ಪ್ರಚಲಿತರಾಜಕೀಯ

ಕೆಎಸ್‌ಆರ್‌ಟಿಸಿ ದೇಣಿಗೆ ಸ್ವೀಕರಿಸುವುದಿಲ್ಲ ಎಂದು ಗೊತ್ತಿದ್ದರೂ ಕೆಪಿಸಿಸಿ ದೇಣಿಗೆ ನೀಡಲು ಮುಂದಾಗಿದ್ದು ಯಾಕೆ? ಮಹಾ ಪೊಳ್ಳುತನ ಬಹಿರಂಗ…!

ಕೆಪಿಸಿಸಿಯು ವಲಸೆ ಕಾರ್ಮಿಕರಿಗೆ ಪ್ರಯಾಣ ಶುಲ್ಕವಾಗಿ ಒಂದು ಕೋಟಿ ರೂ. ನೀಡುವುದಾಗಿ ಭಾರೀ ಪ್ರಚಾರವಾಯಿತು. ಆದರೆ ಕೆಎಸ್‌ಆರ್‌ಟಿಸಿ ಯಾವುದೇ ದೇಣಿಗೆ ಸ್ವೀಕರಿಸುವುದಿಲ್ಲ ಎಂದು ಗೊತ್ತಿದ್ದರೂ ತಾನು ದೇಣಿಗೆ ನೀಡುವುದಾಗಿ ಭರ್ಜರಿ ಪ್ರಚಾರ ಮಾಡಲಾರಂಭಿಸಿತು.

 

 

ಇದರ ಒಂದು ದಿನದ ಡ್ರಾಮಾ ಹೇಗಿತ್ತು ಎಂದು ಇಲ್ಲಿ ಸ್ಪಷ್ಟವಾಗಿ ಗಮನಿಸಬಹುದು.

*********

ಕೆಪಿಸಿಸಿ-ಬೆಂಗಳೂರು
ಮೇ 3, 2020ರಂದು ಲಾಕ್‍ಡೌನ್ 2.0ರ ಅಂತ್ಯವಾಯಿತು.

ಬೆಳಿಗ್ಗೆ 7.00 ಗಂಟೆಗೆ
ಕೆಎಸ್‍ಆರ್‌ಟಿಸಿಗೆ ದೇಣಿಗೆ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷರು ಹೇಳಿಕೆ ನೀಡಿದರು. ದೇಣಿಗೆ ಎಂದರೆ ಶುಲ್ಕವಲ್ಲ(ಸರಿಯಾಗಿ ಅರ್ಥೈಸಿ)

ಬೆಳಿಗ್ಗೆ 9.00 ಗಂಟೆಗೆ ದೇಣಿಗೆ ನೀಡುವ ಬಗ್ಗೆ ಚಾನೆಲ್‌ಗಳಲ್ಲಿ ಬ್ರೇಕಿಂಗ್ ನ್ಯೂಸ್ ಪ್ರಸಾರವಾಯಿತು.

ಬೆಳಿಗ್ಗೆ 10.00 ಗಂಟೆಗೆ ಕೆಎಸ್‍ಆರ್‌ಟಿಸಿಯ ಎಂಡಿ ಸ್ಥಳಕ್ಕೆ ಆಗಮಿಸುವಂತೆ ವಿನಂತಿಸಲಾಯಿತು.

ಬೆಳಿಗ್ಗೆ 10.30 ಗಂಟೆಗೆ ಮೆಜೆಸ್ಟಿಕ್‍ಗೆ ಮಾಜಿ ಸಚಿವರು ಭೇಟಿ ನೀಡುತ್ತಾರೆ.

ಬೆಳಿಗ್ಗೆ 11.00 ಗಂಟೆಗೆ ಮೆಜೆಸ್ಟಿಕ್‍ನಲ್ಲಿ ಸುತ್ತಾಡುತ್ತಾರೆ.

ಬೆಳಿಗ್ಗೆ 11.30 ಗಂಟೆಗೆ ಸ್ಥಳೀಯ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತದೆ.

