ಪ್ರಚಲಿತ

ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸುವುದೇ ನನ್ನ ಗುರಿ, ಅದಕ್ಕಾಗಿ ನಾನು ಏನು ಬೇಕಾದರೂ ಮಾಡಬಲ್ಲೆ: ಮೋದಿಗೆ ಸವಾಲೊಡ್ಡಿದ ಉಗ್ರ ಹಫೀಝ್!!

ಮುಂಬೈ ಮೇಲಿನ ದಾಳಿಗೆ 9 ವರ್ಷವಾಗುವ ಕೆಲವೇ ದಿನಗಳ ಮುನ್ನ ಪಾಕಿಸ್ತಾನ ಮತ್ತೊಂದು ಆಘಾತ ನೀಡಿದ್ದು, ಮುಂಬೈ ಮೇಲಿನ ದಾಳಿ ರೂವಾರಿ, ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್‍ನನ್ನು ಬಿಡುಗಡೆ ಮಾಡಿ ಪಾಕಿಸ್ತಾನ ನ್ಯಾಯಾಲಯ ಆದೇಶ ನೀಡಿದ ಬೆನ್ನಲ್ಲೇ ಭಾರತ ವಿರೋಧಿ ಹೇಳಿಕೆಯನ್ನು ನೀಡಿ ಮತ್ತೆ ಸುದ್ದಿಯಲ್ಲಿದ್ದಾನೆ!!

ಹೌದು…….ಇಸ್ಲಾಂ ಮೂಲಭೂತವಾದದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಸುಮಾರು 12 ಜನ ಉಗ್ರರ ತಂತ್ರಗಾರಿಕೆಯಿಂದ ಪಾಕಿಸ್ತಾನದಿಂದ ಭಾರತದ ಒಳ ನುಸುಳಿದ್ದು ಅಲ್ಲದೆ, ಸತತ ಮೂರು ದಿನಗಳ ಕಾಲ ಮುಂಬಯಿ ನಗರವನ್ನು ಗುರಿಯಾಗಿಸಿಕೊಂಡು ಬಾಂಬ್ ಮತ್ತು ಗುಂಡಿನ ಮಳೆಗರೆದಿದ್ದು, ಈಡೀ ಮುಂಬಯಿ ಮಹಾನಗರವು ಸತತ ಮೂರು ದಿನಗಳ ಕಾಲ ಭಯೋತ್ಪಾದಕರ ಕಪಿ ಮುಷ್ಟಿಯಲ್ಲಿ ಸಿಲುಕಿ ಅಕ್ಷರಶಃ ನರಕ ದರ್ಶನಕ್ಕೊಳಗಾಗಿತ್ತು!! ದಾಳಿ ಮುಗಿದು ಎಲ್ಲ ಉಗ್ರರನ್ನು ಭಾರತದ ಸೇನೆ ಹಾಗು ದೇಶದ ಆಂತರಿಕ ಪೆÇೀಲಿಸ್ ಪಡೆ ಹತ್ಯೆ ಮಾಡಿತ್ತು!! ಅದರಲ್ಲಿ ಒಬ್ಬ ಉಗ್ರನನ್ನು ಜೀವಂತವಾಗಿ ಸೆರೆ ಹಿಡಿಯುವಲ್ಲಿ ಸಫಲವಾಯಿತು.

ಆದರೆ, ಜಾಗತಿಕ ಉಗ್ರ ಮುಂಬೈ ದಾಳಿ ಸಂಚುಕೋರ ಎಂದೆನಿಸಿದ ಹಫೀಜ್ ಸಯೀದ್ ನನ್ನು ಪಾಕಿಸ್ತಾನದ ನ್ಯಾಯಾಂಗ ಪರಾಮರ್ಶೆ ಮಂಡಳಿ ಸೂಚನೆಯಂತೆ ಗುರುವಾರ ತಡರಾತ್ರಿ ಗೃಹಬಂಧನದಿಂದ ಮುಕ್ತಗೊಳಿಸಲಾಗಿದೆ. ಬಿಡುಗಡೆಯ ನಂತರ ಎಂದಿನ ವರಸೆ ಆರಂಭಿಸಿರುವ ಹಫೀಜ್, ಭಾರತದ ಮನವಿಯಂತೆ ಅಮೆರಿಕ ಒತ್ತಡ ಹೇರಿದ್ದರಿಂದ ಪಾಕಿಸ್ತಾನ ಸರ್ಕಾರ, ಕಾಶ್ಮೀರಕ್ಕೆ ಸಂಬಂಧಿಸಿ ನನ್ನ ಧ್ವನಿ ಅಡಗಿಸಲು 10 ತಿಂಗಳು ಗೃಹ ಬಂಧನದಲ್ಲಿ ಇಡಲಾಗಿತ್ತು. ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಇನ್ನೂ ಹೋರಾಡುವೆ. ದೇಶದ ಜನರನ್ನು ಈ ವಿಷಯಕ್ಕಾಗಿ ಒಗ್ಗೂಡಿಸುವೆ. ಕಾಶ್ಮೀರಿಗರಿಗೆ ಸ್ವಾತಂತ್ರ್ಯ ಕೊಡಿಸುವುದೇ ನನ್ನ ಗುರಿ. ಅದರಿಂದ ಹಿಂದೆ ಸರಿಯಲಾರೆ ಎಂದು ಘೋಷಿಸಿದ್ದಾನೆ.

