ಅಂಕಣ

ಕಳೆದ ಹತ್ತು ವರ್ಷದಿಂದ ಈ ಕುಟುಂಬ ದೀಪಾವಳಿಯನ್ನು ಆಚರಿಸಲಿಲ್ಲ! ಇದರ ಹಿಂದಿರುವ ಕಾರಣ ಗೊತ್ತಾದರೆ ನಿಮ್ಮ ಮನಕಲಕುವುದಂತೂ ಖಂಡಿತಾ..!

“I sent my #Sandesh2Soldiers . You could also do the same. Your wishes will certainly make our forces very happy.”

ಇದು ಸರಳವಾದ ಪದವಾದರೂ ಕೂಡ ಇಡೀ ದೇಶವನ್ನೇ ಪ್ರಚೋದಿಸುವ ಶಕ್ತಿಯನ್ನು ಹೊಂದಿತ್ತು ಈ ಸಂದೇಶ!! ಹೌದು… ಈ ಮೇಲಿರುವ ಅತ್ಯದ್ಬುತವಾದ ಸಂದೇಶವನ್ನು ಕಳುಹಿಸಿದ್ದು ಬೇರಾರು ಅಲ್ಲ ಭಾರತದ ಪ್ರಧಾನಿ ನರೇಂದ್ರ ಮೋದಿ!!

ಇನ್ನು ದೀಪಾವಳಿ ಹಬ್ಬವು ಭಾರತೀಯರ ಪ್ರಮುಖ ಆಚರಣೆಗಳಲ್ಲೊಂದಾಗಿದ್ದು, ವರ್ಣರಂಚಿತವಾದ ಮತ್ತು ಪ್ರಕಾಶಮಾನವಾದ ಹಬ್ಬವಾಗಿದೆ ಎನ್ನುವುದು ಎಲ್ಲರಿಗೂ ಗೊತ್ತೇ ಇದೆ!! ಆದರೆ ಈ ಹಬ್ಬದ ಸಮಯದಲ್ಲಿ ಆ ಒಂದು ಮನೆ ಮಾತ್ರ ಹಬ್ಬದ ವಾತಾವರಣವಿಲ್ಲದೇ, ನಿಶಬ್ಧದಿಂದಲೇ ಇದ್ದ ಮನೆಯಾಗಿತ್ತು. ಅಷ್ಟೇ ಅಲ್ಲದೇ, ಈ ಸಂದರ್ಭದಲ್ಲಿ ಈ ಮನೆ ಕತ್ತಲು ತುಂಬಿದ ಮನೆಯಾಗಿತ್ತು!!

ಈ ಮನೆಯ ಒಡತಿಯೇ ಆಶಾ ಅಗರ್ವಾಲ್!! ಹರಿದ್ವಾರದಲ್ಲಿ ವಾಸಿಸುತ್ತಿದ್ದ ಒರ್ವ ವೃದ್ಧ ಮಹಿಳೆಯಾಗಿದ್ದ ಈಕೆ ದಶಕಗಳಿಂದಲೂ ಆಕೆಯ ಮನೆಯಲ್ಲಿ ದೀಪಾವಳಿಯ ದೀಪಗಳು ಬೆಳಗುತ್ತಿರಲಿಲ್ಲ. ಯಾಕೆಂದರೆ…… ಹತ್ತು ವರ್ಷಗಳ ಹಿಂದೆ ದೀಪಾವಳಿಯ ಕೆಲ ದಿನಗಳ ನಂತರ ಸಂಭವಿಸಿದ ಅಪಘಾತದಲ್ಲಿ ಆಕೆಯ ಚಿಕ್ಕ ಮಗನಾದ ಮೇಜರ್ ಶುಭಾಂ ಅಗರ್ವಾಲ್ ನನ್ನು ಕಳೆದುಕೊಂಡಿದ್ದಳು!! ಅಂತಹ ದುರಂತ ಘಟನೆ ನಡೆದದ್ದು 2005ರ ನವೆಂಬರ್ 11ರಂದು!! ಅಂದಿನಿಂದ ಇವರ ಮನೆಯಲ್ಲಿ ದೀಪಾವಳಿ ದೀಪಗಳು ಬೆಳಗಿಯೇ ಇಲ್ಲ!! ಆದರೆ, ಈ ಬಾರಿ ಆಕೆಯ ಮನೆಯಲ್ಲಿ ದೀಪಾವಳಿಯ ಬೆಳಕನ್ನು ಮರಳಿ ತನ್ನಿ ಎಂದು ಪ್ರಧಾನಿ ನರೇಂದ್ರ ಮೋದಿಯವರು, ಸೈನಿಕರಲ್ಲಿ ಈ ಸಂದೇಶದ ಮೂಲಕ ಮನವಿಯನ್ನು ಮಾಡಿದ್ದರು!!

