ಅಂಕಣ

ಕಾಂಗ್ರೆಸ್ ಮಾಡಿದ ದೇಶದ್ರೋಹಿ ಕೆಲಸವೇನು ಎಂದು ಗೊತ್ತಾದರೆ ನೀವು ಖಂಡಿತಾ ಆ ಪಕ್ಷಕ್ಕೆ ಓಟು ಹಾಕಲಾರಿರಿ!!

ಪಾಕಿಸ್ತಾನ ರಾಷ್ಟ್ರ ಭಾರತದ ಮೇಲೆ ಎಸಗಿದ ದ್ರೋಹಗಳನ್ನು ಯಾವ ಭಾರತೀಯನೂ ಕ್ಷಮಿಸಲಾರ. ಭಾರತದ ವಿರುದ್ಧ ಜಿಹಾದ್ ಸಾರಿರುವ ಪಾಕಿಸ್ತಾನ,
ಭಯೋತ್ಪಾದನೆ ನಡೆಸಿ ಸಾವಿರಾರು ಮುಗ್ಧ ಭಾರತೀಯರನ್ನು ಕೊಂದು ಹಾಕಿದೆ. ಮತ್ತೊಂದು ಕಡೆ ಕದನವಿರಾಮ ಉಲ್ಲಂಘಿಸುತ್ತಾ ಭಾರತದ ವಿರುದ್ಧ ಕಾಲ್ಕಿರಿದು ಯುದ್ಧಕ್ಕೆ ಬರುತ್ತಿದೆ. ಇಷ್ಟೆಲ್ಲಾ ಆಗುತ್ತಿದ್ದರೂ ಭಾರತದ ಕಾಂಗ್ರೆಸ್ ಪಕ್ಷ ಏನು ಮಾಡುತ್ತಿದೆ ಗೊತ್ತೇ? ಕಾಂಗ್ರೆಸ್ ಪಕ್ಷಕ್ಕೆ ಓಟು ಹಾಕುವವರೆಲ್ಲಾ ಕಾಂಗ್ರೆಸ್ ಮಾಡಿದ ಅನಾಚಾರ ಏನೆಂಬುವುದನ್ನು ತಿಳಿಯಿರಿ. ಇಷ್ಟೆಲ್ಲಾ ಅನಾಚಾರ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಓಟು ಹಾಕಬೇಕೇ ಬೇಡವೇ ಎನ್ನುವುದನ್ನು ನೀವೇ ನಿರ್ಧರಿಸಿ.

ಉತ್ತರ ಪ್ರದೇಶದ ಮೊರಾದಾಬಾದ್‍ನಲ್ಲಿ ನಡೆದ ರಾಹುಲ್‍ಗಾಂಧಿ ಅವರ ಯಾತ್ರೆಯಲ್ಲಿ ಪಾಕಿಸ್ಥಾನ ಪರ ಘೋಷಣೆಗಳನ್ನು ಕೂಗಲಾಗಿತ್ತು. ಉರಿ ದಾಳಿ ಹುತಾತ್ಮರಿಗೆ ಗೌರವ ಸಲ್ಲಿಸಲು ಕಾಂಗ್ರೆಸ್ ಪರವಾಗಿ ಅಲ್ಲಿನ ಸ್ಥಳೀಯ ಘಟಕ ಯಾತ್ರೆ ಆಯೋಜಿಸಲಾಗಿತ್ತು. ಈ ಯಾತ್ರೆಯಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್‍ಗಾಂಧಿ ಕೂಡಾ ಪಾಲ್ಗೊಂಡಿದ್ದರು. ಈ ವೇಳೆ, ಪಾಕಿಸ್ಥಾನ ಜಿಂದಾಬಾದ್ ಎಂಬ ದೇಶ ವಿರೋಧಿ ಘೋಷಣೆಗಳು ಮೊಳಗಿದ್ದು, ಉರಿ ದಾಳಿ ಹುತಾತ್ಮರಿಗೆ ಅವಮಾನ ಮಾಡಲಾಗಿತ್ತು. ರಾಹುಲ್‍ಗಾಂಧಿ ಯಾತ್ರೆಯಲ್ಲಿ ಪಾಕ್ ಪರ ಘೋಷಣೆ ಕೂಗಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ಶಿಬಿರದ ಮೇಲಿನ ಉಗ್ರರ ದಾಳಿಯಿಂದ ದೇಶಕ್ಕೆ ದೇಶವೇ ಪಾಕಿಸ್ತಾನದ ವಿರುದ್ಧ ಸಿಡಿದೆದ್ದಿತ್ತು. ಆದರೆ ಇಷ್ಟೆಲ್ಲಾ ಆಗಿದ್ದರೂ ಕಾಂಗ್ರೆಸ್ ದೇಶವಿರೋಧಿ ಕೃತ್ಯ ಎಸಗಿತ್ತು. ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ 200ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಲಾಗಿತ್ತು.

