ಅಂಕಣದೇಶಪ್ರಚಲಿತ

ಕಾಂಗ್ರೆಸ್ ‘ಹಿಂದೂ ವಿರೋಧಿ’ ಪಕ್ಷ!! ರಾಜೀನಾಮೆ ನೀಡಿದ ರಾಹುಲ್ ಗಾಂಧಿಯ ಚುನಾವಣಾ ವ್ಯವಸ್ಥಾಪಕ!!

‘ಒಡೆದು ಆಳುವ ನೀತಿಯಿಂದಲೇ’ ಅದೆಷ್ಟೋ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಪಕ್ಷ ಇವತ್ತು ತನ್ನದೇ ಕರ್ಮವನ್ನು ಅನುಭವಿಸುವಂತಾಗಿದೆ! ರಾಹುಲ್ ಗಾಂಧಿಯ ಚುನಾವಣಾ ವ್ಯವಸ್ಥಾಪಕರಾದ ಆಶಿಶ್ ಕುಲಕರ್ಣಿ ಶುಕ್ರವಾರ ಹುದ್ದೆಗೆ ರಾಜೀನಾಮೆ ನೀಡಿದ್ದರಿಂದ ರಾಹುಲ್ ಗಾಂಧಿ ಗರ ಬಡಿದಂತಾಗಿದ್ದಾರೆ!! ಪಕ್ಷದ ಮುಖ್ಯ ವ್ಯಕ್ತಿಗಳ ಜೊತೆ ಹೇಗಿರಬೇಕೆಂದೂ ಗೊತ್ತಿಲ್ಲದ ರಾಹುಲ್ ಗಾಂಧಿ ಮತ್ತೊಮ್ಮೆ ತಮ್ಮ ‘ದುರ್ಬಲತೆ’ಯನ್ನು ಸಾಬೀತು ಪಡಿಸಿದ್ದಾರೆ!

ರಾಜೀನಾಮೆಯ ಪತ್ರದಲ್ಲಿ ಆಶಿಶ್ ಕುಲಕರ್ಣಿ, ” ಕಾಂಗ್ರೆಸ್ ಪಕ್ಷ ಎಡ-ಪಂಥದ ಕಡೆ ಬಹಳವಾಗಿಯೇ ವಾಲಿದ್ದು, ‘ಮಧ್ಯಮ’ ನಡೆಯನ್ನೂ ಮರೆತಿದೆ. ಅವರ ಎಡ – ಬದಿ ಒಲವು ಎಷ್ಟಿದೆಯೆಂದರೆ, ಜೆಎನ್ ಯು ಹೋರಾಟಗಾರರಿಗೆ, ಕಾಶ್ಮೀರದ ಪ್ರತ್ಯೇಕವಾದಿಗಳಿಗೆ ಹಾಗೂ ಉಗ್ರರಿಗೆಲ್ಲ ಬೆಂಬಲ ನೀಡಿದ್ದಾರೆ.”
ಎಂದು ಬರೆದಿದ್ದಾರೆ.

ಅಲ್ಲದೇ, ” ಈ ಕಾಂಗ್ರೆಸ್ ಬರೀ ಎಡ ಬದಿಯಲ್ಲಿಲ್ಲದೆ, ಬದಲಾಗಿ ಪೂರ್ಣವಾಗಿ ‘ಹಿಂದೂ ವಿರೋಧಿ’ಯಾಗಿದೆ. ಕಾಂಗ್ರೆಸ್ ಕಮ್ಯುನಿಸ್ಟ್ ಪಕ್ಷದಂತೆಯೇ ಬದಲಾಗಿದೆ.” ಎಂದು ಆರೋಪಿಸಿದ್ದಾರೆ!

