ಪ್ರಚಲಿತ

ಕಾಂಗ್ರೆಸ್ ನ ಎರಡು ವರ್ಷದ ಈ ಹನ್ನೆರಡು ಸಾಧನೆಗಳನ್ನೋದಿದರೆ, ಈ ಪಕ್ಷವನ್ನು ಇನ್ನೂ ಕಿತ್ತೊಗೆಯದಿದ್ದಕ್ಕೆ ಖಂಡಿತವಾಗಿಯೂ ಪಶ್ಚಾತ್ತಾಪಿಸುವಿರಿ!

ಮೋದಿ ಸರಕಾರ ಮಾಡಿರುವ ಎಲ್ಲಾ ಕಾರ್ಯಗಳಿಗೂ ಕಾಂಗ್ರೆಸ್ ಇಲ್ಲಿಯವರೆಗೂ ಅಡ್ಡಗಾಲನ್ನು ಹಾಕುತ್ತಲೇ ಬಂದಿದೆ !! ದೇಶ ಅಭಿವೃದ್ಧಿಯಾಗ ಬೇಕು ಅನ್ನುವ
ಯೋಚನೆಯನ್ನು ಕಾಂಗ್ರೆಸ್ ಸರಕಾರ ಯಾವತ್ತೂ ಮಾಡಲು ತಯಾರಿಲ್ಲ ಎಂಬುವುದೇ ವಿಷಾದನೀಯ!!!.

ಸರ್ಜಿಕಲ್ ಸ್ಟ್ರೈಕ್ ಬಗ್ಗೆ ವಿರೋಧ ಪಡಿಸಿದ ಕಾಂಗ್ರೆಸ್:

ಸರ್ಜಿಕಲ್ ಸ್ಟ್ರೈಕ್ ಎಂದರೆ ವ್ಯಾಪಕ ಹಾನಿಯನ್ನು ತಪ್ಪಿಸಿ ನಿರ್ದಿಷ್ಟವಾದುದನ್ನು ನಾಶಗೊಳಿಸಲು ವಿನ್ಯಾಸಿಸಲಾದ ಸೇನಾ ದಾಳಿ. ಯಾವಾಗ ಸರ್ಜಿಕಲ್‍ಗೆ ಸರಕಾರ ಆದೇಶ ನೀಡಿತೋ ಆ ಸಮಯದಲ್ಲಿ ಕಾಂಗ್ರೆಸ್ “ಈ ನಿರ್ಧಾವನ್ನು ಸ್ವಾಗತಿಸುತ್ತೇವೆ. ಉಗ್ರರಿಗೆ ಸರ್ಜಿಕಲ್ ಸ್ಟ್ರೈಕ್ ಮೂಲಕ ದಿಟ್ಟ ಸಂದೇಶವನ್ನು ನೀಡಿದ ಮೋದಿ ಸರಕಾರಕ್ಕೆ ಅಭಿನಂದನೆ” ಎಂದಿತ್ತು. ಆದರೆ ತನ್ನ ಶ್ಲಾಘನೆ ಬಿಜೆಪಿ ಪಕ್ಷಕ್ಕೆ ಲಾಭವಾಗುವುದೇನೋ ಎಂಬ ಪೂರ್ವಗ್ರಹ ಪೀಡಿತ ಚಿಂತನೆಯಂತೆ ಸರ್ಜೀಕಲ್ ಸ್ಟ್ರೈಕ್ ವಿರುದ್ಧ ಹರಿಹಾಯ್ದಿತ್ತು. ಮಾತ್ರವಲ್ಲದೆ “ಈ ಸರ್ಜಿಕಲ್‍ಸ್ಟ್ರೈಕ್‍ಗೆ ಮಹತ್ವ ಕೊಡಬೇಕಾಗಿಲ್ಲ. ನಮ್ಮ ಅವಧಿಯಲ್ಲೂ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದೆವು” ಎಂದು ಬಡಾಯಿಕೊಚ್ಚಿಕೊಳ್ಳುತ್ತಿತ್ತು. ಕಾಂಗ್ರೆಸ್ ಮಾತ್ರವಲ್ಲದೆ ಸದಾ ಮೋದಿಯನ್ನು ದ್ವೇಷಿಸುವ ಭರದಲ್ಲಿ ದೇಶದ್ರೋಹಿಗಳನ್ನು ಪ್ರೀತಿಸುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಸೀಮಿತ ದಾಳಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ದಾಖಲೆಯ ಸಾಕ್ಷಿ ಇದೆಯಾ ಎಂಬ ಉದ್ಧಟತನದ ಮಾತುಗಳನ್ನಾಡಿದ್ದರು.!! ಯಾವಾಗ ಕೇಂದ್ರ ಸರಕಾರ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ವಿಡಿಯೋ ಸಾಕ್ಷಿಗಳನ್ನು ಬಿಡುಗಡೆಗೊಳಿಸಿತ್ತೋ ಇಂಗು ತಿಂದ ಮಂಗನಂತೆ ಬೆಕ್ಕಸ ಬೆರಗಾಗಿದ್ದರು.!! ಆದರೂ ಕೆಸರಿಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಮತ್ತೆ ಮತ್ತೆ ಮೋದಿ ಸರಕಾರವನ್ನು ವಿರೋಧಿಸಿ ಮಾತುಗಳನ್ನಾಡಿ ದೇಶದ ಕೆಂಗಣ್ಣಿಗೆ ಗುರಿಯಾಗಿದ್ದರು.!!

