ಅಂಕಣ

ಕೃಷ್ಣ ವೃಂದಾವನವನ್ನು ಬಿಟ್ಟು ಹೋದ ನಂತರ ರಾಧೆಯ ಜೀವನದಲ್ಲಿ ಏನಾಯ್ತು ಗೊತ್ತೇ?!

ಹೌದು…. ರಾಧೆಯೇ ಈ ಜಗತ್ತಿನ ಅತಿ ದೊಡ್ಡ ಪ್ರೇಮಿ!! ಕೃಷ್ಣ ಮೊಸರು, ಬೆಣ್ಣೆಯನ್ನು ಕದ್ದು ತಿನ್ನುತ್ತಾ, ಅಮ್ಮನನ್ನೇ ಗೋಳು ಹೊಯ್ದುಕೊಳ್ಳುತ್ತಿದ್ದ ತುಂಟ!! ಕೃಷ್ಣಾ ಎಂದರೆ ಸಾಕು ಕಷ್ಟವೊಂದಿಷ್ಟಿಲ್ಲ ಎನ್ನುವ ಭಕ್ತರ ಸಂಖ್ಯೆಗೇನೂ ಕಡಿಮೆ ಇಲ್ಲ!! ಗೋಪಿಕೆಯರ ಮೊಸರು ಕುಡಿಕೆಗಳಿಗೆ ತನ್ನ ತುಂಟಾಟದಿಂದಲೇ ಕಲ್ಲನ್ನು ಎಸೆದು ಎಸೆದೇ ಸುರಸುಂದರಿಯಂತಿದ್ದ ಗೋಪಿಕೆ ರಾಧೆಯನ್ನು ಪ್ರೇಮ ಪಾಶಕ್ಕೆ ಸಿಲುಕಿಸಿದ್ದ ಈ ನಂದಕಿಶೋರ. ಕೃಷ್ಣನ ಕೊಳಲ ನಾದ ಕೇಳದೇ ಹೋದರೆ, ಅವಳಿಗೆ ಈ ಜಗತ್ತೇ ಕಿವುಡಾಗುತ್ತಿತ್ತು. ರಾಧಾ ರಾಧಾ ಎಂಬ ನಂದಕಿಶೋರನ ಧ್ವನಿ ಕೇಳದಿದ್ದರೆ, ಅವಳ ಬದುಕೇ ಮೂಕವಾಗಿ ಹೋಗುತ್ತಿತ್ತು. ಕೃಷ್ಣ ಅಂದರೆ ಆಕೆಗೆ ಸರ್ವಸ್ವವೂ ಆಗಿದ್ದ. ರಾಧಾ, ಕೃಷ್ಣನೇ ಆಗಿದ್ದಳು, ಕೃಷ್ಣ ರಾಧೆಯೇ ಆಗಿದ್ದ…!!!

