ಪ್ರಚಲಿತ

ಕುತುಬ್‍ಮಿನಾರ್ ಹಿಂದೆ ಅಡಗಿದೆ ರೋಚಕ ಸತ್ಯ!! ವಿಷ್ಣು ಧ್ವಜವಾಯಿತೇ ಆ ಮೊಘಲ್ ವಂಚಕನ ವಿಜಯ ಸ್ಮಾರಕ?

ಕುತುಬ್‍ಮಿನಾರ್ ಹಿಂದೆ ಅಡಗಿದೆ ರೋಚಕ ಸತ್ಯ!! ವಿಷ್ಣು ಧ್ವಜವಾಯಿತೇ ಆ ಮೊಘಲ್ ವಂಚಕನ ವಿಜಯ ಸ್ಮಾರಕ?

ನಮ್ಮ ದೇಶದ ಐತಿಹಾಸಿಕ ಸ್ಮಾರಕಗಳಲ್ಲಿ ಕುತುಬ್ ಮಿನಾರ್ ಒಂದು ಅಧ್ಬುತ! ಕುತುಬ್ ಮಿನಾರ್ ಎಂದಾಗ ನಮಗೆ ನಮ್ಮ ದೇಶದ ಪಾರಂಪರಿಕ ಇತಿಹಾಸ ಒಮ್ಮೆಲೆ ಕಣ್ಣೆದುರು ಮರುಕಳಿಸುತ್ತದೆ. ಸರಿಸುಮಾರು 72.5 ಮೀಟರ್ ಎತ್ತರದಲ್ಲಿರುವ ಈ ಮಿನಾರ್ ಭಾರತದಲ್ಲಿ ನೋಡಲೇಬೇಕಾದ ರಚನೆಯಾಗಿದ್ದು, ಪ್ರಾಚೀನಾ ಕಾಲದಲ್ಲೇ ತುಕ್ಕು ನಿರೋಧಕ ಕಂಬದ ನಿರ್ಮಾಣವಾಗಿರುವುದು ಹಾಗೂ ಅದು ಈಗಲೂ ಸ್ಥಿರವಾಗಿ ಉಳಿದಿರುವುದು ನಾವು ಅಚ್ಚರಿ ಪಡಬೇಕಾದ ಸಂಗತಿಯೇ ಸರಿ.

ನಮಗೆಲ್ಲಾ ತಿಳಿದಿರೋ ಹಾಗೆ 1198 ಮತ್ತು 1368 ರ ಅವಧಿಯಲ್ಲಿ ಕುತುಬ್-ಉದ್-ದಿನ್ ಐಬಕ್ ನಿರ್ಮಿಸಿದ ಎನ್ನಲಾಗಿದೆ. ಆದರೆ ಹಲವಾರು ಸಂಶೋಧÀನೆಗಳು ಹಾಗೂ ನಿದÀರ್ಶನಗಳು ಈ ಮಾಹಿತಿ ಸುಳ್ಳೆಂದು ಸಾಬೀತು ಪಡಿಸಿವೆ.

ಹೌದು! ಐತಿಹಾಸಿಕ ಸ್ಮಾರಕವಾದ, ದೆಹಲಿಯ ಮಧ್ಯಭಾಗದಲ್ಲಿರುವ ಕುತುಬ್-ಮಿನಾರ್ ಸ್ಥಾಪನೆಯ ಬಗ್ಗೆ ಹಲವು ಗೊಂದಲಗಳು ಇವೆ. ಪ್ರೊ. ಎಂ.ಎಸ್ ಭಟ್ನಗರ್ ಎಂಬ ಬರಹಗಾರ ತನ್ನ ಕುತುಬ್-ಮಿನಾರ್ ನ ಪ್ರವಾಸ ಹೋದ ಸಂದರ್ಭದ ಅನುಭವÀದಿಂದ ಹಾಗೂ ಅವನಿಗಲ್ಲಿ ಉಂಟಾದ ಗೊಂದಲಗಳಿಂದ ಆತ ಒಂದು ಸಂಶೋಧನೆಯನ್ನು ನಡೆಸಿ ಅವುಗಳಿಂದ ಉತ್ತರವನ್ನು ಪಡೆದುಕೊಂಡ.