ರೋಹಿಂಗ್ಯಾಗಳಿಗೆ ಬೆಂಬಲ ನೀಡುತ್ತಿರುವ ಕಾಂಗ್ರೆಸ್:

ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರುವ ಉದ್ಧೇಶದಿಂದ ತಮ್ಮ ಪಕ್ಷದ ಮೇಲೆ ರಾಜಿ ಮಾಡಲು ಸಿದ್ಧವಿರುವ ಅವಕಾಶವಾದಿಗಳ ಪಕ್ಷವೆಂದು ಮತ್ತೊಮ್ಮೆ ಸಾಭೀತಾಗಿದೆ. ಕಾಂಗ್ರೆಸ್ ಒಂದು ಹಸಿದ ರಣಹದ್ದುವಿನ ಹಾಗೆ!! ರೋಹಿಂಗ್ಯಾಗಳನ್ನು ಭಾರತದಲ್ಲಿ ನೆಲೆಯೂರುವಂತೆ ಮಾಡಿದರೆ ಮುಂದೆ ಅವರಿಗಾಗುವ ಲಾಭದ ಬಗ್ಗೆ ಯೋಚಿಸಿ ಈ ರೀತಿ ಚಿಂತನೆ ಮಾಡಿದ್ದಾರೆ !! ವರ್ಷಗಳ ಹಿಂದೆ ತನ್ನ ನಾಯಕರು ಮಾಡಿದ ಭರವಸೆಗಳನ್ನು ವಿಫಲಗೊಳಿಸಿ ತಮ್ಮದೇ ನಿರ್ಣಯವನ್ನು ತೆಗೆದುಕೊಂಡಿದ್ದಾರೆ. ಅತ್ತ ಮ್ಯಾನ್ಮಾರ್‍ನಲ್ಲಿ ಹಿಂದೂಗಳ ಮಾರಣ ಹೋಮವೇ ನಡೆಸಿವೆ. ಆದರೆ ಅದೇ ಮಾರಣ ಹೋಮ ಮಾಡಿದ ರೋಹಿಂಗ್ಯಾಗಳಿಗೆ ನಮ್ಮ ಭಾರತದಲ್ಲಿ ಆಶ್ರಯ ನೀಡಲು ಹಣ ಕೂಡಾ ಒಟ್ಟು ಮಾಡಿದ್ದಾರೆ.. ಎಂತಹ ವಿಪರ್ಯಾಸ ಅಲ್ಲವೇ? ಅದಲ್ಲದೇ ಸುಪ್ರಿಮ್ ಕೋರ್ಟ್ ಮೆಟ್ಟಿಲೇರಿ ಅವರನ್ನು ನಮ್ಮಲ್ಲೇ ಇರಿಸಿ ಕೊಳ್ಳುವುದಕ್ಕೆ ಹರ ಸಾಹಸ ಮಾಡಿದ್ದರು!! ಇದರಿಂದ ಆಗುವ ಪರಿಣಾಮದ ಬಗ್ಗೆ ಅವರು ಚಿಂತಿಸುತ್ತಿಲ್ಲ… ತಮ್ಮ ತಮ್ಮ ಸ್ವಾರ್ಥಕ್ಕಾಗಿ ಇವರನ್ನು ಇಲ್ಲಿ ನೆಲೆಯೂರುವಂತೆ ಮಾಡಲು ಹರಸಾಹಸ ಪಟ್ಟರು.!! ಹಿಂದೆ ಮೊಘಲರು ಡಚ್ಚರು ಹೀಗೆ ಅನೇಕರು ಭಾರತಕ್ಕೆ ವಲಸೆ ಬಂದು ಭಾರತವನ್ನೇ ಇಬ್ಭಾಗವನ್ನಾಗಿ ಮಾಡಿದ್ದಾರೆ. ಸಂಪದ್ಭರಿತ ದೇಶವಾಗಿದ್ದ ಭಾರತವನ್ನು ಯಾವ ರೀತಿ ಆಳ್ವಿಕೆ ಮಾಡಿ ನಮ್ಮನ್ನೇ ಅವರ ದಾಸರನ್ನಾಗಿ ಮಾಡಿಕೊಂಡಿದ್ದರು ಎಂಬುವ ಇತಿಹಾಸವನ್ನು ಮರೆತು ಅವರನ್ನು ಉಳಿಸುವಲ್ಲಿ ತೊಡಗಿದ್ದಾರೆ ಎಂಬುವುದು ವಿಷಾದನೀಯ!!