ಕೊನೆಗೂ ರಾಧಾರಮಣರ ಈ ಪ್ರೀತಿ ಕೊನೆಗೊಂಡಿದ್ದು ಮಾತ್ರ ರಾಧೆಯ ಸಾವಿನ ನಂತರ!! ನಾವು ಶ್ರೀ ಕೃಷ್ಣನ ಬಗ್ಗೆ ಭಾಗವತದಲ್ಲಿ ಬೇಕಾದಷ್ಟು ಮಾಹಿತಿ ಸಿಗುತ್ತೆ, ಆದ್ರೆ ರಾಧೆಯ ಬಗ್ಗೆ ಮಾತ್ರ ಯಾರಿಗೂ ಸರಿಯಾಗಿಯೇ ಗೊತ್ತಿಲ್ಲ. ಆದರೆ ಹಿಂದೂ ಗ್ರಂಥಗಳ ಪ್ರಕಾರ ಇವರಿಬ್ಬರ ಪರಿಶುದ್ದವಾದ ಪ್ರೀತಿಯು ಯಾವುದೇ ಶರತ್ತುಗಳಿಲ್ಲದ, ಕೊನೆಯಿಲ್ಲದ ಪ್ರೀತಿಯನ್ನು ನಿರೂಪಿಸುತ್ತದೆ. ಆದರೆ ಕೃಷ್ಣ ವೃಂದಾವನವನ್ನು ಬಿಟ್ಟು ಹೋದನಂತರ ರಾಧೆಯ ಜೀವನ ಏನಾಯ್ತು ಅನ್ನೋದು ಯಾರಿಗೂ ಗೊತ್ತಿಲ್ಲ!! ರಾಧಾ-ಕೃಷ್ಣರ ಜೋಡಿಯಾದರೂ ಅಷ್ಟೇ. ಒಬ್ಬರನ್ನೊಬ್ಬರು ಬಿಟ್ಟಿರಲಾರರು.. ಕೃಷ್ಣ ಏನೇ ಕೀಟಲೆ ಕೊಟ್ಟರೂ ರಾಧೆ ನಗಬೇಕು. ರಾಧೆ ಏನು ಮಾಡಿದರೂ ಕೃಷ್ಣ ಸಹಿಸಿಕೊಳ್ಳಬೇಕು. ಕೃಷ್ಣನಾದರೂ ಸಾಕ್ಷಾತ್ ಭಗವಂತ. ಆತ ಬಲವಂತವಾಗಿ ನಗಬಲ್ಲ. ನೋವಿನಲ್ಲೂ ನಗು ಸೂಸಬಲ್ಲ. ಆದರೆ…

ಕೃಷ್ಣನ ಮೇಲಿರುವ ಪರಿಶುದ್ದವಾದ ಪ್ರೀತಿಗೆ ವೃಂದಾವನದಿಂದ ಗೋಪಿಕೆಯರ ಕಣ್ಣು ತಪ್ಪಿಸಿ ರಾಧೆಯನ್ನು ಅರಸಿಕೊಂಡು ರೇಪಲ್ಲಿ ಅನ್ನುವ ಪುಟ್ಟ ಹಳ್ಳಿಗೆ ಹೋಗುತ್ತಿದ್ದ. ಆದರೆ ರಾಧೆ ಕೃಷ್ಣನಿಗಿಂತ 5ವರ್ಷ ದೊಡ್ಡವಳಾದರೂ ಪ್ರೀತಿ ಮಾತ್ರ ಅಗಾಧವಾದುದು!! ಆದರೆ ದೈವಿಕ ಧರ್ಮ ಪ್ರಚಾರದ ಗುರಿಯ ನಿಮಿತ್ತ ವೃಂದಾವನ ಬಿಟ್ಟು ಹೊರಟ್ಟಿದ್ದ ಶ್ರೀ ಕೃಷ್ಣ ಹೊರಡುವುದಕ್ಕಿಂತ ಮುಂಚೆ ರಾಧೆಯನ್ನು ಬೇಟಿ ಮಾಡುತ್ತಾನೆ!! ಆದರೆ ಮತ್ತೆ ತಿರುಗಿ ಬರಲು ಸಾಧ್ಯವೇ ಇಲ್ಲ ಎಂದು ತಿಳಿದ್ದ ಇಬ್ಬರೂ… ಮೌನವನ್ನೇ ವಹಿಸಿ, ಪ್ರೀತಿ ತುಂಬಿದ್ದ ಮನಸ್ಸುಗಳು ಸ್ವರಗಳೇ ಬಾರದಂತೆ ಬಾಯಿಯನ್ನು ಕಟ್ಟಿ ಹಾಕಿತ್ತು!! ಆದರೆ ಸ್ವಲ್ಪ ಹೊತ್ತು ಅಲ್ಲಿ ಕಾಲ ಕಳೆದ ಶ್ಯಾಮನು ತನ್ನ ಇಚ್ಛೆಯಂತಯೇ ಧರ್ಮ ಪ್ರಚಾರದ ಗುರಿಯನ್ನು ಇಟ್ಟುಕೊಂಡು ಮಥುರಾ ನಗರಕ್ಕೆ ಬರುತ್ತಾನೆ!! ಆ ಸಮಯದಲ್ಲಿ ರಾಧೆಯ ಜೀವನ ಒಂದು ವಿಭಿನ್ನ ತಿರುವನ್ನೇ ಪಡೆದುಕೊಂಡಿರುತ್ತೆ.

