ಜಿಲ್ಲಾ ಸುದ್ದಿ

ಕಾಂಗ್ರೆಸ್ ನ ಬಂಟ ಪ್ರಮೋದ್ ಮಧ್ವರಾಜ್ ಎಂಬ ಹಿಂದೂ ವಿರೋಧಿ ಈಗ ಅಪ್ಪಟ ಹಿಂದೂವಾಗಿ ನಟಿಸುತ್ತಿರುವುದೇಕೆ ಗೊತ್ತೇ?

ಹಿಂದೂಗಳ ವಿರುದ್ಧ ಸದಾ ಕತ್ತಿ ಮಸೆಯುವ ಕಾಂಗ್ರೆಸಿಗರೆಲ್ಲಾ ಅಧಿಕಾರಕ್ಕಾಗಿ ಬಿಜೆಪಿಗೆ ಹಾರಲು ತಯಾರಿ ನಡೆಸುತ್ತಿದ್ದಾರೆ. ಕಾಂಗ್ರೆಸ್‍ನಲ್ಲಿದ್ದುಕೊಂಡು ಗುಡ್ಡ ಅಗೆದದ್ದು ಸಾಲದು ಎಂಬಂತೆ ಇದೀಗ ಬಿಜೆಪಿಗೆ ಬಂದು ಯಾವ ಮಣ್ಣಂಗಟ್ಟಿಯನ್ನೂ ಮಾಡುವುದಿಲ್ಲ ಎಂದು ಗೊತ್ತಿರುವಂಥದ್ದೇ. ಮೂಲ ಬಿಜೆಪಿಗರನ್ನು ತುಳಿದು ಪಕ್ಷಾಂತರಿಗಳಿಗೆ ಮಣೆ ಹಾಕುವುದನ್ನು ಬಿಜೆಪಿ ಹಿಂದಿನಿಂದಲೂ ನಡೆಸಿಕೊಳ್ಳುತ್ತಾ ಬರುತ್ತಿದೆ. ಇದರಿಂದ ಮೂಲ ಬಿಜಪಿಗರಿಗೆ ಅನ್ಯಾಯವಾಗುತ್ತಾ ಇರುವುದು ಮಾತ್ರ ಸುಳ್ಳಲ್ಲ. ಅಧಿಕಾರದಾಸೆಗಾಗಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಲು ಅನೇಕ ಮಂದಿ ಸರ್ಕಸ್ ಮಾಡ್ತಾ ಇದ್ದಾರೆ. ಇದೀಗ ಕರಾವಳಿ ಕರ್ನಾಟಕದ ಉಡುಪಿ ಭಾಗದಿಂದ ಕಾಂಗ್ರೆಸಿಗರೊಬ್ಬರು ಬಿಜೆಪಿಗೆ ಹಾರಲು ಇನ್ನಿಲ್ಲದಂತೆ ತಯಾರಿ ನಡೆಸ್ತಾ ಇದ್ದಾರೆ ಎಂಬ ಗುಸುಗುಸು ಕೇಳಿ ಬರ್ತಾ ಇದೆ. ಅವರು ಯಾರು ಗೊತ್ತಾ….?

ಪ್ರಮೋದ್ ಮಧ್ವರಾಜ್….!!!