ಶ್ರೀನಗರದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ದೇಶವಿರೋಧಿ ಘೋಷಣೆ ಕೂಗುವ ಮೂಲಕ ಕಾಂಗ್ರೆಸಿಗರು ದೇಶದ್ರೋಹಿ ಹಣೆಪಟ್ಟಿಯನ್ನು
ಕಟ್ಟಿಸಿಕೊಂಡಿದ್ದರು. ಸಮಾವೇಶದ ಸಂದರ್ಭ ನಡೆದ ಮೆರವಣಿಗೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು `ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿರುವುದನ್ನು ಖಾಸಗಿ ಮಾಧ್ಯಮಗಳು ಪ್ರಸಾರ ಮಾಡಿದ್ದವು.

ಗೋಹತ್ಯೆ ನಿಷೇಧಿಸಿರುವುದನ್ನು ಖಂಡಿಸಿದ್ದ ಕೇರಳದ ಕಾಂಗ್ರೆಸ್ ಮುಖಂಡರಿಬ್ಬರು ನಡುರಸ್ತೆಯಲ್ಲೇ ಗೋವನ್ನು ಕತ್ತರಿಸಿ ಹಾಕಿದ್ದಲ್ಲದೆ ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳುವ ಮೂಲಕ ತಾವೂ ಕೂಡಾ ದೇಶದ್ರೋಹಿಗಳು ಎನ್ನುವುದನ್ನು ತೋರಿಸಿಕೊಟ್ಟಿದ್ದರು.

ಕಾಂಗ್ರೆಸ್‍ನ ಟ್ವೀಟ್ ಮುಖ್ಯಸ್ಥೆ ರಮ್ಯ ಅವರು ಪಾಕಿಸ್ತಾನ ನಿಜವಾಗಿಯೂ ಸ್ವರ್ಗ, ಆದರೆ ಮಂಗಳೂರು ನರಕ ಎಂದಿದ್ದರು. ಇಡೀ ಜಗತ್ತೇ ಪಾಕಿಸ್ತಾನವನ್ನು ಉಗ್ರರ ಸ್ವರ್ಗ ಎಂದು ಕರೆಸಿಕೊಂಡರೆ ಕಾಂಗ್ರೆಸ್‍ನ ರಮ್ಯಾ ಮಾತ್ರ ಪಾಕಿಸ್ತಾನವನ್ನೇ ಸ್ವರ್ಗ ಎಂದು ಹೇಳಿ ವಿವಾದವನ್ನು ಮೈಗೆಳೆದುಕೊಂಡಿದ್ದರು.

ಮಂಜುಗಡ್ಡೆಯ ಅಡಿ ಕೊರೆಯುವ ಚಳಿಯಲ್ಲಿ ಸಿಕ್ಕಿಹಾಕಿಗೊಂಡ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ದೇಶಕ್ಕಾಗಿ ಪ್ರಾಣತೆತ್ತರೂ ಅವರ ಅಂತ್ಯ ಸಂಸ್ಕಾರಕ್ಕಿರಲಿ, ಸೌಜನ್ಯಕ್ಕಾದರೂ ಅವರ ಕುಟುಂಬ ಸದಸ್ಯರನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿಯಾಗಿರಲಿಲ್ಲ. ಆದರೆ ದೇಶದ್ರೋಹಿ ಅಫ್ಜಲ್ ಗುರು ತಿಥಿಯನ್ನು ಆಯೋಜಿಸಿ ಜೈಲು ಪಾಲಾದ ಕನ್ನಯ್ಯ ಕುಮಾರ್‍ಗೆ ಇದೇ ರಾಹುಲ್ ಬೆಂಬಲಕ್ಕೆ ನಿಲ್ಲುತ್ತಾರೆ. ಬಹಿರಂಗ ಸಭೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್, ಭಾರತ್ ಕೀ ಬರ್ಬಾದಿ ತಕ್ ಜಂಗ್ ರಹೇಗಿ ಅಂತ ಘೋಷಣೆ ಕೂಗಿದ ದೇಶದ್ರೋಹಿಗಳನ್ನು ಬೆಂಬಲಿಸಿ “ಫ್ರೀಡಮ್ ಆಫ್ ಸ್ಪೀಚ್ ಎಲ್ಲರಿಗೂ ಇದೆ. ಈ ದೇಶದಲ್ಲಿ ಯಾರೂ ಹಿಟ್ಲರ್‍ನಂತೆ ವರ್ತಿಸಲು ನಾವು ಬಿಡಲ್ಲ” ಎಂದು ಯಾರೋ ಬರೆದು ಕೊಟ್ಟ ಭಾಷಣವನ್ನು ರಾಹುಲ್ ಬಿಗಿದು ಬರುತ್ತಾರೆ.ಬಿಜೆಪಿಯನ್ನು ದೂಷಿಸಲು ಅಸ್ತ್ರಕ್ಕಾಗಿ ಹುಡುಕಾಡುವ ಕಾಂಗ್ರೆಸಿಗರಿಗೆ ದೇಶವಿರೋಧಿ ಘೋಷಣೆ ಕೂಗುವ ವೇಮುಲ, ಕನ್ನಯ್ಯ ಕುಮಾರ್ ಮುಂತಾದವರು ಆಶಾಕಿರಣವಾಗಿ ಕಾಣುತ್ತಾರೆ.

