ಇಡೀ ಜಗತ್ತಲ್ಲಿ ಸುಪರ್ ಪವರ್ ರಾಷ್ಟ್ರಗಳಾಗಿ ಬೆಳೆದಿರುವುದು ಅಮೇರಿಕಾ ಸಂಯುಕ್ತ ಸಂಸ್ಥಾನ ಮತ್ತು ಚೀನಾ. ನೂರು ವರ್ಷಗಳಲ್ಲಿ ಈ ಎರಡು ರಾಷ್ಟ್ರಗಳು
ಆರ್ಥಿಕವಾಗಿ ಬಲಾಢ್ಯಗೊಂಡು, ಇಡೀ ಜಗತ್ತನ್ನೇ ತನ್ನ ಸುಪರ್ದಿಗೆ ತೆಗೆದುಕೊಳ್ಳುವಷ್ಟು ಮುಂದುವರಿದಿದೆ. ಅಮೇರಿಕಾದಲ್ಲಿ ಜನಸಂಖ್ಯೆ ಕಡಿಮೆ ಇದ್ದರೂ
ಹೊರದೇಶಗಳಿಂದ ಪ್ರತಿಭಾವಂತರನ್ನು ತನ್ನ ದೇಶಕ್ಕೆ ಕರೆಸಿ ತನ್ನ ದೇಶವನ್ನು ಸುಪರ್ ಪವರ್ ರಾಷ್ಟ್ರವನ್ನಾಗಿಸಿತು. ಇನ್ನು ಚೀನಾ ತನ್ನ ದೇಶದಲ್ಲಿರುವ ಅಗಾಧ
ಜನರನ್ನೇ ಸಂಪನ್ಮೂಲವನ್ನಾಗಿಸಿ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಿತು.
ಆದರೆ ಭಾರತದಲ್ಲೇನಾಯಿತು… ಸಾಕಷ್ಟು ಜನಸಂಖ್ಯೆ ಇದೆ. ವಿಸ್ತಾರವಾದ ಪ್ರದೇಶವಿದೆ. ಒಂದು ದೇಶವನ್ನು ಎಷ್ಟು ಎತ್ತರಕ್ಕೆ ಕೊಂಡೊಯ್ಯಬೇಕೂ ಅಷ್ಟೊಂದು ವ್ಯವಸ್ಥೆ ಇದೆ. ಇನ್ನು ಭಾರತದಲ್ಲಿರುವಷ್ಟು ಮಂದಿ ಬುದ್ಧಿವಂತರು ಬೇರೆ ಯಾವ ದೇಶದಲ್ಲಿಯೂ ಕಾಣುವುದಿಲ್ಲ. ಅದಕ್ಕಾಗಿಯೇ ಅಮೇರಿಕಾ ಬೇರೆ ದೇಶದ ಜನರನ್ನು ತನ್ನ ದೇಶದಿಂದ ಅಟ್ಟಿದರೂ ಭಾರತೀಯರನ್ನು ತನ್ನ ದೇಶದಲ್ಲೇ ಉಳಿಸಿಕೊಂಡಿತು. ಒಂದರ್ಥದಲ್ಲಿ ಭಾರತ ಎಂದೋ ಸುಪರ್ ಪವರ್ ರಾಷ್ಟ್ರವಾಗಬೇಕಿತ್ತು ಆದರೆ ಆಗಲೇ ಇಲ್ಲ. ಹಾಗಾದರೆ ಇದಕ್ಕೆಲ್ಲಾ ಅಡ್ಡಗಾಲು ಹಾಕಿದ್ದು ಯಾರು….!???
ಬೇರ್ಯಾರೂ ಅಲ್ಲ… ಅದು `ಕಾಂಗ್ರೆಸ್….’
