ಪ್ರಚಲಿತ

ಗಣಪತಿಯ ತಂದೆ ಯಾರು ಎಂದು ಕೇಳುವ ನಿಡುಮಾಮಿಡಿ ಸ್ವಾಮೀಜಿಗೆ ಮುಸ್ಲಿಂ ಪ್ರವಾದಿಯ ಬಗ್ಗೆ ಮಾತಾನಾಡುವ ಧೈರ್ಯವಿದೆಯೇ??

ಇತ್ತೀಚೆಗೆ ಈ ಸ್ವಾಮೀಜಿಗಳಿಗೆ ಅದೇನಾಗಿದೋ ಗೊತ್ತಿಲ್ಲ!! ಯಾಕೆಂದರೆ, ಹಿಂದೂ ದೇವರುಗಳನ್ನು ಹಿಗ್ಗಾಮುಗ್ಗಾ ಬೈದರೆ, ಹಿಂದೂಗಳಿಗೆ ವಿರೋಧವನ್ನು
ವ್ಯಕ್ತಪಡಿಸಿದರೆ, ಬಹು ಬೇಗನೇ ಫೇಮಸ್ ಆಗಬಹುದು ಎಂದು ತಿಳಿದುಕೊಂಡಿದ್ದಾರೋ ಗೊತ್ತಿಲ್ಲ!! ಅಂತೂ… ಹಿಂದು ದೇವರುಗಳ ಬಗ್ಗೆ ಸುಳ್ಳು ಮಾಹಿತಿಗಳನ್ನು
ಹಬ್ಬಿಸುತ್ತಿರುವ ಹಿಂದೂ ಸ್ವಾಮೀಜಿಗಳ ಪೈಕಿ, ನಿಡುಮಾಮಿಡಿ ಸ್ವಾಮೀಜಿ ಈ ಸಾಲಿಗೆ ಸೇರಿಕೊಂಡವರಲ್ಲಿ ಒಬ್ಬರಾಗಿದ್ದು, ಇದೀಗ ವ್ಯಾಪಕ ಚರ್ಚೆಗೆ ಕಾರಣರಾಗಿದ್ದಾರೆ!!

ಹೌದು… ವಿಘ್ನ ವಿನಾಶಕ ಗಣೇಶನೂ ಪಾರ್ವತಿಯ ಪುತ್ರನಲ್ಲ ಬದಲಿಗೆ ದಾಕ್ಷಿಣಿಯ ಮಗ!! ಅಷ್ಟೇ ಅಲ್ಲದೇ, ಶಿವನ ಭಕ್ತರೆಲ್ಲ ಹಿಂದೂಗಳಲ್ಲ. ರಾವಣ, ಮಹಿಷಾಸುರ, ಬಲಿಚಕ್ರವರ್ತಿ ದುಷ್ಟರಲ್ಲ, ಖಳನಾಯಕರೂ ಅಲ್ಲ, ಬದಲಾಗಿ ಅವರೆಲ್ಲರೂ ಮಹಾನುಭಾವರು ಎಂದಿರುವ ಮಾಮಿಡಿ ಸ್ವಾಮೀಜಿ ಬಹುಬೇಗನೇ ಪ್ರಚಾರ ಗಿಟ್ಟಿಸಿಕೊಳ್ಳುವ ಬರದಲ್ಲಿದ್ದಾರೆ!! ವೈದಿಕರು ಇಡೀ ಕಥೆಯನ್ನು ತಮಗೆ ಬಂದಂತೆ ತಿರುಚಿದ್ದಾರೆ ಎಂದು ಹೇಳಿರುವ ಈತ ಮೈಸೂರಿನಲ್ಲಿ ನಡೆದ ಬಲಿ ಚಕ್ರವರ್ತಿ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ!!

