ಅಂಕಣಪ್ರಚಲಿತ

ಕೊಲೆಗಡುಕನ ಬೆಂಬಲಕ್ಕೆ ನಿಲ್ಲು ಎಂದನಾ ಸಿದ್ದರಾಮಯ್ಯ?

ಜಗತ್ತಿನ ಯಾವ ರಾಷ್ಟ್ರಗಳು ಕೂಡಾ ಈ ಸಿದ್ರಾಮಯ್ಯನಂತಹ ದುರಹಂಕಾರಿ,ಕುಲಗೆಟ್ಟ ಮುಖ್ಯಮಂತ್ರಿಯನ್ನು ನೋಡಿರಲು ಸಾಧ್ಯವೇ ಇಲ್ಲ. ಚಿಕ್ಕ ಮಗುವಿನಿಂದ ಹಿಡಿದು ವೃದ್ಧರ ತನಕ ಛೀಮಾರಿ ಹಾಕಿಸಿಕೊಂಡ ಮುಖ್ಯಮಂತ್ರಿ ಸಿದ್ರಮಾಯ್ಯನವರು. ಸಿದ್ರಾಮಯ್ಯನಂತಹ ಲಜ್ಜೆಗೆಟ್ಟ,ನಾಚಿಕೆಯಿಲ್ಲದ,ದುರಹಂಕಾರಿ ಮುಖ್ಯಮಂತ್ರಿಯನ್ನು ಭಾರತ ತನ್ನ ಇತಿಹಾಸದಲ್ಲಿ ನೋಡಿರಲೇ ಇಲ್ಲ. ಕನ್ನಡಿಗರ ದುರಾದೃಷ್ಟವೋ ಏನೋ ಸಿದ್ರಾಮಯ್ಯನಂತವರು ನಮ್ಮನ್ನಾಳಿ ಇಡೀ ರಾಜ್ಯವನ್ನು ಕುಲಗೆಡಿಸಿ ಬಿಟ್ಟಿದ್ದಾರೆ. ಸಿದ್ರಾಮಯ್ಯನವರ ಸರ್ಕಾರದಲ್ಲಿ ಹಿಂದೆಂದೂ ಆಗದಂತಹ ಅನಾಹುತಗಳು ನಡೆದು ಹೋಗಿವೆ. ಅದು ಸಹಜವಲ್ಲ, ಕಾರಣ ಸಿದ್ರಾಮಯ್ಯನವರೇ. ಸಾಲು ಸಾಲು ಹಿಂದುಗಳ ಕಗ್ಗೊಲೆ ಒಂದು ಕಡೆ ಆದರೆ ನಿಷ್ಠಾವಂತ ಪೋಲಿಸ್ ಅಧಿಕಾರಿಗಳು ಕೂಡಾ ಸಿದ್ರಾಮಯ್ಯನವರ ಭಂಡ ಸರ್ಕಾರದಿಂದ ಸಾವಿಗೀಡಾಗಿದ್ದಾರೆ.

ದಕ್ಷ ಅಧಿಕಾರಿ ಡಿ.ಕೆ.ರವಿ ಅವರ ನೋವನ್ನು ಮರೆಯುವ ಮುಂಚೆಯೇ ಪೋಲಿಸ್ ಅಧಿಕಾರಿ ಮಲ್ಲಿಕಾರ್ಜುನ್ ಬಂಡೆಯವರ ಹತ್ಯೆಯಾಯಿತು. ಮಲ್ಲಿಕಾರ್ಜುನ್ ಬಂಡೆಯವರ ಹತ್ಯೆಯ ನೋವಲ್ಲಿ ಕರ್ನಾಟಕದ ಜನ ಇರಬೇಕಾದರೆ ಡಿ.ವೈ.ಎಸ್.ಪಿ ಗಣಪತಿಯವರ ಸಾವಿನ ಸುದ್ದಿ ಆಘಾತ ಮಾಡಿತ್ತು. ಇವರ ಹೊರತಾಗಿಯೂ ಈ ಸಿದ್ರಾಮಯ್ಯನ ಸರಕಾರ ಡಿ.ಐ.ಜಿ ರೂಪಾ ಅವರಿಗೆ ಕಿರುಕುಳ ಕೊಟ್ಟಿದೆ. ಡಿ.ವೈ.ಎಸ್.ಪಿ ಅನುಪಮಾ ಶೆಣೈ ಅವರು ರಾಜೀನಾಮೆ ಕೊಡುವಂತೆ ಮಾಡಿದ್ದು ಇದೇ ಸಿದ್ರಾಮಯ್ಯನ ಸರ್ಕಾರ.

