ಅಂಕಣ

ಕೈಲಾಸ ದೇಗುಲವನ್ನು ಔರಂಗಜೇಬ ನಾಶಪಡಿಸಲು ಮೂರು ವರ್ಷಗಳ ಕಾಲ ಪ್ರಯತ್ನಿಸಿ ವಿಫಲನಾದನಾ?

ಮಹಾರಾಷ್ಟ್ರದ ಎಲ್ಲೋರ ಕೈಲಾಸ ದೇವಾಲಯದಲ್ಲಿರುವ ವಾಸ್ತುಶಿಲ್ಪದ ಸುಂದರ ಶೈಲಿಯನ್ನು ಜಗತ್ತಿನ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಇದರ ರಚನೆ, ಕೆತ್ತನೆ ಎಲ್ಲವೂ ದೇಗುಲ ನಿರ್ಮಿಸಿದಾಗ ಹೇಗಿತ್ತೋ ಇಂದಿಗೂ ಹಾಗೆಯೇ ಉಳಿದುಕೊಂಡಿದೆ. ಈ ದೇಗುಲವನ್ನು ಯಾವ ರೀತಿ ನಿರ್ಮಿಸಲಾಗಿದೆಯೋ ಏನೋ… ಮನುಷ್ಯರಿಂದ ನಿರ್ಮಿಸಲು ಸಾಧ್ಯವೇ ಇಲ್ಲವೆನ್ನುವಷ್ಟು ಈ ದೇಗುಲ ಅದ್ಭುತವಾಗಿದೆ.

ಈ ದೇಗುಲವನ್ನು ಯಾವ ರೀತಿ ನಿರ್ಮಿಸಲಾಗಿದೆ ಎನ್ನುವ ನಿಗೂಢ ರಹಸ್ಯವನ್ನು ದೇಗುಲ ನಿರ್ಮಾಣಕಾರರು ಯಾವುದೇ ಶಾಸನಗಳಲ್ಲಾಗಲೀ ಬಿಟ್ಟುಕೊಟ್ಟಿಲ್ಲ. ಈ ದೇಗುಲವನ್ನು ಯಾವ ರೀತಿ ನಿರ್ಮಿಸಲಾಗಿದೆ ಎನ್ನುವುದು ಅತ್ಯಂತ ನಿಗೂಢವಾಗಿದ್ದು, ವಿಜ್ಞಾನಿಗಳು ಅದೇನು ಮಾಡಿದ್ರೂ ಅದರ ಹಿಂದಿನ ರಹಸ್ಯವನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಈ ದೇಗುಲ ನಿರ್ಮಾಣದ ಹಿಂದೆ ಅನ್ಯಗ್ರಹವಾಸಿಗಳ ಸಹಾಯ ಹಸ್ತ ಇದೆ ಎಂದೂ ವಿಜ್ಞಾನಿಗಳ ಅಂಬೋಣ.. ಕ್ರಿಸ್ತಪೂರ್ವ 600 ರಿಂದ 800 ಮಧ್ಯೆ ನಿರ್ಮಾಣಗೊಂಡಿರುವ ಈ ದೇಗುಲ ಒಂಚೂರೂ ಕೂಡಾ ಗಡಗಡ ಅಲುಗಾಡದೆ ಗಟ್ಟಿಯಾಗಿ ಎದೆಯೊಡ್ಡಿ ನಿಂತಿದೆ..

Related image

ಒಮ್ಮೆ ಈ ದೇಗುಲಕ್ಕೆ ಔರಂಜಜೇಬ ದಾಳಿ ನಡೆಸಿದ್ದ.. ಅದೊಂದು ಕಥೆಯೇ ರೋಚಕ.. ಇದರ ಜೊತೆಗೆ ಕೈಲಾಸ ದೇಗುಲದ ಬಗ್ಗೆ ಕೆಲವೊಂದು ವಿವರಿಸಲಾಗದ ಅದ್ಭುತ ವಿಚಾರಗಳೂ ಇವೆ.

