ಪ್ರಚಲಿತ

ಕೋಟಿ ಕೋಟಿ ಬೇನಾಮಿ ಆಸ್ತಿಯ ದಾಖಲೆ ಲೀಕ್!!! ಕಾಂಗ್ರೆಸ್ಸಿಗರ ಎದೆಯಲ್ಲಿ ನಗಾರಿ ಬಾರಿಸಲು ಕಾರಣವೇನು?!

ಕೋಟಿ ಕೋಟಿ ಅಕ್ರಮ ಆಸ್ತಿಗಳನ್ನು ಹೊಂದಿರುವ ಅದೆಷ್ಟೋ ಕಾಂಗ್ರೆಸ್ಸಿಗರ ಕೈಯಲ್ಲಿ ಕುಣಿಯುತ್ತಿರುವ ಧನಲಕ್ಷ್ಮೀಗೆ ಕುತ್ತು ಬಂದಿರುವುದು ಒಂದು ಕಡೆಯಾದರೆ ಭಾರತದ ಅದೆಷ್ಟೋ ಗಣ್ಯರು ಅಡಗಿಸಿಟ್ಟಿರುವ ಆಸ್ತಿಗಳು ಹೊರಬಿದ್ದಿದ್ದು, ಇದೀಗ ಎಲ್ಲೆಡೆ ಅಲ್ಲೋಲಕಲ್ಲೋಲ ಸೃಷ್ಟಿಸಿದೆ!!

ಹೌದು… ಕಪ್ಪು ಹಣದ ವಿರುದ್ಧ ಸಮರ ಸಾರಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ನೋಟ್ ಬ್ಯಾನ್ ಬಳಿಕ ಕಾಳಧನಿಕರ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗಿಸಿರುವ ವಿಚಾರ ತಿಳಿದೇ ಇದೆ. ಹಾಗಾಗಿ ಕಾಳ ಧನಿಕರು ತಮ್ಮಲ್ಲಿರುವ ಬ್ಲ್ಯಾಕ್ ಮನಿಯನ್ನು ವೈಟ್ ಮನಿಯನ್ನಾಗಿ ಮಾಡಿಕೊಳ್ಳಲು ನಕಲಿ ಕಂಪನಿಗಳನ್ನು ಮಾಡಿಕೊಂಡಿದ್ದರು. ಈ ಬೆನ್ನಲ್ಲೇ, ವಿದೇಶಿ ಅಕ್ರಮ ಆಸ್ತಿ, ಬೇನಾಮಿ ಕಂಪನಿಗಳು ಮತ್ತು ತೆರಿಗೆ ವಂಚನೆಯಿಂದ ವಿದೇಶಿ ಬ್ಯಾಂಕ್ ಗಳಲ್ಲಿ ಕೋಟಿಗಟ್ಟಲೆ ಅಡಗಿಸಿಟ್ಟಿರುವ ಗಣ್ಯರ ಪಟ್ಟಿ “ಪನಾಮ ಪೇಪರ್ಸ್” ಹೆಸರಲ್ಲಿ 18 ತಿಂಗಳ ಹಿಂದೆ ಬಹಿರಂಗಗೊಂಡು ಭಾರಿ ಸಂಚಲ ಉಂಟುಮಾಡಿತ್ತು.!! ಆದರೆ ಇದೀಗ “ಪ್ಯಾರಾಡೈಸ್ ಪೇಪರ್ಸ್” ಹೆಸರಿನ ಮತ್ತೊಂದು ಪಟ್ಟಿ ಸೋರಿಕೆಯಾಗಿ ಇಡೀ ಭಾರತದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಅದರಲ್ಲೂ ಕಾಂಗ್ರೆಸ್ಸಿಗರ ಎದೆಯಲ್ಲಿ ನಗಾರಿ ಬಾರಿಸಿದಂತಾಗಿದೆ!!