ಭಟ್ನಗರ್ ಕುತುಬ್ ಪ್ರವಾಸದಿಂದ ಹೊರಬಂದ ಸತ್ಯ ಏನು ಗೊತ್ತೆ??
ಕುತುಬ್-ಮಿನಾರ್ ನ ಹಿಂದೆ ಬಯಲಾಗದ ಸತ್ಯ, ನಷ್ಟಗಳ ಸಂಗತಿ ಅಡಗಿವೆ. ಈ ಕಲ್ಲಿನ ಸ್ತಂಭದ ಬಗೆಗಿನ ಇತಿಹಾಸತಜÐರು ತಯಾರಿಸಿದ ಮಾಹಿತಿಯು ವಿರೋಧಾತ್ಮಕವಾಗಿದೆ!!

1961 ನಲ್ಲಿ ಭಟ್ನಗರ್ ಕೆಲ ಕಾಲೇಜು ವಿಧ್ಯಾರ್ಥಿಗಳೊಂದಿಗೆ ಕುತುಬ್-ಮಿನಾರ್ ಭೇಟಿನೀಡಿದಾಗ ಅಲ್ಲಿನ ಅಧಿಕೃತ ಮಾರ್ಗದರ್ಶಿಯು ಆ ಸ್ತಂಭದ ಬಗ್ಗೆ ನೀಡಿದ ಮಾಹಿತಿಯು ಆತನಿಗೆ ಸಂಶಯಾಸ್ಪದವಾಗಿ ಕಾಡಿತ್ತು.

