ಪ್ರಚಲಿತ

ಕೊರೊನಾದಂತಹಾ ಮಾರಕ ರೋಗಗಳನ್ನು ದೂರವಿಡಲು ಭಾರತದ ಮಡಿ ಸಂಸ್ಕೃತಿಯಿಂದ ಸಾಧ್ಯವೇ?

ಒಂದು ಕಾಲದಲ್ಲಿ ಮಡಿ ಪಾಲಿಸುತ್ತಿದ್ದ ಭಾರತೀಯರನ್ನು ಇಡೀ ಜಗತ್ತೇ ಕೆಕ್ಕರಿಸಿ ನೋಡುತ್ತಿತ್ತು… ಅಸ್ಪೃಶ್ಯತೆಯ ಒಂದು ಭಾಗ ಎಂದೂ ಛೇಡಿಸಿದವರಿದ್ದಾರೆ. ದೇವರಿಗೆ ಪೂಜೆ ಮಾಸುವಾಗ, ಊಟ ಮಾಡುವಾಗ ಮಡಿ‌ ಪಾಲಿಸಲಾಗುತ್ತಿತ್ತು. ಆದರೆ ಆಗ ಕೆಲವರು ‘ನಾನು ಶುದ್ಧ ಮನಸ್ಸಿನಿಂದ ಎಲ್ಲವನ್ನೂ ಮಾಡುತ್ತೇನೆ, ಹಾಗಾದರೆ ಮಡಿಯ ನಿಯಮಗಳನ್ನು ನಾನೇಕೆ ಪಾಲಿಸಬೇಕು?’ ಎಂದು ಪ್ರಶ್ನಿಸುತ್ತಿದ್ದರು.

ನಮ್ಮ ಮನಸ್ಸು ಶುದ್ದವಿದೆ ಎಂದು ನಮಗೆ ಬೇರೆಯವರ ಎಂಜಲೆಲೆಯಲ್ಲಿ ಊಟ ಮಾಡಲು ಒಗ್ಗುವುದೇ.. ವೈದ್ಯರು ಬೇರೆಯವರಿಗೆ ಬಳಸಿದ ಉಪಕರಣಗಳನ್ನು ಇನ್ನೊಬ್ಬರ ಚಿಕಿತ್ಸೆಗೆ ಬಳಸಿದರೆ ಹಿತವೆನಿಸುತ್ತದೆಯೇ? ಸ್ನಾನ ಮಾಡದ ವ್ಯಕ್ತಿ ಭೋಜನ ಸಿದ್ದಪಡಿಸಿ ಬಡಿಸಿದರೆ ತಿನ್ನುವರೇ?

ಅದಕ್ಕಾಗಿಯೇ ಶಾಸ್ತ್ರಕಾರರು ಅನ್ನಶುದ್ಧಿ, ದ್ರವ್ಯಶುದ್ಧಿ ಮತ್ತು ಚಿತ್ತಶುದ್ಧಿ ಎಂಬ ಮೂರು ಶುದ್ದಿಗಳ ಬಗ್ಗೆ ಹೇಳಿದ್ದಾರೆ. ಈ ಮೂರು ಶುದ್ದಿಗಳನ್ನು ಪಾಲಿಸಿದರೆ ಯಾವುದೇ ರೋಗ ಬರಲು ಸಾಧ್ಯವಿಲ್ಲ.

ಅನ್ನಶುದ್ಧಿ : ಅನ್ನಶುದ್ಧಿ ಎಂದರೆ ಸ್ನಾನ ಮಾಡಿ, ತಾಜಾ ನೀರನ್ನು ಉಪಯೋಗಿಸಿ, ಕೂದಲುಗಳನ್ನು ಕಟ್ಟಿಕೊಂಡು ಅನ್ನಪೂರ್ಣಾ ದೇವಿಯ ಸ್ಮರಣೆ ಮಾಡಿ, ಸಿಡಿಮಿಡಿಗೊಳ್ಳದೇ ಅಡುಗೆ ತಯಾರಿಸುವುದು.

