ಅಂಕಣ

ಕಾವಿ ತೊಟ್ಟ ಸ್ವಾಮೀಜಿಯ ಬಗ್ಗೆ ಹದಿನೈದು ದಿನಗಟ್ಟಲೇ ಸುದ್ದಿ ಬಿತ್ತರಿಸುವ ಮಾಧ್ಯಮಗಳು ಕರ್ನಾಟಕದ ಮೌಲ್ವಿಯ ಬಗ್ಗೆ ಮೌನವಹಿಸುತ್ತಿರುವುದು ಯಾಕೆ?!

ಸ್ಯಾಂಡಲ್ ವುಡ್ ನಟಿಯೊಂದಿಗೆ ಅಸಭ್ಯ ವರ್ತನೆ ತೋರಿ ಸಿಕ್ಕಿಬಿದ್ದಿರುವ ಜಂಗಮ ಮಠದ ದಯಾನಂದ ಸ್ವಾಮೀಜಿಯ ವರ್ತನೆ ಜಗಜ್ಜಾಹೀರಾದ ಹೊತ್ತಲ್ಲಿಯೇ
ಮೌಲ್ವಿಯೊಬ್ಬನ ಕಾಮಪ್ರಸಂಗ ಇದೀಗ ಬಯಲಾಗಿದೆ. ವಿಪರ್ಯಾಸ ಎಂದರೆ ಈ ಬಗ್ಗೆ ಯಾವುದೇ ಸುದ್ದಿ ಮಾಧ್ಯಮಗಳು ಈ ಪ್ರಕರಣವನ್ನು ಬಿತ್ತರಿಸದೇ
ಮೌನವಹಿಸಿದೆ!! ಆದರೆ ಈ ಮೌಲ್ವಿಯ ವಿಡಿಯೋ, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ!!

ದಿನೇ ದಿನೇ ಸ್ವಾಮೀಜಿಗಳ ಕಾಮದಾಟ ಪ್ರಕರಣಗಳನ್ನು ನೋಡಿ ನೋಡಿ ಬೇಸತ್ತ ಜನರಿಗೆ ಸ್ವಾಮೀಜಿಗಳನ್ನು ಕಂಡರೆ ಭಕ್ತಿ ಮೂಡುವ ಬದಲು ಚಪ್ಪಲಿ ಏಟು ಕೊಡುವ ಪರಿಸ್ಥಿತಿಗಳು ನಿರ್ಮಾಣ ಮಾಡಿದೆ ಈ ಮಾಧ್ಯಮಗಳು. ಅದರಲ್ಲೂ ಬಹು ಮುಖ್ಯವಾಗಿ ದೃಶ್ಯ ಮಾಧ್ಯಮಗಳು!! ಹೌದು.. ಕೇವಲ ಸ್ವಾಮೀಜಿಗಳ ರಾಸಲೀಲೆಯನ್ನು ಬಿಡಿ ಬಿಡಿಯಾಗಿ ತೋರಿಸಿ ಕಾವಿ ತೊಟ್ಟ ಸ್ವಾಮೀಜಿಗಳ ಮೇಲೆ ಅಸಹ್ಯ ಹುಟ್ಟಿಸಿರುವ ಮಾಧ್ಯಮಗಳು, ಮೌಲ್ವಿಯ ರಾಸಲೀಲೆಯ ಬಗ್ಗೆ ಮೌನವಹಿಸಿದ್ದು ಮಾತ್ರ ವಿಪರ್ಯಾಸ!!

ಮೌಲ್ವಿಯ ಸ್ತ್ರೀ ವ್ಯಾಮೋಹದ ಚಳಿ ಬಿಡಿಸಿದ ಜಮಾತ್ ಬಾಂಧವರು..!!

