ಅಂಕಣ

ಕಾಂಗ್ರೆಸಿನ ಮೇರು ನಾಯಕ ಅಹ್ಮದ್ ಪಟೇಲನ ಆಸ್ಪತ್ರೆಯಲ್ಲಿ ಇಬ್ಬರು ಉಗ್ರರ ಬಂಧನವಾದ ತಕ್ಷಣ ಸೋನಿಯ ಗಾಂಧಿ ಮಾಡಿದ್ದೇನು ಗೊತ್ತೇ ?!

ಅಹ್ಮದ್ ಪಟೇಲ್… ಅರೆರೆರೆರೆ… ಈ ಯಪ್ಪಾ ಮೊನ್ನೆ ಮೊನ್ನೆ ತನಕ ತನ್ನ ಕಳ್ಳ ಮುಖವನ್ನು ಮರೆಮಾಚುತ್ತಾ, ಕಾಂಗ್ರೆಸ್ಸಿನ ಪರಮೋಚ್ಚ ನಾಯಕಿ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೆರಗಿನ ನೆರಳಲ್ಲಿ ಭದ್ರವಾಗಿ ನೆಲೆಯೂರಿದ್ದ. ಆದರೆ ಇತ್ತೀಚೆಗೆ ಜಗತ್ತಿನ ರಕ್ತ ಹೀರುವ ಭಯಾನಕ ಸಂಘಟನೆಯಾದ ಐಸಿಸ್‍ನ ಸಂಪರ್ಕವು ಕಾಂಗ್ರೆಸ್ ನಾಯಕ, ಸೋನಿಯಾ ಆಪ್ತ ಅಹ್ಮದ್ ಪಟೇಲ್‍ಗೆ ಇದೆ ಎನ್ನುವ ಅಂಶ ಬಹಿರಂಗವಾಗಿದೆ.

ಅದೇಗೋ ತಿಪ್ಪರಲಾಗ ಹಾಕಿಯಾದರೂ ಗುಜರಾತಿನಿಂದ ರಾಜ್ಯ ಸಭೆಗೆ ನಡೆದ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಕೃಪಾ ಕಟಾಕ್ಷದಿಂದ ಗೆಲುವು ಸಾಧಿಸಿಬಿಟ್ಟಿದ್ದ. ಆದರೆ ಇತ್ತೀಚೆಗೆ ಬಂದ ವರದಿಯೊಂದು, ಅಹ್ಮದ್ ಪಟೇಲ್ ಮತ್ತು ಐಸಿಸ್ ಉಗ್ರರ ನಂಟಿನ ಕರಾಳ ಮುಖವನ್ನು ಜಗಜ್ಜಾಹೀರುಗೊಳಿಸಿದೆ.

ಮುಂಬರುವ ಗುಜರಾತ್ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬಂದು ಮತ್ತೆ ಗದ್ದುಗೆಯೇರುವುದು ಖಚಿತವೆಂದು ಗೊತ್ತಾದಾಗ, ಆ ಚುನಾವಣೆಗೂ ಮುನ್ನ ಗುಜರಾತಿನಲ್ಲಿ ಬಾಂಬ್ ಸ್ಪೋಟಿಸಿ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಹುನ್ನಾರ ಬಯಲಾಗಿದೆ.

ಈವರೆಗೆ ಕಾಂಗ್ರೆಸ್ ಒಳಗೊಳಗೇ ಭಯೋತ್ಪದಕರ ನಂಟನ್ನು ಹೊಂದಿದೆ ಎಂಬ ಗುಸುಗುಸು ಅಲ್ಲಲ್ಲಿ ಕೇಳಿಬರುತ್ತಿತ್ತು. ಆದರೆ ಈ ಪುಣ್ಯಾತ್ಮ ಮಾಡಿರುವ
ದೇಶದ್ರೋಹಿ ಕೆಲಸ, ಇಡೀ ಕಾಂಗ್ರೆಸ್ ಪಕ್ಷವನ್ನೇ ದೇಶದ ಜನರ ಮುಂದೆ ಬೆತ್ತಲುಗೊಳಿಸುವಂತೆ ಮಾಡಿದೆ.