 

ಭಯೋತ್ಪಾದನಾ ನಿಗ್ರಹ ಕಾಯ್ದೆ(ಎಟಿಎ) ಅಡಿಯಲ್ಲಿ ಹಫೀಜ್‍ನನ್ನು ಬಂಧಿಸಲಾಗಿತ್ತು. ಕಳೆದ ಜನವರಿ 31ರಿಂದ ಗೃಹ ಬಂಧನದಲ್ಲಿ ಇರಿಸಲಾಗಿದ್ದು, ಬಂಧನದ ಅವಧಿ 3 ತಿಂಗಳ ವರೆಗೂ ವಿಸ್ತರಿಸುವಂತೆ ಪಾಕಿಸ್ತಾನ ಸರ್ಕಾರ ಮಾಡಿದ್ದ ಮನವಿಯನ್ನು ಪಂಜಾಬ್ ಪ್ರಾಂತ್ಯದ ನ್ಯಾಯಾಂಗ ಪರಿಶೀಲನಾ ಮಂಡಳಿ ತಿರಸ್ಕರಿಸಿ ಬಿಡುಗಡೆ ಆದೇಶ ನೀಡಿದೆ. 2008ರ ನವೆಂಬರ್ 26ರಂದು ನಡೆದ ಮುಂಬೈ ದಾಳಿಯಲ್ಲಿ 166 ಜನರು ಮೃತಪಟ್ಟಿದ್ದರು. ಈ ದಾಳಿ ನಡೆದು ಒಂಬತ್ತು ವರ್ಷಗಳು ಕಳೆಯುತ್ತಿರುವ ಸಮಯದಲ್ಲಿ ದಾಳಿಯ ರುವಾರಿ ಹಫೀಜ್ ಬಿಡುಗಡೆಯಾಗಿದೆ.

“ನನ್ನ ವಿರುದ್ಧದ ಯಾವುದೇ ಆರೋಪಗಳನ್ನು ಸಾಬೀತುಪಡಿಸಲಾಗಿಲ್ಲ. ಆದ್ದರಿಂದ ಮೂವರು ನ್ಯಾಯಮೂರ್ತಿಗಳ ನೇತೃತ್ವದ ಪೀಠವು ನನ್ನನ್ನು ಬಿಡುಗಡೆ ಮಾಡಲು ಆದೇಶಿಸಿದೆ. ಭಾರತವು ನನ್ನ ವಿರುದ್ಧ ಆಧಾರರಹಿತ ಆರೋಪ ಮಾಡಿದ್ದು, ನ್ಯಾಯಾಲಯದ ಆದೇಶವು ನಾನು ಮುಗ್ಧ ಎಂಬುದನ್ನು ಸಾಬೀತುಪಡಿಸಿದೆ” ಎಂದಿದ್ದಾನೆ.

ಸಾರ್ವಜನಿಕ ಸುರಕ್ಷತೆಗೆ ಜಮಾತ್ ಉದ್ ದವಾ ಮುಖ್ಯಸ್ಥ ಹಫೀಜ್ ಕಂಟಕ ಎಂಬ ಪಾಕ್ ಸರ್ಕಾರದ ವಾದವನ್ನು ತಳ್ಳಿಹಾಕಿರುವ ನ್ಯಾಯಾಲಯವು ಆತನನ್ನು ಬಿಡುಗಡೆ ಮಾಡುವಂತೆ ಇತ್ತಿಚೆಗೆ ಸೂಚನೆ ನೀಡಿತ್ತು. ಕಳೆದ ಜನವರಿಯಿಂದ ಹಫೀಜ್ ನನ್ನು ಲಾಹೋರ್ ನಲ್ಲಿ ಗೃಹ ಬಂಧನದಲ್ಲಿದ್ದ ಈತನನ್ನು ಬಿಡುಗಡೆ ಮಾಡಿದ್ದು ಭಾರತ ವಿರೋಧಿ ಹೇಳಿಕೆಗಳನ್ನು ನೀಡಿ, ಭಾರತಕ್ಕೆ ಸವಾಲೊಡ್ಡುತ್ತಿದ್ದಾನೆ!!

ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸುತ್ತದೆ ಎಂದು ಹೇಳಿಕೆ ನೀಡಿದ್ದ ಪಾಕಿಸ್ತಾನ ಮತ್ತೊಮ್ಮೆ ಎಲ್ಲರನ್ನೂ ಮೂರ್ಖರನ್ನಾಗಿಸಿದ್ದು, ಹಫೀಜ್ ಸಯೀದ್‍ನನ್ನು ಜಾಗತಿಕ ಉಗ್ರ ಎಂದು ಅಮೆರಿಕವೇ ಘೋಷಿಸಿದೆ. ಆದರೆ “ಕಾಶ್ಮೀರಕ್ಕಾಗಿ ಪಾಕಿಸ್ತಾನದ ಜನರನ್ನು ಒಗ್ಗೂಡಿಸುತ್ತೇನೆ. ಅಲ್ಲಿನ ಜನರಿಗೆ ಸ್ವಾತಂತ್ರ್ಯ ದೊರಕಿಸಿಕೊಡಲು ಸಹಕರಿಸುತ್ತೇನೆ” ಎಂದು ಭಾರತ ವಿರೋಧಿ ಹೇಳಿಕೆ ನೀಡಿರುವ ಈತನನ್ನು ಮುಗ್ಧ ಎಂದು ಸಾಬೀತುಪಡಿಸಿದ್ದು ಮಾತ್ರ ದುರಾದೃಷ್ಟಕರ!!!

source:
http://vijayavani.net/%E0%B2%B9%E0%B3%8A%E0%B2%B0%E0%B2%97%E0%B3%86-%E0%B2%AC%E0%B2%82%E0%B2%A6-%E0%B2%B9%E0%B2%AB%E0%B3%80%E0%B2%9C%E0%B3%8D-%E0%B2%AD%E0%B2%BE%E0%B2%B0%E0%B2%A4%E0%B2%A6-%E0%B2%B5%E0%B2%BF%E0%B2%B0/ ಅಲೋಖಾ

Tags

Related Articles

Close