ಸ್ವಾಮೀಜಿಯ ಕಾಮದಾಟ ಪ್ರಕರಣ ತಣ್ಣಗಾಗುವ ಮುನ್ನವೇ ಮೌಲ್ವಿಯೊಬ್ಬನ ಕಾಮಪ್ರಸಂಗ ಇದೀಗ ಬಯಲಾಗಿದೆ. ಊರ ಜನರಿಗೆಲ್ಲಾ ಬುದ್ಧಿ ಹೇಳುತ್ತಿದ್ದ
ಮೌಲ್ವಿಯೊಬ್ಬ ಪರಸ್ತ್ರೀ ಸಂಗ ನಡೆಸಲು ಹೋಗಿ ಊರ ಮಂದಿಯಿಂದ ಥಳಿಸಿಕೊಂಡ ಘಟನೆ ಕಾಪು ತಾಲೂಕಿನ ಬೆಳಪು ಮಸೀದಿಯಲ್ಲಿ ನಡೆದಿದೆ!! ಧರ್ಮದ ಮೌಲ್ಯ ಶಿಕ್ಷಣವನ್ನು ಭೋದಿಸುವ ಮುಖ್ಯ ಧರ್ಮಗುರು (ಖತೀಬ್)ಗೆ ಜಮಾತ್ ಬಾಂಧವರೇ ಸೇರಿ ಮೌಲ್ವಿಯ ಸ್ತ್ರೀ ವ್ಯಾಮೋಹದ ಚಳಿ ಬಿಡಿಸಿದ್ದಾರೆ!! ಅಷ್ಟೇ ಅಲ್ಲದೇ, ಈ ವಿಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ. ಆದರೆ ನಮ್ಮ ಸುದ್ದಿವಾಹಿನಿಗಳು ಕರಾಳ ಮೌನ ವಹಿಸಿದ್ದು ಮಾತ್ರ ವಿಪರ್ಯಾಸ!!

ಇತ್ತೀಚೆಗೆ ಜಂಗಮ ಮಠದ ದಯಾನಂದ ಸ್ವಾಮೀಜಿಯವರ ರಾಸಲೀಲೆಯ ವಿಡಿಯೋ ತುಣುಕುಗಳನ್ನು ಪ್ರಸಾರ ಮಾಡುವಲ್ಲಿ ನಿರತರಾಗಿರುವ ಟಿವಿ ಮಾಧ್ಯಮಗಳು ಮೌಲ್ವಿಯ ರಾಸಲೀಲೆಯ ಬಗ್ಗೆ ಯಾವುದೇ ಸುದ್ದಿ ಬಿತ್ತರಿಸದೇ ಸುಮ್ಮನೆ ಕುಳಿತಿದೆ!! ಕಾವಿ ತೊಟ್ಟಿರುವ ಸ್ವಾಮೀಜಿಗಳ ಕಾಮದಾಟದ ಬಗ್ಗೆ ಎಳೆಎಳೆಯಾಗಿ ತೋರಿಸುವ ಮಾಧ್ಯಮಗಳು ಮುಸ್ಲಿಂ ಮೌಲ್ವಿಗಳ ವಿಚಾರಗಳ ಬಗ್ಗೆ 15 ದಿನ ಬಿಡಿ, ಕೇವಲ ಒಂದು ದಿನದ ಮಟ್ಟಿಗೆ ಸುದ್ದಿ ಬಿತ್ತರಿಸಲು ಸಾಧ್ಯವಾಗಲೇ ಇಲ್ಲ!!

ಮಸೀದಿಯ ಮುಖ್ಯ ಧರ್ಮಗುರು ಖತೀಬ್‍ನ ಕಾಮಪ್ರಸಂಗ ಬಯಲಾಗಿದ್ದಾದರೂ ಹೇಗೆ??

ಕಳೆದ ಕೆಲವು ತಿಂಗಳ ಹಿಂದಷ್ಟೇ ಬೆಳಪು ಮಸೀದಿಗೆ ಮುಖ್ಯ ಧರ್ಮಗುರು (ಖತೀಬ್) ಆಗಿ ಸೇರಿಕೊಂಡಿದ್ದ ಈತ ಬೆಳಪುವಿನ ವಿವಾಹಿತ ಮಹಿಳೆಯೊಬ್ಬರ ಜೊತೆ ಸಖ್ಯ ಬೆಳೆಸಿದ್ದ. ಧಾರ್ಮಿಕ ವಿಚಾರ ಹೇಳುತ್ತಲೇ ಆಕೆಯನ್ನು ಪುಸಲಾಯಿಸಿ ಮಂಗಳೂರಿನ ಲಾಡ್ಜ್‍ವೊಂದಕ್ಕೆ ಕರೆದೊಯ್ದು ಮಜಾ ಉಡಾಯಿಸಿದ್ದಾನೆ ಎಂಬ ಆರೋಪವೂ ಕೇಳಿ ಬಂದಿದೆ!! ಧರ್ಮದ ಬಗ್ಗೆ ಬೋಧನೆಯನ್ನು ಮಾಡುವ ಜೊತೆಗೆ ಕಾಮದಾಟವನ್ನೂ ನಡೆಸುತ್ತಿದ್ದು, ಆತನ ಮೋಡಿಗೆ ಬಿದ್ದಿದ್ದೇ ಬೆಳಪುವಿನ ವಿವಾಹಿತ ಮಹಿಳೆ!!