ಕಾಂಗ್ರೆಸ್ ಈ ದೇಶವನ್ನು ಪ್ರಗತಿಯ ಪಥದತ್ತ ಕೊಂಡೊಯ್ಯುವ ಬದಲು ಈ ದೇಶವನ್ನು ಧರ್ಮ, ಜಾತಿ ಆಧಾರದಲ್ಲಿ ವಿಭಜನೆ ಮಾಡಲು ಆರಂಭಿಸಿತು. ನಮ್ಮ ರಾಷ್ಟ್ರ ನಾಯಕರು ನಮ್ಮನ್ನು ಸಂಪನ್ಮೂಲವಾಗಿ ಬಳಸಿಕೊಂಡಿದ್ದೇ ಇಲ್ಲ, ಬದಲಿಗೆ ಬರೇ ಓಟ್‍ಬ್ಯಾಂಕ್ ಆಗಿ ಮಾರ್ಪಡಿಸಿತು. ಇಂದೂ ಕೂಡಾ ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸಿ ಅವರನ್ನು ಮತಾಂಧರಾಗಿ ಬದಲಿಸಿದೆ. ಜನರನ್ನು ಉದ್ವೇಗಗೊಳಿಸಿ, ಅವರನ್ನು ಮೂರ್ಖರನ್ನಾಗಿಸಿ, ದೇಶವನ್ನು ಕೊಳ್ಳೆಹೊಡೆಯಲಾರಂಭಿಸಿತು. ಜನರನ್ನು ಕುತಂತ್ರಗಳ ಮೂಲಕ ಒಂದು ಸಮುದಾಯದಿಂದ ಮತ್ತೊಂದು ಸಮುದಾಯದ ವಿರುದ್ಧ ಎತ್ತಿಕಟ್ಟಿ ತನ್ನ ವೋಟ್‍ಬ್ಯಾಂಕ್ ಅನ್ನು ಭದ್ರಪಡಿಸುವಲ್ಲೇ ಕಾಲಕಳೆಯುತ್ತಿದೆ.
ಕಾಂಗ್ರೆಸ್ ತನ್ನ ರಾಜಕೀಯ ಉದ್ದೇಶಕ್ಕಾಗಿ ಜನರನ್ನು ಯಾವ ರೀತಿ ಮೂರ್ಖರನ್ನಾಗಿಸಿತು ಎಂಬ ಬಗ್ಗೆ ಉದಾಹರಣೆಗಳನ್ನು ನೋಡೋಣ…
1952 ಚುನಾವಣಾ ಮೋಸ…
1951-52ರಲ್ಲಿ ಸಾರ್ವತ್ರಿಕ ಚುನಾವಣೆ ನಡೆದಾಗ, ಓರಿಸ್ಸಾದ ಕಾಂಗ್ರೆಸಿಗರು ತನ್ನ ಪಕ್ಷಕ್ಕೆ ಓಟ್ ಹಾಕುವಂತೆ ಜನರನ್ನು ಯಾವ ರೀತಿ ಮೋಸ ಮಾಡಿದರೆಂದರೆ,
ಮಹಾತ್ಮಾ ಗಾಂಧಿಯವರ ಆತ್ಮವು ಮತದಾನದ ಪೆಟ್ಟಿಗೆಯೊಳಗಡೆ ಬರುತ್ತೆ. ಆಗ ಗಾಂಧೀಜಿ ಯಾರು ಕಾಂಗ್ರೆಸಿಗೆ ಮತ ಹಾಕುತ್ತಾರೆ, ಯಾರು ಮತ ಹಾಕುವುದಿಲ್ಲ ಎಂದು ಅವರು ನೋಡುತ್ತಾರೆ ಎಂಬ ಸುಳ್ಳನ್ನು ಹರಡಿತು. ಇದನ್ನು ನೋಡಿದ ಅನಕ್ಷರಸ್ಥ ಜನರು ಕಾಂಗ್ರೆಸಿಗೆ ಓಟ್ ಹಾಕಿ ಗೆಲ್ಲುವಂತೆ ಮಾಡಿದರು.
ಅಲ್ಪಸಂಖ್ಯಾತ ಓಟ್ ಬ್ಯಾಂಕ್!!!