ಯಾವಾಗ ಅಹ್ಮದ್ ಪಟೇಲ್‍ಗೆ ಐಸಿಸ್ ಉಗ್ರರ ನಂಟಿದೆ ಎಂಬ ಸ್ಪೋಟಕ ಮಾಹಿತಿ ಬಹಿರಂಗವಾಯಿತೋ ಆವಾಗಲೇ ಅಹ್ಮದ್ ಪಟೇಲ್ ತನ್ನ ದೇವತೆ ಎಂದು
ನಂಬಿಕೊಂಡಿದ್ದ ಸೋನಿಯಾ ಗಾಂಧಿ ಅರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಸೋನಿಯಾ ಮೇಡಂಗೆ ನಿಜವಾಗಿಯೂ ಆರೋಗ್ಯ ಸಮಸ್ಯೆ ಕಾಡಿತ್ತೋ ಅಥವಾ ಅಹ್ಮದ್ ಪಟೇಲ್‍ನ ಉಗ್ರ ಸಂಘಟನೆಯೊಂದಿಗಿನ ಲಿಂಕ್ ಬಹಿರಂಗವಾಗಿದ್ದ ವಿಷಯವನ್ನು ವಿಷಯಾಂತರ ಮಾಡಲು ನಡೆಸಿದ್ದ ಹುನ್ನರವೋ ಗೊತ್ತಿಲ್ಲ. ಆದರೆ ಅಹ್ಮದ್ ಪಟೇಲ್ ಇಂತಹ ಸುಳಿಯಲ್ಲಿ ಸಿಲುಕಿದ ನಂತರ ಕಾಂಗ್ರೆಸ್ ಪಾಳಯದಲ್ಲಿ ದಿಢೀರ್ ಬೆಳವಣಿಗಳು ಗರಿಗೆದರುತ್ತಿರುವುದಂತು ಸುಳ್ಳಲ್ಲ.

ಕಾಂಗ್ರೆಸ್‍ಗೇಕೆ ದೇಶದ್ರೋಹಿಗಳ ಮೇಲೆ ಅಷ್ಟೊಂದು ಪ್ರೀತಿ..?

ಕಾಂಗ್ರೆಸಿಗರ ದೇಶದ್ರೋಹಿಗಳ ಪ್ರೀತಿಯನ್ನು ಕಂಡರೆ ಸಂಶಯ ಬಾರದೆ ಇರದು. ಬಿಜೆಪಿಯನ್ನು ಧ್ವೇಷಿಸುವ ಭರದಲ್ಲಿ ದೇಶದ್ರೋಹಿಗಳನ್ನು ಬೆಂಬಲಿಸುವ
ಕಾಂಗ್ರೆಸ್ಸಿನ ಮನಸ್ಥಿತಿ ಈಗಾಗಲೇ ಹಲವಾರು ಪ್ರಕರಣಗಳಲ್ಲಿ ಸಾಬೀತಾಗಿದೆ. ದೇಶದ್ರೋಹದ ಪ್ರಕರಣಗಳು ಕಂಡು ಬಂತೆಂದರೆ ಬಿಜೆಪಿ ಪಕ್ಷ ಅದನ್ನು ಮೊದಲಾಗಿ ವಿರೋಧಿಸುತ್ತದೆ. ಬಿಜೆಪಿಯ ವಿರೋಧವನ್ನು ಎದುರಿಸಲು ಆ ದೇಶದ್ರೋಹಿಗಳು ಮೊರೆ ಹೋಗುವುದು ಅದೇ ಕಾಂಗ್ರೆಸ್ ನಾಯಕರ ಬಳಿ. ಕಾಂಗ್ರೆಸಿಗರೋ, “ಬಿಜೆಪಿ ವಿರುದ್ಧ ತಾನೆ..? ನಾವು ನಿಮಗೆ ಬೆಂಬಲ ನೀಡುತ್ತೇವೆ” ಎಂದು ಹೇಳಿಯೇ ಬಿಡುತ್ತೆ ಕಾಂಗ್ರೆಸ್ ಪಕ್ಷ. ಹೀಗಿರುವಾಗ ಪಕ್ಷದಲ್ಲೇ ಇರುವ ನಾಯಕರು ಅದೆಷ್ಟು ಉಗ್ರ ಚಟುವಟಿಕೆಗಳನ್ನು ನಡೆಸಬಹುದು…!