ಹೌದು ! ಮಾರ್ಗದರ್ಶಿಯು ಕುತುಬ್‍ಮಿನಾರ್ ಒಂದು ವಿಜಯಸ್ತಂಭವಾಗಿದ್ದು, ಮಹಮ್ಮದ್ ಘೋರಿಯು ಪೃಥ್ವಿರಾಜ್ ನ ವಿರುದ್ದ, ಪಾಣಿಪತ್‍ನಲ್ಲಿ ಸಾಧಿಸಿದ ಗೆಲುವಿನ ಗುರುತಿನ ಸ್ತಂಭ ಇದು ಎಂಬುವುದಾಗಿ ವಿವರಿಸಿದ್ದ. ಹಾಗಾದರೆ ದೆಹಲಿಯಲ್ಲಿ ಈ ವಿಜಯಸ್ತಂಭ ಹೇಗೆ ಸ್ಥಾಪನೆಯಾಗಿದೆ ಎಂದು ಪ್ರಶ್ನಿಸಿದಾಗ ಅವನಲ್ಲಿ ಉತ್ತರವಿರಲಿಲ್ಲ. ಆ ಸಂಧರ್ಭಲ್ಲಿ ಅಲ್ಲಿದ್ದ ಓರ್ವ ಸಂಭಾವಿತ ಪ್ರವಾಸಿಗಾರ ಹಾಗೂ ದೆಹಲಿ ವಿಶ್ವವಿದ್ಯಾಲಯದ ಇತಿಹಾಸ ಅಧ್ಯಾಪಕ ಘೋರಿಯ ರಾಜಧಾನಿ ದೆಹಲಿಯಾಗಿದ್ದುದರಿಂದ ಅವನ ವಿಜಯ ಸ್ತಂಭ ಸ್ಥಾಪಿಸಿದ್ದಾನೆ ಎಂದರು. ಆದರೆ ಇಲ್ಲಿ ಭಟ್ನಗರ್ ಗೆ ಹಲವಾರು ಪ್ರಶ್ನೆಗಳ ಉದ್ಭವವಾಯಿತು, ಅವರಿಗೆ ಮಹಮ್ಮದ್ ಘೋರಿಯ ರಾಜಧಾನಿ ಘಜ್ನಿಯಾಗಿತ್ತು, ಯಾವ ತರ್ಕದಿಂದ ತನ್ನ ವಿಜಯಸ್ತಂಭ ದೆಹಲಿಯಲ್ಲಿ ನಿರ್ಮಿಸಿದ? ಅದು ಆತನ ವಿಜಯ ಸ್ತಂಭವಾದಲ್ಲಿ “ಘೋರಿ ಮಿನಾರ್” ಎಂಬುವುದಾಗಿ ಕರೆಯಬಹುದಿತ್ತು. ಅದನ್ನು ಕುತುಬ್ ಮಿನಾರ್ ಎಂಬುವುದಾಗಿ ಯಾವ ಆಧಾರದಲ್ಲಿ ಕರೆಯಲಾಗುತ್ತದೆ? ಇದು ನಿಜವಾಗಿಯು ಆತನ ನಿರ್ಮಾಣವಾದಲ್ಲಿ ಅವನು ದೆಹಲಿಯಲ್ಲೇ ಈ ಸ್ತಂಭ ಯಾಕೆ ನಿರ್ಮಾಣ ಮಾಡಿದ? ಕುತುಬ್-ಉದ್-ದಿನ್ ಐಬಕ್ ನ ರಾಜಧಾನಿ ದೆಹಲಿಯಾದ ಕಾರಣ ಇಲ್ಲಿ ನಿರ್ಮಾಣ ಮಾಡಲಾಗಿದೆಯ? ಹೌದು! ಕುತುಬ್-ಉದ್-ದಿನ್, ಘೋರಿಯ ಗುಲಾಮನಾಗಿದ್ದ ಘೋರಿಯ ಮರಣದ ನಂತರ ಲಾಹೋರ್ ಪ್ರದೇಶವನ್ನು ಐಬಕ್ ಆಳಿದ. ಲಾಹೋರ್‍ನ್ನು ಈತನ ರಾಜಧಾನಿಯನ್ನಾಗಿಸಿದ್ದ ಪಕ್ಷದಲ್ಲಿ ಈತ ಕೂಡ ಹೇಗೆ ದೆಹಲಿಯಲ್ಲಿ ವಿಜಯ ಸ್ತಂಭ ನಿರ್ಮಿಸಲು ಸಾಧ್ಯ? ಜನರು ಹೇಳುವ ಪ್ರಕಾರ ಮಿನಾರ್ ವಿಜಯಸ್ತಂಭವಲ್ಲ! ಇದು ಒಂದು ಕುವೈತ್-ಉಲ್-ಇಸ್ಲಾಂ ಮಸೀದಿ? ಈ ಮಸೀದಿಯ ಬಗ್ಗೆ ಭಾರತದ ಇತಿಹಾಸದಲ್ಲಿ ಉಲ್ಲೇಖವಿಲ್ಲ. ಸರ್ ಸಹ್ಯದ್ ಅಹಮ್ಮದ್ 19 ನೇ ಶತಮಾನದಲ್ಲಿ ಇದರ ಬಗ್ಗೆ ಉಲ್ಲೇಖ ಮಾಡಿದ್ದರು. ಇಲ್ಲಿ ಆಶ್ಚರ್ಯದಾಯಕ ಸಂಗತಿಯೆಂದರೆ ಒಂದು ವೇಳೆ ಅದು ಮಸೀದಿಯೇ ಆದಲ್ಲಿ “ಕುತುಬ್ ಮಿನಾರ್” ಎಂಬ ಹೆಸರು ಹೇಗೆ ಬಂತು? ಇಲ್ಲಿ ಮ್ಯುಝಿನಿ ಸ್ತಂಭವನ್ನ ಮಿನಾರ್ ಎಂದು ಗುರುತಿಸಲಾಯಿತೆ? ಹಾಗಾದರೆ ಅವರು ಮಿನಾರ್‍ಗಳನ್ನು ಮೊದಲು ನಿರ್ಮಿಸಿ ನಂತರ ಅದರ ಮೇಲೆ ಮಸೀದಿಯನ್ನು ನಿರ್ಮಿಸಿದ್ದಾರೆಯೆ? ಅದು ಹೇಗೆ ತಾನೆ ಸಾಧ್ಯ? ಇದೊಂದು ಕೇವಲ ಕಟ್ಟು ಕತೆಯಷ್ಟೇ. ಈ ಮೇಲಿನ ಎಲ್ಲಾ ಗೊಂದಲಮಯ ಪ್ರಶ್ನೋತ್ತರಗಳಿಂದ ಅತೃಪ್ತನಾದ ಭಟ್ನಗರ್ ತನ್ನದೇ ಆದ ಅನ್ವೇಷಣೆ ನಡೆಸಿದ.

ಮಿನಾರ್‍ನಲ್ಲಿ ಕುರಾನಿನ ಶಾಸನಗಳು ಮುಂಚಿತವಾಗಿಯೆ ಇತ್ತೇ?
ಖಂಡಿತವಾಗಿಯೂ ಇಲ್ಲ, ಹೌದು! ಮಿನಾರ್ ನ ಮೇಲೆ ಕೆತ್ತಲಾಗಿರುವ ಶಾಸನಗÀಳು ಅದರ ನಿರ್ಮಾಣ ಕಾಲದಲ್ಲಿ ಇರಲಿಲ್ಲ, ಹಿಂದು ಶೈಲಿಯ ಕೆತ್ತನೆಗಳಲ್ಲಿ ಅದು ಹೇಗೆ ತಾನೆ ಕುರಾನಿನ ಶಾಸನಗಳನ್ನು ಕೆತ್ತಲು ಸಾಧ್ಯ? ಇದು ಕೇವಲ ಮೊಘಲರು ತಮ್ಮ ಅಸ್ತಿತ್ವ ಭಾರತದಲ್ಲಿ ಇತ್ತು ಎಂಬುದನ್ನು ತೋರಿಸಿಕೊಂಡ ಪರಿಯಷ್ಟೇ.

