ಅಂಕಣಪ್ರಚಲಿತ

ಕುಟುಂಬದ ಸುರಕ್ಷತೆಯ ರಕ್ಷಣೆಗಾಗಿ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ!!

ಕುಟುಂಬದ ಭವಿಷ್ಯಕ್ಕಾಗಿ ಮಾತ್ರವಲ್ಲದೇ, ಸಂಭವನೀಯ ಘಟನೆಯಲ್ಲಿಯೂ ಕೂಡ ಕುಟುಂಬದ ಸುರಕ್ಷತೆಯ ರಕ್ಷಣೆಗಾಗಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯನ್ನು ಜಾರಿಗೊಳಿಸಿದ್ದು, ವ್ಯಕ್ತಿಗತವಾಗಿ 2 ಲಕ್ಷ ರೂಪಾಯಿಗಳವರೆಗೆ ವಿಮಾ ರಕ್ಷಣೆ ಲಭ್ಯವಾಗಲಿದೆ!!

ಹೌದು… ವಿಮಾ ಯೋಜನೆಯ ವಾರ್ಷಿಕ ಪ್ರೀಮಿಯಂ 330 ರೂಪಾಯಿಗಳಾಗಿದ್ದು ಖಾತೆದಾರ ವ್ಯಕ್ತಿ ಯಾವುದೇ ಬಗೆಯಲ್ಲಿ ಮತಪಟ್ಟರೆ 2 ಲಕ್ಷ ರೂಪಾಯಿ ಜೀವವಿಮೆ ತಮ್ಮ ಪರಿವಾರಕ್ಕೆ ದೊರಕಲಿದ್ದು, ಪಾಲಿಸಿಯ ವಯೋಮಿತಿ 18 ರಿಂದ 50 ವರ್ಷದ ವ್ಯಕ್ತಿಗಳಿಗೆ ಲಭ್ಯವಿರುತ್ತದೆ. ಪ್ರಧಾನಮಂತ್ರಿಗಳ ಬಹು ಭರವಸೆಯ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆಯು ಭಾರತೀಯ ಜೀವ ವಿಮಾ ನಿಗಮದೊಂದಿಗೆ ಅನುಷ್ಠಾನಗೊಂಡ ಮಹತ್ತರ ಯೋಜನೆಗಳಲ್ಲೊಂದಾಗಿದೆ!!

ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯ ಲಾಭಗಳೇನು?

18 ರಿಂದ 50 ವರ್ಷದೊಳಗಿನ ಆಧಾರ್ ಕಾರ್ಡ್ ಹೊಂದಿದ ನಾಗರಿಕರು ಈ ನೂತನ ಜೀವ ವಿಮಾ ಯೋಜನೆಯಲ್ಲಿ ಪಾಲ್ಗೊಳ್ಳಬಹುದಾಗಿದ್ದು, ವಾರ್ಷಿಕ ಪ್ರೀಮಿಯಂ ಕೇವಲ 330 ರೂಪಾಯಿಗಳಾಗಿವೆ!! ಇನ್ನು ವ್ಯಕ್ತಿಗತವಾಗಿ 2 ಲಕ್ಷ ರೂಪಾಯಿಗಳವರೆಗೆ ವಿಮಾ ರಕ್ಷಣೆ ದೊರೆಯಲಿರುವುದು ಈ ಯೋಜನೆಯ ವಿಶೇಷ!! 50ನೇ ವರ್ಷಕ್ಕೆ ಪಾಲಿಸಿ ಪಡೆದರೂ ಸಹ ವಾರ್ಷಿಕ ವಿಮಾ ಕಂತನ್ನು ಪಾವತಿಸುವ ಮೂಲಕ 55ನೇ ವರ್ಷದವರೆಗೂ ವಿಮಾ ರಕ್ಷಣೆ ಪಡೆಯಬಹುದು!! ಆದರೆ ಇದಕ್ಕೆ ಸೇವಾ ಶುಲ್ಕ ವಿನಾಯತಿ ಇರುತ್ತದೆ. ಅಷ್ಟೇ ಅಲ್ಲದೇ ಈ ಯೋಜನೆಯ ಲಾಭವನ್ನು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಎಲ್ಲ 576 ಶಾಖೆಗಳಲ್ಲಿ ಪಡೆಯಬಹುದಾಗಿದೆ.