ಮೇಜರ್ ಶುಭಾಂ ಅಗರ್ವಾಲ್ ಅವರು ಜೈಪುರ ಸಮೀಪದ ಹೆದ್ದಾರಿ ರಸ್ತೆಯಲ್ಲಿ ಅಪಘಾತಕ್ಕೀಡಾಗಿ ಮೃತಪಟ್ಟಾಗ ಆಗಿನ್ನು ಅವರಿಗೆ 28 ವರ್ಷ ವಯಸ್ಸಾಗಿದ್ದರೆ ಅವರ ಹೆಂಡತಿಗೆ ಕೇವಲ 27 ವರ್ಷ ವಯಸ್ಸು!! ಮದುವೆಯಾಗಿ ಕೇವಲ ಎರಡು ವರ್ಷವಾಗಿದ್ದು, ಈ ಅಪಘಾತದ ಸುದ್ದಿ ಅವರ ಮನೆಯನ್ನು ತಲುಪಿದಾಗ ಅದನ್ನು ನಂಬಲು ಅವರಿಂದ ಸಾಧ್ಯವಾಗಿರಲಿಲ್ಲ!! ಆ ಆಘಾತವು ಬಹಳ ದುಃಖಕರವಾಗಿದ್ದು, ಅವರ ಈಡೀ ಜೀವನವನ್ನೇ ನಾಶಮಾಡಿಬಿಟ್ಟಿತ್ತು!!

ಹೌದು… ಶುಭಾಂ ಅವರ ತಂದೆ ಡಾ. ಕೌಶಲ್ ಅಗರ್ವಾಲ್ ಹರಿದ್ವಾರದ ಗುರುಕುಲ್ ಕಾಂಗ್ರಿ ವಿಶ್ವವಿದ್ಯಾನಿಲಯದಲ್ಲಿನ ರಸಾಯನಶಾಸ್ತ್ರ ವಿಭಾಗದ ಡೀನ್ ಆಗಿದ್ದರು. ಆದರೆ ತನ್ನ ಚಿಕ್ಕ ಮಗ ಮರಣ ಹೊಂದಿದ ಕಾರಣ ಅದೇ ನೋವಿನಿಂದ ಎರಡು ವರ್ಷಗಳಲ್ಲಿಯೇ ಅವರು ನಿಧನರಾದರು!! ಶುಭಾಂನ ಸಹೋದರಿ ನೇಹಾ ಲಂಡನ್ ನಲ್ಲಿ ನೆಲೆಸಿದ್ದು, ಆಕೆಯ ಪತಿ ಸಾಫ್ಟ್ ವೇರ್ ವೃತ್ತಿಪರರಾಗಿದ್ದರು. ಆದರೆ ಆಶಾ ಅಗರ್ವಾಲ್ ಹರಿದ್ವಾರದ ಕಂಖಾಲ್ ನಲ್ಲಿ ಏಕಾಂಗಿಯಾಗಿಯೇ ವಾಸಿಸುತ್ತಿದ್ದರು. ಅಷ್ಟೇ ಅಲ್ಲದೇ, ಆಶಾ ಅವರಿಗೆ ದೀಪಾವಳಿ ಸಂದರ್ಭದಲ್ಲಿ ಅವರ ಮನೆಯಲ್ಲಿ ದೀಪಗಳನ್ನು ಹಚ್ಚಿ ಮನೆತುಂಬಾ ದೀಪಗಳನ್ನು ಅಲಂಕರಿಸುವ ಯಾವುದೇ ಆಸಕ್ತಿಯೂ ಅವರಿಗಿರಲಿಲ್ಲ!!

