ಪ್ರಚಲಿತ

ಕಾಂಗ್ರೆಸ್ ಗೆ ಬರ್ನಾಲ್ ಭಾಗ್ಯ! ಮೋದಿಯವರನ್ನು ಟೀಕಿಸಿದ್ದಕ್ಕಾಗಿ ರಾಹುಲ್ ಗಾಂಧಿ ಕ್ಷಮೆಯಾಚಿಸಿದ್ದಲ್ಲದೇ, ಪ್ರಧಾನಿಯವರನ್ನು ದೇವರಿಗೆ ಹೋಲಿಸಿದ್ದು ಹೀಗೆ!

ತಪ್ಪಾಯ್ತು ನಂದೂ ಸ್ವಾಮಿ! ನಾನೂ ಮನುಷ್ಯ!

ಸದಾ ಒಂದಲ್ಲ ಒಂದು ತಪ್ಪು ಹೇಳಿಕೆ ನೀಡಿ ಪೇಚಿಗೆ ಸಿಲುಕುವುದರಲ್ಲಿ ಹಾಸುಹೊಕ್ಕಾಗಿದ್ದ ರಾಹುಲ್ ಗಾಂಧಿ ಅವರ ಟ್ವೀಟ್ ನಲ್ಲಿರುವ ತಪ್ಪನ್ನು ಟ್ವೀಟಿಗರು ಟ್ರೋಲ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟಾಂಗ್ ನೀಡಿ, ತನ್ನ ತಪ್ಪಾದ ಟ್ವೀಟ್‍ಗೆ ಕ್ಷಮೆಯಾಚಿಸಿದ್ದಾರೆ.

ರಾಹುಲ್ ಟ್ವೀಟ್ ನಲ್ಲಿ ಏನಿದೆ?

“ಬಿಜೆಪಿಯ ನನ್ನ ಎಲ್ಲಾ ಗೆಳೆಯರೇ, ನಾನು ನರೇಂದ್ರಭಾಯ್ ಹಾಗೆ ಅಲ್ಲ, ನಾನೊಬ್ಬ ಮನುಷ್ಯ. ನಾವು ತಪ್ಪುಗಳನ್ನು ಮಾಡುತ್ತಲೇ ಇರುತ್ತೇವೆ,ಆ ತಪ್ಪುಗಳಿಂದಲೇ ಬದುಕು ಆಸಕ್ತಿದಾಯಕವಾಗಿರುತ್ತದೆ. ನನ್ನ ತಪ್ಪುಗಳನ್ನು ಎತ್ತಿ ತೋರಿಸಿದ್ದೀರಿ ಅದಕ್ಕೆ ಧನ್ಯವಾದಗಳು. ಇನ್ನು ಮುಂದೆಯೂ ನನ್ನ ತಪ್ಪುಗಳನ್ನು ಎತ್ತಿ ತೋರಿಸುವ ಕೆಲಸ ಮುಂದುವರಿಸಿ. ಇದು ನಿಜಕ್ಕೂ ನನಗೆ ತುಂಬಾ ಅನುಕೂಲವಾಗಲಿದೆ. ಲವ್ ಯೂ ಆಲ್”.

ರಾಹುಲ್ ಟ್ವೀಟ್ ನಲ್ಲಾಗಿದ್ದ ತಪ್ಪೇನು?

ಮಂಗಳವಾರ ಐಎಎಫ್ ಮಾರ್ಷಲ್ ಅರ್ಜನ್ ಸಿಂಗ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ರಾಹುಲ್ ಟ್ವೀಟ್ ಮಾಡಿದ್ದು ಅದರಲ್ಲಿ ‘ಏರ್ ಮಾರ್ಷಲ್’ ಎಂದು ಬರೆದಿದ್ದರು. ಈ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿತ್ತು. ಯಾರು ಏನೆಂದು ತಿಳಿದು ಟ್ವೀಟ್ ಮಾಡಿ ಎಂದು ಟ್ರೋಲ್ ಮಾಡಿದ್ದರು.

