ತನ್ನೆಲ್ಲಾ ಸಾಲು ಸಾಲು ಹಗರಣಗಳನ್ನು ಹೊತ್ತುಕೊಂಡು ರಾಜ್ಯ ಸರಕಾರದಲ್ಲಿ ತನ್ನ ಕಾಂಗ್ರೆಸ್ ಆಡಳಿತದ ವೈಫಲ್ಯಗಳನ್ನು ಮರೆಮಾಚಲು ಕಾಂಗ್ರೆಸ್ ಪಕ್ಷ ಮಾಡಲು ಹೊರಟಿರುವ ನಾಟಕಗಳ ಒಂದು ಭಾಗವೇ ಈಗ ಹಮ್ಮಿಕೊಂಡಿರುವ ಮನೆ ಮನೆಗೆ ಕಾಂಗ್ರೆಸ್.. ಮನೆ ಮನೆಗೆ ಕಾಂಗ್ರೆಸ್ ಅಭಿಯಾನದಲ್ಲಿ ಬರುವ ಕಾಂಗ್ರೆಸ್ ಕಾರ್ಯಕರ್ತರಿಗೆ ಒಬ್ಬ ಹಿಂದೂ ರಾಷ್ಟ್ರೀಯವಾದಿಯಾಗಿ ನಾವು ಕೇಳುವ ಪ್ರಶ್ನೆ ಏನು ಗೊತ್ತಾ?
ಅಂದು ಗೋಹತ್ಯೆ ನಿಷೇದ ಕಾಯ್ದೆಗೆ ಒತ್ತುಕೊಡದೆ ಸಾರ್ವಜನಿಕವಾಗಿ ಗೋಮಾಂಸವನ್ನು ತಿಂದು ಗೋಮಾತೆಗೆ ಅಪಚಾರ ಮಾಡಿದ ಸಿದ್ದರಾಮಯ್ಯ ಈಗ ಮನೆ ಮನೆ ಕಾಂಗ್ರೆಸ್‍ಗೆ ಭೇಟಿ ನೀಡುತ್ತಿದ್ದರೆ !!… ಅನಾದಿ ಕಾಲದಿಂದಲೂ ಗೋಮಾತೆಯನ್ನು ಅತೀವ ಭಕ್ತಿಯಿಂದ ಪೂಜಿಸುತ್ತಿದ್ದ ಬಂದಿದ್ದು ಗೃಹ ಪ್ರವೇಶಕ್ಕೆ ಮೊದಲು ಈ ಗೋ ಮಾತೆಯನ್ನು ಒಳಹೊಕ್ಕಿಸಿ ಎಲ್ಲಾ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇವೆ… ಅಂತಹ ಸಂಸ್ಕøತಿಯನ್ನು ಹೊಂದಿರುವ ನಮ್ಮ ಹಿಂದೂಗಳ ಮನೆಗೆ ಗೋ ಮಾಂಸ ತಿಂದ ಇಂತಹ ಭ್ರಷ್ಟರನ್ನು ಒಳ ಪ್ರವೇಶಿಸಲು ಬಿಡುವುದೇ? ನಾನೂ ಗೋಮಾಂಸ ತಿನ್ನುತ್ತೇನೆ ಎಂದು ಹೇಳಿದ ಸರಕಾರ ನಿಮ್ಮದು… ಗೋವುಗಳನ್ನು ಪೂಜಿಸುವ ನನ್ನಂತಹವರ ಶ್ರದ್ಧೆ ಘಾಸಿಗೊಳಿಸಿದ ನಿಮಗೆ ಯಾಕೆ ನಾವು ಮನೆಯೊಳಗೆ ಸೇರಿಸಬೇಕು? ಮಾತನಾಡಿ ಈಗ ಸಿದ್ದರಾಮಯ್ಯ ಸರಕಾರದವರೇ ಈ ಪ್ರಶ್ನೆಯನ್ನು ನೋಡಿದ ನಿಮಗೆ ಮನಸ್ಸಲ್ಲಿ ಒಂದಿಷ್ಟು ನಾಚಿಕೆ ಮಾನ ಮರಿಯಾದೆ ಇದ್ದರೆ ಹಿಂದೂಗಳ ಮನೆಗೆ ಹೇಗೆ ಕಾಲಿಡಲು ಮನಸ್ಸು ಹೇಗೆ ಬರುತ್ತದೆ… ಹಿಂದೂಗಳ ಮತ ಪಡೆಯಲು ನೀವು ಅರ್ಹರಲ್ಲ ಅಂತಾ ನನಗೆ ಅನಿಸುತ್ತಿದೆ.
