ಪ್ರಚಲಿತ

ಗುಂಡಿಮುಚ್ಚಲಾಗದ ಕರ್ನಾಟಕ ಕಾಂಗ್ರೆಸ್ ಸರಕಾರದ ಹೊಸ ತುಘಲಕ್ ನಿಯಮ ಗೊತ್ತಾದರೆ ಹೊಟ್ಟೆ ಹುಣ್ಣಾಗುವಂತೆ ನಗುವಿರಿ..!!!

ಗುಂಡಿಮುಚ್ಚಲು ಆಗದ ಕರ್ನಾಟಕದ ಕಾಂಗ್ರೆಸ್ ಸರಕಾರದ ಈ ಹೊಸ ನಿಯಮ ಖಂಡಿತಾ ನಿಮ್ಮನ್ನು ನಗೆಗಡಲಲ್ಲಿ ತೇಲಿಸಬಹುದು. ಅದ್ಯಾವನೋ ಕುಣಿಯಲು ಬಾರದವ ಅಂಗಳ ಚಿಕ್ಕದು ಅಂದನಂತೆ… ಅದೇ ಪರಿಸ್ಥಿತಿ ಈ ರಾಜ್ಯ ಸರಕಾರದ್ದು… ಪಕ್ಕಾ ಮಹಮದ್ ಬಿನ್ ತುಘಲಕ್‍ನಂತೆ ವರ್ತಿಸುತ್ತಿರುವ ಸಿಎಂ ಸಿದ್ದರಾಮಯ್ಯ ರಾಜ್ಯವನ್ನು ಅದೇನು ಮಾಡಲು ಹೊರಟಿದ್ದಾರೋ ಆ ದೇವರಿಗೆ ಗೊತ್ತು. ರಸ್ತೆಯಲ್ಲಿರುವ ಗುಂಡಿಗಳನ್ನು ಸರಿಮಾಡುವುದನ್ನು ಬಿಟ್ಟು ಕರ್ನಾಟಕದ ಸರಕಾರ ಏನು ಮಾಡಿದೆ ಗೊತ್ತಾ? ಛೆ ಈ ಕಾಂಗ್ರೆಸ್ ಸರಕಾರಕ್ಕೆ ಏನಾಗಿದೆ?

ಅಷ್ಟಕ್ಕೂ ರಾಜ್ಯಸರಕಾರ ರೂಪಿಸಲಿರುವ ಹೊಸ ನಿಯಮವೇನು ಗೊತ್ತಾ? 100 ಸಿಸಿ ಮತ್ತು ಅದಕ್ಕಿಂತಲೂ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳಲ್ಲಿ ಕೇವಲ ಒಬ್ಬರು ಮಾತ್ರ ಸಂಚರಿಸಬೇಕು. ಹಿಂಬದಿ ಸವಾರರನ್ನು ಕೂರಿಸಿಕೊಂಡು ಹೋಗಲು ಅವಕಾಶ ನೀಡದಂತೆ ನಿಯಮ ರೂಪಿಸಲು ರಾಜ್ಯ
ಸರ್ಕಾರ ಸಿದ್ಧತೆ ನಡೆಸಿದೆ.

ಈ ಹೊಸ ನಿಯಮವು ಈಗಾಗಲೇ ರಸ್ತೆಯಲ್ಲಿ ಓಡಾಡುತ್ತಿರುವ ದ್ವಿಚಕ್ರ ವಾಹನಗಳಿಗೆ ಈ ನಿಯಮ ಅನ್ವಯಿಸುವುದಿಲ್ಲವಂತೆ.. ಆದರೆ ಹೊಸದಾಗಿ ಮಾರಾಟವಾಗುವ 100 ಸಿಸಿ ಮತ್ತು ಅದಕ್ಕಿಂತಲೂ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳಿಗೆ ಹೊಸ ನಿಯಮ ಅನ್ವಯಿಸುತ್ತದೆ. ಬೈಕ್ ತಯಾರಕರು ಕೇವಲ ಓರ್ವ ವ್ಯಕ್ತಿ ಮಾತ್ರ ಕುಳಿತುಕೊಳ್ಳುವಂತೆ ಸೀಟಿನ ವ್ಯವಸ್ಥೆ ಮಾಡಬೇಕಿದೆ. ಗ್ರಾಹಕ ಬೈಕ್ ಕೊಂಡ ನಂತರ ಅದರಲ್ಲಿ ಬದಲಾವಣೆ ಮಾಡುವಂತಿಲ್ಲ.

ಹಿಂಬದಿ ಸವಾರರ ಹಿತದೃಷ್ಟಿಯಿಂದ ಈ ಹೊಸ ನಿಮಯವನ್ನು ಜಾರಿಗೆ ತರಲು ಸಾರಿಗೆ ಇಲಾಖೆ ನಿರ್ಧರಿಸಿದೆ. ರಾಜ್ಯ ಸರ್ಕಾರ ಸಹ ಈ ಸಂಬಂಧ ಹೈಕೋರ್ಟ್‍ಗೆ ಅಫಿಡವಿಟ್ ಸಲ್ಲಿಸಿದ್ದು, ಇನ್ನೊಂದು ವಾರದಲ್ಲಿ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ.

ಅಪಘಾತ ಪ್ರಕರಣವೊಂದರ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ರಾಜ್ಯ ಸರ್ಕಾರದಿಂದ ವಿವರಣೆ ಕೇಳಿತ್ತು. ಈ ಪ್ರಕರಣದ ಸಂಬಂಧ ರಾಜ್ಯ ಸರ್ಕಾರ ಕೋರ್ಟ್‍ಗೆ ವಿವರಣೆ ನೀಡಿದ್ದು, 100 ಸಿಸಿ ಮತ್ತು ಅದಕ್ಕಿಂತಲೂ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರನ್ನು ನಿಷೇಧಿಸಲು ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರುವುದಾಗಿ ತಿಳಿಸಿದೆ ಎಂದು ಸಾರಿಗೆ ಸಚಿವ ಎಚ್‍ಎಂ ರೇವಣ್ಣ ತಿಳಿಸಿದ್ದಾರೆ.

