ಪ್ರಚಲಿತ

ಕೊರೊನಾ: ಪ್ರಪಂಚದ ಮೂರನೇ‌‌ ಸ್ಥಾನಕ್ಕೆ ಜಿಗಿದ ಅಮೆರಿಕ, ಭಾರತಕ್ಕಿದು ಎಚ್ಚರಿಕೆಯ ಕರೆಗಂಟೆ…!

ಕೇವಲ ಒಂದು‌ದಿನದ ಹಿಂದೆ ಕೊರೊನಾ ಭಾದಿತರ ಸಂಖ್ಯೆಯಲ್ಲಿ ಪ್ರಪಂಚದ 40ರ ಆಸುಪಾಸಿನಲ್ಲಿದ್ದ‌ ಅಮೆರಿಕಾ ಸಂಯುಕ್ತ ಸಂಸ್ಥಾನ(USA) ಇಂದು ಮೂರನೇ‌ ಸ್ಥಾನಕ್ಕೆ‌ ಜಿಗಿದಿದೆ.

ಜಗತ್ತಿನ ಅತ್ಯಂತ ಶ್ರೀಮಂತ, ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ಅಮೆರಿಕದಂಥ ಅಮೆರಿಕಾವೇ ಇಂದು ಕೊರೊನಾದಲ್ಲಿ ಮೂರನೇ ಸ್ಥಾನಕ್ಕೆ ಏರಿದೆ ಎಂದರೆ ನಿಜಕ್ಕೂ ಆಲೋಚನೆ ಮಾಡುವ ವಿಚಾರ

ಇದು ಭಾರತದ‌ ಪಾಲಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ. ಯಾಕೆಂದರೆ ಭಾರತದಂಥಾ ಜನಸಂಖ್ಯಾ ಸಾಂದ್ರತೆಯನ್ನು ಹೊಂದಿರುವ ರಾಷ್ಟ್ರದಲ್ಲಿ ಕೊರೊನಾ ಸ್ಫೋಟಿಸಿದರೆ ಮುಂದೆ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ… ನಮ್ಮ ಸರಕಾರ ರೂಪಿಸಿದ ನಿಯಮವನ್ನು ಗಾಳಿಗೆ ತೂರಿದರೆ ಅಪಾಯ ಕಟ್ಟಿಟ್ಟ ಬುತ್ತಿ….

 

ಅಮೆರಿಕ 40 ಸ್ಥಾನದಲ್ಲಿದಾಗ ಭಾರತ 47ರ ಸ್ಥಾನದಲ್ಲಿತ್ತು…:

ಕೇವಲ ಎರಡು ದಿನಗಳ ಹಿಂದೆಯಷ್ಟೇ ಅಮೆರಿಕಾ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಪ್ರಪಂಚದ 40ರ ಆಸುಪಾಸಿನಲ್ಲಿದ್ದಾಗ ಭಾರತ 47ರ ಸ್ಥಾನದಲ್ಲಿತ್ತು. ಇದೀಗ ಭಾರತದ ಸ್ಥಾನ 44ರಲ್ಲಿದೆ. ಅಮೆರಿಕ ಕೇವಲ ಒಂದು ದಿನದ ಅಂತರದಲ್ಲಿ12,000 ಕ್ಕೂ ಅಧಿಕ ಮಂದಿ ಕೊರೊನಾ ಸೋಂಕಿಗೀಡಾಗಿ ಮೂರನೇ ಸ್ಥಾನಕ್ಕೇರಿದೆ.

ಭಾರತದಲ್ಲಿ ನಿನ್ನೆ ಮತ್ತೆ 39 ಹೊಸ ಪ್ರಕರಣಗಳು ಕಾಣಿಸಿ ಒಟ್ಟು 410 ಕೊರೊನಾ ಸೋಂಕಿಗೀಡಾಗಿದ್ದಾರೆ. ಕೇವಲ ಎರಡು ದಿನದ ಅವಧಿಯಲ್ಲಿ ಅಮೆರಿಕಾದ ಚಿತ್ರಣವನ್ನೇ ಬದಲಿಸಿದ ಕೊರೊನಾ ಭಾರತದ ಚಿತ್ರಣವನ್ನು ಬದಲಿಸುವುದನ್ನು ಅಲ್ಲಗಳೆಯುವಂತಿಲ್ಲ.

ಕೊರೊನಾ ನಿಯಂತ್ರಣ ಕ್ಕೆ ನಮ್ಮ ಸರಕಾರಗಳು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಸರಕಾರ ನೀಡಿದ ಸೂಚನೆಗಳನ್ನು ಅಗತ್ಯವಾಗಿ ಪಾಲಿಸೋಣ.

‘ಜನತಾ ಕಫ್ರ್ಯೂ’ ಯಶಸ್ವಿಯಾಯಿತು ನಿಜ. ಆದರೆ ಇದು ಸುದೀರ್ಘ ಹೋರಾಟದ, ಯುದ್ಧದಲ್ಲಿ ವಿಜಯದ ಆರಂಭ ಎಂದು ಮೋದಿ ಹೇಳಿದ್ದಾರೆ. ನಮ್ಮ ಮನುಕುಲದ ರಕ್ಷಣೆಗಾಗಿ ನಮಗೆ ನಾವೇ ಜನತಾ ಕರ್ಫ್ಯೂವನ್ನು ಮುಂದುವರಿಸೋಣ.

ಕೊರೊನಾ ನಿರ್ಮೂಲನೆಗೆ ದೃಢ ನಿಶ್ಚಯ ಕೈಗೊಂಡು ಸಾಮಾಜಿಕ ಅಂತರ ((Social Distancing) ಕಾಯ್ದುಕೊಳ್ಳೋಣ.

ಲಾಕ್‍ಡೌನ್ ಘೋಷಿಸಲಾದ ಜಿಲ್ಲೆಗಳು ಮತ್ತು ರಾಜ್ಯಗಳಲ್ಲಿ ತೀರಾ ಅವಶ್ಯಕತೆ, ಅನಿವಾರ್ಯತೆಯಿಲ್ಲದೆ ಮನೆಗಳನ್ನು ಬಿಟ್ಟು ಹೊರಬರುವುದು ಬೇಡ. ಮನೆಯಲ್ಲೇ ಇರೋಣ ಎಂಬ ಸಂಕಲ್ಪ ಮಾಡೋಣ.

ಭಾರತ ಕೊರೊನಾ ಮುಕ್ತ ದೇಶ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ.‌ಅಲ್ಲದೆ ನಮಗಾಗಿ ದುಡಿಯುವ ವೈದ್ಯ ಸಮುದಾಯದ ಶ್ರೇಯಸ್ಸಿಗಾಗಿ ಪ್ರಾರ್ಥಿಸೋಣ… ಕೊರೊನಾಗೆ ಆದಷ್ಟು ಬೇಗ ಔಷಧಿ ಸಿಗುವಂತಾಗಲಿ ಎಂದು ದೇವರಲ್ಲಿ ಬೇಡೋಣ….

ಜೀಎಂ

Tags

Related Articles

FOR DAILY ALERTS
Close