ಸಾಮಾಜಿಕ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಇಂದಿಗೂ ಸರಿ ಸುಮಾರು ಶೇ.75ರಷ್ಟು ಜನರನ್ನು ಜೀವ ವಿಮಾ ಯೋಜನೆಯ ಮೂಲಕ ತಲುಪಬೇಕಾದ ಅನಿವಾರ್ಯತೆಯಿದ್ದು , ಆ ನಿಟ್ಟಿನಲ್ಲಿ ಪ್ರಭಾವಶಾಲಿಯಾಗಿ ಕಾರ್ಯನಿರ್ವಹಿಸಲು ಎಲ್ಲಾ ಬ್ಯಾಂಕ್‍ಗಳು ಸಮರ್ಥವಾಗಿದೆ!! ಇನ್ನು ವಾರ್ಷಿಕ ವಿಮಾ ಕಂತು (330 ರೂ.) ಇಷ್ಟು ಕಡಿಮೆ ಮೊತ್ತದಲ್ಲಿ 2ಲಕ್ಷ ರೂಪಾಯಿಗಳವರೆಗೆ ಜೀವ ವಿಮೆ ನೀಡಬಲ್ಲ ಇಂತಹ ಯೋಜನೆಯೂ ಸದ್ಯಕ್ಕೆ ಯಾವುದೇ ದೇಶದಲ್ಲಿಲ್ಲ ಎನ್ನುವುದು ಹೆಮ್ಮೆಯ ವಿಚಾರ. ಅಷ್ಟೇ ಅಲ್ಲದೇ, ತಮ್ಮ ಬ್ಯಾಂಕಿನ ಎಲ್ಲ ಶಾಖೆಗಳಲ್ಲಿಯೂ ಕೂಡ ಈ ವಿಮಾ ಯೋಜನೆಯ ನೋಂದಣಿ ಮಾಡಬಹುದಾಗಿದೆ!!

ಖಾತೆ ತೆರೆಯಲು ಬೇಕಾಗುವ ದಾಖಲೆಗಳು:

* ಖಾತೆ ತೆರೆಯಲು 3 ಭಾವ ಚಿತ್ರದೊಂದಿಗೆ ಗುರುತು ಮತ್ತು ರಹವಾಸಿ ದಾಖಲೆ ನೀಡಬೇಕಾಗುತ್ತದೆ.
* ಆಧಾರ ಕಾರ್ಡ್ ಇದ್ದರೆ ಇನ್ನಿತರ ದಾಖಲೆಗಳ ಅವಶ್ಯಕತೆ ಇರುವುದಿಲ್ಲ.
* ಆಧಾರ್ ಕಾರ್ಡ್ ಇಲ್ಲದಿದ್ದವರು ಮತದಾರ ಗುರುತಿನ ಚೀಟಿ, ರೇಶನ್ ಕಾರ್ಡ್, ವಾಹನ ಚಾಲನಾ ಅನುಮತಿಪತ್ರ ನೀಡಬಹುದು.
* ಅದ್ಯಾವ ದಾಖಲೆ ಇರದಿದ್ದವರು ಅಧಿಕೃತ ಸಾರ್ವಜನಿಕ ಪ್ರಾಧಿಕಾರ ಅಥವಾ ಸರಪಂಚರ ಪತ್ರ ನೀಡಿದರೂ ಸಾಕಾಗುತ್ತದೆ.