ದೇಶದಲ್ಲಿ ಮುಸ್ಲಿಮರನ್ನು ಅಲ್ಪಸಂಖ್ಯಾತರೆಂದು ಬಿಂಬಿಸಲಾಯಿತು. ಆದರೆ ದೇಶದಲ್ಲಿರುವ ಜೈನರು, ಬೌದ್ಧರು, ಸಿಖ್, ಕ್ರೈಸ್ತರು, ಪಾರ್ಸೀಗಳು
ಅಲ್ಪಸಂಖ್ಯಾತರಾಗಿದ್ದಾರೆ. ಆದರೆ ಕಾಂಗ್ರೆಸಿಗರು ನಿಜವಾದ ಅಲ್ಪಸಂಖ್ಯಾತರನ್ನು ಬಿಟ್ಟು ಮುಸ್ಲಿಮರೇ ಅಲ್ಪಸಂಖ್ಯಾತರು ಎಂದು ಜನರ ಮನಸ್ಸಲ್ಲಿ ಮೂಡುವಂತೆ ಮಾಡಿದರು. ಮುಸ್ಲಿಮರು ದೇಶದಲ್ಲಿ ತುಳಿತಕ್ಕೊಳಗಾಗುತ್ತಾರೆ ಎಂದು ಜನರಲ್ಲಿ ಭಾವನೆ ಮೂಡುವಂತೆ ಮಾಡಿದರು.
ತನ್ನದೇ ಮಾಧ್ಯಮಗಳ ಮುಸ್ಲಿಂ ಜನಸಂಖ್ಯೆ ಕಡಿಮೆ ಇದೆ, ಅವರಿಗೆ ಬಹುಸಂಖ್ಯಾತರಿಂದ ಅಪಾಯವಿದೆ ಎಂದು ಅಭದ್ರತಾ ಭಾನೆಯನ್ನು ಮೂಡುವಂತೆ ಮಾಡಿದರು. ಆದರೆ ನಿಜವಾಗಿ ನೋಡಿದರೆ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ 20 ಕೋಟಿಗಿಂತಲೂ ಅಧಿಕವಿದ್ದು, ದೇಶದಲ್ಲಿ ತುಂಬಾ ಪ್ರಬಲವಾಗಿದೆ. ಇಷ್ಟು ಓಟುಗಳನ್ನು ಗಳಿಸುವ ಸಲುವಾಗಿ ಮುಸ್ಲಿಮರನ್ನು ಕಾಂಗ್ರೆಸ್ ಪರ ಇರುವಂತೆ ನೋಡಿಕೊಂಡು ಓಟ್ ಗಳಿಸುತ್ತಾ ಬಂದರು.
ಇಂದೂ ಸಹ ಮುಸ್ಲಿಮರೆಂದರೆ ಕಾಂಗ್ರೆಸಿಗರು ಎನ್ನುವಷ್ಟರ ಮಟ್ಟಿಗೆ ಮುಸ್ಲಿಮರು ಕಾಂಗ್ರೆಸ್ ಪರವಾಗಿದ್ದಾರೆ. ಬಿಜೆಪಿ ರಾಷ್ಟ್ರೀಯವಾದಿ ಪಕ್ಷವಾಗಿದ್ದರೂ ಬಿಜೆಪಿ
ಹಿಂದುತ್ವದ ಅಜೆಂಡಾ ಇರುವ ಪಕ್ಷವೆಂದು ಬಿಂಬಿಸುವಲ್ಲಿ ಕಾಂಗ್ರೆಸಿಗರು ಯಶಸ್ವಿಯಾದರು.
