ಪ್ರಚಲಿತ

ಗನ್ ಮ್ಯಾನ್‍ಗೂ ಸರ್ಕಾರಿ ಕಾಮಗಾರಿಗಳ ಗುತ್ತಿಗೆ ಭಾಗ್ಯ!! ಮತ್ತೆ ಬಯಲಾಯಿತು ಮಾಜಿ ಸಚಿವನ ಅಸಲಿ ಮುಖ!!

ಪದೇ ಪದೇ ಒಂದಲ್ಲ ಒಂದು ಅವ್ಯವಹಾರಗಳನ್ನು ನಡೆಸುತ್ತಾ ಸಿಕ್ಕಿಬೀಳುತ್ತಲೇ ಇರುವ ಕಾಂಗ್ರೆಸ್ಸಿಗರು, ಅದ್ಯಾವ ಮುಖ ಹೊತ್ತುಕೊಂಡು ಜನತೆಯ ಎದುರು ಮತಯಾಚಿಸುತ್ತಾರೋ ಗೊತ್ತಾಗುತ್ತಿಲ್ಲ!! ಆದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನದಲ್ಲಿ ಹೆಸರುವಾಸಿಯಾಗಿರುವುದಕ್ಕಿಂತ ಹೆಚ್ಚಾಗಿ ಭ್ರಷ್ಟಾಚಾರದಲ್ಲೇ ಹೆಸರುವಾಸಿಯಾಗಿರುವ ಮಾಜಿ ಸಚಿವ, ಹಡಗಲಿಯ ಹಾಲಿ ಶಾಸಕರಾಗಿರುವ ಪರಮೇಶ್ವರ ನಾಯ್ಕ್ ಅವರು ಇದೀಗ ಮತ್ತೊಂದು ಹೊಸದಾದ ಅಕ್ರಮ ಎಸಗಿ ಫೇಮಸ್ ಆಗಿದ್ದಾರೆ!!

ಹೌದು… ಮಾಜಿ ಸಚಿವ, ಹಾಲಿ ಶಾಸಕ ಪರಮೇಶ್ವರ್ ನಾಯ್ಕ್ ಆಡಿದ್ದೇ ಆಟ ಮಾಡಿದ್ದೇ ಕಾನೂನು ಎಂಬಂತಾಗಿದೆ. ಯಾಕೆಂದರೆ ಈ ಹಿಂದೆ ಹೂವಿನಹಡಗಲಿಯ ಮಾನ್ಯರ ಮಸಲವಾಡ, ಕೊಯಿಲಾರಗಟ್ಟಿ ಗ್ರಾಮಗಳ ಕೆರೆ ಹೂಳೆತ್ತುವ ಕಾಮಗಾರಿ ಅಧಿಕಾರಿಗಳು, ಹಾಲಿ ಶಾಸಕ ಪರಮೇಶ್ವರ್ ನಾಯ್ಕ್ ಟೆಂಡರ್ ಕರೆದು ಅದರ ಜಾಹೀರಾತನ್ನು ಅದೇ ಸಂಜೆ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಅಷ್ಟೇ ಅಲ್ಲದೇ, ಅಂದೇ ಸಂಜೆ ಟೆಂಡರ್ ಸಹ ಮುಗಿದುಹೋಗಿತ್ತು!!