ಪ್ರಪಂಚದಲ್ಲಿಯೇ ಏಕಶಿಲೆಯಿಂದ ಮಾಡಿದ ಅದ್ಭುತ ದೇಗುಲ ಕೈಲಾಸ ದೇಗುಲ. ಇಡೀ ಒಂದು ಪರ್ವತವೇ ಆಗಿದ್ದ ಕಲ್ಲನ್ನು ಕೊರೆದು ಕೊರೆದು ಸುಂದರವಾದ ದೇಗುಲವನ್ನು ನಿರ್ಮಿಸಲಾಗಿದೆ. ಶಿಖರದಿಂದಲೇ ಕೊರೆದು ಬುಡದವರೆಗೆ ಚಾಚೂ ತಪ್ಪದಂತೆ, ಒಂಚೂರೂ ಲೋಪವಾಗದಂತೆ ಈ ದೇಗುಲವನ್ನು ನಿರ್ಮಿಸಲಾಗಿದೆ. ಪುರಾತತ್ವ ಇಲಾಖೆಯ ಪ್ರಕಾರ ನಾಲ್ಕು ಲಕ್ಷ ಟನ್‍ಗಳಷ್ಟು ದೊಡ್ಡ ಬಂಡೆಯನ್ನು ಕೊರೆದು ನಿರ್ಮಿಸಿರಬಹುದೆಂದು ಅಂದಾಜಿಸಿದ್ದಾರೆ. ಪುರಾತತ್ವ ಇಲಾಖೆಯ ಪ್ರಕಾರ ಈ ಬೃಹದಾಕಾರದ ದೇಗುಲ ನಿರ್ಮಿಸಲು ಒಂದು ಶತಮಾನ ವರ್ಷಗಳು ಬೇಕಾಗಿರಬಹುದೆಂದು ಅಂದಾಜಿಸಿದೆ. ಆದರೆ ನಿಜ ವಿಚಾರವೆಂದರೆ ಈ ದೇವಸ್ಥಾನವನ್ನು ನಿರ್ಮಿಸಿ ಕೆತ್ತನೆ, ಶಿಲ್ಪಕಲೆ ಸೇರಿ ಮುಕ್ತಾಯದ ಹಂತ ತಲುಪಲು ಬರೇ 18 ವರ್ಷಗಳು ಬೇಕಾದವು.

ಈಗೊಂದು ಪ್ರಶ್ನೆ ಎದ್ದಿದೆ… ಈ ದೇಗುಲವನ್ನು ನಿರ್ಮಿಸಿರುವುದು ಹೇಗೆ? ಸುತ್ತಿಗೆ, ಪಿಕ್ಕಾಸು ಉಳಿಗಳಂಥಾ ಸಾಧನಗಳನ್ನಷ್ಟೇ ಬಳಸಿಕೊಂಡು ದೇಗುಲ ನಿರ್ಮಿಸಲು ಸಾಧ್ಯವೇ? ಹಾಗೆ ಸಾಧ್ಯವಾಗದಿದ್ದರೆ ಬಳಸಿರುವ ಟೆಕ್ನಾಲಜಿ ಏನು? ಎಲಿಯನ್ ಟೆಕ್ನಾಲಜಿ ಬಳಕೆಯಾಗಿದೆಯೇ? ಇದೆಲ್ಲಾ ಇನ್ನೂ ಬಯಲಾಗದ ರಹಸ್ಯ..