ಇದಷ್ಟೇ ಅಲ್ಲದೇ, ಕೇಂದ್ರ ಸರಕಾರ ಹಾಗೂ ಭಾರತೀಯ ರಿಸರ್ವ ಬ್ಯಾಂಕ್ ಮಾರ್ಗದರ್ಶನ ಅನುಸಾರ ಖಾತೆ ಪ್ರಾರಂಭಕ್ಕೆ ಯಾವುದೇ ಪ್ರಾರಂಭಿಕ ಠೇವಣಿ ಅವಶ್ಯಕತೆ ಇರುವುದಿಲ್ಲ!! ಇನ್ನು ಖಾತೆ ತೆರೆದ ನಂತರ ಖಾತೆದಾರರಿಗೆ ರುಪೆ ಡೆಬಿಟ್ ಕಾರ್ಡ್ ನೀಡಲಾಗುತ್ತದೆ!! ಅಲ್ಲದೆ ಆ ಕಾರ್ಡಿಗೆ ಸಂಬಂಧಿಸಿ ಉಚಿತವಾಗಿ 1 ಲಕ್ಷ ರೂಪಾಯಿವರೆಗೆ ದುರ್ಘಟನಾ ವಿಮೆ ನೀಡಲಾಗುತ್ತದೆ. ಇನ್ನು ಖಾತೆಯು 6 ತಿಂಗಳ ಕಾಲ ಊರ್ಜಿತದಲ್ಲಿದ್ದು, ಆಧಾರ್ ಸಂಖ್ಯೆಗೆ ಜೋಡಣೆಗೊಂಡ ನಂತರ ಆಯಾ ಖಾತೆಗಳಿಗೆ 5000 ರೂಪಾಯಿ ವರೆಗೆ ಬಡ್ಡಿಯಿಲ್ಲದ ಓವರ್ ಡ್ರಾಫ್ಟ್ ಸೌಲಭ್ಯವನ್ನು ಯಾವುದೇ ಕಾಗದಪತ್ರ ವಿಲ್ಲದೆ ನೀಡಲಾಗುತ್ತದೆ!!

ಈ ಯೋಜನೆ ವೈಶಿಷ್ಟ್ಯಗಳು:

* ಸಂಭವನೀಯ ಘಟನೆಯಲ್ಲಿ ನಿಮ್ಮ ಕುಟುಂಬದ ಸುರಕ್ಷತೆಯ ರಕ್ಷಣೆ ಮಾಡಬಹುದಾಗಿದೆ
* ನೋಂದಣಿಗಾಗಿ ಸರಳೀಕೃತ ಪ್ರಸ್ತಾವನೆಯ ನಮೂನೆ ಮಾಡಿಕೊಳ್ಳಬಹುದು
* ಯೋಗ್ಯ ಬೆಲೆಯಲ್ಲಿ 2 ಲಕ್ಷದ ರಕ್ಷಣೆ ಪಡೆದುಕೊಳ್ಳಿ

ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯು ಹಣಕಾಸು ತೊಂದರೆಗಳಿಂದ ಕುಟುಂಬವನ್ನು ರಕ್ಷಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದು, ಯಾವುದೇ ರೀತಿಯ ವೈದ್ಯಕೀಯ ಪರೀಕ್ಷೆಯ ಅಗತ್ಯವಿಲ್ಲದೆ ಸುಲಭ ನೋಂದಣಿ ಮತ್ತು ತ್ವರಿತ ಪ್ರಕ್ರಿಯೆಗಳ ಮೂಲಕ ಈ ಯೋಜನೆಯನ್ನು ಮಾಡಬಹುದಾಗಿದೆ!! ಅಷ್ಟೇ ಅಲ್ಲದೇ, ಸಮ್ಮತಿಯ ನಮೂನೆಯಲ್ಲಿ ತೃಪ್ತಿದಾಯಕ ಆರೋಗ್ಯ ಘೋಷಣೆಗಳ ಆಧಾರದ ಮೇಲೆ ಅಂಗೀಕಾರಿಸಲಾಗುತ್ತದೆ.
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ ನಡುವಿನ ವ್ಯತ್ಯಾಸ!!!
ಪಿಎಂ ಸುರಕ್ಷಾ ಬಿಮಾ ಯೋಜನೆ ದುರ್ಘಟನೆ ವಿಮೆಯಾಗಿದ್ದು, ಎರಡು ಲಕ್ಷ ರೂಪಾಯಿ ವಿಮೆಗೆ ಕೇವಲ 12 ರೂಪಾಯಿ ವಾರ್ಷಿಕ ಪ್ರಿಮಿಯಂ ಭರಿಸಬೇಕಾಗುತ್ತದೆ. 18 ರಿಂದ 70 ವರ್ಷದವರೆಗಿನ ವ್ಯಕ್ತಿಗಳು ಇದಕ್ಕೆ ಅರ್ಹರಾಗಿದ್ದು, ಅಪಘಾತದಲ್ಲಿ ವಿಮೆ ಪಡೆದ ವ್ಯಕ್ತಿ ಮೃತಪಟ್ಟರೆ ವಾರಸುದಾರರಿಗೆ 2 ಲಕ್ಷ ರೂಪಾಯಿ ವಿಮೆ ದೊರೆಯುವುದು. ಇದಲ್ಲದೇ ಶಾಶ್ವತ ವಿಕಲಚೇತನ ಹೊಂದಿದರೂ ಹಣ ದೊರೆಯಲಿದ್ದು, ಭಾಗಶಃ ಹಾನಿಗೊಳಗಾದರೆ 1 ಲಕ್ಷ ರೂಪಾಯಿ ವಿಮೆ ಹಣ ದೊರೆಯುತ್ತದೆ. ಇದಕ್ಕಾಗಿ ಯಾವುದೇ ಬ್ಯಾಂಕ್‍ಗಳಲ್ಲಿ ಉಳಿತಾಯ ಖಾತೆ ಹೊಂದಿರಬೇಕು. ವ್ಯಕ್ತಿಯು ಹಲವಾರು ಬ್ಯಾಂಕ್‍ಗಳಲ್ಲಿ ಖಾತೆ ಹೊಂದಿದರೂ ಕೇವಲ ಒಂದು ಬ್ಯಾಂಕಿನಲ್ಲಿ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ.