ತ್ರಿವಳಿ ತಲಾಕ್ ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್:

ಸುಪ್ರಿಮ್ ಕೋರ್ಟ್‍ನಲ್ಲಿ ತ್ರಿವಳಿ ತಲಾಕ್ ವಿಚಾರವಾಗಿ ನಡೆಯುತ್ತಿರುವ ವಿಚಾರಣೆ ಸಂಬಂಧ ಪ್ರಮಾಣ ಪತ್ರ ಸಲ್ಲಿಸಿರುವ ಎನ್‍ಸಿಡಬ್ಲ್ಯೂ ತ್ರಿವಳಿ ತಲಾಕ್ ಮತ್ತು
ಬಹುಪತ್ನಿತ್ವ ಪದ್ಧತಿಗಳು ಮುಸ್ಲಿಮ್ ಮಹಿಳೆಯರ ಹಕ್ಕುಗಳಿಗೆ ವಿರುದ್ಧವಾಗಿತ್ತು.!! ಅಷ್ಟೇ ಅಲ್ಲ ಸಂವಿಧಾನ ವಿರೋಧಿಯೂ ಆಗಿವೆ.!! ತ್ರಿವಳಿ ತಲಾಕ್ ಮುಸ್ಲಿಮ್
ಮಹಿಳೆಯರ ಹಕ್ಕುಗಳಿಗೆ ವಿರುದ್ಧವಾಗಿದೆ.. ತ್ರಿವಳಿ ತಲಾಕ್ ಮುಸ್ಲಿಮ್ ಮಹಿಳೆಯರು ಮತ್ತು ಅವರ ಮಕ್ಕಳ ಜೀವನಕ್ಕೆ ಅಭದ್ರತೆ ಸೃಷ್ಠಿಸಿರುವುದರಿಂದ ಈ ಪದ್ಧತಿಯನ್ನು ತಕ್ಷಣ ನಿಷೇಧಿಸಬೇಕು ಎಂದು ಒತ್ತಾಯಿಸಿ ನಿಷೇಧ ಮಾಡಲು ಹೊರಟಾಗ ಈ ಕಾಂಗ್ರೆಸ್ ಪಕ್ಷ ಮಾತ್ರಇದನ್ನು ಸಹಿಸಲಿಲ್ಲ!! ಈ ಅನಿಷ್ಟ ಪದ್ಧತಿಗೆ  ಮಂಗಳವನ್ನು ಹಾಡಲಾಯಿತು.. ಸುಪ್ರಿಮ್ ಕೋರ್ಟ್ ತ್ರಿವಳಿ ತಲಾಕ್ ಅನ್ನು ನಿಷೇಧ ಮಾಡಿದರೂ ಮೋದಿ ಸರಕಾರಇದಕ್ಕೆ ಹೆಚ್ಚಿನ ಶ್ರಮವನ್ನು ಪಟ್ಟಿದೆ!!… ನರೇಂದ್ರ ಮೋದಿ ಸರಕಾರದ ನೇತೃತ್ವದಲ್ಲಿ ತ್ರಿವಳಿ ತಲಾಕ್ ಅನ್ನು ನಿಷೇಧಿಸಲಾಯಿತು.