ದುರಾದೃಷ್ಟಕ್ಕೆ ಆ ಮಹಿಳೆಯ ಸಂಬಂಧಿಕರೊಬ್ಬರು ಇವರನ್ನು ಕಂಡಿದ್ದು, ತಕ್ಷಣ ಬೆಳಪು ಮಸೀದಿಯ ಆಡಳಿತ ಮಂಡಳಿಯವರಿಗೆ ವಿಷಯ ತಿಳಿಸಿದ್ದಾರೆ. ಹೆಣ್ಣು ಮಕ್ಕಳಿಗೆ ಮೊಬೈಲ್ ಕೊಡಬಾರದು, ಹೆಣ್ಣು ಮಕ್ಕಳು ಹಾಗೆ ಮಾಡಬಾರದು ಹೀಗೆ ಮಾಡಬಾರದು ಎಂದು ಉಪದೇಶ ಮಾಡುವ ನಿಮಗೆ ಅದೇ ಪರಸ್ತ್ರೀ ಜೊತೆ ಕಾಮದಾಟ ನಡೆಸಲು ಹೇಗೆ ಮನಸ್ಸು ಬಂತು? ಅಂತ ಪ್ರಶ್ನಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ!! ಸದ್ಯ ಈ ಕಾಮಿ ಮೌಲ್ವಿಯನ್ನು ಜಮಾತ್ ಬಾಂಧವರೇ ಸೇರಿ ಮೌಲ್ವಿಯ ಸ್ತ್ರೀ ವ್ಯಾಮೋಹದ ಚಳಿ ಬಿಡಿಸಿದ್ದಾರಲ್ಲದೇ, ಬೆಳಪು ಮಸೀದಿಯಿಂದ ಹೊರದಬ್ಬಿದ್ದಾರೆ!!

ಇಷ್ಟೆಲ್ಲಾ ಪ್ರಸಂಗಗಳು ನಡೆದಿದ್ದರೂ ಕೂಡ ನಮ್ಮ ಮಾಧ್ಯಮಗಳು ಮಾತ್ರ ತುಟಿಕ್ ಪಿಟಿಕ್ ಎನ್ನದೇ ಸುಮ್ಮನೆ ಕುಳಿತಿರುವುದು ಮಾತ್ರ ವಿಪರ್ಯಾಸ!! ಒಂದುವೇಳೆ ಕಾವಿ ತೊಟ್ಟ ಸ್ವಾಮೀಜಿಗಳು ಈ ರೀತಿ ಮಾಡಿದ್ದಿದ್ದರೇ ಇಡೀ ಹೊತ್ತು ಸ್ವಾಮೀಜಿಗಳ ಕಾಮದಾಟದ ವಿಡೀಯೋವನ್ನು ಬಿತ್ತರಿಸಿ, ಮಠದಲ್ಲೇ ಜಾಂಡಾ ಹೂಡುತ್ತಿದ್ದರೋ ಏನೋ?? ಆದರೆ ಕಾಮಿ ಮೌಲ್ವಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್ ಆಗಿದ್ದರೂ ಕೂಡ ನಮ್ಮ ದೃಶ್ಯವಾಹಿನಿಗಳು ಕರಾಳ ಮೌನವಹಿಸಿದೆ!!

ಸ್ವಾಮೀಜಿಗಳ ಬಗ್ಗೆ 24 ಗಂಟೆ ಸುದ್ದಿಯನ್ನು ಬಿತ್ತರಿಸಿ ಇಡೀ ಕಾವಿ ತೊಟ್ಟಿರುವವರ ಬಗ್ಗೆ ಅಸಹ್ಯ ಹುಟ್ಟಿಸುವಂತೆ ಸುದ್ದಿ ಬಿತ್ತರಿಸುವ ಮಾಧ್ಯಮಗಳೇ…. ಈಗ
ಎಲ್ಲಿದ್ದೀರಿ???

ಮೂಲ:Original Link – Read Here

– ಅಲೋಖಾ

Tags

Related Articles

Close