ಪ್ರಚಲಿತ

ಗಾಂಧಿ ತಾತಾ, ನಿನಗ್ಯಾಕೆ ನಾನು ಶುಭಾಶಯ ಕೋರಲಾರೆ ಗೊತ್ತಾ?!

ತುಂಬಾ ನೋವಾಗುತ್ತೆ ತಾತ ನನಗೆ! ನಿನ್ನ ಹುಟ್ಟಿದ ದಿನಕ್ಕೆ ಶುಭಾಶಯ ಕೋರಲಾರೆ ನಾ!

ನನಗಿನ್ನೂ ನೆನಪಿದೆ!! ಚಿಕ್ಕವರಿದ್ದಾಗ ನಿನ್ನ ಜಯಂತಿಯನ್ನು ಬಹಳ ಮುಗ್ಧರಂತೆ ಆಚರಿಸಿದ್ದೇವೆ ತಾತ! ಕಳೆದು ಹೋದ ಈ ವರ್ಷಗಳಲೆಲ್ಲ, ನಿನ್ನ ಹೆಸರಿನಲ್ಲಿ ಸಿಹಿಯನ್ನು ಹಂಚುತ್ತಿದ್ದೆವು! ಎಲ್ಲಿಯ ತನಕ ಗೊತ್ತೇ?! ನನ್ನ ಭಾರತದ ರಕ್ತಪಾತಕ್ಕೆ ಕಾರಣವಾಗಿದ್ದು ನೀನು ಎಂಬ ಇತಿಹಾಸ ಅರಿವಾಗುವ ತನಕ ನಿನ್ನ ಜನ್ಮದಿನವೆಂದರೆ ನಮಗೆಲ್ಲಾ ಅಭಿಮಾನವಿತ್ತು!

ತಪ್ಪು ಮಾಡಿದೆ ನೀನು! ನಿನ್ನ ದೌರ್ಬಲ್ಯಕ್ಕೆ, ಮುಸಲ್ಮಾನರೆಲ್ಲಿ ದೇಶ ಬಿಟ್ಟು ಹೊರಟೇ ಹೋಗುತ್ತಾರೋ ಎಂಬ ಹೆದರಿಕೆಗೆ ಜಿನ್ನಾನ ಮುಂದೆ ಮಂಡಿಯೂರಿದೆಯಲ್ಲವಾ? ಅವತ್ತೇ, ನನ್ನ ಭಾರತವೂ ಮಂಡಿಯೂರಿತು! ಭಾರತ ವಿಭಜನೆಯಾಯಿತು! ತಾಯಿ ಭಾರತಿ ರಕ್ತದಲ್ಲಿ ಮಿಂದೆದ್ದಳು! ನಿನ್ನ ಒಂದೇ ಒಂದು ಹೂಂಕಾರ ಅದೆಷ್ಟೋ ಸಹಸ್ರ ಹಿಂದೂಗಳ ಮಾರಣಹೋಮಕ್ಕೆ ಕಾರಣವಾಯಿತು! ಆದರೂ, ನಿನಗೇನೂ ಅನ್ನಿಸಲೇ ಇಲ್ಲವಲ್ಲ ತಾತಾ?! ಯಾಕೆ?!

ನಿನ್ನ ಅಪ್ಪಟ ರಾಜಕೀಯ ಗೆಳೆಯ ನೆಹರೂ ಮಾಡಿದ ತಪ್ಪಿನಿಂದ ನನ್ನ ದೇಶ ಎಷ್ಟು ಜರ್ಝರಿತವಾಯಿತು ಗೊತ್ತೇ? ತನ್ನ ಕಾಮಾಸಕ್ತಿಗಾಗಿ ದೇಶವನ್ನು ಬಲಿಕೊಟ್ಟ ಆತನನ್ನೇ ನೀನು ನಂಬಿದ್ದೆಯಲ್ಲವಾ?! ದೇಶದ ಮೊದಲ ಪ್ರಧಾನಿಯಾಗಲಿ ಎಂದು ನೆಹರೂವಿಗೆ ರೆಕಮಂಡಶನ್ನುಗಳನ್ನು ಕೊಟ್ಟ ನೀನೇ ಅಪರೋಕ್ಷವಾಗಿ ಅದೆಷ್ಟೋ ಅನಾಹುತಗಳಿಗೆ ಕಾರಣನಾದೆಯಲ್ಲ ತಾತ!