ಇಂದು ಅನಕ್ಷರಸ್ಥ, ಹಳ್ಳಿಗಳಲ್ಲಿರುವ ಮುಸ್ಲಿಮರು ಕಣ್ಣುಮುಚ್ಚಿಕೊಂಡು ಕಾಂಗ್ರೆಸಿಗೆ ಮತಚಲಾಯಿಸುತ್ತಾರೆ. ಇದು ಧರ್ಮಾತೀತವಾಗಿ ಹಿಂದೂ ಮುಸ್ಲಿಮರನ್ನು
ವಿಭಾಗಿಸಿತೆಂದರೆ ಭಾರತದ ಜನರು ದೇಶದ ಅಭಿವೃದ್ಧಿಗಾಗಿ ಚಿಂತನೆಯನ್ನೇ ಮಾಡದಂತೆ ಮಾಡಿತು.
ಗೋದ್ರಾ ಗಲಭೆ!!!
ದೇಶದಲ್ಲಿ ಗೋದ್ರಾಕ್ಕಿಂತ ದೊಡ್ಡ ಮಟ್ಟದ ಗಲಭೆಗಳೆಲ್ಲಾ ನಡೆದಿದೆ. ಆದರೆ ಕಾಂಗ್ರೆಸಿಗರ ಪ್ರಕಾರ ಗೋದ್ರಾಕ್ಕಿಂತ ದೊಡ್ಡ ಗಲಭೆಯೇ ಇಲ್ಲ ಎಂದು ಮುಸ್ಲಿಮರ
ಮನಸ್ಸಲ್ಲಿ ಬಿತ್ತುವ ಕಾರ್ಯವನ್ನು ಮಾಡಿದರು. ದೇಶದಲ್ಲಿ ಗೋದ್ರ ಗಲಭೆಯೇ ಏಕೈಕ ಗಲಭೆ ಎಂಬಂತೆ ಚಿತ್ರಿಸಿದರು. ಈ ಗಲಭೆಯನ್ನು ಮುಂದಿಟ್ಟು ಹಿಂದೂ
ಮುಸ್ಲಿಮರನ್ನು ಎತ್ತಿಕಟ್ಟುವ ಕೆಲಸದಲ್ಲಿ ತೊಡಗಿದರು. ಗೋದ್ರಾವನ್ನು ಮುಸ್ಲಿಂ ವಿರೋಧಿ ಗಲಭೆ ಎಂದು ಚಿತ್ರಿಸಿದರು. ಗೋದ್ರಾ ಗಲಭೆಗೆ ತುತ್ತಾದವರ, ಅವರ
ಕುಟುಂಬದವರ ಬಗ್ಗೆ ಯಾರೂ ಕಾಳಜಿ ವಹಿಸಲಿಲ್ಲ. ಅದರ ಬದಲಿಗೆ ಪತ್ರಿಕೆಗಳ ಮೂಲಕ ಸುಳ್ಳು ಸುದ್ದಿಯನ್ನು ಹಬ್ಬಿಸುವ ಕೆಲಸವನ್ನು ಮಾಡಿದರು.
ಕಾಂಗ್ರೆಸ್ ಸರಕಾರವಿರುವಲ್ಲಿ ಗೋದ್ರಾಕ್ಕಿಂತಲೂ ಭೀಕರವಾದ ಗಲಭೆ, ನರಮೇಧಗಳು ನಡೆದವು. ಅವುಗಳ ಸಂಕ್ಷಿಪ್ತ ಪಟ್ಟಿ ಇಲ್ಲಿದೆ.
1. 1980ರ ಮೊರದಾಬಾದ್ . 1000+ ಸಾವು
2. 1983ರ ನೆಲ್ಲೀ. 3000+ ಸಾವು
3. 1984ರ ಸಿಖ್ ನರಮೇಧ. 3000+ ಸಾವು
4. 1989ರ ಭಾಗಲ್ಪುರ್. 1000+ ಸಾವು
5. 1993 ಮುಂಬೈ. 800+ ಸಾವು
ಕಾಂಗ್ರೆಸ್ ಸರಕಾರವಿರುವಲ್ಲಿ ನಡೆದ ಗಲಭೆ, ನರಮೇಧಗಳಿವು. ಇವುಗಳು ಅಷ್ಟೊಂದು ಸುದ್ದಿಯಾಗಲೂ ಇಲ್ಲ ಬದಲಿಗೆ ಜನರಲ್ಲಿ ತನ್ನ ಬಗ್ಗೆ ಮತಾಂಧತೆ ಹೆಚ್ಚುವಂತೆ ಮಾಡುವಲ್ಲಿ ಸಫಲರಾದರು.