ಕಾಂಗ್ರೆಸ್‍ನಲ್ಲಿದ್ದುಕೊಂಡು ಹಿಂದೂಗಳ ವಿರುದ್ಧ ಸದಾ ಕತ್ತಿ ಮಸೆಯುತ್ತಾ…, ಹಿಂದೂ ಸಂಘಟನೆಯ ಹುಡುಗರನ್ನು ಕೋರ್ಟಿಗೆ ಅಲೆದಾಡಿಸುವಂತೆ ಮಾಡಿದ ಪ್ರಮೋದ್ ಮಧ್ವರಾಜ್ ಅವರನ್ನು ಬಿಜೆಪಿಗರು ಯಾವ ಮುಖ ಹೊತ್ತು ಬಿಜೆಪಿಗೆ ಬರಮಾಡಿಕೊಳ್ಳುತ್ತಾರೋ ಆ ದೇವರಿಗೇ ಗೊತ್ತು. ಒಂದು ವೇಳೆ ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಪಕ್ಷಾಂತರ ಮಾಡಿಕೊಂಡು ಉಡುಪಿ ಭಾಗದಿಂದ ಸ್ಪರ್ಧಿಸಿದ್ದೇ ಆದರೆ ಬಿಜೆಪಿ ಮಕಾಡೆ ಮಲಗುವುದಂತೂ ಗ್ಯಾರಂಟಿ. ಯಾಕೆಂದರೆ ಕಾಂಗ್ರೆಸ್‍ನಲ್ಲಿದ್ದುಕೊಂಡು ಸಂಘಪರಿವಾರ, ಮೋದಿಯ ವಿರುದ್ಧ ಹೇಳಿಕೆ ನೀಡುತ್ತಿದ್ದ ಪ್ರಮೋದ್ ಮಧ್ವರಾಜ್‍ಗೆ ಒಮ್ಮೆ ರಾಮಕೃಷ್ಣರು ಮಾಂಸ ಸೇವಿಸುತ್ತಿದ್ದರು ಎಂಬ ವಿವಾದಾತ್ಮಕ ಹೇಳಿಕೆಯನ್ನೂ ನೀಡಿದ್ದರು. ಇಂಥವರಿಗೆ ಹಿಂದೂಗಳು ಯಾಕಾದ್ರೂ ಓಟು ಹಾಕ್ತಾರೆ? ಬಿಜೆಪಿಯ ಸಿದ್ಧಾಂತ ಒಪ್ಪಿಕೊಂಡು ಬಂದು ಪಕ್ಷಕ್ಕೆ ಬಂದರೆ ಅದಕ್ಕೊಂದು ಅರ್ಥವಿದೆ. ಆದರೆ ಸ್ಪರ್ಧಿಸಿ ಅಧಿಕಾರ ಪಡೆಯಬೇಕೆಂಬ ಉದ್ದೇಶದಿಂದ ಬಿಜೆಪಿಗೆ ಬಂದರೆ ಅಂಥವರನ್ನು ಪಕ್ಷಕ್ಕೆ ಯಾಕಾದ್ರೂ ಬರಮಾಡಿಕೊಳ್ಳಬೇಕು? ಪ್ರಮೋದ್ ಕಳೆದ ಹಲವಾರು ಸಮಯಗಳಿಂದ ಬಿಜೆಪಿಗೆ ಹಾರಲು ತೆರೆಮರೆಯ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಅಲ್ಲದೆ ಪ್ರಮೋದ್ ಬಿಜೆಪಿಗೆ ಬಂದರೆ ಪಕ್ಷಕ್ಕೆ ಶಕ್ತಿ ಸಿಗುತ್ತದೆ ಅವರ ಬಳಿ ಸಾಕಷ್ಟು ಆಸ್ತಿಪಾಸ್ತಿ ಇದೆ ಎಂಬ ಕಾರಣದಿಂದ ಕೆಲವು ಬಿಜೆಪಿ ಮುಖಂಡರು ಕೂಡಾ ಅವರಿಗೆ ಗಾಳ ಹಾಕುತ್ತಿದ್ದಾರೆಂಬ ಮಾತುಗಳೂ ಕೇಳಿಬರುತ್ತಿದೆ.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಪ್ರಮೋದ್ ಚುನಾವಣೆ ಹತ್ತಿರ ಬರುವ ಸಂದರ್ಭ ಬಿಜೆಪಿಗೆ ಹಾರಲಿದ್ದಾರೆ ಎಂಬ ಸುದ್ದಿ ರಾಜಕೀಯ ಪಡಸಾಲೆಯಲ್ಲಿ
ಕೇಳಿಬರುತ್ತಾ ಇದೆ. ಒಂದು ವೇಳೆ ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಬಂದಿದ್ದೇ ಆದರೆ ಬಿಜೆಪಿ ನೈಜ ಕಾರ್ಯಕರ್ತರು ಖಂಡಿತಾ ಬಿಜೆಪಿಯಿಂದ ತಟಸ್ಥವಾಗಿರುವುದರಲ್ಲಿ ಎರಡು ಮಾತಿಲ್ಲ. ಯಾಕೆಂದ್ರೆ ಕಾಂಗ್ರೆಸ್‍ನಲ್ಲಿ ಹಿಂದೂ ಸಂಘಟನೆಗಳ ವಿರುದ್ಧ ಕತ್ತಿ ಮಸೆಯುತ್ತಿದ್ದ ಪ್ರಮೋದ್ ಏನೂಂತ ಬಿಜೆಪಿ ಕಾರ್ಯಕರ್ತರು ಈಗಾಗಲೇ ಅರ್ಥೈಸಿಕೊಂಡಿದ್ದಾರೆ. ಕಾಂಗ್ರೆಸ್‍ನ ಪ್ರಮೋದ್ ಬಿಜೆಪಿಯಿಂದ ಸ್ಪರ್ಧಿಸಿದರೆ ಖಂಡಿತಾ ಗಂಟುಮೂಟೆ ಕಟ್ಟಿಸಿಕೊಳ್ಳಬೇಕಾಗುತ್ತದೆ. ಬಿಜೆಪಿಯ ಕೆಲವರ ಜೊತೆ ರಹಸ್ಯ ಸಂಬಂಧ ಇಟ್ಟುಕೊಂಡಿರುವ ಪ್ರಮೋದ್ ಮಧ್ವರಾಜ್ ಎಲ್ಲವೂ ಅಂದೊಕೊಂಡಂತೆಯೇ ಆಗಿದ್ದರೆ ಮುಂದಿನ ವಿಧಾನ ಸಭಾ ಚುನಾವಣೆಯ ಸಂದರ್ಭ ಪ್ರಮೋದ್ ಬಿಜೆಪಿಗೆ ಹಾರಲಿದ್ದಾರಂತೆ…. ಇಂಥವರೆಲ್ಲಾ ಬಿಜೆಪಿಗೆ ಅಗತ್ಯವಿದೆಯಾ ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ.

