮುಂದಿನ ಶಾಸಕ ಸ್ಥಾನದ ಚುನಾವಣೆಗೆ ಮಾತ್ರ ವಿರೋಧವಲ್ಲದೆ, ಡಾ.ಜಿ.ಪರಮೇಶ್ವರ್‍ರವರ ರಾಜಕೀಯ ಜೀವನವೇ ಕೊನೆಗೊಳ್ಳಬೇಕೆಂದು ತುದಿಗಾಲಿನಲ್ಲಿ ನಿಂತಿದ್ದಾರೆ ಸಿದ್ದರಾಮಯ್ಯನವರು.
ದಲಿತರಿಗೆ ಪಟ್ಟ ಸಿಕ್ಕರೆ ಸಿಎಂಗೇಕೆ ಕಷ್ಟ..?
ದಲಿತರಲ್ಲಿ ಹಲವಾರು ಮಂದಿ ಪ್ರಭಾವಿ ನಾಯಕರಿದ್ದಾರೆ. ಕಾಂಗ್ರೆಸ್‍ನಲ್ಲೂ ಅನೇಕ ಮಂದಿ ಹಿರಿಯ ನಾಯಕರು ಕೆಲಸ ಮಾಡುತ್ತಿದ್ದಾರೆ. ಹೀಗಾಗಿಯೇ ಕಳೆದ
ವಿಧಾನಸಭಾ ಚುನಾವಣೆಯಲ್ಲಿ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕಾಂಗ್ರೆಸ್‍ನಿಂದಲೇ ಕೂಗು ಕೇಳಿ ಬಂದಿತ್ತು. ಆವಾಗ ರಾಜ್ಯ ಕಾಂಗ್ರೆಸ್‍ನಲ್ಲಿ ಅತ್ಯಂತ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್. ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಚುನಾವಣೆಯನ್ನು ಸಮರ್ಥವಾಗಿ ಎದುರಿಸಿದ್ದ ಡಾ.ಜಿ.ಪರಮೇಶ್ವರ್ ಮೇಲೆ ಹೈಕಮಾಂಡ್ ಕೃಪಾಕಟಾಕ್ಷವಿತ್ತು. 2013ರ ವಿಧಾನ ಸಭಾ ಚುನಾವಣೆ ವೇಳೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಕಾಂಗ್ರೆಸ್ ಪಕ್ಷ ಯಾರನ್ನೂ ಘೋಷಣೆ ಮಾಡಿರಲಿಲ್ಲ. ಹೀಗಾಗಿ ಸಿದ್ದರಾಮಯ್ಯನವರಿಗೆ ಸಹಜವಾಗಿಯೇ ಭಯವಿತ್ತು. ದಲಿತನೆನ್ನುವ ಕಾರಣಕ್ಕಾಗಿ ಡಾ.ಜಿ.ಪರಮೇಶ್ವರ್‍ಗೆ ಮುಖ್ಯಮಂತ್ರಿ ಪಟ್ಟವನ್ನು ನೀಡಿದರೆ, ತನ್ನ ರಾಜಕೀಯ ಭವಿಷ್ಯ ಮುಕ್ತಾಯವಾಗುತ್ತೆ ಎನ್ನುವ ಭಯ ಸಿದ್ದರಾಮಯ್ಯರಿಗೆ ಕಾಡುತ್ತಿತ್ತು.
ದಲಿತರಿಗೆ ಅವಕಾಶ ಸಿಗುವುದಾದರೆ ಅದು ಪರಮೇಶ್ವರ್‍ಗೆ ಮಾತ್ರ. ಆತ ಮುಖ್ಯಮಂತ್ರಿಯಾದರೆ ತನಗೆ ಕನಿಷ್ಠ ಮಂತ್ರಿ ಸ್ಥಾನವೂ ಸಿಗುವುದು ಕಷ್ಠ ಎಂದು ಭಾವಿಸಿದ್ದ ಸಿದ್ದರಾಮಯ್ಯ ಪರಮೇಶ್ವರ್‍ರನ್ನು ಆದಷ್ಟು ದೂರವಿಡಲು ಪ್ರಯತ್ನಿಸಿದ್ದರು. ಆವಾಗ ಮೊರೆ ಹೋಗಿದ್ದೇ ಶತ್ರು ಸಂಹಾರ ಪೂಜೆ. ತನ್ನ ಬೆಂಬಲಿಗರನ್ನು ಪರಮೇಶ್ವರ್ ಸ್ಪರ್ಧಿಸುವ ಕ್ಷೇತ್ರದಲ್ಲಿ ಅವರನ್ನು ಸೋಲಿಸಲು ಬಿಟ್ಟಿದ್ದ ಸಿದ್ದರಾಮಯ್ಯ, ಮೈಸೂರಿನ ಸಣ್ಣ ಹಳ್ಳಿಯೊಂದರಲ್ಲಿ ಗುಪ್ತವಾಗಿ ಪೂಜೆ ನಡೆಸಿದ್ದರು. ಡಾ.ಜಿ.ಪರಮೇಶ್ವರ್ ಸೋತರೆ ತನಗೆ ಮುಖ್ಯಮಂತ್ರಿ ಪಟ್ಟ ಗ್ಯಾರಂಟಿ ಎನ್ನುವುದು ಸಿದ್ದರಾಮಯ್ಯರಿಗೆ ಖಾತ್ರಿಯಾಗಿತ್ತು. ಈ ಕಾರಣಕ್ಕಾಗಿ ಡಾ.ಜಿ.ಪರಮೇಶ್ವರ್‍ರನ್ನು ಸೋಲಿಸಿ ಅಪೇಕ್ಷಿಸಿದಂತೆಯೇ ಮುಖ್ಯಮಂತ್ರಿಯೂ ಆದರು.