ಬಿಡು! ಕರಿನೀರ ಶಿಕ್ಷೆ ಅನುಭವಿಸಿ ನರಕಯಾತನೆಯಲ್ಲಿದ್ದ ಸಾವರ್ಕರ್ ಬಗ್ಗೆಗೂ ಏನೂ ಗೊತ್ತಿಲ್ಲದಂತೆ ನಟಿಸಿದೆ! ಲಾರ್ಡ್ ಇರ್ವಿನ್ ನಿನ್ನ ಜೊತೆ ಆತ್ಮೀಯವಾಗಿದ್ದರೂ ಭಗತ್, ರಾಜಗುರು, ಸುಖದೇವರ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಲು ನೀನು ಪ್ರಯತ್ನಿಸಲೇ ಇಲ್ಲವಲ್ಲ ತಾತ? ಆ 23 – 22 ಹರೆಯದ ಯುವಕರೆಲ್ಲ ನಗುನಗುತಾ ದೇಶಕ್ಕೆ ಪ್ರಾಣ ಅರ್ಪಿಸಿದಾಗ ನೀನು ಕ್ರಾಂತಿಕಾರಿಗಳೆಲ್ಲ ದೇಶದ್ರೋಹಿಗಳೆಂದು ಬಿಟ್ಟೆ! ಅಯ್ಯೋ! ತಾತ! ನನ್ನ ಪೂರ್ವಜರು ಸ್ವಾತಂತ್ರ್ಯಕ್ಕೋಸ್ಕರ ಭಿಕ್ಷೆ ಎತ್ತಿರಲಿಲ್ಲ ತಾತ! ಸ್ವತಃ ರಕ್ತ ಚೆಲ್ಲಿದ್ದರು!

ನಿನಗೂ ಅರಿವಾಗಿತ್ತಲ್ಲವಾ ತಾತ?! ಚರಕದಿಂದ ನೂಲಷ್ಟೇ ಬಂದೀತು ಎಂದು ನಿನಗೂ ಅನ್ನಿಸಿತ್ತಲ್ಲವಾ? ನೀ ಹಿಡಿದ ಅಹಿಂಸೆಯ ಹಾದಿ ಸರಿಯಿಲ್ಲವೆಂದು ನಿನಗೂ ಅನ್ನಿಸಿತ್ತಲ್ಲವಾ ತಾತ?! ಕಾಂಗ್ರೆಸ್ ಪಕ್ಷದ ದೇಶದ್ರೋಹದ ಬಗ್ಗೆ ನಿನಗೂ ಅರಿವಾಗಿ ಹೋಗಿತ್ತಲ್ಲವಾ?!

ಹಾ! ನೀ ಹರಿಜನ ಪತ್ರಿಕೆಯಲ್ಲಿ ಕಾಂಗ್ರೆಸ್ ವಿರುದ್ಧವಾಗಿ ಬರೆದೆ! ಮೂರೇ ದಿನದಲ್ಲಿ ನೀ ಹತ್ಯೆಗೀಡಾಗಿಬಿಟ್ಟೆಯಲ್ಲ ತಾತ?! ಉಸಿರೆಳೆಯುವ ಕೊನೆ ಘಳಿಗೆಯಲ್ಲಿ ನಿನಗರಿವಾಗಿದ್ದಿರಬೇಕು! ಕಾಂಗ್ರೆಸ್ ನಂಬಿ ತಪ್ಪು ಮಾಡಿದೆ ಎಂದು!

ಏನೆಲ್ಲಾ ಆಯಿತು ಗೊತ್ತಾ ತಾತ?! ಅದೂ ನಿನ್ನ ಹೆಸರಿನಲ್ಲಿಯೇ?

ಅಯ್ಯೋ! ನೀ ಹತ್ಯೆಗೀಡಾಗಿದ್ದೇ ನೆಹರೂ ಅದನ್ನು ಜಗತ್ತು ಕಂಡ ಅಪ್ರತಿಮ ಕ್ರಾಂತಿಕಾರಿ ವೀರ ಸಾವರ್ಕರ್ ರವರ ಮೇಲೆ ಆಪಾದನೆ ಹೊರಿಸಿ ಕಲ್ಲು ಹೊಡೆಸಿಬಿಟ್ಟರು ತಾತ! ಛೇ! ದೇಶಕ್ಕೋಸ್ಕರ ತನ್ನದೆಲ್ಲವನ್ನೂ ತ್ಯಜಿಸಿದ್ದ ಅಂತಹ ಕ್ರಾಂತಿಕಾರಿಗಳ ಮೇಲೆಲ್ಲ ಕೇವಲ ನಿನ್ನ ಸಾವೆಂಬುದು ಎಷ್ಟು ಹೊಡೆತ ಕೊಡುವಂತೆ ಮಾಡಿದರು ಗೊತ್ತಾ ತಾತ?

