ಕೈಗಾರಿಕೆಗಳಿಗೆ ಸಿಕ್ಕಷ್ಟು ಉತ್ತೇಜನ ಕೃಷಿಗೆ ಸಿಕ್ಕಿಲ್ಲ, ಸಿಗುತ್ತಿಲ್ಲ ಎಂಬ ಕೂಗು ಇಂದು ನಿನ್ನೆಯದಲ್ಲ. ಮೂರು ವರ್ಷದ ಹಿಂದೆ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರದಿಂದ ದೇಶಾದ್ಯಂತ ಹೊಸ ಸಂಚಲನ ನಿರ್ಮಾಣಗೊಂಡಿದ್ದಲ್ಲದೇ ಎಲ್ಲ ಕ್ಷೇತ್ರಗಳಲ್ಲೂ ಒಂದಷ್ಟು ಬದಲಾವಣೆ ಕಣ್ಣಿಗೆ ಕಾಣತೊಡಗಿದೆ. ಹಾಗಾಗಿ ತೋಟಗಾರಿಕೆ ಬೆಳೆಗಳಿಗೆ ನೀರು ಮಿತವಾಗಿ ಬಳಸಿ, ಹೆಚ್ಚಿನ ಫಸಲು ಪಡೆಯುವ ಉದ್ದೇಶಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು (ಪಿ.ಎಂ.ಕೆ.ಎಸ್.ವೈ) ಜಾರಿಗೆ ತಂದಿದೆ.
ಹೌದು… ಕೃಷಿ ಕ್ಷೇತ್ರದಲ್ಲೂ ಬದಲಾವಣೆಯ ಸಮಯ ಬಂದಿದ್ದು, ಕೃಷಿಕರ ಆರ್ಥಿಕ ಸ್ಥಿತಿಗತಿ ಸುಧಾರಿಸುವ ವಿಶೇಷವಾಗಿ 2022ರ ವೇಳೆಗೆ ಅವರ ಆದಾಯ
ದುಪ್ಪಟ್ಟಾಗಬೇಕು ಎನ್ನುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಹಾಕಿದ್ದು, ತೋಟಗಾರಿಕೆ ಬೆಳೆಗಳಿಗೆ ನೀರು ಮಿತವಾಗಿ ಬಳಸಿ, ಹೆಚ್ಚಿನ ಫಸಲು ಪಡೆಯುವ ಉದ್ದೇಶಕ್ಕಾಗಿ 2016-17ನೇ ಸಾಲಿನ ಸಿಂಚಾಯಿ ಯೋಜನೆಗೆ ಅನುಮೋದನೆ ದೊರೆತಿದೆ. ತಾಲೂಕಿನಾದ್ಯಂತ ಅನುಷ್ಠಾನಗೊಳಿಸಲು ತೋಟಗಾರಿಕೆ ಇಲಾಖೆ ಸಜ್ಜಾಗಿದೆ.ಇನ್ನು ಈ ಪದ್ಧತಿ ಅನುಸರಿಸಿದಲ್ಲಿ ಜಲಸಂಪನ್ಮೂಲ ಸಂರಕ್ಷಣೆ ಹಾಗೂ ಮಿತವ್ಯಯ ಮಾಡುವ ಮೂಲಕ ತೋಟಗಾರಿಕೆ ಬೆಳೆಗಳಿಂದ ಹೆಚ್ಚಿನ ಇಳುವರಿ ಪಡೆಯಲು ಈ ಯೋಜನೆ ನೆರವಾಗುತ್ತದೆ ಎಂದು ಭಾವಿಸಲಾಗಿದೆ.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ (ಪಿ.ಎಂ.ಕೆ.ಎಸ್.ವೈ) ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಸೌಲಭ್ಯ ಪಡೆಯಲು ಜಿಲ್ಲೆಯ ರೈತರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಬರಗಾಲದಿಂದ ತತ್ತರಿಸಿ ಹೋಗಿರುವ ರೈತರ ಪಾಲಿಗೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಸೌಲಭ್ಯ ಒಂದು ವರದಾನವಾಗಿದೆ. ಪ್ರತಿಯೊಬ್ಬ ರೈತನ ಹೊಲಕ್ಕೂ ನೀರು ಲಭಿಸಬೇಕು; ಪ್ರತಿ ಹನಿ ನೀರಿನಿಂದಲೂ ಅಧಿಕ ಇಳುವರಿ ಪಡೆಯಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಆರಂಭಿಸಿರುವ ಪಿ.ಎಂ.ಕೆ.ಎಸ್.ವೈ.ನಲ್ಲಿ ಶೇ 90ರಷ್ಟು ಸಹಾಯಧನವನ್ನು ಎಲ್ಲ ವರ್ಗದ ಫಲಾನುಭವಿಗಳಿಗೂ ಸರ್ಕಾರ ನೀಡುತ್ತಿದೆ.
