ಕಾಂಗ್ರೆಸ್… ಭಾರತದಲ್ಲಿರುವ ರಾಷ್ಟ್ರೀಯ ಪಕ್ಷಗಳಲ್ಲಿ ಒಂದು. ಸಧ್ಯ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷ. ಕಳೆದ ನಾಲ್ಕೂವರೆ ವರ್ಷಗಳಿಂದ ಕರ್ನಾಟಕವನ್ನು ಗುಡಿಸಿ ಗುಂಡಾಂತರ ಮಾಡಿ ಈಗ ಮತ್ತೆ ಬಂದಿರುವ ವಿಧಾನ ಸಭಾ ಚುನಾವಣೆಗೆ ಸಕಲ ರೀತಿಯಲ್ಲೂ, ವಿವಿದ ಭಂಗಿಗಳಲ್ಲೂ, ದೇಶದ ಅತ್ಯುನ್ನತ ನಾಟಕ ತಂಡಗಳೇ ನಾಚುವಂತೆ ದಿನಕ್ಕೊಂದು ತೆರನಾದ ನಾಟಕಗಳನ್ನು ನಡೆಸುತ್ತಾ ಬರುತ್ತಿದೆ ಕಾಂಗ್ರೆಸ್ ಪಕ್ಷ. ಅದೂ ಹಲವಾರು ತಂಡಗಳಲ್ಲಿ.
ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮ ನಡೆಸಿದ್ದಾಯ್ತು. ಆ ಕಾರ್ಯಕ್ರಮದಲ್ಲಿ, ಕೇರಳದಲ್ಲಿ ರೇಪ್ ಮಾಡಿ ಕರ್ನಾಟಕಕ್ಕೆ ಓಡಿ ಬಂದು, ಇಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ವೇಣುಗೋಪಾಲ್ ತಂಡದಿಂದ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮ ನಡೆಸಿಯಾಯ್ತು. ಆ ಕಾರ್ಯಕ್ರಮಕ್ಕೆ ಜನತೆ ಯಾವ ರೀತಿ ತಮ್ಮ ಆಕ್ರೋಷವನ್ನು ವ್ಯಕ್ತಪಡಿಸಿದ್ದಾರೆಂದರೆ, “ನಿಮಗೆ ಓಟು ಕೇಳುವ ಯಾವುದೇ ಹಕ್ಕಿಲ್ಲ, ರಾಜ್ಯವನ್ನು ಕೊಳ್ಳೆ ಹೊಡೆದ, ಅದೆಷ್ಟೋ ಜೀವಗಳನ್ನು ಬಲಿತೆಗೆದ ನರ ಭಕ್ಷಕರು ನೀವು. ನಮ್ಮ ಮನೆ ಬಾಗಿಲಿಗೆ ಬಂದರೆ ನಿಮಗೆ ಚಪ್ಪಲಿ ಎತ್ತಬೇಕಾದೀತು”, ಎಂದು ಎಚ್ಚರಿಕೆ ನೀಡಿದ್ದಾರೆ.
ಅಷ್ಟೇ ಯಾಕೆ. ಇತ್ತೀಚೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ನೇತೃತ್ವದಲ್ಲಿ ನಡೆದಿದ್ದ “ಮನೆ ಮನೆಗೆ ಕಾಂಗ್ರೆಸ್” ಕಾರ್ಯಕ್ರಮದಲ್ಲಿ ಸ್ವತಃ
ವೇಣುಗೋಪಾಲ್ ಎದುರಿಗೇ ಕಾಂಗ್ರೇಸ್ ನ ಎರಡು ಬಣಗಳೇ ಕುರ್ಚಿ ಮುರಿಯುವವರೆಗೂ ಹೊಡೆದಾಡಿಕೊಂಡು ತಮ್ಮ ಅರಾಜಕತೆಯನ್ನು ಜಗತ್ತಿಗೆ ತೋರಿಸಿದ್ದಾರೆ. ಈ ಮೂಲಕ, “ನಾವು ಇಷ್ಟು ವರ್ಷ ಮಾಡಿದ್ದು ಇದನ್ನೇ, ಇನ್ನು ಮುಂದೆಯೂ ನೀವು ಅವಕಾಶ ಕೊಟ್ಟರೆ ಇದನ್ನೇ ಮುಂದುವರೆಸಿಕೊಂಡು ಹೋಗುತ್ತೇವೆ” ಎಂದು ಜನತೆಗೆ ಸಂದೇಶವನ್ನು ನೀಡುತ್ತಿದ್ದಾರೆ.