ರಾಧೆ ಮಾತ್ರ ಕೃಷ್ಣನ ನೆನಪಲ್ಲೇ ಕಾಲ ಕಳೆಯುತ್ತಿರಬೇಕಾದರೆ, ಆಕೆಯ ಮನೆಯವರ ಒತ್ತಾಯದ ಮೆರೆಗೆ ಒಬ್ಬ ಯಾದವ ಕುಟುಂಬದ ವ್ಯಕ್ತಿಯೊಂದಿಗೆ
ಮದುವೆಯಾಗುತ್ತಾಳೆ!! ವರ್ಷಗಳು ಕಳೆದಂತೆ ರಾಧೆ ತನ್ನ ಮನೆಯ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಯಶಸ್ವಿಯಾದಳು. ಆದರೆ ಆಕೆಯ ಆತ್ಮ ಮಾತ್ರ ಕೃಷ್ಣನ ಅಪಾರವಾದ ಭಕ್ತಿಯಿಂದ ತುಂಬಿ ಹೋಗಿತ್ತು!!

ರಾಧೆ ತನ್ನ ಸಂಸಾರದ ಜವಾಬ್ದಾರಿಯೆಲ್ಲವೂ ಮುಗಿದ ನಂತರ, ತನ್ನ ಮುಪ್ಪಿನಲ್ಲಿ ತಾನು ಸಾಯೋ ಮುಂಚೆ ಕೃಷ್ಣನನ್ನು ನೋಡ್ಬೇಕು ಅಂದುಕೊಳ್ಳುತ್ತಾಳೆ. ನಿಜವಾದ ಪ್ರೀತಿಯನ್ನು ಹೊತ್ತಿರುವ ಈಕೆ ಕೃಷ್ಣನಲ್ಲಿ ಬೆರೆತು ಹೋಗಿದ್ದಳು!! ಹಾಗಾಗಿ ಮುಪ್ಪಿನಲ್ಲಿ ಕೃಷ್ಣನನ್ನು ನೋಡುವ ಆಸೆಯಿಂದ ಆತನನ್ನು ಹರಸಿಕೊಂಡು, ನಡೆದುಕೊಂಡೇ ದ್ವಾರಕೆಗೆ ಬಂದಳು ರಾಧೆ!! ಇಬ್ಬರು ಭೇಟಿ ಮಾಡಿದ ನಂತರ ಅವರಿಬ್ಬರ ಸಂಬಂಧದದ ಬಗ್ಗೆ ಹೇಳಲು ಪದಗಳೇ ಸಾಕಾಗುವುದಿಲ್ಲ. ಆದರೆ ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಇಬ್ಬರು ಜೊತೆಯಲ್ಲಿದ್ದರು!! ಆದರೆ ದೈಹಿಕವಾಗಿ ಸೊರಗಿ ಹೋಗಿದ್ದ ರಾಧೆ ಕೊನೇಗಾಲದಲ್ಲಿಯಾದರೂ ಕೃಷ್ಣನ ಜೊತೆ ಇರಬೇಕು ಎಂದುಕೊಂಡ ರಾಧೆ, ಕೃಷ್ಣನ ಅನುಮತಿ ಪಡೆದು, ಆತನ ಅರಮನೆಯಲ್ಲಿ ಕೃಷ್ಣನ ಸೇವಕಿಯಾಗಿ ಸೇರಿಕೊಂಡಳು !!!!