ರಾಷ್ಟ್ರೀಯ ಸೂಕ್ಷ್ಮ ನೀರಾವರಿ ಮಿಷನ್ ನಿಂದ ಪ್ರಧಾನ ಮಂತ್ರಿ ಸಿಂಚಾಯಿ ಯೋಜನೆ !!
ತೋಟಗಾರಿಕೆ ಕೃಷಿ ರೈತರಿಗೆ ಸೂಕ್ಷ್ಮ ನೀರಾವರಿಯಿಂದ ಪ್ರಯೋಜನವಾಗುತ್ತದೆ ಎಂದು ತೋಟಗಾರಿಕೆ ಬೆಳೆಗಳಿಂದ ಸೂಕ್ಷ್ಮ (ಹನಿ/ತುಂತುರು) ನೀರಾವರಿಯನ್ನು ಪೆÇ್ರೀತ್ಸಹಿಸಲಾಗುತ್ತಿದೆ. ಕೇಂದ್ರ ಸರಕಾರ ಸೂಕ್ಷ್ಮ ನೀರಾವರಿಯ ಮಹತ್ವವನ್ನು ಗುರುತಿಸಿ 2005-06ನೇ ಸಾಲಿನಿಂದ ಕೇಂದ್ರ ಪುರಸ್ಕೃತ ಸೂಕ್ಷ್ಮ ನೀರಾವರಿ ಯೋಜನೆಯನ್ನು ಪ್ರಾರಂಭಿಸಲಾಗಿದೆ. ನಂತರ ಇದೇ ಸೂಕ್ಷ್ಮ ನೀರಾವರಿ ಯೋಜನೆಯನ್ನು ರಾಷ್ಟ್ರೀಯ ಸೂಕ್ಷ್ಮ ನೀರಾವರಿ ಮಿಷನ್ ಆಗಿ ಮರು ನಾಮಕರಣ ಮಾಡಲಾಗಿತ್ತು. ನಂತರ 2014-15ನೇ ಸಾಲಿನಲ್ಲಿ ಸೂಕ್ಷ್ಮ ನೀರಾವರಿ ಕಾರ್ಯಕ್ರಮವನ್ನು ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನದಡಿ ಅನುಷ್ಠಾನಗೊಳಿಸಲಾಗಿತ್ತು. ಈ ಬಾರಿ ಇದೇ ಯೋಜನೆಯನ್ನು ಪ್ರಧಾನ ಮಂತ್ರಿ ಸಿಂಚಾಯಿ ಯೋಜನೆ ಎಂದು ನಾಮಕರಣ ಮಾಡಲಾಗಿದೆ.
ಕೃಷಿ ಉತ್ಪಾದನೆ ಹೆಚ್ಚಿಸುವುದಕ್ಕೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಂಡಿರುವ ಕೇಂದ್ರ ಸರ್ಕಾರ ನೀರಾವರಿಯ ಕಾರ್ಯಕ್ಷಮತೆಯನ್ನು ಸುಧಾರಿಸಲು
ಪ್ರಾಮುಖ್ಯತೆಯನ್ನು ನೀಡಿದೆ. ಕಳೆದ ಮುಂಗಡಪತ್ರದಲ್ಲಿ ಇದೇ ಕಾರಣಕ್ಕೆ ನೀರಾವರಿಗೆ ಹೆಚ್ಚಿನ ಆದ್ಯತೆಯನ್ನೂ ನೀಡಿದೆ. “ಹನಿ ನೀರು ಹೆಚ್ಚು ಬೆಳೆ” ಎಂಬ
ಧ್ಯೇಯವನ್ನೂ ಘೋಷಿಸಿರುವ ಸರ್ಕಾರ, ಪ್ರತಿ ಕೃಷಿ ಭೂಮಿಗೂ ನೀರಾವರಿ ಬೇಡಿಕೆ ಪೂರೈಸಲು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಮೂಲಕ ಕ್ರಮ ಕೈಗೊಂಡಿದ್ದು ಈ ಪರಿಣಾಮ ಮಧ್ಯಮ ಮತ್ತು ಬೃಹತ್ ನೀರಾವರಿ ಯೋಜನೆಗಳಿಗೆ ಚಾಲನೆ ಸಿಕ್ಕಿದೆ. ಅಷ್ಟೇ ಅಲ್ಲದೇ ಜಲಾನಯನ ಅಭಿವೃದ್ಧಿ ಮತ್ತು ಜಲಕೊಯ್ಲು ಮತ್ತು ನಿರ್ವಹಣೆಯಂತಹ ಯೋಜನೆಗಳೂ ಚುರುಕಾಗಿ ನಡೆದಿವೆ.
