ಪ್ರಚಲಿತ

ಕಾಂಗ್ರೆಸಿನ ನಾಯಕ ಅಯೋಧ್ಯೆಯ ರಾಮಮಂದಿರದ ವಿರುದ್ದವಾಗಿ ಏನೆಲ್ಲಾ ವಾದ ಮಂಡಿಸುತ್ತಿದ್ದಾರೆ ಗೊತ್ತೇ?!

ಬೆತ್ತಲೆಯಾದ ಕಾಂಗ್ರೆಸ್!!!

ರಾಮ ಮಂದಿರದ ವಿವಾದ ಇನ್ನೇನು ಬಗೆಹರಿಯಬಹುದೆನ್ನುವಾಗಲೇ, ಮತ್ತೆ ಮತ್ತೆ ವಿವಾದಕ್ಕೊಳಗಾಗುತ್ತಿರುವ ರಾಮಮಂದಿರದ ವಿಚಾರಣೆ ಇನ್ನೂ ‘ರಹಸ್ಯ’ ಎಂಬಂತೆಯೇ ಉಳಿದಿದೆ! ಹಿಂದೂ ಆರಾಧ್ಯ ದೈವನಾದ ಶ್ರೀ ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಮಂದಿರವನ್ನು ಕಟ್ಟಬೇಕೆಂಬ ಹಿಂದೂಗಳ ಆಸೆಗೆ ಪೂರಕವಾಗಿ, ಇತಿಹಾಸವೂ ಸಹ ರಾಮಮಂದಿರಕ್ಕೆ ಆಧಾರವನ್ನು ಒದಗಿಸಿದ್ದರ ಜೊತೆಗೆ ಶಿಯಾ ವಕ್ಫ್ ಬೋರ್ಡ್, “ಹಿಂದೂಗಳ ಜಾಗವನ್ನು ಹಿಂದೂಗಳಿಗೇ ನೀಡುವುದು ಸಮರ್ಪಕವಾಗಿದೆ ಹಾಗೂ ರಾಮ ಮಂದಿರವನ್ನು ಅದೇ ಸ್ಥಳದಲ್ಲಿಯೇ ಕಟ್ಟಬೇಕು’ ಎಂದೂ ಹೇಳಿತ್ತು!!

ತಕರಾರು ತೆಗೆದ ಸುನ್ನಿ ವಕ್ಫ್ ಬೋರ್ಡ್ ಮತ್ತು ಕಪಿಲ್ ಸಿಬಲ್!!

ರಾಮ ಮಂದಿರದ ವಿಚಾರವಾಗಿ ಮುಂಚೆ ಇಂದಲೂ ಸಹ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದು ಕಪಿಲ್ ಸಿಬಲ್ ಮತ್ತು ಸುನ್ನಿ ವಕ್ಫ್ ಬೋರ್ಡ್!
ಪ್ರಚೋದನಕಾರಿಯಾಗಿಯೂ ಪ್ರತಿಭಟನೆ ಮಾಡಿದ್ದ ಸುನ್ನಿ ವಕ್ಫ್ ಬೋರ್ಡ್ “ರಾಮಮಂದಿರ ನಿರ್ಮಾಣ ವಿಚಾರವಾಗಿ 2019 ರ ಲೋಕಸಭಾ ಚುನಾವಣೆಯ ನಂತರ ನಡೆಸುವಂತೆ ಸರ್ವೋ‌ಚ್ಛ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು! ಜೊತೆಗೆ ಕಪಿಲ್ ಸಿಬಲ್ ಎಂಬ ಕಾಂಗ್ರೆಸ್ ನಾಯಕ ಕೂಡಾ ಜುಲೈ 2019 ರ ನಂತರ ವಿಚಾರಣೆ ನಡೆಸುವಂತೆ ಮನವಿ ಸಲ್ಲಿಸಿದ್ದು ಈಗ, ಸುಪ್ರೀಂ ಮನವಿಯನ್ನು ತಿರಸ್ಕರಿಸಿ, ಬರುವ ಫೆಬ್ರುವರಿ 8 ಕ್ಕೆ ವಿಚಾರಣೆ ನಡೆಸುವಂತೆ ಆದೇಶಿಸಿ ಸುಪ್ರೀಂ ತೀರ್ಪು ನೀಡಿದೆ!

ತ್ರಿ ಸದಸ್ಯ ಪೀಠದಲ್ಲಿ ನಡೆಯುತ್ತಿರುವ 13 ಮೇಲ್ಮನವಿಗಳ ವಿಚಾರದಲ್ಲಿ, ಸುನ್ನಿ ವಕ್ಫ್ ಬೋರ್ಡ್ ಗೆ ಹಿನ್ನಡೆಯಾಗಿದ್ದು ಮುಖಭಂಗವಾಗಿದೆ! ಮುಖ್ಯ
ನ್ಯಾಯಾಧೀಶ ದೀಪಕ್ ಮಿಶ್ರಾ, ಅಬ್ದುಲ್ ನಜೀರ್, ಅಶೋಕ್ ಭೂಷಣ್ ರಿಂದ ವಿಚಾರಣೆ ನಡೆದಿದ್ದು, ಸುನ್ನಿ ಬೋರ್ಡ್ ಹಾಗೂ ಕಪಿಲ್ ಸಿಬಲ್ ರ ಮನವಿಯನ್ನು ತಳ್ಳಿ ಹಾಕಿದೆ!

ಸುಬ್ರಹ್ಮಣಿಯನ್ ಸ್ವಾಮಿಯವರ ಪ್ರತಿಕ್ರಿಯೆ ಕಪಿಲ್ ಸಿಬಲ್ ರನ್ನು ಬೀಸಿ ಹೊಡೆದಿದ್ದು ಹೀಗೆ!!

