ಪ್ರಚಲಿತರಾಜ್ಯ

ಕಳೆದ ಹದಿನೈದು ದಿವಸಗಳಲ್ಲಿ ಕರ್ನಾಟಕ ರಾಜ್ಯದ ದಿಕ್ಕು ಬದಲಿಸಿದ ಮಂಗಳೂರು ಚಲೋ!!! ಬಿಜೆಪಿ ಮತ್ತೆ ಅಧಿಕಾರಕ್ಕೆ ; ಸಮೀಕ್ಷೆ!

ರಾಜ್ಯಸರಕಾರದಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಜೊತೆಗೆ ಸಾಕಷ್ಟು ಕೊಲೆ ಪಾತಕಗಳು ನಡೆಯುತ್ತಿದ್ದು ಈ ಬಗ್ಗೆ ಯಾವುದೇ ರೀತಿ ಸೂಕ್ತ ಕ್ರಮ ಕೈಗೊಳ್ಳದ
ರಾಜ್ಯಸರಕಾರ ಬೇಜವ್ದಾರಿತನದಿಂದ ಈಗಾಗಲೇ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದೆ. ಯಾಕಂದರೆ ಈಗಾಗಲೇ ನಡೆದ ಭ್ರಷ್ಟಾಚಾರ ಪ್ರಕರಣಗಳಿಂದ ಹಿಡಿದು, ಕೊಲೆ ಸುಲಿಗೆ ವಂಚನೆ ದಿನೇ ದಿನೇ ಹೆಚ್ಚುತ್ತಿದಲ್ಲದೇ ಕೊಲೆಗಟುಕರಿಗೆ ಆಶ್ರಯವನ್ನು ನೀಡುತ್ತಿದೆ ನಮ್ಮ ರಾಜ್ಯಸರ್ಕಾರದ ರೂವಾರಿಗಳು. ಅಷ್ಟೇ ಅಲ್ಲದೇ ಮಕ್ಕಳ ಅನ್ನವನ್ನು ಕಸಿದು ಈಗಾಗಲೇ ಬಹುಮಟ್ಟದ ಚರ್ಚೆಗೆ ಕಾರಣವಾದ ಸರಕಾರ ತನ್ನ ಅಧಿಕಾರ ಗದ್ದುಗೆಯನ್ನು ಕಳೆದುಕೊಳ್ಳುವ ನಿರೀಕ್ಷೆಯಲ್ಲಿದೆ.

ಹೌದು …ಕ್ರಿಯೇಟಿವ್ ಸೆಂಟರ್ ಫಾರ್ ಪೊಲಿಟಿಕಲ್ ಅಂಡ್ ಸೋಷಿಯಲ್ ಸ್ಟಡೀಸ್ ನಡೆಸಿದ ಚುನಾವಣೆಯ ಪೂರ್ವಸಮೀಕ್ಷೆ ವರದಿ ಮಾಡಿರುವ ಪ್ರಕಾರ ರಾಜ್ಯ ಸರಕಾರದ ಗದ್ದುಗೆಯಿಂದ ಇಳಿಯುವ ಎಲ್ಲಾ ಸಂಭವಗಳು ಇವೆ. ಅಷ್ಟೇ ಅಲ್ಲದೇ ರಾಜ್ಯದಲ್ಲಿ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಈ ವರದಿ ಹೇಳಿದೆ.

ಕಳೆದ ಜುಲೈನಲ್ಲಿ ರಾಜ್ಯದಲ್ಲಿ ಸಮೀಕ್ಷೆ ನಡೆಸಿರುವ ಕಾಪ್ಸ್ ವರದಿ ಸಿದ್ದಪಡಿಸಿದ್ದು, C4 ಸಮೀಕ್ಷಾ ವರದಿಗೆ ವ್ಯತಿರಿಕ್ತವಾಗಿ ಫಲಿತಾಂಶ ಬರಲಿದೆ ಎಂದು
ವರದಿ ನೀಡಲಾಗಿದೆ ಎನ್ನಲಾಗಿದೆ. ಬಿಜೆಪಿ ಶೇ. 51 ರಷ್ಟು ಮತಗಳಿಸಿಕೊಂಡು 113 ಸ್ಥಾನಗಳೊಂದಿಗೆ ಸರಳ ಬಹುಮತ ಪಡೆಯುತ್ತದೆ ಎಂದು ವರದಿ ನೀಡಿದೆ.
ಇನ್ನು ಆಡಳಿತ ಕಾಂಗ್ರೆಸ್ ಶೇ. 38 ರಷ್ಟು ಮತಗಳಿಕೆಯೊಂದಿಗೆ 86 ಸ್ಥಾನಗಳು ಹಾಗೂ ಪ್ರಾದೇಶಿಕ ಪಕ್ಷ ಜೆಡಿಎಸ್ ಕೇವಲ 11 ರಷ್ಟು ಮತಗಳೊಂದಿಗೆ 25 ಸ್ಥಾನ ಪಡೆದು ಮತ್ತೆ ಮೂರನೇ ಸ್ಥಾನವನ್ನೇ ಪಡೆದುಕೊಳ್ಳಲಿದೆ ಎಂದು ಸಮೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.