ಕಡೆಗೂ ರಾಹುಲ್ ಗಾಂಧಿ ತನ್ನನ್ನು ಒಪ್ಪಿಕೊಂಡು ಬಿಟ್ಟು ನಾನೊಬ್ಬ ಮನುಷ್ಯ ಮೋದಿ ಒಬ್ಬರು ದೇವರು ಎನ್ನುವುದನ್ನು ರಾಹುಲ್ ಗಾಂಧಿಯ ಬಾಯಿಯಿಂದಲೇ ಹೇಳುವಂತಾಯಿತು…. ಕಾಂಗ್ರೆಸ್ ಪಕ್ಷದವರು ಯಾವಾಗಲೂ ಸುಳ್ಳನ್ನು ಹೇಳುತ್ತಲೇ ಬಂದಿದ್ದಾರೆ..ಅದರಲ್ಲೇ ನಾವು ಜೀವನ ಸಾಗಿಸುತ್ತಿದ್ದೇವೆ ಎನ್ನುವುದನ್ನು ಸ್ವತಃ ತಾವೇ ಒಪ್ಪಿಕೊಂಡಿದ್ದಾರೆ.. ದೇವರು ಯಾವಾಗಲೂ ಸತ್ಯವನ್ನೇ ಹೇಳುತ್ತಾರೆ ಯಾವ ತಪ್ಪುನ್ನೂ ಮಾಡುವುದಿಲ್ಲ ಎನ್ನುವುದಕ್ಕೆ ಸಾಕ್ಷಿ ಮೋದಿಯವರೇ ಎನ್ನುವುದನ್ನು ಇಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ.

ಅಂದು ಅಂಬೇಡ್ಕರ್‍ಗೆ ಇಡೀ ಕಾಂಗ್ರೆಸ್ಸಿಗರೇ ಅವಮಾನ ಮಾಡಿ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸದಂತೆ ಕುತಂತ್ರ ಮಾಡಿ ಮೂಲೆ ಗುಂಪು ಮಾಡಿದ್ದರು.. ಆದರೆ ಇಂದು ಅದೇ ಅಂಬೇಡ್ಕರ್ ಹೆಸರು ಹೇಳಿ ವೋಟ್‍ಗಾಗಿ ಭಿಕ್ಷೆ ಬೇಡುತ್ತಿದ್ದಾರೆ…ಅಂದು ಅಂಬೇಡ್ಕರ್‍ಗೆ ಮಾಡಿದ ಅವಮಾನಕ್ಕೆ ಯಾಕೆ ರಾಹುಲ್ ಗಾಂಧಿ ಕ್ಷಮೆ ಕೇಳುತ್ತಿಲ್ಲ? ಕೇವಲ ಒಂದು ಬಾರಿ ಅಲ್ಲ ಪದೇ ಪದೇ ಇಂತಹ ಅವಾಂತರಗಳನ್ನು ಮಾಡುತ್ತನೇ ಬರುತ್ತಿದ್ದಾರೆ..

ಅಯೋದ್ಯೆ ವಿಚಾರದಲ್ಲಿ ಇಡೀ ಕಾಂಗ್ರೆಸ್ ಸರಕಾರ ವಿರೋಧ ವ್ಯಕ್ತ ಪಡಿಸುತ್ತಿದೆ.. ಒಂದು ಕಡೆಯಲ್ಲಿ ರಾಹುಲ್ ಗಾಂಧಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಹಿಂದೂಗಳನ್ನು ಮೆಚ್ಚಿಸಲು ಆಗಾಗ ಹಿಂದೂ ದೇವಸ್ಥಾನಗಳಿಗೆ ಭೇಟಿ ಕೊಡುತ್ತಿದ್ದಾರೆ.. ಆದರೆ ಅದೇ ಹಿಂದೂಗಳ ಅಯೋಧ್ಯಾ ರಾಮ ಮಂದಿರಕ್ಕೆ ಯಾಕೆ ಬೆಂಬಲ ನೀಡುತ್ತಿಲ್ಲ…ಅಯೋಧ್ಯಕ್ಕೆ ಈ ರೀತಿ ವಿರೋಧ ವ್ಯಕ್ತಪಡಿಸುತ್ತಿರುವಾಗ ಯಾಕೆ ಈಗ ಕ್ಷಮೆ ಕೇಳುತ್ತಿಲ್ಲ…

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೂ ವಿವಾದಕ್ಕೂ ಅವಿನಾಭಾವ ಸಂಬಂಧ ಇರುವಂತಿದೆ. ಏಕೆಂದರೆ ಏನೇ ಮಾಡಿದರೂ ಅಥವಾ ಏನೋ ಮಾಡಲು ಹೋಗಿ ಮುಜುಗರಕ್ಕೆ ಈಡಾಗುತ್ತಿದ್ದಾರೆ. ಇತ್ತೀಚೆಗೆ ಸೋಮನಾಥ್ ದೇಗುಲಕ್ಕೆ ಭೇಟಿ ನೀಡಿ ಹಿಂದೂಯೇತರ ಎನಿಸಿಕೊಂಡಿದ್ದ ರಾಹುಲ್ ಮುಜುಗರಕ್ಕೀಡಾಗಿದ್ದರು. ಈ ಬಾರಿ ಖುದ್ದಾಗಿ ರಾಹುಲ್ ಗಾಂಧಿಯೇ ಮುಖಭಂಗಕ್ಕೀಡಾಗಿದ್ದರು.

ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಭಾರತಕ್ಕೆ ಆಗಮಿಸಿದ್ದರು. ಅವರನ್ನು ಭೇಟಿ ಮಾಡಿ ರಾಹುಲ್ ಗಾಂಧಿ ಮಾತುಕತೆ ನಡೆಸಿದ್ದರು.
ನಂತರ ಟ್ವಿಟರ್ ಖಾತೆಯಲ್ಲಿ ಈ ಚಿತ್ರವನ್ನು ಹಾಕಿಕೊಂಡಿದ್ದ ರಾಹುಲ್ ಗಾಂಧಿ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಜತೆ ಮಾತುಕತೆ ನಡೆಸಿದೆ ಎಂದು
ಬರೆದುಕೊಂಡಿದ್ದರು. ಅಧ್ಯಕ್ಷ ಬರಾಕ್ ಒಬಾಮಾ ಎಂದು ಬರೆದುಕೊಂಡಿರುವುದು ಟ್ರೋಲ್‍ಗೆ ಕಾರಣವಾಗಿತ್ತು. ಆದರೆ ಅಮೆರಿಕದಲ್ಲಿ ಎಲ್ಲ ಮಾಜಿ ಅಧ್ಯಕ್ಷರಿಗೂ ಮಿ. ಪ್ರೆಸಿಡೆಂಟ್ ಎಂದೇ ನಮೂದಿಸಲಾಗುತ್ತದೆ ಎಂದು ಹೇಳಲಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು.

ಇತ್ತೀಚೆಗೆ ಟ್ವಿಟರ್‍ಲ್ಲಿ ರಾಹುಲ್ ಗಾಂಧಿ ಸಕ್ರಿಯವಾಗಿರೋದರ ಕುರಿತು ಭಾರೀ ಚರ್ಚೆಗಳು ನಡೆಯುತ್ತಿವೆ. ತನಗಾಗಿ ನಾಯಿ ಟ್ವೀಟ್ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಟ್ವಿಟರ್ ಲ್ಲಿ ಪೆÇಸ್ಟ್ ಹಾಕಿದ ಪೆÇೀಸ್ಟ್ ಕೂಡಾ ವೈರಲ್ ಆಗಿತ್ತು ಇದು ಎಲ್ಲರಿಗೂ ತಿಳಿದ ವಿಷಯ.. ಇವರು ಏನೇ ಮಾಡೋಕೆ ಹೋದ್ರೋ ವಿವಾದ ಮಾಡಿಯೇ ಬರುತ್ತಾರಲ್ಲ ಇದರ ಬಗ್ಗೆ ನಮಗೆ ಅವರಿವಾಗುತ್ತಲ್ಲ ರಾಹುಲ್ ಗಾಂಧಿಯವರೆ!..ಇದಕ್ಕಿಂತ ಮುಂಚೆ ನಿಮ್ಮನ್ನು ಪಪ್ಪು ಎಂದು ಹೆಸರಿಟ್ಟಿದ್ದು ನಿಜವಾಗಿಯೂ ಸರಿಯಾಗಿತ್ತು ಬಿಡಿ!

ತಮ್ಮ “ಪ್ರತಿನಿತ್ಯ ಬಿಜೆಪಿಗೊಂದು ಪ್ರಶ್ನೆ”ಯ ಇಂದಿನ ಅವತರಣಿಕೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಮೂಲ ಗಣಿತದಲ್ಲಿ ತಪ್ಪೆಸಗಿದ್ದರು. ಬಿಜೆಪಿ ಕೇವಲ ಸಿರಿವಂತರಿಗಾಗಿಯೇ ಸರಕಾರ ರಚಿಸಿದೆಯೇ ಎಂದು ರಾಹುಲ್ ಪ್ರಶ್ನಿಸಿದ್ದರು. ಇದನ್ನು ಸಮರ್ಥಿಸಲು ಅಗತ್ಯ ವಸ್ತುಗಳ ಬೆಲೆಯೇರಿಕೆಯನ್ನು ಪ್ರಸ್ತಾಪಿಸಿದ್ದಾರೆ. ಇದೇ ನಿಟ್ಟಿನಲ್ಲಿ ಗ್ಯಾಸ್ ಸಿಲಿಂಡರ್‍ಗಳು, ಬೇಳೆ, ಟೊಮ್ಯಾಟೋ, ಈರುಳ್ಳಿ, ಹಾಲು ಹಾಗೂ ಡೀಸೆಲ್‍ಗಳ ಬೆಲೆಯೇರಿಕೆ ಕುರಿತು ರಾಹುಲ್ ಉಲ್ಲೇಖಿಸಿದ್ದರು.