ಹಿಂದೂ ದೇವಸ್ಥಾನಗಳಿಲ್ಲಿ ಅದೆಷ್ಟೋ ವಾರ್ಷಿಕ ಆದಾಯಗಳು ಬರುತ್ತಾನೇ ಇರುತ್ತದೆ… ಆ ಹಣ ನೇರವಾಗಿ ಸರಕಾರ ತಲುಪುತ್ತದೆ.. ಹಿಂದೂ ದೇವಸ್ಥಾನಗಳಿಂದ ಅದೆಷ್ಟೋ ವಾರ್ಷಿಕ ಆದಾಯ ಬಂದರೂ ದೇವಸ್ಥಾನದ ನವೀಕರಣಕ್ಕೆ ಮಾತ್ರ ಹಣ ಕೊಡದಿರುವುದು ಆಶ್ಚರ್ಯಕರ!! ಯಾಕೆಂದರೆ ನಮ್ಮ ರಾಜ್ಯದಲ್ಲಿ ಅದೆಷ್ಟು ದೇವಾಲಯಗಳು ನವೀಕರಣಗೊಳ್ಳದೆ, ಸರಿಯಾದ ವ್ಯವಸ್ಥೆ ಸಿಗದೆ ಅವನತಿ ಸ್ಥಿತಿಗೆ ಬಂದರೂ ಕಾಂಗ್ರೆಸ್ ಸರಕಾರ ಮಾತ್ರ ಸುಮ್ಮನಿದೆ. ಹಿಂದೂ ದೇವಾಲಯದಿಂದ ಬಂದ ಹಣವನ್ನು ಆ ಮುಸ್ಲಿಮ್ ಮಸೀದಿ , ಚರ್ಚ್‍ಗಳಿಗೆ ಕೊಟ್ಟು ಸಹಕರಿಸುವ ನಿಮ್ಮಂತಹ ನಾಲಾಯಾಕು ಸರಕಾರವನ್ನು ನಮ್ಮ ಹಿಂದೂಗಳ ಮನೆಗೆ ಒಳಹೊಕ್ಕಲು ಬಿಟ್ಟರೆ ನಮಗೆ ಬುದ್ಧಿ ಇಲ್ಲ ಅಂತ ಹೇಳ ಬೇಕು ಅಷ್ಟೆ!! ಒಂದು ಸಲ ನಿಮ್ಮ ಮನಸ್ಸನ್ನು ಕೇಳಿ ನೀವು ಹಿಂದೂಗಳಿಗೆ ಎಷ್ಟು ಮೋಸ ಮಾಡುತ್ತಿದ್ದೀರಿ ಎಂದು. ನಿಮ್ಮನ್ನು ನಂಬಿದರೆ ನಮ್ಮ ದೇವಾಲಯಗಳು ಅಭಿವೃದ್ಧಿ ಕಂಡಾವೇ..?
ನಿಮ್ಮ ಸರಕಾರದ ಅವಧಿಯಲ್ಲಿ ಅದೆಷ್ಟೋ ಹಿಂದುಗಳು ಮಾರಣ ಹೋಮವಾಗಿದೆ. ಆದರೆ ಇದನ್ನು ನೀವೆಲ್ಲಾ ಸುಮ್ಮನೆ ನೋಡಿ ಕಕುಳಿತಿಲ್ಲವೇ…ಕೊಲೆ ಗೈದ
ಪಾಪಿಗಳನ್ನು ಹಿಡಿಯಲಾಗದೆ ಸುಮ್ಮನೆ ಕುಳಿತ್ತಿದ್ದೀರಲ್ಲವೇ…ನೀವು ಯಾವ ರೀತಿ ಸರಕಾರ ನಡೆಸುತಿದ್ದೀರಿ ಅಂತಾ ನಮಗೆ ಅರ್ಥವಾಗುತ್ತಿಲ್ಲ ಅಷ್ಟೆ!.. ನೀವು ಯಾವ ರೀತಿ ಹಿಂದುಗಳಿಗೆ ಬೆಂಬಲ ನೀಡುತ್ತಿದ್ದೀರಿ ಎಂದು ನಾನೊಬ್ಬ ಹಿಂದುವಾಗಿ ಪ್ರಶ್ನೆ ಪದೇ ಪದೇ ಕಾಡುತ್ತಿದೆ. ನಮ್ಮಂತಹ ಹಿಂದೂಗಳಿಗೆ ನಿಮ್ಮ ಸರಕಾರ ಎಷ್ಟು ಸೂಕ್ತ?