ಗಣಿತದ ಸರಳ ಲೆಕ್ಕಾಚಾರವನ್ನು ನೋಡೋಣ. ಒಂದು ಗಂಟೆಯಲ್ಲಿ ಎಷ್ಟು ಕಲ್ಲುಗಳನ್ನು ಕೆತ್ತಿ ತೆಗೆಯಲಾಗಿದೆ ಎಂದು ಊಹಿಸಿದಾಗ ಅದ್ಭುತ ರಹಸ್ಯವೊಂದು ಗೋಚರಿಸುತ್ತದೆ. ಈ ದೇವಸ್ಥಾನ ನಿರ್ಮಿಸಲು ತೆಗೆದುಕೊಂಡ ಕಾಲಾವಧಿ 18 ವರ್ಷಗಳು. ಯುದ್ಧಕಾಲ, ಉತ್ಸವಗಳ ದಿನ, ಮಳೆ ಇತ್ಯಾದಿ ದಿನಗಳನ್ನು ನಿರ್ಲಕ್ಷಿಸಿದರೂ 18 ವರ್ಷಗಳಲ್ಲಿ ಎಷ್ಟು ವರ್ಷಗಳು ಕಳೆದವು? ಕೆಲಸಗಾರರು ತೆಗೆದುಕೊಳ್ಳುವ ವಿಶ್ರಾಂತಿಯನ್ನು ಗಣನೆಗೆ ತೆಗೆದುಕೊಂಡು ಕೂಡಿಸಿ, ಭಾಗಿಸಿ ಕಳೆದಾದ ಒಬ್ಬೊಬ್ಬ ಕಾರ್ಮಿಕನೂ ಪ್ರತಿದಿನ 12ರಿಂದ 16 ಗಂಟೆ ಕೆಲಸ ಮಾಡಿದರೂ ಅಷ್ಟೊಂದು ಚಿಕ್ಕ ಅವಧಿಯಲ್ಲಿ ಇಷ್ಟೊಂದು ಬಲಾಢ್ಯ, ಭವ್ಯ ದೇಗುಲ ನಿರ್ಮಿಸಲು ಸಾಧ್ಯವೇ? ಆದ್ದರಿಂದ ಕಾರ್ಮಿಕರು ತಡೆರಹಿತವಾಗಿ ಕೆಲಸ ಮಾಡಿದರೂ 18 ವರ್ಷಗಳಲ್ಲಿ ಅಷ್ಟೊಂದು ಕಲ್ಲುಗಳನ್ನು ತೆಗೆದು ಹೇಗೆ ದೇವಸ್ಥಾನ ನಿರ್ಮಿಸಿದರು ಎಂದು ಪ್ರಶ್ನೆಯೊಂದು ಉದ್ಭವಿಸುತ್ತದೆ.

Related image

18 ವರ್ಷಗಳಲ್ಲಿ 4 ಲಕ್ಷ ಟನ್ಗಳಷ್ಟು ಕಲ್ಲುಬಂಡೆಗಳನ್ನು ತೆಗೆದರೆ ಅದು ಒಂದು ವರ್ಷದಲ್ಲಿ 22,222 ಟನ್‍ಗಳಿಗೆ ಸಮನಾಗಿರುತ್ತದೆ. ಒಬ್ಬ ಕಾರ್ಮಿಲ ಪ್ರತಿದಿನ 60 ಟನ್‍ಗಳಷ್ಟು ಕಲ್ಲುಗಳನ್ನು ಹೊರತೆಗೆದರೆ ಒಂದು ಗಂಟೆಯಲ್ಲಿ ಆತ ತೆಗೆಯುವ ಕಲ್ಲಿನ ಪ್ರಮಾಣ 5 ಟನ್. ಒಂದು ಗಂಟೆಯಲ್ಲಿ 5 ಟನ್‍ಗಳಷ್ಟು ಕಲ್ಲುಗಳನ್ನು ತೆಗೆಯಲು ಇಂದು ಭಾರೀ ಪ್ರಮಾಣದ ಯಂತ್ರೋಪಕರಣಗಳಿಂದಲೂ ಸಾಧ್ಯವಿಲ್ಲ.
ಆದ್ದರಿಂದ, ಈ ದೇಗುಲವನ್ನು ಮನುಷ್ಯರು ಇದನ್ನು ಹೇಗೆ ನಿರ್ಮಿಸಲು ಸಾಧ್ಯ? ಅದೂ ಕೂಡಾ ಉಲಿ, ಕತ್ತಿ, ಪಿಕ್ಕಾಸಿಯಿಂದ ಸಾಧ್ಯವೇ? ಅನ್ಯಗ್ರಹವಾಸಿಗಳ ನೆರವು ಪಡೆದಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಅನ್ಯಗ್ರಹವಾಸಿಗಳಾಗಿರುವ ದೇವತೆಗಳು ಇದಕ್ಕೆ ಸಹಾಯ ನೀಡಿದರೇ?

