ನಮಗೆ ಭಾರತದ 2 ರಾಜ್ಯಗಳ ಕುರಿತಾಗಿ ಬಹಳಷ್ಟು ಅರಿವಿದೆ ಎಂದು ಅಂದುಕೊಳ್ಳುತ್ತೇನೆ. ರಾಜಕೀಯ ಪ್ರೇರಿತ ಹತ್ಯೆಗಳು ಅಲ್ಲಿ ಸರ್ವೇ ಸಾಮಾನ್ಯ. ಹಿಂದೂಗಳು ಬದುಕಲು ಯೋಗ್ಯರೇ ಅಲ್ಲ ಅನ್ನುವ ಮಟ್ಟಿಗೆ ಭಯವನ್ನು ಹುಟ್ಟಿಸುವ ಪ್ರಯತ್ನದಲ್ಲಿ ಸದಾ ತಲ್ಲೀನವಾಗಿದೆ ಕೇರಳ ಹಾಗೂ ಬಂಗಾಳ..ಪ್ರತೀದಿನ ನರಹತ್ಯೆಯ ರಕ್ತದ ಕಥನಗಳನ್ನು ಒದುತ್ತಾ ಇದ್ದೇವೆ. ಇದೇ ಸಾಲಿಗೆ ಭಾರತದ ಇನ್ನೊಂದು ರಾಜ್ಯ ಸೇರ್ಪಡೆಯಾಗಲಿದೆಯೇ ಅನ್ನುವ ಅನುಮಾನ ಕೂಡ ಕಾಡುತ್ತಿದೆ. ನಮ್ಮ ಕರುನಾಡು!!! ಆಶ್ಚರ್ಯವಾದರೂ ಅಚ್ಚರಿಯಿಲ್ಲ. ಕೆಲವು ಸನ್ನಿವೇಶಗಳನ್ನು, ಘಟನೆಗಳನ್ನು ಗಮನಿಸಿ. ನಿಮ್ಮ ಹುಬ್ಬೇರಿಸುವಂತೆ ಮಾಡಬಹುದಾದ ಘಟನೆಗಳು ನಮ್ಮದೇ ನಾಡಲ್ಲಿ ನಡೆದಿವೆ. ದುರ್ದೈವ, ಯಾವ ಸುದ್ದಿವಾಹಿನಿಗಳೂ ಇಂತಹದ್ದನ್ನು ವರದಿ ಮಾಡುವುದಿಲ್ಲ. ಕಾರಣ , ಕಮ್ಮಿನಿಷ್ಠರ ಎಂಜಲಿನಿಂದ ಬದುಕುತ್ತಿರುವ ಮಾಧ್ಯಮಾಧಮರಲ್ಲವೇ ಅವರು??!!
2016ರ ಮಾರ್ಚ್ 17ರಂದು ರಾಷ್ಟ್ರೀಯ ತನಿಖಾ ದಳದ(ಎನ್‍ಐಎ)ಯ ಅಧಿಕಾರಿಗಳು ದಾಳಿ ಮಾಡಿದರು. ಆ ಸಂದರ್ಭದಲ್ಲಿ ಕೆ.ವಿ ಅಬ್ದುಲ್ ಜಲೀಲ್ ಎನ್ನುವ
ವ್ಯಕ್ತಿಯನ್ನು ಬಂಧಿಸಲಾಯಿತು. ಇದಕ್ಕೇ ಕಾರಣವೇನು ಗೊತ್ತೇ? 2013ರ ಏಪ್ರಿಲ್‍ನಲ್ಲಿ ಜಲೀಲ್, 21ಜನರನ್ನು ಒಟ್ಟುಗೂಡಿಸಿ ಬಾಂಬ್‍ಗಳನ್ನು ತಯಾರಿ
ಮಾಡುವುದು ಹೇಗೆ ಮತ್ತು ಹೆಚ್ಚು ಜನಸಂಖ್ಯೆ ಇರುವ ಜಾಗದಲ್ಲಿ ಯಾವುದೇ ರೀತಿಯ ಮಾಹಿತಿಯನ್ನು ನೀಡದೇ ಮತ್ತು ಯಾರಿಗೂ ಯಾವುದೇ ರೀತಿಯ ಅನುಮಾನ ಬಾರದ ರೀತಿಯಲ್ಲಿ ಸ್ಫೋಟಿಸುವುದು ಹೇಗೆ ಎನ್ನುವ ಮಾಹಿತಿಯ ನೀಡುತ್ತಿದ್ದ. ಇದರ ಜೊತೆಗೆ ನಾಡಪಿಸ್ತೂಲಿನಿಂದ ಹಿಡಿದು ಎ.ಕೆ47ನಂತಹ ಬಂದೂಕಗಳವವರೆಗೂ ಎಲ್ಲಾ ರೀತಿಯ ವಿಶೇಷ ತರಬೇತಿಯನ್ನು ನೀಡುತ್ತಿದ್ದ ಕೆ.ವಿ ಅಬ್ದುಲ್ ಜಲೀಲ್.