ದ್ರವ್ಯಶುದ್ಧಿ : ಹಣವನ್ನು ಗಳಿಸುವ ಮಾರ್ಗ. ಕಳ್ಳತನ, ಲೂಟಿ, ಲಂಚ, ಇತ್ಯಾದಿ‌ ವಾಮ‌ ಮಾರ್ಗಗಳಿಂದ ಹಣ ಗಳಿಸದೆ ಕಷ್ಟಪಟ್ಟು ದುಡಿದು ಹಣ ಗಳಿಸುವ ಮಾರ್ಗವನ್ನು ದ್ರವ್ಯಶುದ್ದಿ ತಿಳಿಸುತ್ತದೆ.

ಚಿತ್ತ‌‌ ಶುದ್ದಿ: ಬ್ರಹ್ಮಜ್ಞಾನ ಪಡೆಯಲು ಶುದ್ಧ ಅಂತಃಕರಣದಿಂದ ಯಮ-ನಿಯಮಗಳನ್ನು ಪಾಲಿಸಿ, ಸತ್ಯವನ್ನೇ ಮಾತನಾಡುವುದು, ಸದಾಚಾರ ಮತ್ತು ಸದ್ವರ್ತನೆ ಇವುಗಳ ಸಮನ್ವಯವನ್ನು ಸಾಧಿಸಿ ಯಾವ ತಪವನ್ನು ಮಾಡಲಾಗುತ್ತದೆಯೋ, ಅದರಿಂದ ಚಿತ್ತಶುದ್ಧಿಯಾಗುತ್ತದೆ.

ಮನುಸ್ಮೃತಿಯಲ್ಲಿ ಹೇಳಿರುವ ಶುದ್ಧಿಯ ಸಾಧನಗಳು :

ಮನುಸ್ಮೃತಿಯ ೫ ನೇ ಅಧ್ಯಾಯದಲ್ಲಿ ಜ್ಞಾನ, ತಪ, ಅಗ್ನಿ, ಆಹಾರ, ಮಣ್ಣು, ಮನಸ್ಸು, ಜಲ, ಸಾರಿಸುವುದು (ಗೋಮಯದಿಂದ ನೆಲವನ್ನು ಸಾರಿಸುವುದು), ವಾಯು, ಕರ್ಮ, ಸೂರ್ಯ ಮತ್ತು ಕಾಲ ಇವೆಲ್ಲವೂ ಪ್ರತಿಯೊಂದು ಪ್ರಾಣಿಯ ಶುದ್ಧಿಯ ಸಾಧನಗಳಾಗಿವೆ ಎಂದು ಹೇಳಲಾಗಿದೆ.

ಧಾನ್ಯಗಳು ಸೂರ್ಯಪ್ರಕಾಶದಿಂದ ಶುದ್ಧವಾಗುತ್ತವೆ. (ಈಗಲೂ ನಾವು ಧಾನ್ಯಗಳನ್ನು ಬಿಸಿಲಿಗೆ ಇಡುತ್ತೇವೆ. ಇದರಿಂದ ಧಾನ್ಯಗಳಿಗೆ ಹುಳ ಹಿಡಿಯುವುದಿಲ್ಲ.)

ಬೆವರಿನಿಂದ ಮಲಿನವಾದ ಅವಯವಗಳು ನೀರಿನಿಂದ ಶುದ್ಧವಾಗುತ್ತವೆ. (ಕೈಕಾಲುಗಳನ್ನು ತೊಳೆದರೆ, ಸ್ನಾನ ಮಾಡಿದರೆ, ಉತ್ಸಾಹವರ್ಧಕ(ಫ್ರೆಶ್) ಅನಿಸುತ್ತದೆ. ಅದಕ್ಕೆ ‘ಶುದ್ಧಿ’ ಎನ್ನಲಾಗಿದೆ.)

ಬಂಗಾರ, ಬೆಳ್ಳಿ ಈ ಧಾತುಗಳು ಅಗ್ನಿ ಮತ್ತು ನೀರಿನಿಂದ ಶುದ್ಧವಾಗುತ್ತವೆ. (ಬಂಗಾರದ ಆಭರಣಗಳನ್ನು ತಯಾರಿಸುವಾಗ ಬಂಗಾರವನ್ನು ಮೊದಲಿಗೆ ಅಗ್ನಿಯಲ್ಲಿ ಹಾಕುತ್ತಾರೆ. ನಂತರ ನೀರನ್ನು ಉಪಯೋಗಿಸುತ್ತಾರೆ, ಇದರಿಂದ ಧಾತು ಶುದ್ಧವಾಗುತ್ತದೆ.)