“ಕಪಿಲ್ ಸಿಬಲ್ ರಾಮ ಮಂದಿರದ ವಿರುದ್ಧ ಸುನ್ನಿ ವಕ್ಫ್ ಬೋರ್ಡ್ ನನ್ನು ಕೊಬ್ಬಿಗಾಗಿ ಸಮರ್ಥಿಸಿಕೊಂಡರು” ಎಂದು ಪ್ರತಿಕ್ರಿಯಿಸಿರುವ ಸುಬ್ರಹ್ಮಣಿಯನ್ ಸ್ವಾಮಿ ಈ ಹಿಂದೆಯೂ ಕೂಡ, ರಾಮ ಮಂದಿರದ ವಿಚಾರವಾಗಿ ಕಾಂಗ್ರೆಸ್ ಗೆ ಸವಾಲೆಸಿದಿದ್ದರು!

ವೃತ್ತಿಗಿಂತ ಧರ್ಮವೇ ದೊಡ್ಡದಾಯಿತಾ?!

“ರಾಮ ಜನ್ಮ ಭೂಮಿ.ಪ್ರಕರಣದಲ್ಲಿ 60% ಮುಸಲ್ಮಾನ ವಕೀಲರು ಹಾಗೂ 40% ಹಿಂದೂ ವಕೀಲರು ಬಾಬರೀ ಮಸೀದಿಯ ಇತ್ಯರ್ಥಕ್ಕೆ ನಿಯೋಜಿಸಲ್ಪಟ್ಟಿದ್ದರೂ, ಒಬ್ಬನೇ ಒಬ್ಬ ಮುಸಲ್ಮಾನ ವಕೀಲ ರಾಮ ಮಂದಿರದ ಪರ ನಿಲ್ಲುತ್ತಿಲ್ಲ! ಇದರರ್ಥ, ಅವರಿಗೆ ವೃತ್ತಿಗಿಂತ ಧರ್ಮ ದೊಡ್ಡದು! ಕೊನೆಗೆ ಉಳಿದದ್ದು” ಎಂಬುದು ಸಾಬೀತಾಗಿದೆ!

ಇದರ ಜೊತೆಗೆ, ಸ್ವತಃ ಹಿಂದೂಗಳೇ ಬಾಬರಿ ಮಸೀದಿಗೆ ಜೈಕಾರ ಹಾಕುತ್ತಿದ್ದು, ರಾಮ ಮಂದಿರ ನಿರ್ಮಾಣದ ಆಲೋಚನೆಯನ್ನು ಸದ್ಯದ ಮಟ್ಟಿಗೆ ತಡೆ ಹಿಡಿಯುವ ಪರಿಸ್ಥಿತಿ ಅನುವಾರ್ಯವಾಗಿದೆ!

ಫೆಬ್ರುವರಿ 8 ಕ್ಕೆ ನಡೆಯಲಿರುವ ವಿಚಾರಣೆ ರಾಮ ಮಂದಿರದ ಬಗ್ಗೆ ಅತ್ಯಂತ ಮಹತ್ವದ ನಿರ್ಧಾರವನ್ನು ನೀಡಲಿದೆ!

ಕಪಿಲ್ ಸಿಬಲ್ ಎಂಬ ಕಾಂಗ‌್ರೆಸ್ ನಾಯಕನೂ! ರಾಹುಲ್ ಗಾಂಧಿ ಎಂಬ ಕಾಂಗ್ರೆಸ್ ಮಿಶ್ರತಳಿಯೂ!

ಸರ್ವೋಚ್ಛ ನ್ಯಾಯಾಲಯದಲ್ಲಿ ಕಪಿಲ್ ಸಿಬಲ್ ಎಂಬ ಕಪಿ ‘2019 ರ ಲೋಕಸಭಾ ಚುನಾವಣೆಯಾದ ನಂತರವೇ ವಿಚಾರಣೆ ಇಟ್ಟುಕೊಳ್ಳಿ’ ಎಂದು ವಾದ ಮಂಡಿಸುತ್ತಿದ್ದಾರೆಂದರೆ, ಲೋಕಸಭಾ ಚುನಾವಣೆಗೆ ವ್ಯತಿರಿಕ್ತ ಪರಿಣಾಮ ಬೀರುವಲ್ಲಿ ರಾಮ ಮಂದಿರದ ವಿವಾದವೇ ಕಾರಣವಾಗಬಹುದು ಎಂಬ ದೂರಾಲೋಚನೆ ಎದ್ದು ಕಾಣುತ್ತಿದೆ ಬಿಡಿ! ಅಲ್ಲದೇ, ಒಂದು ಕಡೆ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ರಾಮ ಮಂದಿರದ ವಿರುದ್ಧ ನಿಂತಿದ್ದರೆ, ಇನ್ನೊಬ್ಬ ಕಾಂಗ್ರೆಸ್ ನಾಯಕ ರಾಹುಲ್ ಗುಜರಾತಿನಲ್ಲಿ ಉದ್ದಕ್ಕೂ ದೇವಸ್ಥಾನಗಳಿಗೆ ಉದ್ದಂಡ ನಮಸ್ಕಾರ ಹಾಕುತ್ತಿದ್ದಾರೆ! ಏನಿದರ ಮರ್ಮ?!

ಮುಂಬರುವ 2019 ರ ಲೋಕಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಿ ತೇಪೆ ಹಚ್ಚುವ ಕಾರ್ಯ ಸದ್ದಿಲ್ಲದೇ ನಡೆಯುತ್ತಿದೆಯೇ?!

– ಪೃಥು ಅಗ್ನಿಹೋತ್ರಿ

Tags

Related Articles

Close