ಹಾಗಾದರೆ, ಈ 21ಮಂದಿ ಜಲೀಲ್‍ನ ಈ ನಿಷ್ಠಾವಂತ ಶಿಷ್ಯರು ಯಾರು ಗೊತ್ತೆ?? ಅವರು ಬೇರಾರು ಅಲ್ಲ!! ಅವರೆಲ್ಲ ಪಾಪ್ಯುಲರ್ ಫ್ರಂಟ್ ಆಫ್
ಇಂಡಿಯಾ(ಪಿಎಫ್‍ಐ) ಮತ್ತು ಸೋಷಿಯಲ್ ಡೆಮಾಕ್ರಾಟಿಕಕ ಪಾರ್ಟಿ ಆಫ್ ಇಂಡಿಯಾ(ಎಸ್‍ಡಿಪಿಐ)ನ ಸದಸ್ಯರು. ಅದಲ್ಲದೇ ಇವರನ್ನು ನಾರಾತ್ ಟ್ರೇನಿಂಗ್ ಕ್ಯಾಂಪ್ ಕೇಸ್ ಎಂದು ರಾಷ್ಟ್ರೀಯ ತನಿಖಾದಳದ ಕಡತಗಳಲ್ಲಿ ಗುರುತಿಸಲಾಗಿದೆ ಕೂಡ.
ಬಂಟ್ವಾಳದ ಶರತ್ ಮಡಿವಾಳ ಎನ್ನುವ ಮುಗ್ದ ಹಿಂದೂ ಕಾರ್ಯಕರ್ತನ ಹತ್ಯೆಯ ಬಳಿಕ, ರಾಜ್ಯಸರಕಾರ ಈ ಪ್ರಕರಣದ ಹಂತಕರನ್ನು ಹುಡುಕುವ ಕಾರ್ಯಾಚರಣೆ ಸ್ಥಗಿತಗೊಳ್ಳುತ್ತಿರುವಂತೆ, ಇದರ ಬಗ್ಗೆ ಕೇಂದ್ರ ಸರಕಾರ ಆಸಕ್ತಿಯನ್ನು ವಹಿಸಲು ಶುರುಮಾಡಿತು!!!! ಆಗ ಕರ್ನಾಟಕ ಪೊಲೀಸರು ತನಿಖೆಯನ್ನು ಚಟುವಟಿಕೆಯಿಂದ ಮರುಪ್ರಾರಂಭಿಸಬೇಕಾಯಿತು. ಈ ತನಿಖೆಯನ್ನು ಆರಂಭಿಸಿದ ನಂತರ ಪೊಲೀಸರು ಶರತ್ ಮಡಿವಾಳನ ಹತ್ಯೆಗೈದ ಇಬ್ಬರನ್ನು ಬಂಧಿಸಿದರು, ಅವರೇ ಅಬ್ದುಲ್ ಶಾಫಿ ಮತ್ತು ಖಲೀಲುಲ್ಲಾಹ್.
ದಕ್ಷಿಣ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಪಿಎಫ್‍ಐ ವಿಭಾಗದ ಮುಖ್ಯಸ್ಥನಾಗಿದ್ದ ಈ ಖಲೀಲುಲ್ಲಾಹ್. ಪಿಎಫ್‍ಐ ಹೆಸರು ಹಾಳುಮಾಡುವುದಕ್ಕೇ ಈ
ಎಲ್ಲಕೆಲಸವನ್ನು ಶುರುಮಾಡಲಾಗಿತ್ತು. ಶರತ್ ಕೊಲೆಯಲ್ಲಿ ತಮ್ಮ ಸಂಘಟನೆ ಹೆಸರನ್ನು ಅನಗತ್ಯವಾಗಿ ಎಳೆದುತರಲಾಗಿದೆ. ಪಿಎಫ್‍ಐ ಹೆಸರು ಹಾಳುಮಾಡುವುದಕ್ಕೇ ಈ ಎಲ್ಲ ಕೆಲಸ ಮಾಡಲಾಗುತ್ತಿದೆ ಎಂದೆಲ್ಲ ರಂಪಮಾಡಲು ಆರಂಭಿಸಿತು. ಆದರೆ ಬಿಜೆಪಿಯವರ ಅನಗತ್ಯ ಕೂಗಾಟಕ್ಕೆ ಹೆದರಿ ಪೋಲೀಸರು ಹಂತಕರನ್ನು ಹಿಡಿಯುವಲ್ಲಿ ಮುಂದಾಗಿದ್ದರು. ತನಿಖೆ ಮುಂದುವರಿಸಿದ ಪೋಲೀಸರು, ಕೆಲವೇ ದಿನಗಳಲ್ಲಿ ಮತ್ತೆ ರಿಯಾಕ್ ಪರಂಕಿ, ಸಾದಿಖ್ ನೆಲ್ಯಾಡಿ ಮತ್ತು ಖಲೀಮ್ ಅಲಿಯಾಸ್ ಖಲೀಮುಲ್ಲಾಹ್ ಎನ್ನುವ ಮೂವರು ಆರೋಪಿಗಳನ್ನು ಬಂಧಿಸಿದರು. ಈ ಖಲೀಮ್ ಚಾಮರಾಜನಗರದವನೇ ಆಗಿದ್ದು ಪಿಎಫ್‍ಐ ಮುಖಂಡನ ನಿಕಟ ಸಹಾಯಕನಾಗಿದ್ದ. ಒಂದಲ್ಲ ಒಂದು ರೀತಿಯಲ್ಲಿ ಈ ಆರೋಪಿಗಳು ಪಿಎಫ್‍ಐನೊಂದಿಗೆ ನೇರ ಅಥವಾ ಪರೋಕ್ಷವಾದ ಸಂಪರ್ಕವನ್ನು ಹೊಂದಿದ್ದಲ್ಲದೇ ಶರತ್ ಮಡಿವಾಳನ ಹತ್ಯೆಗೆ ಸಂಬಂಧಿಸಿದ ಖದೀಮರು.