ಇತ್ತೀಚೆಗೆ ಶಿವನ ಭಕ್ತರೆಲ್ಲರೂ ಹಿಂದೂಗಳು ಎಂದು ಹೇಳಿಕೆ ನೀಡಿರುವ ಪೇಜಾವರ ಮಠದ ಶ್ರೀ ವಿಶ್ವೇಶ್ವ ತೀರ್ಥ ಸ್ವಾಮೀಜಿಯವರ ಮಾತಿಗೆ ತಿರುಗೇಟು ನೀಡುವ ಬರದಲ್ಲಿ ಗಣಪತಿ ಪಾರ್ವತಿಯ ಮಗನಲ್ಲ, ಬದಲಾಗಿ ಶಿವನ ಮೊದಲನೇ ಪತ್ನಿ ದಾಕ್ಷಾಣಿಯ ಮಗನೇ ಗಣಪತಿ. ಆರ್ಯ ಮತ್ತು ದ್ರಾವಿಡರ ನಡುವಿನ ಸಂಘರ್ಷ ತಪ್ಪಿಸಲು ಶಿವ ಆರ್ಯರ ರಾಜ ದಕ್ಷಬ್ರಹ್ಮನ ಮಗಳು ದಾಕ್ಷಾಯಿಣಿಯನ್ನು ಮದುವೆ ಆಗಿದ್ದು, ಆ ದಂಪತಿಗಳ ಮಗನೇ ಗಣಪತಿ ಎಂದು ಹೇಳಿದ್ದಲ್ಲದೇ, ಶಿವ ಅವೈದಿಕ ಸಂಸ್ಕೃತಿಯ ಮೂಲ ನಾಯಕನಾಗಿದ್ದಾನೆ. ಆದರೆ, ವೈದಿಕರು ಇದ್ದನ್ನೆಲ್ಲಾ ತಮ್ಮ ಮನಸ್ಸಿಗೆ ಬಂದಂತೆ ತಿರುಚಿದ್ದಾರೆ ಎಂದು ಹೇಳಿದ್ದಾರೆ!! ಅಷ್ಟೇ ಅಲ್ಲದೇ, ರಾವಣ, ಮಹಿಷಾಸುರ, ಬಲಿಚಕ್ರವರ್ತಿ ದುಷ್ಟರಲ್ಲ, ಖಳನಾಯಕರೂ ಅಲ್ಲಲ್ಲ. ಅವರೆಲ್ಲರೂ ಮಹಾನುಭಾವರು!! ವೈದಿಕ ಸಂಸ್ಕೃತಿಗೆ ವಿರುದ್ಧ ಇದ್ದರು ಎಂಬ ಕಾರಣಕ್ಕೆ ಅವರಿಗೆ ರಾಕ್ಷಸ ಪಟ್ಟ ಕಟ್ಟಲಾಗಿದೆ ಎಂದು ಅವರು ಆರೋಪಿಸಿದ್ದಾರೆ ಈ ನಿಡುಮಾಮಿಡಿ ಸ್ವಾಮೀಜಿ!!

ಇತ್ತೀಚೆಗಷ್ಟೇ, ಭಾರತದ ಸ್ವಾತಂತ್ರ್ಯಕ್ಕಾಗಿ ಮೊದಲು ಹೋರಾಡಿದ್ದು ಗಾಂಧಿಯಲ್ಲ, ಟಿಪ್ಪು ಎಂದು ವಿವಾದ ಸೃಷ್ಟಿಸಿರುವ ಮೈಸೂರಿನ ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಎಲ್ಲರ ಮನೆಮಾತಾಗಿದ್ದು, ಭಾರತ ಸುಳ್ಳಿನ ಸಾಮ್ರಾಜ್ಯವಾಗಿದೆ ಎಂದಿದ್ದರು!! ಅಷ್ಟೇ ಅಲ್ಲದೇ, ಇದು ಕೊಲೆಗಡುಕರ ಭಾರತವಾಗಿದೆ. ಭಾರತ ಬದಲಾಗಬೇಕಾದರೆ ದಲಿತರು, ಹಿಂದುಳಿದ ವರ್ಗದವರು, ಮುಸಲ್ಮಾನರು ಬದಲಾಗಬೇಕಾಗಿದೆ ಎಂದು ಹೇಳಿದ್ದರು!! , ಭಾರತದ ಚರಿತ್ರೆಯಲ್ಲಿ ಸ್ವಾತಂತ್ರ್ಯಕ್ಕೋಸ್ಕರವಾಗಿ ಟಿಪ್ಪು ತನ್ನ ಸ್ವಂತ ಮಕ್ಕಳನ್ನು ಅಡವಿಟ್ಟಂತಹ ಚರಿತ್ರೆ, ಯಾವ ಭಗತ್ ಸಿಂಗ್, ಜಗತ್‍ಸಿಂಗ್, ಗಾಂಧಿ, ನೆಹರು ಯಾರಿಗೂ ಇಲ್ಲ. ಟಿಪ್ಪು ಸುಲ್ತಾನ್‍ಗೆ ಇದೆ ಎಂದಲ್ಲಾ ಹೇಳಿ ತನ್ನ ಪೆದ್ದುತನದ ಭಾಷಣದ ಮೂಲಕ ವಿವಾದ ಸೃಷ್ಟಿಸಿರುವ ಇವರ ಸಾಲಿಗೆ ಇದೀಗ ನಿಡುಮಾಮಿಡಿ ಸೇರಿದ್ದಾರೆ!!

