ಪ್ರಚಲಿತ

ಕಳೆದ ವಾರ ಪ್ರಧಾನಿ ಮೋದಿಗಿಂತ ರಾಹುಲ್ ಗಾಂಧಿ ಪ್ರಸಿದ್ಧಿ ಪಡೆದ ಹಿಂದಿರುವ ಕಾಣದ ಕೈ ಪದ್ಮಾವತಿಯದೇ?!

ಸಾಮಾಜಿಕ ಜಾಲತಾಣ ಟ್ವಿಟರ್‍ನಲ್ಲಿ ಸಾರ್ವಜನಿಕರಿಂದ ಹೆಚ್ಚು ರಿ-ಟ್ವೀಟ್ ಪಡೆಯುವ ಮೂಲಕ ಕಾಂಗ್ರೆಸ್‍ನ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಪ್ರಧಾನಿ ನರೇಂದ್ರ ಮೋದಿಯವನ್ನು ಹಿಂದಿಕ್ಕಿದ್ದಾರಂತೆ.. ಹೀಗೆಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಇದರ ಹಿಂದಿನ ಅಸಲಿಯತ್ತು ಕಾಂಗ್ರೆಸಿನ ನಿಜಬಣ್ಣ ಬಯಲು ಮಾಡಿದೆ. ಸಮೀಕ್ಷೆ ಮಾಡುವವರಿಗೆ ಪುರ್ಸೊತ್ತು ಇದ್ದರೆ `ರಾಹುಲ್ ಗಾಂಧಿ ಫನ್ನಿ’ ಎಂದು ಯೂಟ್ಯೂಬ್‍ನಲ್ಲಿ ಸರ್ಚ್ ಮಾಡಿ ನೋಡಲಿ. ಅಲ್ಲಿ ಎಷ್ಟೊಂದು ಕ್ಲಿಕ್ಸ್ ಇದೆ, ಎಷ್ಟೊಂದು ಕಮೆಂಟ್ ಇದೆ ಎಂದರೆ ದಂಗಾಗಬಹುದು. ರಾಹುಲ್‍ಗಾಂಧಿಯ ಫನ್ನಿ ಭಾಷಣವನ್ನು ನೋಡಿ ಎಂಜಾಯ್ ಮಾಡಲೆಂದೇ ಜನರು ಈ ತರ ಕ್ಲಿಕ್ ಮಾಡ್ತಾರೆ ಎಂದು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು.

ಇನ್ನು ರಾಹುಲ್‍ಗಾಂಧಿಯ ರಿಟ್ವೀಟ್ ವಿಷಯಕ್ಕೆ ಬರುವುದಾದರೆ ಟ್ವಿಟರ್‍ನಲ್ಲಿ ರಾಹುಲ್‍ಗಾಂಧಿಗೆ ಬರುವ ಕಮೆಂಟ್ ಬಗ್ಗೆಯೂ ಸಮೀಕ್ಷೆ ಮಾಡಬೇಕಿತ್ತು. ಯಾಕೆಂದರೆ ಜನರು ರಾಹುಲ್‍ನನ್ನು ಯಾವ ತರ ಝಾಡಿಸುತ್ತಿದ್ದಾರೆ ಎಂದರೆ ರಾಹುಲ್‍ನನ್ನು ನೋಡಿ ಅಯ್ಯೋ ಪಾಪ ಎಂದೆನಿಸಬೇಕು. ರಾಹುಲ್‍ಗಾಂಧಿಯ ರಿಟ್ವೀಟ್ ವಿಷಯವನ್ನೇ ನೋಡಿದರೆ ರಾಹುಲ್ ಬಗ್ಗೆ ಇನ್ನಷ್ಟು ಮರುಕ ಹುಟ್ಟಬಹುದು. ಅಯ್ಯೋ ಕಾಂಗ್ರೆಸಿಗರೆ ನೀವು ಪ್ರಚಾರದ ಹುಚ್ಚಿಗೆ ಈತರ ನರಕ ಬರಬಾರದಿತ್ತು. ರಾಹುಲ್‍ನನ್ನು ಇನ್ನಷ್ಟು ಜನಪ್ರಿಯಗೊಳಿಸಬೇಕೆಂಬ ಕಾಂಗ್ರೆಸಿಗರ ಹುಚ್ಚಿಗೆ ಅವರನ್ನು ಕೊನೆಗೂ ಫೆಕರಾ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅದ್ಯಾಕೋ ಗೊತ್ತಿಲ್ಲ ನರೇಂದ್ರ ಮೋದಿಗೆ ಎಸೆಯುವ ಹಗ್ಗ ಪ್ರತೀಸಲ ಕಾಂಗ್ರೆಸಿಗರ ಕುಣಿಕೆಗೇ ಬಂದು ಬೀಳುತ್ತದೆ ಹ್ಹಹ್ಹಹ್ಹಹಹಹ್ಹ..