ತಾನು ಏನಾದರೂ ಆಗಿ ಸತ್ತರೆ ಅದಕ್ಕೆ ಕೆ.ಜೆ.ಜಾರ್ಜ್ ಮತ್ತು ಇಬ್ಬರು ಪೋಲಿಸ್ ಉನ್ನತಾಧಿಕಾರಿಗಳೇ ಕಾರಣ ಎಂದು ಡಿ.ವೈ.ಎಸ್.ಪಿ ಗಣಪತಿಯವರು ಸ್ಪಷ್ಠವಾಗಿ ಖಾಸಗಿ ಮಾಧ್ಯಮದಲ್ಲಿ ಹೇಳಿದ್ದರು. ಅವರು
ಹೇಳಿದ್ದನ್ನ ಇಡೀ ಕರ್ನಾಟಕದ ಜನತೆ ನೋಡಿತ್ತು.
ಇಷ್ಟೆಲ್ಲಾ ಸಾಕ್ಷಿ ಲಭ್ಯವಿದ್ದರೂ ಕೂಡಾ ಕೆ.ಜೆ.ಜಾರ್ಜ್ ರನ್ನು ಬಂಧಿಸಲಿಲ್ಲ,ಸಂಪುಟದಿಂದ ವಜಾಗೊಳಿಸಲಿಲ್ಲ ಬದಲಿಗೆ ಕೆ.ಜೆ.ಜಾರ್ಜ್ ಪರ ಸ್ವತಃ ಸಿದ್ರಾಮಯ್ಯನವರೇ ಬ್ಯಾಟಿಂಗ್ ಮಾಡಿದ್ದರು. ಕೆ.ಜೆ.ಜಾರ್ಜ್ ಪರ ಬ್ಯಾಟಿಂಗ್ ಮಾಡಿದ್ದಲ್ಲದೇ ಡಿ.ವೈ.ಎಸ್.ಪಿ ಗಣಪತಿಯವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು , ಅವರ ಕಟುಂಬದಲ್ಲಿ ಏನೇನೋ ತೊಂದರೆಗಳಿದ್ದವು ಹೀಗಾಗಿ ಗಣಪತಿಯವರು ಆತ್ಮಹತ್ಯೆ ಮಾಡ್ಕೊಂಡಿದಾರೆ ಎಂದು ಸ್ವತಃ ಸಿದ್ರಾಮಯ್ಯನವರೇ ಜಾರ್ಜ್ ಪರ ನಿಂತರು.