ಬರ್ಮುಡಾ ಮೂಲದ ಆ್ಯಪಲ್ ಬೈ ಮತ್ತು ಸಿಂಗಾಪುರ ಮೂಲದ ಏಷಿಯಾಸಿಟಿ ಟ್ರಸ್ಟ್ ನಡೆಸಿದ ತನಿಖೆಯಿಂದ ಹೊರಬಿದ್ದ 1.34 ಕೋಟಿ ದಾಖಲೆಗಳನ್ನು “ಪ್ಯಾರಾಡೈಸ್ ಪೇಪರ್ಸ್” ಹೆಸರಲ್ಲಿ ಬಿಡುಗಡೆ ಮಾಡಿದೆ. 119 ವರ್ಷಗಳ ಹಳೆಯದಾದ ಆ್ಯಪಲ್ ಬೈ ಕಂಪನಿ ವಕೀಲರು, ಲೆಕ್ಕಪರಿಶೋಧಕರು, ಬ್ಯಾಂಕ್ ಅಧಿಕಾರಿಗಳ ಮತ್ತು ತನಿಖಾಧಿಕಾರಿಗಳ ಖಾಸಗಿ ಜಾಲ ಹೊಂದಿದ್ದು, ತೆರಿಗೆ ವಂಚನೆ ಅಥವಾ ಭಾರಿ ತೆರಿಗೆಯಿಂದ ಬಚಾವ್, ರಿಯಲ್ ಎಸ್ಟೇಟ್ ನಿರ್ವಹಣೆ, ಬೇನಾಮಿ ಖಾತೆಗಳನ್ನು ತೆರೆಯುವಿಕೆ, ವಿಮಾನ ಮತ್ತು ಕಡಲನೌಕೆ ಖರೀದಿ ಮೂಲಕ ಕಡಿಮೆ ತೆರಿಗೆ ಪಾವತಿ ಮಾರ್ಗಗಳನ್ನು ಅನ್ವೇಷಿಸಿದೆ. ಅಷ್ಟೇ ಅಲ್ಲದೇ, ತಮ್ಮ ಕ್ಲೈಂಟ್ ಗಳಿಗೆ ಸಲಹೆ ನೀಡುವ ಕೆಲಸದಲ್ಲಿ ಜಾಲದಲ್ಲಿನ ವೃತ್ತಿಪರರು ತೊಡಗಿದ್ದಾರೆ ಎಂದು ತಿಳಿದು ಬಂದಿದೆ.

ಏನಿದು ಪನಾಮ ಪೇಪರ್ಸ್??

ಮೊಸಾಕ್ ಫೆÇೀನ್ಸೆಕಾ ಎಂಬ ಕಾನೂನು ಸಂಸ್ಥೆಯು ಜಗತ್ತಿನ ನಾಲ್ಕನೇ ಅತಿ ದೊಡ್ಡ ಸಂಸ್ಥೆಯಾಗಿದ್ದು, ಈ ಸಂಸ್ಥೆಯು ಹನ್ನೊಂದೂವರೆ ಮಿಲಿಯನ್ ನಷ್ಟು ಅವ್ಯವಹಾರದ ದಾಖಲೆಗಳನ್ನು ಬಹಿರಂಗ ಪಡಿಸಿದೆ. ಆ ದಾಖಲೆಯೇ” ಪನಾಮ ಪೇಪರ್ಸ್”!! ಈ ಎಲ್ಲ ದಾಖಲೆಗಳನ್ನು ಅಪರಿಚಿತ ಮೂಲಗಳಿಂದ ಜರ್ಮನ್ ನ ಪತ್ರಿಕೆಯೊಂದು ಪಡೆದು ಅದರ ಮಾಹಿತಿ ಎಲ್ಲೆಡೆ ಪಸರಿಸುವಂತೆ ಮಾಡಿದೆ!!

ಇನ್ನು ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಸಂಚಲನ ಉಂಟು ಮಾಡಿದ್ದ ಪನಾಮ ಪೇಪರ್ ಲೀಕ್ ಪ್ರಕರಣದ ತನಿಖೆ ಭಾರತದಲ್ಲಿ ಚುರುಕುಗೊಂಡಿದೆ. ಐಟಿ ಇಲಾಖೆ ತನಿಖೆಯನ್ನು ತೀವ್ರಗೊಳಿಸಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕಲು ಮುಂದಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐಟಿ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಬ್ರಿಟಿಷ್ ವರ್ಜಿನ್ ಐಲ್ಯಾಂಡ್‍ಗೆ ಕಳುಹಿಸಿದೆ. ಅಧಿಕಾರಿಗಳು ಅಲ್ಲಿ ಪನಾಮ ಪೇಪರ್ಸ್‍ನಲ್ಲಿ ನಮೂದಿಸಿದ್ದ ಭಾರತೀಯ ವ್ಯಕ್ತಿಗಳ ಕುರಿತು ಮಾಹಿತಿ ಕಲೆ ಹಾಕಲಿದ್ದು, ಆ ನಂತರ ಖ್ಯಾತ ನಟ ಅಮಿತಾಭ್ ಬಚ್ಚನ್ ಸೇರಿದಂತೆ ಆರೋಪ ಎದುರಿಸುತ್ತಿರುವ 33 ಜನರ ವಿರುದ್ಧ ಕೇಸ್ ದಾಖಲಿಸಲು ಕೂಡ ಸಜ್ಜಾಗಿತ್ತು!!

