ಅಂಕಣಪ್ರಚಲಿತರಾಜ್ಯ

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ ಹಿಂದೂ ಶಾಲೆಗಳಿಗೆ ಊಟ ಹೋದರೆ ತಪ್ಪು! ಕಟೀಲು ದೇವಸ್ಥಾನದಿಂದ ಕ್ರೈಸ್ತ ಶಾಲೆಗಳಿಗೆ ಊಟ ಹೋದರೆ ಸರಿ! ವ್ಹಾ! ಎಂತಹ ಸುಂದರ ಜಾತ್ಯಾತೀತ ಕರ್ನಾಟಕ!!!!!!!

ಇದೊಂದು ಬಾಕಿ ಇತ್ತು ನೋಡಿ!! ಮೊನ್ನೆ ಮೊನ್ನೆಯಷ್ಟೇ ಕಲ್ಲಡ್ಕ ಶಾಲೆಯ ಮಕ್ಕಳ ಬಿಸಿಯೂಟಕ್ಕೆ ‘ರಾಜ್ಯದ ಬೊಕ್ಕಸದಲ್ಲಿ ಹಣ ಇಲ್ಲ’ ವೆಂದು ಪುಂಗಿ ಊದಿದ್ದ ಸಿದ್ದರಾಮಯ್ಯನ ಸರಕಾರ ನಾಚಿಕೆ ಬಿಟ್ಟು ‘ಇಂದಿರಾ ಕ್ಯಾಂಟೀನ್’ ಗೆ ಅದೆಷ್ಟು ಕೋಟಿ ಸುರಿದಿದ್ದೀವಿ ಗೊತ್ತಾ ಎಂದು ಕೊಚ್ಚಿಕೊಂಡಾಗಲೇ ಅರ್ಥವಾಗಿದೆ ಬಿಡಿ ‘ಎಳ್ಳಷ್ಟೂ ಮರ್ಯಾದೆಯಿಲ್ಲ ಮನುಷ್ಯನಿಗೆ’ ಎಂದು!

ಬಿಡಿ! ಕಲ್ಲಡ್ಕ ಶಾಲೆಯ ಮಕ್ಕಳ ಭವಿಷ್ಯಕ್ಕೆ ಎಳ್ಳು ನೀರು ಬಿಡಲು ತಯಾರಾಗಿದ್ದ ಸಿದ್ದರಾಮಯ್ಯ ಇಂದಿರಾ ಕ್ಯಾಂಟೀನ್ ಮೂಲಕ ಸ್ವಲ್ಪವಾದರೂ ಕಳೆದು ಹೋದ ಮರ್ಯಾದೆಯನ್ನು ತಂದುಕೊಳ್ಳಲೆತ್ನಿಸಿ, ದೆಹಲಿಯಿಂದ ರಾಹುಲ್ ಗಾಂಧಿಯನ್ನೂ ಕರೆಸಿದ್ದಲ್ಲದೇ, 5 ರೂಪಾಯಿಗೆ ಉಪಾಹಾರ, 10 ರೂಪಾಯಿಗೆ ‘ಬಿಸಿಯೂಟ’ ಎಂದು ಅಡ್ನಾಡಿ ಭಾಷಣ ಬಿಗಿದದ್ದೂ ಪಬ್ಲಿಕ್ ಟಿವಿಯವರ ಕೃಪೆಯಿಂದ ಟುಸ್ ಎಂದಿತ್ತು!

ಅಲ್ಲಿಂದಲೂ, ಕಾಲ್ಕಿತ್ತ ಸಿದ್ದರಾಮಯ್ಯ ಮಾಡಿದ್ದೇನು ಗೊತ್ತಾ?!

ಅಯ್ಯೋ! ಕಾಂಗ್ರೆಸ್ ಪಕ್ಷಕ್ಕೀಗಾಗಲೇ ಗೊತ್ತಾಗಿ ಹೋಗಿದೆ! ತಲೆಕೆಳಗಾದರೂ ಮುಂಬರುವ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಗೆಲ್ಲಲಾರೆ ಎಂದು! ಅದಕ್ಕೇ, ಇಲ್ಲ ಸಲ್ಲದ ಕುಯುಕ್ತಿ ಮಾಡಲು ಹೊರಟಿರುವ ರಾಜ್ಯ ಸರಕಾರಕ್ಕೆ ಬಹುಷಃ ಶನಿ ಬೆನ್ನಟ್ಟಿದಂತೆ, ಹೋದಲೆಲ್ಲ ಒಂದಲ್ಲ ಒಂದು ವಿವಾದಗಳು ಹೆಡೆ ಎತ್ತುತ್ತಿರುವುದಕ್ಕೆ ಈ ವಿವಾದವೂ ಸೇರ್ಪಡೆಯಾಗಿದೆ!

25 ಲಕ್ಷ ಅನುದಾನ!