ಕೊನೆಗೆ ಒತ್ತಾಯದ ಮೇರೆಗೆ ತಾನೇ ರಾಜ್ಯ ತನಿಖಾ ದಳದಿಂದಲೆ ತನಿಖೆ ನಡೆಸಿ ಗಣಪತಿಯವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅದಕ್ಕೆ ಅವರ ಮಾನಸೀಕ ಖಿನ್ನತೆಯೇ ಕಾರಣವೆಂದು ಜಾರ್ಜ್ ಗೆ ಕ್ಲೀನ್ ಚಿಟ್ ಕೊಡಿಸಿ ಕನ್ನಡಿಗರನ್ನು ಮೋಸ ಮಾಡಲು ಪ್ರಯತ್ನಿಸಿದರು.
ಇಂತಹ ಕುಲಗೆಟ್ಟ ಮುಖ್ಯಮಂತ್ರಿಗಳನ್ನು ಊಹಿಸಕೊಳ್ಳಲು ಸಾಧ್ಯವೇ ಇಲ್ಲ. ಒಬ್ಬ ದಕ್ಷ ಪೋಲಿಸ್ ಅಧಿಕಾರಿಯ ಸಾವನ್ನು ತಮಗೆ ಬೇಕಾದ ರೀತಿಯಲ್ಲಿ ತನಿಖೆ ನಡೆಸಿ ಕೇಸ್ ನ್ನು ಮುಚ್ಚು ಹಾಕುವ ಪ್ರಯತ್ನ ಮಾಡುತ್ತಾರೆಂದಾದರೆ , ಜನಸಾಮಾನ್ಯನ ಕೊಲೆಯಾದರೆ ಗತಿ ಏನು? ಉನ್ನತ ಪೋಲಿಸ್ ಅಧಿಕಾರಿಯ ಕೇಸ್ ನ್ನೇ ಮುಚ್ಚಿ ಹಾಕುವ ಪ್ರಯತ್ನ.
ರಾಜ್ಯ ಸರ್ಕಾರವೇನೋ ಆ ಕೇಸ್ ನ್ನು ಮುಚ್ಚಿ ಹಾಕಲು ಪ್ರಯತ್ನಿಸಿತು ಆದರೆ ಗಣಪತಿಯವರ ತಂದೆ ಅದರಿಂದ ರೋಶಿ ಹೋಗಿ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದರು. ಆಗ ಸುಪ್ರಿಂ ಕೋರ್ಟ್ ಸಿ.ಬಿ.ಐ ತನಿಖೆಗೆ ಆದೇಶ ನೀಡಿತು.
ರಾಜ್ಯ ಕಾಂಗ್ರೆಸ್ ಸರ್ಕಾರ ಹೇಗಾದರೂ ಮಾಡಿ ಜಾರ್ಜ್ ನಿರಪರಾಧಿ ಅಂತ ಸಾಬೀತುಪಡಿಸೋಕೆ ನಾನಾ ರೀತಿಯ ಕಸರತ್ತು ನಡೆಸಿ ಕೊನೆಗೂ ಸಿಬಿಐ ಬಲೆಗೆ ಬೀಳೋ ಪರಿಸ್ಥಿತಿಗೆ ಬಂದು ನಿಂತಿದೆ. ಈಗ ಸಿ.ಬಿ‌. ಐ ತನಿಖೆ ಬಲು ಚುರುಕಾಗಿ ಸಾಗಿದೆ. ಪ್ರಕರಣಕ್ಕೆ ದಿನಕ್ಕೊಂದು ತಿರುವು ಸಿಗುತ್ತಿದೆ. ಗಣಪತಿಯವರ ಮೃತದೇಹ ಸಿಕ್ಕ ರೂಮಿನಲ್ಲಿ ಒಂದು ಬುಲೆಟ್(ಗುಂಡು) ಸಿಕ್ಕಿದೆ. ಅದರಿಂದ ತನಿಖೆ ಮತ್ತಷ್ಟು ಚುರುಕುಗೊಂಡಿದೆ.