Image result for ellora temple

ಎಲ್ಲೋರಾ ಸಂಕೀರ್ಣದಲ್ಲಿ ನಿರ್ಮಿಸಲಾದ ಮೊದಲ ದೇವಾಲಯ ಕೈಲಾಸ ದೇವಸ್ಥಾನ. ಆಕಾಶದಿಂದ ದೇಗುಲವನ್ನು ನೋಡಿದಾಗ ಇಂಗ್ಲೀಷಿನ `ಎಕ್ಸ್’ ಆಕಾರ ಚೆನ್ನಾಗಿ ಕಾಣುತ್ತದೆ. ನೆಲದ ಮೇಲೆ ನೋಡಿದಾಗ ಈ ಆಕಾರವು ನಾಲ್ಕು ಸಿಂಹಗಳಿಂದ ರೂಪುಗೊಳ್ಳುತ್ತದೆ. ಈ `ಎಕ್ಸ್’ ಆಕಾರ ಪ್ರಕಾರ ದೇಗುಲ ಯಾವ ಸಿಗ್ನಲ್ ನೀಡುತ್ತದೆ? ಅಂತರಿಕ್ಷದಲ್ಲಿನ ಶಕ್ತಿಗಳನ್ನು ಸೆಳೆಯಲು ಮತ್ತು ಅನ್ಯಗ್ರಹವಾಸಿಗಳಿಗೆ ಸಿಗ್ನಲ್ ನೀಡಲೆಂದು ಈ ರೀತಿ ಸೃಷ್ಟಿಸಲಾಗಿದೆಯೇ? ಜಗತ್ತಿನ ಅಲೌಖಿಕ ಶಕ್ತಿಗಳನ್ನು ಸೆಳೆಯಲು ಮಾಡಿದ ಕ್ರಮವೇ? ಒಟ್ಟಿನಲ್ಲಿ ಇದೆಲ್ಲಾ ಬಯಲಾಗದ ನಿಗೂಢ ಸತ್ಯಗಳು…

ಕೈಲಾಸ ದೇವಾಲಯವು ಏನೋ ಒಂದುದ ನಿಗೂಢವಾದ ರಹಸ್ಯವನ್ನು ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿದೆ. ಜಗತ್ತಿನ ರಹಸ್ಯಗಳನ್ನು ಒಳಗಿಟ್ಟುಕೊಂಡು ಯಾವುದೋ ನಿರ್ದೇನಶವನ್ನು ಪಡೆಯಲು ಇದನ್ನು ನಿರ್ಮಿಸಲಾಗಿದೆ. ಮೊದಲೇ ಸಾಕಷ್ಟು ಅಧ್ಯಯನ ನಡೆಸಿ, ಯಾವುದೋ ಉದ್ದೇಶವನ್ನಿಟ್ಟುಕೊಂಡೇ ಈ ದೇಗುಲವನ್ನು ನಿರ್ಮಿಸಿರುವುದು ಸತ್ಯ.

Image result for ellora temple

ಈ ದೇಗುಲದಲ್ಲಿ ಇನ್ನೂ ಹಲವಾರು ರಹಸ್ಯ, ಆಧುನಿತೆಯನ್ನೂ ಮೀರಿಸುವ ತಂತ್ರಜ್ಞಾನವನ್ನು ಬಳಸಲಾಗಿದೆ. ದೇವಾಲಯ ದೊಡ್ಡ ದೊಡ್ಡ ಗೋಪುರಗಳನ್ನು ಹೊಂದಿದೆ. ಇದರಲ್ಲಿ ಮಳೆಕೊಯ್ಲು ವ್ಯವಸ್ಥೆ, ಸಂಪರ್ಕಿಸುವ ಸೇತುವೆಗಳು, ಚರಂಡಿ ವ್ಯವಸ್ಥೆ, ನಿಗೂಢವಾಗಿರುವ ನೆಲಮಾಳಿಗೆ, ಇನ್ನೂ ಗೋಚರಿಸದೇ ಉಳಿದಿರುವ ಗುಪ್ತ ರಹಸ್ಯ ಕಟ್ಟಡಗಳು, ಹೊರಗಿನಿಂದ ಬಂದವರನ್ನು ಗಮನಿಸಲು ಇರುವ ಕಿಂಡಿಗಳು, ಬಾಲ್ಕನಿ.. ಛೆ ಏನೆಲ್ಲಾ ಇದೆ ಎಂದು ವಿವರಿಸಲೂ ಸಾಧ್ಯವಿಲ್ಲ. ಆಧುನಿಕ ತಂತ್ರಜ್ಞಾನವನ್ನೂ ಮೀರಿಸುವಂತೆ ಈ ದೇಗುಲವನ್ನು ನಿರ್ಮಿಸಲಾಗಿದ್ದು, ಪ್ರಾಚೀನ ಭಾರತೀಯರ ಅಪಾರ ಬುದ್ಧಿಮತ್ತೆ ಎಲ್ಲರನ್ನೂ ಅವಕ್ಕಾಗುವಂತೆ ಮಾಡುತ್ತದೆ.

