ಅಂಕಣಪ್ರಚಲಿತರಾಜ್ಯ

ಕೊನೆಗೂ ಉದ್ಘಾಟನೆಯಾಯಿತು ಇಂದಿರಾ ಕ್ಯಾಂಟೀನ್! ಕಲ್ಲಡ್ಕ ಶಾಲೆಯ ಮಕ್ಕಳ ಬಿಸಿಯೂಟಕ್ಕೆ ದುಡ್ಡಿಲ್ಲದ ರಾಜ್ಯ ಸರಕಾರದ ಹತ್ತಿರ ಇಂದಿರಾ ಕ್ಯಾಂಟೀನೆಂಬ ಅಕ್ಷಯ ಪಾತ್ರೆ!

ಅದೆಷ್ಟೋ ವಿರೋಧಗಳ ಮಧ್ಯೆಯೂ ಉದ್ಘಾಟನೆಯಾಯಿತು ‘ಇಂದಿರಾ ಗಾಂಧಿ’ ಕ್ಯಾಂಟೀನ್! ಬಜೆಟ್ ಮಂಡನೆ ವೇಳೆ ಸಿದ್ದರಾಮಯ್ಯ ಇಂದಿರಾ ಗಾಂಧಿ ಕ್ಯಾಂಟೀನ್ ಬಗ್ಗೆ ಪ್ರಸ್ತಾಪಿಸಿದ್ದರು. ಮಾರ್ಚ್ 15 ರಿಂದಲೇ ಈ ಪ್ರಸ್ತಾವನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತಾದರೂ ರಾಜ್ಯ ಸರಕಾರ ‘ಪ್ರಜೆ’ಗಳ ಅನಿಸಿಕೆಯನ್ನು ಗಣನೆಗೆ ತೆಗೆದುಕೊಂಡಂತಿಲ್ಲ.

ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ಜೊತೆಗೂಡಿ ಉದ್ಘಾಟಿಸಿದ ಈ ಕ್ಯಾಂಟೀನ್ ಜನಕ್ಕೆ ಅನ್ನವನ್ನು ಕೊಡಲು ನೆರವಾಗುತ್ತದೆಯೋ ಅಥವಾ ಕಿತ್ತುಕೊಳ್ಳುವ ತಾಣವಾಗುತ್ತದೆಯೋ ಎಂಬುದನ್ನು ನೋಡಬೇಕಿದೆ.

ಕಲ್ಲಡ್ಕ ಶಾಲೆಯ ಮಕ್ಕಳ ಬಿಸಿಯೂಟಕ್ಕೆ ದುಡ್ಡಿಲ್ಲದ ರಾಜ್ಯ ಸರಕಾರದ ಹತ್ತಿರ ಇಂದಿರಾ ಕ್ಯಾಂಟೀನೆಂಬ ಅಕ್ಷಯ ಪಾತ್ರೆ!

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾದ ಶರತ್ ಮಡಿವಾಳರವರ ಹತ್ಯೆಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ್ದ ಕಲ್ಲಡ್ಕ ಪ್ರಭಾಕರ್ ಭಟ್ಟರನ್ನು ರಾಜಕೀಯ ದ್ವೇಷದಿಂದ ಜೈಲಿಗಟ್ಟಲು ನೋಡಿದ್ದಲ್ಲದೇ, ಸಿದ್ದರಾಮಯ್ಯ ಪ್ರಭಾಕರ್ ಭಟ್ಟರ ನೇತೃತ್ವದ ಶ್ರೀ ರಾಮ ವಿದ್ಯಾಲಯಕ್ಕೆ ನೀಡುತ್ತಿದ್ದ ಬಿಸಿಯೂಟದ ಅನುದಾನವನ್ನು ನಿಲ್ಲಿಸಿದ್ದರು. 3016 ಮಕ್ಕಳು ಮಧ್ಯಾಹ್ನದ ಬುತ್ತಿಯಿಲ್ಲದೇ ಕೂರುವಂತಾದಾಗ, ಸರಕಾರದ ಬೊಕ್ಕಸದಲ್ಲಿ ಹಣವಿಲ್ಲವೆಂದು ಸಮರ್ಥಿಸಿಕೊಂಡ ಸಿದ್ಧರಾಮಯ್ಯರವರಿಗೆ ರಾಜ್ಯ ಸರಕಾರದ ಮೂಲಕ ಇಂದಿರಾ ಕ್ಯಾಂಟೀನ್ ಗೆ ಮಾತ್ರ ದುಡ್ಡು ಹರಿದು ಬಂದಿತೇ?!