ಸಾಲು ಸಾಲು ಹಗರಣಗಳನ್ನು ಮೈಯ್ಯಲ್ಲಿ ಮೆತ್ತಿಕೊಂಡರೂ, ಅಧಿಕಾರಕ್ಕೆ ಬಂದ ನಂತರ ನಡೆದ ಲೋಕಸಭೆ ಹಾಗೂ ವಿವಿದ ಪಂಚಾಯತ್‍ಗಳ ಸಹಿತ ನಡೆದ
ಅನೇಕ ಚುನಾವಣೆಗಳಲ್ಲಿ ಮಖಾಡೆ ಮಲಗಿದರೂ ಬುದ್ಧಿ ಬರದ ಈ ಕಾಂಗ್ರೆಸ್ಸಿಗರೂ, ಇನ್ನೂ ಅದೇನು ಸಾಧನೆ ಮಾಡಲು ಹೊರಟಿದ್ದಾರೋ ಗೊತ್ತಿಲ್ಲ.
ಈಗ ಕಾಂಗ್ರೆಸ್‍ನ ಮಹಿಳಾ ನಾಟಕ ತಂಡದಿಂದಲೂ ಅದ್ಭುತವಾದ ನಾಟಕಗಳು ನಡೆಯುತ್ತಿದೆ. ನಾವೂ ಏನು ಕಡಿಮೆ ಇಲ್ಲ ಎಂಬಂತೆ ನಾಟಕವನ್ನು
ಶುರುವಿಟ್ಟುಕೊಂಡಿದ್ದಾರೆ. ಅದೂ ಏನು ಗೊತ್ತಾ…!
ಅದು “ಅರಶಿನ-ಕುಂಕುಮ” ಕಾರ್ಯಕ್ರಮವಂತೆ. ಆವರೆಗೆ ಪಾಶ್ಚಿಮಾತ್ಯ ಸಂಸ್ಕøತಿಯಿಂದ ತುಂಬಿ ತುಳುಕಿಕೊಂಡು, ಚುನಾವಣೆ ಹತ್ತಿರ ಬಂದಾಕ್ಷಣ ಬಿಜೆಪಿಗೆ
ತಿರುಗೇಟು ನೀಡಲು, ಅಪ್ಪಟ ಮಹಾಲಕ್ಷ್ಮಿಯಂತೆ ಪೋಸು ಕೊಟ್ಟು ರಾಜ್ಯದ ಜನತೆಗೆ ಅರಶಿನ-ಕುಂಕುಮ ಹಚ್ಚಿ ಮೋಸಗೊಳಿಸಲು ಹೊಟಿದ್ದಾರೆ. ಆದರೆ ಜನತೆಗೆ ಆ ಸೀರೆಯೊಳಗಿರುವ ರಾಕ್ಷಸೀ ಮುಖವಾಡ ಮಾತ್ರ ಗೊತ್ತಿದೆ ಬಿಡಿ.
ಸೀರೆ ಉಟ್ಟುಕೊಂಡು, ಅರಶಿನ-ಕುಂಕುಮ ಹಚ್ಚಿಕೊಂಡು ಜನರತ್ತ ತೆರಳುತ್ತಿರುವ ಕಾಂಗ್ರೆಸ್ಸಿನ ಮಾತೆಯರೇ… ನಾವೊಬ್ಬ ಈ ದೇಶದ ಪ್ರಜೆಯಾಗಿ, ಅಷ್ಟೇ ಹಿಂದು ಧರ್ಮವನ್ನು ಪೂಜಿಸುವ ವ್ಯಕ್ತಿಯಾಗಿ, ನಿಮ್ಮನ್ನು ನಮ್ಮ ತಾಯಿಯೆಂದು ಪ್ರೀತಿಯಿಂದ ಸ್ವಾಗತಿಸುತ್ತೇವೆ. ಆದರೆ ನಾವು ಕೇಳುವ ಕೆಲವು ಪ್ರಶ್ನೆಗಳಿಗೆ ಉತ್ತರಿಸುವಿರಾ..?