ಪಾಕಿಸ್ಥಾನವೆಂಬುವುದು ಜಗತ್ತಿನ ನರಕ. ಆ ನರಕಕ್ಕೆ ಹೋಗಿ ಅದೇ ಕೊಳಕು ಬಾಯಿಯಿಂದ, “ನಮ್ಮ ದೇಶದಲ್ಲಿರುವ (ಭಾರತದಲ್ಲಿ) ಪ್ರಧಾನಿ ನರೇಂದ್ರ
ಮೋದಿಯವರನ್ನು ಮುಗಿಸಿ ಬಿಡಿ, ನಾನು ಬೆಂಬಲ ಕೊಡ್ತೇನೆ” ಎಂದು ಆ ದೇಶದ್ರೋಹಿ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಆಡಿದ್ದ ಮಾತುಗಳ
ಅರ್ಥವೇನು..? ತನ್ನ ದೇಶದ ಮೇಲೆ ಪ್ರೀತಿಯಿಟ್ಟು, ಮತ್ತೊಂದು ದೇಶದಲ್ಲಿ ತನ್ನ ದೇಶದ ಸಾತ್ವಿಕ ವರ್ಣನೆಯನ್ನು ಅನಾವರಣ ಮಾಡಬೇಕಿದ್ದ ಇಂತಹ ಉನ್ನತ
ಸ್ಥಾನದಲ್ಲಿರುವ ಮುಖಂಡರುಗಳು, ಈ ರೀತಿ ವರ್ತಿಸುವುದರ ಹಿಂದಿನ ಮರ್ಮವೇನು..? ಅದೇ ಮಣಿಶಂಕರ್ ಈ ಹಿಂದೆ, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಬಗ್ಗೆ ಬಾಯಿಗೆ ಬಂದ ತಾನಾಡಿದ್ದನ್ನು ದೇಶ ಮರೆಯುತ್ತದೆಯೇ..? ನೆವರ್…

ಈ ಹಿಂದೆ ದೇಶದಲ್ಲಿ ಭಯೋತ್ಪಾದಕರು ತನ್ನ ಕ್ರೌರ್ಯವನ್ನು ಮೆರೆದಾಗ, ಅವರನ್ನು ಬಂಧಿಸಿದ್ದ ಪೊಲೀಸರ ಮೇಲೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ
ವಿರೋಧವನ್ನು ಹೇರಿದ್ದರಲ್ಲಾ…. “ಅಮಾಯಕರ ಬಂಧನವು ತನ್ನ ರಾತ್ರಿಯ ನಿದ್ದೆಯನ್ನೇ ಕಸಿದಿದೆ. ರಾತ್ರಿಯಿಡೀ ಕಣ್ಣೀರು ಹಾಕುತ್ತಲೇ ಕುಳಿತಿದ್ದೆ” ಎಂಬ ಸೋನಿಯಾ ಗಾಂಧಿ ಹೇಳಿಕೆಯು ಯಾರನ್ನು ಉತ್ತೇಜಿಸಲು ಯತ್ನಿಸುತ್ತಿದೆ. ಕೆಲವೇ ಸಮಯಗಳಲ್ಲಿ ಬಂಧನಕ್ಕೊಳಗಾದವರು ಭಯೋತ್ಪಾದಕರು ಎಂದು ಸತ್ಯ ಬಹಿರಂಗವಾದಾಗ ಸೋನಿಯಾ ಏಕೆ ಮೌನ ವಹಿಸಿದ್ದರು..? ಏನಿದರ ಒಳಮರ್ಮ..?

ಗುಜರಾತಿನಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ, ಮೋದಿ ಮತ್ತು ಅಂದು ಗೃಹ ಸಚಿವರಾಗಿದ್ದ ಅಮಿತ್ ಶಾ ರವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಇಶ್ರತ್ ಎಂಬ ಭಯೋತ್ಪಾದಕಿ ಮೇಲೆ ಎನ್‍ಕೌಂಟರ್ ನಡೆಸಿದ್ದ ಅಂದಿನ ಮೋದಿ ಸರ್ಕಾರದ ಮೇಲೆ ಇದೇ ಸೋನಿಯಾ ನೇತೃತ್ವದ ಕಾಂಗ್ರೆಸ್ ಪಕ್ಷ ಮುಗಿಬಿದ್ದಿತ್ತಲ್ಲಾ… “ಇಶ್ರತ್ ಈ ದೇಶದ ಮಗಳು. ಅವಳ ಮೇಲೆ ನಡೆದ ಎನ್‍ಕೌಂಟರನ್ನು ನಾವು ಖಂಡಿಸುತ್ತೇವೆ” ಎಂದು ಬೊಬ್ಬೆ ಹೊಡೆದು, ಕೇಸು ದಾಖಲು ಮಾಡಿದ್ದ ನಂತರ, ಅದೇ ಇಶ್ರತ್ ಮೇಲಿನ ಆರೋಪ ಸತ್ಯವಾಗಿ ಅವಳು ಭಯೋತ್ಪಾದಕಿ ಎಂದು ಕೋರ್ಟ್ ತೀರ್ಪು ನೀಡಿತ್ತಲ್ಲಾ… ಯಾರು ಭಯೋತ್ಪಾದಕ ಬೆಂಬಲಿಗರು..? ತನಿಖೆಯೇ ನಡೆಸದೆ ಆಕೆ ನಮ್ಮ ದೇಶದ ಮಗಳು ಎಂಬ ಕಾಂಗ್ರೆಸ್‍ನ ಮಾತಿನ ಹಿಂದಿರುವ ಅಜೆಂಡಾವಾದರು ಏನು..?

ಜೆಎನ್‍ಯುನಲ್ಲಿ ಕನ್ಹಯ್ಯಾ ಕುಮಾರ್ ಎಂಬ ವಿದ್ಯಾರ್ಥಿ ದೇಶವಿರೋಧಿ ಘೋಷಣೆಗಳನ್ನು ಕೂಗಿದ್ದಕ್ಕೆ ಬಿಜೆಪಿಗರು ಆತನನ್ನು ವಿರೋಧಿಸಿದರು ಎನ್ನುವ ಏಕೈಕ
ಕಾರಣಕ್ಕೆ ಆತನ ಪರವಾಗಿ ನಿಂತು, ಇಂದಿಗೂ ಆತನನ್ನು ಈ ದೇಶದ ಮಗ ಎಂದು ಬಿಂಬಿಸುತ್ತಿದ್ದೀರಲ್ಲಾ… ಇದರ ಹಿಂದಿರುವ ಕಾಂಗ್ರೆಸ್‍ನ ಉಧ್ಧೇಶವೇನು.?
ದೇಶದ್ರೋಹಿಗಳಿಗೆ ಬೆಂಬಲವೇಕೆ..?

“ಜನಗಣಮನ ಗೀತೆಯು ಈ ದೇಶದ ಪರಮೋಛ್ಛ ರಾಷ್ಟ್ರಗೀತೆ. ಅದನ್ನು ಹಾಡುವಾಗ ಎಲ್ಲರೂ ಎದ್ದು ನಿಂತು ಗೌರವಿಸಬೇಕು” ಎಂಬ ದೇಶಪ್ರೇಮಿಗಳ ಒಕ್ಕೊರಳ ಆಶಯಕ್ಕೆ ಬಿಜೆಪಿ ಸರ್ಕಾರಗಳು ಸ್ಪಂಧಿಸಿ “ಇದೊಂದು ದೇಶಪ್ರೇಮದ ಭಾವನಾತ್ಮಕ ವಿಚಾರ. ರಾಷ್ಟ್ರಗೀತೆಯ ಗೌರವದ ವಿಚಾರದಲ್ಲಿ ರಾಜಿಯಿಲ್ಲ. ಎದ್ದುನಿಂತು ಗೌರವಿಸೋಣ” ಎಂದಾಗಲೇ ಈ ದೇಶದ ಬುದ್ಧಿಜೀವಿಗಳು ಮಾತೆತ್ತಿದರು. “ದೇಶಪ್ರೇಮವನ್ನು ಈ ರೀತಿ ನಿರೂಪಿಸಲು ನಾವು ಇಷ್ಟ ಪಡಲ್ಲ” ಎಂದು ಪಾಕಿಸ್ಥಾನವೂ ನಾಚುವಂತೆ ಹೇಳಿಕೆ ಕೊಟ್ಟಿದ್ದರು. ಈ ಹೇಳಿಕೆಗಳಿಗೆ ಕಾಂಗ್ರೆಸ್ ಜೈ ಎಂದಿತ್ತು. ಇದು ದೇಶದ್ರೋಹದ ಪರಮಾವಧಿ ಅಲ್ಲದೆ ಮತ್ತೇನು..? ಕೇವಲ 52 ಸೆಕೆಂಡುಗಳ ಕನಿಷ್ಟ ಸಮಯವನ್ನು ದೇಶಭಕ್ತಿಗೋಸ್ಕರ ಮೀಸಲಿಡುವ ತಾಳ್ಮೆ ಈ ಸೋಕಾಲ್ಡ್ ರಾಜಕಾರಣಗಳಿಗೆ ಇಲ್ಲವೆಂದ ಮೇಲೆ, ಇವರು ದೇಶಭಕ್ತರು ಎಂದು ಸಮರ್ಥಿಸಿಕೊಳ್ಳುವುದಾದರೂ ಹೇಗೆ..?