ಹೌದು… ಶಿವಭಕ್ತರೆಲ್ಲಾ ಹಿಂದೂಗಳಾಗಿದ್ದು, ಅವರೆಲ್ಲಾ ಅವೈದಿಕರು!! ಅಲ್ಲದೇ, ಶಿವಭಕ್ತರಲ್ಲಿ 18 ಪಂಥ ಇದ್ದು, ಇದರಲ್ಲಿ ಒಂದೆರೆಡು ಪಂಥ ಹಿಂದೂಗಳು. ಉಳಿದ
ಎಲ್ಲರೂ ಅವೈದಿಕರು. ಹಾಗಾಗಿ ಅವರು ಹಿಂದೂಗಳಲ್ಲ!! ಆದರೆ, ಶಿವ ಭಕ್ತರನ್ನು ನಾನು ಗೌರವಿಸುತ್ತೇನೆ. ಆದರೆ ಎಲ್ಲಾ ಶಿವಭಕ್ತರು ಹಿಂದೂಗಳು ಎನ್ನುವುದು ತಪ್ಪು. ಶಿವಭಕ್ತರು ವರ್ಣ ವ್ಯವಸ್ಥೆಯನ್ನು ವಿರೋಧಿಸಿದ್ದಾರೆ. ವೈದಿಕ ಸಂಸ್ಕೃತಿಗಳಿಂದ ದೂರನೇ ಇದ್ದಾರೆ. ಹಾಗಾಗಿ ಶಿವ ಭಕ್ತರು ಅವೈದಿಕ ಸಂಸ್ಕೃತಿಗೆ ಸೇರಿದ ಮೂಲ ನಿವಾಸಿಗಳು. ಎಲ್ಲ ಶಿವ ಭಕ್ತರನ್ನು ಒಂದೇ ರೀತಿಯಲ್ಲಿ ನೋಡುವುದು ಸರಿಯಲ್ಲ. ಹಾಗಾಗಿ ಕೆಲ ಶಿವ ಭಕ್ತರು ಮಾತ್ರ ಹಿಂದೂಗಳು!! ಧಾರ್ಮಿಕ ನಾಯಕರು ಹಾಗೂ ರಾಜಕೀಯ ನಾಯಕರು ಈ ಸೂಕ್ಷ್ಮತೆಗಳನ್ನು ಅರ್ಥ ಮಾಡಿಕೊಳ್ಳಲಿ. ಸುಮ್ಮನೆ ಹಿಂದೂತ್ವದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ನಿಡುಮಾಮಿಡಿ ಸ್ವಾಮೀಜಿ ಹೇಳಿದ್ದಾರೆ!!

ನಿಮ್ಮ ಸಮುದಾಯದಲ್ಲದವರನ್ನು ಯಾಕೇ ಅಸುರರು, ರಾಕ್ಷಸರು ಎನ್ನುತೀರಾ? ನಿಮ್ಮ ಹೆಣ್ಣು ಮಕ್ಕಳನ್ನು ಕಮಲಮುಖಿಯರು, ಚಂದ್ರಮುಖಿಯರು ಎನ್ನುತ್ತೀರಿ. ಆದರೆ ನಿಮ್ಮದಲ್ಲದ ಸಮುದಾಯದ ಹೆಣ್ಣು ಮಕ್ಕಳನ್ನ ಶೂರ್ಪನಕಿ, ಮಂಡೋದರಿ ಅಂತ ಯಾಕೇ ಕರೆಯುತ್ತೀರಿ? ನೀವು ಇರುವ ಜಾಗವನ್ನು ಸ್ವರ್ಗ ಎನ್ನುತ್ತೀರಿ. ಆದರೆ ಮೂಲ ನಿವಾಸಿಗಳು ಇರುವ ಜಾಗವನ್ನು ನರಕ ಅಂತ ಯಾಕೇ ಕರೆಯುತ್ತೀರಿ ಎಂದು ಹೇಳಿದ್ದಾರೆ!! ಅಷ್ಟೇ ಅಲ್ಲದೇ, ಸನಾತನಿಗಳ ಈ ತಾರತಮ್ಯ ನೀತಿಯನ್ನು ನಾನು ಪ್ರಶ್ನೆ ಮಾಡುತ್ತೇನೆ. ನಿಮ್ಮನ್ನ ನೀವು ಗೌರವಿಸಿಕೊಳ್ಳಿ, ಆದರೆ ಮೂಲ ನಿವಾಸಿಗಳ ಸಂಸ್ಕೃತಿಯನ್ನು ಕೀಳಾಗಿ ನೋಡಬೇಡಿ. ಇತಿಹಾಸವನ್ನು ತಿರುಚುವ ಕೆಲಸ ಮಾಡುವುದು ಸರಿಯಲ್ಲ. ನೀವು ರಾಕ್ಷಸರು ಎನ್ನುವ ಮಹಾನ್ ನಾಯಕರು ದಮನಿತರ ಧನಿಯಾಗಿ ಹೋರಾಟ ನಡೆಸಿದ್ದವರು. ಅವರನ್ನ ಅವಮಾನಿಸೋದು ತಪ್ಪು ಎಂದೆಲ್ಲಾ ಹೇಳಿದ ಇವರು ರಾಕ್ಷಸರನ್ನು ಕೊಂಡಾಡಿದ್ದಾರೆ!!