ಈಗ ಮತ್ತೊಂದು ತಿರುವು ಸಿಕ್ಕಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯೆಯಿಂದ ಸ್ಪೋಟಕ ಮಾಹಿತಿಯೊಂದು ಹೊರಬಿದ್ದಿದೆ. ಮಡಿಕೇರಿ ಸರ್ಕಾರಿ ಆಸ್ಪತ್ರೆ ವೈದ್ಯೆ ಡಾ. ಶೈಲಜಾ ಅವರು ಸಿಬಿಐ ಅಧಿಕಾರಿಗಳ ಎದುರು ಸ್ಫೋಟಕ ಸಂಗತಿ ಬಾಯ್ಬಿಟ್ಟಿದ್ದಾರೆ. ಸರ್ಕಾರದ ಸೂಚನೆಯಂತೆಯೇ ಮರಣೋತ್ತರ ಪರೀಕ್ಷೆ ನಡೆದಿತ್ತು ಎಂದು ವೈದ್ಯೆಯು ಹೇಳಿದ್ದು, ಗಣಪತಿ ಮರಣೋತ್ತರ ಪರೀಕ್ಷೆಯಲ್ಲಿ ಸರ್ಕಾರದ ಹಸ್ತಕ್ಷೇಪ ಬಹಿರಂಗವಾಗಿದೆ. “ಸರ್ಕಾರದ ಸೂಚನೆಯಂತೆ ನಾನು ಮರಣೋತ್ತರ ಪರೀಕ್ಷೆ ನಡೆಸಿದ್ದೇನೆ, ಆತ್ಮಹತ್ಯೆ ಪ್ರಕರಣ ಎಂದು ಮರಣೋತ್ತರ ಪರೀಕ್ಷೆ ನಡೆಸುವಂತೆ ಸರ್ಕಾರ ಸೂಚಿಸಿತ್ತು” ಎಂದು ಸಿಬಿಐ ಅಧಿಕಾರಿಗಳ ಮುಂದೆ ಡಾ. ಶೈಲಜಾ ಹೇಳಿದ್ದಾರೆ. ಸರ್ಕಾರ ಗಣಪತಿಯವರ ಸಾವಿನ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ ಅಂತ ಹೇಳಿಕೊಂಡು ಬಂದಿತ್ತು ಆದರೆ ಈಗ ಗಣಪತಿಯವರ ಪೋಸ್ಟಮಾರ್ಟಮ್ ಮಾಡಿದ್ದ ಡಾಕ್ಟರ್ ಮಾತುಗಳನ್ನ ಕೇಳುತ್ತಿದ್ದರೆ ಮರಣೋತ್ತರ ಪರೀಕ್ಷೆಯ ರಿಪೋರ್ಟ್ ಹೀಗೇ ಇರಬೇಕಂತ ಸರ್ಕಾರ ಒತ್ತಡ ಹೇರಿತ್ತು ಅನ್ನುವ ಸುದ್ದಿ ಹೊರಬರುತ್ತಿವೆ.

ಗಣಪತಿ ಅವರದು ಆತ್ಮಹತ್ಯೆ ಎಂದು ವರದಿ ನೀಡಲು ರಾಜ್ಯ ಸರ್ಕಾರ ತಮ್ಮ ಮೇಲೆ ಒತ್ತಡ ಹಾಕಿತ್ತು ಎಂದು ಡಾ.ಶೈಲಜಾ ಅವರು ಸಿ.ಬಿ.ಐ. ಎದುರು ಹೇಳಿಕೆ ನೀಡಿದ್ದಾರೆಂದು ಇಡೀ ಕರ್ನಾಟಕದ ಜನತೆಗೆ ಗೊತ್ತಾಗಿದೆ. ಈ ಹಿನ್ನಲೆಯಲ್ಲಿ ಸಿದ್ರಾಮಯ್ಯ ಮತ್ತೊಮ್ಮೆ ಕೆ.ಜೆ.ಜಾರ್ಜ್ ಪರ ನಿಲ್ಲಲು ತಯಾರಿ ನಡೆಸಿದ್ದಾರೆ.
ಇಂದು ಬಿ.ಜೆ.ಪಿ. ಧರಣಿ ನಡೆಸಲಿರುವ ಹಿನ್ನಲೆಯಲ್ಲಿ ಸಚಿವ ಜಾರ್ಜ್ ಅವರ ಬೆನ್ನಿಗೆ ನಿಲ್ಲುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಚಿವರಿಗೆ ಸೂಚನೆ ನೀಡಿದ್ದಾರೆ.

