ಅಂಕಣಪ್ರಚಲಿತ

ಗಣಪತಿಯದ್ದು ಆತ್ಮಹತ್ಯೆಯಲ್ಲ ವ್ಯವಸ್ಥಿತ ಕೊಲೆ…!!!??? ಈ ಅನುಮಾನ ಮೂಡಲು ಕಾರಣವಾದ ಅಂಶಗಳನ್ನು ನೋಡಿದರೆ ಖಂಡಿತಾ ದಂಗಾಗುವಿರಿ!!!

ಡಿವೈಎಸ್‍ಪಿ ಎಂ.ಕೆ. ಗಣಪತಿ ಸಾವಿಗೆ ಯಾರು ಕಾರಣ ಎಂದು ತಿಳಿಯಲು ಬೇರೆ ಯಾವ ಸಾಕ್ಷ್ಯಗಳ ಅಗತ್ಯವೇ ಇರಲಿಲ್ಲ. ಯಾಕೆಂದರೆ ಸ್ವತಃ ಗಣಪತಿ ಅವರೇ ಸಚಿವ ಕೆ.ಜೆ. ಜಾರ್ಜ್, ಪೊಲೀಸ್ ಅಧಿಕಾರಿಗಳಾದ ಮೊಹಾಂತಿ ಮತ್ತು ಎ.ಎಂ. ಪ್ರಸಾದ್ ಅವರ ಹೆಸರನ್ನು ಉಲ್ಲೇಖಿಸಿದ್ದರು. ಈ ವಿಡಿಯೋವನ್ನು ಮುಖ್ಯ ಪುರಾವೆಯನ್ನಾಗಿ ಸ್ವೀಕರಿಸಿ ಆ ಮೂವರು ವ್ಯಕ್ತಿಗಳನ್ನು ಸರಿಯಾಗಿ ತನಿಖೆ ನಡೆಸಿದ್ದರೂ ಗಣಪತಿ ಅವರದ್ದು ಆತ್ಮಹತ್ಯೆಯೋ, ಅಥವಾ ಅವರ ಆತ್ಮಹತ್ಯೆಗೆ ಕಾರಣ ಯಾರು ಎಂಬುವುದನ್ನು ಸ್ಪಷ್ಟವಾಗಿ ಅಂದಾಜಿಸಬಹುದಿತ್ತು. ಒಬ್ಬನ ಆತ್ಮಹತ್ಯೆಗೆ ಪ್ರೇರಣೆ ನೀಡಿದರೂ ಅದು ಕೊಲೆ ಪ್ರಕರಣಕ್ಕೆ ಸಮವಾಗುತ್ತದೆ. ಆದರೆ ಕೆ.ಜೆ. ಜಾರ್ಜನ್ನು ರಕ್ಷಿಸಲು ಕಾಂಗ್ರೆಸ್ ಎಂತಹಾ ನೀಚ ಕೃತ್ಯಕ್ಕೂ ಕೈಹಾಕುತ್ತದೆ ಎಂಬುವುದನ್ನು ಈ ಕೆಲವು ಘಟನೆಗಳು ತಿಳಿಸುತ್ತದೆ.

 