ಕುತುಬ್ ಮಿನಾರ್ ಧ್ರುವಸ್ತಂಭವನ್ನು ಮರೆಮಾಚಿತೇ?
ಹೌದು! ಧ್ರುವ ಸ್ತಂಭ ಮಿನಾರ್ ನ ನಿಜವಾದ ರೂಪ. ಪ್ರಾಚೀನ ಕಾಲದಲ್ಲಿ ಧ್ರುವ ಸ್ತಂಭವನ್ನು ಖಗೋಳಶಾಸ್ತ್ರದ ಅಧ್ಯಯನ ಮಾಡಲೆಂದೆ ನಿರ್ಮಿಸಲಾಗಿತ್ತು. ಅದರ ತುದಿಯಲ್ಲಿ 24 ದಳದ ಕಮ¯ದ ಆಕಾರವನ್ನು ರಚಿಸಲಾಗಿದ್ದು, ಇದನ್ನು ಲಂಬಾಕೃತಿಯಾಗಿ ರಚನೆ ಮಾಡಲಾಗಿದ್ದು, ಬಾಹ್ಯಾಕಾಶದ ವೀಕ್ಷಣೆಗೆಂದೆ ನಿರ್ಮಾಣ ಮಾಡಲಾಗಿದೆ. 24 ದಳದ ಕಮಲದ ರಚನೆ ನಿಸ್ಸಂಶಯವಾಗಿ ಹಿಂದೂ ಶೈಲಿಯೇ! ಈ ರೀತಿಯ ಕಲಾಶೈಲಿ ಪಶ್ಚಿಮ ಏಷ್ಯಾದಲ್ಲಿ ಕಾಣಲು ಸಾಧ್ಯವಿಲ್ಲ. ಸ್ತಂಭದಲ್ಲಿನ ಕಮಲದ ಆಕೃತಿ ಅದು ಧ್ರುವ ಸ್ತಂಭವೆಂದು ದೃಡಪಡಿಸುತ್ತದೆ. ಆದರೆ, ಶಿಲೆಯಲ್ಲಿ ಕೆತ್ತಲಾಗಿದ್ದ ಆಕೃತಿಗಳ ಹಿಂಭಾಗದಲ್ಲಿ, ಘೋರಿ ಹಾಗೂ ಐಬಕ್ ತಮ್ಮ ಧರ್ಮದ ಮುಸ್ಲಿಂ ಶಾಸನಗಳನ್ನು ಕೆತ್ತಿಸಿದ್ದಾರೆ. ಅಲ್ಲಿನ ಚಪ್ಪಡಿ ಕಲ್ಲನ್ನು ಬಳಸಿ ಕಟ್ಟಡಗಳ ಗೋಡೆಗಳನ್ನು ಪುನಃ ನಿರ್ಮಿಸಿದ್ದಾರೆ..

