ಪ್ರಚಲಿತ

ಕೇಳ್ರಪ್ಪೋ ಕೇಳಿ!!! ಮಹಾಭಾರತದ ಬಗ್ಗೆ ಅತ್ಯಂತ ಕೀಳಾಗಿ ಮಾತಾಡಿದ್ದ ಕಮಲ್ ಹಾಸನ್ ಹೊಸ ಪಕ್ಷ ಸ್ಥಾಪನೆ ಮಾಡ್ತಾರಂತೆ!!

ಈತನದ್ದು ಮೂರ್ಖತನವೋ, ಅಥವಾ ಅತಿಬುದ್ಧಿವಂತಿಕೆಯೋ ಗೊತ್ತಾಗುತ್ತಿಲ್ಲ. ಈ ಮಾತು ಯಾಕೆ ಹೇಳುತ್ತಿದ್ದೇನೆಂದರೆ ಇತ್ತೀಚೆಗೆ ಖ್ಯಾತ ನಟ ಕಮಲ್ ಹಾಸನ್ ತಾವು ರಾಜಕೀಯ ಪ್ರವೇಶಿಸುತ್ತಿರುವುದನ್ನು ಖಚಿತಪಡಿಸಿದ್ದಾರೆ. ಆರಂಭದಿಂದಲೇ ಎಡಪಂಥೀಯರ ಜೊತೆ ಗುರುತಿಸಿಕೊಂಡಿರುವ ಕಮಲ್ ಹಾಸನ್ ಅವರ ಮುಂದಿನ ನಡೆ ಎಡಕಡೆಗೆ ಇರಲಿದೆ ಎಂಬುವುದನ್ನು ಅಲ್ಲಗಳೆಯುವಂತಿಲ್ಲ. ಮಹಾಭಾರತದ ಬಗ್ಗೆ ಅತ್ಯಂತ ಕೀಳಾಗಿ ಮಾತಾಡಿದ್ದ ಕಮಲ ಹಾಸನ್ ಪಕ್ಷ ಸ್ಥಾಪಿಸುತ್ತಾನೆ ಎಂದರೆ ಈತನ ಹೊಸ ಪಕ್ಷ ಹೇಗಿರಬಹುದೆಂದು ಈಗಲೇ ಅಂದಾಜಿಸಬಹುದು.

ಕಮಲ್ ಹಾಸನ್ ಅವರು ಕಳೆದ ಹಲವಾರು ತಿಂಗಳಿನಿಂದ ರಾಜಕೀಯ ಸೇರಿದಂತೆ ಸಾಮಾಜಿಕ ವಿಚಾರಗಳ ಬಗ್ಗೆ ತಮ್ಮ ವಾದವನ್ನು ಮಂಡಿಸುತ್ತಲೇ ಬಂದಿದ್ದರು. ಇವರು ರಾಜಕೀಯ ಸೇರುತ್ತಾರೆ ಎಂದು ಆರಂಭದಲ್ಲೇ ಸುಳಿವು ನೀಡಿದ್ದರು. ಕಮಲ್ ಹಾಸನ್ ಈಗ ಹೇಳಿಕೆ ನೀಡಿರುವ ಪ್ರಕಾರ ಅವರು ತಮಿಳುನಾಡು ರಾಜಕೀಯಕ್ಕೆ ಪ್ರವೇಶಿಸುವುದು ದೃಢೀಕರಣಗೊಂಡಿದೆ.

