ಪ್ರಚಲಿತ

ಕೊರೋನಾ ವೈರಸ್ ತಡೆಗೆ ಭಾರತೀಯ ರೈಲ್ವೆ ಭಾರೀ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳುತ್ತಿದೆ…

ಕೋವಿಡ್-19 ಮಹಾಮಾರಿ ವೈರಸ್ ಇಡೀ ವಿಶ್ವವನ್ನೇ ನಡುಗಿಸಿದೆ. ಭಾರತಕ್ಕೆ ಕೋರೊನಾ ವೈರಸ್ ಕಾಲಿಡುತ್ತಲೇ ಇತ್ತ ಸರ್ಕಾರ ಭಾರೀ ನಿಗಾವಹಿಸುತ್ತಿದೆ. ಒಂದು ಕಡೆಯಲ್ಲಿ ಶಾಲಾ ಕಾಲೇಜು, ಥಿಯೇಟರ್, ಮಾಲ್‍ಗಳನ್ನು ಬಂದ್ ಮಾಡಿದರೆ ಇತ್ತ ರೈಲ್ವೆಯೂ ಈ ಸೋಂಕು ಹರಡದಂದೆ ಭಾರೀ ನಿಗಾವಹಿಸುತ್ತಿದೆ. ಅನಗತ್ಯ ಪ್ರಯಾಣವನ್ನು ಕುಗ್ಗಿಸುವುದಕ್ಕೋಸ್ಕರ ರೋಗಿಗಳು, ವಿದ್ಯಾರ್ಥಿಗಳು ಮತ್ತು ದಿವ್ಯಾಂಗರ ವಿಭಾಗವನ್ನು ಹೊರತುಪಡಿಸಿ ಉಳಿದ ಎಲ್ಲಾ ಟಿಕೆಟ್‍ಗಳ ರಿಯಾಯಿತಿ ಕಾಯ್ದಿರಿಸುವಿಕೆಯನ್ನು ಮಾರ್ಚ್ 20ರಿಂದ ಅಮಾನತುಗೊಳಿಸಲಾಗುತ್ತಿದೆ. ಅಲ್ಲದೆ ಅನಗತ್ಯ ಜನಸಂಖ್ಯೆಯನ್ನು ತಗ್ಗಿಸುವುದಕ್ಕೋಸ್ಕರ ಟಿಕೆಟ್ ಬೆಲೆಯನ್ನು 50 ರೂಪಾಯಿಗೆ ಹೆಚ್ಚಿಸಲಾಗಿದೆ. ಪ್ರಯಾಣದ ವೇಳೆ ಅವರಿಗೆ ಈ ವೈರಸ್ ಬಗ್ಗೆ ಜಾಗರೂಕತೆಯ ಮಾಹಿತಿಯನ್ನು ನೀಡಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ 155 ಲೋ ಆಕ್ಯುಪೆನ್ಸೀ ರೈಲುಗಳನ್ನು ಮಾರ್ಚ್ 31ರವೆರೆಗೆ ರೈಲ್ವೆ ಇಲಾಖೆ ರದ್ದುಪಡಿಸಿದೆ. ರೈಲ್ವೆ ನಿಲ್ದಾಣಗಳು ಮತ್ತು ರೈಲುಗಳ ಸಾರ್ವಜನಿಕ ವ್ಯವಸ್ಥೆಯಲ್ಲಿ ಕೊರೊನಾ ವೈರಸ್ ಬಗೆಗಿನ ಬಗೆಗಿನ ನಿಯಮಿತವಾಗಿ ಪ್ರಕಟಣೆಯನ್ನು ಮಾಡಲಾಗುತ್ತಿದೆ.

ಕೊರೋನಾ ಹೋರಾಟದಲ್ಲಿ ಭಾರತದ ನೇತೃತ್ವವಹಿಸುತ್ತಿರುವುದು ನಿಜಕ್ಕೂ ಹೆಮ್ಮೆ ತಂದಿದೆ ಎಂಬುವುದು ಹಲವಾರು ರಾಷ್ಟ್ರಗಳು ಹೇಳುತ್ತಿದೆ. ಭಾರತಕ್ಕೆ ಕೊರೋನಾ ವೈರಸ್ ಕಾಲಿಟ್ಟ ಕೂಡಲೇ ಸರ್ಕಾರ ಭಾರೀ ಎಚ್ಚರಿಕೆಯ ನಡೆಯನ್ನಿಟ್ಟಿದೆ. ಕೊರೋನಾ ಭೀತಿಯಲ್ಲಿರುವ 1500ಕ್ಕಿಂತಲೂ ಹೆಚ್ಚು ಭಾರತೀಯರನ್ನು ಈಗಾಗಲೇ ಮೋದಿ ಸರ್ಕಾರ ಕರೆ ತಂದಿದೆ. ದೇಶವಲ್ಲದೆ ವಿದೇಶದಲ್ಲಿಯೂ ಭಾರತೀಯರು ತೊಂದರೆಗೆ ಸಿಲುಕಿದರೆ ಮೋದಿ ಸರ್ಕಾರ ತಕ್ಷಣ ಸ್ಪಂದಿಸುತ್ತಿರುವುದಕ್ಕೆ ಇಡೀ ವಿಶ್ವವೇ ಭಾರತದ ನಡೆಗೆ ಖುಷಿ ವ್ಯಕ್ತ ಪಡಿಸುತ್ತಿದೆ.

Tags

Related Articles

FOR DAILY ALERTS
Close