ಅಂಕಣದೇಶಪ್ರಚಲಿತ

ಗಟಾರಕ್ಕೆ ಬಿತ್ತು ಚೀನಾ ಮೊಬೈಲುಗಳು! ತವರಿಗೆ ವಾಪಾಸಾದ ನೌಕರರು!

ಹಲವು ಬಲಿಷ್ಠ ದೇಶಗಳ ಪೈಕಿ ಚೀನಾ ತನ್ನದೇ ಆದ ಸಾಮಥ್ರ್ಯದಿಂದ ಪ್ರಭಾವಶಾಲಿ ರಾಷ್ಟ್ರ ಎನ್ನುವ ಹೆಗ್ಗಳಿಕೆಯನ್ನು ಗಳಿಸಿದೆ. ಆದರೆ ಇತ್ತೀಚೆಗೆ ನಡೆದ ದೋಕಲಂ ಗಡಿ ಪ್ರದೇಶ ವಿವಾದದಿಂದ ಹಿಂದೆ ಸರಿದಿದ್ದು ಭಾರತದ ಎದುರು ಹೀನಾಯವಾಗಿ ಸೋಲನ್ನು ಅನುಭವಿಸಿರುವುದು ಚೀನಾಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಆದರೆ ಇದೀಗ ಚೀನಾ ಭಾರತದ ಎದುರು ಮತ್ತೊಂದು ಸಂಕಷ್ಟಕ್ಕೆ ಬಲಿಯಾದಂತಿದೆ.
ಚೀನಾ ಸಾಕಷ್ಟು ಉತ್ಪನ್ನಗಳನ್ನು ಭಾರತಕ್ಕೆ ರಫ್ತು ಮಾಡುತ್ತಿದ್ದು ಇದೀಗ ಭಾರತ ಚೀನಾದ ವಸ್ತುಗಳನ್ನು ಬಹಿಷ್ಕರಿಸುವ ಚಳುವಳಿ ಆರಂಭಿಸಿರುವುದು ದೊಡ್ಡ
ಸಂಕಷ್ಟಕ್ಕೀಡು ಮಾಡಿದೆ. ಚೀನಾ ಈಗಾಗಲೇ ದೋಕಲಂ ವಿಚಾರವಾಗಿ ಸಾಕಷ್ಟು ತೊಂದರೆಗಳನ್ನು ನೀಡಿರುವುದು ಗೊತ್ತಿರುವ ಸಂಗತಿ. ಆದರೆ ದೋಕಲಂ
ಭಾಗದಿಂದ ಸೇನೆಯನ್ನು ವಾಪಸ್ ಕರೆಸದಿದ್ದರೆ ಭಾರತವನ್ನು ಬಗ್ಗುಬಡಿಯುವುದಾಗಿ ಎಚ್ಚರಿಸುತ್ತಲೇ ಬರುತ್ತಿದ್ದ ಭಾರತಕ್ಕೇ ಇದೀಗಾ ಚೀನಾವೇ ಶಿರ ಬಾಗಿದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಅದಲ್ಲದೇ ಚೀನಾವೇ ಭಾರತದ ಎದುರು ಆರ್ಥಿಕ ನಷ್ಟಕ್ಕೆ ಸಿಲುಕಿರುವುದು ಮತ್ತೊಂದು ಚೀನಾಕ್ಕೆ ಎದುರಾಂತಹ ಸೋಲು!!

ಭಾರತ ಹಾಗೂ ಚೀನಾ ನಡುವೆ ಉದ್ಭವಿಸಿದ್ದ ಬಿಕ್ಕಟ್ಟು ಚೀನಾದ ಮೊಬೈಲ್ ಕಂಪನಿಗಳಿಗೆ ಇದೀಗಾ ಭಾರಿ ಹೊಡೆತ ನೀಡಿದೆ. ಈಗಾಗಲೇ ಚೀನಾದಿಂದ ಭಾರತಕ್ಕೆ ಮುಖ್ಯವಾಗಿ 93 ಉತ್ಪನ್ನಗಳು ರಫ್ತು ಮಾಡಲಾಗುತ್ತಿದ್ದು, ಇದರ ವಿರುದ್ಧ ಭಾರತ ಆ್ಯಂಟಿ ಡಂಪಿಂಗ್ ಆಕ್ಟ್ ಮೂಲಕ ಪಾಠ ಕಲಿಸಿತ್ತು. ಚೀನಾ ಭಾರತದ ಜೊತೆ 51 ಬಿಲಿಯನ್ ಡಾಲರ್‍ಗಳಷ್ಟು ವ್ಯವಹಾರ ಮಾಡುತ್ತಿದೆ. ಅಲ್ಲದೆ 60 ಬಿಲಿಯನ್ ಡಾಲರ್ ಕೆಲಸವನ್ನು ಚೀನಾ ಭಾರತದಲ್ಲಿ ಕೈಗೊಳ್ಳುತ್ತಿದೆ. ಆದರೆ ಇದಕ್ಕೆಲ್ಲ ಈಗ ಬಿಗ್ ಬ್ರೇಕ್ ನೀಡಿದಂತಿದೆ.

