ಭಯೋತ್ಪಾದಕರನ್ನು ಬೆಂಬಲಿಸುವವರನ್ನು ಏನೂಂತ ಕರೆಯಬಹುದು? ಭಯೋತ್ಪಾದಕರು ಅಥವಾ ದೇಶದ್ರೋಹಿಗಳೆಂದು ಕರೆಯಬಹುದು. ಇಂದು ದೇಶದಲ್ಲಿ ಅನೇಕ ಮಂದಿ ಭಯೋತ್ಪಾದನೆಯನ್ನು ಬೆಂಬಲಿಸುವವರನ್ನು ನಾವು ಕಾಣುತ್ತಿದ್ದೇವೆ. ಆದ್ದರಿಂದ ಅವರನ್ನು ನಾವು ಭಯೋತ್ಪಾದಕರು ಎಂದು ಕರೆದರೆ ತಪ್ಪಿಲ್ಲ…
ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಏನೆಂದರೆ ಇಂದು ಆ ಪಕ್ಷದ ಮುಖಂಡರು ರಾಷ್ಟ್ರೀಯತೆಯ ಮನೋಭಾವ ಹೊಂದಿರುವವರಿಗೆ ಸಾಕಷ್ಟು ಕಿರುಕುಳ ನೀಡಿದ್ದರು. ಹಿಂದೂ ಭಯೋತ್ಪಾದಕರು ಎಂಬ ಹೆಸರಲ್ಲಿ ಅನೇಕರನ್ನು ಜೈಲಿಗೆ ಅಟ್ಟಿದ್ದರು. ಆದರೆ ಅವರ ಪ್ರಕರಣಗಳೆಲ್ಲಾ ಖುಲಾಸೆಗೊಂಡು ಅಸಲಿ ಭಯೋತ್ಪಾದಕರು ಪಾಕಿಗಳು ಎಂದು ಗೊತ್ತಾದಾಗ ಇವರನ್ನು ಬೆಂಬಲಿಸಿದ್ದ ಕಾಂಗ್ರೆಸ್ ಮುಖಂಡರ ಬಣ್ಣ ಬಯಲಾಗಿತ್ತು.
ಭಯೋತ್ಪಾದಕರನ್ನು, ಪ್ರತ್ಯೇಕತವಾದಿಗಳಿಗೆ ಬಹಿರಂಗವಾಗಿ ಬೆಂಬಲ ನೀಡುವ ಕಾಂಗ್ರೆಸಿಗರು ಭಯೋತ್ಪಾದನೆಗೆ ಬೆಂಬಲ ನೀಡುತ್ತಿದ್ದಾರೆ. ಉದಾಹರಣೆಗೆ
ಯೋಧರಿಗೆ ಕಲ್ಲು ಬಿಸಾಡುವ ಪ್ರಕರಣವನ್ನೇ ಮುಂದಿಟ್ಟರೂ ಕಾಂಗ್ರೆಸಿಗರು ಯಾವ ರೀತಿ ಲಜ್ಜೆ ಇಲ್ಲದಂತೆ ವರ್ತಿಸಿದ್ದರು ಗೊತ್ತಾ…
ಜಮ್ಮು ಮತ್ತು ಕಾಶ್ಮೀರದಲ್ಲಿ ಯೋಧರಿಗೆ ಕಲ್ಲು ಬಿಸಾಡುತ್ತಿದ್ದರು. ಕಲ್ಲಿನ ಏಟು ತಿಂದರೂ ಯೋಧರು ಏನೂ ಮಾಡುವಂತಿರಲಿಲ್ಲ. ಕೊನೆಗೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಘಟನಾ ಸ್ಥಳಕ್ಕೆ ತೆರಳಿ ಕಲ್ಲು ತೂರುವವರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದರು. ಒಬ್ಬ ಕಲ್ಲು ತೂರುವವನನ್ನು ಜೀಪಿಗೆ ಕಟ್ಟಿ ಕಲ್ಲಿನಿಂದ ರಕ್ಷಿಸಿಕೊಳ್ಳಲು ಮಾನವ ಗುರಾಣಿಯನ್ನಾಗಿ ಬಳಕೆ ಮಾಡಲಾಗಿತ್ತು. ಈ ವೇಳೆ ಕಾಂಗ್ರೆಸಿಗರು, ಮಾನವ ಹಕ್ಕು ಇಲಾಖೆ ಯಾವ ರೀತಿ ವರ್ತಿಸಿತ್ತೆಂದರೆ ಇಡೀ ದೇಶವೇ ಅವರ ಮೇಲೆ ಟೀಕೆ ವ್ಯಕ್ತಪಡಿಸಿತ್ತು.