2019ರ ಚುನಾವಣೆಯನ್ನು ಮುಂದಿಟ್ಟು ಶತಾಯಗತಾಯ ಗೆಲ್ಲಲೇಬೇಕೆಂಬ ಉದ್ದೇಶನ್ನಿಟ್ಟುಕೊಂಡ ಅನೇಕ ಪಕ್ಷಗಳು ಜಾಲತಾಣಗಳಲ್ಲಿ ಗಿಮಿಕ್ ಮಾಡತೊಡಗಿದೆ. ತನ್ನ ಅಭ್ಯರ್ಥಿಗಳನ್ನು ಜನಪ್ರಿಯಗೊಳಿಸಲು ಪ್ರಮುಖ ಅಸ್ತ್ರವಾಗುತ್ತಿರುವುದು ಈ ಜಾಲತಾಣ. ಅದರಲ್ಲೂ ಕಾಂಗ್ರೆಸ್ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದು, ನಾನಾ ತಂತ್ರಗಳನ್ನು ಹೆಣೆಯುತ್ತಿದೆ. ಇದಕ್ಕಾಗಿ ಪ್ರಮುಖವಾಗಿ ಬಳಕೆಯಾಗುತ್ತಿರುವುದು ಟ್ವಿಟರ್… ರಾಹುಲ್ ಗಾಂಧಿಯನ್ನು ಹೋಲಿಸಿದರೆ ನರೇಂದ್ರ ಮೋದಿಗೆ ಟ್ವಿಟರ್‍ನಲ್ಲಿ ಸಾಕಷ್ಟು ಮಂದಿ ಫೋಲೋವರ್ಸ್ ಇದ್ದಾರೆ. ಇದನ್ನು ಕಂಡು ಕಾಂಗ್ರೆಸಿಗರಿಗೆ ಉರಿ ತಾಳಲಾಗುತ್ತಿಲ್ಲ. ಇದಕ್ಕಾಗಿ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗುತ್ತಿರುವ ಕಾಂಗ್ರೆಸ್ ಬಿಜೆಪಿಯನ್ನು ಹಣಿಯಲು ಸಾಕಷ್ಟು ಸರ್ಕಸ್ ಮಾಡುತ್ತಲೇ ಇದೆ. ಆದರೆ ಅದರಲ್ಲಿ ಯಶಸ್ವಿಯಾಗುವುದನ್ನು ಬಿಟ್ಟು ಪೇಚಿಗೆ ಸಿಲುಕುವುದೇ ಹೆಚ್ಚು.

ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಜನಪ್ರಿಯವಾಗಲು ಕಾಂಗ್ರೆಸ್ ಆಯ್ಕೆ ಮಾಡಿಕೊಂಡಿದ್ದು ಸ್ಯಾಂಡಲ್‍ವುಡ್‍ನ ರಮ್ಯಾ ಅಲಿಯಾಸ್ ದಿವ್ಯಸ್ಪಂದನಾಳನ್ನು…
ರಾಹುಲ್‍ನ ಟ್ವೀಟನ್ನು ರಿಟ್ವೀಟ್ ಮಾಡಿ ನರೇಂದ್ರ ಮೋದಿಯನ್ನು ಹಿಂದಿಕ್ಕಬೇಕೆಂಬ ಭರದಲ್ಲಿ ಕಾಂಗ್ರೆಸ್ ಭಾರೀ ದೊಡ್ಡದೊಂದು ಸರ್ಕಸ್ ಮಾಡಿಬಿಟ್ಟಿತು. ಪತ್ರಕರ್ತ ಮಿಹಿರ್ ಎಸ್ ಶರ್ಮಾ ಕೂಡಾ ರಾಹುಲ್ ಗಾಂಧಿಯ ಟ್ವಿಟರ್‍ನ ಯಶಸ್ವಿನ ಬ್ಗೆ ಎನ್‍ಡಿಟಿವಿಯ ಬ್ಲಾಗ್‍ನಲ್ಲಿ ಹೇಳಿಕೊಂಡಿದ್ದಾರೆ.