ಕೃಷ್ನನ ಪ್ರೀತಿ ಆಕೆಯನ್ನು ಆಗಾಧವಾಗಿ ಕಾಡಿತ್ತು, ಅರಮನೆಯನ್ನು ಸೇರಿಕೊಂಡ ರಾಧೆಯನ್ನು ಯಾರು ಗುರುತನ್ನು ಹಿಡಿಯಲಿಲ್ಲ ಅಷ್ಟೇ ಅಲ್ಲದೇ, ಆಕೆಯ ಬಗ್ಗೆ
ತಿಳಿದುಕೊಳ್ಳಲು ಪ್ರಯತ್ನಿಸುವುದಿಲ್ಲ!! ದಿನಾ ದೂರದಿಂದಲೇ ಕೃಷ್ಣನನ್ನು ನೋಡುತ್ತಾ, ತಾನೂ ಈ ಜಗತ್ತಿನಿಂದಲೇ ದೂರ ಆಗುತ್ತೀನಿ ಅಂತನೂ ಅವಳಿಗೆ ಅನಿಸಿ
ಬಿಡುತ್ತೆ!! ಅದಕ್ಕಾಗಿ ಪ್ರತ್ಯಕ್ಷವಾಗಿ ದಿನಾ ಮುಖ ನೋಡಿ ಇರೋ ಭಾವಕ್ಕಿಂತ ದೂರಾನೇ ಇದ್ದು ಆಧ್ಯಾತ್ಮಿಕವಾಗಿ ಹತ್ತಿರವಾಗುವುದು ಉತ್ತಮ ಅಂತ ತಿಳಿದ ರಾಧೆ ಅರಮನೆ ಬಿಟ್ಟು ಹೋಗುತ್ತಾಳೆ!! ವಿಷ್ಣುವಿನ ಅವತಾರವಾದ ಶ್ರೀಕೃಷ್ಣನು ತನ್ನ ರಾಧೆ ಎತ್ತ ಹೋದರು ಆಕೆಯನ್ನು ಹಿಂಬಾಲಿಸುತ್ತಾನೆ. ಆದರೆ ಅದು ರಾಧೆಗೆ ಮಾತ್ರ ತಿಳಿಯುವುದೇ ಇಲ್ಲ!! ಮುಪ್ಪಿನ ವಯಸ್ಸಿನಲ್ಲಿ ದಿಕ್ಕೇ ತೋಚದೇ ರಾಧೆ ಸುಸ್ತಾಗಿ ಬೀಳುತ್ತಾಳೆ, ಇದನ್ನೆಲ್ಲ ಗಮನಿಸಿ ಭಗವಂತ ತನ್ನ ಅವಶ್ಯಕತೆ ರಾಧೆಗೆ ಇದೆ ಎಂದು ತಿಳಿದುಕೊಂಡ. ರಾಧೆ ಸುಸ್ತಾಗಿ ಬಿದ್ದಿರುವುದನ್ನು ಕಂಡು ಆಕೆಯನ್ನು ಉಪಚರಿಸಿಲು ಆಕೆಯನ್ನು ಮುಟ್ಟಿದ ತಕ್ಷಣ ರಾಧೆಗೆ ಜ್ಞಾನ ಬಂದು ಆಕೆ ನಸುನಕ್ತಾಳೆ!! ರಾಧೆಯ ಜೀವನದ ಅಂತಿಮ ಕ್ಷಣಗಳಲ್ಲಿ ಅವಳು ತುಂಬಾ ನಿಶ್ಯಕ್ತಳಾಗಿದ್ದಳು!! ಆದರೆ ತಾನು ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸೋ ವ್ಯಕ್ತಿಯನ್ನು ನೋಡಿ ಆನಂದವಾಗುತ್ತೆ… ಆಕೆಯ ಆತ್ಮ ಆಕೆಯನ್ನು ಬಿಟ್ಟು ಹೋಗುವ ಸಂದರ್ಭದಲ್ಲಿ, ಕೃಷ್ಣ ರಾಧೆಗೆ ಏನಾದರೂ ಕೊನೆಯ ಆಸೆಯನ್ನು ಕೇಳು ಎನ್ನುತ್ತಾನೆ. ಆದರೆ ರಾಧೆ ಯಾವತ್ತೂ ಏನೂ ಕೇಳಿದವಳೇ ಅಲ್ಲ ಹಾಗೂ ಆಕೆಗೆ ಏನೂ ಬೇಕಿರಲೂ ಇರಲಿಲ್ಲ!! ಹಾಗಿರಬೇಕಾದರೆ ಕೃಷ್ಣ ಏನಾದರೂ ಕೇಳಲೇಬೇಕು ಎಂದಾಗ ಕೊನೇಯ ಬಾರಿ ಕೊಳಲನ್ನು ನುಡಿಸಬೇಕಾಗಿ ಕೇಳಿಕೊಂಡಳು ಈ ರಾಧೆ!!

