ಅಂಕಣದೇಶಪ್ರಚಲಿತ

ಕಾರ್ತಿ ಚಿದಂಬರಂ ಅವರಿಗೆ ತಂದೆ ಪಿ. ಚಿದಂಬರಂರವರನ್ನು ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರದಲ್ಲಿ ತನಿಖೆ ನಡೆಸಬೇಕೆಂದು ಬಯಸಿದ್ದಾರೆ!! ಪ್ರಕರಣವೊಂದರ ಅತೀ ದೊಡ್ಡ ತಿರುವು!!!

ಕಾರ್ತಿ ಚಿದಂಬರಂ ಅವರ ತಂದೆ ಪಿ. ಚಿದಂಬರಂ ಐಎನ್ಎಕ್ಸ್ ಮೀಡಿಯಾ ಸ್ಕ್ಯಾಮ್ನಲ್ಲಿ ತನಿಖೆ ನಡೆಸಬೇಕೆಂದು ಬಯಸಿದ್ದಾರೆ..!!

ದಿನಗಳು ಕಳೆಯುತ್ತಿದ್ದಂತೆ ನಿಗೂಢ ವಿಸ್ಮಯ‌ ವಿಚಾರಗಳು ಬಯಲಾಗುತ್ತಿದೆ. ಹೇಗೆಯೆಂಬ ಪ್ರಶ್ನೆ ಕಾಡುತ್ತಿದೆಯೇ?? ಹೌದು, ಚಿದಂಬರಂ ಕುಟುಂಬವು ಈಗ
ಆಳವಾದ ತೊಂದರೆಯಲ್ಲಿದೆ. ಕೇಂದ್ರ ತನಿಖಾ‌ ಸಂಸ್ಥೆಗಳು ಹಸಿದ ರಣಹದ್ದುಗಳಂತೆ ಕಾನೂನುಬಾಹಿರ ಕೃತ್ಯಗಳ ಹಿಂದೆ ಬಿದ್ದಿದ್ದಾರೆ. ಅಕ್ರಮ ಚಟುವಟಿಕೆಗಳನ್ನು ತಂದೆ ಮತ್ತು ಮಗನ ಜೋಡಿ ವ್ಯವಸ್ಥಿತವಾದ ಭ್ರಷ್ಟಾಚಾರದ ಯೋಜನೆ ಕಾರ್ಯಗತಗೊಳಿಸಲಾಗಿದೆಯೆಂಬುದು ಸ್ಪಷ್ಟವಾಗಿದೆ.

ಆದರೆ ಸೋಜಿಗದ ವಿಚಾರ ಕೇಳಿ. ತನಿಖೆ ಮುಂದುವರಿದಂತೆ ತಿರುವುಗಳು ಪ್ರಕರಣಕ್ಕೆ ಸಿಗುತ್ತಾ ಹೋಗುತ್ತಿದೆ. ಕಾರ್ತಿ ಚಿದಂಬರಂ ತನ್ನ ತಂದೆಯನ್ನೇ ದೂರಿದ್ದಾರೆ. “ನಾನು ತನಿಖೆಯ ವಿಷಯವಲ್ಲ, ಅವೆಲ್ಲಾ ನನ್ನ ತಂದೆ”, ಎಂಬುದಾಗಿ ಕಾರ್ತಿ ಚಿದಂಬರಂ ಅವರು ತನಿಖೆಯ ಸಂದರ್ಭದಲ್ಲಿ ಹೇಳಿದರು.

ಕಾರ್ತಿ ಚಿದಂಬರಂ ಅವರ ಪರವಾಗಿ, ಹಿರಿಯ ವಕೀಲ ಗೋಪಾಲ್ ಸುಬ್ರಮಣ್ಯಂ ಅವರು, “ವಿಚಾರಣೆಯ ವಿಷಯವೇನಲ್ಲ ಆದರೆ 2007 ರಲ್ಲಿ ಕಂಪನಿಯು ವಿದೇಶಿ ಹೂಡಿಕೆ ಪ್ರಚಾರ ಮಂಡಳಿ ಗೆ(ಎಫ್ಐಪಿಬಿ) ಅನುಮೋದನೆಗಳನ್ನು ನೀಡುವಾಗ ಹಣಕಾಸು ಸಚಿವರಾಗಿದ್ದವರು ನನ್ನ ತಂದೆ. ಯಾವ ಷರತ್ತುಗಳನ್ನು ಉಲ್ಲಂಘಿಸಲಾಗಿದೆ ಎಂದು ಹೇಳುತ್ತಿದ್ದಾರೋ ಅದಕ್ಕೆ ಹೊಣೆ ನನ್ನ ತಂದೆ”. ಯೆಂಬುದಾಗಿ ಸ್ಪಷ್ಟನೆಯನ್ನೂ ನೀಡಿದ್ದಾರೆ.

ಫಾರಿನ್ ಇನ್ವೆಸ್ಟ್ಮೆಂಟ್ ಪ್ರಮೋಷನ್ ಬೋರ್ಡ್ (ಎಫ್ಐಪಿಬಿ) ಅನುಮೋದನೆಗಳನ್ನು ನೀಡಿದಾಗ ತಂದೆ ಚಿದಂಬರಂ ಹಣಕಾಸು ಸಚಿವರಾಗಿದ್ದರು ಎಂದು ಕಾರ್ತಿ
ಹೇಳಿದರು. ಯಾವುದೇ ಎಫ್ಐಪಿಬಿ ಸದಸ್ಯರನ್ನೂ ಪ್ರಶ್ನಿಸಲಾಗಿಲ್ಲ ಏಕೆ?? ಈ ಪ್ರಶ್ನೆಗಳಿಗೆ ಉತ್ತರ ಸಿಗದೇ ಅವರು ನಿರಾಶೆಗೊಂಡಿದ್ದರು. ಹಾಗಾದರೆ ಇದು ಏನನ್ನು ಸೂಚಿಸುತ್ತದೆ? ಅಕ್ರಮ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪಿ. ಚಿದಂಬರಂ ತನ್ನ ಮಗನನ್ನು ಒತ್ತಾಯಿಸುತ್ತಿದ್ದರೆಂದೋ??