ಅದೂ ಬಿಡು! ನಿನ್ನದೇ ಹೆಸರಿಟ್ಟು ಕೊಂಡ ಒಂದಷ್ಟು ಜನ ಅದೆಷ್ಟು ಬಗೆಯಲ್ಲಿ ನನ್ನ ದೇಶವನ್ನು ಲೂಟಿ ಹೊಡೆದರು ಗೊತ್ತಾ ತಾತಾ? ನೀನಾಗಿಯೇ ಗಾಂಢಿ ಎನ್ನುವುದನ್ನು ಗಾಂಧಿ ಮಾಡಿಕೊಳ್ಳಿ ಎಂದೆ! ನಿನ್ನದೇ ಹೆಸರಿಟ್ಟುಕೊಂಡು ಮತ್ತದೇ ಕಾಮದೋಕುಳಿಯಲ್ಲಿ ಮಿಂದು ಅಮೃತಸರದ ಸಿಖ್ ಮಂದಿರಕ್ಕೆ ಬೂಟುಗಾಲಿನಲ್ಲಿ ಪೋಲಿಸರ ನುಗ್ಗಿಸಿ ಧರ್ಮಕ್ಕೇ ಅಪಮಾನ ಮಾಡಿ, ಪ್ರಧಾನಿಯಾದ ಮೇಲೆ ಗೋಹತ್ಯೆಯನ್ನು ಮೌನದಿಂದಲೇ ಒಪ್ಪಿಗೆ ಸೂಚಿಸಿಬಿಟ್ಟಳು ತಾತ!

ಆಕೆಯ ಹತ್ಯೆಯಾಯಿತೆಂಬ ಕಾರಣಕ್ಕೆ ಅದೆಷ್ಟೋ ಅಮಾಯಕ ಸಿಖ್ ರನ್ನು ನಡುಬೀದಿಯಲ್ಲಿ ಕೊಂದರಲ್ಲ ನಿನ್ನದೇ ಹೆಸರಿಟ್ಟುಕೊಂಡವರು!

ಸಂತ ಕರಪಾತ್ರಿಯವರ ಅನುಯಾಯಿಗಳನ್ನೂ ಆಕೆ ಬಿಡಲಿಲ್ಲ ತಾತ! ಸಹಸ್ರ ಸಂಖ್ಯೆಯಲ್ಲಿ ಗೋಮಾತೆಗಾಗಿ ಪ್ರಾಣವನ್ನೇ ಅರ್ಪಿಸಿಬಿಟ್ಟರು ಹಿಂದೂಗಳು!

1962 ರ ಇಂಡೋ – ಚೈನಾ ಯುದ್ಧದಲ್ಲಿ ಇದೇ ನಿನ್ನ ನೆಹರೂವಿನ ಅಲಕ್ಷ್ಯದಿಂದಾಗಿ ಸೈನಿಕರು ಸತ್ತು ನೆಲಕ್ಕುರುಳಿದರು!

ಅವತ್ತು, ನೀನು ಕಾಂಗ್ರೆಸ್ ಎಂಬ ಪಕ್ಷವನ್ನು ವಿಸರ್ಜಿಸುವ ಮುಂದೆಯೇ ಹತ್ಯೆಗೀಡಾದೆ! ನೆಹರೂವನ್ನು ಪ್ರಧಾನಿಯಾಗಿಸಿದೆ! ಜಿನ್ನಾನನ್ನು ಪ್ರೀತಿಸಿದೆ!
ಛೇ! ಇವತ್ತಿಗೂ ನಿನ್ನ ಹೆಸರನ್ನಿಟ್ಟುಕೊಂಡವರು ಪರಂಪರೆಯ ಆಡಳಿತದ ಹಕ್ಕನ್ನು ತಮಗೆ ತಾವೇ ಸೃಷ್ಟಿಸಿಕೊಂಡು ದೇಶವನ್ನು ಲೂಟಿ ಹೊಡೆಯುತ್ತಿದ್ದಾರೆ ತಾತ! ಅದ್ಯಾವುದೋ ಇಟಾಲಿಯಮ್ಮ ನನ್ನ ದೇಶದ ಹಣವನ್ನೇ ದೋಚಿ ಉಗ್ರರಿಗೆ ಹಂಚುವಾಗ ಆಕೆಯ ಕೊನೆಯ ಹೆಸರು “ಗಾಂಧಿ’ ಯೆಂದೇ ಇದೆ ತಾತ!! ಇವತ್ತೂ ನಿನ್ನ ದುರ್ಬಲದ ಪ್ರತೀಕವಾದ ಪಾಕಿಸ್ಥಾನ ನನ್ನ ಭಾರತ ಮಾತೆಯನ್ನು ಸತಾಯಿಸುತ್ತಲೇ ಇದೆ ತಾತ!