ಹಾಗಾದರೆ ಗಣಪತಿ ಪ್ರಕರಣವನ್ನು ಮುಚ್ಚಿ ಹಾಕಲು ಕಾಂಗ್ರೆಸ್ ಮಾಡಿದ ಕೃತ್ಯವಾದರೂ ಏನು ಗೊತ್ತಾ? ಈಚಿನ ವಿದ್ಯಾಮಾನವನ್ನು ನೋಡಿದಾಗ ಗಣಪತಿಯವರನ್ನು ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದೆ ಎಂಬ ಅನುಮಾನ ಮೂಡುತ್ತಿದೆ. ಯಾಕೆಂದರೆ ಒಬ್ಬ ಪೊಲೀಸ್ ಅಧಿಕಾರಿ ಮಾಡಿಕೊಳ್ಳುತ್ತಾನೆ ಅಂದರೆ ಯಾರೂ ನಂಬುವಂತಿಲ್ಲ. ಯಾಕೆಂದರೆ ಪೊಲೀಸ್ ಅಧಿಕಾರಿಗಳ ಮನೋಸ್ಥೈರ್ಯ, ಆತ್ಮಸ್ಥೈರ್ಯ ಅಷ್ಟು ಸುಲಭವಾಗಿ ಕುಸಿಯುವುದಿಲ್ಲ. ಆದರೆ ಗಣಪತಿಯವರು ಸ್ವತಃ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದನ್ನು ಬಿಂಬಿಸಲು ಏನೆಲ್ಲಾ ಮಾಡಬೇಕೋ ಅದನ್ನೆಲ್ಲಾ ಕಾಂಗ್ರೆಸ್ ಮಾಡಿಕೊಂಡಿದೆ. ಕಾಂಗ್ರೆಸ್ ಸರಕಾರ ಗಣಪತಿ ಪ್ರಕರಣವನ್ನು ಮುಚ್ಚಿ ಹಾಕಲು ಮಾಡಿದ ಕಿತಾಪತಿಗಳನ್ನು ನೋಡಿದಾಗ ಗಣಪತಿ ಅವರದ್ದು ಕೊಲೆಯಾಗಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಯಾಕೆಂದರೆ ಈ ಅನುಮಾನಕ್ಕೆ ಕಾರಣವಾದ ಅಂಶಗಳೇನು ಗೊತ್ತಾ?

`ಗಣಪತಿಯವರ ಮೊಬೈಲ್ ಹಾಗೂ ಕಂಪ್ಯೂಟರ್‍ನಲ್ಲಿದ್ದ ಮಹತ್ವದ ದಾಖಲೆಗಳನ್ನು ಅಳಿಸಿ ಹಾಕಿರುವ ವಿಚಾರ ಬಹಿರಂಗವಾಗಿತ್ತು. ಆದರೆ ಇದೀಗ ಗಣಪತಿ ಆತ್ಮಹತ್ಯೆ ಮಾಡಿಕೊಂಡ ಲಾಡ್ಜ್‍ನ ಸಿಸಿ ಕ್ಯಾಮರಾದ ಡಿವಿಆರ್‍ನಲ್ಲಿದ್ದ ಸಾಕ್ಷ್ಯಗಳನ್ನೂ ನಾಶಪಡಿಸಲಾಗಿದೆ ಎಂಬ ಮತ್ತೊಂದು ಕುತೂಹಲಕಾರಿ ಅಂಶ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಿಂದ ಬಹಿರಂಗವಾಗಿದೆ.

2016ರ ಜು.7ರಂದು ಮಡಿಕೇರಿಯ ವಿನಾಯಕ ಲಾಡ್ಜ್‍ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗಣಪತಿ ಶವ ಪತ್ತೆಯಾಗಿತ್ತು. ಈ ಪ್ರಕರಣ ಸಾಕಷ್ಟು ಕೋಲಾಹಲಕ್ಕೆ
ಕಾರಣವಾಗಿತ್ತು. ಡಿ.ಕೆ. ರವಿ ನಿಗೂಢ ಸಾವಿನ ಬಳಿಕ ಗಣಪತಿಯವರ ನಿಗೂಢ ಸಾವು ಒಂದು ವಿಶೇಷ ಆಯಾಮವನ್ನು ಸೃಷ್ಟಿಸಿತ್ತು.