ವಿದೇಶಗಳಲ್ಲಿರುವ ತೆರಿಗೆ ಸ್ವರ್ಗಗಳಲ್ಲಿ ಅಕ್ರಮವಾಗಿ ಹೇಗೆ ಹಣ ಹೂಡಿಕೆ ಮಾಡಿದ್ದಾರೆ, ಯಾರ್ಯಾರು ಮಾಡಿದ್ದಾರೆ ಎಂಬೆಲ್ಲ ಮಾಹಿತಿ ಅದರಲ್ಲಿತ್ತು!! ನೂರಾ ನಲವತ್ಮೂರು ರಾಜಕಾರಣಿಗಳು, ಅದರಲ್ಲಿ ಹನ್ನೆರಡು ರಾಷ್ಟ್ರೀಯ ನಾಯಕರ ಹೆಸರು ಒಳಗೊಂಡಿದ್ದವು. ಅವರ ಕುಟುಂಬದವರು, ನಿಕಟವರ್ತಿಗಳು ಜಗತ್ತಿನಾದ್ಯಂತ ಇರುವ ತೆರಿಗೆ ಸ್ವರ್ಗ ಎನಿಸಿದ ದೇಶಗಳನ್ನು ಹೇಗೆ ಬಳಕೆ ಮಾಡಿಕೊಂಡಿದ್ದಾರೆ ಎಂಬ ವಿವರಗಳಿದ್ದವು. ಪ್ರಧಾನಿ, ರಾಷ್ಟ್ರಾಧ್ಯಕ್ಷರ ಸಂಬಂಧಿಗಳ ಹೆಸರಿದ್ದವು. ಅದರಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್, ಇರಾಕ್ ನ ಮಾಜಿ ಉಪರಾಷ್ಟ್ರಪತಿ ಅಯಾದ್ ಅಲ್ಲವಿ, ಉಕ್ರೇನ್ ನ ರಾಷ್ಟ್ರಪತಿ ಪೆಟ್ರೋ ಪೆÇರೊಶೆಂಕೋ, ಈಜಿಪ್ಟ್ ನ ಮಾಜಿ ರಾಷ್ಟ್ರಪತಿಯ ಮಗ ಅಲಾ ಮುಬಾರಕ್, ಐಸ್ ಲ್ಯಾಂಡ್ ನ ಪ್ರಧಾನಿಯ ಹೆಸರು ಕೇಳಿಬಂದಿದ್ದು, ಇವರೆಲ್ಲ ವಿದೇಶದಲ್ಲಿನ ತೆರಿಗೆ ಸ್ವರ್ಗಗಳಲ್ಲಿ ಅಕ್ರಮವಾಗಿ ಹಣ ಹೂಡಿರುವುದಾಗಿ ಮಾಹಿತಿ ಹೊರ ಹಾಕಲಾಗಿತ್ತು.

ಪನಾಮ ಪೇಪರ್ಸ್ ಲೀಕ್ ಪ್ರಕರಣದಲ್ಲಿ ಅಮಿತಾಬ್ ಬಚ್ಚನ್ ಸೇರಿದಂತೆ ಹಲವು ಸಿನಿಮಾ ನಟರು, ರಾಜಕಾರಣಿಗಳು ಮತ್ತು ಉದ್ಯಮಿಗಳ ಹೆಸರು ಕೇಳಿ ಬಂದಿತ್ತು. ಆದರೆ ಅಮಿತಾಬ್ ಬಚ್ಚನ್ ತಮ್ಮ ವಿರುದ್ಧದ ಆರೋಪವನ್ನು ಸಂಪೂರ್ಣವಾಗಿ ನಿರಾಕರಿಸಿದ್ದು, ದಾಖಲೆಗಳಲ್ಲಿ ನಮೂದಾಗಿರುವ ಯಾವುದೇ ಕಂಪನಿ ತನ್ನದಲ್ಲ ಎಂದು ತಿಳಿಸಿದ್ದಾರೆ. ಇನ್ನು ಪಾಕಿಸ್ತಾನದಲ್ಲಿ ಪನಾಮ ಪೇಪರ್ ಲೀಕ್ ಪ್ರಕರಣದಿಂದಾಗಿ ಮಾಜಿ ಪ್ರಧಾನಿ ನವಾಜ್ ಷರೀಫ್ ತಮ್ಮ ಸ್ಥಾನಕ್ಕೇ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಕರಣ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಷರೀಫ್‍ರನ್ನು ಪ್ರಧಾನಿ ಸ್ಥಾನದಿಂದ ವಜಾಗೊಳಿಸಿತ್ತು!!

“ಪ್ಯಾರಾಡೈಸ್ ಪೇಪರ್ಸ್”ನ ಪಟ್ಟಿಯಲ್ಲಿದೆ ಭಾರತದ 714 ಗಣ್ಯರ ಹೆಸರು!!

