ಗಾಂಧಿಯ ಹೆಸರಲ್ಲಿ ದೇಶದಲ್ಲಿ ಆಳ್ವಿಕೆ ನಡೆಸಿ ನೂರಾರು ಹಗರಣಗಳನ್ನು ಮಾಡಿಕೊಂಡು ಹಲವು ಯೋಜನೆಗಳ ಹಣವನ್ನು ನುಂಗಿ ನೀರು ಕುಡಿದ ಕಾಂಗ್ರೆಸ್
ಸರಕಾರದ ಒಂದೊಂದೇ ಅನಾಚಾರ ಬಹಿರಂಗಗೊಳ್ಳುತ್ತಲೇ ಇದೆ. ಜನರು ಕಣ್ಣುಮುಚ್ಚಿ ಕಾಂಗ್ರೆಸ್‍ಗೆ ಮತ ಹಾಕುವ ಕಾಲ ಎಂದೋ ಹೋಗಿದೆ. ಆದರೂ ಈ
ಕಾಂಗ್ರೆಸಿಗರು ಮುಗ್ಧರನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸುತ್ತಾ ಬರುತ್ತಿದ್ದರು. ಆದರೆ ಇದು ಸಾಧ್ಯವಾಗುವುದಿಲ್ಲ ಎಂದು ತಿಳಿದಾಗ ಜನರಿಗೆ ಧಮ್ಕಿ ಹಾಕಿ
ಬ್ಲ್ಯಾಕ್‍ಮೇಲ್ ಮಾಡುವುದು ಇಲ್ಲವಾದರೆ ಅವರನ್ನು ಬಂಧಿಸಿ ಜೈಲಿಗಟ್ಟುವುದು. ಕಾಂಗ್ರೆಸಿಗರೇ ಇಂದು ನೀವು ಕೊಪ್ಪಳದಲ್ಲಿ ಮಾಡಿದ ಕೃತ್ಯವನ್ನು ಸ್ವತಃ ದೇವರೂ ಕ್ಷಮಿಸಲಾರ….
ಜನರನ್ನು ಒಟ್ಟು ಮಾಡಲು ಆಗದಿದ್ದರೆ ನೀವು ಯಾವ ಪುರುಷಾರ್ಥಕ್ಕಾಗಿ ಸಮಾವೇಶ ಮಾಡ್ತೀರಿ…? ನಿಮ್ಮ ಹಣೆಬರಹವನ್ನು ಚೆನ್ನಾಗಿ ಅರ್ಥೈಸಿದ ಜನರು ನಿಮ್ಮ ಸಮಾವೇಶಕ್ಕೆ ಯಾಕಾಗಿ ಬರ್ತಾರೆ ಮಾರಾಯ್ರೆ… ಕೊಪ್ಪಳದಲ್ಲಿ ಸರಕಾರದ ಯೋಜನೆಗಳ ಫಲಾನುಭವಿಗಳ ಸಮಾವೇಶ ನಡೆಸಲು ಜನರು ಬರುವುದಿಲ್ಲ ಎಂದು ನೀವು ಇಷ್ಟೊಂದು ನೀಚ ಮಟ್ಟಕ್ಕೆ ಬರಬಾರದಿತ್ತು. ಥೂ ನಿಮ್ಮ ಜನ್ಮಕ್ಕಿಷ್ಟು..
ಸಮಾವೇಶಕ್ಕಾಗಿ ನೂರಾರು ಬಸ್‍ಗಳನ್ನು ಕಳುಹಿಸಿದರೂ ಜನ ಬರುದಿಲ್ಲವೆಂದು ಧಮ್ಕಿ ಹಾಕುವುದು, ಬ್ಲ್ಯಾಕ್‍ಮೇಲ್ ಮಾಡುವುದು ಮಾಡುವುದೆಂದರೆ ಕಾಂಗ್ರೆಸ್ ಪಕ್ಷದವರು ಎಷ್ಟು ನೈತಿಕ ಅಧಃಪತನಕ್ಕಿಳಿದಿದ್ದಾರೆ ಎಂದು ಗೊತ್ತಾಗುತ್ತದೆ. ಇಂದು ಕೊಪ್ಪಳದಲ್ಲಿ ಫಲಾನುಭವಿಗಳ ಸಮಾವೇಶ ನಡೆಸಲು ಜನರನ್ನು ಸೇರಿಸಲು ಕಸರತ್ತು ನಡೆಸುವ ಕೈ ಮುಖಂಡರು ಸ್ವತಃ ಫಲಾನುಭವಿಗಳಿಗೇ ಬೆದರಿಕೆ ಹಾಕಿದ್ದಾರೆ.