ಶರತ್ ಮಡಿವಾಳ ಹತ್ಯೆಯ ಒಂಬತ್ತು ತಿಂಗಳ ಹಿಂದೆ, ಅಂದರೆ 2016ರ ಅಕ್ಟೋಬರ್‍ನಲ್ಲಿ ಬೆಂಗಳೂರಿನ ಶಿವಾಜಿನಗರದ ಪ್ರದೇಶದಲ್ಲಿ ನಟ್ಟನಡುಹಗಲಿನಲ್ಲಿ ರುದ್ರೇಶ್ ಹತ್ಯೆ ಮಾಡಲಾಯಿತು. ಈ ಒಂದು ಘಟನೆ ನಡೆಯಬೇಕೆಂದೆ ಕಾಯುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರು ಆ ಕೂಡಲೇ ಈ ಬಗ್ಗೆ ಹೇಳಿಕೆ ಕೊಡಲು ಪ್ರಾರಂಭಿಸಿಬಿಟ್ಟರು. ರುದ್ರೇಶ್, ಬಡ್ಡಿಯ ಮೇಲೆ ಸಾಲ ಕೊಡುವ ವ್ಯವಹಾರ ನಡೆಸುತ್ತಿದ್ದರು ಎಂದು ಕೆಲವರು ಹೇಳಿಕೆ ನೀಡಿದರೆ, ಇನ್ನೂ ಕೆಲವರು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿದ್ದುದರಿಂದ ಈತನ ಕೊಲೆಯಾಯಿತು ಎಂದು ಹೇಳಿಕೆ ನೀಡಲು ಆರಂಭಿಸಿದ್ದರು. ಶಿವಾಜಿನಗರದಿಂದ ಬಿಜೆಪಿ ಟಿಕೆಟ್ ಪಡೆದು ವಿಧಾನಸಭೆ ಚುನಾವಣೆಗೆ ಗೆಲ್ಲುವ ಯೋಜನೆ ಹಾಕಿದ್ದರು ಹಾಗಾಗಿ ಪಕ್ಷದೊಳಗಿನವರೇ ಈ ಒಂದು ಹತ್ಯೆ ಮಾಡಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದವು.
ಹಾಗಾಗಿ ರುದ್ರೇಶ್ ಕೊಲೆಯ ವಿಚಾರವನ್ನು ರಾಷ್ಟ್ರೀಯ ತನಿಖಾ ದಳ ತನಿಖೆ ಕೈಗೆತ್ತಿಕೊಂಡಿತ್ತು. ಅಷ್ಟೇ ಅಲ್ಲದೇ ರುದ್ರೇಶ್‍ನನ್ನು ಹತ್ಯೆಗೈದ ಐದು ಮಂದಿಯನ್ನು
ಬಂಧಿಸುವಲ್ಲಿ ಯಶಸ್ವಿಯಾದರು. ಆಗ ಸಿಕ್ಕಿಬಿದ್ದವರೇ ಇರ್ಫಾನ್ ಪಾಷಾ, ವಸೀಮ್ ಅಹ್ಮದ್, ಮೊಹಮ್ಮದ್ ಸಾದಿಖ್ ಅಲಿಯಾಸ್ ಮೊಹಮ್ಮದ್ ಮಜರ್, ಮೊಹಮ್ಮದ್ ಮುಜೀಬುಲ್ಲಾ ಮತ್ತು ಆಸಿಮ್ ಶರೀಫ್. ವಿಪರ್ಯಾಸವೆಂದರೆ ಇವರಿಗ್ಯಾರಿಗೂ ರುದ್ರೇಶ್ ಜೊತೆ ದ್ವೇಷವೇ ಇರಲಿಲ್ಲ. ಈ ಮುಸ್ಲಿಂ ಹಂತಕರಿಗೆ ತಮ್ಮ ಮೇಲಿನಿಂದ ಬಂದ ಸೂಚನೆಯ ಮೆರೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಗೆ(ಆರೆಸ್ಸೆಸ್) ಸೇರಿದ ಯುವಕನನ್ನು ಕೊಲೆ ಮಾಡಬೇಕಾಗಿತ್ತು. ಅಷ್ಟೇ ಅಲ್ಲದೇ ಆರೆಸ್ಸೆಸ್ ಸೇರುವ ಹಿಂದೂಗಳಿಗೆ ಭಯವನ್ನು ಹುಟ್ಟಿಸುವ ತಂತ್ರವೇ ಈ ಕೊಲೆಯ ಹಿಂದಿರುವ ರಹಸ್ಯ.