ನಿನ್ನ ಹೆಸರಿಟ್ಟು ಜೈ ಎಂದರೆ ಸಾಕು! ಭ್ರಷ್ಟಾಚಾರಕ್ಕೆ ಮುನ್ನುಡಿ ಬರೆದಾಗುತ್ತದೆ ತಾತ! ಹೇಗೆ ಖುಷಿಪಡಲಿ ನಿನ್ನ ಜನುಮದಿನಕ್ಕೆ?!

ಕಣ್ಣಂಚು ಬೇಡವೆಂದರೂ ಒದ್ದೆಯಾಗುತ್ತದೆ ತಾತ! ಇತಿಹಾಸದಲ್ಲಿ ನಿನ್ನನ್ನು ಹೊಗಳಿ ಬರೆದ ಇತಿಹಾಸವನ್ನು ಓದುವಾಗ ನಾವಿನ್ನೂ ಕಂದಮ್ಮಗಳು! ಕೊನೆ ಕೊನೆಗೆ ಇತಿಹಾಸದ ಪುಟ ತಿರುವಿ ಹೋದಂತೆಲ್ಲಾ ಹುಚ್ಚು ಹಿಡಿಯಿತು ನಮಗೆ! ದೇಶಭಕ್ತಿಯ ಹುಚ್ಚು ಹಿಡಿಯಿತು ತಾತ! ಕ್ರಾಂತಿಕಾರಿಗಳನ್ನೆಲ್ಲ ಎಷ್ಟು ಪೂಜಿಸಿದರೂ ನಮಗೆ ತೃಪ್ತಿಯಾಗಲಿಲ್ಲ! ದೇಶದ್ರೋಹಿ ನೆಹರೂ ವಂಶವನ್ನು ಅದೆಷ್ಟು ತೆಗಳಿದರೂ ಸಮಾಧಾನವಾಗಲಿಲ್ಲ! ನಾವು ಕುಗ್ಗಿಬಿಟ್ಟೆವು! ದಿನೇ ದಿನೇ ಅಭ್ಯಸಿಸಿದ ಸುಳ್ಳು ಇತಿಹಾಸದದಿಂದ ಖಿನ್ನತೆಗೊಳಗಾಗಿಬಿಟ್ಟೆವು ತಾತ! ನನ್ನ ಭಾರತದ ಬಗ್ಗೆ ನಾ ಹೆಮ್ಮೆ ಪಡದಿದ್ದುದಕ್ಕೆ ನಾಚಿಕೆಯಾಗಿಬಿಟ್ಟಿತ್ತು ತಾತಾ! ನಾವು ಶಾಲಾ ಪುಸ್ತಕಗಳಲ್ಲಿ ಓದಿದ ಪ್ರತಿ ಇತಿಹಾಸವೂ ನಮ್ಮನ್ನು ಅಂಧಕಾರದಲ್ಲಿಯೇ ಉಳಿಸಿಬಿಟ್ಟಿತಲ್ಲ ತಾತಾ?!

ಹೇಳು! ಹೇಗೆ ನಿನ್ನ ಜನುಮದಿನಕ್ಕೆ ಶುಭಕೋರಲಿ ಹೇಳು?! ನನ್ನ ತಾಯಿಯ ರಕ್ತವಂಟಿದ ಸೀರೆ ನೆನಪಾಗುತ್ತದೆ ತಾತಾ! ಆಕೆಯ ಕಣ್ಣೀರು ನೆನಪಾಗುತ್ತದೆ ತಾತಾ!!! ಈಗ ಹೇಳು! ನಿನ್ನ ಜನುಮದಿನವನ್ಜ ಹೇಗೆ ನಾ ಸಂಭ್ರಮಿಸಲಿ ಹೇಳು!

– ತಪಸ್ವಿ

Tags

Related Articles

Close