ಪ್ರಚಲಿತ

ಗಾಂಧಿ, ನೆಹರೂ, ಅಂಬೇಡ್ಕರ್ ಎಲ್ಲಾ ಅನಿವಾಸಿ ಭಾರತೀಯರೆಂದು ರಾಹುಲ್ ಗಾಂಧಿ ಹೇಳಿದ‌್ದೇಕೆ ಗೊತ್ತೇ?!!

ಅಯ್ಯೋ ನಮ್ಮ ಪಪ್ಪುಗೆ ಏನಾಗಿದೋ ಗೊತ್ತಿಲ್ಲ!! ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗ್ತಾನೆ ಇದ್ದಾರೆ!! ಯಾಕೋ ಗೊತ್ತಿಲ್ಲ ಇತ್ತೀಚೆಗೆ ನಮ್ಮ ಪಪ್ಪು ಸ್ವಾತಂತ್ರ್ಯ ಹೋರಾಟಗಾರನ ಬಗ್ಗೇನೂ ಮಾತಾನಾಡುತ್ತಿದ್ದಾರೆ ಅಂದರೆ ಏನೋ ವಿಷಯ ಇರಬೇಕು ಎಂದನಿಸುತ್ತೆ!! ಸೋನಿಯಾ ಗಾಂಧಿ ಸುಪುತ್ರ, ಕಾಂಗ್ರೆಸ್‍ನ ಉಪಾಧ್ಯಕ್ಷ ರಾಹುಲ್ ಗಾಂಧಿ ಇದೀಗ ಫೇಮಸ್ ಆಗಿದ್ದಾರೆ. ಯಾಕೆಂದರೆ ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಹಲವು ನಾಯಕರು ಅನಿವಾಸಿ ಭಾರತೀಯ (ಎನ್‍ಆರೈ) ಮೂಲದವರು ಎನ್ನುವ ಮೂಲಕ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ!!

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ವ್ಯಾಖ್ಯಾನವೊಂದನ್ನು ಮಾಡಿ ಈ ಪ್ರಕಾರ, ಕಾಂಗ್ರೆಸ್ ಪಕ್ಷ ಹುಟ್ಟಿಕೊಂಡಿದ್ದೇ ಎನ್ ಆರ್ ಐ ಚಳವಳಿಯಿಂದ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ, “ಮೂಲ ಕಾಂಗ್ರೆಸ್ ನ ಚಳುವಳಿ ಎನ್‍ಆರ್‍ಐ ಚಳುವಳಿಯೇ ಆಗಿತ್ತಲ್ಲದೇ, ಮಹಾತ್ಮ ಗಾಂಧಿ ಅನಿವಾಸಿ ಭಾರತೀಯರಾಗಿದ್ದರು. ಜವಾಹರ್ ಲಾಲ್ ನೆಹರು ಇಂಗ್ಲೆಂಡ್‍ನಿಂದ ಭಾರತಕ್ಕೆ ವಾಪಸ್ ಬಂದರು, ಅಂಬೇಡ್ಕರ್, ಆಜಾದ್, ಪಟೇಲ್ ಇವರೆಲ್ಲರೂ ವಿದೇಶದಿಂದ ಭಾರತಕ್ಕೆ ಸ್ವಾತಂತ್ರ್ಯ ಚಳುವಳಿಗಾಗಿ ವಾಪಸ್ ಬಂದಿದ್ದರು. ಆದ್ದರಿಂದ ಕಾಂಗ್ರೆಸ್ ಚಳುವಳಿ ಮೂಲತಃ ಎನ್‍ಆರ್‍ಐಗಳ ಚಳುವಳಿ” ಎಂದು ರಾಹುಲ್ ಗಾಂಧಿ ಹೇಳಿದ್ದು, ಇದೀಗಾ ಈ ಕುರಿತ ವಿಡಿಯೋ ವೈರಲ್ ಆಗಿದೆ!!!