ಈ ಐದು ಜನ ಮುಸ್ಲಿಂ ಯುವಕರು ರುದ್ರೇಶ್‍ನ ಕೊಲೆಯನ್ನು ಶಿವಾಜಿನಗರದ ರಸ್ತೆಯಲ್ಲಿ ಹಾಡಹಗಲೇ ನಡೆಸಿದ್ದರು. ರುದ್ರೇಶ್ ಆರೆಸ್ಸೆಸ್ ಶಾಖೆಯಿಂದ ಹಿಂತಿರುಗಿದ ಸಂದರ್ಭದಲ್ಲಿ ತನ್ನ ಸ್ನೇಹಿತರೊಂದಿಗೆ ಮಾತಾನಾಡುತ್ತಿದ್ದ. ಕೇರಳದಲ್ಲಿ ಅವರಿಗೆ, ಬೈಕ್ ಚಲಾಯಿಸಿಕೊಂಡು ಹೋಗುತ್ತ ರಸ್ತೆಯಲ್ಲಿ ನಿಂತವರ ತಲೆ ಕಡಿಯುವುದು ಹೇಗೆ ಎಂಬುದರ ಬಗ್ಗೆಯೇ ವಿಶೇಷ ತರಬೇತಿ ನೀಡಲಾಗಿತ್ತು. ಹಾಗಾಗಿ ಸ್ನೇಹಿತರೊಬ್ಬರ ಜೊತೆ ಮಾತಾಡುತ್ತ ನಿಂತಿದ್ದ ರುದ್ರೇಶ್‍ನನ್ನು, ಬೈಕ್‍ನಲ್ಲಿ ಬಂದ ಉಗ್ರರು ಹಿಂದಿನಿಂದ ಮಚ್ಚಿನಲ್ಲಿ ಜೋರಾಗಿ ಹೊಡೆದು ಕೊಂದು ಪರಾರಿಯಾದರು. ಎನ್‍ಐಎ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ, ಈ ಐದೂ ಮಂದಿ ಪಿಎಫ್‍ಐ ಮತ್ತು ಅದರ ಅಂಗಸಂಸ್ಥೆಯಾದ ಎಸ್‍ಡಿಪಿಐ ಸಂಘಟನೆಗಳಿಗೆ ಸೇರಿದವರೆಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಕರ್ನಾಟಕದಲ್ಲಿರುವ ಈ ಕೊಲೆಯ ಬಗ್ಗೆ ನೋಡುವುದಾದರೆ, ಪ್ರತಿಯೊಂದು ಆರೆಸ್ಸೆಸ್ ಅಥವಾ ಸಂಘ ಪರಿವಾರದ ಕಾರ್ಯಕರ್ತರ ಹತ್ಯೆಯಲ್ಲೂ ಫಿಎಫ್‍ಐ ಮತ್ತು ಎಸ್‍ಡಿಪಿಐ ಸಂಘಟನೆಯವರೇ ಒಂದಲ್ಲ ಒಂದು ರೀತಿಯಲ್ಲಿ ಕಾರಣರಾಗುತ್ತಿದ್ದಾರೆ. ಕೇರಳದ ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ಸರಕಾರಗಳೇ ತಾವೇ ನೀರೆರೆದು ಪೋಷಿಸಿ ಬೆಳೆಸಿದ ಈ ಪಿಎಫ್‍ಐ ಪುಂಡಾಟವನ್ನು ಸಹಿಸಲಾಗದೆ ಹಲವು ಬಾರಿ ಹೈಕೋರ್ಟ್‍ನಲ್ಲಿ ಅಫಿಡವಿಟ್ ಹಾಕಿದ ಇತಿಹಾಸವಿದೆ. ಇದೇ ಪಿಎಫ್‍ಐ ಕಾರ್ಯಕರ್ತರು ಜಾರ್ಖಂಡ್‍ನಲ್ಲಿ ಝಾಕಿರ್ ನಾಯ್ಕ್ ಮತ್ತು ಅಸಾದುದ್ದೀನ್ ಓವೈಸಿ ಪರವಾಗಿ ಬೀದಿಗಿಳಿದು ಘೋಷಣೆ ಕೂಗಿ ಕೊನೆಗೆ ಪೆÇಲೀಸರಿಂದ ಬೂಟೇಟು ತಿಂದ ಘಟನೆಯೂ ಇಲ್ಲಿ ನಡೆದಿದೆ. 2011ರಲ್ಲಿ ಮೈಸೂರಿನ ಎರಡು ಕಾಲೇಜು ವಿದ್ಯಾರ್ಥಿಗಳ ಹತ್ಯೆ ನಡೆದಾಗ ಕೇಳಿಬಂದದ್ದು ಈ ಸಂಘಟನೆಗಳ ಹೆಸರೇ!!! 2012ರಲ್ಲಿ ಅಸ್ಸಾಂ ಗಲಭೆಯಾದಾಗ, ಬೆಂಗಳೂರಿನಲ್ಲಿದ್ದ ಈಶಾನ್ಯ ರಾಜ್ಯಗಳ ಪ್ರಜೆಗಳಲ್ಲಿ ಏಕಾಏಕಿ ಭಯಭೀತಿ ಹುಟ್ಟಿಸಿ ರೈಲು ಹತ್ತಿ ಓಡುವಂತೆ ಮಾಡಿದ ಕೃತ್ಯದ ಹಿಂದೆ ಇರುವ ಶಕ್ತಿಗಳು ಕೂಡ ಇವರೇ ಎನ್ನುತ್ತಿವೆ ಗುಪ್ತಚರ ವರದಿಗಳು. ಇಷ್ಟಾದರೂ ನಮ್ಮ ರಾಜ್ಯದ ಘನತೆವೆತ್ತ ಮುಖ್ಯಮಂತ್ರಿಗಳು ಪಿಎಫ್‍ಐ, ಕೆಎಫ್‍ಡಿ, ಎಸ್‍ಡಿಪಿಐಗಳಂಥ ಉಗ್ರವಾದಿ ಸಂಘಟನೆಗಳ ಬೆನ್ನಿಗೆ ನಿಂತಿದ್ದಾರೆ ಎಂದರೆ ಉಗ್ರಗಾಮಿಗಳು ಬೆಳೆಯುವಲ್ಲಿ ಸಹಕಾರ ನೀಡುತ್ತಿದ್ದಾರೆ ಎಂದರೆ ತಪ್ಪಾಗಲಾರದು!!!