ಯೋಜನೆಯ ಲಾಭ ಹಾಗೂ ಯೋಜನೆಯ ಉದ್ದೇಶವೇನು ಗೊತ್ತೇ??
ಆಯಾ ಜಿಲ್ಲೆಯ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಅಳವಡಿಸುವ ಎಲ್ಲ ವರ್ಗದ ರೈತರಿಗೆ ನಿಯಮಾನುಸಾರ ಶೇ.90 ರಷ್ಟು ಸಹಾಯಧನವನ್ನು ಗರಿಷ್ಠ ಮಿತಿಗೆ ಒಳಪಟ್ಟು ನೀಡಲಾಗುತ್ತದೆ. ಅಷ್ಟೇ ಅಲ್ಲದೇ ಪ್ರತಿಫಲಾನುಭವಿಗೆ ಗರಿಷ್ಠ 5.00 ಹೆಕ್ಟೇರ್ ಪ್ರದೇಶದವರೆಗೆ ಸಹಾಯಧನ ಲಭ್ಯವಿದ್ದು ನಾನಾ ಅನುಕೂಲತೆಗಳಿವೆ.
ತೋಟಗಾರಿಕೆಯ ಯಾವುದೇ ಬೆಳೆಗಳಿಗೆ ಸೂಕ್ಷ್ಮ ನೀರಾವರಿ ಪದ್ಧತಿಯನ್ನು ಬಳಸಿದಲ್ಲಿ ನೀರಿನ ಮಿತವ್ಯಯವಾಗುತ್ತದೆ, ರೈತ ಫಲಾನುಭವಿಗಳಿಗೆ ಶೇ.90ರಷ್ಟು
ಸಹಾಯಧನ ನೀಡುವ ಮೂಲಕ ಆಯಾ ರೈತರಲ್ಲಿ ಶೇ.50ರಿಂದ70 ರಷ್ಟು ನೀರಿನ ಮಿತವ್ಯಯ ಸಾಧಿಸುವುದರ ಜತೆಗೆ ವಿದ್ಯುತ್ ಹಾಗೂ ಕೂಲಿ ವೆಚ್ಚವನ್ನು ಕಡಿಮೆ ಮಾಡಬಹುದು. ಈ ಪದ್ಧತಿಯಿಂದ ಬೆಳೆಯುವ ಯಾವುದೇ ಬೆಳೆಗಳ ಇಳುವರಿ ಹಾಗೂ ಉತ್ಪಾದನೆ ಹೆಚ್ಚಿಸಬಹುದು ಎಂದು ಉದ್ದೇಶಿಸಲಾಗಿದೆ.
ಕೃಷಿ ಉತ್ಪನ್ನಗಳ ಅಭಿವೃದ್ಧಿಯ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಪಿ.ಎಂ.ಕೆ.ಎಸ್.ವೈ) ಅಡಿಯಲ್ಲಿ ಮುಂದಿನ ಐದು ವರ್ಷಗಳಲ್ಲಿ 50 ಸಾವಿರ ಕೋಟಿ ವೆಚ್ಚವನ್ನು ಮಾಡಲಿದ್ದು, ಈ ನಿರ್ಧಾರವನ್ನು ಆರ್ಥಿಕ ವ್ಯವಹಾರಗಳ ಮೇಲಿನ ಸಂಪುಟ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಈ ಯೋಜನೆಗೆ ಐದು ವರ್ಷಗಳ ಅವಧಿಯಲ್ಲಿ ಬಜೆಟ್‍ನಲ್ಲಿ 50 ಸಾವಿರ ಕೋಟಿ ಮೀಸಲಿಡಲಾಗುತ್ತದೆ. ಅಲ್ಲದೇ, ಹೆಚ್ಚುವರಿ ವೆಚ್ಚವನ್ನು ರಾಜ್ಯಗಳು ಭರಿಸಲಿವೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ!!