ಲಾಲಾಜಿ ಮೆಂಡನ್ ಗಾಳ ಹಾಕುತ್ತಿದ್ದಾರಂತೆ…!!!

ಕಾಪು ಶಾಸಕರಾಗಿದ್ದ ಲಾಲಾಜಿ ಮೆಂಡನ್ ಜೊತೆ ಸಾಕಷ್ಟು ನಿಕಟ ಸಂಬಂಧವನ್ನು ಇಟ್ಟುಕೊಂಡಿರುವ ಪ್ರಮೋದ್ ಮಧ್ವರಾಜ್ ಅವರನ್ನು ಸ್ವತಃ ಲಾಲಾಜೀಯೇ
ಬಿಜೆಪಿಗೆ ಆಹ್ವಾನಿಸುತ್ತಿದ್ದಾರೆಂಬ ಗುಸುಗುಸು ಸುದ್ದಿಯೊಂದು ಹೊರಬರುತ್ತಿದೆ. ಮುಂದಿನ ವಿಧಾನ ಸಭಾ ಚುನಾವಣೆಯ ಮುಂಚೆ ಪ್ರಮೋದ್ ಅವರನ್ನು ಅಧಿಕೃತವಾಗಿ ಬಿಜೆಪಿಗೆ ಆಹ್ವಾನಿಸಿ ಅವರಿಗೆ ಉಡುಪಿಯಿಂದ ಟಿಕೆಟ್ ನೀಡುವುದರ ಬಗ್ಗೆ ಲಾಲಾಜಿ ಮೆಂಡನ್ ಯೋಚನೆ ಮಾಡಿದ್ದಾರಂತೆ. ಹಿಂದಿನಿಂದಲೂ ಬಿಜೆಪಿಗೆ ಹಾರಲು ಯತ್ನಿಸುತ್ತಿದ್ದ ಪ್ರಮೋದ್‍ಗೆ ಸಚಿವರಾಗಿ ಆಯ್ಕೆಯಾದ ಬಳಿಕ ಬಿಜೆಪಿಗೆ ಸೇರುವ ಯೋಚನೆಯನ್ನು ಕೈಬಿಟ್ಟಿದ್ದರು. ಅಲ್ಲದೆ ನಾನು ಬಿಜೆಪಿಗೆ ಸೇರುವುದು ಸುಳ್ಳು ಸುದ್ದಿ ಎಂದು ಸ್ಪಷ್ಟೀಕರಣವನ್ನೂ ನೀಡಿದ್ದರು. ಆದರೆ ಮುಂದಿನ ಬಾರಿ ಕಾಂಗ್ರೆಸ್ ಸೋಲುವುದು ಖಚಿತವಾಗಿರುವುದರಿಂದ ಅದಕ್ಕಾಗಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸುವ ಸಲುವಾಗಿ ಲಾಲಾಜಿ ನೆರವಿನಿಂದ ಬಿಜೆಪಿಗೆ ಸೇರಲು ಯತ್ನಿಸುತ್ತಿದ್ದಾರಂತೆ. ಮಧ್ವರಾಜ್ ಬಿಜೆಪಿಗೆ ಬಂದಿದ್ದೇ ಆದರೆ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಅಲ್ಲದೆ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು ಬಿಜೆಪಿಯಿಂದ ದೂರ ಉಳಿದು ತಟಸ್ಥರಾಗಿದ್ದುಬಿಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರ್ತಾ ಇದೆ.

