ಪ್ರಚಲಿತ

ಕೇಂದ್ರ ಸರಕಾರದ ಮೇಲೆ ಬಹುಕೋಟಿ ರಾಫೆಲ್ ಹಗರಣದ ಆರೋಪ! ಇಂಗು ತಿಂದ ಮಂಗನಂತಾದ ಕಾಂಗ್ರೆಸ್!!

ಕಾಂಗ್ರೆಸ್ ಈಗ ಬಿಜೆಪಿ ವಿರುದ್ಧ ಮತ್ತೊಂದು ತಗಾದೆಯನ್ನು ಎತ್ತಿದ್ದಾರೆ. ಬಹುಕೋಟಿ ರಾಫೆಲ್ ಯುದ್ಧವಿಮಾನ ಖರೀದಿ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಕೇಂದ್ರ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಿದ್ದ ಕಾಂಗ್ರೆಸ್‍ಗೆ ಮುಖಭಂಗ ಉಂಟುಮಾಡುವ ಸುದ್ದಿಯೊಂದು ಬಹಿರಂಗವಾಗಿದೆ. ಯುಪಿಎ ಅವಧಿಯಲ್ಲಿನ ಒಪ್ಪಂದ ರದ್ದುಗೊಳಿಸಿ ದಸಾಲ್ಟ್ ಕಂಪನಿಯೊಂದಿಗೆ ಎನ್‍ಡಿಎ ಸರ್ಕಾರ ಮಾಡಿಕೊಂಡ ಹೊಸ ಒಪ್ಪಂದದಿಂದಾಗಿ ಸರ್ಕಾರದ ಬೊಕ್ಕಸಕ್ಕೆ 12,604 ಕೋಟಿ ರೂ. ಉಳಿತಾಯವಾಗಿದೆಯೆಂದು ಉನ್ನತ ಮೂಲಗಳು ಖಚಿತಪಡಿಸಿವೆ.

ಲಾಭ ಹೇಗೆ?

ಹಾರಾಟಕ್ಕೆ ಸನ್ನದ್ಧವಾದ 18 ಯುದ್ಧ ವಿಮಾನಗಳ ಪೂರೈಕೆಗೆ ಯುಪಿಎ ಸರ್ಕಾರ ಒಡಂಬಡಿಕೆ ಮಾಡಿಕೊಂಡಿತ್ತು. ಆದರೆ ಈ ಯುದ್ಧ ವಿಮಾನಗಳ ಸಂಖ್ಯೆಯನ್ನು 36ಕ್ಕೆ ಏರಿಸುವ ಹೊಸ ಒಪ್ಪಂದದಿಂದಾಗಿ ಸುಮಾರು 2673 ಕೋಟಿ ರೂ. ಉಳಿದಂತಾಗಿದೆ. ಜತೆಗೆ ಶಸ್ತ್ರಾಸ್ತ್ರ, ಯುದ್ಧವಿಮಾನ ನಿರ್ವಹಣೆ ಮತ್ತು ತರಬೇತಿಗೆ ಸಂಬಂಧಿಸಿದಂತೆ ನೂತನ ಒಪ್ಪಂದದಲ್ಲಿ ಯಾವುದೇ ಹೆಚ್ಚುವರಿ ಶುಲ್ಕ ಅನ್ವಯವಾಗದಿರುವ ಕಾರಣ 9,931 ಕೋಟಿ ರೂ.ಗಳಷ್ಟು ಹೊರೆ ಇಳಿದಿದೆ.

ಏನಿದು ಒಪ್ಪಂದ?