ಅಷ್ಟಕ್ಕೂ ಕಾಂಗ್ರೆಸಿಗರು ರಾಹುಲ್‍ನನ್ನು ಟ್ವಿಟರ್‍ನಲ್ಲಿ ಜನಪ್ರಿಯಗೊಳಿಸಲು ಮಾಡಿದ ಸರ್ಕಸ್ ಏನುಗೊತ್ತಾ? ಇತ್ತೀಚೆಗೆ ಬಹಿರಂಗಗೊಂಡ ಒಳಗಿನ ಗುಟ್ಟು ನೋಡಿದ್ರೆ ಖಂಡಿತಾ ಶಾಖ್ ಆಗಬಹುದು.

ರಮ್ಯ ಅಲಿಯಾಸ್ ದಿವ್ಯಸ್ಪಂದನ ಸೋಷಿಯಲ್ ಮಿಡೀಯಾ ಜವಾದ್ದಾರಿ ಹೊತ್ತ ಮೇಲೆ ಸಾಕಷ್ಟು ಫೇಕ್ ಐಡಿಗಳು ಹುಟ್ಟಿಕೊಂಡಿದ್ದಾವೆ. ಅವುಗಳ ಕೆಲಸವೆಂದ್ರೆ
ರಾಹುಲ್ ಹಾಗೂ ಕಾಂಗ್ರೆಸ್ ಪಕ್ಷದ ಟ್ವೀಟ್‍ಗಳನ್ನು ರೀಟ್ವೀಟ್ ಮಾಡೋದಷ್ಟೇ.

ನಕಲಿ ಟ್ವಿಟರ್ ಖಾತೆ: ಟ್ವಿಟರ್‍ನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸುವುದು ತುಂಬಾ ಸುಲಭ. ಕಾಂಗ್ರೆಸಿಗರೂ ಕೂಡಾ ಇದೇ ಮಟ್ಟಕ್ಕೆ ಇಳಿದಿದ್ದಾರೆ. ಮೊದಲು ಟ್ವೀಟ್
ಮಾಡೋಡು, ಅದನ್ನು ಅವರೇ ಫೋಲೋ ಮಾಡುವುದು, ನಂತರ ಅವುಗಳನ್ನು ರಿಟ್ವೀಟ್ ಮಾಡುವುದಷ್ಟೇ ಅವುಗಳ ಕೆಲಸ. ಆದರೆ ಆ ರೀತಿ ಮಾಡುವವರ ಐಡಿಯ ಮಾಹಿತಿ ಮೊದಲೇ ಇಲ್ಲ. ಅವರಿಗಿರುವ ಆ ಐಡಿಗಳ ಫಾಲೋವರ್ಸ್ ನೋಡಿ. ಎರಡು ಅಥವಾ ಮೂರು ಅಷ್ಟೆ. ಇದೆಲ್ಲಾ ರಾಹುಲ್‍ನನ್ನು, ಕಾಂಗ್ರೆಸಿಗರನ್ನು ಸುಮ್ನೆ ಜನಪ್ರಿಯಗೊಳಿಸಲು ಹುಟ್ಟಿದ ನಕಲಿ ಪ್ರೊಫೈಲ್‍ಗಳು. “ಅಡ್ಡಕಸುಬಿಗೆ ಹುಟ್ಟಿದ ಪೆÇ್ರೀಪೈಲ್‍ಗಳು” ಎನ್ನಬಹುದು. ಇದೇ ರೀತಿ ನೂರಾರು ಫೇಕ್ ಅಕೌಂಟ್ ಕ್ರೀಯೇಟ್ ಮಾಡಿ ಟ್ರೆಂಡ್ ಮಾಡಿದ ಅಸಾಮಿಗಳ ಕರಾಮತ್‍ನಿಂದಾಗಿ ರಾಹುಲ್‍ಗೆ ಪುಕ್ಕಟೆ ಜನಪ್ರಿಯತೆ. ಈ ಎಲ್ಲಾ ಫೇಕ್ ಐಡಿಗಳು, ಫೇಕ್ ಐಡಿ ಹಾಗೂ ಕಾಂಗ್ರೆಸ್ ನಾಯಕರುಗಳನ್ನು ಪರಸ್ಪರ ಫಾಲೋ ಮಾಡಿವೆ. !!! ಆಗ ನಿಮಗೆ ಈ ಫೇಕ್‍ಗಳನ್ನು ಕಂಡುಹಿಡಿಯೋದು ಕಷ್ಟ .
`ರಾಹುಲ್ ಮೋದಿಗಿಂತ ಹೆಚ್ಚು ರಿಟ್ವೀಟ್ ಪಡೆಯುತ್ತಾ ಇದ್ದಾರೆ” ಎಂದು ಸುಳ್ಳು ಹಬ್ಬಿಸುವ ಮಾಧ್ಯಮಗಳು ಕಾಂಗ್ರೆಸಿಗರ ಅಡ್ಡಕಸುಬಿನ ಬಗ್ಗೆ ಶೋಧನೆಗಿಳಿಯದೆ
ಕಣ್ಣುಮುಚ್ಚಿ ನಂಬಿಬಿಟ್ಟವು. ಇಂಥಾ ಅನೇಕ ನಕಲಿ ಐಡಿಗಳನ್ನು ನಿಮ್ಮ ಮುಂದಿಟ್ಟಿದ್ದೇವೆ… ನೋಡಿ ಖುಷಿಪಡಿ ಹ್ಹಹ್ಹಹ್ಹ…