ರಾಮ್‍ಸೇನಾ ಸಂಘಟನೆಯ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಪ್ರಮೋದ್!

ಶ್ರೀರಾಮ ಸೇನೆಯನ್ನು ತೊರೆದ ಪ್ರಸಾದ್ ಅತ್ತಾವರ್ ಇಂದು ರಾಮ್‍ಸೇನಾ ಕರ್ನಾಟಕ ಎಂಬ ಸಂಘಟನೆಯನ್ನು ಕಟ್ಟಿಕೊಂಡಿದ್ದಾರೆ. ಇದರ ಅಂಗಸಂಸ್ಥೆಯಾದ ಸರ್ವ ಕಾಲೇಜು ವಿದ್ಯಾರ್ಥಿ ಸಂಘಟನೆಯನ್ನು ಮಣಿಪಾಲದ ಆರೆಸ್‍ಬಿ ಸಭಾಭವನದಲ್ಲಿ ಪ್ರಮೋದ್ ಮಧ್ವರಾಜ್ ಉದ್ಘಾಟಿಸಿ ವಿದ್ಯಾರ್ಥಿ ಸಮೂಹವನ್ನುದ್ದೇಶಿಸಿ
ಮಾತಾಡಿದ್ದಾರೆ.ಪ್ರಸಾದ್ ಅತ್ತಾವರ್ ಈ ಹಿಂದೆ ಸುಮಾರು ವರ್ಷಗಳಿಂದ ಭಜರಂಗದಳದಲ್ಲಿ ಕೆಲಸ ಮಾಡುತ್ತಿದ್ದವರು . ಆ ನಂತರ ಅದನ್ನು ತೊರೆದು ಪ್ರಮೋದ್ ಮುತಾಲಿಕ್ ಜೊತೆ ಶ್ರೀ ರಾಮ ಸೇನೆಯಲ್ಲಿ ಗುರುತಿಸಿಕೊಂಡರು . ಪಬ್ ದಾಳಿ ಸಹಿತ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಕೇಸುಗಳು ಇವರ ಮೇಲೆ ದಾಖಲಾಗಿವೆ . ಪಬ್ ದಾಳಿಗೆ ಸಂಬಂಧಪಟ್ಟಂತೆ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಅಲ್ಲದೆ ಕಲ್ಬುರ್ಗಿ ಹತ್ಯೆ ಆರೋಪದಲ್ಲಿ ಪ್ರಸಾದ್‍ನನ್ನು ವಿಚಾರಣೆಗೊಳಪಡಿಸಲಾಗಿತ್ತು. ಹೀಗೆ ಕಾಂಗ್ರೆಸ್ ಸರಕಾರ ಅವರನ್ನು ನಾನಾ ಪ್ರಕರಣಗೊಳಪಡಿಸಿ ಸಾಕಷ್ಟು ಕಿರುಕುಳ ನೀಡಿತ್ತು. ಇದೀಗ ಎಲ್ಲವನ್ನೂ ಮರೆತುಕೊಂಡು ಅದೇ ಕಾಂಗ್ರೆಸ್‍ನ ಪ್ರಮೋದ್ ಸಂಘಟನೆಯ ಯುವಕರ ಜೊತೆ ಗುರುತಿಸಿಕೊಳ್ಳುತ್ತಿದ್ದಾರೆ.