ಮೀಡಿಯಂ ಮಲ್ಟಿ ರೋಲ್ ಕಾಂಬ್ಯಾಟ್ ಏರ್‍ಕ್ರಾಫ್ಟ್ (ಎಂಆರ್‍ಸಿಎ) ಯೋಜನೆ ಅನ್ವಯ ಯುಪಿಎ ಸರ್ಕಾರ 2007ರಲ್ಲಿ ಅತ್ಯಾಧುನಿಕ ಯುದ್ಧವಿಮಾನ ಪೂರೈಕೆಗಾಗಿ ಆರು ಕಂಪನಿಗಳಿಂದ ಪ್ರಸ್ತಾವನೆ ಸಲ್ಲಿಸಲು ಕೇಳಿತ್ತು. ಆ ಪೈಕಿ ವಿದೇಶಿ ತಯಾರಕ ಕಂಪನಿಗಳಾದ ಯುರೋಫೈಟರ್ ಮತ್ತು ದಸಾಲ್ಟ್ ರಫೇಲ್ ನಡುವೆ ತೀವ್ರ ಪೈಪೆÇೀಟಿಯಿತ್ತು. ಜನವರಿ 2012ರಲ್ಲಿ ದಸಾಲ್ಟ್ ಕಂಪನಿಯ ರಫೇಲ್ ಯುದ್ಧವಿಮಾನ ಖರೀದಿಗೆ ಯುಪಿಎ ಹಸಿರು ನಿಶಾನೆ ತೋರಿ ಒಪ್ಪಂದ ಮಾಡಿಕೊಂಡಿತ್ತು.

2015ರಲ್ಲೇ ಪ್ರಸ್ತಾಪ

2015ರಲ್ಲಿ ಫ್ರಾನ್ಸ್ ಪ್ರವಾಸ ಕೈಗೊಂಡಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಹಳೆಯ ಒಪ್ಪಂದದ ಸಾಧಕ-ಬಾಧಕಗಳ ಅಧ್ಯಯನ ನಡೆಸಿದ್ದರೆನ್ನಲಾಗಿತ್ತು. ದೇಸಿ ಮತ್ತು ವಿದೇಶಿ ತಯಾರಿಕೆಗಳಿಂದಾಗುವ ಲಾಭ-ನಷ್ಟಗಳ ವಿಸ್ತøತ ವರದಿಯನ್ನು ತಜ್ಞರಿಂದ ಪಡೆದ ನಂತರವೇ ಅಂದಿನ ಅಧ್ಯಕ್ಷ ಫ್ರಾಂಕೊಯಿಸ್ ಹಾಲೆಂಡೆ ಜತೆ 36 ರಫೇಲ್ ಯುದ್ಧ ವಿಮಾನಗಳ ಖರೀದಿಯ ನೂತನ ಒಪ್ಪಂದ ಪ್ರಸ್ತಾಪಿಸಿದ್ದರು.

ಹೊಸ ಒಪ್ಪಂದ ಯಾಕೆ?

ಯುಪಿಎ ಆಡಳಿತ ಮುಗಿದ ಮೇಲೆ ಎನ್‍ಡಿಎ ಸರ್ಕಾರದ ಆಗ್ರಹದಂತೆ ಯುದ್ಧವಿಮಾನ ತಯಾರಿಕೆ ತಂತ್ರಜ್ಞಾನ ಹಂಚಿಕೆಗೆ ದಸಾಲ್ಟ್ ನಿರಾಕರಿಸಿತ್ತು. ಜತೆಗೆ ಯುಪಿಎ ಒಪ್ಪಂದದಲ್ಲಿದ್ದಂತೆ ಭಾರತದಲ್ಲಿ ತಯಾರಾಗುವ 108 ಯುದ್ಧವಿಮಾನಗಳ ಗುಣಮಟ್ಟದ ಜವಾಬ್ದಾರಿ ಹೊತ್ತುಕೊಳ್ಳಲು ಕೂಡ ಆ ಸಂಸ್ಥೆ ಸಿದ್ಧವಿರಲಿಲ್ಲ. ಇವೆಲ್ಲವುಗಳಿಂದ ಬೀಳುವ ಹೆಚ್ಚಿನ ಹೊರೆ ಅರಿತ ಎನ್?ಡಿಎ, ಸುಧಾರಿತ ನಿಯಮಗಳ ಹೊಸ ಒಪ್ಪಂದಕ್ಕೆ ಮುಂದಾಯಿತು.