ಇವೆಲ್ಲವೂ ಹೊರತಾಗಿ, ಪಿಎಫ್‍ಐ ಮತ್ತು ಎಸ್‍ಡಿಪಿಐ ಸಂಘಟನೆಗಳು ಕರ್ನಾಟಕದ ಬಹುತೇಕ ಕಡೆಗಳಲ್ಲಿ ಕಾರ್ಯನಿರ್ವಹಿಸಲು ಯಾವುದೇ ನಿರ್ಬಂಧನೆಯಿಲ್ಲದೇ ನಡೆಸಲು ನಮ್ಮ ಮುಖ್ಯಮಂತ್ರಿಗಳೇ ಬೆಂಬಲ ನೀಡುತ್ತಿದ್ದಾರೆ. ಯಾಕೆಂದರೆ 2015ರಲ್ಲಿ, ಪಿಎಫ್‍ಐ ಮತ್ತು ಕೆಎಫ್‍ಡಿನ 1600 ಕಾರ್ಯಕರ್ತರ ವಿರುದ್ದ ಇದ್ದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವಂತೆ ಮಾಡಿದ್ದಾರೆ. ಬುದ್ದಿಜೀವಿಗಳೆಂದೆನಿಸಿದ ಕಾಂಗ್ರೆಸ್ಸಿಗರು ಕಾನೂನಿನ ವಿರುದ್ದವಾಗಿ ಬೆಂಬಲಿಸುವುದು ಲಜ್ಜೆಗೆಟ್ಟ ಪ್ರಯತ್ನವಾಗಿದ್ದಂತೂ ಸುಳ್ಳಲ್ಲ. ಅಲ್ಲದೇ, ಇದು ಪೋಲೀಸ್ ವ್ಯವಸ್ಥೆ ಮತ್ತು ನ್ಯಾಯಾಂಗವನ್ನು ಅಣಕಿಸಿದ ಹಾಗಲ್ಲವೆ?
ಪಿಎಫ್‍ಐ ಕಾರ್ಯಕರ್ತರು ಇತ್ತೀಚೆಗೆ ಮಂಗಳೂರಿನಲ್ಲಿ ಪೋಲೀಸ್ ಮುಖ್ಯಸ್ಥರಿಗೆ ಮುತ್ತಿಗೆ ಹಾಕಿದ ಘಟನೆ ನಡೆದಿದ್ದು ಎಲ್ಲರಿಗೂ ಗೊತ್ತಿರುವಂತಹ ವಿಷಯ. ಆದರೆ ಖಾಕಿಪಡೆಯ ಮೇಲೆಯೇ ಭಯೋತ್ಪಾದಕರು ಮಂಗಳೂರಿನ ಉರ್ವಾ ಪೋಲೀಸ್ ಠಾಣೆಯ ಎ.ಎಸ್.ಐ. ಐತಪ್ಪ ಎಂಬವರ ಮೇಲೆ ಪಿಎಫ್‍ಐ ಕಾರ್ಯಕರ್ತರಾದ ಶಮೀರ್ ಮತ್ತು ಮೊಹಮ್ಮದ್ ನಿಯಾಜ್ ಎಂಬಿಬ್ಬರು ಬೆಳಗಿನ ನಸುಕಿನ ಜಾವದಲ್ಲಿ ಕಬ್ಬಿಣದ ರಾಡಿನಿಂದ ಹೊಡೆದು ಹಲ್ಲೆ ನಡೆಸಿ, ಎ.ಎಸ್.ಐ.ಐತಪ್ಪನವರು ಕೊಲೆಮಾಡಿ ಪರಾರಿಯಾಗಿದ್ದರು. ಹಾಗಾದರೆ ರಾಜ್ಯದಲ್ಲಿ ಪೋಲೀಸರಿಗೆ ಸರಕಾರದ ರಕ್ಷಣೆ ಇಲ್ಲವೆಂದ ಮೇಲೆ ಇನ್ನು ರಕ್ಷಣೆಯಾರಿಗಿರುತ್ತೇ ನೀವೇ ಹೇಳಿ!!!