2015ರಲ್ಲಿ 5,300 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಈ ಮೊತ್ತವನ್ನು ಬಳಸಿಕೊಂಡು ಹೆಚ್ಚುವರಿಯಾಗಿ 6 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿತ್ತು!!ಇನ್ನು 5 ಲಕ್ಷ ಹೆಕ್ಟೇರ್ ಪ್ರದೇಶವು ಹನಿ ನೀರಾವರಿಯ ಪ್ರಯೋಜನ ಪಡೆದಿದ್ದಲ್ಲದೇ 1,300 ಜಲಸಂವರ್ಧನೆ ಯೋಜನೆಗಳನ್ನು ಪೂರ್ಣಗೊಳಿಸಿವೆ. ಕ್ಷೇತ್ರ ಮಟ್ಟದಲ್ಲಿ ನೀರಾವರಿ ಹೂಡಿಕೆ ಹೆಚ್ಚಿಸುವುದು, ಇನ್ನಷ್ಟು ಉಳುಮೆ ಭೂಮಿಗೆ ನೀರಾವರಿ ಸೌಲಭ್ಯ ವಿಸ್ತರಿಸುವುದು, ಕೃಷಿಯಲ್ಲಿ ನೀರು ಉಳಿಸುವ ತಂತ್ರಜ್ಞಾನಗಳ ಬಳಕೆ ಇತ್ಯಾದಿ ಕೃಷಿ ಸಿಂಚಾಯಿ ಯೋಜನೆ ಅಡಿ ಬರಲಿವೆ.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ (ಪಿ.ಎಂ.ಕೆ.ಎಸ್.ವೈ) ಬರಗಾಲದಿಂದ ತತ್ತರಿಸಿ ಹೋಗಿರುವ ರೈತರ ಪಾಲಿಗೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಸೌಲಭ್ಯ ಒಂದು ವರದಾನವಾಗಿದ್ದಲ್ಲದೇ ಪ್ರತಿಯೊಬ್ಬ ರೈತನ ಹೊಲಕ್ಕೂ ನೀರು ಲಭಿಸಬೇಕಲ್ಲದೆ ಹನಿ ನೀರಿನಿಂದಲೂ ಅಧಿಕ ಇಳುವರಿ ಪಡೆಯಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಆರಂಭಿಸಿರುವ ಪಿ.ಎಂ.ಕೆ.ಎಸ್.ವೈ.ನಲ್ಲಿ ಶೇ 90ರಷ್ಟು ಸಹಾಯಧನವನ್ನು ಎಲ್ಲ ವರ್ಗದ ಫಲಾನುಭವಿಗಳಿಗೂ ಸರ್ಕಾರ ನೀಡುತ್ತಿದೆ.
ತೋಟಗಾರಿಕೆ ಇಲಾಖೆಯು ರೈತರಿಗೆ ಹನಿ ನೀರಾವರಿ (ಡ್ರಿಪ್) ಸೌಲಭ್ಯಕ್ಕೆ ನೆರವು ನೀಡಿದರೆ, ಕೃಷಿ ಇಲಾಖೆ ತುಂತುರು ನೀರಾವರಿಗೆ (ಜೆಟ್) ಸಹಾಯಧನ
ನೀಡುತ್ತಿದೆ.