* ಕೇವಲ ಗೋರಕ್ಷಣೆಯ ಕೆಲಸ ಮಾಡುತ್ತಿದ್ದ, ಹಿಂದೂ ಹೆಣ್ಣು ಮಕ್ಕಳ ರಕ್ಷಣೆಗೆ ದಾವಿಸುತ್ತಿದ್ದ ಎನ್ನುವ ಕಾರಣಕ್ಕೆ ತನ್ನ ತಂದೆಯ ಎದುರೇ ಆ ಪಾಪಿಗಳು ಕೊಚ್ಚಿ ಕೊಚ್ಚಿ ಕೊಂದರಲ್ಲ. ಆ ಉಗ್ರರಿಗೆ ನಿಮ್ಮದೇ ಕಾಂಗ್ರೆಸ್ ಸರ್ಕಾರ “ಅಭಯ” ಹಸ್ತ ನೀಡಿತ್ತಲ್ಲಾ… ಅದೇ ಮೂಡುಬಿದಿರಿಯ ಪ್ರಶಾಂತ್ ಪೂಜಾರಿಯ ಸಹೋದರಿಯರಿಗೆ “ಅರಶಿನ-ಕುಂಕುಮ” ನೀಡುವಿರಾ..?
* ಆರ್‍ಎಸ್‍ಎಸ್ ಗಣವೇಷ ಧರಿಸಿ ಸಂಘದ ಪಥಸಂಚಲನಕ್ಕೆ ತೆರಳಿ ವಾಪಾಸ್ ಬರುವಾಗ ಪಿಎಫ್‍ಐ ಉಗ್ರರು ಕರುಣೆಯೇ ಇಲ್ಲದೆ ಕೊಂದೇ ಬಿಟ್ಟಾಗ ನಿಮ್ಮ ಸರ್ಕಾರ ಆ ಉಗ್ರರನ್ನು ಮತ್ತಷ್ಟು ಬೆಂಬಲ ನೀಡಿ, ಮತ್ತಷ್ಟು ಬೆಳೆಯಲು ಬಿಟ್ಟಿತ್ತಲ್ಲಾ… ಅದೇ ಬೆಂಗಳೂರಿನ ರುದ್ರೇಶ್ ನ ಹೆಂಡತಿಗೆ “ಅರಶಿನ-ಕುಂಕುಮ”ವನ್ನು ಹಚ್ಚುವಿರಾ..?
* ನೀವು ಮಾಡುವ ಅನ್ಯಾಯವನ್ನು ತಾಳದೆ, ತಾನು ಸಾಲ ಮಾಡಿ ಬೆಳೆದ ಬೆಳೆಯು ನಾಶವಾಗಿದ್ದನ್ನು ಕಂಡ ರೈತ ಸರ್ಕಾರದ ನೆರವನ್ನು ಕೇಳಿದಾಗ ಕೈಬಿಟ್ಟಿದ್ದೀರಲ್ಲಾ. ನಿಮ್ಮ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿರುವ ನೂರಾರು ಮಾಂಗಲ್ಯವನ್ನು ಕಳೆದುಕೊಂಡ ರೈತರ ಹೆಂಡತಿಯರಿಗೆ, ಮಕ್ಕಳಿಗೆ, ಸಹೋದರಿಯರಿಗೆ ನಿಮ್ಮ ಕಾಂಗ್ರೆಸ್ “ಅರಶಿನ-ಕುಂಕುಮ” ಹಚ್ಚುತ್ತಾ..?
* ದೇಶದ್ರೋಹಿ, ಲಕ್ಷಾಂತರ ಹಿಂದೂ, ಕ್ರೈಸ್ತರ, ಕೊಲೆಗಳನ್ನು ಮಾಡಿರುವ ನರಹಂತಕ, ಅತ್ಯಾಚಾರಿ ಟಿಪ್ಪುವಿನ ಜಯಂತಿಯನ್ನು ಅಷ್ಟೊಂದು ವಿರೋಧದ ನಡುವೆಯೂ ಮಾಡಿದಾಗ, ಅದನ್ನು ವಿರೋಧಿಸಿದರು ಎಂಬ ಕಾರಣಕ್ಕಾಗಿ ಪಾಪ ಆ ಮೈಸೂರಿನ ಕುಟ್ಟಪ್ಪರನ್ನು ಬೆನ್ನ ಹಿಂದೆ ಬಂದು ಕೊಂದು ಬಿಟ್ಟಿದಿರಲ್ಲಾ… ಆ ಕುಟ್ಟಪ್ಪರ ಮಗಳಿಗೆ “ಅರಶಿನ-ಕುಂಕುಮ” ಹಚ್ಚುವಿರಾ..?