ನಕಲಿ ಟ್ವಿಟರ್ ಖಾತೆಗಳನ್ನು ನಿಭಾಯಿಸುವುದು: ಟ್ವಿಟರ್‍ನಲ್ಲಿ ನಕಲಿ ಪ್ರೊಫೈಲ್‍ಗಳನ್ನು ಸೃಷ್ಟಿಸುವುದು. ಇಂಥಾ ಸಾವಿರಾರು ನಕಲಿ ಖಾತೆಗಳಿವೆ. ಇವುಗಳ ಯೂಸರ್ ನೇಮ್ ಆಗಲೀ, ಪ್ರೊಫೈಲ್ ಪಿಕ್ಚರ್ ಆಗಲೀ ಯಾವುದೂ ಇಲ್ಲ..

ಆಯ್ದ ಟ್ವಿಟರ್ ಖಾತೆಗಳನ್ನು ಹ್ಯಾಂಡಲ್ ಮಾಡುವುದು: ಇವುಗಳ ಕೆಲಸ ಇಷ್ಟೆ. ರಾಹುಲ್ ಗಾಂಧಿ, ದಿವ್ಯ ಸ್ಪಂದನಾ, ಐಎನ್‍ಸಿ, ಕಾಂಗ್ರೆಸ್ ಪ್ರಮುಖರನ್ನು ಫೋಲೋ ಮಾಡುವುದು, ರಿಟ್ವೀಟ್ ಮಾಡುವುದು ಅಷ್ಟೆ. ಕೆಲವು ಖಾತೆಗಳ ವಿಳಾಸ ಕೂಡಾ ನಕಲಿ. ಇದಕ್ಕೆ ಸ್ಪಷ್ಟ ವಿಳಾಸವೂ ಇಲ್ಲ. ಟ್ವೀಟ್ ಮಾಡಿದ ತಕ್ಷಣ ರಿಟ್ವೀಟ್ ಮಾಡುವುದಷ್ಟೆ ಇವುಗಳ ಕೆಲಸ. ಒಂದಷ್ಟು ರಿಟ್ವೀಟ್ ಮಾಡಿ ಆಕರ್ಷಣೆ ಹುಟ್ಟುವಂತೆ ಮಾಡುವುದು ಇಲ್ಲಿನ ಕೆಲಸ.

ರಿಟ್ವೀಟ್ ಅಷ್ಟೆ ಇವುಗಳ ಕೆಲಸ: ಮೇಲೆ ತಿಳಿಸಿದ ಹೆಸರಿನವರನ್ನು ತಕ್ಷಣ ರಿಟ್ವೀಟ್ ಮಾಡುವುದಷ್ಟೇ ಇವರ ಕೆಲಸ. ಈ ಖಾತೆಗಳು ತಮ್ಮದೇ ಆದ ಟ್ವೀಟ್
ಮಾಡುವುದೂ ಇಲ್ಲ. ಇವರಿಗೆ ಫೋಲೋವರ್ಸ್ ಕೂಡಾ ಇಲ್ಲ. ರಾಹುಲ್‍ನಿಂದ, ಐಎನ್‍ಸಿನಿಂದ ಬಂದ ಟ್ವೀಟ್ ಬಂದ್ರೆ ಅವುಗಳನ್ನು ಪರೀಕ್ಷೆಯನ್ನೂ ಮಾಡದೆ ರಿಟ್ವೀಟ್ ಮಾಡಿ ಕೈತೊಳೆದುಕೊಂಡು ಬಿಡುತ್ತಾರೆ.