ಕಾರ್ತಿ ಚಿದಂಬರಂ ವಿರುದ್ಧ ಪ್ರಕರಣಕ್ಕೆ ಸಿಬಿಐ ಒಳ್ಳೆಯ ಕಾರಣವನ್ನು ಹೇಳುತ್ತದೆ !!!

ಸಿಬಿಐ ಇಂದು ಸುಪ್ರೀಂ ಕೋರ್ಟ್ ಗೆ ಪಿ. ಚಿದಂಬರಂ ಮತ್ತು ಅವರ ಪುತ್ರ ವಿರುದ್ಧವಿರುವ ತನಿಖಾ ವರದಿಗಳಿಗೆ ಒಳ್ಳೆಯ ಮತ್ತು ಸ್ಪಷ್ಟವಾದ ಕಾರಣವಿತ್ತು ಶಿಕ್ಷೆ
ವಿಧಿಸಬೇಕೆಂದು ಒತ್ತಡ‌ ಹೇರಿತ್ತು.

ಆದರೆ ಕಾರ್ತಿ ಚಿದಂಬರಂ ವಿದೇಶದಲ್ಲಿ ಪ್ರಯಾಣಿಸಲು ಬಯಸಿದ್ದರು !!!

ವಿಪರ್ಯಾಸವೆಂದರೆ ಇದೇ ಇರಬೇಕು..”ನಾನು ಹೋಗುತ್ತಿರುವಾಗ ನಾನು ನ್ಯಾಯಾಲಯಕ್ಕೆ ತಿಳಿಸುತ್ತಿದ್ದೇನೆ. ನಾನು ಖಂಡಿತವಾಗಿಯೂ ಮರಳುತ್ತೇನೆ ಕಾರಣ, ನನ್ನ ಹೆಂಡತಿ ಇಲ್ಲಿದ್ದಾರೆ, ನನ್ನ ಮಗಳು ಇಲ್ಲಿದ್ದಾರೆ. “ಇದು ಕಾರ್ತಿ ಮಾಡಿದ ಹತಾಶವಾದವಾಗಿತ್ತು .ಆದರೆ ನ್ಯಾಯಾಲಯವು ಅವರ ಮಾತಿಗೆ ಯಾವುದೇ ಎಚ್ಚರಿಕೆ ನೀಡಲಿಲ್ಲ. ವಿಜಯ್ ಮಲ್ಯ ಮಾಡಿದಂತೆ ಕಾರ್ತಿಯೂ ಭಾರತದಿಂದ ಪಲಾಯನ ಮಾಡುವುದಾಗಿ ನ್ಯಾಯಾಲಯವು ಹೆದರಿಕೆಯಿದೆಯೆಂಬುದು ನಿಜವೇ?

ಅರಿಯದು.ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 11 ರಂದು ಈ ವಿಚಾರಣೆಯ ಕುರಿತಾಗಿ ಆಲಿಸಲಿದೆ.

ಪಿ. ಚಿದಂಬರಂ ಮತ್ತು ಕುಟುಂಬಕ್ಕೆ ಉತ್ತಮ ದಿನಗಳು ಸಿಬಿಐ ಮೇ 16 ರಂದು ನಿವಾಸದ ಮೇಲೆ ದಾಳಿ ಮಾಡಿದಾಗಲೇ ಅಂತ್ಯಗೊಂಡಿತು. ಇದು ದೆಹಲಿ,
ಗುರುಗ್ರಾಮ್, ಮುಂಬೈ ಮತ್ತು ಚಂಡೀಗಢದಲ್ಲಿ ನಡೆದ ಸರಣಿ ದಾಳಿಯಾಗಿದೆ. ಆದ್ದರಿಂದ, ಒಟ್ಟಾರೆಯಾಗಿ 13 ಸ್ಥಳಗಳಿಂದ ದಾಖಲೆಗಳನ್ನು ಅಧಿಕಾರಿಗಳು
ವಶಪಡಿಸಿಕೊಂಡರು. 2007 ರಲ್ಲಿ ನಡೆಯುತ್ತಿದ್ದ ಒಪ್ಪಂದವು ಈ ದಾಳಿಯ ಪ್ರಧಾನ ಗಮನವಾಗಿತ್ತು. FIFB ಅನುಮೋದನೆಯನ್ನು ಪಡೆಯಲು INX ಮೀಡಿಯಾ ಲಂಚ ನೀಡಿತು ಎಂಬುದಾಗಿ ದೂರಲಾಗಿದೆ‌. INX ಮಾಧ್ಯಮವನ್ನು ಕಾರ್ತಿ, ಇಂದ್ರಾನಿ ಮುಖರ್ಜಿ ಮತ್ತು ಪೀಟರ್ ಮುಖರ್ಜಿ ಮಾಲೀಕತ್ವ ವಹಿಸಿದ್ದಾರೆ ಮತ್ತು ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಯಿತು. ಒಟ್ಟಾರೆಯಾಗಿ ತಪ್ಪು ಮಾಡಿದವರು ಒಂದಲ್ಲಾ ಒಂದು ದಿನ ಶಿಕ್ಷೆ ಅನುಭವಿಸಲೇಬೇಕೆಂಬುದು ಸತ್ಯವೇ..

– ಆತ್ಮಿಕಾ

Tags

Related Articles

Close