ಶ್ರೀರಾಮಚಂದ್ರ ಹಾಗೂ ಭಗವದ್ಗೀತೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಕೆ.ಎಸ್ ಭಗವಾನ್ ವಿರುದ್ಧ ಕ್ರಮ ಕೈಗೊಂಡು ಬಂಧಿಸುವ ಬದಲು ಇಂತಹವರಿಗೆ ಬೆಂಬಲ ನೀಡುತ್ತೀದ್ದೀರಲ್ಲವೇ? ಈತನಿಗೆ ಬೇರೆ ಸರಕಾರ ಬಸವಶ್ರೀ ಪ್ರಶಸ್ತಿ ಕೊಟ್ಟು ಸನ್ಮಾನ…!! ಎಂತಹ ದುರಂತವಲ್ಲವೇ ಹಿಂದೂಗಳೇ … ನಮ್ಮ ದೇಶದಲ್ಲಿ ಅದೆಷ್ಟೋ ಒಳ್ಳೆ ಕೆಲಸ ಮಾಡಿದವರಿದ್ದಾರೆ.. ದೇಶಕ್ಕಾಗಿ ಅನೇಕ ಜನ ಪ್ರಾಣ ತೆತ್ತವರಿದ್ದಾರೆ…ಅಂತಹವರನ್ನು ಪ್ರಶಸ್ತಿ ಕೊಟ್ಟು ಗೌರವಿಸುವ ಬದಲು ಇಂತಹ ಆಸ್ತಿಕನಿಗೆ ಪ್ರಶಸ್ತಿಯೇ? ಪ್ರಶಸ್ತಿ ಒಬ್ಬ ನಾಸ್ತಿಕನಾಗಿರುವ ನಾನು ನಿಮ್ಮ ಸರಕಾರವನ್ನೇಕೆ ಬೆಂಬಲಿಸಬೇಕು..?
ಇತ್ತೀಚೆಗೆ ಶರತ್ ಹತ್ಯೆಯ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪತ್ರಿಕಾಗೋಷ್ಟಿಯನ್ನು ಕರೆದಾಗ ಅಪರಾಧಿ ಯಾರೇ ಆಗಲಿ ಹಿಂದೂವೇ ಆಗಿರಲಿ
ಎನ್ನುತ್ತಾ ಕ್ಷಣ ಮಾತ್ರವೂ ಯೋಚಿಸದೆ ಹಿಂದೂ ಎಂದು ಉದ್ಘರಿಸಿದ ನಿಮ್ಮ ನಾಲಗೆ ಎಂತಹುದೋ.. ಯಾಕೆ ನಿಮಗೆ ಉಳಿದ ಧರ್ಮದ ಹೆಸರು ಹೇಳಲು ನಾಲಗೆ ಬರಲಿಲ್ಲವೇ? ಯಾವ ತಪ್ಪು ಮಾಡದ ಅಮಾಯಕ ಹಿಂದೂಗಳನ್ನು ಸುಖಾ ಸುಮ್ಮನೆ ಎಳೆಯುತ್ತಿದ್ದೀರಿ ಅಷ್ಟೆ..
ತಾಯಂದಿರನ್ನು ಸೆಕ್ಸ್ ಸ್ಲೇವ್ ಎಂದು ಹೇಳಿದ, ತನ್ನ ಪತ್ರಿಕೆಯಲ್ಲಿ ಅವಾಚ್ಯ ಅಶ್ಲೀಲ ಪದಗಳಿಂದಲೇ ಹಿಂದೂ ಮುಖಂಡರನ್ನು ಸಂಭೋದಿಸಿದ್ದ ಪತ್ರಕರ್ತೆಗೆ ಸರಕಾರಿ ಗೌರವಗಳೊಂದಿಗೆ ಅತ್ಯಸಂಸ್ಕಾರ ಮಾಡಿದ್ದೀರಿ… ಅಂತಹ ಹಿಂದೂ ವಿರೋಧಿಗಳು ನಿಮಗೆ ಪ್ರಿಯರೇ? ಇಂತಹ ಸರಕಾರ ಇನ್ನೂ ಬೇಕೆ ನಮಗೆ?