ಒಬ್ಬ ಆತ್ಮಹತ್ಯೆ ಮಾಡಿಕೊಂಡರೆ ಅದನ್ನು ಸುಲಭವಾಗಿ ಆತ್ಮಹತ್ಯೆ ಎಂದು ವರದಿ ಸಲ್ಲಿಸಲು ಪೊಲೀಸರಿಗೆ ಅವಕಾಶವಿಲ್ಲ. ಯಾಕೆಂದರೆ ಅದು ಆತ್ಮಹತ್ಯೆಯೋ
ಅಥವಾ ಕೊಲೆಯೋ, ಆತ್ಮಹತ್ಯೆಯಾಗಿದ್ದರೆ ಅದಕ್ಕೆ ಪೂರಕ ಪುರಾವೆಗಳನ್ನು ಕೊಡುವುದು ಪೊಲೀಸ್ ಇಲಾಖೆಯ ಕೆಲಸ. ಆದರೆ ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದ ರೂಮಿನಿಂದ ವಶಕ್ಕೆ ಪಡೆದಿದ್ದ ಸಿಸಿ ಕ್ಯಾಮರಾದ ಹಾರ್ಡ್ ಡಿಸ್ಕ್‍ನಲ್ಲಿದ್ದ (ಡಿವಿಆರ್) ಘಟನೆಯ ದಿನದ ದೃಶ್ಯಗಳನ್ನು ಅಳಿಸಿ ಹಾಕಿ ಹಳೇ ವಿಡಿಯೋಗಳನ್ನು ತುಂಬಿಸಿರುವುದು ಸಾಕಷ್ಟು ಅನುಮಾನಗಳಿಕೆ ಕಾರಣವಾಗಿದೆ.

ಬೆಳಕಿಗೆ ಬಂದಿದ್ದು ಹೇಗೆ ಗೊತ್ತಾ?

ಗಣಪತಿ ಅಸಹಜ ಸಾವು ಪ್ರಕರಣದ ವಿಚಾರಣೆ ಕೈಗೊಂಡ ನಿವೃತ್ತ ನ್ಯಾ. ಕೇಶವನಾರಾಯಣ ಆಯೋಗ ಪ್ರಕರಣದ ಎಲ್ಲ ಸಾಕ್ಷ್ಯಾಧಾರಗಳನ್ನು ವಶಕ್ಕೆ ಪಡೆದಿದೆ. ಈ ಪೈಕಿ ಡಿವಿಆರ್ ಅನ್ನು ಮಡಿವಾಳ ಎಫ್‍ಎಸ್‍ಎಲ್‍ಗೆ ರವಾನಿಸಿ ಮತ್ತೊಂದು ವರದಿ ನೀಡುವಂತೆ ಸೂಚಿಸಿತ್ತು. ಪರೀಕ್ಷೆಗೆ ಯೋಗ್ಯವಾಗಿಲ್ಲವೆಂದು ಎಫ್‍ಎಸ್‍ಎಲ್ ಅಧಿಕಾರಿಗಳು ವರದಿ ನೀಡಿದ್ದರು. ಇಷ್ಟಕ್ಕೆ ಸುಮ್ಮನಾಗದ ಆಯೋಗ ಜೂ.30ಕ್ಕೆ ಹೈದರಾಬಾದ್ ಕೇಂದ್ರದ ಎಫ್‍ಎಸ್‍ಎಲ್‍ಗೆ ಡಿವಿಆರ್ ರವಾನಿಸಿ ವರದಿ ಕೋರಿತ್ತು.

ಪರೀಕ್ಷೆ ನಡೆಸಿದ ವಿಜ್ಞಾನಿ ಸಿ.ಎಚ್. ಈಶ್ವರ್ ಪ್ರಸಾದ್ ಆ. 8ಕ್ಕೆ ಆಯೋಗಕ್ಕೆ ಡಿವಿಆರ್ ಕುರಿತು ವರದಿ ಸಲ್ಲಿಸಿದ್ದರು. ಇದರಲ್ಲಿ ವಿಡಿಯೋ ತುಣುಕು ನಾಶ ಮಾಡಿ 14 ವರ್ಷ ಹಳೆಯ ವಿಡಿಯೋ ತುಂಬಿರುವುದು ಬೆಳಕಿಗೆ ಬಂದಿತ್ತು. ಪೆÇಲೀಸರ ಕಾನೂನುಬಾಹಿರ ಕೆಲಸವನ್ನು ಗಂಭೀರವಾಗಿ ಪರಿಗಣಿಸಿದ ಕೇಶವನಾರಾಯಣ ಆಯೋಗದ ಮುಂದೆ ಹಾಜರಾಗುವಂತೆ ವಿಜ್ಞಾನಿ ಸಿ.ಎಚ್. ಈಶ್ವರ್ ಪ್ರಸಾದ್‍ಗೆ ನೋಟಿಸ್ ಜಾರಿ ಮಾಡಿದ್ದರು. ಸೆ.7 ಮತ್ತು 8ಕ್ಕೆ ಆಯೋಗದ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ.