ಆದರೆ ಈ ದೀಪಾವಳಿಯೂ ಅಗರ್ವಾಲ್ ಮನೆಗೆ ಅಸಾಮಾನ್ಯವಾಗಿತ್ತು!! ಹೌದು… ನರಕ ಚತುರ್ದಶಿಯ ದಿನ ಆಕೆಯ ಮನೆಬಾಗಿಲಿನ ಮುಂದೆ ಆಕೆಗೊಂದು ಆಶ್ವರ್ಯ ಕಾದಿತ್ತು!! ಆಕೆಯ ಆಪ್ತ ಸ್ನೇಹಿತರ ಮಗ ಸುಮಿತ್, ಆತನ ಸ್ನೇಹಿತರನ್ನು ಕರೆತಂದು “ಚೋಟಿ ದಿವಾಲಿ” ಅಂದರೆ ಸಣ್ಣದಾಗಿ ದೀಪಾವಳಿಯನ್ನು ಆ ಮನೆಗೆ ತಂದರು!! ಆ ಸಂದರ್ಭದಲ್ಲಿ ಮೇಜರ್ ಶುಭಾಂ ಅವರ ಭಾವಚಿತ್ರದ ಮುಂದೆ ದೀಪವನ್ನಿಡಲು ಇವರೆಲ್ಲಾ ವಿನಂತಿಸಿದರು!! ಅಷ್ಟೇ ಅಲ್ಲದೇ ತಮ್ಮೊಂದಿಗೆ ದೀಪಾವಳಿಯನ್ನು ಆಚರಿಸಲೂ ಕೂಡ ಮನವೊಲಿಸಿದರು!! ದುಃಖದಿಂದ ತುಂಬಿಹೋಗಿದ್ದ ಆಶಾ ಅವರ ಕಣ್ಣುಗಳು ಒದ್ದೆಯಾದ್ದವು!! ಈಕೆಯ ದುಃಖವನ್ನು ದೂರಮಾಡಲು ಪ್ರಧಾನಿ ಮೋದಿಯವರು ಸೈನಿಕರಿಗೆ ಕಳುಹಿಸಿದ ಈ ಸಂದೇಶದಿಂದ ಇಷ್ಟು ವರ್ಷಗಳ ನಂತರ ದೀಪಾವಳಿಯನ್ನು ಆಚರಿಸಲು ಸಾಧ್ಯವಾಯಿತು!!

img-20161101-wa0024

ಈ ಒಂದು ಕ್ಷಣಕ್ಕಾಗಿ ಆಶಾ ಅಗರ್ವಾಲ್ ಅವರು ಮೋದಿಯವರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದು, ಪ್ರಧಾನಿ ಹುದ್ದೆಯನ್ನು ಹೊಂದಿದ್ದ ಯಾವೊಬ್ಬ ಪ್ರಧಾನಿಯೂ ಹುತಾತ್ಮರಾದ ಸೈನಿಕರನ್ನು ಗೌರವಿಸಿರಲಿಲ್ಲ!! ಆದರೆ ರಿಮೋಟ್ ಪ್ರದೇಶಗಳಲ್ಲಿರುವ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದ ದೇಶದ ಮೊದಲ ಪ್ರಧಾನಿಯಾಗಿದ್ದಾರೆ ನರೇಂದ್ರ ಮೋದಿ!! ಸೈನ್ಯವನ್ನು ಗೌರವಿಸುವ ಅಥವಾ ಸೈನ್ಯವನ್ನು ಶ್ಲಾಘಿಸುವ ಇವರ ಸಂದೇಶವು ಸ್ಪೂರ್ತಿದಾಯಕವಾಗಿದ್ದಲ್ಲದೇ, ಇದು ಹೆಮ್ಮೆಯ ವಿಚಾರವಾಗಿದೆ!! ಸುಮಿತ್ ಅವರಂತೆ ದೀಪಾವಳಿಯ ಮುನ್ನದಿನ ಆಶಾ ಅಗರ್ವಾಲ್ ಅವರ ಬಾಗಿಲಿಗೆ ಬಂದು ದೀಪಾವಳಿಯನ್ನು ಆಚರಿಸುವ ಉದಾತ್ತವಾದ ಹೆಜ್ಜೆಯನ್ನು ಹಿಂದೆಂದೂ ಯಾರೂ ಮಾಡಿಲ್ಲ. ಆದರೆ ಇದೆಲ್ಲದರ ಶ್ಲಾಘನೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ!!