2016-17ನೇ ಸಾಲಿಗೆ ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆಗೆ ಈ ಯೋಜನೆಯಡಿ ಒಟ್ಟು 9.12 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಸಾಮಾನ್ಯ ವರ್ಗದ ರೈತರಿಗೆ 7.12 ಕೋಟಿ ಅನುದಾನ ನಿಗದಿಗೊಳಿಸಲಾಗಿದ್ದು, ಸುಮಾರು 2,000 ಫಲಾನುಭವಿಗಳಿಗೆ ಮಾತ್ರ ಸಬ್ಸಿಡಿ ನೀಡಲು ಸಾಧ್ಯವಾಗಲಿದೆ. ಆದರೆ, 2016ರಲ್ಲಿ 4000ಕ್ಕೂ ಹೆಚ್ಚು ರೈತರಿಂದ ಅರ್ಜಿ ಬಂದಿದ್ದು, ಅದರಲ್ಲಿ ಪರಿಶಿಷ್ಟ ಜಾತಿ ರೈತರಲ್ಲಿ 400 ಫಲಾನುಭವಿಗಳಿಗೆ ನೆರವು ನೀಡಲು ಸಾಧ್ಯವಿದ್ದು, ಅದರಲ್ಲಿ 350 ಅರ್ಜಿಗಳು ಬಂದಿದ್ದು, ಇನ್ನು ಪರಿಶಿಷ್ಟ ಪಂಗಡ ವಿಭಾಗದಲ್ಲಿ 210 ರೈತರಿಗೆ ಮಾತ್ರ ನೆರವು ನೀಡಲು ಸಾಧ್ಯವಿದ್ದು, ಇದರಲ್ಲಿ 250 ಅರ್ಜಿಗಳು ಬಂದಿವೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಯಾವ ಯಾವ ಬೆಳೆಗೆ ಸಬ್ಸಿಡಿ ನೀಡಲಾಗುತ್ತದೆ?
ತೆಂಗು ಮತ್ತು ಅಡಿಕೆ ಬೆಳೆಯನ್ನು ಹೊರತುಪಡಿಸಿ ಎಲ್ಲ ಬಗೆಯ ತೋಟಗಾರಿಕೆ ಬೆಳೆಯಲ್ಲಿ ಹನಿ ನೀರಾವರಿ ಸೌಲಭ್ಯ ಕಲ್ಪಿಸಿಕೊಳ್ಳಲು ಅನುದಾನ ನೀಡಲಾಗುತ್ತದೆ. ತೆಂಗು ಮತ್ತು ಅಡಿಕೆ ತೋಟದ ನಡುವೆ ಅಂತರ ಬೆಳೆ ಬೆಳೆದಿದ್ದರೆ ಅದಕ್ಕೆ ಅನುದಾನ ನೀಡಲು ಅವಕಾಶವಿದೆ. ಹಾಗಾಗಿ ಮೆಕ್ಕೆಜೋಳ, ಶೇಂಗಾ, ಈರುಳ್ಳಿ, ಕಡಲೆ, ದ್ವಿದಳ ಧಾನ್ಯಗಳನ್ನು ಬೆಳೆಯಲು ಕೃಷಿ ಇಲಾಖೆಯಡಿ ತುಂತುರು ನೀರಾವರಿ ಸೌಲಭ್ಯವನ್ನು ಪಡೆಯಲು ಅನುದಾನ ಕೊಡಲಾಗುತ್ತದೆ.
ಇನ್ನು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಜಲಾನಯನ ಇಲಾಖೆ ಮೂಲಕ ಜಿಲ್ಲೆಯಲ್ಲಿ ವಿವಿಧ ಜಲ ಸಂರಕ್ಷಣೆ ಕಾರ್ಯಗಳನ್ನೂ ಕೈಗೊಳ್ಳಲಾಗುತ್ತಿದೆ. ಹಾಗಾಗಿ 2016-17ರಲ್ಲಿ 5.13 ಕೋಟಿ ವೆಚ್ಚ ಮಾಡಲಾಗಿದೆ. 