ಇನ್ನೂ ಮುಂದುವರಿದು ಹೇಳುವುದಾದರೆ ಸೋನಿಯಾಗಾಂಧಿಯ ಬಲಗೈ ಬಂಟ ಅಹ್ಮದ್ ಪಟೇಲ್‍ಗೆ ಜನರ ರಕ್ತ ಹೀರುವ ಐಸಿಸ್ ಜೊತೆ ಸಂಪರ್ಕ ಇದೆ ಎಂದು
ಜಹಜಗ್ಗೀರಾಗಿದೆ. ಗುಜರಾತ್‍ನಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಸೋನಿಯಾಳ ಕೃಪೆಯಿಂದ ಗೆದ್ದ ಅಹ್ಮದ್ ಪಟೇಲ್‍ಗೆ ಇತ್ತೀಚೆಗೆ ಬಂದ ವರದಿಯ ಪ್ರಕಾರ ಐಸಿಸ್ ಉಗ್ರ ಸಂಘಟನೆ ಜೊತೆ ಸಂಪರ್ಕವಿದೆ ಎಂಬ ವಿಚಾರ ಬಹಿರಂಗಗೊಂಡಿದೆ. ಇದೆಲ್ಲಾ ಏನು ಹೇಳುತ್ತಿದೆ?

ಭ್ರಷ್ಟಾಚಾರದಲ್ಲಿ ನಂಬರ್ 1 ಸ್ಥಾನ ಗಿಟ್ಟಿಸಿರುವ ಕಾಂಗ್ರೆಸ್ ಮುಂದುವರಿದು ದೇಶವಿರೋಧಿ ಘೋಷಣೆ ಕೂಗುವ ಮಟ್ಟಕ್ಕೂ ಬಂದು ತಲುಪಿದೆ ಎಂದರೆ ಈ ಪಕ್ಷದ ಪರಿಸ್ಥಿತಿ ಏನಾಗಿದೆ ಎಂದು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು. ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಸ್ವಾತಂತ್ರ್ಯ ಸಿಕ್ಕ ಬಳಿಕ ಭಾರತವನ್ನು ಆಡಳಿತ ನಡೆಸಿತು. ಆದರೆ ಆ ಬಳಿಕ ದೇಶದಲ್ಲಿ ನಡೆಸಿದ್ದು ಮಾತ್ರ ಭ್ರಷ್ಟಾಚಾರ. ಈ ಪಕ್ಷವನ್ನು ನೆಹರೂ ಪಕ್ಷ ಗುತ್ತಿಗೆ ತೆಗೆದುಕೊಂಡಿದ್ದಷ್ಟೇ ಅಲ್ಲದೆ ಆ ಬಳಿಕ ಸೋನಿಯಾ ಗಾಂಧಿಯ ತೆಕ್ಕೆಗೆ ಬಂದಿತು. ಸೋನಿಯಾಳ ಕೈಕೆಳಗೆ ಗುಲಾಮರಂತೆ ವರ್ತಿಸುವ ಕಾಂಗ್ರೆಸ್‍ನ ಮುಖಂಡರು, ಸಂಪೂರ್ಣವಾಗಿ ಸ್ವಾಭಿಮಾನವನ್ನೇ ಕಳೆದುಕೊಂಡಿದ್ದಾರೆ.

ಭ್ರಷ್ಟಾಚಾರ ನಡೆಸಿದ್ದು ಸಾಕಿಲ್ಲ ಎಂಬಂತೆ ಇಂದು ದೇಶವಿರೋಧಿ ಘೋಷಣೆ ಕೂಗುತ್ತಾ, ಭಯೋತ್ಪಾದಕರ ಜೊತೆ ನಂಟು ಇರುವುದು ಸಾಬೀತುಪಡಿಸುತ್ತಾ ಕಾಂಗ್ರೆಸ್ ಅವಸಾನದ ಅಂಚಿನಲ್ಲಿದೆ. ದೇಶಭಕ್ತ ಸಂಘಟನೆಯನ್ನು ವಿರೋಧಿಸಲು ದೇಶದ್ರೋಹಿಗಳ ಜೊತೆ ಸೇರುವ ಕಾಂಗ್ರೆಸಿಗರನ್ನು ಏನೆಂದು ಕರೆಯಬಹುದು? ಇಂತಹಾ ಪಕ್ಷ ಮತ್ತೆ ಓಟು ಕೇಳಲು ನಿಮ್ಮ ಮನೆಗ ಬರುತ್ತದೆ. ನೀವು ದೇಶವನ್ನು ಪ್ರೀತಿಸುವುದಾದರೆ ಖಂಡಿತಾ ಆ ಪಕ್ಷ ಓಟು ನೀಡಬೇಡಿ.

-ಚೇಕಿತಾನ

Tags

Related Articles

Close