100 ಸಿಸಿ ಬೈಕಿನಲ್ಲಿ ಇಬ್ಬರು ಸಂಚರಿಸುವುದಕ್ಕೂ ಅಪಘಾತ ಆಗುವುದಕ್ಕೂ ಏನಾದರೂ ಒಂದಕ್ಕೊಂದು ಸಂಬಂಧ ಇದೆಯಾ? ಇಮಾಂ ಸಾಬಿಗೂ
ಗೋಕುಲಾಷ್ಟಮಿಗೂ ಇರುವ ಸಂಬಂಧದಂತೆ ಕಾಣುತ್ತದೆ. ಸರಕಾರ ಸ್ಪಷ್ಟಪಡಿಸಿರುವ ಈ ನಿಯಮವನ್ನು ನೋಡುವಾಗ ನಗೆ ಉಕ್ಕಿ ಬರುವುದಲ್ಲದೆ ಯಾವುದೋ
ಒಂದು ನಗೆಬರಹದಂತೆ ಕಂಡುಬರುತ್ತದೆ. ಅಪಘಾತಕ್ಕೆ ಕಾರಣವೇನು ಎಂದು ಹೈಕೋರ್ಟು ಸರಕಾರದ ಜೊತೆ ಕೇಳಿದಾಗ ಸರಕಾರ 100 ಸಿಸಿ ಬೈಕ್‍ನಲ್ಲಿ ಡಬಲ್ ರೈಡ್ ಹೋಗುವುದೇ ಕಾರಣ ಎಂದಿತು. ರಸ್ತೆಯಲ್ಲಿರುವ ಗುಂಡಿಗಳೇ ಅಪಘಾತಕ್ಕೆ ಕಾರಣ ಎಂದು ಹೇಳುವ ಬದಲು ಬೈಕ್‍ನ ಸಿಸಿಯೇ ಕಾರಣ ಎಂದು ಹೇಳುವುದು ದೊಡ್ಡ ಮೂರ್ಖತನದಂತೆ ಕಂಡುಬರುತ್ತಿದೆ.

ಈ ನಿಯಮ ಜಾರಿಯಾಗಿದ್ದೇ ಆದರೆ ಟ್ರಾಫಿಕ್ ಪೊಲೀಸರಿಗೆ ಇನ್ನೊಂದು ಕಿರಿಕಿರಿ ಉಂಟಾಗಲಿದೆ. ಡಬಲ್‍ರೈಡ್ ಹೋಗುವವರನ್ನು ಹಿಡಿದು ಅವರ ಬೈಕ್ ಎಷ್ಟು ಸಿಸಿಯದ್ದು ಎಂದು ಕೇಳಬೇಕು. ಒಂದು ವೇಳೆ 100 ಸಿಸಿ ಕಡಿಮೆ ಇದ್ದರೆ ಹಿಂಬದಿ ಸವಾರನನ್ನು ಬೈಕ್‍ನಿಂದ ಇಳಿಸಿ ನ ಬಸ್ ಹತ್ತಿಸಬೇಕು. ಒಟ್ಟಾರೆ ನೋಡಿದ್ರೆ ಈ ನಿಯಮ ಕಾಂಗ್ರೆಸ್ ಸರಕಾರದ ಹುಚ್ಚಾಟದ ಪರಮಾವಧಿಯಂತೆ ಕಂಡುಬರುತ್ತದೆ.

ರಾಜ್ಯದಲ್ಲಿ ಅನೇಕ ಕಡೆಗಳಲ್ಲಿ ರಸ್ತೆ ಗುಂಡಿಬಿದ್ದಿವೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ಸಾಕಷ್ಟು ಗುಂಡಿಗಳಿದ್ದು ಸಾಕಷ್ಟು ಜನರ ಪ್ರಾಣ ಹೋಗಿದೆ. ಗುಂಡಿಗಳನ್ನು ಮುಚ್ಚುವಂತೆ ಸಾಕಷ್ಟು ಮಂದಿ ಹೊಸಹೊಸ ರೂಪದ ಹೋರಾಟವನ್ನೂ ನಡೆಸಿದ್ದಾರೆ. ಆದರೆ ಗುಂಡಿಗಳನ್ನು ಮುಚ್ಚುವ ಬದಲು ಹೊಸ ನಿಯಮಗಳನ್ನು ಜಾರಿಗೊಳಿಸುವ ಮೂಲಕ ಸರಕಾರ ಜನರ ಆಕ್ರೋಶಕ್ಕೆ ತುತ್ತಾಗುವ ಜೊತೆಗೆ ಸರಕಾರದ ಈ ನಿರ್ಧಾರ ಹಾಸ್ಯಾಸ್ಪದ ಎನಿಸಿದೆ.

ಮುಂದೊಂದು ದಿನ ಸರಕಾರ ಅಪಘಾತವನ್ನು ತಪ್ಪಿಸುವ ಸಲುವಾಗಿ ಸಂಚಾರವನ್ನೇ ನಿಷೇಧಿಸುವ ದಿನಗಳು ದೂರವಿಲ್ಲ.

Source :http://vijayavani.net/state-government-set-to-an-pillion-riding-on-2-wheelers-that-have-engine-capacity-of-100-cc-or-below/

-ಚೇಕಿತಾನ

Tags

Related Articles

Close