ಆದರೆ ನೀವು ನಂಬ್ತೀರೋ ಬಿಡ್ತೀರೋ, ಈ ಸಂಘಟನೆಗಳು ಸ್ಥಾಪನೆಯಾದ ಕೆಲವೇ ವಾರಗಳಲ್ಲಿ ಹಮ್ಮಿಕೊಂಡ ಮೊದಲ ಬೃಹತ್ ಕಾರ್ಯಕ್ರಮವೇ ಸದ್ದಾಂ
ಹುಸೇನ್‍ನನ್ನು ಬೆಂಬಲಿಸಿ, ಭಾರಿ ಮಟ್ಟದ ರ್ಯಾಲಿಯನ್ನು ಆರಂಭಿಸಿತ್ತು!! ಈ ರ್ಯಾಲಿ ನಡೆದಿದ್ದು ಭಾರತದ ಐಟಿ ಕೇಂದ್ರವಾಗಿ ಬಿಂಬಿತವಾದ ಬೆಂಗಳೂರಿನಲ್ಲಿ.
ಅಷ್ಟೇ ಅಲ್ಲದೇ, ಇರಾಕ್ ಅಧ್ಯಕ್ಷ, ಸರ್ವಾಧಿಕಾರಿ ಸದ್ದಾಂ ಹುಸೇನ್‍ನಿಗೆ ಅಮೆರಿಕಾದ ಕೋರ್ಟು ಮರಣದಂಡನೆ ಶಿಕ್ಷೆ ವಿಧಿಸಿ ಮೂರು ವಾರಗಳಾದ ಮೇಲೆ ಪಿಎಫ್‍ಐ ಇರಾಕ್ ಯುದ್ಧಕ್ಕಾಗಲೀ ಅಮೆರಿಕದ ಕೋರ್ಟಿನ ತೀರ್ಪಿಗಾಗಲೀ ಸಂಬಂಧಪಡದ ಭಾರತದಲ್ಲಿ, ಕರ್ನಾಟಕದೊಳಗಿನ ಬೆಂಗಳೂರಿನಲ್ಲಿ ಉಗ್ರಪ್ರತಿಭಟನೆಯ ಕಾರ್ಯಕ್ರಮ ಹಮ್ಮಿಕೊಂಡಿತು. ಆದರೆ ಆಗಿನ ಮುಖ್ಯಮಂತ್ರಿಗಳಾಗಿದ್ದ ಕುಮಾರ ಸ್ವಾಮಿಯವರಿಗೂ ಏನೂ ಮಾತಾನಾಡದೇ ಮುಸ್ಲಿಮರನ್ನು ಓಲೈಸಿರುವುದು ಮಾತ್ರ ನಾಚಿಕೆಗೇಡಿನ ವಿಚಾರ!!
ಸಿಮಿ (ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‍ಮೆಂಟ್ ಆಫ್ ಇಂಡಿಯಾ) ಎಂಬ ಸಂಘಟನೆ ಈ ದೇಶದಲ್ಲಿ ಏನೇನು ಉಗ್ರ ಚಟುವಟಿಕೆಗಳನ್ನು ಮಾಡಿತ್ತು. ಆದರೆ ಇದನ್ನು ಮೊದಲ ಬಾರಿಗೆ ಸೆಪ್ಟೆಂಬರ್ 1ರಂದು 2001ರಲ್ಲಿ ಎನ್‍ಡಿಎ ಸರಕಾರ 3 ವರ್ಷಗಳ ಕಾಲ ನಿಷೇಧವಿರಿಸಿತ್ತು. ಆದರೆ, ಎನ್‍ಡಿಎ ಸರಕಾರ ಪತನವಾಗಿ ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರಕ್ಕೆ ಬಂದಾಗ, ಅದು ಸಿಮಿಯ ಮೇಲಿನ ನಿಷೇಧವನ್ನು ಎರಡು ವರ್ಷಗಳಿಗೆ ವಿಸ್ತರಿಸಿತು. ಆ ವಿಸೃತ್ತ ಅವಧಿಯೂ ಮುಗಿದಾಗ, 2006ರಲ್ಲಿ, ಯುಪಿಎ ಸರಕಾರ ಮತ್ತೆ ಸಿಮಿಯ ನಿಷೇಧವನ್ನು ಮುಂದುವರಿಸಿತು. ಈ ನಿಷೇಧದ ನಂತರ ಸಿಮಿ ಸದಸ್ಯರು ಮತ್ತು ನಾಯಕರು ತಮ್ಮ ಕೆಲಸವನ್ನು ಮರುಸೃಷ್ಟಿಸಲು ಮತ್ತು ಮುಂದುವರಿಸುವ ಅವಕಾಶಕ್ಕೆ ಕಾಯುತ್ತಿದ್ದಾಗ, ಆ ಸಮಯದಲ್ಲಿ ಹುಟ್ಟಿದ್ದೇ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ. ಕೇರಳದ ನ್ಯಾಷನಲ್ ಡೆವಲೆಪ್‍ಮೆಂಟ್ ಫ್ರಂಟ್, ತಮಿಳುನಾಡಿನ ಮನಿದ ನೀತಿ ಪಸರೈ ಮತ್ತು ಕರ್ನಾಟಕದ ಕರ್ನಾಟಕ ಪೋರಂ ಫಾರ್ ಡಿಗ್ನಿಟಿ ಎಂಬ ಈ ಮೂರು ಸಮಾಜಸೇವೆಯ ಮುಖವಾಡ ಹೊತ್ತಿದ್ದ ಉಗ್ರವಾದಿ ಸಂಘಟನೆಗಳು ಸಮಾನೋದ್ದೇಶಕ್ಕಾಗಿ ಒಟ್ಟಾಗಿ ಪಿಎಫ್‍ಐ ಅನ್ನು ಹುಟ್ಟುಹಾಕಿದವು.
ಸಿಮಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದ ಅಬ್ದುಲ್ ರಹಿಮಾನ್ ಈಗ ಪಿಎಫ್‍ಐನ ರಾಷ್ಟ್ರೀಯ ಅಧ್ಯಕ್ಷನಾದ! ಸಿಮಿ, ಕೇರಳ ರಾಜ್ಯ ಕಾರ್ಯದರ್ಶಿಯಾಗಿದ್ದ ಅಬ್ದುಲ್ ಹಮೀದ್ ಮಾಸ್ಟರ್ ಈಗ ಕೇರಳದ ಪಿಎಫ್‍ಐ ಶಾಖೆಯ ಕಾರ್ಯದರ್ಶಿಯಾದ. ವಾಸ್ತವ ಇಷ್ಟೊಂದು ಸ್ಪಷ್ಟವಾಗಿದ್ದರೂ ಕೂಡ ಪಿಎಫ್‍ಐ ಇಂದಿಗೂ ತನಗೂ ಮತ್ತು ಸಿಮಿ ಸಂಘಟನೆಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಹೇಳುತ್ತಾರೆ!!
ತಾನು ಪಾಕಿಸ್ತಾನದ ಜೊತೆ ನಂಟು ಹೊಂದಿಲ್ಲ. ಹೊರದೇಶಗಳಿಂದ ತನಗೆ ಆದಾಯ ಹರಿದುಬರುವುದಿಲ್ಲ ಎಂದೇ ವಾದಿಸುತ್ತಿದೆ. ಪಿಎಫ್‍ಐ ಸಂಘಟನೆ 1993ರಲ್ಲೇ ಪ್ರಾರಂಭವಾಯಿತೆಂಬ ಹೊಸ ವಾದವನ್ನು ಕೂಡ ಇತ್ತೀಚೆಗೆ ಮುಂದಿಡಲಾಗುತ್ತಿದೆ. ಈ ಸಂಘಟನೆ 1993ರಲ್ಲೇ ಪ್ರಾರಂಭವಾದರೆ ಅಲ್ಲಿಂದ ಮುಂದಿನ 13 ವರ್ಷಗಳ ಕಾಲ ಅದು ಮೌನವಾಗಿದ್ದೇಕೆ? ಹಿಂದೆ ಆ ಸಂಘಟನೆಯ ಸುದ್ದಿಗಳೇಕೆ ಯಾವ ಪತ್ರಿಕೆ/ಟಿವಿಗಳಲ್ಲಿ ಕಾಣಿಸಿ ಕೊಂಡಿರಲಿಲ್ಲ? 2007ರ ಜನವರಿಯಿಂದೀಚೆಗಷ್ಟೇ ಅದು ಸಕ್ರಿಯವಾಗಿರುವುದರ ಕಾರಣ ಏನು? ಹೊರದೇಶಗಳಲ್ಲಿರುವ ಮೂಲ ಭೂತವಾದಿಗಳನ್ನು ಸೆಳೆದು ತಮ್ಮ ಅಕೌಂಟಿಗೆ ದೀನಾರುಗಳನ್ನು ತುಂಬಿಸಿಕೊಳ್ಳುವ ಉದ್ದೇಶ ಇಲ್ಲದೇ ಇದ್ದರೆ ಸದ್ದಾಂ ಹುಸೇನ್ ಪರವಾಗಿ ಬೃಹತ್ ಜಾಥಾ ನಡೆಸುವ ಅಗತ್ಯವೇನಿತ್ತು?
ಒಟ್ಟಿನಲ್ಲಿ, ಪಿಎಫ್‍ಐ 2007ರಿಂದ ಅದು ಸಕ್ರಿಯಗೊಂಡದ್ದಂತೂ ನಿಜ. ಅದು ಸಕ್ರಿಯಗೊಂಡ ಕೆಲವೇ ವಾರಗಳಲ್ಲಿ ಕೇರಳದ ಬಿನಾನಿಪುರಂನಲ್ಲಿ ಉಗ್ರರ ತರಬೇತಿ ಶಿಬಿರ ಸದ್ದಿಲ್ಲದೆ ಶುಭಾರಂಭ ಮಾಡಿತು. ಅದರಲ್ಲಿ ಹದಿನೆಂಟು ಮಂದಿ ಬಾಂಬ್ ಸ್ಫೋಟದ ತರಬೇತಿಯನ್ನು ಪಡೆದರು. ಇಷ್ಟೆಲ್ಲ ಆದರೂ ಕೂಡ ಪಿಎಫ್‍ಐ ಕರ್ನಾಟಕದಲ್ಲಿ ತಾನೊಂದು ಉತ್ತಮ ಸಂಘಟನೆ ಎಂದು ಯಾವ ನಾಚಿಕೆ ಇಲ್ಲದೆ ಹೇಳಿಕೊಳ್ಳುತ್ತಿದೆ. ಪಿಎಫ್‍ಐ ಕಾರ್ಯಕರ್ತರು ಬೇಕೆಂದಾಗೆಲ್ಲ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನೆಗೇ ಹೋಗಿ ಕಷ್ಟಸುಖ ಮಾತಾಡಿಕೊಂಡು ಬರುತ್ತಾರೆ! ಅಲ್ಲದೆ ತನ್ನ ಬಳಿ ಬಂದ ಆ ಪುಂಡರನ್ನು ಸ್ವತಃ ಮುಖ್ಯಮಂತ್ರಿಗಳೇ ಬೆಂಬಲಿಸಿ ಚಹ-ಬಿಸ್ಕತ್ತು ಕೊಟ್ಟು, ನಿಮ್ಮ ರಕ್ಷಣೆ ನನ್ನ ಜವಾಬ್ದಾರಿ ಎಂಬ ಅಭಯ ನೀಡುತ್ತಾರೆ ಎಂದರೆ ಕರ್ನಾಟಕದ ಹೆಸರು ಪಾಕಿಸ್ತಾನ ಎಂದು ಬರೆಯುವ ಗೋಜಿನಲ್ಲಿದ್ದರೋ ಹೇಗೆ??
