ಪ್ರಚಲಿತ

ಕಾಂಗ್ರೆಸಿನ ಹೊಸ ಅಧ್ಯಕ್ಷರಾಗುತ್ತಿರುವ ರಾಹುಲ್ ಗಾಂಧಿಗೆ ಹತ್ತು ಪ್ರಶ್ನೆಗಳು?!

ಸಾಬೀತು ಪಡಿಸಲೇಬೇಕಿದೆ ನಿಮ್ಮ ಅರ್ಹತೆಯನ್ನು!!!

ಮಿಸ್ಟರ್ ರಾಹುಲ್ ಗಾಂಧಿಯವರೆ ನೀವು ಯಾವ ಕರ್ಮಕ್ಕೆ ಕಾಂಗ್ರೆಸ್‍ನ ಅಧ್ಯಕ್ಷರಾಗುತ್ತಿದ್ದೀರಾ? ಯಾಕೆಂದರೆ ಕಾಂಗ್ರೆಸ್ ಎನ್ನುವುದು ಮುಳುಗುತ್ತಿರುವ ಹಡಗು. ಅದನ್ನು ಮೇಲೆತ್ತಲು ನಿಮ್ಮಿಂದ ಖಂಡಿತಾ ಸಾಧ್ಯವಿಲ್ಲ. ನಿಮ್ಮ ಅಮ್ಮ ಆಂಟೊನಿಯಾ ಮೈನೋ ನಿಮ್ಮನ್ನು ಪಕ್ಷದ ಅಧ್ಯಕ್ಷರನ್ನಾಗಿಸಲು ಏನೆಲ್ಲಾ ನಾಟಕ ಆಡಿದರು ಎನ್ನುವುದು ನಮಗೆಲ್ಲಾ ಗೊತ್ತೇ ಇದೆ. ಕಾಂಗ್ರೆಸ್‍ನಲ್ಲಿ ಬೇರೆ ಮುಖಂಡರಿಗೆ ಕಾಂಗ್ರೆಸ್‍ನ ಅಧ್ಯಕ್ಷರಾಗಲು ಅರ್ಹತೆ ಇದ್ದಿದ್ದರೂ, ನಿಮ್ಮನ್ನೇ ಅಧ್ಯಕ್ಷರನ್ನಾಗಿ ಮಾಡಲು ಮಾಡಿರುವ ಸರ್ಕಸ್ ಕಂಡರೆ ಖಂಡಿತಾ ಕಾಂಗ್ರೆಸ್ ಪಕ್ಷವು ನಿಮಗೆ ಫ್ಯಾಮಿಲಿ ಬ್ಯುಸಿನೆಸ್ ಇದ್ದ ಹಾಗೆ.

ಈಗ ನಾನು ನಿಮ್ಮಲ್ಲಿ ಕೇವಲ ಹತ್ತು ಪ್ರಶ್ನೆಗಳನ್ನು ಕೇಳುತ್ತಿದ್ದೇನೆ. ಕಾಂಗ್ರೆಸ್‍ನ ಅಧ್ಯಕ್ಷರಾಗಲು ನಿಮಗೆ ಖಂಡಿತಾ ಸಾಧ್ಯವಿದೆಯೇ ಎನ್ನವುದನ್ನು ನೀವು
ಸಾಬೀತುಪಡಿಸಿ.

