ಪ್ರಚಲಿತ

ಕೊರೊನಾದ‌ ಬಗ್ಗೆ 300 ವರ್ಷಗಳ ಹಿಂದೆಯೇ ನಿಖರ ಭವಿಷ್ಯ‌ ನುಡಿದಿದ್ದರು ಈ ಕಾಲಜ್ಞಾನಿ….!

ಕೊರೊನಾದ ಹಲವಾರು‌ ಮಂದಿ ಜ್ಯೋತಿಷಿಗಳು ಭವಿಷ್ಯ ನುಡಿದಿರುವುದಾಗಿ ಹೇಳಿದ್ದಾರೆ. ಆದರೆ ಅವೆಲ್ಲಾ ಅಷ್ಟೊಂದು ಸ್ಪಷ್ಟತೆಯಿಂದ ಕೂಡಿಲ್ಲ… ಆದರೆ ಆಂಧ್ರದ ಸ್ವಾಮೀಜಿಯೊಬ್ಬರು ಬರೋಬ್ಬರಿ ೩೦೦ ವರ್ಷಗಳ ಹಿಂದೆ ಕೊರೊನಾದ ಬಗ್ಗೆ ನುಡಿದಿರುವ ಭವಿಷ್ಯ ನಮ್ಮೆಲ್ಲರನ್ನು ಬೆರಗಾಗುವಂತೆ ಮಾಡಿದೆ.‌ ಭಾರತೀಯ ಕಾಲಜ್ಞಾನಿಗಳ ಜ್ಞಾನ ಶಕ್ತಿ ಬೆಚ್ಚಿಬೀಳಿಸುವಂತೆ ಮಾಡಿದೆ.

ಅವರು ಆಂಧ್ರದವರಾಗಿದ್ದು ತೆಲುಗಿನಲ್ಲಿ ಬರೆದಿರುವ ಆ ಸಾಲುಗಳು ಹಲವು ಅರ್ಥಗಳನ್ನು ಕಲ್ಪಿಸಿದೆ.

ತೆಲುಗಿನ ಆ ಸಾಲುಗಳು ಹೀಗಿವೆ…

ಈಶಾನ್ಯ ದಿಕ್ಕುನ ವಿಷಗಾಲಿ ಪುಟ್ಟೇನು
ಲಕ್ಷಲಾದಿ ಪ್ರಜಲು ಸಚ್ಚೇರಯ |
ಕೋರಂಕಿಯನು ಜಬ್ಬು ಕೋಟಿ ಮಂದಿಕಿ ತಗಿಲಿ
ಕೋಡಿ ಲಾಗಾ ತೂಗಿ ಸಚ್ಚೇರಯ ||

ಕನ್ನಡದಲ್ಲಿ ಅದರ ಭಾವಾರ್ಥ

ಈಶಾನ್ಯ ದಿಕ್ಕಿನಲಿ ವಿಷಗಾಳಿ ಪುಟ್ಟುವುದು
ಲಕ್ಷಗಳಲಿ ಜನರು ಸಾಯುವರಯ್ಯ |
ಕೋರಂಕಿಯೆಂಬ ಕಾಯಿಲೆ ಕೋಟಿ ಜನಕೆ ತಗುಲಿ
ಕೋಳಿಯಂತೆ ತೂಗುತ ಸಾಯುವರಯ್ಯ ||

ಇಲ್ಲಿ ಅವರು ಕೋರಂಕಿ ಎಂದು ಆ ಕಾಯಿಲೆಯ ಹೆಸರನ್ನು ಉಲ್ಲೇಖಿಸಿದ್ದಾರೆ. ಕೊರೊನಾ ಹಾಗೂ ಹಾಗೂ ಕೋರಂಕಿಯಲ್ಲಿ ಒಂದು ಅಕ್ಷರವನ್ನು ಹೊರತುಪಡಿಸಿದರೆ ಹೋಲಿಕೆಯಲ್ಲಿ ಅಷ್ಟೊಂದು ಅರ್ಥವ್ಯತ್ಯಾಸವಿಲ್ಲ.

ಆಂಧ್ರದ ಕರ್ನೂಲು ಜಿಲ್ಲೆಯ ಬನಗಾನಿಪಲ್ಲೆಯಲ್ಲಿ ಗೋಪಾಲಕನಾಗಿ ಕೆಲಸ ಮಾಡುತ್ತಿದ್ದ ವಿಶ್ವಕರ್ಮ ಸಮಾಜದ ಶ್ರೀ ಶ್ರೀ ಶ್ರೀ ಪೋತುಲೂರು ವೀರಬ್ರಹ್ಮೇಂದ್ರ ಸ್ವಾಮಿ(1608-1693) ಅವರು ಬರೆದ ‘ಕಾಲಜ್ಞಾನ’ ದಲ್ಲಿನ 114ನೆಯ ಪದ್ಯ ಇದಾಗಿದೆ.

ಈ ಪದ್ಯದ ಸಾಲನ್ನು ಅರ್ಥವಿವರಣೆಗೊಳಿಸಿದಾಗ ಕೊರೊನಾ ಹಾಗೂ ಕೋರಂಕಿಯ ಬಗ್ಗೆ ಸ್ಪಷ್ಟ ಹೋಲಿಕೆಗಳು ಮನದಟ್ಟಾಗುತ್ತದೆ.

ಈಶಾನ್ಯ ದಿಕ್ಕಿನಲಿ ಎಂದರೆ ಚೀನಾ!