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆಗಾಗ ಸಾರ್ವಜನಿಕವಾಗಿ ತಪ್ಪಾಗಿ ಮಾತನಾಡಿ ತಮಾಷೆಗೊಳಗಾಗುತ್ತಾರೆ. ಈ ಹಿಂದೆ ಫೈವ್ ಸ್ಟಾರ್ ರ್ಯಾಂಕಿಗೆ ಬಡ್ತಿ ಪಡೆದ ಏಕೈಕ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಐಎಎಫ್ ಮಾರ್ಷಲ್ ಅರ್ಜುನ್ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿ ಟ್ವಿಟರ್ ನಲ್ಲಿ ರಾಹುಲ್ ಸಂದೇಶ ಬರೆದಿದ್ದರು. ಆದರೆ ರಾಹುಲ್, ಮಾರ್ಷಲ್ ಆಫ್ ಇಂಡಿಯನ್ ಏರ್ ಫೆÇೀರ್ಸ್ ಎನ್ನುವ ಬದಲು ಏರ್ ಮಾರ್ಷಲ್ ಎಂದು ಬರೆದಿದ್ದಾರೆ. ಮಾರ್ಷಲ್ ಆಫ್ ಇಂಡಿಯನ್ ಏರ್ ಫೆÇೀರ್ಸ್ ಹುದ್ದೆಗೆ ಐದು ಸ್ಟಾರ್ ಇರುತ್ತದೆ. ಆದರೆ ಏರ್ ಮಾರ್ಷಲ್ ಹುದ್ದೆಗೆ ಮೂರು ಸ್ಟಾರ್ ಇರುತ್ತದೆ. ಹೀಗಾಗಿ ರಾಹುಲ್ ಗಾಂಧಿ ಮಾಡಿದ ಈ ಎಡವಟ್ಟು ವೈರಲ್ ಆಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ!!

ಅಷ್ಟೇ ಅಲ್ಲದೇ ಅಮೆರಿಕಾದ ನ್ಯೂ ಜೆರ್ಸಿಯಲ್ಲಿರುವ ಪ್ರಿನ್ಸ್ ಟನ್ ಯುನಿವರ್ಸಿಟಿಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ರಾಜಕೀಯ ಧ್ರುವೀಕರಣ ಮತ್ತು ನಿರುದ್ಯೋಗ ಭಾರತದ ಬಹುದೊಡ್ಡ ಸಮಸ್ಯೆಗಳು ಎಂದು ವಿಶ್ಲೇಷಿಸಿದ್ದಲ್ಲದೇ, ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿಗಳನ್ನು ದೂಷಿಸಿ ಚೀನಾವನ್ನು ಸಿಕ್ಕಪಟ್ಟೆ ಹೊಗಳುವ ಮೂಲಕ ತನ್ನ ದೇಶವನ್ನು ತೆಗಳಿರುವುದು ಮಾತ್ರ ವಿಪರ್ಯಾಸದ ಸಂಗತಿ!!!

ರಾಹುಲ್ ಗಾಂಧಿ ಅಮೆರಿಕದ ನ್ಯೂಯಾರ್ಕ್‍ನಲ್ಲಿ ಸುಮಾರು ಎರಡು ಸಾವಿರ ಮಂದಿಯಷ್ಟು ಅನಿವಾಸಿ ಭಾರತೀಯರು ಸೇರಿದ್ದ ಸಭೆಯಲ್ಲಿ ಕಾಂಗ್ರೆಸ್‍ನ ಸಭೆಯಲ್ಲಿ ರಾಹುಲ್ ಭಾಷಣ ಮಾಡಿದ್ದಾರೆ. ಅಂದ ಹಾಗೆ ಎರಡು ವಾರಗಳ ಅಮೆರಿಕ ಪ್ರವಾಸ ಕೈಗೊಂಡಿರುವ ರಾಹುಲ್ ಗಾಂಧಿಯ ಅಂತಿಮ ಹಂತದ ಪ್ರವಾಸ ಸಮಯ ಇದಾಗಿದೆ. ಭಾರತದ ನೈಜ ಸ್ವಾತಂತ್ರ್ಯ ಹೋರಾಟ ನಡೆದದ್ದು ಎನ್‍ಆರ್‍ಐಗಳಿಂದ. ಮಹಾತ್ಮ ಗಾಂಧಿ, ಜವಾಹರ್ ಲಾಲ್ ನೆಹರು, ಅಂಬೇಡ್ಕರ್, ಅಜಾದ್, ಪಾಟೀಲ್‍ರಂತಹ ಎಲ್ಲಾ ಹೋರಾಟಗಾರರು ಬ್ರಿಟನ್‍ನಿಂದ ಹಿಂದಿರುಗಿ ಭಾರತಕ್ಕೆ ಆಗಮಿಸಿದವರು ಎಂದು ಹೇಳುವ ಮೂಲಕ ಅಲ್ಲಿ ನೆರೆದಿದ್ದ ಅನಿವಾಸಿ ಭಾರತೀಯರ ಮುಂದಿ ತನ್ನ ಜಂಬವನ್ನು ಕೊಚ್ಚಿಕೊಳ್ಳಲು ಹೋಗಿ ಪಜೀತಿಗೆ ಸಿಕ್ಕಿದಂತಾಗಿದೆ!!