ವಿಪರ್ಯಾಸ ಎಂದರೆ ಚೀನಾ ವಿರೋಧಿ ಭಾವನೆ ಭಾರತೀಯರಲ್ಲಿ ಬಲವಾಗಿ ಮೊಳೆತ ಫಲವಾಗಿ ಇದೀಗ ಭಾರತದಲ್ಲಿ ಚೀನಾ ಉತ್ಪನ್ನಗಳ ಖರೀದಿ ಕಡಿಮೆಯಾಗಿದೆ. ಅದರಲ್ಲೂ ಚೀನಿ ಮೂಲದ ಮೊಬೈಲ್ ಕಂಪನಿಗಳು ವಿಶೇಷವಾಗಿ ಒಪ್ಪೋ ಹಾಗೂ ವೀವೊ ಮೊಬೈಲ್ ಗಳ ಮಾರಾಟ ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಗಣನೀಯವಾಗಿ ಕುಸಿತವನ್ನು ಕಂಡಿದೆ. ಈ ಮುಂಚೆ ಚೀನಾ ಕಂಪೆನಿಗಳ ವಿರುದ್ಧ ಭಾರತ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡುವುದರ ಜೊತೆಗೆ ಚೀನಾ ಮೊಬೈಲ್‍ಗಳ ವಿಶ್ವಾಸಾರ್ಹತೆಯನ್ನು ದೃಢೀಕರಿಸುವಂತೆ ತಾಕೀತು ಮಾಡಿತು. ಆದರೆ ಇದನ್ನೆಲ್ಲ ಲೆಕ್ಕಿಸದ ಚೀನಾ ತನ್ನ ವ್ಯವಹಾರವನ್ನು ವೃದ್ಧಿಸುವಲ್ಲೇ ತನ್ನ ಸಮಯ ಕಳೆಯಿತು. ಭಾರತದಲ್ಲಿ ಚೀನಾ ವಸ್ತುಗಳ ವಿರುದ್ಧ ಚಳುವಳಿ ಆರಂಭವಾಗಿದ್ದು, ಇದೀಗ ಚೀನಾ ಉತ್ಪನ್ನಗಳಿಗೆ ಭಾರತದಲ್ಲಿ ಬೇಡಿಕೆ ಕಡಿಮೆಯಾಗಿದೆ. ಅಲ್ಲದೇ ಚೀನಾಕ್ಕೆ ದೊಡ್ಡ ಆರ್ಥಿಕ ಹೊಡೆತ ನೀಡಿದೆ.

ಹೀಗಾಗಿ ದೇಶದಲ್ಲಿ ದುಡಿಯುತ್ತಿದ್ದ ಚೀನಾದ ಒಪ್ಪೋ  ಹಾಗೂ ವೀವೊ ಮೊಬೈಲ್‍ನ ಎರಡೂ ಕಂಪನಿಗಳ ಸುಮಾರು 400 ಚೀನಿ ನೌಕರರು ಗಂಟು, ಮೂಟೆ
ಕಟ್ಟಿಕೊಂಡು ತವರಿಗೆ ಮರಳುತ್ತಿದ್ದಾರೆ. ಅಲ್ಲದೇ ದೋಕಲಂ ಬಿಕ್ಕಟ್ಟು ಸೃಷ್ಟಿಯಾದ ಬಳಿಕ ಈ ಎರಡೂ ಕಂಪನಿಗಳ ಮೊಬೈಲ್ ಮಾರಾಟದಲ್ಲಿ ಶೇ.30ರಷ್ಟು ಕುಸಿತ ಕಂಡುಬಂದಿದೆ. ಇಷ್ಟು ಮಾತ್ರವಲ್ಲದೇ ದೇಶದಲ್ಲಿ ಚೀನಾ ಮೂಲದ ಕ್ಸಿಯೋಮಿ, ಲೆನೋವೋ, ಮೋಟೊ ರೋಲ ಹಾಗೂ ಒನ್’ಪ್ಲಸ್ ಕಂಪನಿಯ ಮೊಬೈಲ್‍ಗಳೂ ಈಗಾಗಲೇ ತನ್ನ ಬೇಡಿಕೆಯಲ್ಲಿ ಪಾತಾಳಕ್ಕಿಳಿದಿದೆ. ಆದರೆ ಒಪ್ಪೋ ಹಾಗೂ ವೀವೊ ಚೀನಿ ಬ್ರ್ಯಾಂಡ್’ಗಳು ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ಬೇರೂರಿರುವುದೇ ಮಾರಾಟ ಕುಸಿಯಲು ಕಾರಣ ಎನ್ನಲಾಗಿದೆ.