ಮಧ್ಯಾಹ್ನ 12.00 ಗಂಟೆಗೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತದೆ.

ಮಧ್ಯಾಹ್ನ 1.00 ಗಂಟೆಗೆ ದೇಣಿಗೆ ನೀಡಿದ ಬಗ್ಗೆ ಪೈಯ್ಡ್ ಮಾಧ್ಯಮಗಳಲ್ಲಿ ಭಾರೀ ಚರ್ಚೆ ಶುರುವಾಯಿತು.

ಮಧ್ಯಾಹ್ನ 2.00 ಗಂಟೆಗೆ ಮೆಜೆಸ್ಟಿಕ್‍ನಿಂದ ಎಲ್ಲಾ ಜನರು ಚದುರಿ ಹೋಗುತ್ತಾರೆ.

ಮಧ್ಯಾಹ್ನ 3.00 ರಿಂದ 6.00 ಗಂಟೆ ಪ್ರೈಮ್ ಟೈಮ್ ನ್ಯೂಸ್‍ನಲ್ಲಿ ಇದರ ಬಗ್ಗೆ ಭಾರೀ ಚರ್ಚೆ ನಡೆಯಿತು.

ಸಂಜೆ 6.00 ಗಂಟೆಗೆ ಕೆಎಸ್‍ಆರ್‍ಟಿಸಿಯ ಎಂಡಿ ಚೆಕ್ ಸ್ವೀಕರಿಸಲು ನಿರಾಕರಿಸುತ್ತಾರೆ.

ಕಾರಣ: ಕೆಎಸ್‍ಆರ್ಟಿಸಿಯ ಯಾವ ಸರ್ಕಾರಿ ಘಟಕವು ದೇಣಿಗೆ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಈ ಹಣ ಪಿಎಂ ಕೇರ‌ ಫಂಡ್‍ಗೆ ಪಾವತಿಸಲು ಶಿಫಾರಸು ಮಾಡುತ್ತಾರೆ.

ಪ್ರಕರಣಕ್ಕೆ ಹೊಸ ಟ್ವಿಸ್ಟ್: ಕೆಪಿಸಿಸಿ ಆ ಹಣವನ್ನು ಪಿಎಂ ಕೇರ್ ಫಂಡ್‍ಗೆ ನೀಡಲು ನಿರಾಕರಿಸುತ್ತದೆ. ಯಾಕೆಂದರೆ ಕೆಎಸ್‍ಆರ್‌ಟಿಸಿ ದೇಣಿಗೆ ಸ್ವೀಕರಿಸುವುದಿಲ್ಲ ಎಂದು ಅವರಿಗೆ ಮೊದಲೇ ಗೊತ್ತಿತ್ತು.

ಕೆಲವು ಆಸಕ್ತಿದಾಯಕ ಸಂಗತಿಗಳು: ಪ್ರಸ್ತುತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು `ಇ.ಡಿ’ ಕಣ್ಗಾವಲಿನಲ್ಲಿದ್ದಾರೆ. ಹೀಗಾಗಿ ಅವರ ಯಾವುದೇ ಹಣಕಾಸು ಚಟುವಟಿಕೆಯನ್ನು ಇ.ಡಿ ಗಮನಿಸುತ್ತದೆ.
ಹೀಗಾಗಿ ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಗುಂಡೂರಾವ್ ಅವರೇ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವ ವಿಚಾರವೂ ಬಹಿರಂಗವಾಯಿತು. ಪಕ್ಷದಲ್ಲಿ ಡಿಕೆಶಿಯವರ ಯಾವ ಫರ್ಮಾನು ಕೂಡಾ ನಡೆಯುವುದಿಲ್ಲ ಎನ್ನುವ ಇನ್ನೊಂದು ಸತ್ಯವೂ ಬಹಿರಂಗವಾಯಿತು.