ಕ್ಯಾಲಿಫೋರ್ನಿಯಾದ ಪ್ರತಿಷ್ಟಿತ ಸಂಸ್ಥೆಯೊಂದು ಸಂಶೋಧಿಸಿದ ಪ್ರಕಾರ ಪ್ರತಿ ಮನುಷ್ಯನ ಮಾನಸಿಕ ಸ್ಥಿತಿಯಲ್ಲಿ, ಶೇಕಡಾ 4ರಷ್ಟು ವಿಕೃತ ಮನಸ್ಸು ಇರುತ್ತದೆ.
ಹಾಗೂ ಅದು ಶೇಕಡಾ 6ಕ್ಕೆ ಬಂತೆಂದರೆ, ಆ ವ್ಯಕ್ತಿ ತನ್ನ ಸಾಮಾನ್ಯ ಸ್ಥಿಮಿತವನ್ನು ದಾಟಿ ಹಿಂಸಾತ್ಮಕ ಚಟುವಟಿಕೆಗಳಿಗೆ ಇಳಿಯುತ್ತಾನೆ ಎಂಬುದು
ಸಂಶೋಧನೆಯಿಂದ ಕಂಡುಬಂದಿದೆ.

ಬಹುಷಃ ನಮ್ಮ ದೇಶದ ಕಾಂಗ್ರೆಸ್ ನಾಯಕರ ಮೆಂಟಾಲಿಟಿ ಕೂಡಾ ಹೀಗೇ ಇರಬಹುದೇನೋ..!!! ಮತ್ತೊಬ್ಬರ ಏಳಿಗೆಯನ್ನು ಸಹಿಸದೆ, ಅವರ ವಿರುದ್ಧ ತಾನು
ಹೂಡಿರುವ ತಂತ್ರಗಾರಿಕೆ ಸಫಲವಾಗದೆ ಇದ್ದಾಗ, ಅಹ್ಮದ್ ಪಟೇಲ್ ತರಹ ದುಷ್ಕತ್ಯಗಳನ್ನು ಎಸೆಯುವಂತ ಮಾನಸಿಕ ಸ್ಥಿತಿಯು ಉಧ್ಭವವಾಗುತ್ತದೆ. ದೇಶದಲ್ಲಿ ಬಿಜೆಪಿಯನ್ನು ವಿರೋಧಿಸುವ ಭರದಲ್ಲಿ ದೇಶದ್ರೋಹಿಗಳಿಗೆ ರಕ್ಷಣೆ ನೀಡುತ್ತಿರುವ ಕಾಂಗ್ರೆಸ್ ಪಕ್ಷ ಮುಂದೊಂದು ದಿನ ತನ್ನ ನಿಜರೂಪವನ್ನು ದೇಶದ ಮುಂದೆ ಅನಾವರಣಗೊಳಿಸಿ ಶಾಶ್ವತವಾಗಿ ಈ ದೇಶದಿಂದ ಗಡಿಪಾರಾದರೆ ಅಚ್ಛರಿಪಡಬೇಕಾಗಿಲ್ಲ…

-ಸುನಿಲ್

Tags

Related Articles

Close