ವಿಚಿತ್ರ ಏನೆಂದರೆ, ಅಕ್ರಮ ಬಯಲಾಗ್ತಿದ್ದಂತೆ ದಾಖಲೆಗಳು ಸಹ ನಾಪತ್ತೆಯಾಗಿದ್ದು, ಈ ಪ್ರಕರಣದ ಮೂಲಕ ಸುದ್ದಿಯಾಗಿದ್ದ ಪರಮೇಶ್ವರ ನಾಯ್ಕ್ ಇದೀಗ, ರಾಜಕಾರಣಿಗಳಿಗೆ ಭದ್ರತೆ ನೀಡುವ ಗನ್ ಮ್ಯಾನ್ ಒಬ್ಬರಿಗೆ ಸರ್ಕಾರಿ ಕಾಮಗಾರಿಗಳ ಗುತ್ತಿಗೆ ಭಾಗ್ಯ ನೀಡುವ ಮೂಲಕ ಸುದ್ದಿಯಾಗಿದ್ದು, ಮತ್ತೊಂದು ಅಕ್ರಮ ಎಸಗಿರುವುದು ಬಯಲಿಗೆ ಬಂದಿದೆ. ಆದರೆ ಈ ಬಗ್ಗೆ ಎಲ್ಲ ಕಾಮಗಾರಿಗಳನ್ನು ಹಂಚಿಕೆ ಮಾಡಿರುವ ಶಾಸಕ ಪರಮೇಶ್ವರ ನಾಯ್ಕ್ ಅವರು, ಮೂರು ಕಾಮಗಾರಿಗಳನ್ನು ಗನ್ ಮ್ಯಾನ್ ಎಕಾಂಬರ್ ಗೆ ನೀಡಿದ್ದಾರೆ ಅಂತಾ ಪುರಸಭೆ ಸದಸ್ಯರು ಆರೋಪ ಮಾಡುತ್ತಿದ್ದಾರೆ.

ಮಾಜಿ ಸಚಿವ, ಹಡಗಲಿಯ ಹಾಲಿ ಶಾಸಕ ಪರಮೇಶ್ವರ ನಾಯ್ಕ್ ರ ಭ್ರಷ್ಟತನ ಈಗಾಗಲೇ ರಾಜ್ಯದ ಜನರಿಗೆ ತಿಳಿದಿದ್ದು, ಇದೂವರೆಗೂ ಸರ್ಕಾರದಿಂದ ಬರೋ ಯೋಜನೆಗಳು, ಕಾಮಗಾರಿಗಳನ್ನು ಬೆಂಬಲಿಗರು, ಪರಮಾಪ್ತರಿಗೆ ಮಾತ್ರ ಹಂಚುತ್ತಿದ್ದ ಪರಮೇಶ್ವರ ನಾಯ್ಕ್, ಇದೀಗ ಮತ್ತೊಂದು ಅಕ್ರಮ ಎಸಗುವ ಮೂಲಕ ಸುದ್ದಿಯಾಗಿದ್ದಲ್ಲದೇ ಭ್ರಷ್ಟಚಾರದ ಪಟ್ಟಿಯನ್ನು ಇನ್ನಷ್ಟು ಬೆಳೆಸಿಕೊಂಡಿರುವುದು ಸೋಜಿಗದ ಸಂಗತಿ.

ಹೌದು…. ಹಡಗಲಿ ಪುರಸಭೆಯ 14ನೇ ಹಣಕಾಸು ಯೋಜನೆಯಲ್ಲಿನ ಮೂರು ಕಾಮಗಾರಿಗಳನ್ನು ತಮ್ಮ ಗನ್ ಮ್ಯಾನ್ ಎಕಾಂಬರ್ ನಾಯ್ಕ್ ಗೆ ಗುತ್ತಿಗೆ ನೀಡಿ ಮತ್ತೊಂದು ಅಕ್ರಮ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ. ಹಾಗಾಗಿ 14ನೇ ಹಣಕಾಸು ಯೋಜನೆಯಲ್ಲಿ 79.58 ಲಕ್ಷ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ 16 ಕಾಮಗಾರಿಗಳ ಪೈಕಿ ತಲಾ 5 ಲಕ್ಷದ ಮೂರು ಕಾಮಗಾರಿಗಳನ್ನು ತಮ್ಮ ಗನ್ ಮ್ಯಾನ್ ಎಕಾಂಬರ್ ನಾಯ್ಕ್ ಗೆ ನೀಡಿರುವುದು ಪರಮೇಶ್ವರ ನಾಯ್ಕ್ ರ ಪರಮಭ್ರಷ್ಟತನಕ್ಕೆ ಹಿಡಿದ ಕೈಗನ್ನಡಿಯಾಗಿದ್ದು ಮಾತ್ರ ಅಕ್ಷರಶಃ ನಿಜ.

