ಪ್ರಚಲಿತ

ಕೊರೋನಾ ವೈರಸ್ ವಿರುದ್ಧ ಹೋರಾಡುವ ಸಾಮಥ್ರ್ಯ ಭಾರತಕ್ಕಿದೆ- ವಿಶ್ವ ಆರೋಗ್ಯ ಸಂಸ್ಥೆ

ದಿನದಿಂದ ದಿನಕ್ಕೆ ಇಡೀ ವಿಶ್ವವನ್ನೇ ನಡುಗಿಸುತ್ತಿದೆ ಈ ಮಹಾಮಾರಿ ಕೊರೋನಾ ವೈರಸ್. ಭಾರತಕ್ಕೆ ಈ ಮಹಾಮಾರಿ ಕಾಲಿಟ್ಟ ಕೂಡಲೇ ಸರ್ಕಾರ ಈ ಬಗ್ಗೆ ಭಾರೀ ನಿಗಾವಹಿಸುತ್ತಿದೆ. ಆದರೂ ದಿನದಿಂದ ದಿನಕ್ಕೆ ಜನರ ನಿರ್ಲಕ್ಷ್ಯತನದಿಂದ ಕೊರೊನಾ ಹರಡುವ ಸಂಖ್ಯೆ ಜಾಸ್ತಿಯಾಗಿದೆ. ಅದಕ್ಕಾಗಿ ಸರ್ಕಾರ ಮತ್ತಷ್ಟು ನಿಗಾವಹಿಸಿ ಸಂಪೂರ್ಣ ಭಾರತವನ್ನು ಲಾಕ್‍ಡೌನ್ ಮಾಡುವಂತಾಗಿದೆ. ನಮ್ಮನ್ನು ನಮ್ಮ ಕುಟುಂಬವನ್ನು ನಮ್ಮ ದೇಶವನ್ನು ಕಾಪಾಡಿಕೊಳ್ಳಬೇಕಾದರೆ ನಾವೇ ಸಂಕಲ್ಪ ಮಾಡಿಕೊಳ್ಳಬೇಕು. ಮನೆಯಿಂದ ಹೊರಬರದಂತೆ ನಾವೇ ನಮಗೆ ಲಕ್ಷ್ಮಣ ರೇಖೆ ಹಾಕಿಕೊಳ್ಳಬೇಕು. ಇಲ್ಲದೆ ಇದ್ದರೆ ಇಟಲಿ, ಫ್ರಾನ್ಸ್ ಚೀನಾದ ರೀತಿ ಪರದಾಟ ಮಾಡೋ ಪರಿಸ್ಥಿತಿ ಎದುರಾಗಬಹುದು. ಅದಕ್ಕಾಗಿಯೇ ಸರ್ಕಾರದ ರೀತಿ ನೀತಿಗಳನ್ನು ಪಾಲಿಸುವುದು ಒಳಿತು. ಕೊರೊನಾ ವೈರಸ್ ವಿರುದ್ಧ ಹೋರಾಡುವ ಶಕ್ತಿ ಭಾರತಕ್ಕಿದೆ ಎಂಬ ಮಾತನ್ನೂ ಇದೀಗ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಹೌದು… ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಸಾಮಥ್ರ್ಯ ಭಾರತಕ್ಕೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಮೈಕಲ್ ಜೆ ರಿಯಾನ್ ಅವರು ಅಭಿಪ್ರಾಯಿಸಿದ್ದಾರೆ. ಭಾರತವು ಈ ಹಿಂದೆ ಎರಡು ಭಯಾನಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಿ ಗೆದ್ದಿದೆ ಎನ್ನುವುದನ್ನು ಅವರು ಪ್ರಸ್ತಾಪಿಸಿದ್ದಾರೆ. ಸಿಡುಬು ಮತ್ತು ಪೋಲಿಯೋ ಎಂಬ ಎರಡು ಭಯಾನಕ ಸಾಂಕ್ರಾಮಿಕ ರೋಗವನ್ನು ಭಾರತವು ಅತ್ಯಂತ ಯಶಸ್ವಿಯಾಗಿ ನಿರ್ಮೂಲನೆ ಮಾಡಿದೆ. ಸಾಂಕ್ರಾಮಿಕ ರೋಗವನ್ನು ನಿರ್ಮೂಲನೆ ಮಾಡುವಲ್ಲಿ ಭಾರತಕ್ಕೆ ಉತ್ತಮ ಅನುಭವವಿದೆ. ಹೀಗಾಗಿ ಅದು ಕೋವಿಡ್-19 ವಿರುದ್ಧವೂ ಜಯಗಳಿಸಲಿದೆ ಎಂದು ಅವರು ಹೇಳಿದ್ದಾರೆ. ಹಿಂದೆ ಮಾಡಿದಂತೆಯೇ ಈಗ ಕೂಡಾ ಭಾರತದಂತಹ ದೇಶಗಳು ಜಗತ್ತಿಗೆ ದಾರಿ ತೋರಿಸಬೇಕಾದ ಅನಿವಾರ್ಯತೆ ಇದೆ ಎಂದು ಅವರು ಹೇಳಿದ್ದಾರೆ. . ಒಟ್ಟಾರೆಯಾಗಿ ತಮ್ಮನ್ನು, ತಮ್ಮ ಕುಟುಂಬವನ್ನು ಹಾಗೂ ದೇಶದ ರಕ್ಷಣೆಯನ್ನು ಮಾಡಬೇಕಾದರೆ ನಾವು ಮನೆಯಲ್ಲಿಯೇ ಇದ್ದು ಈ ವೈರಸ್  ಇತರಿಗೆ ಹರಡಿಸದಂತೆ ನಿಗಾವಹಿಸಿ…

Tags

Related Articles

FOR DAILY ALERTS
Close