1. ಕಾಂಗ್ರೆಸ್ ಪಕ್ಷ ಪಕ್ಕಾ ಕುಟುಂಬ ರಾಜಕಾರಣವನ್ನು ಹೊಂದಿರುವ ಪಕ್ಷವಾಗಿದ್ದು, ಈ ಪಕ್ಷವನ್ನು ನೆಹರೂ ಕುಟುಂಬ ದತ್ತು ತೆಗೆದುಕೊಂಡಿದೆ. ಗಾಂಧಿಯ ಹೆಸರನ್ನು ಇಟ್ಟುಕೊಂಡು ಜನರನ್ನು ಮೋಸ ಮಾಡಿ ಓಟು ಗಳಿಸಿ ಒಂದಷ್ಟು ಹಗರಣಗಳಲ್ಲಿ ಭಾಗಿಯಾಗಿದ್ದು ಈ ಪಕ್ಷದ ಸಾಧನೆ. ಈ ಪಕ್ಷದಲ್ಲಿ ನೆಹರೂ ಫ್ಯಾಮಿಲಿಯನ್ನು ಬಿಟ್ಟು ಉಳಿದವರಿಗ್ಯಾರಿಗೂ ಅಧ್ಯಕ್ಷರಾಗಲು ಸಾಧ್ಯವೇ ಇಲ್ಲ. ರಾಹುಲ್ ಗಾಂಧಿಯವರೇ ಕಾಂಗ್ರೆಸ್‍ನಲ್ಲಿ ನೆಹರೂ ಮನೆತನದವರು ಬಿಟ್ಟು ಉಳಿದವರು ಯಾಕೆ ಅಧ್ಯಕ್ಷರಾಗಲು ಸಾಧ್ಯವಿಲ್ಲ?

2. ನಿಮ್ಮ ಪಕ್ಷದಲ್ಲಿ ಗುಲಾಮಗಿರಿ ಇರಲು ಕಾರಣವೇನು? ಇಡೀ ಒಂದು ಕುಟುಂಬಕ್ಕಾಗಿ ಉಳಿದ ಕಾಂಗ್ರೆಸ್ ಮುಖಂಡರನ್ನು ಗುಲಾಮರಂತೆ ನೋಡಿಕೊಳ್ಳಲು ಕಾರಣವೇನು? ಕಾಂಗ್ರೆಸ್‍ನಲ್ಲಿ ಗುಲಾಮಗಿರಿ ಮಾನಸಿಕತೆ ಇರಲು ಕಾರಣವೇನು? ಈ ಗುಲಾಮಗಿರಿ ಮಾನಸಿಕತೆಯನ್ನು ಕಾಂಗ್ರೆಸ್ ಉಳಿದ ಮುಖಂಡರು ಹೇಗೆ ಸಹಿಸುತ್ತಾರೆ. ನಿಮ್ಮನ್ನು ಒಪ್ಪುವಂತೆ ಮಾಡಲು ಯಾವ ನಮೂನೆಯ ಭಸ್ಮವನ್ನು ಎಲ್ಲಿಂದ ಮಂತ್ರಿಸಿ ಹಾಕಿದ್ದೀರಿ? ಇದರ ಗುಟ್ಟೇನು ಸ್ವಾಮಿ?

3. ಬಿಜೆಪಿ ಪಕ್ಷದಲ್ಲಿ 1998ರಿಂದ ಕುಶಾಭಾವು, ಬಿ. ಲಕ್ಷ್ಮಣ್, ಕೃಷ್ಣಮೂರ್ತಿ, ವೆಂಕಯ್ಯ ನಾಯ್ಡು, ಅಡ್ವಾಣಿ, ರಾಜನಾಥ್ ಸಿಂಗ್, ಗಡ್ಕರಿ, ಅಮಿತ್ ಶಾ ಹೀಗೆ ತಳಮಟ್ಟದ ಕಾರ್ಯಕರ್ತರಾಗಿದ್ದವರೆಲ್ಲಾ ಪಕ್ಷದ ಅಧ್ಯಕ್ಷರಾದರು. ಆದರೆ ಕಾಂಗ್ರೆಸ್‍ನಲ್ಲಿ 1998ರಿಂದ ಇಂದಿನವರೆಗೆ ಆಂಟೊನಿಯಾ ಮೈನೋ ಒಬ್ಬರೇ ಅಧ್ಯಕ್ಷರಾಗಿ ಉಳಿದುಕೊಳ್ಳಲು ಕಾರಣವೇನು? ಅವರಿಗೆ ಪಕ್ಷ ಮುನ್ನಡೆಸಲು ಯಾವ ಅರ್ಹತೆ ಇದೆ? ಕೇವಲ ರಾಜೀವ್ ಗಾಂಧಿ ಪತ್ನಿ ಎಂಬ ಕಾರಣಕ್ಕಾಗಿ ಈ ಕೆಲಸವೇ?