ಪ್ರೊಟೆಕ್ಟೆಡ್ ಖಾತೆಗಳಿಂದ ರಿಟ್ವೀಟ್: ರಾಹುಲ್‍ಗಾಂಧಿಯ ರಿಟ್ವೀಟ್‍ಗಳನ್ನು ಮಾಡುವವರ ಖಾತೆಗಳು ಪ್ರೊಟೆಕ್ಟೆಡ್ ಆಗಿದ್ದು, ಅವುಗಳ ವಿವರಣೆಗಳನ್ನು ತಿಳಿಯುವುದು ಸಾಧ್ಯವಿಲ್ಲ. ಆದರೆ ಅಂಥಾ ಖಾತೆದಾರರು ಅನುಮತಿಸಿದರಷ್ಟೆ ಸಾಧ್ಯ. ಈ ಖಾತೆಗಳು ಕೇವಲ 5ರಿಂದ ಆರು ಫೋಲೋವರ್ಸ್ ಮಾತ್ರ ಹೊಂದಿದೆ.

ಇದನ್ನೆಲ್ಲಾ ನೋಡುವಾಗ ರಿಟ್ವೀಟ್ ಮಾಡುವುದು ಒಂದು ಸಂಯೋಜಿತ ಕೆಲಸ ಎಂದು ಅರ್ಥಮಾಡಿಕೊಳ್ಳಬಹುದು. ಇದಲ್ಲೆ ಪಾವತಿ ರೂಪದ ಪ್ರಚಾರ ಎಂದು
ಸುಲಭವಾಗಿ ತಿಳಿಯಬಹುದು. ಇಂಥಾ ಪಾವತಿಸಿದ ಟ್ವಿಟರ್ ಪ್ರಚಾರದಿಂದ ಒಂದಷ್ಟು ನಕಲಿ ಖಾತೆಗಳನ್ನು ಸೃಷ್ಟಿಸಿ ಸುಮ್ಮನೆ ಜನಪ್ರಿಯಗೊಳಿಸಲು ಮಾಡಿದ ವಿನೂತ ಸರ್ಕಸ್ ಎಂದು ಸಾಬೀತಾಗಿದ್ದು, ಕಾಂಗ್ರೆಸಿಗರ ಪರಿಸ್ಥಿತಿ ನೋಡಿದರೆ ಅಯ್ಯೋ ಎನಿಸುತ್ತದೆ.

ಇಂದು ಹೆಚ್ಚಿನ ರಾಜಕಾರಣಿಗಳು ಪ್ರಚಾರಕ್ಕಾಗಿ ಟ್ವಿಟರ್‍ನಂಥಾ ಸೋಶಿಯಲ್ ಮೀಡಿಯಾಗಳನ್ನು ಬಳಕೆ ಮಾಡುತ್ತಾರೆ. ಆದರೆ ಈ ಕಾಂಗ್ರೆಸ್ ಮಾತ್ರ ಒಂದು ಹೆಜ್ಜೆ ಮುಂದೆಯೇ ಹೋಗಿ ನಕಲಿಗಳಿಂದ ಜನಪ್ರಿಯತೆ ಪಡೆಯಲು ಏನೆಲ್ಲಾ ಸರ್ಕಸ್ ಮಾಡಿದೆ. ಈ ಸರ್ಕಸ್ ಬೆಳಕಿಗೆ ಬರುತ್ತಿದ್ದಂತೆ ಕಾಂಗ್ರೆಸ್ ಇಂಗುತಿಂದ
ಮಂಗನಂತಾಗಿದೆ.

ಕೋಲು ಕೊಟ್ಟು ಹೊಡೆತ ತಿನ್ನುವುದೆಂದರೆ ಇದೇ ಇರಬೇಕು…. ಅಯ್ಯೋ ಅಯ್ಯೋ….

source:https://www.readoo.in/2017/10/the-truth-behind-rahul-gandhi-challenging-narendra-modi-on-twitter

-ಚೇಕಿತಾನ

Tags

Related Articles

Close