ಪ್ರಚಲಿತ

ಖಂಡಿತವಾಗಿಯೂ ಕಾಂಗ್ರೆಸ್ ಇನ್ನು ರಾಹುಲ್ ಗಾಂಧಿಯನ್ನು ಯುನೈಟೆಡ್ ಸ್ಟೇಟ್ಸ್ ಗೆ ಕಳುಹಿಸುವುದಿಲ್ಲ!!! ಇವತ್ತು ಅಮೇರಿಕಾದಲ್ಲಿ ಆತ ಮಾಡಿದ ಫಜೀತಿ ಏನು ಗೊತ್ತಾ?!!

ಕಾಂಗ್ರೆಸ್‍ನ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಅಮೆರಿಕಾಕ್ಕೆ ತೆರಳಿ ತನ್ನ ಬುದ್ಧಿಮತ್ತೆ ಎಷ್ಟಿದೆ ಎಂದು ಅಲ್ಲಿನ ವಿದ್ಯಾರ್ಥಿಗಳಲ್ಲಿ ಪ್ರದರ್ಶನ ಮಾಡಿ,
ಉಗಿಸಿಕೊಂಡಿದ್ದಾರೆ. ಅಮೇರಿಕಾಕ್ಕೆ ತೆರಳಿ ಈತ ಯಾವ ರೀತಿ ಭಾಷಣ ಮಾಡುತ್ತಾನೆ ಎಂದು ಅನೇಕ ಮಂದಿ ನಿರೀಕ್ಷಿಸಿದ್ದರು. ಯಾವನಿರೀಕ್ಷೆಯನ್ನೂ ಹುಸಿಗೊಳಿಸದ ರಾಹುಲ್ ಗಾಂಧಿ ಅಲ್ಲಿನ ವಿದ್ಯಾರ್ಥಿಗಳಿಗೆ ತಪ್ಪು ಉತ್ತರ ನೀಡಿ ತನ್ನ ಅಮೋಘ ಜ್ಞಾನ ಭಂಡಾರವನ್ನು ಪ್ರದರ್ಶನ ಮಾಡಿದ್ದಾರೆ.

ಅಮೆರಿಕಾದ ಕ್ಯಾಲಿಫೋರ್ನಿಯಾದ ಪ್ರತಿಷ್ಠಿತ ಬರ್ಕ್ ಲೇ ವಿಶ್ವವಿದ್ಯಾಲಯಕ್ಕೆ ತೆರಳಿರುವ ಕಾಂಗ್ರೆಸ್ ಉಪಾಧ್ಯಕ್ಷ ಅಲ್ಲಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾಡಿದ್ದಾರೆ. `ಪ್ರಚಲಿತ ಭಾರತ ಮತ್ತು ವಿಶ್ವದ ದೊಡ್ಡ ಪ್ರಜಾಸತ್ತಾತ್ನಕ ರಾಷ್ಟ್ರದ ಮುಂದಿನ ಹಾದಿ’ ಎಂಬ ವಿಷಯದ ಬಗ್ಗೆ ರಾಹುಲ್ ಗಾಂಧಿ ಅಲ್ಲಿನ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ್ದಾರೆ. ವಿದ್ಯಾರ್ಥಿಗಳ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ರಾಹುಲ್ ಗಾಂಧಿ ಒಂದು ಕಡೆ ವಿದ್ಯಾರ್ಥಿಗಳ ಪ್ರಶ್ನೆಗೆ ತಪ್ಪು ಉತ್ತರ ನೀಡಿ ಎಡವಟ್ಟು ಮಾಡಿಕೊಂಡಿದ್ದಾರೆ.