4. ರಾಹುಲ್ ಗಾಂಧಿಯವರೇ ನಿಮ್ಮ ಬುದ್ಧಿವಂತಿಕೆ ಎಷ್ಟಿದೆ ಎಂದು ಎಲ್ಲರಿಗೂ ಗೊತ್ತಿದೆ. ನಿಮ್ಮ ಎಡವಟ್ಟುಗಳ ಬಗ್ಗೆ ಇಡೀ ಜಗತ್ತೇ ಮುಸಿಮುಸಿ ನಗುತ್ತಿದೆ. ನೀವು ಭಾಷಣ ಮಾಡುವಲ್ಲಿಯೆಲ್ಲಾ ಕಾಂಗ್ರೆಸ್ ಮಕಾಡೆ ಮಲಗಿದೆ. ಮೊನ್ನೆ ನಿಮ್ಮ ಸ್ವಕ್ಷೇತ್ರ ಅಮೇಥಿಯಲ್ಲೇ ಪೌರ ಚುನಾವಣೆ ವೇಳೆ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ರಾಯ್‍ಬರೇಲಿಯಲ್ಲಿ ಕಾಂಗ್ರೆಸ್ ಧೂಳೀಪಟವಾಗಿದೆ. ಆದರೂ ನಿಮ್ಮ ಅಮ್ಮನಿಗೆ ನಿಮ್ಮನ್ನೇ ಅಧ್ಯಕ್ಷರನ್ನಾಗಿ ಮಾಡಲಿರುವ ತುಡಿತವೇನು?

5. ರಾಜಕೀಯ ಅಂದ್ರೆ ಫ್ಯಾಮಿಲಿ ಬಿಸಿನೆಸ್ ಅಂದ್ಕೊಂಡ್ರಾ? ನನ್ನ ಜೊತೆ ಮುಕ್ತ ಚರ್ಚೆಗೆ ಬನ್ನಿ. ಕಾಂಗ್ರೆಸ್ ಪಕ್ಷದ ಭವಿಷ್ಯಕ್ಕಾಗಿ ನಮ್ಮ ಯೋಜನೆ ಏನು ಎಂಬುದನ್ನು ಮುಕ್ತವಾಗಿ ಮಾತನಾಡೋಣ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಕಾರ್ಯದರ್ಶಿ ಶೆಹ್ಜಾದ್ ಪೂನವಾಲಾ, ರಾಹುಲ್ ಗಾಂಧಿಯವರಿಗೆ ನೇರವಾಗಿ ಸವಾಲೆಸೆದಿದ್ದರು. ಇದು ಕೇವಲ ಶೆಹ್ಜಾದ್ ಪೂನವಾಲಾ ಅವರ ಸವಾಲು ಮಾತ್ರವಲ್ಲ, ನನ್ನ ಸವಾಲು ಕೂಡಾ ಆಗಿದೆ. ಯಾಕೆಂದರೆ ನಿಮಗೆ ಪಕ್ಷದಿಂದ ಸಿಗುವ ಲಾಭವೇನು? ಪಕ್ಷವೆಂದರೆ ನಿಮಗೆ ಫ್ಯಾಮಿಲಿ ಬಿಸಿನೆಸ್ಸಾ?