ನೋಟು ಅಮಾನ್ಯೀಕರಣಕ್ಕೆ ವಿರೋಧಿಸಿದ ಕಾಂಗ್ರೆಸ್!!

ದೇಶದಲ್ಲಿ 2016 ನವೆಂಬರ್ 8 ರಂದು ನೋಟು ಅಮಾನ್ಯೀಕರಣ ಮಾಡಲಾಗಿದ್ದು ಈ ಒಂದು ನಿರ್ಧಾರ ಗಮನಾರ್ಹ. ಇದರಿಂದಾಗಿ ಅದೆಷ್ಟೋ ಕಪ್ಪು ಹಣಗಳು ಹೊರಬಿದ್ದದ್ದು ನಿಮಗೆಲ್ಲಾ ತಿಳಿದೇ ಇದೆ!!… ಇಂತಹ ಒಳ್ಳೆಯ ಕಾರ್ಯ ಯೋಜನೆಯನ್ನು ಮಾಡಿದ ಮೋದಿ ಸರಕಾರಕ್ಕೆ ಕಾಂಗ್ರೆಸ್ ಸರಕಾರ ಛೀಮಾರಿಯನ್ನು ಹಾಕಿದೆ.. ಭಯೋತ್ಪಾದನೆಗೆ ಅಗತ್ಯ ಹಣಕಾಸು ಪೂರೈಕೆಗಾಗಿ ನಕಲಿ ನೋಟುಗಳ ಬಳಕೆ ಇದೆ ಎನ್ನಲಾಗಿದ್ದು, ಅದನ್ನು ಮಟ್ಟಹಾಕಲು ಹಾಗೂ ಕಪ್ಪುಹಣದ ಸಮಸ್ಯೆ ಬಗೆ ಹರಿಸಲು ಈ ನಿರ್ಧಾರವನ್ನು ಪ್ರಧಾನಿ ಮೋದಿ ಕೈಗೊಂಡಿದ್ದರು… ಆದರೆ ಕಾಂಗ್ರೆಸ್ ಮಾತ್ರ ಇದನ್ನು ಟೀಕಿಸುತ್ತಾ ಬಿಜೆಪಿ ಸರಕಾರಕ್ಕೆ ಇದರಿಂದ ಲಾಭವಿದೆ ಎನ್ನುವಹಾಗೆ ಮಾತನಾಡಿ ಇದನ್ನು ದ್ವೇಷಿಸಲು ತಯಾರಾದರು.

ಜಿಎಸ್‍ಟಿಗೆ ಕಾಂಗ್ರೆಸ್ ವಿರೋಧ:

ಜಿಎಸ್‍ಟಿ ಮಸೂದೆ ಪಾಸ್ ಆಗಬೇಕಾದರೆ ಪ್ರತೀ ರಾಜ್ಯಗಳ  ಮಂಡಲದಿಂದ ಸಂಸತ್‍ಗೆ ಬಂದಿರುವ ಮಸೂದೆಯನ್ನು ಸಂಸತ್ತಿನಲ್ಲಿ ಕೇಂದ್ರ ಸರಕಾರ
ಅಂಗೀಕರಿಸುತ್ತದೆ. ಹೀಗೆ ಕಾಂಗ್ರೆಸ್ ಸರಕಾರವಿರುವ ರಾಜ್ಯಗಳು ಕೂಡಾ ಮಸೂದೆಯನ್ನು ಮೆಚ್ಚಿ ಕೇಂದ್ರ ಸರಕಾರಕ್ಕೆ ಕಳಿಸಿದ್ದವು. ಅದರಂತೆ ಕೇಂದ್ರ ಸರಕಾರ
ಮಧ್ಯರಾತ್ರಿ 12 ಗಂಟೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಮುಖದಲ್ಲಿ ಜಿಎಸ್‍ಟಿ ಮಸೂದೆಯನ್ನು ಐತಿಹಾಸಿಕವಾಗಿ ಜಾರಿಗೆ ತಂದಿತ್ತು. ಕಾಂಗ್ರೆಸ್ ಪಕ್ಷವೇ
ಒಪ್ಪಿಕೊಂಡಿದ್ದ ಈ ಮಸೂದೆಯನ್ನು ನಂತರ ಇದು ಬಿಜೆಪಿ ಸರಕಾರಕ್ಕೆ ಲಾಭವಿದೆ ಎಂಬ ಸಣ್ಣತನದ ಯೋಚನೆಯಿಂದ ಇದನ್ನು ನಿಷೇಧಿಸಿತು.