* ಬಿಜೆಪಿ ಪಕ್ಷದ ಮೇಲಿನ ಸಿಟ್ಟಿಗೆ, ಸೇಡಿಗೆ ಸಂಘದ ಸಾಮಾನ್ಯ ಕಾರ್ಯಕರ್ತನಾಗಿದ್ದ ಬಂಟ್ವಾಳದ ಶರತ್ ಮಡಿವಾಳನನ್ನು ಕೊಂದಿದಿರಲ್ಲಾ… ಅವನ ತಾಯಿಯ ಬಳಿಗೆ ಹೋಗಿ “ಅರಶಿನ-ಕುಂಕುಮ” ಹಚ್ಚುವಿರಾ…?
* ಜನರ ಸೇವೆಯೇ ಜನಾರ್ಧನನ ಸೇವೆ ಎಂದು ತಿಳಿದು ತನ್ನ ಕರ್ತವ್ಯವನ್ನು ನಿಷ್ಟೆಯಿಂದ ಮಾಡಿ ನೀವೆ ಬೆಳೆಸಿದ್ದ ರೌಡಿಗಳ ಗುಂಡಿನೇಟಿಗೆ ಬಲಿಯಾಗಿ ಈ ಮಣ್ಣಿಗಾಗಿ ಪ್ರಾಣತ್ಯಾಗ ಮಾಡಿದ್ದ, ದಿಟ್ಟ ಪೊಲೀಸ್ ಆಫೀಸರ್ ಮಲ್ಲಿಕಾರ್ಜುನ ಬಂಡೆಯ ಪತ್ನಿಗೆ “ಅರಶಿನ-ಕುಂಕುಮ” ಹಚ್ಚುವಿರಾ…?
* ನನ್ನ ಸಾವಿಗೆ ಕಾಂಗ್ರೆಸ್ ಸರ್ಕಾರದ ಸಚಿವರೇ ಕಾರಣ ಎಂದು ಹೇಳಿಕೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ನಿಷ್ಟಾವಂತ ಪೊಲೀಸ್ ಅಧಿಕಾರಿ, ಡಿವೈಎಸ್‍ಪಿ
ಗಣಪತಿಯವರ ಪತ್ನಿಯ ಬಳಿಗೆ ತೆರಳಿ “ಅರಶಿನ-ಕುಂಕುಮ” ಹಚ್ಚುವಿರಾ..?
* ಮರಳು ಮಾಫಿಯಾ ಸಹಿತ ಅನೇಕ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಿದ್ದ ದಕ್ಷ ಜಿಲ್ಲಾಧಿಕಾರಿ ಡಿ.ಕೆ.ರವಿಯ ಹತ್ಯೆಗೆ ಕಾರಣರಾದಿರಲ್ಲಾ… ಕಣ್ಣೀರ ಬದುಕಿನಲ್ಲೇ ಬದುಕುತ್ತಿರುವ ಆತನ ಪತ್ನಿಗೆ “ಅರಶಿನ-ಕುಂಕುಮ” ಹಚ್ಚಲು ನಿಮ್ಮಿಂದ ಸಾಧ್ಯನಾ..?
ಇನ್ನೂ ಮುಗಿದಿಲ್ಲ ನಿಮ್ಮ ಕಾಂಗ್ರೆಸ್ ಪಕ್ಷದ ಅನಾಚಾರ. ಅದು ಹೇಳತೀರದಷ್ಟಿದೆ. ನೀವು “ಅರಶಿನ-ಕುಂಕುಮ”ವನ್ನು ಹಿಡಿದುಕೊಂಡು ಓಟು ಪಡೆಯಲು
ಹೊರಟಿದ್ದೀರೋ ಅದೇ “ಅರಶಿನ-ಕುಂಕುಮ”ವನ್ನು ಧರ್ಮಕ್ಕಾಗಿ ಹಚ್ಚಿಕೊಂಡವರನ್ನು ವಿರೋಧಿಸಿದ ಬುದ್ಧಿ ಇಲ್ಲದ ಲದ್ದಿಜೀವಿಗಳಿಗೆ ಪ್ರಶಸ್ತಿಗಳ ಸುರಿಮಳೆಯನ್ನೇ
ಕೊಟ್ಟಿದಿರಲ್ಲಾ… ನಿಮಗೆ “ಅರಶಿನ-ಕುಂಕುಮ”ವನ್ನು ಹಚ್ಚುವ ಯೋಗ್ಯತೆ ಇದಿಯಾ..?