ಪ್ರಮೋದ್‍ನನ್ನು ಹಿಂಬಾಗಿಲ ಮೂಲಕ ಬಿಜೆಪಿಗೆ ಕರೆಸಿಕೊಂಡು ತೆರೆಮರೆಯಲ್ಲಿ ಕೆಲಸ ನಡೆಸುವ ದರ್ದು ಬಿಜೆಪಿಗೆ ಯಾಕಾದ್ರೂ ಬೇಕಿತ್ತು? ಬಿಜೆಪಿಗೆ ಕೆಲಸ ಮಾಡಿದ ಅದೆಷ್ಟೋ ಮಂದಿ ಕಾರ್ಯಕರ್ತರಿದ್ದಾರೆ. ಅಪ್ಪಟ ಕಾಂಗ್ರೆಸಿಗನಾಗಿರುವ ಪ್ರಮೋದ್‍ನನ್ನು ಬಿಜೆಪಿಗೆ ಕರೆಸಿಕೊಂಡು ಮೂಲ ಬಿಜೆಪಿಗರಿಗೆ ವಂಚನೆ ಮಾಡುವುದು ಎಷ್ಟು ಸರಿ? ಗೋರಕ್ಷಕರ ಮೇಲೆ ಕೇಸಾಗುವಂತೆ ನೋಡಿಕೊಂಡು, ಸಂಘಪರಿವಾರ, ಬಿಜೆಪಿಗೆ ಸದಾ ಬಯ್ಯುತ್ತಾ ಕಾಲ ಕಳೆಯುವ ಪ್ರಮೋದ್ ಮಧ್ವರಾಜ್ ನಿಜವಾಗಿಯೂ ಬಿಜೆಪಿಯ ಸಿದ್ಧಾಂತವನ್ನು ಒಪ್ಪಲು ಸಾಧ್ಯವಿಲ್ಲ. ಬದಲಿಗೆ ಇವರು ತನ್ನ ತಾಯಿ ಮನೋರಮಾ ಮಧ್ವರಾಜ್‍ನಂತೆ ಅವಕಾಶವಾದಿ ರಾಜಕಾರಣಿ ಎಂಬುವುದರಲ್ಲಿ ಎರಡು ಮಾತಿಲ್ಲ.

ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿದೆ. ಬಿಜೆಪಿಯಲ್ಲಿ ತಳಮಟ್ಟದ ಕಾರ್ಯಕರ್ತನಾಗಿದ್ದುಕೊಂಡು ಪಕ್ಷಕ್ಕಾಗಿ ದುಡಿದ ವ್ಯಕ್ತಿಯೊಬ್ಬರಿಗೆ ಟಿಕೆಟ್ ನೀಡಿ ಅವರ
ಗೆಲವುಗೆ ಶ್ರಮಿಸುವುದನ್ನು ಬಿಟ್ಟು ಅಧಿಕಾರಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಹಾರುವವರಿಗೆ ಟಿಕೆಟ್ ನೀಡುವ ಅಗತ್ಯ ನಿಜವಾಗಿಯೂ ಇದೆಯೇ? ಒಂದು ವೇಳೆ ಪಕ್ಷಾಂತರಿಗಳು ಗೆದ್ದರೂ ಸಹ ಮುಂದಿನ ಚುನಾವಣೆಯ ವೇಳೆ ಅಧಿಕಾರಕ್ಕಾಗಿ ಮತ್ತೆ ಪಕ್ಷ ಬದಲಿಸುವುದಿಲ್ಲ ಎಂಬ ಏನು ಗ್ಯಾರಂಟಿ ಇದೆ?

-ಚೇಕಿತಾನ

Tags

Related Articles

Close