6. ಕಾಂಗ್ರೆಸ್‍ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ನಾಟಕ ನಡೆಯಿತು. ಈ ವೇಳೆ ನಿಮ್ಮನ್ನು ಬಿಟ್ಟು ಬೇರ್ಯಾರೂ ಪಕ್ಷದ ಅಧ್ಯಕ್ಷಗಿರಿಗೆ ನಾಮಪತ್ರ
ಸಲ್ಲಿಸಿರಲಿಲ್ಲ. ಉಳಿದವರು ಯಾಕೆ ನಾಮಪತ್ರ ಸಲ್ಲಿಸಿಲ್ಲ? ಸೋನಿಯಾಳ ಹುಕುಂ ಇತ್ತೇ? ಅಥವಾ ನಿಮ್ಮ ಪಾದ ಸೇವೆ ಮಾಡುವ ಕಾಂಗ್ರೆಸ್ ಗುಲಾಮರು ನಾಮಪತ್ರ ಸಲ್ಲಿಸಿದರೆ ಮುಂದಿನ ಅಪಾಯವನ್ನು ಅರಿತು ನಾಮಪತ್ರ ಸಲ್ಲಿಸಲು ಹೆದರಿದ್ದಾರೆಯೇ? ಇದರ ಅಸಲಿ ಕಥೆ ಏನು?

7. ಗಾಂಧಿ ಎಂಬ ಸರ್‍ನೇಮ್ ಇಟ್ಟುಕೊಂಡು ಜನರನ್ನು ಮೋಸಗೊಳಿಸುವ ಕೆಲಸ ಎಲ್ಲಿ ತನಕ ನಡೆಯುತ್ತದೆ? ನೆಹರೂ ಕುಟುಂಬದ ಪ್ರಭಾವದಿಂದ ಕಾಂಗ್ರೆಸ್‍ನಲ್ಲಿ ಅದೆಷ್ಟೋ ಮಂದಿ ಮುಖಂಡರು ಮೂಲೆಗುಂಪಾಗುತ್ತಿದ್ದಾರೆ. ನಿಮ್ಮ ಕುಟುಂಬದ ವಿರುದ್ಧ ಧ್ವನಿ ಎತ್ತಲು ಯಾಕೆ ಯಾರಿಗೂ ಧೈರ್ಯವಿಲ್ಲ? ನಿಮ್ಮ ವಿರುದ್ಧ ಧ್ವನಿ ಎತ್ತಿದ ಶೆಹಜಾದ್ ಪೂನಾವಾಲಾ ಅವರ ಮುಂದಿನ ಕಥೆ ಏನು?

8. ನೀವು ಅಧ್ಯಕ್ಷರಾಗುತ್ತಿರುವಿರಿ ಎಂದು ಇಂದೇ ಸಾಬೀತಾಗಿದೆ. ಮುಂದೆ ನಿಮ್ಮನ್ನು ಪ್ರಧಾನಿ ಮಾಡಬೇಕೆಂದು ಇಡೀ ಕಾಂಗ್ರೆಸ್ ಗುಲಾಮರ ಮಾತು… ನಿಮ್ಮಂಥಹಾ ವ್ಯಕ್ತಿಯನ್ನು ಜನರು ಪ್ರಧಾನಿ ಮಾಡುತ್ತಾರೆ ಎಂಬ ಕನಸು ನನಸಾಗಲು ಸಾಧ್ಯವಿಲ್ಲ ಎಂಬ ಕಾಮನ್‍ಸೆನ್ಸ್ ನಿಮಗಿಲ್ಲವೇ? ದೇಶದಲ್ಲಿ ಎಷ್ಟು ಲೋಕಸಭಾ ಕ್ಷೇತ್ರವಿದೆ ಎಂದು ಗೊತ್ತಿಲ್ಲ, ಪಕ್ಷದ ಸಿದ್ಧಾಂತವೇನೆಂದು ಗೊತ್ತಿಲ್ಲ.. ಆದರೂ ಪ್ರಧಾನಿ ಆಗುತ್ತೇನೆ ಎನ್ನುವ ಕನಸು ಕಾಣಲು ಕಾರಣವೇನು?