ಹಿಂದೂ ಸ್ಮಾರಕವಾದ ಧ್ರುವ ಸ್ತಂಭದ ಮೂಲ ಯಾವುದು ಗೊತ್ತೆ?
ಕುತುಬ್- ಮಿನಾರ್ ನಿರ್ಮಾಣವಾದ ನಗರದ ಮೂಲ ಹೆಸರು ಮೆಹರುಲಿ, ಇದು ಸಂಸ್ಕ್ರತ ಪದ “ಮಿಹೆರಾ-ಅವಲಿ”. ಹೌದು! ಆಗಿನ ರಾಜ ವಿಕ್ರಮಾದಿತ್ಯನ ಆಸ್ಥಾನದಲ್ಲಿ ಮಿಹಿರ ಎಂಬ ಖಗೋಳಶಾಸ್ತ್ರಜ್ಞ ಇದ್ದುದರಿಂದ ಆ ಸ್ಥಳಕ್ಕೆ ಮೆಹರುಲಿ ಎಂಬ ಹೆಸರು ಎಂಬುದಾಗಿ ಪ್ರತೀತಿ ಇದೆ. ವಿಕ್ರಮಾದಿತ್ಯನ ಆಸ್ಥಾನದಲ್ಲಿ ಗಣಿತ ತಜ್ಞರು ಹಾಗೂ ತಾಂತ್ರಿಕ ತಜ್ಞರು ಆಶ್ರಯ ಪಡೆದಿದ್ದರು. ಇವರ ನೇತೃತ್ವದಲ್ಲಿ ಈ ಸ್ತಂಭವನ್ನು ರಚಿಸಲಾಗಿದ್ದು, ಇವರು ಬಾಹ್ಯಾಕಾಶದ ಅಧ್ಯಯನಕ್ಕಾಗಿ ಇದನ್ನು ನಿರ್ಮಾಣ ಮಾಡಿದ್ದು, ಈ ಮೂಲಕ ಧ್ರುವತಾರೆಗಳ ಅಧ್ಯಯನ ನಡೆಸಿದ್ದಾರೆ. ಆದರೆ ಕುತುಬ್-ಉದ್-ದಿನ್ ಐಬಕ್ ಆ ಪ್ರದೇಶದ ಮೇಲೆ ದಾಳಿ ಮಾಡಿ ಧ್ರುವ ಸ್ತಂಭದ ಮೇಲಿನ ಹಿಂದು ಗುರುತನ್ನು ನಾಶ ಮಾಡಿ, ದೇವಸ್ಥಾನಗಳನ್ನು ಧ್ವಂಸಮಾಡಿದ. ಅಲ್ಲಿ ಕುವತ್-ಉಲ್- ಇಸ್ಲಾಂ ಎಂಬ ಮಸೀದಿಯನ್ನು ನಿರ್ಮಿಸಿ, ದೇವಸ್ಥಾನದ ಅವಶೇಷಗಳನ್ನು ಗೋಡೆ ನಿರ್ಮಾಣಕ್ಕೆ ಬಳಸಿ ಹಾಗೂ ಧ್ರುವ ಸ್ತಂಭದ ಮೇಲಿನ ಸಂಸ್ಕ್ರತ ಶಾಸನಗಳನ್ನು ನಾಶ ಮಾಡಿ ಅವರ ಕುರಾನ್ ಬರಹಗಳನ್ನು ಕೆತ್ತಿಸಿದ. ಈ ಮೇಲಿನ ಎಲ್ಲಾ ಮಾಹಿತಿಗಳು ಕುತುಬ್ ಹಿಂದು ಸ್ತಂಭವೆಂದು ಸಾಬೀತು ಪಡಿಸುತ್ತದೆ. ಸಾಮಾನ್ಯವಾಗಿ ಮುಸ್ಲಿಂ ಸಂಪ್ರಾಯದಲ್ಲಿ ಉತ್ತರ ದಿಕ್ಕಿಗೆ ದ್ವಾರವನ್ನು ನಿರ್ಮಿಸಲಾಗಿರುತ್ತದೆ, ಆದರೆ ಕುತುಬ್ ಮಿನಾರ್ ಪಶ್ಚಿಮ ದಿಕ್ಕಿಗೆ ಇದೆ. ಕುತುಬ್ ನ ಇನ್ನೊಂದು ದಿಕ್ಕಿನ ದ್ವಾರದಲ್ಲಿ ಕಮಲದ ದಳಗಳನ್ನು ಕಲ್ಲಿನಿಂದ ಕೆತ್ತಲಾಗಿದೆ. ಇವೆಲ್ಲಾ ಕುತುಬ್-ಮಿನಾರ್, ಹಿಂದುಗಳ ನಿರ್ಮಾಣ ಎಂಬುದಕ್ಕೆ ಸಾಕ್ಷಿ.