ಪ್ರಧಾನ ಮಂತ್ರಿಗಳ ಜೀವನ ಜ್ಯೋತಿ ಬಿಮಾ ಯೋಜನೆಯಡಿ 2 ಲಕ್ಷ ರೂಪಾಯಿ 330 ವಾರ್ಷಿಕ ಪ್ರಿಮಿಯಂ ಕಟ್ಟಬೇಕು. ಇದಕ್ಕೆ 18 ರಿಂದ 50 ವರ್ಷದ ವ್ಯಕ್ತಿಗಳು ಅರ್ಹರಾಗಿದ್ದು, ಯಾವುದೇ ಕಾರಣಕ್ಕೂ ಮರಣ ಸಂಭವಿಸಿದಲ್ಲಿ 2 ಲಕ್ಷ ರೂಪಾಯಿ ವಾರಸುದಾರರಿಗೆ ಸಿಗುತ್ತದೆ. ಅಷ್ಟೇ ಅಲ್ಲದೇ, ಇದಕ್ಕಾಗಿ ಬ್ಯಾಂಕ್‍ಗಳಲ್ಲಿ ಉಳಿತಾಯ ಖಾತೆ ಹೊಂದಿರಬೇಕಾಗುತ್ತದೆ!! ಇನ್ನು ಈ ವಿಮೆ ಖಾತೆದಾರರು ಪ್ರತಿ ವರ್ಷ ಪ್ರಿಮಿಯಂ ಹಣ ತುಂಬಿ ಯೋಜನೆ ನವೀಕರಿಸಿಕೊಳ್ಳಬೇಕಾಗುತ್ತದೆ!!

ಕೇಂದ್ರ ಸರ್ಕಾರದ ಈ ಯೋಜನೆ ಪ್ರತಿಯೊಬ್ಬರಿಗೂ ಸಹಾಯವಾಗಲಿದ್ದು, ಭವಿಷ್ಯದಲ್ಲಿ ತಮ್ಮ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಲಿದೆ!! ಅಷ್ಟೇ ಅಲ್ಲದೇ, ವಾರ್ಷಿಕ ಪ್ರಿಮಿಯಂ ಕೂಡ ಪಿಎಂ ಸುರಕ್ಷಾ ಬಿಮಾ ಯೋಜನೆಕ್ಕಿಂತಲೂ ಪ್ರಧಾನ ಮಂತ್ರಿಗಳ ಜೀವನ ಜ್ಯೋತಿ ಬಿಮಾ ಯೋಜನೆ ಕಡಿಮೆಯಾಗಿದ್ದು, ಎಲ್ಲಾ ವಯಸ್ಸಿನವರಿಗೂ ಇದು ಉಪಯುಕ್ತವಾದ ಯೋಜನೆಯಾಗಿದೆ!!

– ಅಲೋಖಾ

Tags

Related Articles

Close