ಮೊಬೈಲ್ ನಂಬರ್‍ಗಳಿಗೆ ಆಧಾರ್ ಲಿಂಕ್ ಮಾಡಲು ನಿಷೇಧಿಸಿದ ಕಾಂಗ್ರೆಸ್:

ಒಬ್ಬ ವ್ಯಕ್ತಿ ಗರಿಷ್ಠ 9 ಸಿಮ್‍ಗಳನ್ನು ಮಾತ್ರ ಖರೀದಿಸಬಹುದು ಎಂಬ ನಿಯಮ ಈಗಾಗಲೇ ಜಾರಿಯಲ್ಲಿದೆ. ವಿಳಾಸದ ಯಾವುದೇ ಪುರಾವೆ ನೀಡಿದರೂ ಎಷ್ಟು
ಬೇಕಾದರೂ ಸಿಮ್ ಖರೀದಿ ಮಾಡುತ್ತಿದ್ದರು. ಇದರಲ್ಲಿ ನಕಲಿ ವಿಳಾಸಗಳ ಭರಾಟೆಯೇ ಹೆಚ್ಚಾಗುತ್ತಿತ್ತು. ಇದರಿಂದ ರಾಷ್ಟ್ರೀಯ ಭದ್ರತೆಗೆ ಅಪಾಯ ಎದುರಾಗುವ
ಸಾಧ್ಯತೆ ಇರುವುದರಿಂದ ಕೇಂದ್ರ ಸರಕಾರ ಮೊಬೈಲ್ ನಂಬರ್‍ಗಳನ್ನು ಆಧಾರ್‍ಗೆ ಅಳವಡಿಸುವುದಕ್ಕಾಗಿ ಇದನ್ನು ಜಾರಿ ಮಾಡಿತ್ತು.. ಆದರೆ ಇದಕ್ಕೆ ಕೂಡಾ ಕಾಂಗ್ರೆಸ್ ಸರಕಾರ ವಿರೋಧವನ್ನು ವ್ಯಕ್ತಪಡಿಸಿತ್ತು. ಪ್ರಧಾನಿ ಮೋದಿಯವರು ನಿರ್ದೇಶನ ನೀಡಿದ್ದ ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಅಂಗವಾಗಿ
ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡುವಂತೆ ಆದೇಶವನ್ನು ಜಾರಿ ಗೊಳಿಸಿತ್ತು.

ಒಂದು ದೇಶ ಒಂದೇ ಚುನಾವಣೆ:

ಪ್ರಮುಖ ಚುನಾವಣೆಯನ್ನು ಒಂದೇ ಬಾರಿಗೆ ಆಗುವಂತೆ ಮೋದಿ ಸರಕಾರ ಒತ್ತಾಯಿಸಿತ್ತು. ಪರಿಣಾಮ ಇದರಿಂದಾಗಿ ಹಣಕಾಸಿನ ವೆಚ್ಚವನ್ನು ಕಡಿಮೆಗೊಳಿಸುವ
ಉದ್ಧೇಶವಾಗಿತ್ತು … ಆದರೆ ಒಂದೇ ಸರಕಾರ ಒಂದೇ ಚುನಾವಣೆಗೆ ಕಾಂಗ್ರೆಸ್ ಬೆಂಬಲವನ್ನು ನೀಡದೆ ವಿರೋಧ ವ್ಯಕ್ತಪಡಿಸಿತ್ತು.