ಆಶಾ ಅಗರ್ವಾಲ್ ತನ್ನ ಮಗನನ್ನು ನೆನಪಿಸಿಕೊಳ್ಳುವಾಗ ಅವರ ಬಗ್ಗೆ ತುಂಬಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಹೌದು… ಶುಭಾಂ ಅವರು, ಗುರುಕುಲ್ ಕಾಂಗ್ರಿ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪಡೆದಿದ್ದು, ದೇಶಭಕ್ತಿಯ ಪ್ರೇಮವನ್ನು ಮೈಗೂಡಿಸಿಕೊಂಡು ಸೇನೆಗೆ ಸೇರಲು ಪ್ರೇರಣೆಪಡೆದಾಗ ಎಂ.ಸಿ.ಎ ವ್ಯಾಸಂಗವನ್ನು ಮಾಡುತ್ತಿದ್ದರು!! ಇನ್ನು ಕಂಬೈನ್ಸ್ ಸರ್ವೀಸ್ಸ್ ಎಕ್ಸಾಮಿನೇಷನ್ ನಲ್ಲಿ ಮೆರಿಟ್ ಸೀಟನ್ನು ಪಡೆದುಕೊಂಡಿದ್ದ ಇವರು ಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ ಅಗ್ರಗಣ್ಯ ಶ್ರೇಯಾಂಕವನ್ನು ಪಡೆದುಕೊಂಡಿದ್ದಾರೆ. ಇನ್ನು ಏರ್ ಫೋರ್ಸ್ ವಿಭಾಗದಲ್ಲಿ ಮೊದಲ ಅಗ್ರಗಣ್ಯ ಶ್ರೇಯಾಂಕವನ್ನು ಪಡೆದುಕೊಂಡ ಮೇಧಾವಿ!! ಆದರೆ ಪೈಲಟ್ ಕೆಲಸವನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದ್ದ ಇವರು, ತನ್ನ ತಾಯಿ ಈ ಕೆಲಸದಿಂದ ಭಯಪಡುತ್ತಾರೆ ಎನ್ನುವ ಕಾರಣಕ್ಕಾಗಿ ತನ್ನ ತಾಯಿಯ ಇಚ್ಛೆಯಂತೆ ಅವರು ಸೈನ್ಯವನ್ನು ಆಯ್ಕೆ ಮಾಡಿದ್ದರು!!ಮೊದಲು ರಾಜೌರಿ, ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿ ಹಲವಾರು ವಿರೋಧಿ ಭಯೋತ್ಪಾದನಾ ನಿಯೋಗಗಳನ್ನು ನಡೆಸಿದ್ದಾರೆ!! ಅಷ್ಟೇ ಅಲ್ಲದೇ, ಭಾರತೀಯ ಸೇನೆಯ ಅತ್ಯಂತ ಹಿರಿಯ ರೈಫಲ್ ರೆಜಿಮೆಂಟ್ ನ ಐದು ರಜಪೂತಾ ರೈಫಲ್ ಗಳಲ್ಲಿ ಮೇಜರ್ ಆಗಿದ್ದರು!! ಇನ್ನು 2005 ರಲ್ಲಿ ಅವರು ರಾಜಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮನೆಗೆ ಬಂದಿದ್ದ ಸಂದರ್ಭದಲ್ಲಿ ಅಪಘಾತದಲ್ಲಿ ಮೃತಪಟ್ಟರು.

14922235_1241167579276262_1078183694150314661_n

ಆಶಾ ಅಗರ್ವಾಲ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿಯನ್ನು ಮಾಡಿದ್ದು, ಹುತಾತ್ಮರ ಕುಟುಂಬಗಳಿಗೆ ಪಿಂಚಣಿ ಮತ್ತು ನಿಧಿ ಮೊತ್ತವನ್ನು ಒದಗಿಸಲು ತ್ವರಿತ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಮಾಡಿದ್ದಾರೆ. ವಿಳಂಬವಾದರೆ ಇದು ಕುಟುಂಬದವರ ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾಗಿ 5,500 ಕೋಟಿ ರೂಪಾಯಿ ಮೊತ್ತದ ಮೊದಲ ಕಂತು ದೊರೆತ ನಂತರ, ಮೋದಿ ಸರಕಾರವು ಒಆರ್‍ಒಪಿ (ಒಂದು ಶ್ರೇಣಿಯ ಪಿಂಚಣಿ) ಯೋಜನೆಯನ್ನು ಕಾರ್ಯಗತಗೊಳಿಸಿದ ಮೊದಲ ಸರಕಾರವಾಗಿದೆ. ಹಾಗಾಗಿ ನಮ್ಮ ದೇಶವು ಸುರಕ್ಷಿತರ ಕೈಯಲ್ಲಿದ್ದರೆ, ಇವೆಲ್ಲವೂ ಸಾಧ್ಯವಾಗಬಲ್ಲದು ಎನ್ನುವುದಕ್ಕೆ ಸಾಕ್ಷಿಯೇ…. ನರೇಂದ್ರ ಮೋದಿ!!

ಜೈ ಜವಾನ್! ಜೈ ಹಿಂದ್!

source: http://postcard.news/heart-touching-story-know-family-not-celebrated-deepawali-10-years/
-ಅಲೋಖಾ

Tags

Related Articles

Close