ಕಾಂಗ್ರೆಸ್ ಇಷ್ಟು ವರ್ಷಗಳಲ್ಲಿ ಜನರನ್ನು ಮೂರ್ಖರನ್ನಾಗಿಸಿ ಅವರನ್ನು ಓಟ್‍ಬ್ಯಾಂಕ್ ಆಗಿರುವಂತೆ ನೋಡಿಕೊಂಡಿತು. ಜನರಲ್ಲಿ ರಾಷ್ಟ್ರೀಯತೆಯ ಭಾವ ಬೆಳೆಸುವ ಬದಲು ಜನರಲ್ಲಿ ಕೋಮುಭಾವನೆ ಬೆಳೆಯುವಂತೆ ನೋಡಿಕೊಂಡು ಅದರಲ್ಲಿಯೇ ಇಷ್ಟು ವರ್ಷಗಳ ಕಾಲ ದೇಶವನ್ನು ಆಳಿಕೊಂಡು ಭಾರತವನ್ನು ಕೊಳ್ಳೆಹೊಡೆಯಿತು. ಚೀನಾ-ಭಾರತ ಎರಡೂ ಸರಿಸಮಾನರಾಷ್ಟ್ರಗಳಾಗಬೇಕಿತ್ತು. ಆದರೆ ಅದು ಭಾರತದಿಂದ 20 ವರ್ಷ ಮುಂದಿದೆ. ಭಾರತದಲ್ಲಿ ಉದ್ಯಮಗಳನ್ನು ಸ್ಫಾಪಿಸಿ ವಿಶ್ವವನ್ನೇ ಮಾರುಕಟ್ಟೆಯನ್ನಾಗಿಸುವ ಬದಲು ದೇಶದಲ್ಲಿ ದೊಡ್ಡ ದೊಡ್ಡ ಹಗರಣಗಳನ್ನು ಮಾಡಿಕೊಂಡು ಪ್ರತಿಯೊಂದು ವಸ್ತುಗಳನ್ನೂ ಬೇರೆ ದೇಶದಿಂದ ಆಮದು ಮಾಡಿಕೊಳ್ಳುವಂಥಾ ಸ್ಥಿತಿಗೆ ತಂದುಬಿಟ್ಟಿತು.
ಇಂದು ನರೇಂದ್ರ ಮೋದಿಯವರು ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ ಮುಂತಾದ ಯೋಜನೆಗಳ ಮೂಲಕ ಭಾರತವನ್ನೇ ಉತ್ಪಾದಕ ರಾಷ್ಟ್ರವನ್ನಾಗಿಸಲು ಪಣ ತೊಡುತ್ತಿದ್ದಾರೆ. ಇದನ್ನು ಕಾಂಗ್ರೆಸ್ ಆಡಳಿತವಿರುವಾಗ 20 ವರ್ಷಗಳ ಮುಂಚೆಯೇ ಮಾಡಿದ್ದರೆ ದೇಶದ ಪರಿಸ್ಥಿತಿ ಇಂದು ಹೇಗಿರಬಹುದಿತ್ತು? ದೇಶವನ್ನು ಅಧೋಗತಿಗೆ ತಳ್ಳಿದ ಕಾಂಗ್ರೆಸ್‍ನ ಮಾನಸಿಕತೆಯನ್ನು ಇಂದಿನ ಪ್ರಜ್ಞಾವಂತ ಜನರು ಅರ್ಥ ಮಾಡಿಕೊಂಡು ಬರುತ್ತಿದ್ದಾರೆ.
-ಚೇಕಿತಾನ