`ಭಾರತದ ಲೋಕಸಭೆ 545 ಸದಸ್ಯರನ್ನು ಹೊಂದಿದೆ, ವಾಸ್ತವವಾಗಿ ಲೋಕಸಭೆಯಲ್ಲಿರುವ ಸ್ಥಾನಗಳು 546, ಅಲ್ವಾ!?’ ಎಂದು ರಾಹುಲ್ ಅಮೆರಿಕಾದ ವಿದ್ಯಾರ್ಥಿಗಳ ಬಳಿ ಹೇಳಿ ಪ್ರಮಾದ ಎಸಗಿದ್ದಾರೆ. ಲೋಕಸಭೆಗೆ ಮೂರು ಬಾರಿ ಚುನಾಯಿತರಾದ ಒಬ್ಬ ಸದಸ್ಯನಿಗೆ ಲೋಕಸಭೆಯಲ್ಲಿ ಎಷ್ಟು ಸ್ಥಾನಗಳಿದೆ ಎಂದೂ ಗೊತ್ತಿಲ್ಲ. ಆರಂಭದಲ್ಲೇ ಎಡವಟ್ಟು ಮಾಡಿಕೊಂಡ ರಾಹುಲ್ ಇನ್ನೇನು ಎಡವಟ್ಟು ಮಾಡಿಕೊಳ್ಳುತ್ತಾನೋ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.
ರಾಹುಲ್ ಗಾಂಧಿಯ ತಪ್ಪು ಉತ್ತರಕ್ಕೆ ಹಲವಾರು ಮಂದಿ ಟ್ವಿಟರ್‍ನಲ್ಲಿ ಮಂಗಳಾರತಿ ಎತ್ತಿದ್ದಾರೆ. ರಾಹುಲ್ ಗಾಂಧಿ ತಪ್ಪುಗ್ರಹಿಕೆಯಿಂದ ಭಾಷಣ ಮಾಡುತ್ತಿದ್ದಾರೆ. ಅವರು ಹೇಳಿರುವ ಇನ್ನೊಂದು ಸ್ಥಾನ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ.

ನಾನು ರಾಹುಲ್ ಗಾಂಧಿಯ ಭಾಷಣದ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದೆ ಆದರೆ ಮೇಲ್ಮನೆಯಲ್ಲಿರುವ ಸೀಟುಗಳ ಸಂಖ್ಯೆಯೂ ಅವರಿಗೆ ಗೊತ್ತಿಲ್ಲ ಎಂದು
ಸದಾನಂದ್ ಧುಮೆ ಎಂಬವರು ಟೀಕಿಸಿದ್ದಾರೆ. ರಾಹುಲ್ ಗಾಂಧಿಯ ಭಾಷಣಕ್ಕೆ ಇದೇ ರೀತಿ ಸಾಕಷ್ಟು ಟೀಕೆ ವ್ಯಕ್ತವಾಗಿದೆ.

ರಾಹುಲ್ ಗಾಂಧಿ ತನ್ನ ಭಾಷಣದುದ್ದಕ್ಕೂ ಮೋದಿಯನ್ನು ಟೀಕಿಸಿ ತನ್ನ ತೀಟೆ ತೀರಿಸಿಕೊಂಡಿದ್ದಾರೆ. ನೋಟು ನಿಷೇಧ ಕೇಂದ್ರ ಸರ್ಕಾರ ಮಾಡಿದ ಅತೀ ದೊಡ್ಡ ತಪ್ಪು. ಇದರಿಂದ ದೇಶದ ಅಭಿವೃದ್ಧಿ ದರ ಕುಂಠಿತವಾಗಿದೆ. ಅವೈಜ್ಞಾನಿಕವಾಗಿ ಜಾರಿ ಮಾಡಿದ ಜಿಎಸ್‍ಟಿಯಿಂದಾಗಿ ಜನ ತೊಂದರೆ ಅನುಭವಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಬೇಕು. ಜಿಎಸ್ ಟಿಯಿಂದ ಜನಸಾಮಾನ್ಯರಿಗೆ ಸಮಸ್ಯೆಯಾಗಿದೆ. ನೋಟು ಅಮಾನ್ಯೀಕರಣ ತಪ್ಪು ನಿರ್ಧಾರ. ನಮ್ಮ ಕಾಂಗ್ರೆಸ್ ಪಕ್ಷದ ಯೋಜನೆಗಳಿಗೆ ಬಿಜೆಪಿ ಹೆಸರು ಬದಲಾಯಿಸಿಕೊಂಡಿದೆ. ಯಾವುದೇ ನೀತಿಯನ್ನಾಗಲಿ ಅಥವಾ ಯೋಜನೆಯನ್ನಾಗಲಿ ಜಾರಿಗೆ ಮಾಡಬೇಕಾದರೆ ಕಾಂಗ್ರೆಸ್ ಸರ್ಕಾರ ಮೊದಲು ಚರ್ಚಿಸುತ್ತಿತ್ತು. ಬದಲಾಗಿ ಒಪ್ಪಿಗೆ ಇಲ್ಲದೆ ಹೇರುತ್ತಿರಲಿಲ್ಲ. ಆದರೆ ಮೋದಿ ಸರ್ಕಾರ ಚರ್ಚೆಗಳಿಲ್ಲದೇ ತನ್ನ ಮೂಗಿನ ನೇರಕ್ಕೆ ಆಲೋಚಿಸಿ ನೀತಿಗಳನ್ನು ಯೋಜನೆಗಳನ್ನು ಜನರ ಮೇಲೆ ಹೇರುತ್ತಿದೆ ಎಂದರು.