ಕಮಲಹಾಸನ್ ನೀಡಿರುವ ಹೇಳಿಕೆ ಹೀಗಿದೆ. `ತಮಿಳುನಾಡು ರಾಜಕೀಯ ಪರಿಸ್ಥಿತಿ ಬದಲಾಗಲಿದೆ. ಆ ಬದಲಾವಣೆಯನ್ನು ನಾನು ತರಲು ಇಚ್ಛಿಸುತ್ತೇನೆ. ಈ
ಬದಲಾವಣೆ ಅದೆಷ್ಟೇ ನಿದಾನವಾದರೂ ಸರಿಯೇ, ಇದರ ಪ್ರಕ್ರಿಯೆಯನ್ನು ಆರಂಭಿಸುತ್ತೇನೆ. ನನಗೆ ಮತ ನೀಡಿ ಐದು ವರ್ಷಗಳ ಕಾಲ ಕಾಯಿರಿ. ನಾನು ಸರಿಯಾಗಿ ಕೆಲಸ ಮಾಡದಿದ್ದರೆ ನನ್ನನ್ನು ಕಿತ್ತೊಗೆಯಿರಿ. ತಮಿಳುನಾಡು ರಾಜಕೀಯದಲ್ಲಿ ಒಂದು ನಾನಿರಬೇಕು ಅಥವಾ ಭ್ರಷ್ಟಾಚಾರವಿರಬೇಕು. ಎರಡೂ ಒಟ್ಟಿಗೆ ಇರಲು ಅಸಾಧ್ಯ. ರಾಜಕೀಯ ಪಕ್ಷ ಎಂದರೆ ಅದೊಂದು ಸಿದ್ಧಾಂತ. ಈಗಿರುವ ಯಾವುದೇ ಪಕ್ಷಗಳು ನನ್ನ ರಾಜಕೀಯ ಸಿದ್ಧಾಂತಕ್ಕೆ ಸರಿದೂಗುವುದಿಲ್ಲ ಎಂದಿದ್ದಾರೆ. ಇದರಿಂದಾಗಿ ಕಮಲ್ ಹೊಸ ಪಕ್ಷ ಸ್ಥಾಪಿಸುವ ಸುಳಿವು ಸಿಕ್ಕಿದೆ. ಕಮಲ್ ಅವರ ಈ ಮಾತುಗಳು ಅವರು ರಾಜಕೀಯಕ್ಕೆ ಬರುವುದು ಬಹುತೇಕ ಖಚಿತಪಡಿಸುವುದಷ್ಟೇ ಅಲ್ಲದೆ ಅವರು ಪ್ರತ್ಯೇಕ ರಾಜಕೀಯ ಪಕ್ಷ ಸ್ಥಾಪಿಸುವ ಲೆಕ್ಕಾಚಾರದ ಸುಳಿವನ್ನು ನೀಡಿದ್ದಾರೆ. ಅಂದಹಾಗೆ ಇತ್ತೀಚಿನ ದಿನಗಳಲ್ಲಿ ತಮಿಳುನಾಡಿನಲ್ಲಿರುವ ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳನ್ನು ಟೀಕಿಸುತ್ತಲೇ ಬಂದಿರುವ ಕಮಲ್, ಎಡಪಂಥೀಯ ಪಕ್ಷದ ನಾಯಕರ ಜತೆ ಗುರುತಿಸಿಕೊಂಡು ಗಮನ ಸೆಳೆದಿದ್ದಾರೆ.

ಇಂದಿನ ಮೋದಿ ಅಲೆ ಮತ್ತು ಸೊರಗುತ್ತಿರುವ ಎಡಚಿಂತನೆಗಳ ಕಾಲದಲ್ಲಿ ಕಮಲ ಹಾಸನ್ ರಾಜಕೀಯದಲ್ಲಿ ನೆಲೆಕಂಡುಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ
ಹುಟ್ಟಿಕೊಂಡಿದೆ. ಅವರು ಹೇಳಿದ ಮಾತುಗಳು ಯಾವುದೋ ಸಿನಿಕ್‍ನಂತೆ ಕೇಳಿಬರುವುದು ಸುಳ್ಳಲ್ಲ.

ಅಷ್ಟಕ್ಕೂ ಕಮಲ ಹಾಸನ್ ಚಿಂತನೆ ಏನು ಗೊತ್ತಾ?

ಒಂದು ಕಾಲದಲ್ಲಿ ಕಮಲ ಹಾಸನ್ ಅವರು ಮಹಾಭಾರತದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದಕ್ಕಾಗಿ ಅವರ ವಿರುದ್ದ ವಲ್ಲಿಯೂರ್ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು. ಕಳೆದ ಮಾರ್ಚ್ 12ರಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಕಮಲ್, `ಒಬ್ಬ ಮಹಿಳೆಯನ್ನು (ದ್ರೌಪದಿ) ಜೂಜಿಗೆ ಪಣವಾಗಿಟ್ಟ ಕತೆಯಿರುವ ಪುಸ್ತಕವನ್ನು ಈ ದೇಶ ಪೂಜನೀಯ ಎಂದು ಭಾವಿಸಿದೆ’ ಎಂಬರ್ಥದ ಹೇಳಿಕೆ ನೀಡಿದ್ದರು. `ಮಹಾಭಾರತದ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಕಮಲ್ ಹಾಸನ್ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ’ ಎಂದು ಆರೋಪಿಸಿ ಹಿಂದೂ ಮಕ್ಕಳ್ ಕಟ್ಚಿ ಸಂಘಟನೆಯು ಚೆನ್ನೈ ಪೆÇಲೀಸರಿಗೆ ದೂರು ನೀಡಿತ್ತು. ಅಲ್ಲದೆ ಬೆಂಗಳೂರಿನಲ್ಲೂ ಕಮಲ್ ವಿರುದ್ಧ ದೂರು ದಾಖಲಾಗಿತ್ತು.