ಇತ್ತೀಚೆಗೆ ಭಾರತೀಯ ಸೇನಾಪಡೆ ಬಂಡಿಪೋರ್ ಎಂಬಲ್ಲಿ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದರು. ಸೈನಿಕರು ದೊಡ್ಡ ಸಂಖ್ಯೆಯಲ್ಲಿ
ಭಯೋತ್ಪಾದಕರನ್ನು ಸುತ್ತುವರಿದಿದ್ದ ಸಂದರ್ಭದಲ್ಲಿ ಇದ್ದಕ್ಕಿಂದ್ದಂತೆ ಆಗಮಿಸಿದ ಆಗಂತುಕರು ಸೈನಿಕರ ಮೇಲೆ ಕಲ್ಲು ತೂರಾಟ ನಡೆಸಲಾರಂಭಿಸಿದರು. ಇದರಿಂದ ಮೂವರು ಭಯೋತ್ಪಾದಕರು ತಪ್ಪಿಸಿಕೊಳ್ಳುವಂತಾಯಿತು. ಸೈನಿಕರ ಮೇಲೆ ಕಲ್ಲುತೂರಲಾರಂಭಿಸಿದರು. ಈ ವೇಳೆ ಭಯೋತ್ಪಾದಕರು ದಾಳಿ ನಡೆಸಿದ ಕಾರಣ ಮೂವರು ಭಾರತದ ವೀರಯೋಧರು ಹುತಾತ್ಮರಾದರು. ಈ ವೇಳೆ ಎಚ್ಚರಗೊಂಡ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಒಂದು ವೇಳೆ ಸೈನಿಕರಿಗೆ ಕಲ್ಲು ತೂರಿದರೆ ಅವರನ್ನೂ ಭಯೋತ್ಪಾದಕರು ಎಂದು ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಆದರೆ ಈ ವೇಳೆ ಕೆಲವು ಕಾಂಗ್ರೆಸ್ ಮುಖಂಡರು ಯಾವ ರೀತಿ ಹೇಳಿಕೆ ನೀಡಿದ್ದರು ಗೊತ್ತೇ?
ಭಾರತೀಯದ ಯೋಧರು ನಮ್ಮ ಸಹೋದರರಿಗೆ ಶೂಟ್ ಮಾಡಬಾರದು: ರಂಜೀತ್ ರಂಜನ್(ಕಾಂಗೆಸ್ ಸಂಸದ)
ಸೈನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಆಲೋಚನಾ ಶಕ್ತಿಯನ್ನೇ ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ: ಸಂದೀಪ್ ದೀಕ್ಷಿತ್(ಕಾಂಗ್ರೆಸ್)
ಸೈನಾ ಮುಖ್ಯಸ್ಥ ಬಿಪಿನ್ ರಾವತ್ ತನ್ನ ಗೆರೆಯನ್ನು ದಾಟಿದ್ದು, ಅವರನ್ನು ಯಾರೂ ಕೂಡಾ ಬೆಂಬಲಿಸಬಾರದು: ಚಿದಂಬರಂ (ಕಾಂಗ್ರೆಸ್)
ಸೇನಾಪಡೆ ಪ್ರತಿಭಟನಾಕಾರರ ವಿರುದ್ಧ ಯಾವುದೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬಾರದು.: ಗುಲಾಂ ನಬಿ ಅಝಾದ್(ಕಾಂಗ್ರೆಸ್)
ಇದೆಲ್ಲಾ ಕಾಂಗ್ರೆಸಿಗರ ಹೇಳಿಕೆಗಳು.
ಕಾಂಗ್ರೆಸ್ ಪಕ್ಷವನ್ನು ನಡೆಸಿಕೊಂಡು ಬರುತ್ತಿರುವಾಕೆ ಇಟಲಿಯ ಸೋನಿಯಾ ಗಾಂಧಿ. ಈಕೆ ಬಾಟ್ಲಾಹೌಸ್ ಪ್ರಕರಣಕ್ಕೆ ಸಂಬಂಧಿಸಿ ನಿದ್ದೆಯನ್ನೇ ಮಾಡದೆ ಕಣ್ಣೀರು ಹಾಕಿದ್ದಳಂತೆ. ಇಂಥವರ ಕೈಯ್ಯಲ್ಲಿ ನಾವು ಭಾರತವನ್ನು ಕೊಟ್ಟಿದ್ದೆವು. ಕಾಂಗ್ರೆಸಿಗರು ಪ್ರತ್ಯೇಕತವಾದಿಗಳನ್ನು ಬೆಂಬಲಿಸಿದ್ದರಿಂದ ನಮ್ಮ ಹಲವಾರು ಸೈನಿಕರನ್ನು ಕಳೆದುಕೊಂಡಿದ್ದೇವೆ.
ನಮ್ಮ ದೇಶದ ಗೃಹಮಂತ್ರಿಯಾಗಿದ್ದ ಯುಪಿಎ ಪಕ್ಷದ ಪಿ. ಚಿದಂಬರಂ ಅವರು `ಹಿಂದೂ ಭಯೋತ್ಪಾದನೆ’ ಎಂದು ಸೃಷ್ಟಿಸಿ ಭಯೋತ್ಪಾದಕ ತನಿಖೆಯ ದಿಕ್ಕು ತಪ್ಪಿಸಿ ಭಯೋತ್ಪಾದಕರಿಗೆ ನೆರವಾಗಿದ್ದ. ಇದೇ ರೀತಿ ಕಾಂಗ್ರೆಸ್‍ನ ಅನೇಕ ಮಂದಿ ಮುಖಂಡರು ಹತ್ಯೆಗೀಡಾದ ಅನೇಕ ಭಯೋತ್ಪಾದಕರ ಪರವಾಗಿ ಅನುಕಂಪ
ವ್ಯಕ್ತಪಡಿಸಿದ್ದರು. ಇಂಥವರು ಇಂದು ಸೈನಿಕರ ವಿರುದ್ಧವೇ ಮಾತಾಡಿ ಭಾರತದ ಸೈನ್ಯವನ್ನು ಅವಮಾನ ಮಾಡುತ್ತಿದ್ದಾರೆ.
-ಚೇಕಿತಾನ