ಇತ್ತೀಚೆಗಷ್ಟೇ, ಫೇಮಸ್ ಆಗ್ತಾ ಇರೋ ಸ್ವಾಮೀಜಿಗಳ ಪೈಕಿ ಜ್ಞಾನಪ್ರಕಾಶ ಸ್ವಾಮೀಜಿ, ನಿಜಗುಣನಂದ ಸ್ವಾಮೀಜಿ, ಅಗ್ನಿವೇಶ ಸ್ವಾಮೀಜಿ ಇವರೆಲ್ಲರೂ ಕೂಡ ಹಿಂದೂ ಧರ್ಮವನ್ನು ತುಚ್ಛವಾಗಿ ಕಾಣುತ್ತಿದ್ದಾರೆ ಎಂದರೆ ಇವರೆಲ್ಲ ಸ್ವಾಮಿಗಳು ಎನ್ನಲು ಯೋಗ್ಯರೇ?? ಹಿಂದೂ ತತ್ವವನ್ನು ಹಿಂದೂ ದೇವರನ್ನು ವಿರೋಧಿಸುವ ಇವರು ಮುಸಲ್ಮಾನರ ಬಗ್ಗೆ ಮಾತಾನಾಡುತ್ತಿಲ್ಲವೇಕೆ??

ತಾಕತ್ತಿದ್ದರೇ ಹಿಂದೂ ದೇವರನ್ನು ಅವಮಾನಿಸುವ ಬದಲು, ಮುಸಲ್ಮಾನ ಬಗ್ಗೆ ಹೇಳಿಕೆಗಳನ್ನು ನೀಡಿ!! ಯಾಕೆ ನಿಮಗೆ ಧೈರ್ಯ ಇಲ್ವೇ?? ಎಲ್ಲಿ ಹೋಗಿದೆ ನಿಮ್ಮ
ಧೈರ್ಯ!! ಮಂದಿರಕ್ಕೆ, ಮಸೀದಿಗೆ, ಚರ್ಚ್‍ಗೆ ಹೋಗುವುದು ನಂಬಿಕೆ ಎಂದು ಹೇಳಿದ ನಿಜಗುಣ ಸ್ವಾಮೀಜಿ ತಿರುಪತಿಗೆ ಹೋಗಿ ತಲೆ ಬೋಳಿಸಿ ಕೊಳ್ಳುವುದು
ಮೂಢನಂಬಿಕೆ ಎಂದು ಹೇಳಿದರು!! ಹಾಗಾದರೆ, ಮಸೀದಿಯಲ್ಲಿ ಕಲ್ಲಿನ ಮೇಲೆ ಹೊದಿಸುವ ಚಾದರ್, ಚರ್ಚ್‍ನಲ್ಲಿ ಹಚ್ಚುವ ಕ್ಯಾಂಡಲ್ ಮೂಢನಂಬಿಕೆಯಲ್ಲವೇ!!
ಮಾಂಸ ತಿಂದವರಿಂದ ಈ ದೇಶ ಹಾಳಾಗಿಲ್ಲ. ತುಪ್ಪ ತಿಂದವರಿಂದ ಹಾಳಾಗಿದೆ ಎಂದ ಜ್ಞಾನಪ್ರಕಾಶ ಸ್ವಾಮೀಜಿ, ಗೋಕಳ್ಳರಿಂದ ದೇಶ ಹಾಳಾಗಿದೆ ಎಂದು ಹೇಳುತ್ತಿಲ್ಲ ಯಾಕೆ???!! ಹಾಗಾದರೆ ಹಿಂದೂ ಧರ್ಮಕ್ಕೆ, ಹಿಂಧೂ ಧರ್ಮದ ವಿರುದ್ದ ನಡೆದರೆ ಪ್ರಚಾರ ಗಿಟ್ಟಿಸಿಕೊಳ್ಳುವ ಹುಚ್ಚು ಸಾಹಸವೇ?? ಹಿಂದೂ ಧರ್ಮವನ್ನು ನಿಂದಿಸುವ ಇವರನ್ನು ಏನೆನ್ನಬೇಕೋ ನಾಕಾಣೆ!!

ಮೂಲ:http://www.antharmukhi.com

– ಅಲೋಖಾ

 

Related Articles

Close