ಕೆಪಿಸಿಸಿ ಒಂದು ಎನ್‍ಜಿಓ ಆಗಿರುವುದರಿಂದ ಹಣದ ಮೂಲವನ್ನು ಅದು ತೋರಿಸಬೇಕಾಗುತ್ತದೆ. ಹಾಗಾಗಿ ಪಿಎಂ ಕೇರ್ ಫಂಡ್‍ಗೆ ಒಂದೇ ಒಂದು ಪೈಸೆಯನ್ನೂ ದೇಣಿಗೆ ನೀಡುವುದಿಲ್ಲ.

ಪುಕ್ಕಟೆ ಪ್ರಚಾರ ತಂತ್ರ ಭರ್ಜರಿ ಯಶಸ್ಸು ಆಯಿತೆಂದು ಕಂಡರೂ ಕೊನೆಗೆ ಮಾತ್ರ ಸತ್ಯ ಗೊತ್ತಾಗಿ ವಿಫಲವಾಯಿತು.

ಗುಲಾಮರು ಮಾತ್ರ ಇದರ ಬಗ್ಗೆ ಇನ್ನೂ ಕೂಡಾ ಸೋಷಿಯಲ್ ಮೀಡಿಯಾ ಮತ್ತು ನ್ಯೂಸ್ ಮೀಡಿಯಾಗಳಲ್ಲಿ ಚರ್ಚೆ ನಡೆಸುತ್ತಲೇ ಇದ್ದಾರೆ.

***********
ಕೆಎಸ್‌ಆರ್‌‌ಟಿಸಿ ದೇಣಿಗೆ ಸ್ವೀಕರಿಸುವುದಿಲ್ಲ ಎಂದು ಗೊತ್ತಿದ್ದರೂ ಕೆಎಸ್‌ಆರ್‌‌ಟಿಸಿಗೆ ದೇಣಿಗೆ ನೀಡುವುದಾಗಿ ಹೇಳಿಕೊಂಡು ಭರ್ಜರಿ ಪ್ರಚಾರ ಪಡೆಯುವ ಒಂದು ತಂತ್ರ ವಿಫಲವಾಗಿರುವುದು ಕೊನೆಗೂ ಬಹಿರಂಗವಾಗುತ್ತದೆ. ಇಂಥಾ ಚಿಕ್ಕ ವಿಚಾರ ಗೊತ್ತಿಲ್ಲದ ಕೆಲವು ಮಾಧ್ಯಮಗಳು ಬಕೆಟ್ ಹಿಡಿಯುವ ಕೆಲಸವನ್ನು ಭರ್ಜರಿಯಾಗಿ ಮಾಡಿತು.

ಕೆಎಸ್‌ಆರ್‌‌ಟಿಸಿಗೆ ದೇಣಿಗೆ ಸ್ವೀಕರಿಸದಿದ್ದಾಗ ಈ ಹಣವನ್ನು ಬಡ ಕಾರ್ಮಿಕರಿಗಾದರೂ ನೀಡಬಹುದಿತ್ತು. ಅಥವಾ ಪಿಎಂ ಕೇರ್ ಫಂಡ್ ಅಥವಾ ಸಿಎಂ ಕೇರ್ ಫಂಡ್‌ಗಾದರೂ ನೀಡಬಹುದಿತ್ತು. ಆದರೆ ಈ ಎರಡೂ ಕೆಲಸವನ್ನು ಅವರು‌ ಮಾಡಲಿಲ್ಲ.

ಕೆಲವು ವಿಷಯ ಗೊತ್ತಿಲ್ಲದ ಗುಲಾಮರು ಕಾಂಗ್ರೆಸ್ ಅನ್ನು ಹೊಗಳಿ ಅಟ್ಟಕ್ಕೇರಿಸಿದರು. ನಯಾ ಪೈಸೆ ದುಡ್ಡು ನೀಡದೆ ಭರ್ಜರಿ ಪ್ರಚಾರ ಹೇಗೆ ಪಡೆಯುವುದು ಹೇಗೆ ಎಂದು ಇವರನ್ನು ನೋಡಿ ಕಲಿಯಬೇಕು.

-ಗಿರೀಶ್

Tags

Related Articles

FOR DAILY ALERTS
Close