ಭಾರತದಲ್ಲಿ ಚೀನಿ ವಸ್ತುಗಳು ಎಷ್ಟರ ಮಟ್ಟಿಗೆ ಜನ ಬಹಿಷ್ಕರಣೆ ಆರಂಭಿಸಿದ್ದಾರೆ ಎಂದರೆ ದೀಪಾವಳಿ ಅಲಂಕಾರಕ್ಕೆ ವಸ್ತುಗಳ ಖರೀದಿ ಸಂದರ್ಭದಲ್ಲಿ ಗ್ರಾಹಕರು ಚೀನಿ ವಸ್ತುಗಳನ್ನು ಬಹಿಷ್ಕರಿಸುತ್ತಿದ್ದಾರೆ. ಈಗಾಗಲೇ ನಾವು ಮೊಬೈಲ್‍ಗಳಿಂದ ಹಿಡಿದು, ಚಾರ್ಜರ್, ವಿದ್ಯುತ್ ಬಲ್ಬ್, ಎಲೆಕ್ಟ್ರಾನಿಕ್ ವಸ್ತುಗಳು ಹೀಗೆ ನಮಗೆ ಗೊತ್ತಿಲ್ಲದೇ ಅನೇಕ ನಿತ್ಯ ಬಳಕೆಯಲ್ಲಿ ಬಳಸುವ ವಸ್ತುಗಳು ಚೀನಾ ಉತ್ಪನ್ನಗಳೇ ಆಗಿವೆ. ಒಂದು ರೀತಿಯಲ್ಲಿ ನಾವು ಚೀನಾ ಉತ್ಪನ್ನಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದೇವೆ ಕೂಡ. ಆದರೆ ಇದೀಗಾ ಕೆಲವೊಂದು ಅಂಗಡಿಗಳಲ್ಲಿ “ಚೀನಿ ವಸ್ತು ಇಲ್ಲಿ ನಿಷೇಧ” ಎಂದು ನಾಮಫಲಕಗಳನ್ನು ಹಾಕಿಕೊಂಡಿದ್ದು, ಚೀನಿ ವಸ್ತುಗಳ ಮೇಲೆ ಜನತೆ ಎಚ್ಚೆತ್ತುಕೊಂಡಿರುವುದಂತು ನಿಜ.

ಚೀನಾ ಉತ್ಪನ್ನಗಳನ್ನು ಭಾರತದಲ್ಲಿ ಸಂಪೂರ್ಣವಾಗಿ ನಿಷೇಧಿಸಬೇಕು ಎಂಬ ಬಯಕೆ ಹೆಚ್ಚಿನವರಲ್ಲಿ ಇತ್ತಾದರೂ ಇಷ್ಟವಿಲ್ಲ ಎಂಬ ಒಂದೇ ಕಾರಣಕ್ಕೆ ನಾವು ಒಂದು ದೇಶದ ಉತ್ಪನ್ನಗಳನ್ನು ನಿಷೇಧಿಸಲಾಗುವುದಿಲ್ಲ. ರಾಷ್ಟ್ರವೊಂದರ ಉತ್ಪನ್ನಗಳನ್ನು ನಿಷೇಧಿಸಬೇಕಾದರೆ ಅದು ವಸ್ತುಗಳನ್ನು ಸುಮ್ಮನೇ ತಂದು ಸುರಿಯುತ್ತಿದೆ ಎಂಬುದನ್ನು ನಿರೂಪಿಸಬೇಕು ಇಲ್ಲವೇ ಗುಣಮಟ್ಟದ ಸಮಸ್ಯೆ ಇರಬೇಕು. ಆದರೆ ಇದಾವುದೂ ನಡೆಯದೇ ದೋಕಲಂ ಗಡಿ ಪ್ರದೇಶ ವಿವಾದದಿಂದ ಚೀನಿ ಉತ್ಪನ್ನಗಳ ಖರೀದಿ ಕಡಿಮೆಯಾಗಿರುವುದು ಅಚ್ಚರಿಯ ಸಂಗತಿ.

– ಸರಿತಾ

Tags

Related Articles

Close