ದೇಗುಲವನ್ನು ನೆಲಸಮಗೊಳಿಸಲು ಪ್ರಯತ್ನಿಸಿ ವಿಫಲನಾಗಿದ್ದ ಔರಂಗಜೇಬ!

ಮೊಘಲ್ ದೊರೆ, ದೇಗುಲ ಭಂಜಕ ಔರಂಗಜೇಬನು ಕೈಲಾಸ ದೇಗುಲವನ್ನು ನಾಶಪಡಿಸಬೇಕೆಂದು ನಿರ್ಧರಿಸಿದನು. ಅದಕ್ಕಾಗಿ ಔರಂಗಜೇಬನು ತನ್ನ 1000 ಕಾರ್ಮಿಕರನ್ನು ದೇಗುಲವನ್ನು ನೆಲಸಮಗೊಳಿಸಲು ಕಳಿಸಿದನು. ಆದರೆ ದೇಗುಲದ ಮುಂಭಾಗದ ಕೆಲವು ಸಣ್ಣಪುಟ್ಟ ಪ್ರತಿಮೆಗಳನ್ನು ಭಂಜಿಸಿದರೂ ದೇಗುಲವನ್ನು ನಾಶಮಾಡಲು ಸಾಧ್ಯವಾಗಲಿಲ್ಲ. ಇದೇ ಮೂರು ವರ್ಷಗಳ ಕಾಲ ಪ್ರಯತ್ನಿಸುತ್ತಲೇ ಇದ್ದರು. ಆದರೂ ಸಾಧ್ಯವಾಗಲಿಲ್ಲ. ಇದರಿಂದ ಭ್ರಮನಿರಸನಗೊಂಡ ಔರಂಗಜೇಬ್ ಕೊನೆಗೂ ಸೋಲೊಪ್ಪಿಕೊಂಡು ದೇವಸ್ಥಾನ ಧ್ವಂಸ ಮಾಡುವುದರಿಂದ ಹಿಂದೆ ಸರಿದನು.

Related image

ಎಷ್ಟೋ ದೇಗುಲವನ್ನು ನಾಶ ಮಾಡಿದ್ದ ಔರಂಗಜೇಬ ಎಲ್ಲೋರದ ಕೈಲಾಸ ದೇಗುಲವನ್ನು ನಾಶ ಮಾಡಲು ಸಾಧ್ಯವಾಗಲಿಲ್ಲ. ಹಾಗಾದರೆ ಈ ದೇಗುಲ ಆಕ್ರಮಣಗಳನ್ನೂ ಎದುರಿಸಿ ಇಂದಿಗೂ ಹಾಗೆಯೇ ಎದೆಯುಬ್ಬಿಸಿ ನಿಲ್ಲಲು ಕಾರಣವೇನು? ಇದೆಲ್ಲಾ ಹಿಂದೂಗಳ ವೈಭವೋಪೇತ ಜೀವನ, ತಂತ್ರಜ್ಞಾನ, ಅಲೋಕಿಕ ಶಕ್ತಿ, ಆಧ್ಯಾತ್ಮಿಕ-ವಿಜ್ಞಾನ ಹೀಗೆ ಎಲ್ಲದರ ಅಮೋಘ ಇತಿಹಾಸವನ್ನು ಸಾರುತ್ತದೆ.

ಚೇಕಿತಾನ

Tags

Related Articles

Close