ಸಾಕ್ಷ್ಯ ನಾಶ ಮಾಡುವ ಅಗತ್ಯವಾದರೂ ಏನಿತ್ತು?

ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದೇ ನಿಜವಾಗಿದ್ದಲ್ಲಿ ಸಾಕ್ಷ್ಯಾಧಾರ ನಾಶ ಮಾಡುವ ಅಗತ್ಯವೇನಿತ್ತು ಎಂಬುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಗಣಪತಿ ಶವ ಪತ್ತೆಯಾದ ನಂತರ ಅಂದರೆ ಜು.9ರಂದು ವಿಡಿಯೋ ರೆಕಾರ್ಡ್ ಆಗಿದೆ. ಉಳಿದಂತೆ ಘಟನೆ ನಡೆದ ದಿನ, ಅದಕ್ಕೂ ಮೊದಲು, ಅದಾದ ಮೇಲೆ ಯಾವುದೇ ವಿಡಿಯೋ ಇಲ್ಲ. ಲಾಡ್ಜ್‍ನಲ್ಲಿದ್ದ ಸಿಸಿ ಕ್ಯಾಮರಾದ ಹಾರ್ಡ್ ಡಿಸ್ಕ್ 2013ರಲ್ಲಿ ಥಾಯ್ಲೆಂಡ್‍ನಲ್ಲಿ ತಯಾರಾಗಿದೆ. ಆದರೆ ಈ ಡಿವಿಆರ್‍ಗೆ 14 ವರ್ಷದ ಹಿಂದಿನ ವಿಡಿಯೋ ತುಣುಕುಗಳನ್ನು ತುಂಬಿರುವುದು ಹೈದರಾಬಾದ್‍ನಲ್ಲಿರುವ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಿಂದ ದೃಢವಾಗಿದೆ. ಗಣಪತಿ ಅಸಹಜ ಸಾವಿನ ಪ್ರಕರಣದ ಸತ್ಯಾಂಶ ಹೊರತರಲು ರಚಿಸಲಾಗಿರುವ ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಕೆ.ಎನ್. ಕೇಶವನಾರಾಯಣ ಅಧ್ಯಕ್ಷತೆಯ ವಿಚಾರಣಾ ಆಯೋಗದ ಮುಂದೆ ಹೈದರಾಬಾದ್‍ನ ವಿಧಿವಿಜ್ಞಾನ ಪ್ರಯೋಗಾಲಯದ ವಿಜ್ಞಾನಿ ಸಿ.ಎಚ್. ಈಶ್ವರ್ ಪ್ರಸಾದ್ ನೀಡಿರುವ ಹೇಳಿಕೆಯಲ್ಲಿ ಸ್ಪೋಟಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