ಆದರೆ ತನ್ನ ಪ್ರಿಯ ಭಕ್ತೆಯಾದ ರಾಧೆ ಕೇಳಿದ್ದಕ್ಕೆ ಇಲ್ಲ ಎನ್ನಲಾಗಲೇ ಇಲ್ಲ!! ತಾನು ಎಂದು ನುಡಿಸಲಾಗದೇ ಇದ್ದ ಮಧುರವಾದ, ಇಂಪಾದ ಧ್ವನಿಯನ್ನು ತನ್ನ
ರಾಧೆಗೋಸ್ಕರ ನುಡಿಸಿದ…. ನಾದವನ್ನು ಕೇಳುತ್ತಿದ್ದ ರಾಧೆ ಆಧ್ಯಾತ್ಮಿಕವಾಗಿ ಕೃಷ್ಣನಲ್ಲಿಯೇ ಮುಳುಗಿಹೋದಳು… ಆ ಮಧುರವಾದ ಕೊಳಲಿನ ನಾದನ್ನು ಕೇಳುತ್ತಾ ಕೇಳುತ್ತಾ ರಾಧೆ ಕೃಷ್ಣನ ತೊಡೆಯ ಮೇಲೆ ಮಲಗಿ ತನ್ನ ಕೊನೆಯುಸಿರೆಳೆಯುತ್ತಾಳೆ!! ಇನ್ನೆಂದೂ ಕೃಷ್ಣನಿಂದ ದೂರ ಆಗದೇ ಕೃಷ್ಣನಲ್ಲೇ ಲೀನವಾಗ್ತಾಳೆ ಈ ರಾಧಾ…!! ಕೃಷ್ಣ ತನ್ನ ಕೊನೆಯ ನಾದವನ್ನು ನುಡಿಸಿ ಕೊಳಲನ್ನೇ ಮುರಿದು ಎಸೆದು ಬಿಡುತ್ತಾನೆ, ಇದಷ್ಟೇ ಅಲ್ಲದೇ, ಇನ್ನೆಂದು ನಾನು ಕೊಳಲನ್ನು ನುಡಿಸಲಾರೆ ಎಂದು ನಿರ್ಧರಿಸಿದ!!

ರಾಧಾ ಕೃಷ್ಣರ ಈ ಪವಿತ್ರವಾದ ಪ್ರೀತಿ ಪ್ರತಿಯೊಬ್ಬರ ಕಣ್ಣಂಚಿನಲ್ಲಿ ನೀರು ತುಂಬುವುದು ನಿಜ!! ಯಾಕೆಂದರೆ ಹಾಲಿನಷ್ಟೇ ಶುದ್ದವಾದ ಪ್ರೀತಿಯಲ್ಲಿ ಯಾವತ್ತೂ
ಕಲ್ಮಶವಿರಲಿಲ್ಲ.. ಪ್ರೀತಿಯ ಸುಧೆಯಲ್ಲಿ ಮಿಂದಳು ನಮ್ಮ ರಾಧೆ…. ಕೊನೆಗೋ ರಾಧೆ ಕೃಷ್ಣನಿಂದ ದೂರವಾಗಿ ತನ್ನಲ್ಲೇ ಲೀನವಾದಳು……………!!!

ಮೂಲ:https://antekante.com/2191

-ಅಲೋಖಾ

Tags

Related Articles

Close