ನಿಮ್ಮ ಸರಕಾರದ ಪ್ರತಿನಿಧಿಗಳೇ ಅಧಿಕೃತವಾಗಿ ಧರ್ಮ ಒಡೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ…! ಮ್ಯಾನ್ಮಾರ್‍ನಿಂದ ನಮ್ಮ ಭಾರತಕ್ಕೆ ವಲಸೆ ಬಂದ ರೊಹಿಂಗ್ಯಾ ಮುಸ್ಲಿಮರಿಗೆ ಇಲ್ಲಿ ನೆಲೆ ಕೊಡಲು ಮುಂದಾಗಿದ್ದೀರಿ.. ಅದಲ್ಲದೇ ಅವರಿಗೇನು ಬಟ್ಟೆ, ಊಟ , ವಸತಿ ಒದಗಿಸುವಲ್ಲಿ ನಿರತರಾಗಿದ್ದೀರಿ.. ಇಲ್ಲಿರುವ ಭಾರತಿಯ ಹಿಂದೂಗಳಿಗೆ ಊಟ ವಸತಿ ಇಲ್ಲದೆ ಪರದಾಡುವ ಸ್ಥಿತಿ ಬಂದಿದೆ ಅದೆಲ್ಲಾ ನಿಮ್ಮ ಕಣ್ಣಿಗೆ ಹೇಗೆ ಕಾಣುತ್ತೆ ಬಿಡಿ…! ರೋಹಿಂಗ್ಯಾ ಮುಸ್ಲಿಮರನ್ನು ರಕ್ಷಿಸೋಕೆ ಬೇರೆ ಸುಪ್ರಿಮ್ ಕೋರ್ಟ್ ಮೆಟ್ಟಿಲೇರಿದ್ದೀರಾ….ಎಂತಹ ಅವಸ್ಥೆ ಬಂತು ನಮಗೆಲ್ಲಾ? ಹಿಂದುಗಳನ್ನು ನಿಮ್ಮ ಕಾಲ ಸಮಕ್ಕೆ ಮಾಡುತ್ತಿದ್ದೀರಿ… ಓಟಿಗಾಗಿ ನೀವು ಏನೂ ಮಾಡಲು ಹೇಸೋರಲ್ಲ ಎಂಬೂವುದು ನಮಗೆ ಈಗಾಗಲೇ ಸ್ಪಷ್ಟವಾಗಿದೆ.. ವೋಟಿಗಾಗಿ ಸಮಾಜದಲ್ಲಿ ಬೆಂಕಿ ಹಚ್ಚಲಾರಿರಿ ಎಂದು ನಾವು ಹೇಗೆ ನಂಬುವುದು?
ಮೌಢ್ಯ ನಿಷೇಧ ಕಾಯ್ದೆಯಡಿ ನೀವು ಕೇವಲ ಹಿಂದೂ ಧರ್ಮದ ಆಚರಣೆಯನ್ನು ಪ್ರಶ್ನಿಸುತ್ತೀರಿ… ಬೇರೆ ಧರ್ಮಗಳು ಮಾಡುವ ಮೌಢ್ಯಗಳು ನಿಮಗೆ ಕಾಣುವುದಿಲ್ಲವೇ ನಿಮಗೆ? ಹಿಂದೂಗಳು ಅಮಾಯಕರೆಂದು ಎಲ್ಲದನ್ನೂ ಪ್ರಶ್ನಿಸಿದರೆ ಒಂದು ದಿನ ಅವರೂ ತಿರುಗಿ ಬೀಳುವುದು ಗ್ಯಾರಂಟಿ ಅಷ್ಟೆ!…ಹಿಂದೂಗಳ ಮೌಢ್ಯವನ್ನು ಪ್ರಶ್ನಿಸಿದವರು ನೀವೂ ಒಬ್ಬ ಹಿಂದೂ ವಿರೋಧಿಯಲ್ಲ ಎಂಬುವುದು ಹೇಗೆ?
ಇನ್ನೂ ನಮ್ಮ ಆಡಳಿತ ಯೋಜನೆಗಳ ಬಗ್ಗೆ ಇನ್ನೂ ಅನೇಕ ಪ್ರಶ್ನೆಗಳಿವೆ. ಸದ್ಯ ಒಬ್ಬ ಹಿಂದೂವಾಗಿ ನಾನು ಕೇಳುವ ಪ್ರಶ್ನೆಗಳಿವು… ಇದಕ್ಕೆಲ್ಲಾ ಉತ್ತರ ಹುಡುಕಿಯೇ ಮನೆ ಮನೆ ಭೇಟಿ ನೀಡಿ ಇಲ್ಲಾಂದ್ರೆ ಇಡೀ ಹಿಂದೂಗಳು ಶಾಪ ಹಾಕುತ್ತಿರುತ್ತಾರೆ.!! ಕಾಂಗ್ರೆಸ್ಸಿಗರೇ ಒಂದು ಸಲ ನಿಮ್ಮ ಮನಸ್ಸಾಕ್ಷಿಯನ್ನು ಕೇಳಿ ನೀವೇನು ಮಾಡುತ್ತಿದ್ದೀರಿ ಅಂತಾ..
-ಶೃಜನ್ಯಾ