” ಪಕ್ಷ ಭಾರತದ ವಾಸ್ತವದಿಂದ ಬಹಳ ದೂರ ನಡೆದಿದೆ. ಅಲ್ಲದೆಯೇ, ಸ್ಥಾನದಲ್ಲಿದ್ದಾಗ ಕೆಲವು ನಾಯಕರು ಎಲ್ಲಾ ರೀತಿಯ ಸೌಲಭ್ಯಗಳನ್ನನುಭವಿಸಿದ್ದಾರೆ. ಅಲ್ಲದೆಯೇ, ಸ್ಥಾನವಿಲ್ಲದೇ ಇದ್ದಾಗ ಆಸಕ್ತಿಯೂ ತೋರದಷ್ಟು ಸ್ವಾರ್ಥಿಯಾಗಿದ್ದಾರೆ. ಅಲ್ಲದೆಯೇ, ಯಾವುದೇ ರೀತಿಯ ವಾದಗಳಿಗೂ ಚರ್ಚೆಗಳಿಗೂ ಅವಕಾಶವಿಲ್ಲದ ಪಕ್ಷದಲ್ಲಿ ಯಾವ ವ್ಯವಹಾರಗಳನ್ನೂ ನಡೆಸಲು ಸಾಧ್ಯವಿಲ್ಲ.” ಎಂದು ರಾಜೀನಾಮೆ ನೀಡಿದ್ದಾರೆ.

ಇದೊಂದು ಪರಂಪರೆ ಆಡಳಿತ!!!

“ಪಕ್ಷ ಅಭ್ಯರ್ಥಿಗಳನ್ನಾರಿಸುವಲ್ಲಿ ಮತ್ತೆ ಮತ್ತೆ ತಪ್ಪುತ್ತಿದೆ. ಅಲ್ಲದೆಯೇ, ಸಾಮರ್ಥ್ಯವನ್ನೂ ಕಳೆದುಕೊಂಡಿದೆ. ಅರ್ಹತೆ ಇರಲಿ ಇಲ್ಲದಿರಲಿ, ಮೊದಲೇ ಆರಿಸಿದ ಅಭ್ಯರ್ಥಿಗೆ ಟಿಕೇಟ್ ನೀಡುತ್ತಿದೆ. ಹಣವಿರುವ ಅಥವಾ ರಾಜಕೀಯ ಹಿನ್ನೆಲೆಯವರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ.”

‘ಸಾಮಾನ್ಯ ಜನರಿಗಾಗಲೀ,ಅಥವಾ ಪಕ್ಷಕ್ಕೋಸ್ಕರ ದುಡಿದವನಿಗಾಗಲೀ ಯಾವುದೇ ಅವಕಾಶವಿಲ್ಲ.”

ಆಶಿಶ್ ಕುಲಕರ್ಣಿಯವರು 2009 ರಿಂದ 2014 ರ ವರೆಗೆ ನಡೆದ ಚುನಾವಣೆಗಳಲ್ಲೆಲ್ಲ ವ್ಯವಸ್ಥಾಪಕರಾಗಿ ಕೆಲಸ ಮಾಡಿದ್ದರು. ಅಲ್ಲದೇ, ಲೋಕಸಭಾ ಚುನಾವಣೆಯಲ್ಲೂ ಮಹತ್ತರ ಪಾತ್ರ ವಹಿಸಿದ್ದ ಆಶಿಶ್ ಕುಲಕರ್ಣಿಯವರು ಈಗ ಪಕ್ಷದಿಂದ ಹೊರಗುಳಿದಿದ್ದಾರೆ.

ತನ್ನದೇ ಪಕ್ಷದ ನಂಬಿಕಸ್ಥರಿಂದಲೇ ‘ಹಿಂದೂ ವಿರೋಧಿ’ ಎಂದು ಕರೆಸಿಕೊಂಡಿರುವ ಕಾಂಗ್ರೆಸ್ ಮತ್ತೊಮ್ಮೆ ನಾಚಿಕೆಗೀಡಾಗಿದೆ. ಬೇರೆ ಪಕ್ಷದವರು ಈ ಹಿಂದೆ ಕಾಂಗ್ರೆಸ್ ನನ್ನು ವಿರೋಧಿಸಿದ್ದರೂ ಬಾಯಿ ಬಡಿಯುತ್ತಿದ್ದ ಕಾಂಗ್ರೆಸ್ ಈಗ ವಿದ್ಯುತ್ ತಗುಲಿದ ಸುಟ್ಟ ಕಾಗೆಯಂತಾಗಿರುವುದು ಸುಳ್ಳಲ್ಲ. ಈಗ, ಕಾಂಗ್ರೆಸ್ ಪ್ರೋ-ಪಾಕಿಸ್ಥಾನಿಯಾಗಿರುವುದರ ಬಗ್ಗೆ ಸ್ವತಃ ಪಕ್ಷದವರಿಂದಲೇ ಆರೋಪಕ್ಕೀಡಾಗಿದೆ!

 

– ಅಗ್ನಿಹೋತ್ರಿ

Tags

Related Articles

Close