ಹಿಂದು ಸಂಪ್ರದಾಯದಲ್ಲಿ ಈ ಸ್ತಂಭದ ಮೂಲ ಹೆಸರು “ವಿಷ್ಣುಧ್ವಜ”! ಕಾಲಾನಂತರ, ಇದು ಧ್ರುವಸ್ತಂಭ ಎಂದು ಬದಲಾಗಿದೆ. ವಿಷ್ಣುಪಾದಗಿರಿಯಲ್ಲಿ ವಿಷ್ಣು ಅವತಾರ ಎತ್ತಿರುವ ಸಲುವಾಗಿ ಈ ಕಂಬವನ್ನು ಸ್ಥಾಪಿಸಲಾಗಿತ್ತು. ಇದನ್ನು ಮಹಮ್ಮದ್ ಘೋರಿ ಹಾಗೂ ಆತನ ಪಾಳೆಗಾರನಾದ ಕುತುಬ್-ಉದ್-ದಿನ್ ನಾಶ ಮಾಡಿ, ಅದರ ಮೇಲೆ ಅವರ ಶಾಸನಗಳನ್ನು ಕೆತ್ತಿಸಿದ್ದರು. ಆದರಿಂದಾಗಿ ಆ ನಾಲ್ಕು ಕಂಬಗಳು (ಚಾರ್ ಮಿನಾರ್) ಹಿಂದೂ ರಾಜನಿಂದ ಮೊಟ್ಟಮೊದಲು ನಿರ್ಮಾಣಮಾಡಲಾಗಿತ್ತು ಎಂಬುವುದು ನಿಸ್ಸÀಂಶÀಯ! ತದನಂತರ, ಇದು ಮುಸ್ಲಿಂ ಸ್ಮಾರಕವೆಂದು ತಪ್ಪು ತಿಳುವಳಿಕೆ ಆಗಿದೆ. ಅದಲ್ಲದೆ, ಇಲ್ಲಿ ಬ್ರಹ್ಮನ 4 ಮುಖವುಳ್ಳ ಮೂರ್ತಿಯನ್ನು ಅಮೃತ ಶಿಲೆಯಲ್ಲಿ ನಿರ್ಮಾಣ ಮಾಡಲಾಗಿತ್ತು. ಅದು ಕೂಡ ಮುಸ್ಲಿಂ ನಾಯಕರಿಂದ ಕೆಡವಲಾಗಿತ್ತು. ಅಲ್ಲಿರುವ ಕಲ್ಲಿನ ಕಂಬಗಳು ವಿಷ್ಣುದೇವಾಲಯದ ಅವಶೇಷವಾಗಿದೆ. ದೇವಸ್ಥಾನದ ಒಂದು ಭಾಗದಲ್ಲಿ ಅಂಡಾಕಾರದಲ್ಲಿರುವ 27 ನಕ್ಷತ್ರಗಳಿರುವ ಶಾಸನಗಳನ್ನು ಕೆತ್ತಲಾಗಿದೆ. ದೈತ್ಯಾಕಾರದ ಕೆಂಪು ಕಲ್ಲಿನಿಂದ ಅಲ್ಲಿನ ದ್ವಾರವನ್ನು ಅಲಂಕೃತಗೊಳಿಸಲಾಗಿದೆ. ಇದರಿಂದಾಗಿ, ಅದು ಹಿಂದೂ ಪಾರಂಪರಿಕ ಸಾಂಸ್ಕ್ರತಿಕ ಆಲಯದ್ವಾರದಂತೆ ನಿರ್ಮಾಣವಾಗಿದೆ. ಈಗಿನ ರಾಜಸ್ಥಾನದಲ್ಲಿರುವ ಹಿಂದೂ ದೇವಾಲಯಗಳ ಶೈಲಿಯು ದೆಹಲಿಯಲ್ಲಿರುವ ಕುತುಬ್ ಮಿನಾರ್ ನ ಶೈಲಿಯನ್ನೇ ಹೋಲುತ್ತಿದೆ.. ಕುತುಬ್, ಅಲ್ಲಾವುದ್ದೀನ್ ಖಿಲ್ಜಿಯ ಕಾಲದಲ್ಲಿ ಸಂಪೂರ್ಣ ನಾಶವಾಗಿದೆ!

ಈ ಮೇಲಿನ ಎಲ್ಲಾ ಸಾಕ್ಷ್ಯಾಧಾರಗಳು ಕುತುಬ್ ನ ಮೂಲ ನಿರ್ಮಾಣ ಹಿಂದೂ ರಾಜವಂಶಗಳಿಂದಾಗಿದ್ದು, ಕಾಲಾನಂತರ, ಮೊಘಲರು ದಾಳಿ ಮಾಡಿ, ಅದರ ಮೂಲವನ್ನು ನಾಶಮಾಡಿ, ತಮ್ಮ ಅಸ್ತಿತ್ವವನ್ನು ಸ್ಥಾಪಿಸಿದ್ದಾರೆ ಎಂಬುವುದು ಸಾಬೀತಾಗುತ್ತದೆ.
-ಕಾವ್ಯ ಅಂಚನ್.

Related Articles

Close