2016ರ ಜುಲೈ 7ಕ್ಕೆ ಮಡಿಕೇರಿ ವಿನಾಯಕ ಲಾಡ್ಜ್ ನಲ್ಲಿ ಎಂ.ಕೆ.ಗಣಪತಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೊದಲು ಮಡಿಕೇರಿ ನಗರ ಪೆÇಲೀಸರು
ಸ್ಥಳ ಮಹಜರು ಮಾಡಿ ಲಾಡ್ಜ್‍ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದ ಡಿವಿಆರ್ ವಶಕ್ಕೆ ಪಡೆದಿದ್ದರು. ಸರ್ಕಾರದ ಸೂಚನೆ ಮೇರೆಗೆ ತನಿಖೆ ಕೈಗೊಂಡ ಸಿಐಡಿ
2016ರ ಜು.27ಕ್ಕೆ ಡಿವಿಆರ್ ವಶಕ್ಕೆ ಪಡೆದಿತ್ತು. ಈ ವೇಳೆ ಮಡಿವಾಳ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕೊಟ್ಟು ವರದಿ ಪಡೆದಿತ್ತು. ನಂತರ ತನಿಖೆ ಪೂರ್ಣಗೊಳಿಸಿ ಕೋರ್ಟ್‍ಗೆ `ಬಿ ರಿಪೋರ್ಟ್’ ಸಲ್ಲಿಸಿ ಕೈತೊಳೆದುಕೊಂಡಿತ್ತು.

ಲಾಡ್ಜ್‍ನಲ್ಲಿ ಜಪ್ತಿ ಮಾಡಿದ ಡಿವಿಆರ್ 2013ರಲ್ಲಿ ಥಾಯ್ಲೆಂಡ್‍ನಲ್ಲಿ ತಯಾರಾಗಿದೆ. ಆದರೆ, ಡಿವಿಆರ್ ಪರೀಕ್ಷಿಸಿದಾಗ 1999, 2000, 2003, 2004,
2014 ಮತ್ತು 2015ರಲ್ಲಿ ಚಿತ್ರೀಕರಣವಾಗಿರುವ ತುಣುಕುಗಳೂ ಸಹ ಪತ್ತೆಯಾಗಿವೆ. ಸಾಕ್ಷ್ಯ ನಾಶ ಮಾಡುವ ನೆಪದಲ್ಲಿ ಕೆಲವೊಂದು ಎಡವಟ್ಟು
ಮಾಡಿರುವುದರಿಂದ ಮಾಡಿದ ಪಾಪ ಇದರಿಂದ ಬೆಳಕಿಗೆ ಬಂದಂತಾಗಿದೆ. 2013ರಲ್ಲಿ ತಯಾರಾದ ಸಿಸಿ ಕ್ಯಾಮರಾ ಡಿವಿಆರ್ನಲ್ಲಿ 14 ವರ್ಷದ ಹಳೇ ವಿಡಿಯೋ
ತುಣುಕುಗಳು ಸಿಗಲು ಹೇಗೆ ಸಾಧ್ಯ? ಉದ್ದೇಶಪೂರ್ವಕವಾಗಿಯೇ ಹಳೇ ವಿಡಿಯೋ ತುಂಬಿ, ಅದರಲ್ಲಿದ್ದ ಅಸಲಿ ವಿಡಿಯೋಗಳನ್ನು ಅಳಿಸಿ ಹಾಕಿರುವುದು ಎಫ್‍ಎಸ್‍ಎಲ್ ಪರೀಕ್ಷೆಯಲ್ಲಿ ದೃಢವಾಗಿದೆ. 2016ರ ಜು.7ಕ್ಕೆ ಗಣಪತಿ ಸಾವಿನ ಪ್ರಕರಣ ನಡೆದಿದೆ. ಜು.9ರಂದು ರೆಕಾರ್ಡ್ ಆದ ವಿಡಿಯೋ ಅದರಲ್ಲಿದೆ. ಉಳಿದಂತೆ 2016ರ ಯಾವುದೇ ವಿಡಿಯೋ ತುಣುಕುಗಳಿಲ್ಲ. ಡಿವಿಆರ್ ಬಳಕೆಗೆ ಯೋಗ್ಯವಾಗಿತ್ತಾರೂ ಘಟನೆ ನಡೆದ ನಂತರ ಮತ್ತು ಅದಕ್ಕೂ ಮೊದಲಿನ ವಿಡಿಯೋ ಅದರಲ್ಲಿ ಇಲ್ಲ ಎಂದು ಎಫ್‍ಎಸ್‍ಎಲ್ ವಿಜ್ಞಾನಿ ಈಶ್ವರ್ ಪ್ರಸಾದ್ ಆಯೋಗದ ಕೋರ್ಟ್‍ನಲ್ಲಿ ಹೇಳಿಕೆ ದಾಖಲಿಸಿದ್ದಾರೆ.