ಈ ಹಿಂದೆ ಮಾಜಿ ಸಚಿವ ಪರಮೇಶ್ವರ ನಾಯ್ಕ್ ಹೂವಿನಹಡಗಲಿಯಲ್ಲಿ ಒಂದೇ ರೋಡ್ ಕಾಮಗಾರಿಗೆ ಎರಡೆರಡು ಬಾರಿ ಬಿಲ್ ಪಾವತಿಯಾಗಿರೋದು ಮಾತ್ರವಲ್ಲದೇ, ದಾಖಲೆಗಳ ಮೂಲಕ ಅವ್ಯವಹಾರ ನಡೆಸಿದ್ದು, ಪಿಟಿ ಪರಮೇಶ್ವರ ನಾಯ್ಕ್ ಸಚಿವರಾಗಿದ್ದ ವೇಳೆ ಅಧಿಕಾರ ದುರುಪಯೋಗ ಪಡಿಸಿಕೊಂಡು ಹೂವಿನಹಡಗಲಿಯ ರಾಜೀವನಗರದಿಂದ ನಜೀರ್ ನಗರದವರೆಗೆ ರಸ್ತೆ ಕಾಮಗಾರಿ ಮಾಡಿದದ್ರು. ಈ ಕಾಮಗಾರಿಗೆ ಪುರಸಭೆಯಿಂದ ಮೆಟಲಿಂಗ್ ಮಾಡಲು 5.18 ಲಕ್ಷ ಹಾಗೂ ಸಿಸಿ ರಸ್ತೆ, ಚರಂಡಿಗಾಗಿ 8.17 ಲಕ್ಷ ಬೋಗಸ್ ಬಿಲ್ ಪಡೆಯಲಾಗಿದೆ. ಇದೇ ಕಾಮಗಾರಿಯನ್ನು ಎಚ್‍ಕೆಡಿಬಿ ಯೋಜನೆಯಡಿಯಲ್ಲಿ ಜಿಲ್ಲಾ ಪಂಚಾಯ್ತಿ ಮೂಲಕ ಮಾಡಲಾಗಿದೆ ಎಂದು ತೋರಿಸಿ ಬರೋಬ್ಬರಿ 53.49 ಲಕ್ಷ ರೂಪಾಯಿ ಹಣವನ್ನು ಗುಳುಂ ಮಾಡಿದ್ದರು.

ಆದರೆ ಇದೀಗ, ತಮ್ಮ ಗನ್ ಮ್ಯಾನ್ ಎಕಾಂಬರ್ ನಾಯ್ಕ್ ಗೆ ಗುತ್ತಿಗೆ ನೀಡಿ ಅಕ್ರಮ ನಡೆಸಿದ್ದು, ಪುರಸಭೆಯಿಂದ 14ನೇ ಹಣಕಾಸಿನ ಯೋಜನೆಗಳ ಕಾಮಗಾರಿಯ ಟೆಂಡರ್ ಮುದ್ದಿ ಸುರೇಶ ಎನ್ನುವವರಿಗಾಗಿದೆ. ಆದರೆ ಈ ಟೆಂಡರ್ ಯಾರಿಗಾದ್ರೂ ಏನು, ಕಾಮಗಾರಿಗಳ ಲಿಸ್ಟ್ ಹಾಗೂ ಕೆಲಸ ಮಾಡೋ ಗುತ್ತಿಗೆದಾರರ ಲಿಸ್ಟ್ ಮಾತ್ರ ಪರಮೇಶ್ವರ ನಾಯ್ಕ್ ಅವರೇ ಫೈನಲ್ ಮಾಡ್ತಾರೆ!!

ಹೀಗಾಗಿ ಹೂವಿನಹಡಗಲಿಯಲ್ಲಿ ನಡೆಯೋ ಕಾಮಗಾರಿಗಳ ಬಿಲ್ ಒಬ್ಬರ ಹೆಸರಿಗೆ ನೀಡಿದರೆ, ಆ ಕೆಲಸ ಮಾಡೋದು ಮಾತ್ರ ಇನ್ಯಾರೋ ಎನ್ನುವಂತಾಗಿದೆ. ಅಲ್ಲದೇ 16 ಕಾಮಗಾರಿಗಳ ಲಿಸ್ಟ್ ಫೈನಲ್ ಮಾಡಿರುವ ಪರಮೇಶ್ವರ ನಾಯ್ಕ್ ಮೂರು ಕಾಮಗಾರಿಗಳನ್ನು ಕೇವಲ `ಈ’ ಅನ್ನೋ ಹೆಸರಿಗೆ ನೀಡಲು ಸೂಚಿಸಿರುವುದು ಪರಮೇಶ್ವರ ನಾಯ್ಕ್ ರ ಜಾಣತನವನ್ನು ಎತ್ತಿ ತೋರಿಸುತ್ತಿದೆ.

