ದೇಶಪ್ರಚಲಿತ

ಕೊರೊನಾದ ಬಗ್ಗೆ ಜನರನ್ನು ಭೀತಿಗೊಳಿಸಿದ ಕನ್ನಡದ ಮೀಡಿಯಾಗಳಿಗೆ ಕೊರೊನಾ ಔಷಧಿ ಅಭಿವೃದ್ಧಿಪಡಿಸಿದ ಕನ್ನಡದ ಹುಡುಗನ ಬಗ್ಗೆ ಗೊತ್ತಾದದ್ದೇ ತಡವಾಗಿ!

ಮ್ಮ ಟಿ.ಆರ್.ಪಿ ಲಾಲಸೆಗಾಗಿ ಕೊರೊನಾದ ಹೆಸರಲ್ಲಿ ಜನರನ್ನು ಇನ್ನಿಲ್ಲದಂತೆ ಭೀತಿಗೊಳಿಸಿದ ಮೀಡಿಯಾಗಳಿಗೆ ಕನ್ನಡದ ಹುಡುಗನೊಬ್ಬ ಕೊರೋನಾದ ಔಷಧಿ ಅಭಿವೃದ್ಧಿಪಡಿಸುತ್ತಿರುವುದು ಗೊತ್ತೇ ಆಗಲಿಲ್ಲ.
ಕೆಲವು ದಿನಗಳ ಹಿಂದೆ ಪುಣೆಯ ಆರೋಗ್ಯಾಧಿಕಾರಿಗಳು ಕೊರೊನಾದ ಬಗ್ಗೆ, ಕೋವಿದ್-19ಗೆ ವ್ಯಾಕ್ಸಿನ್ ಅಭಿವೃದ್ಧಪಡಿಸಲು ಕನಿಷ್ಠವೆಂದರೂ ಒಂದೂವರೆ ವರ್ಷಗಳು ಬೇಕಾಗಬಹುದು ಎಂದು ಹೇಳಿದ್ದರು. ಹಿರಿಯ ವಿಜ್ಞಾನಿಗಳೆಲ್ಲಾ ಕಂಗಾಲಾಗಿ ಕುಳಿತಿರಬೇಕಾದರೆ ಕರ್ನಾಕದ ಹುಡುಗ ಕೋವಿದ್ -19ಗೆ ವ್ಯಾಕ್ಸಿನ್ ಕಂಡುಹಿಡಿಯುವ ಯುರೋಪ್ ರಾಷ್ಟ್ರಗಳ ತಂಡದಲ್ಲಿ ಸ್ಥಾನ ಪಡೆದಿದ್ದಾನೆ.
ಇವರ ಹೆಸರು ಡಾ. ಮಹದೇಶ ಪ್ರಸಾದ್, ವಿಶ್ವದ ಪ್ರಮುಖ ವಿಜ್ಞಾನಿಗಳಲ್ಲಿ ಇವರೂ ಒಬ್ಬರು.
ಇವರು ಹಾಸನ ಜಿಲ್ಲೆಯ ಅರಕಲಗೂಡಿನ ನಿವಾಸಿ. ಅರಕಲಗೂಡು ಪಟ್ಟಣದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪಿಯು, ಹಾಸನದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿಎಸ್ಸಿಯಲ್ಲಿ ಪದವಿ, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿಗಳಿಸಿದ ಬಳಿಕ ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಪೋಸ್ಟ್ ಡಾಕ್ಟರಲ್ ರೀಸರ್ಚರ್ ಆಗಿ ಆಗಿ ಕಾರ್ಯನಿರ್ವಹಿಸಿದ್ದರು. ಅಲ್ಲಿಂದ ಬೆಲ್ಜಿಯಂಗೆ ತೆರಳಿದ ಇವರು ಲಿಂಕೋಪಿಂಗ್ ವಿವಿಯಲ್ಲಿ ಪೋಸ್ಟ್ ಡಾಕ್ಟರಲ್ ರೀಸರ್ಚರ್ ಆಗಿ ಸೇವೆ ಸಲ್ಲಿಸುತ್ತಿದ್ದು, ಲಿಯುವೆನ್ ನಗರದಲ್ಲಿ ನೆಲೆಸಿದ್ದಾರೆ. ಇವರ ಅಮೋಘ ಸಾಧನೆ ಏನೆಂದರೆ ಕೊರೊನಾ ವೈರಸ್‍ಗೆ ಔಷಧಿ ಕಂಡುಹಿಡಿಯವ ಯುರೋಪ್‍ನ 10 ತಂಡಗಳ ಪೈಕಿ ಬೆಲ್ಜಿಯಂ ವಿವಿಯ ಸಂಶೋಧನಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಕೋವಿಡ್ 19ಗೆ ವ್ಯಾಕ್ಸಿನ್ ಕಂಡು ಹಿಡಿಯಲು ಯೂರೋಪ್ ರಾಷ್ಟ್ರಗಳು ಒಗ್ಗೂಡಿ 10 ತಂಡಗಳನ್ನು ರಚಿಸಿವೆ. ಈ ತಂಡದಲ್ಲಿ ಕಾರ್ಯ ನಿರ್ವಹಿಸಲು ಭಾರತದ ವಿಜ್ಞಾನಿ ಡಾ. ಮಹದೇಶ ಪ್ರಸಾದ್ ಅವರನ್ನು ಸ್ವತಃ ಆಹ್ವಾನಿಸಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಇವರೀಗ ಬೆಲ್ಜಿಯಂ ದೇಶದ ತಂಡದಲ್ಲಿದ್ದಾರೆ.
ಲಿಂಕೋಪಿಂಗ್ ವಿವಿ ಯುರೋಪ್‍ನ ಪ್ರಮುಖ ವಿವಿ ಆಗಿದ್ದು ಅದರಲ್ಲಿ ಡಾ. ಮಹದೇಶ ಪ್ರಸಾದ್ ಇರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ. ಕರೊನಾಗೆ ಔಷಧಿ ಕಂಡುಹಿಡಿಯಲು 10 ಸಂಶೋಧನಾ ತಂಡದ ಪೈಕಿ ಬೆಲ್ಜಿಯಂ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ಔಷಧ ಕಂಡು ಹಿಡಿಯುವ ಸಂಶೋಧನೆಯಲ್ಲಿ ಮಹದೇಶ ಪ್ರಸಾದ್ ಅವರ ತಂಡ ತೊಡಗಿದ್ದು ಕೆಲವೇ ದಿನಗಳಲ್ಲಿ ಔಷಧಿ ಕಂಡುಹಿಡಿಯುವ ಭರವಸೆ ನೀಡಿದೆ.

ಗಿರೀಶ್

Tags

Related Articles

FOR DAILY ALERTS
Close