ಇನ್ನು 2010ರಲ್ಲಿ ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ನಡೆದ ವ್ಯಾಪಕ ಮತೀಯ ಗಲಭೆಗಳಿಗೆ ಸಂಬಂಧಿಸಿ ಪೋಲೀಸ್ ಇಲಾಖೆ 1400 ಮಂದಿಯ ಮೇಲೆ
ವಿವಿಧ ಪ್ರಕರಣ ಗಳನ್ನು ದಾಖಲಿಸಿಕೊಂಡಿತ್ತು. ಅದೇ ರೀತಿ ಕೇರಳದಿಂದ ಕರ್ನಾಟಕದೊಳಗೆ ನುಗ್ಗಿ ಪುಂಡಾಟ ಮೆರೆಯುತ್ತಿರುವ ಕೆಎಫ್‍ಡಿ, ಪಿಎಫ್‍ಐ ಸಂಘಟನೆಗಳ 214ರಷ್ಟು ಆರೋಪಿಗಳ ಮೇಲೆ ಹಲವು ಕೇಸುಗಳನ್ನು ದಾಖಲಿಸಿತ್ತು. ಶಿವಮೊಗ್ಗ, ಹಾಸನ, ಮೈಸೂರು, ಕೊಡಗು ಎನ್ನುತ್ತ ಹಲವು ಜಿಲ್ಲೆಗಳಲ್ಲಿ ದಾಖಲಿಸಿದ್ದ ಈ ಎಲ್ಲ ಪ್ರಕರಣಗಳೂ ಗಂಭೀರ ಸ್ವರೂಪವನ್ನು ಪಡೆದುಕೊಂಡಿದ್ದವು. ಅಲ್ಲದೇ, ಇವರನ್ನು ಯಾವ ಕಾರಣಕ್ಕೂ ಹಿಂಪಡೆಯಬಾರದು ಎಂದು ಗೃಹ ಇಲಾಖೆ ಹಾಗೂ ಕಾನೂನು ಇಲಾಖೆ ಸ್ಪಷ್ಟ ಅಭಿಪ್ರಾಯ ನೀಡಿದರೂ ಅವುಗಳ ಅಸಮ್ಮತಿಯನ್ನು ಲೆಕ್ಕಿಸದೆ ಗೃಹ ಸಚಿವ ಕೆ.ಜೆ. ಜಾರ್ಜ್ ಅಧ್ಯಕ್ಷತೆಯಲ್ಲಿ ಇವರನೆಲ್ಲ ಬಿಡುಗಡೆ ಮಾಡಿದರು!!!.
ಶರತ್ ಮಡಿವಾಳ ತೀರಿಕೊಂಡ ಮರುದಿನ ನಡೆಯುತ್ತಿದ್ದ ಟಿವಿ ಚರ್ಚೆಯಲ್ಲಿ ನನ್ನ ಪಕ್ಕದಲ್ಲೇ ಕೂತಿದ್ದ ಓರ್ವ ಪಿಎಫ್‍ಐ ಕಾರ್ಯಕರ್ತ, ಶರತ್ ಕೊಲೆ ಆರೆಸ್ಸೆಸ್‍ನವರೇ ಮಾಡಿದ ಷಡ್ಯಂತ್ರದ ಕೊಲೆ ಎಂದು ಹೇಳಿದಾಗಲು, ಸಂಘ ಪರಿವಾರದ ಮುಖಂಡರಿಗೆ ಶಾಂತಿಯ ಪಾಠ ಮಾಡಿಹೋದರೂ ಎಂದರೆ ಎತ್ತ ಸಾಗುತ್ತಿದೆ ನಮ್ಮ ಸಮಾಜ?? ಇಲ್ಲಿ ಉಗ್ರರಿಗೆಂದೇ ಮಾಡಿದ ಸಮಾಜದಲ್ಲಿ ನಿಷ್ಠಾವಂತರಿಗೆ ಎಲ್ಲಿದೆ ಜಾಗ!!!
ಮೂಲ:
– postcard team