ಡಾ.ಜಿ.ಪರಮೇಶ್ವರ್‍ರನ್ನು ಮುಖ್ಯಮಂತ್ರಿಗಳು ಯಾವ ರೀತಿ ನಡೆಸಿಕೊಂಡಿದ್ದರೆಂದರೆ ಅದನ್ನು ಸ್ವತಃ ಕಾಂಗ್ರೆಸ್ ಕಾರ್ಯಕರ್ತರೂ ಊಹಿಸಿರಲಿಲ್ಲ. ಕೆಪಿಸಿಸಿ
ಅಧ್ಯಕ್ಷರಾಗಿ ಅಷ್ಟೊಂದು ಪ್ರಭಾವಿಯಾಗಿದ್ದರೂ ಕೂಡಾ ಅವರು ಸೋತು ಬಿಟ್ಟರು. ನಂತರ ಡಾ.ಜಿ.ಪರಮೇಶ್ವರ್‍ರವರ ಹಠ ಹಾಗೂ ದಲಿತರ ಕೂಗಿನಿಂದಾಗಿ ಅವರಿಗೆ ಪರಿಷತ್‍ನಲ್ಲಿ ಸ್ಥಾನ ನೀಡುವಂತಾಯಿತು. ನಂತರ ಡಾ.ಜಿ.ಪರಮೇಶ್ವರ್ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಹಠ ಹಿಡಿದರು. ಈ ಹಗ್ಗ ಜಗ್ಗಾಟದಲ್ಲಿ ಮತ್ತೆ ಮುಖ್ಯಮಂತ್ರಿಗೆ ಗೆಲುವಾಗುತ್ತೆ. ಆದರೆ ತನ್ನ ಪಟ್ಟನ್ನು ಬಿಡದ ಡಾ.ಜಿ.ಪರಮೇಶ್ವರ್ ಕೈಕಮಾಂಡ್ ಮೊರೆ ಹೋಗುತ್ತಾರೆ. ಅದೇ ಹೊತ್ತಿನಲ್ಲಿ ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಗೃಹ ಸಚಿವರಾಗಿದ್ದ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಆವಾಗ ಡಾ.ಜಿ.ಪರಮೇಶ್ವರ್ ಅದೇಗೋ ಕಾಂಗ್ರೆಸ್ ಹೈಕಮಾಂಡ್ ಕೈಕಾಲು ಹಿಡಿದು ಗೃಹ ಮಂತ್ರಿಯ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ.
ಹೀಗೆ ಡಾ.ಜಿ.ಪರಮೇಶ್ವರ್ ಹಾಗೂ ಡಿ.ಕೆ.ಶಿವಕುಮಾರ್ ವಿರುದ್ಧ ಸಮರ ಸಾರುತ್ತಲೇ ಬಂದಿರುವ ಮುಖ್ಯಮಂತ್ರಿಗಳು ಈ ಬಾರಿ ಅವರ ಸೋಲಿಗೆ ನೇರ
ಕಾರಣರಾಗುತ್ತಾರೆ. ಹೈಕಮಾಂಡ್ ಕೃಪಾಕಟಾಕ್ಷ ಸಂಪೂರ್ಣ ಇವರ ಮೇಲೆ ಇರುವುದರಿಂದ ಮುಖ್ಯಮಂತ್ರಿಗಳಿಗೆ ಇದು ಕಷ್ಟದ ವಿಷಯವೆ. ಹಾಗಾಗಿಯೇ ಮತ್ತೆ ಶತ್ರು ಸಂಹಾರ ಪೂಜೆಯ ಮೊರೆ ಹೋಗಿದ್ದಾರೆ.
ಇತ್ತ ಇಡೀ ರಾಜ್ಯದ ಜನರೇ ಮುಖ್ಯಮಂತ್ರಿಗಳಿಗೆ ಶತ್ರುವಾಗಿದ್ದಾರೆ. ಈ ರೀತಿ ಇರುವಾಗ ಮುಖ್ಯಮಂತ್ರಿಗಳೇ ಗೆಲ್ಲುವುದು ಕಷ್ಟ, ಇನ್ನು ನಮ್ಮನ್ನೇನು
ಸೋಲಿಸುವುದು ಎಂದು ಡಾ.ಜಿ.ಪರಮೇಶ್ವರ್ ಹಾಗೂ ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಈ ಕಾಂಗ್ರೆಸ್ ನಾಯಕರ ಬಹಿರಂಗ ಜಗಳ ಮುಂದಿನ
ಚುನಾವಣೆಯಲ್ಲಿ ಯಾವ ರೀತಿ ಪರಿಣಾಮ ಬೀರಲಿದೆ..? ಕಾದು ನೋಡಬೇಕಾಗಿದೆ.
-ಸುನಿಲ್