ರಾಹುಲ್ ಈ ವಿಚಾರದ ಬಗ್ಗೆ ಸಾಕಷ್ಟು ಬಾರಿ ಮಾತಾಡಿದ್ದಾನೆ. ಈ ವಿಚಾರಗಳನ್ನು ಹೇಳಲು ರಾಹುಲ್ ಅಲ್ಲಿಗೆ ಹೋಗಬೇಕಿತ್ತಾ? ವಿದ್ಯಾರ್ಥಿಗಳ ಜೊತೆ
ಮಾತಾಡುವಾಗ ಸಾಕಷ್ಟು ಪೂರ್ವತಯಾರಿ ಮಾಡಿಕೊಳ್ಳಬೇಕಿತ್ತು. ಆದರೆ ಚುನಾವಣೆಯಲ್ಲಿ ನಿಂತು ಮಾಡಿದ ಭಾಷಣದಂತೆ ರಾಹುಲ್ ಭಾಷಣ ಮಾಡಿದ್ದಾರೆ.
ವಂಶ ರಾಜಕಾರಣದ ಬಗ್ಗೆ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ವಂಶರಾಜಕಾರಣವನ್ನು ಸಮರ್ಥಿಸಲು ಹೋದ ರಾಹುಲ್ ಗಾಂಧಿ, ಅಭಿಷೇಕ್ ಬಚ್ಚನ್ ಮತ್ತು
ಅಂಬಾನಿಯನ್ನು ಉದಾಹರಣೆಗೆ ತೆಗೆದುಕೊಂಡರು. ಈ ಕುಟುಂಬದಿಂದ ದೇಶ ಹೇಗೆ ನಡೆಯುತ್ತಿದೆ ಎಂದರು. ವಂಶರಾಜಕಾರಣವನ್ನು ಸಮರ್ಥಿಸುವ ಭರದಲ್ಲಿ
ಅಂಬಾನಿ ಉತ್ತಮ ವ್ಯಾಪಾರಿ, ಬಚ್ಚನ್‍ನ ನಟನಾ ಸಾಮಥ್ರ್ಯ ಉತ್ತಮವಾಗಿದೆ ಎಂದು ವಿವರಿಸಿ ಯಾರನ್ನು ಉದಾಹರಿಸಬೇಕೆಂದೇ ರಾಹುಲ್‍ಗೆ ಗೊತ್ತಾಗಿಲ್ಲ.
ರಾಹುಲ್‍ಗೆ ತಾನು ವಿದ್ಯಾರ್ಥಿಗಳ ಜೊತೆ ಮಾತಾಡುತ್ತಿದ್ದೇನೆ ಎಂದೇ ಮರೆತುಹೋಗಿತ್ತು. ಸ್ಟಾಲಿನ್, ಅಖಿಲೇಶ್ ಯಾದವ್ ಕುಟುಂಬ ರಾಜಕಾರಣದಲ್ಲಿ
ನೆಲೆಕಂಡುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಮೋದಿಯವರ ಕೆಲವೊಂದು ಕೌಶಲಗಳು ಉತ್ತಮವಾಗಿದೆ. ಮೋದಿಯವರು ನನಗಿಂತ ಉತ್ತಮ ಸಂವಹನಕಾರ ಎಂಬುದರಲ್ಲಿ ಸಂದೇಹವಿಲ್ಲ. ಏಕಕಾಲದಲ್ಲಿ 3-4 ವಿಭಿನ್ನ ಗುಂಪಿನ ಜನರಿಗೆ ಸಂದೇಶ ಸಾರಬಲ್ಲ ಸಾಮರ್ಥ್ಯ ಮೋದಿಯವರಲ್ಲಿದೆ. ಆದರೆ, ನನಗನಿಸುತ್ತದೆ ಸುಮ್ಮನೆ ಮಾತನಾಡುವುದರಿಂದ ಪ್ರಯೋಜನವಿಲ್ಲ ಜನರ ಜತೆ ಬೆರೆತು ಕೆಲಸ ನಿರ್ವಹಿಸಬೇಕು ಎಂದು ರಾಹುಲ್ ಹೇಳಿದರು. ಸಂವಾದದಲ್ಲಿ ಹೊಸ ವಿಚಾರವನ್ನು ಮಂಡಿಸುವ ಬದಲು ರಾಹುಲ್ ಮತ್ತೆ ಮೋದಿಯನ್ನು ಟೀಕಿಸಿ ತನ್ನ ಭಾಷಣ ಚರ್ವಿತ ಚರ್ವಣ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.