ಕೋರಂಕಿ ಎಂದರೆ ಕರೋನಾ!

ಕೋಳಿಯಂತೆ ತೂಗುತ ಸಾಯುವರಯ್ಯ ಎಂಬ ಸಾಲನ್ನು ಗಮನಿಸಿದಾಗ ಕೊರೊನಾದಲ್ಲಿಯೂ ರೋಗಪೀಡಿತ ಕೋಳಿಯ ಲಕ್ಷಣ ಇರುವುದು ಮನದಟ್ಟಾಗುತ್ತದೆ.

ಬರೋಬ್ಬರಿ
ಮುನ್ನೂರು ವರ್ಷಗಳ ಹಿಂದೆಯೇ ಕರೋನಾ ಕುರಿತು ಹೇಳಿದ ವೀರ ಬ್ರಹ್ಮೇಂದ್ರ ಸ್ವಾಮಿಯವರು ಮುಂದಿನ ಐದು ಸಾವಿರ ವರ್ಷಗಳವರೆಗೆ ಮಾನವನ ಜಾತಕ ಹೇಗಿರುತ್ತದೆಂಬುದನ್ನು ಸಹ ಆಗಲೇ ಊಹಿಸಿ ತಿಳಿಯಹೇಳಿದ್ದಾರಂತೆ.

ಅವರು ಹೇಳಿರುವುದು ಇಂದು ಒಂದಕ್ಕೊಂದು ಹೊಂದಿಕೆಯಾದಾಗ ವಿಸ್ಮಯ ಎನಿಸುತ್ತದೆ.

ಕಾಶೀಪಟ್ಟಣ ಹುಟ್ಟಿದ ಸ್ವಾಮಿ ಚಿಕ್ಕಬಳ್ಳಾಪುರದ ಕಳವಾರಹಳ್ಳಿ‌ ಜೀವನ ನಡೆಸುತ್ತಾರೆ. ಬಳಿಕ ಪಾಪಾಗ್ನಿ ಮಠದಲ್ಲಿ ದೇವರ ಸೇವೆಯಲ್ಲಿ ನಿರತರಾಗುತ್ತಾರೆ.

ರವ್ವಲಕೊಂಡ ಎಂಬ ಕೃತಿಯಲ್ಲಿ ಈ ವಿಚಾರ ಬರೆದಿದ್ದರು. ಬನಗಾನಪಲ್ಲಿ ತಮ್ಮ ಕಾಲಜ್ಞಾನದ ಬಗ್ಗೆ ಉಪದೇಶ ಮಾಡಿ, ಯಾಗಂಟಿ ಜೀವಿತವನ್ನು ಕಳೆಯುತ್ತಾರೆ.
ಕಡಪ ಜಿಲ್ಲೆಯ ಕಂದಿಮಲ್ಲಾಯಪಲ್ಲಿ ಸಮಾಧಿಸ್ತರಾಗುತ್ತಾರೆ.

ಭಾಗವತದ ದ್ವಾದಶ ಸ್ಕಂಧದಲ್ಲಿಯೂ ಕಲಿಯುಗದ ಪರಿಸ್ಥಿತಿಯ ಬಗ್ಗೆ ಸೂಚ್ಯವಾಗಿ ಉಲ್ಲೇಖಿಸಲಾಗಿದೆ.

ಇದರಲ್ಲಿ ಒಂದು ಕಡೆ ಕಲಿಯುಗದಲ್ಲಿ ಪ್ರಜೆಗಳು ನಾಡು ಬಿಟ್ಟು ಕಾಡಿಗೆ ತೆರಳುವ ಪ್ರಸಂಗ ಒದಗುತ್ತದೆ. ಕಾಲಕಾಲಕ್ಕೆ ಮಳೆ‌ ಬಾರದು. ಸುಭೀಕ್ಷೆ ಇರದು. ಕ್ಷಾಮ, ಕ್ಷೋಭೆ, ಬಿರುಗಾಳಿ, ಚಂಡಮಾರುತ, ಜಲಪ್ರವಾಹ, ಸುಂಟರಗಾಳಿ ತುಂಬಿಕೊಳ್ಳುತ್ತದೆ. ಕಲಹ, ಹಗೆ, ಸೆಣೆಸಾಟ, ಕ್ರೂರತನ, ಹೊಡೆದಾಟ ನಡೆಯಲಿದೆ.‌ ಕಲಿಯುಗದ ಅನಿಷ್ಟ ಸಂದರ್ಭ ಮಾನವರ ಆಯಸ್ಸು‌ 20-30 ವರ್ಷಗಳಿರಬಹುದಷ್ಟೆ…

ಭಾರತದ ಋಷಿಮುನಿಗಳು ಲಕ್ಷಾಂತರ ವರ್ಷಗಳ ಹಿಂದೆಯೇ ಕಲಿಯುಗದ ಭವಿಷ್ಯವಾಣಿಯನ್ನು ಚೆನ್ನಾಗಿ ಬಲ್ಲವರಾಗಿದ್ದರು. ಭಾಗವತದ ಮೇಲಿನ ಸಾಲುಗಳು ಇಂದಿನ ಪರಿಸ್ಥಿತಿಯ ಬಗ್ಗೆ ಕನ್ನಡಿ ಹಿಡಿದಂತಿದೆ..

ಜೀಎಂ

Tags

Related Articles

FOR DAILY ALERTS
Close