‘ಇದು ಹಿಂದೂ ವಿರೋಧಿ ಸಿದ್ಧರಾಮಯ್ಯನ ಕೋಟೆ ಕಣ್ರೋ” ಎಂದಬ್ಬರಿಸುತ್ತಿರುವ ‘ಹೀರೋ’ ವಂತೆ ಸಿದ್ಧರಾಮಯ್ಯನ ಸರಕಾರದಿಂದ ಐದು ಕ್ರೈಸ್ತ ಮಿಶನರಿ ಶಾಲೆಗಳ ಮಕ್ಕಳ ಊಟಕ್ಕಾಗಿ ಬರೋಬ್ಬರಿ 25 ಲಕ್ಷ ರೂಪಾಯಿಯ ಅನುದಾನವನ್ನು ನೀಡಿರುವ ಸಿದ್ಧರಾಮಯ್ಯ ‘ಕಟೀಲು’ ಪರಮೇಶ್ವರೀ ದೇವಸ್ಥಾನವನ್ನೂ ಮುಜರಾಯಿ ಇಲಾಖೆಗೆ ಸೇರಿಸಿದ್ದು ಇದೇ ಕಾರಣದಿಂದಲೇ!

ಐತಿಹಾಸಿಕ ಪರಂಪರೆ ಇರುವ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನ ಮುಂಚೆಯಿಂದಲೂ ಪ್ರತಿದಿನ ಅದೆಷ್ಟೋ ಸಾವಿರ ಜನರಿಗೆ ಅನ್ನದಾನ ನೀಡುತ್ತಲೇ ಬಂದಿದೆ! ಸಾರ್ವಜನಿಕ ಅನ್ನದಾನಕ್ಕೆ 1.85 ಕೋಟಿ ಹಾಗೂ ಮಕ್ಕಳ ಊಟಕ್ಕೆ 25 ಲಕ್ಷ ರೂಪಾಯಿಗಳು ವಾರ್ಷಿಕವಾಗಿ ಖರ್ಚಾಗುತ್ತದೆ! ಅಲ್ಲದೇ, ಜಿಲ್ಲೆಯ ಆರು ವಿಶೇಷ ಶಾಲೆಗಳು ಹಾಗೂ ಒಂದು ಖಾಸಗಿ ಶಾಲೆಗೆ ಊಟಕ್ಕಾಗಿ ವಿನಿಯೋಗವಾಗುವ ವಾರ್ಷಿಕ ಅನುದಾನ 15 ಲಕ್ಷ ರೂಗಳು. ಕಟೀಲಿನ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಕಟೀಲಿನಿಂದಲೇ ಅನುದಾನ ನೀಡಲಾಗುತ್ತಿದ್ದು, ಮಧ್ಯಾಹ್ನದ ಬಿಸಿಯೂಟಕ್ಕೆ ವಾರ್ಷಿಕ 10.50 ಲಕ್ಷ ವಿನಿಯೋಗವಾಗುತ್ತಿದೆ! ಒಟ್ಟಾರೆಯಾಗಿ 2780 ಮಕ್ಕಳಿದ್ದು, 780 ಮಕ್ಕಳಿಗೆ ಸರಕಾರದ ಅಕ್ಷರ ದಾಸೋಹದ ವ್ಯವಸ್ಥೆ ಇದೆ!

ವಿಷಯ ಇಷ್ಟೇ ಅಲ್ಲ!

ಅನುದಾನ ಪಡೆದುಕೊಂಡ ಶಾಲೆಗಳೆಲ್ಲವೂ ಕ್ರೈಸ್ತ ಮಿಶನರೀ ಶಾಲೆಗಳು!

ಸೈಂಟ್ ಆಗ್ನೆಸ್ ವಿಶೇಷ ಶಾಲೆ, ಮಂಗಳೂರು (5500). ಸಾನ್ನಿಧ್ಯ ವಸತಿಯುತ ವಿಶೇಷ ಶಾಲೆ, ಮಂಗಳೂರು (4740), ಲಯನ್ಸ್ ವಿಶೇಷ ಶಾಲೆ, ಸುರತ್ಕಲ್ (1621), ಸೈಂಟ್ ಮೇರಿಸ್ ವಿಶೇಷ ಶಾಲೆ, ಕಿನ್ನಿಗೋಳಿ (460), ಕ್ರಿಸ್ತರಾಜ ವಿಶೇಷ ಚೇತನ ಶಾಲೆ, ಬೆಳ್ತಂಗಡಿ ತಾ (585), ಸಾಂದೀಪ ವಿಶೇಷ ಶಾಲೆ, ಸುಳ್ಯ (596). ಇಷ್ಟು ಶಾಲೆಗಳಿಗೆ ಅನುದಾನವನ್ನು ಕಟೀಲಿನಿಂದ ನಿಯೋಜನೆಗೊಳಸಿರುವ ಸಿದ್ಧರಾಮಯ್ಯನ ಸರಕಾರಕ್ಕೆ ‘ಅನ್ನ’ದಲ್ಲೂ ‘ಮತ ಬ್ಯಾಂಕ್’ ನೋಡುತ್ತದೆಯೆಂದು ಅನುಮಾನವಿಲ್ಲದೇ ಹೇಳಬಹುದು!