ಭಾರತದಿಂದ ವಿದೇಶಕ್ಕೆ ತೆರಳಿದ ಪ್ರತಿಯೊಬ್ಬ ವ್ಯಕ್ತಿಯು ವಿದೇಶದಲ್ಲಿನ ವ್ಯವಸ್ಥೆಗಳ ಕಂಡು ತಮ್ಮ ಹೊಸ ಚಿಂತನೆಗಳೊಂದಿಗೆ ಭಾರತಕ್ಕೆ ಹಿಂದಿರುಗುತ್ತಾರೆ. ಅಷ್ಟೇ ಅಲ್ಲದೇ ಬೇರೆ ದೇಶಗಳಿಂದ ಭಾರತಕ್ಕೆ ವಾಪಸ್ ಬಂದು ಭಾರತದ ಅಭಿವೃದ್ಧಿಗೆ ಕಾಣಿಕೆ ನೀಡಿದ ಹಲವು ಮಂದಿ ಇದ್ದಾರೆ. ಅಂತವರಲ್ಲಿ ಕ್ಷೀರ ಕ್ರಾಂತಿಯ ಹರಿಕಾರ ವರ್ಗಿಸ್ ಕುರಿಯನ್ ಅಮೆರಿಕದಿಂದ ಭಾರತಕ್ಕೆ ಬಂದು ಇಲ್ಲಿ ಪಶುಸಂಗೋಪನೆಯನ್ನು ಅಭಿವೃದ್ಧಿಪಡಿಸಿದರು. ಅನಿವಾಸಿ ಭಾರತೀಯರ ವಿಷಯಕ್ಕೆ ಬಂದಾಗ ಇಂತಹ ಸಾವಿರಾರು ಉದಾಹರಣೆಗಳು ಸಿಗುತ್ತವೆ ಎನ್ನುವುದನ್ನು ರಾಹುಲ್ ತಿಳಿಸಿದ್ದಾರೆ.

ಅಮೆರಿಕದಲ್ಲಿ ಸಾಕಷ್ಟು ಮಂದಿ ಭಾರತೀಯರು ಕೆಲಸ ಮಾಡುತ್ತಿದ್ದಾರೆ. ಅವರು ಕೇವಲ ಅಮೆರಿಕಕ್ಕಾಗಿ ಕೆಲಸ ಮಾಡುತ್ತಿಲ್ಲ, ಅವರು ಭಾರತಕ್ಕಾಗಿಯೂ ಕೆಲಸ
ಮಾಡುತ್ತಿದ್ದಾರೆ. ಅನಿವಾಸಿ ಭಾರತೀಯರು ಭಾರತದ ಬೆನ್ನೆಲುಬು ಇದ್ದಂತೆ. ಕೆಲವರು ಭಾರತವನ್ನು ಒಂದು ಭೌಗೋಳಿಕ ರಚನೆ ಎಂಬಂತೆ ನೋಡುತ್ತಾರೆ. ಆದರೆ, ಭಾರತ ಎಂಬುದು ಸಿದ್ಧಾಂತಗಳ ಒಟ್ಟು ರೂಪದಂತೆ ನನಗೆ ಕಾಣುತ್ತದೆ. ಈ ದೃಷ್ಟಿಯಿಂದ ಭಾರತದ ಬೆಳವಣಿಗೆಯ ಬಗ್ಗೆ ಆಲೋಚಿಸುವವರೆಲ್ಲರೂ ಭಾರತೀಯರು ಎಂದು ರಾಹುಲ್ ಈ ಒಂದು ಸಭೆಯಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲದೇ, ವಿದೇಶದಲ್ಲಿ ನೆಲೆಸಿದ್ದಾರೆ ಎಂಬ ಕಾರಣದಿಂದ ಎನ್‍ಆರ್‍ಐಗಳು ದೇಶದ ಅಭಿವೃದ್ಧಿಗೆ ಯಾವುದೇ ಕೊಡುಗೆಯನ್ನು ನೀಡುತ್ತಿಲ್ಲ ಎನ್ನುವುದು ತಪ್ಪು. ನಾವು ಅವರನ್ನು ಮತ್ತೆ ಭಾರತಕ್ಕೆ ವಾಪಸ್ ಕರೆತರಬೇಕಿದೆ. ಕೆಲವರು ಭಾರತವನ್ನು ಭೌಗೋಳಿಕ ಅಂಶಗಳ ಮೂಲಕ ಮಾತ್ರ ನೋಡುತ್ತಾರೆ, ಆದರೆ ನಾನು ಹೊಸ ಕಲ್ಪನೆಗಳ ಆಗರವಾಗಿ ನೋಡುತ್ತೇನೆ ಎಂದೆಲ್ಲಾ ಹೇಳಿರುವುದು ಮಾತ್ರ ನಾಚಿಕೆಗೇಡಿನ ಸಂಗತಿ!!