ಸನಾತನ ಧರ್ಮ ಜಗತ್ತಿನಲ್ಲೇ ಶ್ರೇಷ್ಟ ಧರ್ಮ. ಜಗತ್ತಿನ ಅದೆಷ್ಟೋ ಧರ್ಮದವರು ನಮ್ಮ ಈ ಸನಾತನ ಧರ್ಮವನ್ನು ಒಪ್ಪಿ ಅಪ್ಪಿಕೊಂಡಿದ್ದಾರೆ. ಇಂದಿಗೂ ಅದನ್ನು
ಪೂಜಿಸುತ್ತಿದ್ದಾರೆ. ಅನೇಕ ವಿದೇಶಿಗರೂ ಈ ಧರ್ಮವನ್ನೇ ಜೀವಿಸಿ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಆದರೆ ನಿಮ್ಮ ಕಾಂಗ್ರೆಸ್ ಪಕ್ಷ ಸನಾತನ ಧರ್ಮ ಪ್ರಚಾರ
ಮಾಡಿದವರನ್ನು ಕೋಮುವಾದಿಗಳೆಂದು ಬಿಂಬಿಸಿ ಅವರ ಮೇಲೆ ಪ್ರಹಾರ ಮಾಡಿದವರಿಗೆ ನಾಯಕನ ಪಟ್ಟ ಕಟ್ಟಿ ಕೊಟ್ಟಿದಿರಲ್ಲಾ… ನಿಮಗೆ “ಅರಶಿನ-ಕುಂಕುಮ”
ಕೊಡುವ ಯೋಗ್ಯತೆ ಇದಿಯಾ..?”
ಓಟಿಗಾಗಿ ದೇಶ ತುಂಡರಿಸಿದ ನಿಮ್ಮ ಪಕ್ಷ, ಓಟಿಗಾಗಿ ಕೊಲೆಗಳನ್ನು ಮಾಡಿದ ನಿಮ್ಮ ಪಕ್ಷ, ಓಟಿಗಾಗಿ ಅನೇಕ ದೇಶ ಭಕ್ತರನ್ನು ಜೈಲಿಗೆ ತಳ್ಳಿದ ನಿಮ್ಮ ಪಕ್ಷ,
ಓಟಿಗಾಗಿ ಜೈ ಮಹಾರಾಷ್ಟ್ರ ಎಂದ ನಿಮ್ಮ ಪಕ್ಷ, ಓಟಿಗಾಗಿ ಪ್ರಧಾನಿಯವರಿಗೆ ಬಾಯಿಗೆ ಬಂದ ಹಾಗೆ ಬೊಗಳುತ್ತಿರುವ ನಿಮ್ಮ ಪಕ್ಷ, ಅದೆಷ್ಟೇ ಪ್ರತಿಭಟನೆಯನ್ನೂ
ಮಾಡಿದರೂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಒಂದು ಪೈಸೆಯನ್ನೂ ಏರಿಸದ ನಿಮ್ಮ ಪಕ್ಷ… ನಿಮಗೆ “ಅರಶಿನ-ಕುಂಕುಮ” ನೀಡಲು ನೈತಿಕತೆ ಇದೆಯೇ…?
ಒಂದಂತೂ ನೆಪಿಟ್ಟುಕೊಳ್ಳಿ, ನೀವು ಯಾವ ರೀತಿಯ ನಾಟಕಗಳನ್ನು ನಟಿಸುತ್ತೀರೋ ಅದನ್ನು ಶತ ಮೂರ್ಖನೂ ನಂಬಲ್ಲ. ಯಾಕೆಂದರೆ ಕಾಂಗ್ರೆಸ್ ಎಂಬ ಪಕ್ಷ
ದೇಶದಲ್ಲಿ ಯಾವ ರೀತಿ ಜನತೆಯನ್ನು ನೋಡಿಕೊಂಡಿದೆ ಎಂದು ದೇಶದ ಸಜ್ಜನರು ಗಮನಿಸುತ್ತಿದ್ದಾರೆ. ದಿನಕ್ಕೊಂದು ನಾಟಕಗಳನ್ನು ಮಾಡಿ ಜನತೆಗೆ ಮೋಸ
ಮಾಡುವ ಬದಲು ಅಭಿವೃದ್ಧಿಯಲ್ಲಿ, ದೇಶಸೇವೆಯಲ್ಲಿ ನಿಮ್ಮ ಸಾಧನೆಯನ್ನು ತೋರಿಸಿ. ಇಲ್ಲವಾದರೆ ಮುಂದಿನ ಚುನಾವಣೆಯಲ್ಲಿ ಕನಿಷ್ಠ 30 ಸೀಟುಗಳನ್ನೂ ಗೆಲ್ಲಲು ಕಷ್ಟವಾಗಬಹುದು… ಎಚ್ಚರಿಕೆ…
-ಸುನಿಲ್