108 ರಫೇಲ್ ದೇಶಿ ತಯಾರಿಕೆ ಹೊರೆ

ಫ್ರಾನ್ಸ್?ನಲ್ಲಿರುವ ದಸಾಲ್ಟ್ ಕಂಪನಿ ಘಟಕದಲ್ಲಿ ರಫೇಲ್ ಯುದ್ಧವಿಮಾನ ತಯಾರಿಕೆಗೆ ಹೋಲಿಸಿದರೆ ಭಾರತ ಎಚ್‍ಎಎಲ್‍ನಲ್ಲಿ ರಫೇಲ್ ತಯಾರಿಸಿದರೆ 2.7 ಪಟ್ಟು ಹೆಚ್ಚು ಕೈಗಾರಿಕೆ ಮಾನವ ಸಂಪನ್ಮೂಲ ವ್ಯಯವಾಗುವ ಸೂಕ್ಷ್ಮವನ್ನು ಎನ್?ಡಿಎ ಪತ್ತೆಹಚ್ಚಿತು. ಅಷ್ಟಲ್ಲದೇ ಯುಪಿಎ ಒಪ್ಪಂದದಂತೆ 108 ವಿಮಾನಗಳನ್ನು ಎಚ್‍ಎಎಲ್ ಸಹಯೋಗದಲ್ಲಿ ದಸಾಲ್ಟ್ ಕಂಪನಿ ತಯಾರಿಸಿದರೆ ಪ್ರತಿ ಯುದ್ಧವಿಮಾನದ ಮೇಲೆ 150 ಕೋಟಿ ರೂ. ಹೆಚ್ಚು ಹೊರೆಬೀಳುತ್ತಿತ್ತು.

* ಯಾವುದೇ ಸಂದರ್ಭದಲ್ಲಾದರೂ ಯುದ್ಧ ಎದುರಾಗುವ ಸಂಭಾವ್ಯತೆ ಷರತ್ತಿನ ಮೇಲೆ ದಸಾಲ್ಟ್

* ಪೂರೈಕೆ ಮಾಡುವ ಯುದ್ಧವಿಮಾನಗಳ ಪೈಕಿ ಶೇ.75ರಷ್ಟನ್ನು ಸದಾ ಚಾಲನೆಗೆ ಸಿದ್ಧವಿರಿಸಿರಬೇಕು.

*ಸೆ.2019ರೊಳಗೆ ಯುದ್ಧವಿಮಾನಗಳ ಮೊದಲ ಬ್ಯಾಚ್ ಭಾರತೀಯ ಸೇನೆ ಸೇರಲಿದೆ.

ಕಾಂಗ್ರೆಸ್ ಆರೋಪವೇನು?

ಎನ್‍ಡಿಎ ಸರ್ಕಾರದ ಒಪ್ಪಂದದಿಂದಾಗಿ ಖರೀದಿ ಮೊತ್ತ 1570 ಕೋಟಿ ರೂ.ಗೆ ಏರಿಕೆಯಾಗಿದೆ. ಹೀಗಾಗಿ ಇದು 58 ಸಾವಿರ ಕೋಟಿ ಮೊತ್ತದ ಬೃಹತ್ ಹಗರಣ ಎಂಬುದು ಕಾಂಗ್ರೆಸ್ ಆರೋಪವಾಗಿದೆ. ಯುಪಿಎ ಒಪ್ಪಂದದಂತೆ 126 ಜೆಟ್‍ಗಳು ಸೇನೆ ಸೇರುತ್ತಿದ್ದವು. 21,200 ಕೋಟಿ ರೂ. ಹೆಚ್ಚು ಪಾವತಿಯಿಂದ ಎನ್ಡಿಎ ಒಪ್ಪಂದಕ್ಕಿಂತ 3.5ರಷ್ಟು ಹೆಚ್ಚು ಪ್ರಮಾಣದ ಜೆಟ್‍ಗಳು ಸೇನೆಗೆ ಬಲ ತಂದುಕೊಡುತ್ತಿದ್ದವು ಎಂದು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಸಮರ್ಥಿಸಿಕೊಂಡಿದ್ದಾರೆ. 108 ಜೆಟ್  ಗಳ ದೇಸಿ ಉತ್ಪಾದನೆಗೆ ಬ್ರೇಕ್ ಹಾಕುವ ಮೂಲಕ ಎನ್‍ಡಿಎ ಜಿಡಿಪಿ ದುರ್ಬಲಗೊಳಿಸಿದೆ ಎಂದು ಹರಿಹಾಯ್ದಿದ್ದರು.
ಹೊಸ ಒಪ್ಪಂದ ದಂತೆ ದಸಾಲ್ಟ್ ಕಂಪನಿ ಸಹತಯಾರಿಕಾ ಸಂಸ್ಥೆ ಎಚ್‍ಎಎಲ್ ಜತೆಗೆ ತಂತ್ರಜ್ಞಾನ ಹಂಚಿಕೆ ಮಾಡಿಕೊಳ್ಳುತ್ತಿಲ್ಲ. ಆದರೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‍ಡಿಒ)ಗೆ ಅತ್ಯಾಧುನಿಕ ಯುದ್ಧವಿಮಾನ ತಯಾರಿಕೆ ತಂತ್ರಜ್ಞಾನ ನೀಡುತ್ತಿದೆ. ಇದರಿಂದ ಮೇಕ್ ಇನ್ ಇಂಡಿಯಾಗೆ ಲಾಭವಾಗಲಿದೆ. ಎಂದು ಬಿ.ಎಸ್.ಧನೋವಾ (ಏರ್ ಚೀಫ್ ಮಾರ್ಷಲ್) ಹೇಳಿಕೆಯನ್ನು ನೀಡಿದ್ದಾರೆ.