ಈ ಹಿಂದೆ ಅಮೆರಿಕಾದ ಬರ್ಕಲಿಯಲ್ಲಿರುವ ಕ್ಯಾಲಿಫೆÇೀರ್ನಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್,
ವಂಶಪಾರಂಪರ್ಯ ರಾಜಕಾರಣ ಎನ್ನುವುದು ಭಾರತದಲ್ಲಿ ಹೊಸದಲ್ಲ ಎಂದು ಅಖಿಲೇಶ್ ಯಾದವ್, ಅಭಿಷೇಕ್ ಬಚ್ಚನ್, ಮುಖೇಶ್ ಅಂಬಾನಿ ಮುಂತಾದವರನ್ನು ಉಲ್ಲೇಖಿಸಿ ಹೇಳಿದ್ದರು.

ರಾಹುಲ್ ಗಾಂಧಿ ವಂಶಪಾರಂಪರ್ಯ ಸಾಮ್ರಾಜ್ಯದ ವಿಫಲ ರಾಜಕಾರಣಿ ಎಂದು ಗುರುತಿಸಿರುವ ಇವರು ತನಗಿರುವ ರಾಜಕೀಯ ಅಪ್ರಬುದ್ದತೆಯನ್ನು ಅಮೆರಿಕಾದಲ್ಲಿ ಅನಾವರಣ ಮಾಡುತ್ತಿದ್ದಾರೆ! ರಾಹುಲ್ ಗಾಂಧಿಗೆ ತಿಳುವಳಿಕೆ, ಚಿಂತನಾ ಶಕ್ತಿ ಕಮ್ಮಿಯಿರುವುದರಿಂದ ಪ್ರಧಾನಿ ಮೋದಿಯ ಎಲ್ಲಾ ಕೆಲಸಗಳನ್ನು ಟೀಕೆ ಮಾಡುತ್ತಾರೆ. ಜಮ್ಮು, ಕಾಶ್ಮೀರ ಸೇರಿದಂತೆ ದೇಶದಲ್ಲಿನ ಆಗುಹೋಗುಗಳ ಬಗ್ಗೆ ರಾಹುಲ್ ಗಾಂಧಿಗೆ ಅರಿವಿಲ್ಲ. ಹಾಗಾಗಿ ಏನೇನೋ ಹೇಳಿಕೆಯನ್ನು ನೀಡುತ್ತಾರೆ ಎಂದು ಸ್ಮೃತಿ ಇರಾನಿ ಈಗಾಗಲೇ ಟಾಂಗ್ ನೀಡಿದ್ದಾರೆ!!

ತನ್ನ ಬಗ್ಗೆ ಬೇರೊಂದು ದೇಶದಲ್ಲಿ ಮರ್ಯಾದೆ ಕಳೆದುಕೊಳ್ಳುವ ಇಂತಹ ಮಂದಬುದ್ದಿಯ ಕಾಂಗ್ರೆಸ್‍ನ ಉಪಾಧ್ಯಕ್ಷನೆಂದೆನಿಸಿರುವ ರಾಹುಲ್ ಗಾಂಧಿಗೆ
ಲೋಕಸಭೆಯಲ್ಲಿ ಎಷ್ಟು ಸದಸ್ಯರಿದ್ದಾರೆ ಎನ್ನುವುದೇ ಗೊತ್ತಿಲ್ಲ!! ಯಾಕೆಂದರೆ ಈ ಹಿಂದೆ ಅಮೇರಿಕಾದಲ್ಲಿ 546 ಸದಸ್ಯರಿದ್ದಾರೆ ಎಂದು ತಪ್ಪಾಗಿ ಹೇಳುವ ಮೂಲಕ ಸುದ್ದಿಯಲ್ಲಿದ್ದರು. ಒಬ್ಬ ಭಾರತದ ಕಾಂಗ್ರೆಸ್‍ನ ಉಪಾಧ್ಯಕ್ಷನಿಗೆ ಈ ಬಗ್ಗೆಯೇ ಸರಿಯಾದ ಮಾಹಿತಿ ಇಲ್ಲ ಎಂದ ಮೇಲೆ ಮಹಾತ್ಮ ಗಾಂಧಿ, ಜವಾಹರ್ ಲಾಲ್ ನೆಹರು, ಅಂಬೇಡ್ಕರ್, ಅಜಾದ್, ಪಾಟೀಲ್ ಇವರೆನ್ನೆಲ್ಲಾ ಎನ್‍ಆರ್‍ಐಗಳೆಂದು ಹೇಳದಿರುತ್ತಾರೆಯೇ!!

– ಅಲೋಖಾ

Source :

ಗಾಂಧಿ, ನೆಹರೂ, ಅಂಬೇಡ್ಕರ್ ಎಲ್ಲರೂ ಅನಿವಾಸಿ ಭಾರತೀಯರು: ರಾಹುಲ್ ಗಾಂಧಿ

Tags

Related Articles

Close