“ಮಂಗಳೂರು ಚಲೋ”!!

ರಾಜ್ಯದಲ್ಲಿನಡೆಯುತ್ತಿರುವ ಪೈಶಾಚಿಕ ಕೃತ್ಯಗಳಿಗೆ ನೇರವಾಗಿ ರಾಜ್ಯ ಸರಕಾರ ಹೊಣೆಯಾಗಿದೆ, ಅಷ್ಟೇ ಅಲ್ಲದೇ ಈಗಾಗಲೇ ರಾಜ್ಯ ಸರ್ಕಾರದ ಭ್ರಷ್ಟಾಚಾರ ಹಾಗೂ ಆರ್.ಎಸ್.ಎಸ್ ಕಾರ್ಯಕರ್ತರ ಹತ್ಯೆ ಪ್ರಕರಣದಲ್ಲಿ ರಮಾನಾಥ ರೈ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ “ಮಂಗಳೂರು ಚಲೋ” ಜೊತೆಗೆ, ಐದು ಪ್ರಮುಖ ನಗರಗಳಿಂದ ರಥಯಾತ್ರೆ ಹಮ್ಮಿಕೊಂಡಿದೆ. ಸೆಪ್ಟೆಂಬರ್ 5 ರಂದು ಏಕಕಾಲದಲ್ಲಿ ಬೆಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ ಹಾಗೂ ಚಿಕ್ಕಮಗಳೂರಿನಿಂದ ರಥಯಾತ್ರೆ ನಡೆಯಲಿದೆ. ಅಷ್ಟೇ ಅಲ್ಲದೇ, ಬಿಜೆಪಿ ಯುವಮೋರ್ಚಾದ ಸಾರಥ್ಯದಲ್ಲಿ ನಡೆದ ರಥಯಾತ್ರೆಯಲ್ಲಿ ಮಂಗಳೂರಿನಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶಕ್ಕೆ ಅಡ್ಡಿಯನ್ನು ಉಂಡುಮಾಡಿತ್ತು ರಾಜ್ಯಸರ್ಕಾರ!!

ಹಿಂದೂತ್ವವಾದಿ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಖಂಡಿಸಲು, ತನಿಖೆಯನ್ನು ಸಿಬಿಐಗೆ ವಹಿಸಲು ಆಗ್ರಹಿಸಿ ಮತ್ತು ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳನ್ನು
ನಿಷೇಧಿಸಲು ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ಬೈಕ್ ರ್ಯಾಲಿ ಮತ್ತು ಸಮಾವೇಶ ನಡೆಸಲು ಉದ್ದೇಶಿಸಿತ್ತಾದರೂ, ಕಾಂಗ್ರೆಸ್ಸಿನ ಕುತಂತ್ರದಿಂದ ಮಂಗಳೂರು ಚಲೋ ಬೈಕ್ ರ್ಯಾಲಿಗೆ ಪೋಲಿಸರು ಅನುಮತಿ ನಿರಾಕರಿಸಿದ್ದಾರೆ. ಇದಕ್ಕೆ ಕ್ಯಾರೇ ಅನ್ನದ ಯುವಮೋರ್ಚಾ ರ್ಯಾಲಿಯನ್ನು ಯಶಸ್ವಿಯಾಗಿ ನಡೆಸಿದೆ.