“ದ್ವೇಷ, ಕೋಪ ಮತ್ತು ಹಿಂಸೆಯು ನಮ್ಮನ್ನು ಹಾಳುಮಾಡುತ್ತದೆ. ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಸಾಕಷ್ಟು ತಪ್ಪುಗಳು ನುಸುಳಿದ್ದು, ಈ ವಿಚಾರವನ್ನು ದೇಶದ
ಪ್ರತಿಯೊಬ್ಬ ಪ್ರಜೆಯೂ ತಿಳಿದಿದ್ದಾನೆ. ಪ್ರಶ್ನೆ ಮಾಡುವ ವಿಚಾರವಾದಿ ಪತ್ರಕರ್ತರನ್ನು ಕೊಲ್ಲಲಾಗುತ್ತಿದೆ. ಇದೇ ಹಿಂಸಾಚಾರ ನಮ್ಮ ಅಜ್ಜಿ ಹಾಗೂ ತಂದೆಯನ್ನು ಬಲಿ ಪಡೆದಿತ್ತು. ಆದರೆ ಈ ಹಿಂಸಾಚಾರದಿಂದ ಹಿಂಸಾಚಾರ ಹೆಚ್ಚಾಗುತ್ತದೆಯೇ ಹೊರತು ನ್ಯಾಯ ಸಿಗುವುದಿಲ್ಲ. ಭಾರತ ಎಡ ಪಂಥೀಯವೋ ಅಥವಾ ಬಲ
ಪಂಥೀಯವೋ ಎಂದು ಹಿಂದೆ ನಮ್ಮಜ್ಜಿ ಇಂದಿರಾ ಗಾಂಧಿ ಅವರನ್ನು ಇಲ್ಲಿ ಪ್ರಶ್ನಿಸಲಾಗಿತ್ತು. ಅದಕ್ಕೆ ಅಂದು ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು, ಭಾರತ
ನೇರವಾಗಿ ಮತ್ತು ಎತ್ತರವಾಗಿ ನಿಲ್ಲುತ್ತದೆ ಎಂದಿದ್ದರು ಎಂದರು. ಗೌರಿ ಲಂಕೇಶ್ ಹತ್ಯೆಯನ್ನು ತನ್ನ ಭಾಷಣದಲ್ಲಿ ಉಲ್ಲೇಖಿಸಿದ ರಾಹುಲ್ ಅದನ್ನು ಹೊರದೇಶದ
ವಿದ್ಯಾರ್ಥಿಗಳ ಮುಂದೆ ಪ್ರದರ್ಶಿಸಿ ಈ ಹತ್ಯೆಯನ್ನು ತನ್ನ ಚುನಾವಣೆಯ ಸರಕು ಮಾಡಿಕೊಂಡಿರುವುದರ ಸುಳಿವು ನೀಡಿದರು.