ತಾಮ್ರ, ಕಂಚು ಮುಂತಾದ ಧಾತುಗಳು ಪಾತ್ರಕ್ಷಾರ (ಹುಳಿ ಅಂಶವಿರುವ) ಅಥವಾ ನಿಂಬೆಹಣ್ಣು, ಹುಣಸೆ ಈ ಹುಳಿ ಪದಾರ್ಥಗಳಿಂದ ಶುದ್ಧವಾಗುತ್ತವೆ. ಸಾಬೂನು ತಯಾರಿಸುವ ಅನೇಕ ಕಂಪನಿಗಳು ‘ನಿಂಬೆಹಣ್ಣಿನ ಶಕ್ತಿ’ ಎಂದು ಜಾಹೀರಾತು ಮಾಡುತ್ತವೆ.

ಸತ್ಯ ಮಾತುಗಳಿಂದ ಮನಸ್ಸು ಶುದ್ಧವಾಗುತ್ತದೆ.

ಬ್ರಹ್ಮಜ್ಞಾನವು ಬುದ್ಧಿಯನ್ನು ಶುದ್ಧಮಾಡುತ್ತದೆ.

ತಾಯಿ- ಸಹೋದರಿಯರು ಪ್ರತಿ ತಿಂಗಳು ರಜಸ್ವಲೆಯಾದ ನಂತರ ನೀರಿನಿಂದ ಶುದ್ಧವಾಗುತ್ತಾರೆ.

ಇತರರು ನೀಡಿದ ಪೀಡೆಯನ್ನು ಆನಂದದಿಂದ ಸಹಿಸುವುದರಿಂದ ಯಾವ ಶಾಂತಿ ಸಿಗುತ್ತದೆಯೋ, ಅದರಿಂದ ವಿದ್ವಾಂಸರರು ‘ಶುದ್ಧ’ವಾಗುತ್ತಾರೆ.

ಮಲಿನವಾದ ಬಟ್ಟೆಗಳನ್ನು ನೀರಿನಿಂದ ತೊಳೆದಾಗ ಶುದ್ಧವಾಗುತ್ತವೆ.

ಪೂಜೆಗೆ ಕುಳಿತುಕೊಳ್ಳುವಾಗ ಸ್ವಚ್ಛ (ಮಡಿ)ವಸ್ತ್ರಗಳನ್ನು ಬಳಸಲು ಹೇಳಲಾಗಿದೆ. ಅದೇರೀತಿ ಎದುರಿಗೆ ಸಿಕ್ಕವರಿಗೆ ಶೇಕ್ ಹ್ಯಾಂಡ್‌, ಹಗ್‌ಮಾಡದೆ ಕೈ‌ಮುಗಿಯುವುದು, ಮನೆಯೊಳಗಡೆ ಬರುವ ಮುನ್ನ ಕೈ ಕಾಲು ಶುದ್ದಗೊಳಿಸುವುದು ಇತ್ಯಾದಿಗಳನ್ನು ಪಾಲಿಸಿಕೊಂಡು ಬರಲಾಗುತ್ತಿದೆ.

ಹೀಗೆ ಯಾರೆಲ್ಲಾ ಭಾರತೀಯ ಸಂಸ್ಕೃತಿಯನ್ನು ತಿರಸ್ಕಾರದಿಂದ ನೋಡುತ್ತಿದ್ದರೋ ಕೊರೊನಾ ಬಂದ‌ಮೇಲೆ ಭಾರತೀಯ ಸಂಸ್ಕೃತಿಯೇ ಮೇಲೆ ಎಂದು ಸಾಬೀತಾಗಿದೆ.‌ ಈಗ ಯಾರೂ ಒತ್ತಾಯ ಮಾಡದಿದ್ದರೂ ಅನಿವಾರ್ಯವಾಗಿ ಪಾಲನೆ‌ಮಾಡಲೇ ಬೇಕಾದ ಸ್ಥಿತಿ ಬಂದಿದೆ.

GM

Tags

Related Articles

FOR DAILY ALERTS
Close