ಎಲ್ಲ ಕಾಮಗಾರಿಗಳನ್ನು ಹಂಚಿಕೆ ಮಾಡಿರುವ ಶಾಸಕ ಪರಮೇಶ್ವರ ನಾಯ್ಕ್, ಮೂರು ಕಾಮಗಾರಿಗಳನ್ನು ಗನ್ ಮ್ಯಾನ್ ಎಕಾಂಬರ್ ಗೆ ನೀಡಿದ್ದಾರೆ ಅಂತಾ ಪುರಸಭೆ ಸದಸ್ಯರು ಆರೋಪ ಮಾಡುತ್ತಿದ್ದು, ಈ ಕುರಿತು ಪುರಸಭೆ ಮುಖ್ಯಾಧಿಕಾರಿಗಳನ್ನು ಪ್ರಶ್ನೆ ಮಾಡಿದ್ರೆ ಹಾಗೆಲ್ಲಾ ಏನೂ ಆಗಿಲ್ಲ, ಜಿಲ್ಲಾಧಿಕಾರಿಗಳ ಬಳಿ ಅಂತಿಮ ಪಟ್ಟಿ ಇದೆ ಅಂತಾ ಹಾರಿಕೆ ಉತ್ತರ ನೀಡುತ್ತಾರೆ. ಅಷ್ಟೇ ಅಲ್ಲದೇ ಈ 14ನೇ ಹಣಕಾಸು ಯೋಜನೆಯು ಪ್ರಥಮ ದರ್ಜೆ ಗುತ್ತಿಗೆದಾರರ ಹೆಸರಿನಲ್ಲಿ ಟೆಂಡರ್ ಆದರೂ ಕೂಡ ಕಾಮಗಾರಿಗಳನ್ನು ಮಾತ್ರ ಪರಮೇಶ್ವರ ನಾಯ್ಕ್ ಪರಮಾಪ್ತರೇ ಮಾಡೋದು ಅಂತಾ ಪುರಸಭೆ ಸದಸ್ಯರು ತೀವ್ರವಾಗಿ ಆರೋಪ ಮಾಡುತ್ತಿದ್ದಾರೆ.

ಅದೇನೇ ಇರಲಿ… ಭ್ರಷ್ಟಚಾರ ಆರೋಪದಲ್ಲಿ ಸಿಲುಕಿ ಬಿದ್ದಿರುವ ಕಾಂಗ್ರೆಸ್ಸಿನ ಹಾಲಿ ಶಾಸಕ ಪರಮೇಶ್ವರ ನಾಯ್ಕ್, ಪ್ರತಿ ಬಾರಿಯೂ ಕಾನೂನಿನ ಕಣ್ಣಿಗೆ ಮಣ್ಣಿರೆಚಿ ಕೋಟ್ಯಾಂತರ ರೂಪಾಯಿ ಸಂಪಾದಿಸುತ್ತಾ, ಸಿದ್ದರಾಮಯ್ಯ ಸರ್ಕಾರದ ಕೃಪಕಟಾಕ್ಷದಿಂದ ಎಲ್ಲಾ ಆರೋಪಗಳಿಂದಲೂ ಮುಕ್ತಿ ಪಡೆಯುತ್ತಿರುವುದನ್ನು ನೋಡಿದರೆ ಎಲ್ಲವೂ ಕಾಂಗ್ರೆಸ್ಸಿನ ಮಹಿಮೆ ಎನ್ನಬೇಕಷ್ಟೇ!!

Source :http://publictv.in/government-work-contract-for-former-minister-parameshwar-naiks-gunman/

– ಅಲೋಖಾ

Tags

Related Articles

Close