ಕಾಶ್ಮೀರದಲ್ಲಿ ಹಿಂಸಾತ್ಮಕ ಘಟನೆಗಳು ಹೆಚ್ಚಾಗಿವೆ. ಉಗ್ರರ ಚಟುವಟುಕೆ ತೀವ್ರವಾಗಿದೆ. ಕಾಶ್ಮೀರದಲ್ಲಿ ಶಾಂತಿ ನೆಲೆಸುವುದಕ್ಕಾಗಿ 9 ವರ್ಷಗಳ ಕಾಲ ಯುಪಿಎ
ಸರ್ಕಾರ ಮಾಡಿದ್ದ ಕೆಲಸವನ್ನು ಈಗಿನ ಎನ್‍ಡಿಎ ಸರ್ಕಾರ ಕೇವಲ 30 ದಿನಗಳಲ್ಲಿ ಹಾಳುಗೆಡವಿದೆ ಎಂದು ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದರು. ನಿಜವಾಗಿ ನೋಡುವುದಾದರೆ ಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆ ಕಡಿಮೆಯಾಗಿದೆ. ನಿಜವಾಗಿಯೂ ರಾಹುಲ್‍ಗೆ ತನ್ನ ದೇಶದ ಬಗ್ಗೆ ಕಾಳಜಿ ಇದ್ದಿದ್ದರೆ ಭಯೋತ್ಪಾದನೆಯ ಬಗ್ಗೆ ತನ್ನ ದೇಶದ ಸಾಮಥ್ರ್ಯವನ್ನು ಪ್ರದರ್ಶಿಸಬೇಕಿತ್ತು. ಆದರೆ ರಾಹುಲ್ ಯಾವುದನ್ನೂ ಮಾಡದೆ ತನ್ನ ದೇಶದ ಬಗ್ಗೆ ಇನ್ನೊಂದು ದೇಶದಲ್ಲಿ ಟೀಕಿಸಿ ತಾನೊಬ್ಬ ರಾಜಕೀಯ ಪಕ್ಷವೊಂದರ ಮುಖಂಡನೆಂಬುವುದನ್ನೂ ಮರೆತಂತಿತ್ತು.

ಒಂದು ದೇಶದ ಹೊರಗಡೆ ನಿಂತು ತನ್ನ ದೇಶದ ಬಗ್ಗೆ ಯಾವ ರೀತಿ ಮಾತಾಡಬೇಕೆಂದು ತಿಳಿಯದ ರಾಹುಲ್ ಗಾಂಧಿಯವರ ಭಾಷಣ ರಾಯ್‍ಬರೇಲಿಯಲ್ಲಿ
ಚುನಾವಣೆಗೆ ನಿಂತು ಮಾಡಿದ ಭಾಷಣದಂತಿತ್ತು. ಅಲ್ಲದೆ ಭಾರತದ ಶಾಸನ ಸಭೆ, ಲೋಕಸಭೆ ಇದರ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲದ ರಾಹುಲ್ ಭಾಷಣ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆಂಬ ಸರ್ವತ್ರ ಟೀಕೆ ವ್ಯಕ್ತವಾಗಿದೆ.

ರಾºಮುಂದಕ್ಕೆ ಲಾಸ್ ಎಂಜಿಲೀಸ್‍ಗೆ ಪ್ರಯಾಣ ಮಾಡಲಿದ್ದಾರೆ. ಅಲ್ಲಿ ಅಸ್ಪೆನ್ ಸಂಸ್ಥೆಗೆ ಭೇಟಿ ನೀಡಲಿದ್ದಾರೆ. ಅದಾದ ನಂತರ ವಾಷಿಂಗ್ಟನ್ ಡಿಸಿಗೆ ತೆರಳಿ, ಪ್ರಿನ್ಸಟನ್ ವಿವಿಯಲ್ಲಿ ಭಾಷಣ ಮಾಡಲಿದ್ದಾರೆ. ಅಂತಿಮವಾಗಿ ನ್ಯೂಯಾರ್ಕ್‍ನಲ್ಲಿಯೂ ಭಾಷಣ ಮಾಡಲಿದ್ದಾರೆ. ಇಲ್ಲಿ ರಾಹುಲ್ ಏನು ಭಾಷಣ ಮಾಡುತ್ತಾರೋ ಎಂಬ ಆತಂಕ ಶುರುವಾಗಿದೆ.

source: original Aninews!

-Chekitana

Tags

Related Articles

Close