ಸಿದ್ರಾಮಯ್ಯನವರೇ ಏನಿದು ನಿಮ್ಮ ರಾಜ್ಯ ಸರ್ಕಾರ ಗಣಪತಿಯವರ ಸಾವಿನ ತನಿಖೆಯ ಮರಣೋತ್ತರ ತನಿಖೆಯನ್ನು ತನ್ನ ಅಣತಿಯಂತೆ ಮಾಡಿಸುತ್ತದೆ. ರಾಜ್ಯ ತನಿಖಾ ದಳ ಕೆ.ಜೆ.ಜಾರ್ಜ್ ಅವರನ್ನು ನಿರ್ದೋಷಿಯೆಂದು ಕ್ಲೀನ್ ಚಿಟ್ ಕೊಡುತ್ತದೆ. ಏನ್ ಸ್ವಾಮಿ ಇದೆಲ್ಲಾ? ಖಾಸಗಿ ಮಾಧ್ಯಮವೊಂದರಲ್ಲಿ ಖುದ್ದಾಗಿ ಗಣಪತಿಯವರೇ ಕೆ.ಜೆ.ಜಾರ್ಜ್ ಹೆಸರು ಹೇಳಿದ್ದಾರೆ. ಆದರೂ ಅಂತವರನ್ನು ಸಂಪುದಲ್ಲಿ ಉಳಿಸಿಕೊಳ್ಳುವ ಬಾಧೆ ಯಾಕೆ? ನಿಮ್ಮಂತ ಕುಲಗೆಟ್ಟ ಮನುಷ್ಯನನ್ನು ನಾವು ನೋಡಿರಲಿಲ್ಲ ಸ್ವಾಮಿ. ಕರ್ನಾಟಕದ ಜನತೆಗೆ ಕುಲಗೆಟ್ಟ ಎಂಬ ಪದಕ್ಕೆ ಒಳ್ಳೆಯ ಉದಾಹರಣೆ ನೀವಾಗ್ಬಿಟ್ರಿ. ನೀವು ಮಾಡ್ತಿರೋ ಕಂತ್ರಿ ಬುದ್ದಿಯನ್ನು ನೋಡಿದರೆ ರಾಜಕಾರಣಿಗಳು ಯಾರನ್ನು ಬೇಕಾದರೂ ಕೊಲ್ಲಬಹುದು ಅವರಿಗೆ ಯಾವುದೇ ಶಿಕ್ಷೆ ಆಗುವುದಿಲ್ಲ ಎನ್ನುವ ಹಾಗಿದೆ.

ಬಿಜೆಪಿಯವರು ಕೆ.ಜೆ.ಜಾರ್ಜ್ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಪ್ರತಿಭಟನೆ ಮಾಡಲು ತಯಾರಿ ನಡೆಸುತ್ತಿರುವುದರಿಂದ ಸಿದ್ರಾಮಯ್ಯನವರು ಕೆ.ಜೆ.ಜಾರ್ಜ್ ಬೆನ್ನಿಗೆ ನಿಲ್ಲುವಂತೆ ಮುಖ್ಯಮಂತ್ರಿ ಸಿದ್ರಾಮಯ್ಯನವರು ಸಚಿವರಿಗೆ ಸೂಚನೆ ನೀಡಿದ್ದಾರೆ. ಥೂ ಎಂತಹ ಕರ್ಮ ಸ್ವಾಮಿ ಒಬ್ಬ ಕೊಲೆಗಡುಕನ ಪರ ನಿಲ್ಲು ಎಂದು ಹೇಳಲು ನಿಮಗೆ ನಾಚಿಕೆಯಾಗುವುದಿಲ್ಲವೇ?
-ಮಹೇಶ್

Tags

Related Articles

Close