ಸಮಾವೇಷಕ್ಕೆ ಬಾರದೆ ಇದ್ದರೆ ರೇಷನ್ ಅನ್ನೇ ಕಟ್ ಮಾಡ್ತಾರಂತೆ…. ತನ್ನ ಕಿಸೆಯಿಂದ ತೆಗೆದುಕೊಟ್ಟಂತೆ ಲಜ್ಜೆಗೆಟ್ಟು ಈ ರೀತಿ ನುಡಿಯುವ ಕೈ ಮುಖಂಡರ
ಬುದ್ಧಿಗೇಡಿ ವರ್ತನೆಯಿಂದ ಇಂದು ದೇಶಾದ್ಯಂತ ಮುಖಭಂಗಕ್ಕೀಡಾಗಿದೆ. ಜನರನ್ನು ಬ್ಲ್ಯಾಕ್‍ಮೇಲ್ ಮಾಡಿಕೊಂಡು ಜನರನ್ನು ಒಟ್ಟು ಸೇರಿಸುವ ಕಾಂಗ್ರೆಸ್‍ನ ನೈಜ ಮುಖವಾಡ ಕೊನೆಗೂ ಬಯಲಾಗಿದೆ. ಜನರನ್ನು ಒಟ್ಟು ಸೇರಿಸಲು ವಾಮ ಮಾರ್ಗ ಹಿಡಿದಿರುವ ಕಾಂಗ್ರೆಸ್ ಜನರು ಬಾರದಿದ್ದರೆ ರೇಷನ್ ಕಟ್ ಮಾಡಿಸ್ತೇವೆ ಎಂದು ಬೆದರಿಸಿದರೆ ಜನರು ಬರುತ್ತಾರೆಂದು ನಂಬಿದರೆ ಅದಕ್ಕಿಂತ ದೊಡ್ಡ ಮೂರ್ಖತನ ಬೇರೊಂದಿಲ್ಲ. ಯಾಕೆಂದರೆ ಜನರು ಕಾಂಗ್ರೆಸ್ ಅನ್ನು ಕಣ್ಣುಮುಚ್ಚಿ ನಂಬುವ ಕಾಲ ಎಂದೋ ಹೋಗಿದೆ.
ಬಡ ಮಹಿಳೆಯನ್ನು ಬಂಧಿಸುವ ನಿಮ್ಮನ್ನು ಸಿಎಂ ಎಂದು ಯಾವ ಬಾಯಿಯಿಂದ ಅನ್ನಲಿ ಸ್ವಾಮಿ?
ಸಿದ್ದರಾಮಯ್ಯನವರೇ ಸಿಎಂ ಎಂಬ ಪದವಿ ಏನೆಂದು ತಿಳಿದುಕೊಂಡರೆ ಒಳ್ಳೆಯದು. ಯಾಕೆಂದರೆ ತಮ್ಮ ಸಮಸ್ಯೆಯನ್ನ ಮುಖ್ಯಮಂತ್ರಿಗಳ ಬಳಿ ಹೇಳಿಕೊಂಡರೆ ಅದು ಪರಿಹಾರವಾಗಬಹುದು ಎಂಬ ಆಸೆಗಣ್ಣಿನಿಂದ ಬಂದ ಮಹಿಳೆಯನ್ನೇ ಪೊಲೀಸರು ಬಂಧಿಸಿದ ಘಟನೆ ಕೊಪ್ಪಳದಲ್ಲಿಂದು ನಡೆದಿದೆ. ಮುಖ್ಯಮಂತ್ರಿ ಆದವರು ಒಬ್ಬಳು ನೊಂದ ಮಹಿಳೆಯ ಕಣ್ಣೀರು ಒರೆಸುವುದನ್ನು ಬಿಟ್ಟು ಆಕೆಯನ್ನು ಬಂಧಿಸಿದ್ದಾರೆಂದರೆ ಇದಕ್ಕಿಂತ ಅವಮಾನಕರ, ನಾಚಿಕೆಗೇಡಿನ ವಿಷಯ ಬೇರೊಂದಿಲ್ಲ.
ಕೊಪ್ಪಳದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗಿಯಾಗಲು ಬಂದ ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನ ಭೇಟಿಯಾಗಲು ಶೈಲಜಾ ಹುಳ್ಳಿ ಎನ್ನುವ ಮಹಿಳೆ ಮನವಿ
ಸಲ್ಲಿಸಿದ್ದರು. ಆದರೆ ರಾತೋರಾತ್ರಿ ಶೈಲಜಾ ಮತ್ತು ಅವರ ಪುತ್ರನನ್ನ ಬಂಧನಗೊಳಿಸಿದ ಪೊಲೀಸರು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ.
ಶೈಲಜಾ ಹುಳ್ಳಿ ಕೊಪ್ಪಳದ ಮೆಡಿಕಲ್ ಕಾಲೇಜ್‍ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಫೆಬ್ರವರಿ 4ರಂದು ಇದಕ್ಕಿದಂತೆ ಅವರನ್ನು ಕೆಲಸದಿಂದ
ತೆಗೆಯಲಾಗಿತ್ತು. ಕೆಲಸ ಕಳೆದುಕೊಳ್ಳಲು ಸ್ಟೋರ್ ಕೀಪರ್ ಸತ್ಯನಾರಾಯಣ್ ಕಾರಣ ಎಂದು ಆರೋಪಿಸಿದ್ದ ಶೈಲಜಾರನ್ನು ಥಳಿಸಿದ್ದರು. ಮತ್ತೆ ಕೆಲಸ ಕೊಡಲು
ಕಾಲೇಜು ನಿರಾಕರಿಸಿದ್ದರಿಂದ ಸಿಎಂ ಹತ್ರ ಮನವಿ ಸಲ್ಲಿಸಲು ಶೈಲಜಾ ಬಯಸಿದ್ದರು ಎಂದು ತಿಳಿದು ಬಂದಿದೆ.
ಬಡವರ ಜೊತೆ ರಾಕ್ಷಸರಂತೆ ವರ್ತಿಸುವ ಕಾಂಗ್ರೆಸ್‍ನ ಪಾಪದ ಕೊಡ ತುಂಬಿದ್ದು, ಮುಂದಿನ ಚುನಾವಣೆಯಲ್ಲಿ ಜನರು ಸರಿಯಾದ ಪಾಠ ಕಲಿಸಲೇಬೇಕು. ಇಲ್ಲವಾದರೆ ಪ್ರಜೆಗಳೇ ದಂಗೆ ಏಳುವ ಕಾಲ ದೂರದಲ್ಲಿಲ್ಲ…
source:Original Link
ಚೇಕಿತಾನ