ಮೈಸೂರು, ಮಡಿಕೇರಿ, ಸುಳ್ಯ, ಬೆಂಗಳೂರು, ಹಾಸನ, ಸಕಲೇಶಪುರ, ನೆಲ್ಯಾಡಿ, ಉಪ್ಪಿನಂಗಡಿ, ಚಿಕ್ಕಮಗಳೂರು, ಮೂಡಿಗೆರೆ, ಚಾರ್ಮಾಡಿ, ಉಜಿರೆ, ಬೆಳ್ತಂಗಡಿ, ಶಿವಮೊಗ್ಗ, ಆಗುಂಬೆ, ಕಾರ್ಕಳ, ಹುಬ್ಬಳ್ಳಿ, ಮುರ್ಡೇಶ್ವರ, ಬ್ರಹ್ಮಾವರದಿಂದ ಬೈಕ್ ರ್ಯಾಲಿ ಹೊರಟು, ದ.ಕ ಜಿಲ್ಲೆಯ ವಿವಿಧ ಕಡೆಗಳಿಗೆ ಭೇಟಿ ನೀಡಿ ನಗರದ ನೆಹರೂ ಮೈದಾನದಲ್ಲಿ ಇಂದು ಸಮಾಪ್ತಿಗೊಂಡಿದೆ. ಅಷ್ಟೇ ಅಲ್ಲದೇ ಬೃಹತ್ ಸಭೆಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಯುವಮೋರ್ಚಾ ರಾಜ್ಯಾಧ್ಯಕ್ಷ, ಸಂಸದ ಪ್ರತಾಪ ಸಿಂಹ, ದ.ಕ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಪಕ್ಷದ ನೇತಾರರು ಭಾಗವಹಿಸಿದ್ದು ರ್ಯಾಲಿ ಗೆ ಮತ್ತಷ್ಟು ಮೆರುಗು ನೀಡಿದ್ದಾರೆ.

ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಪ್ರಕರಣದಲ್ಲಿ ರಮಾನಾಥ ರೈ ಕುಮ್ಮಕ್ಕಿನಿಂದಲೇ ನಡೆದಿದೆ
ಎಂಬುದು ಬಿಜೆಪಿ ಆರೋಪವಾಗಿತ್ತು. ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಟ್ಟುಕೊಂಡು ಕೆಲವು ಮೂಲಭೂತ ಸಂಘಟನೆಗಳು ಹಲ್ಲೆ ನಡೆಸುತ್ತಿದ್ದು, ತಕ್ಷಣವೇ ಈ ಸಂಘಟನೆಗಳನ್ನು ನಿಷೇಧ ಮಾಡುವುದು ಹಾಗೂ ರೈ ರಾಜೀನಾಮೆ ಕೊಡಬೇಕೆಂಬುದು ಬಿಜೆಪಿ ಒತ್ತಾಯವಾಗಿದೆ.

ಸಿದ್ದರಾಮಯ್ಯ ಸರಕಾರದಲ್ಲಿ ಆದ ಕೊಲೆ, ಸುಲಿಗೆ ಪಾತಾಕಗಳೇ ತುಂಬಿ ತುಳುಕಾಡುತ್ತಿದ್ದು, ಭ್ರಷ್ಟಸರ್ಕಾರವನ್ನು ತನ್ನ ಹೆಗಲ ಮೇಲೆ ಹೊತ್ತಿರುವುದರಿಂದ ರಾಜ್ಯದಲ್ಲಿ ಸರಳ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಅಷ್ಟೇ ಅಲ್ಲದೇ ಬಿಜೆಪಿ ಶೇ. 51 ರಷ್ಟು ಮತಗಳಿಸಿಕೊಂಡು 113 ಸ್ಥಾನಗಳೊಂದಿಗೆ ಸರಳ ಬಹುಮತ ಪಡೆಯುತ್ತದೆ ಎಂದು ವರದಿ ನೀಡಿದೆ.

ಒಟ್ಟಿನಲ್ಲಿ, ಕ್ರಿಯೇಟಿವ್ ಸೆಂಟರ್ ಫಾರ್ ಪೊಲಿಟಿಕಲ್ ಅಂಡ್ ಸೋಷಿಯಲ್ ಸ್ಟಡೀಸ್ ನಡೆಸಿದ ಚುನಾವನೆ ಪೂರ್ವ ಸಮೀಕ್ಷೆ ವರದಿಯ ಪ್ರಕಾರ ಬಿಜೆಪಿ
ಬಹುಮತದಿಂದ ಚುನಾವಣೆಯನ್ನು ಗೆದ್ದರೆ ರಾಮರಾಜ್ಯದ ಕನಸನ್ನು ನನಸು ಮಾಡುವುದಂತೂ ಗ್ಯಾರೆಂಟಿ!!! ಇದೀಗ ರಾಜ್ಯಸರ್ಕಾರದ ಸಿದ್ದರಾಮಯ್ಯ ಸರಕಾರ ನಡೆಸುತ್ತಿರುವ ಅನ್ಯಾಯ ಅಕ್ರಮಗಳಿಗೆ ಶೀಘ್ರವೇ ಬ್ರೇಕ್ ಬೀಳಲಿದಿಯ ಅನ್ನೋದನ್ನು ಸದ್ಯದಲ್ಲಿ ಕಾದುನೋಡಬೇಕಾಗಿದೆ!!

Source : Daily hunt

– ಅಲೋಖಾ

Tags

Related Articles

Close