ತಿರುವನಂತಪುರಂನಲ್ಲಿ ಕೇರಳ ಮುಖ್ಯಮಂತ್ರಿ ಪಿನರಾಯ್ ವಿಜಯನ್ ಅವರೊಂದಿಗೆ ಮಾತುಕತೆ ನಡೆಸಿದ್ದ ಕಮಲಹಾಸನ್ , ಎಡಪಂಥೀಯ ನಾಯಕರು ನನ್ನ
ಹೀರೋಗಳು, ನನ್ನ ಬಣ್ಣ ಖಂಡಿತ “ಕೇಸರಿ” ಅಲ್ಲ ಎಂದಿದ್ದರು. ಕೇರಳದಲ್ಲಿ ಹಲವಾರು ಆರ್‍ಎಸ್‍ಎಸ್ ಕಾರ್ಯಕರ್ತರ ಕೊಲೆಯಾಗಿದೆ. ಆದರೂ ಪಿನರಾಯ್
ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸಂಘಪರಿವಾರದ ವಿರುದ್ಧ ದ್ವೇಷವನ್ನು ಹೊಂದಿರುವ ಪಿನರಾಯ್‍ನ ಚಿಂತನೆಯನ್ನು ಮೆಚ್ಚುತ್ತಾರೆಂದರೆ ಕಮಲ ಹಾಸನ್ ಪಕ್ಷ ಯಾವ ರೀತಿ ಇರಬಹುದೆಂದು ಅರ್ಥೈಸಬಹುದು.

ಕಮಲ್ ಹಾಸನ್ ಅವರೊಂದಿಗೆ ನಡೆದ ಮಾತುಕತೆ ವಿಚಾರವನ್ನು ಕೇರಳ ಸಿಎಂ ಪಿನರಾಯ್ ವಿಜಯನ್ ತಮ್ಮ ಟ್ವಿಟರ್ ನಲ್ಲಿ ಹಾಕಿಕೊಂಡಿದ್ದರು. ತಮ್ಮನ್ನು ನಟ ಕಮಲ್ ಹಾಸನ್ ಭೇಟಿ ಮಾಡಿದ್ದರು, ಇತರ ಕುಶಲೋಪರಿ ವಿಚಾರಗಳಲ್ಲದೆ, ತಮಿಳುನಾಡು ರಾಜಕೀಯ ಪರಿಸ್ಥಿತಿ ಕುರಿತಂತೆಯೂ ಅವರು ಚರ್ಚಿಸಿದರು ಎಂದು ತಮ್ಮ ಪೆÇೀಸ್ಟ್ ನಲ್ಲಿ ಹಾಕಿಕೊಂಡಿದ್ದರು. ಆ ವೇಳೆ ರಾಜಕೀಯದ ಕುರಿತು ಮಾತಾಡಿ ನಾನು ಬಹಳ ದಿನಗಳಿಂದ ಕೇರಳ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸುತ್ತಲೇ ಇದ್ದೇನೆ, ಅವರಿಂದ ಸಲಹೆ ಪಡೆಯುತ್ತಲೇ ಬಂದಿದ್ದೇನೆ, ಅಲ್ಲದೆ ಈ ನಿಟ್ಟಿನಲ್ಲಿ ಇನ್ನಷ್ಟು ರಾಜಕೀಯ ಧುರೀಣರ ಜತೆಯೂ ಮಾತುಕತೆ ನಡೆಸುತ್ತೇನೆ ಎಂದು ಎಂದು ಕಮಲ್ ಹೇಳಿದ್ದಾಗಿ ಪಿನರಾಯ್ ಹೇಳಿದ್ದರು. ಇದರಿಂದ ಕಮಲ್ ರಾಜಕೀಯ ನಿಲುವೇನು ಎಂದು ಅಂದೇ ಬಹಿರಂಗಗೊಂಡಿತ್ತು.