ಹಿಂದೆಯೂ, ಕಲ್ಲಡ್ಕ ಶಾಲೆಗಳಿಗೆ ಮೂಕಾಂಬಿಕ ದೇವಸ್ಥಾನ ಸಮಿತಿಯಿಂದ ಅನುದಾನವನ್ನು ಕೊಡಲಾಗುತ್ತಿದ್ದನ್ನು ನಿಲ್ಲಿಸಿದ್ದ ಸಿದ್ಧರಾಮಯ್ಯರವರ ಸರಕಾರ, ‘ಕರ್ನಾಟಕ ಹಿಂದೂ ಧರ್ಮ ಶಾಲೆ ಹಾಗೂ ಸಮಿತಿ ಅಭಿವೃದ್ಧಿ ಕಾನೂನು, 1997 ರ ಅನ್ವಯದಂತೆ ಯಾವುದೇ ಪ್ರೈವೇಟ್ ಶಾಲೆಗಳಿಗೆ ಮುಜರಾಯಿಯಿಂದ ಅನುದಾನ ನೀಡುವಂತಿಲ್ಲ ಎಂಬುದನ್ನು ಸಮರ್ಥಿಸಿಕೊಂಡಿದ್ದರು. ಆದರೆ, ಈಗ ಕೊಡುತ್ತಿರುವ ಅನುದಾನದ ಎಲ್ಲಾ ಶಾಲೆಗಳೂ ಸರಕಾರದ್ದಲ್ಲ!

ಯಾವುದೋ ರಾಜಕೀಯ ದ್ವೇಷಕ್ಕೆ 3016 ಮಕ್ಕಳ ಹಸಿವನ್ನೇ ಆಧಾರವಾಗಿಸಿ ಇಂದಿರಾ ಕ್ಯಾಂಟೀನ್ ಶುರು ಹಚ್ಚಿದ ಸಿದ್ಧರಾಮಯ್ಯನ ಸಮರ್ಥನೆಗಳಿಗೇನೂ ಕೊರತೆಯೇ ಇಲ್ಲ ಬಿಡಿ ಸ್ವಾಮಿ! ಜಗದ ಅಷ್ಟೂ ಅಲ್ಪಸಂಖ್ಯಾತರ ಜವಾಬ್ದಾರಿ ತನ್ನ ಮೇಲಿದೆ ಎಂದು ಎಗರಾಡುವ ಒಬ್ಬ ಮುಖ್ಯಮಂತ್ರಿಗೆ ಭಾರತದ ಸಂಸ್ಕಾರವನ್ನೂ ಜೊತೆಯಲ್ಲೇ ಕಲಿಸುತ್ತಿರುವ ಶಾಲೆಯ ಮಕ್ಕಳ ನೆನಪಾಗದೇ ಹೋದದ್ದು ದುರಾದೃಷ್ಟವೇ ಸರಿ! ಸರಕಾರದ ಶಾಲೆಗಳಲ್ಲವಾದರೆ ಅನುದಾನ ಕೊಡುವ ಹಾಗಿಲ್ಲ ಎಂದು ಅರಚಿದ್ದ ಸಿದ್ಧರಾಮಯ್ಯನ ಹಿಂದೂ ವಿರೋಧಿ ಮನಃಸ್ಥಿತಿಯೊಂದು ಬಟಬಯಲಾಗಿದೆಯಷ್ಟೇ! ಒಟ್ಟು 6 ಶಾಲೆಗಳಲ್ಲಿ 5 ಶಾಲೆಗಳು ಕ್ರೈಸ್ತ ಮಿಶನರಿ ಶಾಲೆಗಳು! ಅದ್ಹೇಗೆ, ಯಾವ ಕಾನೂನನ್ನೂ ಪಾಲಿಸದೇ ಅನುದಾನವನ್ನು ಕೊಡುತ್ತಿರುವ ಸಿದ್ಧರಾಮಯ್ಯನವರ ಪ್ರತಿ ಕುತಂತ್ರವೂ ‘ಕಾರಿನ ಮೇಲೆ ಕಾಗೆ’ ಕೂತ ನಂತರವೇ ಶುರುವಾಗಿದ್ದು ಕಾಕಾತಾಳೀಯವೋ ಅಥವಾ ಪಾಪದ ಕೊಡ ತುಂಬಿದ ಸಂಕೇತವೋ ಗೊತ್ತಿಲ್ಲ!!!

– ತಪಸ್ವಿ

Tags

Related Articles

Close