ಇದನ್ನೆಲ್ಲಾ ನೋಡುವಾಗ ಯಾವ ರೀತಿ ಸಾಕ್ಷ್ಯ ನಾಶ ಮಾಡಲು ಕಾಂಗ್ರೆಸ್ ಪ್ರಯತ್ನಿಸಿದೆಯೋ ಅದೆಲ್ಲಾ ಪ್ರಯತ್ನವನ್ನು ಮಾಡಿದೆ. ಆದರೆ ಇದೀಗ ಈ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ ಸಿಬಿಐ ತನಿಖೆಗೆ ಆದೇಶಿರುವುದರಿಂದ ಕಾಂಗ್ರೆಸ್‍ಗೆ ನಿಜವಾಗಿಯೂ ಕಂಟಕ ಬಂದೊದಗಿದೆ. ಸಾಕ್ಷ್ಯ ನಾಶ ಮಾಡಿದ್ದು ಯಾರು ಎಂದು ಇನ್ನು ಸ್ಪಷ್ಟವಾಗಿ ವಿವರಿಸಬೇಕಿಲ್ಲ. ಈ ರೀತಿ ಮಾಡಿದವರನ್ನು ಜೈಲಿಗೆ ಒಡ್ಡುವ ಕೆಲಸವನ್ನು ಸಿಬಿಐ ಮಾಡಲಿದೆ.

ಪ್ರಕರಣವನ್ನು ಸಿಬಿಐಗೆ ವಹಿಸಿದ್ದರೂ ಕೆ.ಜೆ. ಜಾರ್ಜ್ ಅವರು ರಾಜೀನಾಮೆ ನೀಡುತ್ತಿಲ್ಲ. ಈ ಬಗ್ಗೆ ಕೇಳಿದರೆ ನನ್ನ ರಾಜೀನಾಮೆ ಕೇಳುವುದಕ್ಕೆ ಸಿ.ಎಂ.ಗಷ್ಟೇ ಅಧಿಕಾರ ಇದೆ. ಸಿಬಿಐ ವರದಿ ಬರಲಿ ನೋಡೋಣ. ಸುಪ್ರೀಂ ಕೋರ್ಟ್ ನನ್ನ ವಿರುದ್ಧ ಯಾವುದೇ ಆರೋಪ ಮಾಡಿಲ್ಲ ಎಂದು ಜಾರ್ಜ್ ಹೇಳುತ್ತಾರೆ.

ಕಾಂಗ್ರೆಸ್ ಸರಕಾರದಲ್ಲಿ ಸಂಘಪರಿವಾರದವರಿಗೆ, ಗೋವುಗಳಿಗೆ, ಸಾಹಿತಿಗಳಿಗೆ, ಎಡಪಂಥೀಯರಿಗೆ, ಪೊಲೀಸರಿಗೆ ಸೇರಿ ಜನಸಾಮಾನ್ಯರು ಸೇರಿ ಯಾರಿಗೂ ರಕ್ಷಣೆ ಇಲ್ಲ ಎಂಬುವುದು ಬಾರಿಬಾರಿ ಸಾಬೀತಾಗುತ್ತಲೇ ಬಂದಿದೆ. ಇನ್ನೂ ಒಂದು ವರ್ಷ ಕಾಂಗ್ರೆಸ್ ಅಧಿಕಾರದಲ್ಲಿರುತ್ತದೆ. ಅಲ್ಲಿ ತನಕ ಕರ್ನಾಟಕದ ಜನರನ್ನು ದೇವರೇ ರಕ್ಷಿಸಬೇಕು.

Chekithan

Tags

Related Articles

Close