ಇದೇ ಪಟ್ಟಿಯಲ್ಲಿರುವ ಪ್ರತಿಯೊಂದು ಸರಕಿನ ಬೆಲೆಯನ್ನು 100 ಅಂಶಗಳ ಮಟ್ಟಿಗೆ ಏರಿಕೆ ಮಾಡಿ ತೋರಲಾಗಿದೆ. ಉದಾಹರಣೆಗೆ ಬೇಳೆಯ ಬೆಲೆ ಕಿಲೋಗೆ 45ರುನಿಂದ 80ರುಗೆ ಏರಿಕೆಯಾಗಿದೆ. ಲೆಕ್ಕಾಚಾರ ಪ್ರಕಾರ ಇಲ್ಲಿ ಶೇ77 ರಷ್ಟು ಏರಿಕೆ ಕಂಡುಬಂದಿದ್ದರೆ ರಾಹುಲ್ ತಮ್ಮ ಟ್ವೀಟ್‍ನಲ್ಲಿ ಇದನ್ನು ಶೇ 177ರಷ್ಟು ಏರಿಕೆ ಎಂದು ಬರೆದುಕೊಂಡಿದ್ದರು. ಇದೇ ಪಟ್ಟಿಯಲ್ಲಿರುವ ಇನ್ನಿತರ ಸಾಮಗ್ರಿಗಳ ಬೆಲೆ ಏರಿಕೆಯನ್ನು ಶೇ100 ರಷ್ಟು ಹೆಚ್ಚುವರಿಯಾಗಿ ತೋರಲಾಗಿತ್ತು. ಕಳೆದ ಏಳು ದಿನಗಳಿಂದ ರಾಹುಲ್ ಗಾಂಧಿ ಪ್ರಧಾನ ಮಂತ್ರಿ ನರೇಂದ್ರ ಮೋದಿರನ್ನು ಪ್ರಶ್ನಿಸುತ್ತಿದ್ದು ಗುಜರಾತ್‍ನಲ್ಲಿ ಕಳೆದ 22 ವರ್ಷಗಳಿಂದ ಅಧಿಕಾರದಲ್ಲಿರುವ ಬಜೆಪಿ ಸರಕಾರ ನಡೆಸುವಲ್ಲಿ ವಿಫಲವಾಗಿದೆ ಎಂದು ಹೇಳಿದ್ದರು.

“22 ವರ್ಷಗಳ ಬಿಜೆಪಿ ಆಡಳಿತಕ್ಕೆ ಗುಜರಾತ್ ಉತ್ತರ ಕೋರುತ್ತದೆ” ಎಂದು ರಾಹುಲ್ ಪ್ರಧಾನ ಮಂತ್ರಿಯನ್ನು ಪ್ರಶ್ನಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್ “ರಾಹುಲ್ ತಮ್ಮ ಸ್ಕ್ರಿಪ್ಟ್ ರೈಟರ್‍ಅನ್ನು ಬದಲಿಸಿಕೊಳ್ಳಬೇಕಿದೆ. ಕಾಲೇಜು ಮಟ್ಟದ ಕವನಗಳ ರೀತಿಯ ಹೇಳಿಕೆಗಳಿಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ” ಎಂದು ಸಿಂಗ್ ಹೇಳಿದ್ದರು. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಎಡವಟ್ಟು ಮಾಡುತ್ತನೇ ಬಂದಿದ್ದಾರೆ ರಾಹುಲ್!! ಏನೇ ಆಗಲಿ ತುಂಬಾ ತಡವಾಗಿ ಆದರೂ ಪ್ರಧಾನಿ ಮೋದಿಯವರನ್ನು ದೇವರು ಎಂದು ಕರೆಯುತ್ತಾ ತಮ್ಮ ಮಾಡಿದ ಪಾಪವನ್ನು ಕಳೆಯುದಕ್ಕೆ ಈ ರೀತಿಯಾಗಿ ಎಲ್ಲಾ ಹೇಳುತ್ತಿದ್ದಾರೆ…ಅಂತೂ ಕೊನೆಗೂ ರಾಹುಲ್ ಗಾಂಧಿಗೆ ಬುದ್ದಿ ಬಂದಿಗೆ ಬಿಡಿ.!!

-ಪವಿತ್ರ

Tags

Related Articles

Close