ರಾಷ್ಟ್ರಗೀತೆಗೆ ವಿರೋಧ:

ರಾಷ್ಟ್ರಗೀತೆ ಅಂದರೆ ಇಡೀ ದೇಶ ಗೌರವ ಭಾವನೆಯಿಂದ ಕಾಣುತ್ತದೆ… ಆದರೆ ಕಾಂಗ್ರೆಸ್‍ ದೇಶಪ್ರೇಮವನ್ನು ವ್ಯಕ್ತಪಡಿಸಲು ಎದ್ದು ನಿಂತುಗೌರವ ತೋರಿಸಬೇಕಾಗಿಲ್ಲ ಎಂದಿದೆ. ಈ ಕಾಂಗ್ರೆಸ್ಸಿಗರಿಗೆ 52 ಸೆಕೆಂಡುಗಳ ಕಾಲ ಎದ್ದು ನಿಂತು ಗೌರವ ಕೊಡುವಷ್ಟು ತಾಳ್ಮೆ ಅವರಲ್ಲಿ ಇಲ್ಲ ಎಂದರೆ ಅವರು
ದೇಶವನ್ನು ಆಳಲು ಹೇಗೆ ಸಾಧ್ಯವಾಗುತ್ತದೆ? ಅಂಗವಿಕಲರೂ ರಾಷ್ಟ್ರಗೀತೆ ಕೇಳಿದಾಕ್ಷಣ ಎದ್ದು ನಿಲ್ಲುತ್ತಾರೆ… ಆದರೆ ರಾಷ್ಟ್ರಗೀತೆಯ ಬಗೆಗಿನ ಕಾಂಗ್ರೆಸ್‍ನ ನಡವಳಿಕೆಯು ಕಾಶ್ಮೀರದಲ್ಲಿನ ಪ್ರತ್ಯೇಕತೆ ವಾದವನ್ನೂ ನಾಚುವಂತೆ ಇದೆ.

ವಂದೇ ಮಾತರಂ ಗೀತೆಗೆ ವಿರೋಧ:

ಲೋಕಸಭೆಯಲ್ಲಿ ಅದೆಷ್ಟೋ ಹಿಂದೂಗಳ ನಡುವೆ ಕೇವಲ ಬೆರಳೆಣಿಕೆಯಷ್ಟು ಮುಸಲ್ಮಾನರು ಇದ್ದ ಕಾರಣಕ್ಕಾಗಿ ವಂದೇ ಮಾತರಂ ಗೀತೆಯ ಕೆಲವೇ ಸಾಲುಗಳನ್ನುಮಾತ್ರ ಹಾಡುವಂತೆ ಮಾಡಿರುವುದು ದುರಾದೃಷ್ಟಕರವೇ ಸರಿ!! ಸ್ವಾತಂತ್ರ ಪೂರ್ವದಿಂದಲೂ ವಂದೇ ಮಾತರಂ ಗೀತೆಗೆ ನೆಹರೂವಿನಿಂದ ಹಿಡಿದು ಇಂದಿನ ಕಾಂಗ್ರೆಸ್ಸಿಗರ ತನಕ ವಿರೋಧ ವ್ಯಕ್ತವಾಗುತ್ತಲೇ ಬಂದಿದೆ.!!

ರಾಮ ಮಂದಿರ ಮತ್ತು ಬಾಬ್ರಿ ಮಸೀದಿ ವಿಷಯದಲ್ಲಿ ವಿರೋಧ:

ಕೋಮುವಾದಿ ರಾಜಕೀಯವು ಕಾಂಗ್ರೆಸ್ ಪಕ್ಷದ ವಿಶೇಷ ಕ್ಷೇತ್ರವಾಗಿದೆ. ಗೋಧ್ರಾ ಮತ್ತು ರಾಮ ಮಂದಿರ- ಬಾಬರಿ ಮಸೀದಿ ಸಮಸ್ಯೆಯನ್ನು ಬಳಸಿಕೊಂಡು
ಕಾಂಗ್ರೆಸ್ ಕೋಮು ಸಾಮರಸ್ಯವನ್ನು ಪ್ರಶ್ನೆ ಮಾಡಿದ್ದಲ್ಲದೇ ಸಮಾಜದಲ್ಲಿ ಅಶಾಂತಿ ಹರಡುವುದೇ ಕೆಲಸವಾಗಿದೆ. ಇನ್ನು ಗುಜರಾತ್‍ನಲ್ಲಿ ರಾಹುಲ್ ಗಾಂಧಿ ಮತಗಳ ಬೇಡಿಕೆಯನ್ನು ಬೇರೆ ಮಾಡಿಕೊಂಡಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಪಾಕ್ ಭಯೋತ್ಪಾದಕರನ್ನು ನಿಯಂತ್ರಿಸುವುದಕ್ಕೆ ವಿರೋಧ:

ಜಮ್ಮು ಕಣಿವೆಯಲ್ಲಿ ಭಾರತ ಸೇನೆಗೆ ಎರಡು ಪ್ರಮುಖ ಸವಾಲುಗಳಿವೆ!!  ಅದರಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ಮತ್ತು ಕಲ್ಲಿನಿಂದ ದಾಳಿ ನಡೆಸಿದವರನ್ನು
ನಿಯಂತ್ರಣ ಮಾಡವುದಕ್ಕೆ ಕಾಂಗ್ರೆಸ್ಸಿಗರು ಬೆಂಬಲವನ್ನು ವ್ಯಕ್ತಪಡಿಸುತ್ತಿಲ್ಲ. ಕಾಂಗ್ರೆಸ್ಸಿಗರಿಗೆ ನಮ್ಮ ಸೈನಿಕರು ಅನುಭವಿಸುವ ನೋವು ಅವರಿಗೆ ಅರ್ಥವಾಗುತ್ತಿಲ್ಲ.. ಬದಲಾಗಿ ಅವರು ಕರುಣೆ ತೋರುತ್ತಿರುವುದು ಪಾಕಿಸ್ತಾನಿ ಭಯೋತ್ಪಾದಕರಿಗೆ ಮತ್ತು ಕಲ್ಲು ತೂರಾಟ ಮಾಡುವ ಇವರ ಬಗ್ಗೆ ಕಾಳಜಿ ಜಾಸ್ತಿಯಾಗಿದೆ. !!

ಡೊಕ್ಲಾಮ್ ವಿಷಯದಲ್ಲಿ ಜಗ್ಗದ ಭಾರತ:

ಭಾರತ ಮತ್ತು ಚೀನಾ ನಡುವೆ ಡೊಕ್ಲಾಂ ಘರ್ಷಣೆಯು ಹೆಚ್ಚಾಗುತ್ತಿದ್ದಾಗ ಚೀನಾದೊಂದಿಗಿನ ರಾಹುಲ್ ರ ರಹಸ್ಯ ಭೇಟಿಯನ್ನು ಯಾರು ಮರೆಯುತ್ತಾರೆ? ಭಾರತೀಯ ಸೈನಿಕರ ನೈತಿಕತೆಯನ್ನು ಮುರಿಯಲು ರಾಹುಲ್ ಗಾಂಧಿ ಅನೇಕ ಮಾರ್ಗಗಳನ್ನು ಅನುಸರಿಸಿದ್ದರು.

ಈ ಎಲ್ಲಾ ವಿಷಯಗಳನ್ನು ಭಾರತ ಎಂದಿಗೂ ಮರೆಯುವುದಿಲ್ಲ!!. ಇಡೀ ಕಾಂಗ್ರೆಸ್ಸಿಗರು ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನೇ ಅವಮಾನ ಮಾಡುವುದು ಎಷ್ಟುಸರಿ..? ಇಷ್ಟೆಲ್ಲಾ ಮಾಡಿದ ಈ ಕಾಂಗ್ರೆಸ್ ಸರಕಾರವನ್ನು ನಾವು ಪ್ರೋತ್ಸಾಹಿಸ ಬೇಕೇ? ಇಂತಹವರಿಗೆ ಮತ ಹಾಕಿ ಗೆಲ್ಲಿಸಬೇಕೇ? ಯೋಚಿಸಿ!!

-ಪವಿತ್ರ

Tags

Related Articles

Close