ವಿದೇಶಿ ಅಕ್ರಮ ಆಸ್ತಿ, ಬೇನಾಮಿ ಕಂಪನಿಗಳು ಮತ್ತು ತೆರಿಗೆ ವಂಚನೆಯಿಂದ ವಿದೇಶಿ ಬ್ಯಾಂಕ್ ಗಳಲ್ಲಿ ಕೋಟಿಗಟ್ಟಲೆ ಅಡಗಿಸಿಟ್ಟಿರುವ ಗಣ್ಯರ ಪಟ್ಟಿ ಬಿಡುಗಡೆ ಮಾಡಿರುವ “ಪ್ಯಾರಾಡೈಸ್ ಪೇಪರ್ಸ್”ನಲ್ಲಿ ಭಾರತದ 714 ಗಣ್ಯರ ಹೆಸರು ಈ ಪಟ್ಟಿಯಲ್ಲಿದೆ. ಇವರಲ್ಲಿ, ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ , ಕೇಂದ್ರ ಸಚಿವ ಜಯಂತ್ ಸಿನ್ಹಾ , ಕರ್ನಾಟಕದ ಮಾಜಿ ಸಿಎಂ ವೀರಪ್ಪ ಮೊಯ್ಲಿ, ನಟ ಸಂಜಯ್ ದತ್ ಪತ್ನಿ ಮಾನ್ಯತಾ ದತ್, ಕಾಂಗ್ರೆಸ್ ಮುಖಂಡ ವಯ್ಲಾರ್ ರವಿ ಇನ್ನು ಹಲವಾರು ಗಣ್ಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ!!!

ಇನ್ನು ಪಾಕಿಸ್ತಾನ ಪ್ರಧಾನಿ ಶೌಕತ್ ಅಜೀಜ್ , ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ಯೂ ಆಪ್ತ ಸ್ಟೀಫನ್ ಬ್ರಾಂಫ್ ಮ್ಯಾನ್, ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ವಿಲ್ಬುರ್ ರೋಸ್ ಹೆಸರು ಕೂಡ ಸಂಬಂಧಿತ ಕಂಪನಿಗಳಿಂದ ವಂಚನೆ ಆರೋಪದಲ್ಲಿನ ಪಟ್ಟಿಯಲ್ಲಿ ಸೇರಿಸಲಾಗಿದೆ. ಅಷ್ಟೇ ಅಲ್ಲದೇ, ಈ ಪಟ್ಟಿಯಲ್ಲಿರುವ ಭಾರತೀಯರ ಸಂಖ್ಯೆ ಆಧರಿಸಿ 19ನೇ ಸ್ಥಾನ ಭಾರತಕ್ಕೆ ನೀಡಲಾಗಿದೆ. ಸುಮಾರು 180 ದೇಶಗಳ ಗಣ್ಯರು ಮತ್ತು ವಿವಿಧ ಕಾರ್ಪರೋಟ್ ಕಂಪನಿಗಳ ಬಂಡವಾಳ ಇಲ್ಲಿ ಬಯಲಾಗಿದೆ.

ಇನ್ನು, ಪನಾಮ ಹಗರಣದಲ್ಲಿ ಸೋರಿಕೆಯಾದ ಮಾಹಿತಿ ಪ್ರಮಾಣ 2.6 ಟಿಬಿಯಾದರೆ, “ಪ್ಯಾರಾಡೈಸ್ ಪೇಪರ್ಸ್”ನಲ್ಲಿ ಸೋರಿಕೆಯಾದ ಮಾಹಿತಿಯು 1.4 ಟಿಬಿ ದಾಖಲೆಯನ್ನು ಬಿಡುಗಡೆ ಮಾಡಿದೆ!! ಈ ಮಾಹಿತಿಯನ್ನು ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ (ಐಸಿಐಜೆ) ಮತ್ತು 96 ಸಂಸ್ಥೆಗಳು ಜಂಟಿಯಾಗಿ ವಿಶ್ವಾದ್ಯಂತ ಸಮೀಕ್ಷೆ ನಡೆಸಿ ಪ್ಯಾರಾಡೈಸ್ ಪೇಪರ್ಸ್ ಸಿದ್ಧಪಡಿಸಿವೆ. ಇನ್ನು ಬ್ರಿಟನ್ ರಾಣಿ 2ನೇ ಎಲಿಜಬೆತ್ ಒಡೆತನದ ಖಾಸಗಿ ಎಸ್ಟೇಟ್ ಕೇಮನ್ ದ್ವೀಪದಲ್ಲಿ ಗೌಪ್ಯವಾಗಿ ಹೂಡಿಕೆ ಮಾಡಿದೆ ಎಂದು ಪೇಪರ್ಸ್ ಬಯಲುಮಾಡಿದೆ.

– ಅಲೋಖಾ

Tags

Related Articles

Close