ಕಮಲ್ ಹಾಸನ್ ಅವರ ಪುತ್ರಿ ಅಕ್ಷರ ಹಾಸನ್ ಅವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದರು. ಈ ವೇಳೆ ಕಮಲ್ ಹಾಸನ್ ಏನೆಂದು ಪ್ರತಿಕ್ರಿಯಿಸಿದ್ದರು ಗೊತ್ತಾ? ಹಾಯ್ ಅಕ್ಷು ನೀನು ಧರ್ಮ ಬದಲಾವಣೆ ಮಾಡಿದ್ದೀಯಾ.. ಲವ್ ಯೂ. ನೀನು ಧರ್ಮ ಬದಲಾವಣೆ ಮಾಡಿದರೂ ನಿನ್ನನ್ನು ಪ್ರೀತಿಸುವೆ ಧರ್ಮದಂತೆ ಪ್ರೀತಿಗೆ ಷರತ್ತುಗಳಿಲ್ಲ. ಜೀವನವನ್ನು ಆನಂದಿಸು. ವಯ್ ಯುವರ್ ಬಪ್ಪಾ’ ಎಂದು ಟ್ವಿಟ್ ಮಾಡಿದ್ದರು.

ತಮಿಳುನಾಡು ಬಿಜೆಪಿ ಕಡೆ ವಾಲುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ಕಮಲ್ ಹಾಸನ್ ಹೇಳಿಕೆ ಸಾಕಷ್ಟು ತಿರುವು ಪಡೆದಿದೆ. ಯಾಕೆಂದರೆ ಕಮಲ್ ಹಾಸನ್ ಅವರ
ಚಿಂತನೆ ಏನು ಎಂದು ಸಾಕಷ್ಟು ಬಾರಿ ಬಹಿರಂಗಗೊಂಡಿರುವುದರಿಂದ ಅವರ ಪಕ್ಷ ಯಾವ ನಿಲುವನ್ನು ಹೊಂದಲಿದೆ ಎಂದು ಸ್ಪಷ್ಟವಾಗಿ ಇನ್ನೊಮ್ಮೆ ಹೇಳಬೇಕಾಗಿಲ್ಲ.  ತಮಿಳುನಾಡಿನಲ್ಲಿ ಮೋದಿ ಅಲೆ ಇಂದು ಚೆನ್ನಾಗಿ ಕೆಲಸ ಮಾಡುತ್ತಿದೆ. ತಮಿಳುನಾಡಿನ ಯುವ ಸಮೂಹ ಮೋದಿಯ ಪರವಾಗಿದ್ದಾರೆ. ಆದರೆ ಕಮಲ್ ಹಾಸನ್ ಎಡಪಂಥೀಯ ಚಿಂತನೆಗಳನ್ನು ಹೊಂದಿರುವ ಕಾರಣ ಅವರ ಪಕ್ಷ ಇನ್ನೊಂದು ಕಾಂಗ್ರೆಸ್‍ನಂತೆ ಅಥವಾ ಇನ್ನೊಂದು ಕಮ್ಯೂನಿಸ್ಟ್ ಪಕ್ಷದಂತೆ ಆಗುವ ಎಲ್ಲಾ ಲಕ್ಷಣಗಳಿದೆ.

ಎಡ ಚಿಂತನೆಗಳಿರುವ ಪಕ್ಷಗಳನ್ನು ಜನರು ಇಂದು ಸಾರಗಟವಾಗಿ ತಿರಸ್ಕರಿಸಿಕೊಂಡು ಬರುತ್ತಿದ್ದಾರೆ. ಉದಾಹರಣೆಗೆ ಒಂದು ಕಾಲದಲ್ಲಿ ಕಮ್ಯುನಿಸ್ಟ್ ಪಕ್ಷ ಕಾಂಗ್ರೆಸ್ ಪಕ್ಷದ ಪ್ರಬಲ ಪ್ರತಿಸ್ಪರ್ಧಿಯಾಗಿತ್ತು. ಆದರೆ ಇಂದು ಕಮ್ಯುನಿಸ್ಟ್ ಪಕ್ಷ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ. ಇಂದು ಅದೇ ಸ್ಥಿತಿ ಕಾಂಗ್ರೆಸ್‍ಗೂ ಬರುತ್ತಿದೆ. ಇಂದು ಭಾರತದಲ್ಲಿ ಕಾಂಗ್ರೆಸ್ ಮುಕ್ತವಾಗಿ ನೆಲೆಯನ್ನು ಕಳೆದುಕೊಳ್ಳುತ್ತಿದೆ. ಜನರಿಗೆ ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ಪಕ್ಷ ಮಾಡಿರುವ ದ್ರೋಹಗಳು ಜನರಿಗೆ ಗೊತ್ತಾಗುತ್ತಿದೆ. ಇಂಥಾ ಪಕ್ಷಗಳು ಹಿಂದೂಗಳನ್ನು ಮೂಲೆಗುಂಪು ಮಾಡುತ್ತಿರುವುದೂ ಜನರಿಗೆ ಚೆನ್ನಾಗಿ ತಿಳಿದಿದೆ. ಇಂಥದ್ರಲ್ಲಿ ಎಡಚಿಂತನೆಗಳನ್ನು ಹೊಂದಿರುವ ಕಮಲ್ ಹಾಸನ್ ಹೊಸ ಪಕ್ಷ ಸ್ಥಾಪಿಸಿದ್ದೇ ಆದರೆ ಅದರ ಭವಿಷ್ಯದ ಸ್ಥಿತಿ ಏನಾಗಲಿದೆ ಎಂದು ಚೆನ್ನಾಗಿ ಅರ್ಥೈಸಿಕೊಳ್ಳಬಹುದು.