 

 

ಸಾಲು ಹಗರಣದಲ್ಲಿ ಸಿಲುಕಿ ಪಾಪ ಕಾಂಗ್ರೆಸ್ ಈಗ ಸುಖಾಸುಮ್ಮನೆ ಬಿಜೆಪಿಯನ್ನು ದೊಡ್ಡ ಹಗರಣದಲ್ಲಿ ಸಿಲುಕುವಂತೆ ಮಾಡುವ ಮಾಸ್ಟರ್ ಪ್ಲ್ಯಾನ್ ಅನ್ನು ಮಾಡಿತ್ತು.. ಆದರೆ ಸತ್ಯಕ್ಕೆ ಯಾವಾಗಲೂ ಜಯವಿದೆ ಅನ್ನುವ ಮಾತನ್ನು ಇವರು ಮರೆತು ಬಿಟ್ಟಿದ್ದರೋ ಏನೋ?…ಕಾಂಗ್ರೆಸ್ ತರಹ ಇದ್ದ ಬಿದ್ದ ಹಣವನ್ನೆಲ್ಲಾ ನುಂಗುವ ಖಯಾಲಿ ಬಿಜೆಪಿಗಿಲ್ಲ… ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಾಪ ಮತ ಬ್ಯಾಂಕನ್ನು ತನ್ನತ್ತ ಸೆಳೆದುಕೊಳ್ಳುವತ್ತ ಪ್ರಯತ್ನಿಸಿದ್ದರು…. ಆದರೆ ಈಗ ಬಿಜೆಪಿ ರಾಫೆಟ್ ಜೆಟ್‍ನಲ್ಲಿ ಯಾವುದೇ ಹಗರಣವಾಗಿಲ್ಲ ಎಂಬುವುದನ್ನು ಮಾಹಿತಿ ಸಮೇತ ಸಮೇತ ಸ್ಪಷ್ಟೀಕರಣ ನೀಡಿದ್ದು, ಈಗ ಕಾಂಗ್ರೆಸ್‍ಗೆ ತಲೆ ಮೇಲೆ ಚಪ್ಪಡಿ ಕಲ್ಲು ಬಿದ್ದಂತಾಗಿದೆ….ಬಿಜೆಪಿಯ ಏಳಿಗೆಯನ್ನು ಸಹಿಸಲಾರದೆ ಸುಖಾಸುಮ್ಮನೆ ಯಾವುದಾದರೂ ಹಗರಣದಲ್ಲಿ ಸಿಲುಕಿ ಹಾಕುವ ಪ್ಲ್ಯಾನ್ ಈಗ ಉಲ್ಟಾ ಹೊಡೆದು ಕಾಂಗ್ರೆಸ್‍ಗೆ ಈಗ ದೊಡ್ಡ ಮುಖ ಭಂಗವಾಗಿದೆ.

source:
http://vijayavani.net/%E0%B2%95%E0%B3%8A%E0%B3%95%E0%B2%9F%E0%B2%BF-%E0%B2%89%E0%B2%B3%E0%B2%BF%E0%B2%B8%E0%B2%BF%E0%B2%A6-%E0%B2%B0%E0%B2%BE%E0%B2%AB%E0%B3%86%E0%B2%B2%E0%B3%8D-%E0%B2%92%E0%B2%AA%E0%B3%8D%E0%B2%AA/
-ಪವಿತ್ರ

Tags

Related Articles

Close