9. ಸುಬ್ರಹ್ಮಣಿಯನ್ ಸ್ವಾಮಿ ಅವರ ಪ್ರಕಾರ ನಿಮಗೆ ಇಂಗ್ಲೆಡ್ ಪೌರತ್ವವಿದೆ. ಆವಾಗೊಮ್ಮೆ ಈವಾಗೊಮ್ಮೆ ನಿಗೂಢವಾಗಿ ನಾಪತ್ತೆಯಾಗುತ್ತೀರಿ. ಭಾರತ-ಚೀನಾ ಯುದ್ಧ ನಡೆಯುತ್ತಿದೆ ಎನ್ನುವಾಗ ನೀವು ಚೀನಾಕ್ಕೆ ಭೇಟಿ ನೀಡಿದ್ದೀರಿ. ನೀವು ಏನು ಮಾಡುತ್ತೀರಿ, ನಿಮ್ಮ ವಿದೇಶ ಸುತ್ತಾಟದ ಅಸಲಿ ರಹಸ್ಯವೇನು ಎಂದು ಗೊತ್ತಿಲ್ಲ. ಹಾಗಿದ್ದರೆ ನಿಮ್ಮ ಪರ್ಸನಲ್ ಲೈಫ್‍ನ ಸೀಕ್ರೆಟ್ ಏನು?

10. ಇದು ನನ್ನ ಕೊನೆಯ ಪ್ರಶ್ನೆ. ಈಗಾಗಲೇ ನಿಮಗೆ 47 ವರ್ಷ ಕಳೆದಿದೆ. ನಿಮಗಿನ್ನೂ ಮದುವೆಯಾಗಿಲ್ಲ. ನಿಮ್ಮ ಮದುವೆ ಯಾವಾಗ ನಡೆಯುತ್ತದೆ. ಇಲ್ಲಿ ನನ್ನ ಪ್ರಶ್ನೆ ಏನೆಂದರೆ ನಿಮಗಿನ್ನೂ ಮದುವೆಯಾಗದ ಕಾರಣ ನಿಮಗಿನ್ನೂ ಮಕ್ಕಳಾಗಿಲ್ಲ. ಆದ್ದರಿಂದ ಒಂದು ವೇಳೆ ನೀವು ಮದುವೆಯಾಗದೇ ಇದ್ದರೆ ನಿಮ್ಮ ಪಕ್ಷದ ಅಧ್ಯಕ್ಷ ಸ್ಥಾನವನ್ನು ಯಾರಿಗೆ ಕೊಡುತ್ತೀರಿ?

ಇಲ್ಲಿರುವ ಹತ್ತು ಪ್ರಶ್ನೆಗಳಿಗೆ ರಾಹುಲ್ ಗಾಂಧಿ ಪ್ರಾಮಾಣಿಕವಾಗಿ ಉತ್ತರಿಸುವ ಕೆಲಸ ಮಾಡಲಿ. ಆಮೇಲೆ ಬೇಕಾದರೆ ಕಾಂಗ್ರೆಸ್‍ನ ಅಧ್ಯಕ್ಷನೋ ಇನ್ನೇನೋ ಆಗಲಿ ನಮಗೇನೂ ಟೆನ್ಷನ್ ಇಲ್ಲ. ಆದರೆ ಒಂದು ದೇಶವನ್ನು ಲೂಟಿ ಹೊಡೆಯಲೆಂದು ಗಾಂಧಿಯ ಹೆಸರಲ್ಲಿ, ಕಾಂಗ್ರೆಸ್ ಎಂಬ ಪಕ್ಷವನ್ನು ಮುಂದಿಟ್ಟುಕೊಂಡು ಜನರನ್ನು ಮೋಸಗೊಳಿಸಿದ್ದು ಸಾಕು. ನಿಮ್ಮ ಆಟ ಇನ್ನೆಂದಿಗೂ ನಡೆಯಲು ಸಾಧ್ಯವಿಲ್ಲ. ನೀವೇ ಕಾಂಗ್ರೆಸ್‍ನ ಕೊನೆಯ ಅಧ್ಯಕ್ಷರಾಗಿಬಿಡಿ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ದೇಶದಿಂದಲೇ ಮೂಲೋತ್ಪಾಟನೆ ಆಗಲಿ…

-ಆಶ್ರಫ್ ಅಬ್ಬಾಸ್

Tags

Related Articles

Close