ಕಮಲ್ ಅವರು ಹೊಸ ಪಕ್ಷ ಸ್ಥಾಪಿಸಿ ಓಟುಗಳೆಲ್ಲಾ ಬಿಜೆಪಿ ಕಡೆ ಹೋಗದಂತೆ ರಾಜಕೀಯ ತಂತ್ರವಾಗಿರುವ ಸಾಧ್ಯತೆಯೂ ಇದೆ. ಈ ರಾಜಕೀಯದ ಹಿಂದೆ ಅಲ್ಲಿನ ಕೆಲವೊಂದು ಪಕ್ಷಗಳ ಮುಖಂಡರು ಪಾಲ್ಗೊಂಡಿರುವವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಕರ್ನಾಟಕದಲ್ಲಿ ಚಲನಚಿತ್ರ ನಟ ಉಪೇಂದ್ರ ಅವರು ರಾಜಕೀಯದ ಬಗ್ಗೆ ಸಾಕಷ್ಟು ಬಾರಿ ಮಾತಾಡಿದ್ದರು. ಮೋದಿ ಚಿಂತನೆಗಳನ್ನು ಭಟ್ಟಿ ಇಳಿಸಿದಂತೆ ಮಾತಾಡುತ್ತಿದ್ದ ಉಪೇಂದ್ರ ಅವರು ಕೊನೆಗೆ ಹೊಸ ಪಕ್ಷ ಸ್ಥಾಪಿಸುತ್ತಾರೆ ಎಂದಾಗ ಜನರಿಗೆ ಯಾವ ರೀತಿ ಭ್ರಮನಿರಸನ ಆಗಿತ್ತೋ ಅದೇ ರೀತಿ ಕಮಲ ಹಾಸನ್ ಅವರಿಂದಲೂ ಆಗಲಿದೆ ಎನ್ನುವುದಂತೂ ಸ್ಪಷ್ಟ. ಯಾಕೆಂದರೆ ಇಂದು ಪ್ರಾದೇಶಿಕ ಪಕ್ಷಗಳ ಸ್ಥಿತಿಗತಿ ಏನಿದೆ ಎಂದು ಎಲ್ಲರಿಗೂ ತಿಳಿದಿದೆ.

ಭಾರತೀಯ ಚಿತ್ರರಂಗದಲ್ಲಿ ರಜನಿಕಾಂತ್ ದೊಡ್ಡ ಹೆಸರು. ಈಗಾಗಲೇ ನರೇಂದ್ರ ಮೋದಿಯವರ ಯೋಜನೆಗಳನ್ನು ಮೆಚ್ಚಿಕೊಂಡಿರುವ ರಜನೀಕಾಂತ್ ಬಿಜೆಪಿ
ಸೇರಲಿದ್ದಾರೆಂದು ಹೇಳಲಾಗುತ್ತಿತ್ತು. ಒಂದು ವೇಳೆ ರಜನಿಕಾಂತ್ ಬಿಜೆಪಿಗೆ ಬಂದಿದ್ದೇ ಆದರೆ ತಮಿಳುನಾಡಲ್ಲಿ ಉಳಿದೆಲ್ಲಾ ಪಕ್ಷಗಳು ಅಸ್ತಿತ್ವ ಕಳೆದುಕೊಳ್ಳಬಹುದು.

ರಾಜಕೀಯ ಬದಲಾವಣೆ ತರ್ತೇನೆ ಎನ್ನುವ ಕಮಲ್ ಡೈಲಾಗ್ ಅನ್ನು ಈ ಹಿಂದೆ ಕೇಜ್ರಿವಾಲ್ ಕೂಡಾ ಹೇಳಿದ್ದರು. ಆದರೆ ಇಂದು ಅವರ ಪಕ್ಷದ ಸ್ಥಿತಿ ಯಾವ ರೀತಿ ಇದೆ ಎಂದು ವಿವರಿಸಿ ಹೇಳಬೇಕಿಲ್ಲ.

-ಚೇಕಿತಾನ

Tags

Related Articles

Close