1,343 ಹೆಕ್ಟೇರ್‍ನಲ್ಲಿ ಕ್ಷೇತ್ರ ಬದು, 67 ಚೆಕ್ ಡ್ಯಾಂ, 90 ಸಡಿಲು ಕಲ್ಲಿನ ತಡೆ, 1862 ಮೀಟರ್ ದುಂಡು ಕಲ್ಲಿನ ತಡೆ, 4 ನಾಲಾ ಬದು, 2 ಜಿನುಗು ಕೆರೆ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಕೃಷಿ ಘಟಕದಡಿ 4.50 ಕೋಟಿ ಖರ್ಚು ಮಾಡಲಾಗಿದೆ. ಅರಣ್ಯ ಘಟಕದಡಿ 31.32 ಲಕ್ಷದಲ್ಲಿ 106 ಹೆಕ್ಟೇರ್‍ನಲ್ಲಿ ಅರಣ್ಯೀಕರಣಕೈಗೊಳ್ಳಲಾಗಿದೆ. ತೋಟಗಾರಿಕೆ ಘಟಕದಡಿ 28.46 ಲಕ್ಷದಲ್ಲಿ 229 ಹೆಕ್ಟೇರ್‍ನಲ್ಲಿ ವಿವಿಧ ಹಣ್ಣಿನ ಗಿಡಗಳನ್ನು ನೆಡಲಾಗಿದೆ ಎಂದು ಜಲಾನಯನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಡಿಮೆ ನೀರಿನಲ್ಲಿ ಅಧಿಕ ಇಳುವರಿ: ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಕಳೆದ ವರ್ಷ ಎರಡು ಹೆಕ್ಟೇರ್‍ಗೆ ತುಂತುರು ನೀರಾವರಿ ಸೌಲಭ್ಯ
ಪಡೆದುಕೊಂಡಿದ್ದೆ. ಈ ಬಾರಿ ಬರಗಾಲ ಇರುವುದರಿಂದ ನೀರಾವರಿ ಸೌಲಭ್ಯ ಇಲ್ಲದ ಅಕ್ಕ ಪಕ್ಕದ ರೈತರ ಹೊಲದಲ್ಲಿ ಎಕರೆಗೆ 8ರಿಂದ 10 ಕ್ವಿಂಟಲ್ ಮೆಕ್ಕೆಜೋಳ ಬಂದಿದೆ. ಇರುವ ಅಲ್ಪ ನೀರಿನಲ್ಲೇ ಜೆಟ್ ಹಾಕಿ ಬೆಳೆ ಜೋಪಾನ ಮಾಡಿದ್ದರಿಂದ ನಮ್ಮ ಹೊಲದಲ್ಲಿ ಎಕರೆಗೆ 25 ಕ್ವಿಂಟಲ್ ಮೆಕ್ಕೆಜೋಳ ಸಿಕ್ಕಿದೆ.
ಈ ಯೋಜನೆಯನ್ನು ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳೇನು ಗೊತ್ತೇ ??
* ತೋಟಗಾರಿಕೆ ಬೆಳೆ ಬೆಳೆಯುವ ಫಲಾನುಭವಿ ರೈತರ ಹೆಸರಿನಲ್ಲಿ ಜಮೀನು ಇರಬೇಕು
* ಜಂಟಿ ಖಾತೆ ಇದ್ದಲ್ಲಿ ಇತರ ಖಾತೆದಾರರ ಒಪ್ಪಿಗೆ ಪತ್ರ ಇರಬೇಕು
* ಮಹಿಳೆಯರ ಹೆಸರಿನಲ್ಲಿ ಜಮೀನು ಇದ್ದಲ್ಲಿ ಅವರೇ ಅರ್ಜಿ ಸಲ್ಲಿಸಬೇಕು,
* ಆಯಾ ಫಲಾನುಭವಿಗಳು ತೋಟಗಾರಿಕೆ ಬೆಳೆ ಬೆಳೆಯುವಲ್ಲಿ ಹೆಚ್ಚಿನ ಆಸಕ್ತಿ ಇರಬೇಕು ಇಂಥವರು ಸೂಕ್ಷ್ಮ ನೀರಾವರಿಯನ್ನು ಅಳವಡಿಸಿದ ನಂತರ ತೋಟಗಾರಿಕೆ ಬೆಳೆಯನ್ನು ಬೆಳೆಯಲು ಅವಕಾಶವಿರುತ್ತದೆ.
ಅಂತೂ ಸ್ವಾತಂತ್ರ್ಯಾನಂತರದಲ್ಲಿ ನಿರ್ಲಕ್ಷಿಸಲ್ಪಟ್ಟಿದ್ದ ಕೃಷಿ ಕ್ಷೇತ್ರದಲ್ಲಿ ಕಳೆದ ಎರಡು ವರ್ಷಗಳಿಂದ ಕೊಂಚ ಸಂಚಲನ ಆರಂಭವಾಗಿದ್ದು, ಪ್ರಧಾನ ಮಂತ್ರಿ ಕೃಷಿ
ಸಿಂಚಾಯಿ ಯೋಜನೆ, ಪ್ರಧಾನಮಂತ್ರಿ ಫಸಲ್ ಬಿಮಾ ಸೇರಿ ಹತ್ತು ಹಲವಾರು ಹೊಸ ಯೋಜನೆಗಳು ಕೃಷಿಕರಲ್ಲಿ ನವೋಲ್ಲಾಸ ತುಂಬಿದ್ದಂತೂ ಅಕ್ಷರಶಃ ನಿಜ!!
– ಅಲೋಖಾ