ಸಿದ್ದರಾಮಯ್ಯ ಆರು – ಏಳು ಸಾವಿರ ಕೋಟಿ ಖರ್ಚಾಗಿದೆ ಎಂದು ಹೇಳಿದ್ದಾರೆ! ಆದರೆ, ರಾಜ್ಯ ಸರಕಾರದ ಬೊಕ್ಕಸದಲ್ಲಿ ಶ್ರೀ ರಾಮ ಶಾಲೆಯ ಮಕ್ಕಳೂಟಕೆ ಮಾತ್ರ ಹಣವಿಲ್ಲ!

ಇಂದಿರಾ ಕ್ಯಾಂಟೀನ್ ನಲ್ಲಿ ತಾಜಾ ಹಾಗೂ ಬಿಸಿಯಾದ ಊಟಕ್ಕೆ 10 ರೂಪಾಯಿ ಹಾಗೂ ಬೆಳಗಿನ ಉಪಾಹಾರ 5 ರೂಪಾಯಿ ಮಾತ್ರ!

ದುಡ್ಡಿಲ್ಲದ ರಾಜ್ಯ ಸರಕಾರ ಸಾವಿರ ಮಕ್ಕಳನ್ನು ಸಲಹಲಾಗದೇ ಪರದಾಡಿದ್ದು ನಿಜವೇ ಎಂದು ಬೊಬ್ಬಿರಿದ ಉಳಿದ ಚೇಲಾಗಳಿಗೆ ಬಿಟ್ಟಿ ಊಟ ಎಂಬಂತೆ ಕಡಿಮೆ ಬೆಲೆಗೆ ಊಟ ನೀಡುತ್ತಿರುವುದು ಸಹಜವೇ ಬಿಡಿ. ಕೊಲ್ಲೂರು ಮೂಕಾಂಬಿಕ ಸಂಸ್ಥೆಯಡಿ ಅನುದಾನ ನೀಡುತ್ತಿದ್ದ ರಾಜ್ಯ ಸರಕಾರ ಅದೆಷ್ಟೋ ವಿದ್ಯಾರ್ಥಿಗಳ ಹೊಟ್ಟೆ ಕಾಯುವಂತೆ ಮಾಡಿ, ಈಗ ಇಂದಿರಾ ಎಂಬ ಅಕ್ಷಯ ಪಾತ್ರೆಯೊಂದನ್ನು ನೀಡಿದ್ದು ನೋಡಿದರೆ ಎಂತಹವರಿಗೂ ಅರ್ಥವಾಗುವ ವಿಷಯವೇ. ದ್ವೇಷ ಸಾಧನೆಗೆ ಏನೆಲ್ಲ ಮಾಡಬಹುದೆಂಬ ತಾಜಾ ಉದಾಹರಣೆ ಈ ಕಾಂಗ್ರೆಸ್ಸೇ ಅಲ್ಲವೇ?

ಅದ್ಭುತ ಮೆನು ಜೊತೆ ರಾಹುಲ್ ಗಾಂಧಿಯ ರಹಸ್ಯೆ ಸಭೆ!

ಗುಜರಾತ್ ನಲ್ಲಿ ಜನ ಪ್ರವಾಹದಿಂದ ದಿಕ್ಕಿಲ್ಲದಂತಾಗ ತನ್ನ ಪಕ್ಷದವರನ್ನು ಬೆಂಗಳೂರಿಗಟ್ಟಿದ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಗೆ, ಜನರ ಸಮಸ್ಯೆ ಆಲಿಸಲು ಸಮಯವೇ ಇರಲಿಲ್ಲ ಬಿಡಿ! ಪ್ರವಾಹವೆಲ್ಲ ತಣ್ಣಗಾಗಿ ಗುಜರಾತ್ ಜನರೂ ಚೇತರಿಸಿಕೊಂಡರೆನ್ನುವಾಗ ಫೋಟೋ ಶೂಟ್ ಗೆ ಹೋಗಿದ್ದ ರಾಹುಲ್ ಗಾಂಧಿಗೆ ಮಂಗಳಾರತಿ ಎತ್ತೇ ಕಳುಹಿಸಿದ್ದರು!

ಆದರೆ, ಇಂದಿರ ಗಾಂಧಿ ಕ್ಯಾಂಟೀನ್ ಉದ್ಘಾಟನೆಗೆ ಮಾತ್ರ ನೇರವಾಗಿ ಬೆಂಗಳೂರಿಗೆ ಬಂದಿಳಿದ ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯರವರ ರಹಸ್ಯ ಸಭೆಗೆ ‘ಬಿಸಿಯೂಟ’ದ ವ್ಯವಸ್ಥೆಯೂ ಆಗಿರುವುದರಿಂದ ಮುಂದಿನ ಚುನಾವಣೆಗೊಂದು ಕುತಂತ್ರ ರೂಪಿಸುವ ಎಲ್ಲಾ ಅವಕಾಶಗಳೂ ಅಧಿಕವಾಗಿವೆ!

– ತಪಸ್ವಿ

Tags

Related Articles

Close